Tag: Ukraine

  • ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ಕೀವ್: ಉಕ್ರೇನ್-ರಷ್ಯಾ ನಡುವೆ ಘನಘೋರ ಯುದ್ಧ ಮುಂದುವರಿದಿದೆ. ಈ ಮಧ್ಯೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿರುವ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಉಕ್ರೇನ್‍ನಲ್ಲಿ ರಾಸಾಯನಿಕ ಮತ್ತು ಜೈವಿಕ ಆಯುಧಗಳಿಗೆ ಸಂಬಂಧಿಸಿದ ಪ್ರಯೋಗಗಳು ನಡೆಯುತ್ತಿವೆ. ಚೆರ್ನೋಬಿಲ್ ರಿಯಾಕ್ಟರ್‌ನಲ್ಲಿ  ಅಣು ಆಯುಧ ತಯಾರಿಸುತ್ತಿದೆ ಎಂಬ ಗಂಭೀರ ಆಪಾದನೆಯನ್ನು ರಷ್ಯಾ ಮಾಡಿದೆ. ಆದರೆ ಈ ಆರೋಪಗಳನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ತಳ್ಳಿ ಹಾಕಿದ್ದಾರೆ. ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ, ನಮ್ಮ ದೇಶದಲ್ಲಿ ಸಾಮೂಹಿಕ ನರಮೇಧಕ್ಕೆ ಸಂಬಂಧಿಸಿದ ಯಾವುದೇ ಶಸ್ತ್ರಾಸ್ತಗಳನ್ನು ಯಾವತ್ತಿಗೂ ತಯಾರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಇದೇ ವೇಳೆ, ಕ್ರೆಮ್ಲಿನ್ ಆಧಾರಹಿತ ಆರೋಪಗಳನ್ನು ಅಮೆರಿಕ ಸೇರಿ ಹಲವು ದೇಶಗಳು ಖಂಡಿಸಿವೆ. ಆರೋಪ- ಪ್ರತ್ಯಾರೋಪಗಳ ನಡುವೆ ಉಕ್ರೇನ್‍ನ ಪ್ರಯೋಗಶಾಲೆಗಳಲ್ಲಿ ಇರುವ ತೀವ್ರ ಅಪಾಯ ಉಂಟು ಮಾಡುವ ಅಂಟುರೋಗಗಳ ಕ್ರಿಮಿಗಳನ್ನು ನಾಶಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.

    ರಷ್ಯಾ ದಾಳಿಯಿಂದ ಲ್ಯಾಬ್‍ಗಳು ಧ್ವಂಸವಾಗಿ, ಸಾಂಕ್ರಾಮಿಕ ರೋಗ ಹರಡಬಲ್ಲ ಕ್ರಿಮಿಗಳು ಹೊರಗೆ ಹಬ್ಬುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ನೀಡಿದೆ. ಜನ-ಜಾನುವಾರುಗಳ ಮೇಲೆ ಈ ಕ್ರಿಮಿಗಳ ಪ್ರಭಾವ ಕಡಿಮೆ ಮಾಡುವ ಸಲುವಾಗಿ ಉಕ್ರೇನ್‍ನ ಹಲವು ಲ್ಯಾಬ್‍ಗಳಲ್ಲಿ ಪ್ರಯೋಗಗಳು ನಡೆಯುತ್ತಿದ್ದವು.

  • ಉಕ್ರೇನ್‍ನ ಮರಿಯುಪೋಲ್‍ನಲ್ಲಿ ಅರ್ಧ ಗಂಟೆಗೊಂದು ಬಾಂಬ್ ಸ್ಫೋಟ

    ಉಕ್ರೇನ್‍ನ ಮರಿಯುಪೋಲ್‍ನಲ್ಲಿ ಅರ್ಧ ಗಂಟೆಗೊಂದು ಬಾಂಬ್ ಸ್ಫೋಟ

    ಕೀವ್: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ದಾಳಿ ಸತತ 16ನೇ ದಿನವೂ ಮುಂದುವರಿದೆ. ಉಕ್ರೇನ್‍ನ ಮರಿಯುಪೋಲ್‍ನಲ್ಲಿ ಅರ್ಧ ಗಂಟೆಗೊಂದು ಬಾಂಬ್ ಸ್ಫೋಟವಾಗುತ್ತಿರುವ ಬಗ್ಗೆ ವರದಿಯಾಗಿದೆ.

    ಯುದ್ಧ ಪ್ರಾರಂಭವಾಗಿ 16 ದಿನಕ್ಕೆ ಕಾಲಿಟ್ಟಿದ್ದು, ಯುದ್ಧದ ಪರಿಣಾಮ ಮಾತ್ರ ಅಕ್ಷರಶಃ ಘನಘೋರವಾಗಿದೆ. ಈಗಾಗಲೇ ಉಕ್ರೇನ್‍ನ ಬಹುತೇಕ ನಗರಗಳಲ್ಲಿ ಕ್ಷಿಪಣಿ, ರಾಕೆಟ್‍ಗಳ ದಾಳಿಯಿಂದ ಜನ ಕಂಗೆಟ್ಟಿದ್ದಾರೆ. ಮರಿಯುಪೋಲ್‍ನಲ್ಲಿ ಆಸ್ಪತ್ರೆಯ ಮೇಲೆ ದಾಳಿ ನಡೆಸಿರುವ ರಷ್ಯಾ ಸೇನೆ ಆಸ್ಪತ್ರೆಯಲ್ಲಿದ್ದ 17ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಇದನ್ನೂ ಓದಿ: ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

    ಈಗಾಗಲೇ ರಷ್ಯಾ ದಾಳಿಗೆ ಉಕ್ರೇನ್‍ನ ಇವಾನೋ, ಲಸ್ಕ್ ಸೇರಿದಂತೆ ಹಲವು ನಗರಗಳ ಮೇಲೆ ಡೋಂಸ್ಟೆ ಮಿಸೈಲ್ ದಾಳಿ ನಡೆಸಲಾಗಿದೆ. ರಷ್ಯಾ ಸತತವಾಗಿ ಕೀವ್ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ನಡುವೆ ನಿನ್ನೆ ಉಕ್ರೇನ್ ಮತ್ತು ರಷ್ಯಾದ ವಿದೇಶಾಂಗ ಸಚಿವರು ಸಂಧಾನ ಮಾತುಕತೆಗೆ ಮುಂದಾಗಿದ್ದು, ಆದರೆ ಅದು ಫಲ ಪ್ರದವಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿದ ಉಕ್ರೇನ್ ರಾಕ್ ಬ್ಯಾಂಡ್!

  • ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿದ ಉಕ್ರೇನ್ ರಾಕ್ ಬ್ಯಾಂಡ್!

    ಕೀವ್: ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಎಲ್ಲರೂ ನೋಡಿಯೇ ಇರುತ್ತಾರೆ. ಜನರ ಗಮನ ಸೆಳೆಯಲು ಯೂಟ್ಯೂಬರ್ಸ್‌ಗಳು ಹೊಸ ಹೊಸ ರೀತಿಯಲ್ಲಿ ವ್ಲಾಗ್, ಲೈವ್ ಸ್ಟ್ರೀಮ್ ಮಾಡುತ್ತಲೇ ಇರುತ್ತಾರೆ. ಇಲ್ಲೊಂದು ಉಕ್ರೇನ್‌ನ ರಾಕ್ ಬ್ಯಾಂಡ್ ಭೀಕರ ಯುದ್ಧದ ನಡುವೆಯೂ ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ.

    ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿ ಇಂದಿಗೆ 16 ನೇ ದಿನ. ಇಂತಹ ಪರಿಸ್ಥಿತಿಯಲ್ಲಿ ಮನೆ, ನೆಲೆ ಕಳೆದುಕೊಂಡವರು ಸಾವಿರಾರು. ಉಕ್ರೇನ್‌ನ ಸೆಲೋ ಐ ಲುಡಿ ಎಂಬ ರಾಕ್ ಬ್ಯಾಂಡ್ ಯುದ್ಧದ ಪರಿಸ್ಥಿತಿಯಲ್ಲಿ ಬಾಂಬ್ ಶೆಲ್ಟರ್‌ನಿಂದ ಯೂಟ್ಯೂಬ್‌ನಲ್ಲಿ ತಮ್ಮ ಗಾಯನದ ಲೈವ್ ಸ್ಟ್ರೀಮ್ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

    ಈ ಬ್ಯಾಂಡ್ ಹಿಂದೆ ತಮ್ಮ ಸ್ಟುಡಿಯೋದಿಂದ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಿದ್ದು, ಯುದ್ಧದಿಂದಾಗಿ ತಮ್ಮ ಮನೆ, ಸ್ಟುಡಿಯೋ ಎಲ್ಲವನ್ನೂ ಕಳೆದುಕೊಂಡಿದೆ. ಇದೀಗ ಬಾಂಬ್ ಶೆಲ್ಟರ್‌ನಲ್ಲಿ ಆಶ್ರಯ ಪಡೆದುಕೊಂಡಿರುವ ರಾಕ್ ಬ್ಯಾಂಡ್ ತಂಡ ಅಲ್ಲಿಂದಲೇ ತಮ್ಮ ಲೈವ್ ಸ್ಟ್ರೀಮ್ ನಡೆಸುತ್ತಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

    ವಿಶ್ವಸಂಸ್ಥೆ ನೀಡಿರುವ ವರದಿಯ ಪ್ರಕಾರ ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು ೨೦ ಲಕ್ಷ ಉಕ್ರೇನಿಯನ್ನರು ದೇಶವನ್ನು ತೊರೆದಿದ್ದಾರೆ. ಉಕ್ರೇನ್‌ನ ಹೆಚ್ಚಿನ ಪ್ರಜೆಗಳು ಹತ್ತಿರದ ದೇಶಗಳಾದ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ, ರಷ್ಯಾ ಹಾಗೂ ಮಾಲ್ಡಿವ್ಸ್‌ಗೆ ಪಲಾಯನ ಮಾಡಿದ್ದಾರೆ.

  • ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

    ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

    ಲಂಡನ್: ರಷ್ಯಾ ಉಕ್ರೇನ್ ಯುದ್ಧ ಕಳೆದ 16 ದಿನಗಳಿಂದ ನಡೆಯುತ್ತಿದ್ದು, ಇದೀಗ ರಷ್ಯಾ ಉಕ್ರೇನ್ ಮೇಲೆ ಟಿಒಎಸ್-1ಎ (TOS-1A) ಆಯುಧವನ್ನು ಬಳಸುವುದು ಖಚಿತವಾಗಿದೆ ಎಂದು ಯುನೈಟೆಡ್ ಕಿಂಗ್ಡಮ್(ಬ್ರಿಟನ್)ನ ರಕ್ಷಣಾ ಸಚಿವಾಲಯ ತಿಳಿಸಿದೆ.

    ಟಿಒಎಸ್-1ಎ ಥರ್ಮೋಬಾರಿಕ್ ರಾಕೆಟ್ ಹಾಗೂ ನಿರ್ವಾತ(ವ್ಯಾಕ್ಯೂಮ್) ಬಾಂಬ್ ಒಳಗೊಂಡಿದೆ. ಈ ಆಯುಧ ಬಳಕೆಯಿಂದ ಬೆಂಕಿ ಹಾಗೂ ಭಯಾನಕ ಸ್ಫೋಟ ಸಂಭವಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಿನಿಸ್ಟ್ರಿ ಆಫ್ ಡಿಫೆನ್ಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಆಯುಧದ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಜಾಗತಿಕವಾಗಿ ತಯಾರಿಸಲಾಗಿರುವ ಎಲ್ಲಾ ಬಾಂಬುಗಳಿಗಿಂತಲೂ ವ್ಯಾಕ್ಯೂಮ್ ಬಾಂಬ್ ಅತ್ಯಂತ ಶಕ್ತಿಶಾಲಿಯಾಗಿದೆ. ಇದನ್ನು ಥರ್ಮೋಬಾರಿಕ್ ವೆಪನ್ ಎಂತಲೂ ಕರೆಯಲಾಗುತ್ತಿದ್ದು, ಇದು ವಾತಾವರಣದ ಆಮ್ಲಜನಕವನ್ನು ಹೀರಿಕೊಂಡು ಸ್ಫೋಟಿಸುತ್ತದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

    ಅಣು ಬಾಂಬ್‌ನ ಬಳಿಕ ಬರುವ ಅತ್ಯಂತ ಭಯಾನಕ ಬಾಂಬ್ ಇದಾಗಿದ್ದು, ಇದನ್ನು ಪ್ರಯೋಗಿಸಿದ ಬಳಿಕ ಮನುಷ್ಯನ ದೇಹವನ್ನೇ ಆವಿಯಾಗಿಸುತ್ತದೆ. ಈ ಬಾಂಬ್ ಅನ್ನು ಮೊದಲಿಗೆ ಅಮೆರಿಕ ತಯಾರಿಸಿತ್ತು. ಬಳಿಕ 2007ರಲ್ಲಿ ರಷ್ಯಾ ಈ ಬಾಂಬ್ ಅನ್ನು ಅಭಿವೃದ್ಧಿ ಮಾಡಿ ಸಿರಿಯಾ ಮೇಲೆ ಪ್ರಯೋಗ ಮಾಡಿತ್ತು ಎಂಬ ಆರೋಪ ಇದೆ.

  • ಪಂಚ ರಾಜ್ಯಗಳ ಚುನಾವಣೆ ಮುಗಿಯಿತು – ಪೆಟ್ರೋಲ್, ಡಿಸೇಲ್ ದರ ಏರಿಕೆಗೆ ಸಜ್ಜಾಗಿ

    ಪಂಚ ರಾಜ್ಯಗಳ ಚುನಾವಣೆ ಮುಗಿಯಿತು – ಪೆಟ್ರೋಲ್, ಡಿಸೇಲ್ ದರ ಏರಿಕೆಗೆ ಸಜ್ಜಾಗಿ

    ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಮುಗಿದು ಫಲಿತಾಂಶ ಕೂಡ ಹೊರಬಿದ್ದಿದೆ. ಈ ಬೆನ್ನಲ್ಲೇ ಅಡುಗೆ ಎಣ್ಣೆ ದರ ಏರಿಕೆ ಮಧ್ಯೆ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಪೆಟ್ರೋಲ್, ಡಿಸೇಲ್ ದರ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.

    ಪಂಚರಾಜ್ಯಗಳ ಚುನಾವಣೆ ಘೋಷಣೆ ಆದ ಬಳಿಕ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಏರಿಕೆ ಆಗಿರಲಿಲ್ಲ. ಇದೀಗ ಚುನಾವಣೆ ಮುಗಿದು ಫಲಿತಾಂಶ ಕೂಡ ಸಿಕ್ಕಾಗಿದೆ. ಇದೀಗ ಕೇಂದ್ರ ತೈಲ ದರವನ್ನು ಹೆಚ್ಚಿಸಲು ಚಿಂತಿಸಿದೆ. ಕೆಲ ದಿನಗಳಿಂದ ಅಡುಗೆ ಎಣ್ಣೆ ಬೆಲೆ ಏರಿಕೆ ಕಂಡಿದೆ. ಆದರೆ ಪೆಟ್ರೋಲ್, ಡಿಸೇಲ್ ದರ ಮಾತ್ರ ಏರಿಕೆ ಕಂಡಿರಲಿಲ್ಲ. ಆದರೆ ಸದ್ಯದಲ್ಲೇ ಏರಿಕೆ ಕಾಣುವ ಸಾಧ್ಯತೆ ಇದೆ. ಇದನ್ನೂ ಓದಿ: ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ರಾಜ್ಯಕ್ಕೆ ಬರಲಿದ್ದಾರೆ ಮೋದಿ – ಕಲಬುರಗಿಗೆ ಯಾಕೆ?

    ಒಂದು ಕಡೆ ರಷ್ಯಾ, ಉಕ್ರೇನ್ ನಡುವಿನ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆ ಕಾಣುತ್ತಿದೆ. ಹಾಗಾಗಿ ತೈಲ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಇದರಿಂದಾಗಿ ಸರ್ಕಾರ ಜನರ ಮೇಲೆ ತೈಲ ಹೊರೆ ಹಾಕಲು ಸಜ್ಜಾಗುತ್ತಿದೆ. ಈವರೆಗೆ ಪಂಚ ರಾಜ್ಯಗಳ ಚುನಾವಣೆ ಗಮನದಲ್ಲಿಟ್ಟು ತೈಲ ಬೆಲೆ ಏರಿಕೆ ಆಗಿರಲಿಲ್ಲ. ಚುನಾವಣೆ ಘೋಷಣೆಗೂ ಮುನ್ನಾ ತೈಲ ಬೆಲೆ ಗಗನಕ್ಕೇರಿತ್ತು. ಆ ಬಳಿಕ ಸ್ಥಿರತೆ ಕಾಪಾಡಿಕೊಂಡಿದ್ದ ದರ ಇದೀಗ ಏರಿಕೆಯತ್ತ ಹೆಜ್ಜೆ ಇಡಲು ಸಿದ್ಧವಾಗಿದೆ. ಇದನ್ನೂ ಓದಿ: Exclusive -ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಚುನಾವಣೆ?

    ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಕೆಲ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ. ಹೀಗಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ಪೆಟ್ರೋಲ್ ರೇಟ್ ಲೀಟರ್‌ಗೆ 100.06 ರೂಪಾಯಿ. ಮತ್ತು ಡಿಸೇಲ್ ಬೆಲೆ ಲೀಟರ್‌ಗೆ 85.04 ರೂಪಾಯಿ ಇದೆ. ಕೆಲದಿನಗಳಲ್ಲಿ ತೈಲ ಬೆಲೆ 2 ರಿಂದ 3 ಅಥವಾ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ.

  • 12 ಸಾವಿರ ರಷ್ಯಾ ಸೈನಿಕರ ಸಾವು – 20 ಲಕ್ಷ ಉಕ್ರೇನಿಯನ್ನರು ಪಲಾಯನ

    12 ಸಾವಿರ ರಷ್ಯಾ ಸೈನಿಕರ ಸಾವು – 20 ಲಕ್ಷ ಉಕ್ರೇನಿಯನ್ನರು ಪಲಾಯನ

    ಕೀವ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಇಂದಿಗೆ 15 ದಿನ. ಇಲ್ಲಿಯವರೆಗೆ ರಷ್ಯಾದ 12,000 ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಶಸ್ತ್ರಾಸ್ತ್ರ ಪಡೆ ಗುರುವಾರ ತಿಳಿಸಿದೆ.

    ಫೆಬ್ರವರಿ 24 ರಂದು ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾಗಿತ್ತು. ಅಂದಿನಿಂದ ರಷ್ಯಾದ ಯಾವೆಲ್ಲಾ ಮಿಲಿಟರಿ ಸವಲತ್ತುಗಳನ್ನು ಉಕ್ರೇನ್ ನಾಶಪಡಿಸಿದೆ ಎಂದು ಕೀವ್ ಇಂಡಿಪೆಂಡೆಂಟ್ ತಿಳಿಸಿದೆ.

    12,000 ಕ್ಕೂ ಹೆಚ್ಚು ಸೈನಿಕರು, 49 ವಿಮಾನಗಳು, 81 ಹೆಲಿಕಾಪ್ಟರ್‌ಗಳು, 335 ಟ್ಯಾಂಕ್‌ಗಳು, 123 ಫಿರಂಗಿ ಹಾಗೂ 2 ದೋಣಿಗಳು, 1,105 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು, 56 ಬಹು ರಾಕೆಟ್ ಉಡಾವಣಾ ಯಂತ್ರಗಳು(ರಾಕೆಟ್ ಲಾಂಚಿಂಗ್ ಸಿಸ್ಟಮ್), 526 ವಾಹನಗಳು ಹಾಗೂ 60 ಇಂಧನ ಟ್ಯಾಂಕ್‌ಗಳು, 29 ವಿಮಾನ ವಿರೋಧಿ ಶಸ್ತ್ರಾಸ್ತ್ರಗಳು, 7 ಮಾನವರಹಿತ ವಿಮಾನ(ಡ್ರೋನ್)ಗಳನ್ನು ನಾಶಪಡಿಸಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಝೆಲೆನ್ಸ್ಕಿ ನಕಲಿ ಟೆಲಿಗ್ರಾಮ್ ಖಾತೆ – ಉಕ್ರೇನ್ ಯೋಧರು ಶರಣಾಗುವಂತೆ ಸುಳ್ಳು ಮಾಹಿತಿ ಹಂಚಿಕೆ

    20 ಲಕ್ಷ ಉಕ್ರೇನಿಯನ್ನರು ಪಲಾಯನ:
    ಯುದ್ಧ ಪೀಡಿತ ಉಕ್ರೇನ್‌ನಿಂದ 20 ಲಕ್ಷ ಜನರು ದೇಶದಿಂದ ಪಲಾಯನಗೈದಿದ್ದಾರೆ. ಅದರಲ್ಲಿ ಶೇ.50 ಪಾಲು ಮಕ್ಕಳೇ ಸೇರಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

    ಉಕ್ರೇನ್ ತೊರೆದಿರುವ ಪ್ರಜೆಗಳಲ್ಲಿ ಹೆಚ್ಚಿನವರು ಪೋಲೆಂಡ್‌ಗೆ ಹೋಗಿದ್ದಾರೆ. ಸುಮಾರು 12 ಲಕ್ಷ ಜನರು ಪೋಲೆಂಡ್, 1.91 ಲಕ್ಷ ಜನರು ಹಂಗೇರಿ, 1.40 ಲಕ್ಷ ಜನರು ಸ್ಲೋವಾಕಿಯಾ, 99 ಸಾವಿರ ಜನರು ರಷ್ಯಾ ಹಾಗೂ 82 ಸಾವಿರ ಜನರು ಮಾಲ್ಡಿವ್ಸ್‌ಗೆ ಪಲಾಯನ ಮಾಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ

  • ಝೆಲೆನ್ಸ್ಕಿ ನಕಲಿ ಟೆಲಿಗ್ರಾಮ್ ಖಾತೆ – ಉಕ್ರೇನ್ ಯೋಧರು ಶರಣಾಗುವಂತೆ ಸುಳ್ಳು ಮಾಹಿತಿ ಹಂಚಿಕೆ

    ಝೆಲೆನ್ಸ್ಕಿ ನಕಲಿ ಟೆಲಿಗ್ರಾಮ್ ಖಾತೆ – ಉಕ್ರೇನ್ ಯೋಧರು ಶರಣಾಗುವಂತೆ ಸುಳ್ಳು ಮಾಹಿತಿ ಹಂಚಿಕೆ

    ಕೀವ್: ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಭೀಕರ ಯುದ್ಧ, ರಕ್ತಪಾತದ ನಡುವೆಯೂ ಯಾವೊಬ್ಬ ದೇಶವೂ ಶರಣಾಗುವ ಹಂತಕ್ಕೆ ಬಂದಿಲ್ಲ. ಆದರೆ ಉಕ್ರೇನ್ ಅಧ್ಯಕ್ಷನ ನಕಲಿ ಟೆಲಿಗ್ರಾಮ್ ಖಾತೆ ಸೈನಿಕರಲ್ಲಿ ಗೊಂದಲ ಸೃಷ್ಟಿಸುವಂತೆ ಮಾಡಿದೆ.

    ಉಕ್ರೇನ್ ಅಧ್ಯಕ್ಷನ ಟೆಲಿಗ್ರಾಮ್ ಖಾತೆಯಂತೆಯೇ ಹೋಲುವ ನಕಲಿ ಖಾತೆಯೊಂದರಲ್ಲಿ ಉಕ್ರೇನ್ ಯೋಧರಿಗೆ ಶರಣಾಗುವಂತೆ ಸಂದೇಶ ನೀಡಲಾಗಿತ್ತು. ಈ ಸಂದೇಶ ದೇಶಾದ್ಯಂತ ವೈರಲ್ ಆಗುತ್ತಿದ್ದಂತೆ ಸೈನಿಕರಲ್ಲಿ ಗೊಂದಲ ಏರ್ಪಟ್ಟಿತು.

    ಈ ಮಾಹಿತಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ಎಚ್ಚೆತ್ತು, ಇದು ತಪ್ಪು ಮಾಹಿತಿ ಎಂದು ತನ್ನ ಪ್ರಜೆಗಳಿಗೆ ತಿಳಿಸಿದ್ದಾರೆ. ಬಳಿಕ ಝೆಲೆನ್ಸ್ಕಿ ಹೆಸರಿನಲ್ಲಿದ್ದ ನಕಲಿ ಖಾತೆಯನ್ನು ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್

    ವರದಿಗಳ ಪ್ರಕಾರ ಝೆಲೆನ್ಸ್ಕಿಯ ನಕಲಿ ಟೆಲಿಗ್ರಾಮ್ ಖಾತೆಯನ್ನು ತೆಗೆದು ಹಾಕುವುದಕ್ಕೂ ಮೊದಲು ಸುಮಾರು 20,000 ಅನುಯಾಯಿಗಳು ಇದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ

    ಟೆಲಿಗ್ರಾಮ್ ಉಕ್ರೇನ್‌ನಲ್ಲಿ ವ್ಯಾಪಕವಾಗಿ ಬಳಸುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಉಕ್ರೇನ್‌ನಲ್ಲಿ ಅತ್ಯಂತ ಉಪಯುಕ್ತವಾಗಿದ್ದು, ಇದರ ವೈಶಿಷ್ಯದಲ್ಲಿ 2ಲಕ್ಷ ಸದಸ್ಯರಿರುವ ಗುಂಪಿಗೂ ಸಂದೇಶ ಕಳುಹಿಸಲು ಸಾಧ್ಯವಿದೆ. ಆದರೆ ಟೆಲಿಗ್ರಾಮ್‌ನ ನಕಲಿ ಖಾತೆಯ ತಪ್ಪು ಮಾಹಿತಿಯಿಂದಾಗಿ ಸೈನಿಕರ ದಾರಿ ತಪ್ಪಿಸುವಂತೆ ಮಾಡಿದೆ.

  • ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ

    ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ

    ವಾಷಿಂಗ್‌ಟನ್‌: ಸಂಯುಕ್ತ ಅರಬ್ ಒಕ್ಕೂಟ(ಯುಎಇ) ತೈಲ ಉತ್ಪಾದನೆಯನ್ನು ಹೆಚ್ಚಳ ಮಾಡುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆಯು ಬಾರೀ ಇಳಿಕೆ ಕಂಡಿದೆ.

    ತೈಲ ಕಾರ್ಟೆಲ್ ಒಪೆಕ್‍ನ ಸದಸ್ಯರಾದ ಯುಎಇ ಹೇಳಿಕೆಯನ್ನು ನೀಡಿದ ನಂತರ ಬ್ರೇಂಟ್ ಕಚ್ಚಾ ತೈಲ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಶೇ. 12ರಷ್ಟು ಇಳಿಕೆ ಕಂಡಿದ್ದು, ಸುಮಾರು 112 ಡಾಲರ್(8,549ರೂ.)ಗೆ ಇಳಿದಿದೆ.

    ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಗಗನಕ್ಕೆ ಏರಿದ್ದವು. ಸೋಮವಾರ 1 ಬ್ಯಾರಲ್‍ಗೆ 130 ಡಾಲರ್ (10,006 ರೂ.) ಆಗಿತ್ತು. ಕಳೆದ 14 ವರ್ಷಗಳಲ್ಲಿ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು. ಇದನ್ನೂ ಓದಿ:  Punjab Election Results 2022: ರಾಷ್ಟ್ರೀಯ ಕಚೇರಿ ಎದುರು ಬ್ಯಾನರ್, ಜಿಲೇಬಿ ರೆಡಿ – ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡ AAP

    ಇದರಿಂದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಇತರ ನಾಯಕರು ಸಭೆ ನಡೆಸಿ, ಕಚ್ಚಾ ತೈಲ ಬೆಲೆಯ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಅರಬ್ ರಾಷ್ಟ್ರಗಳ ತೈಲ ಉತ್ಪಾದಕರೊಂದಿಗೆ ಮಾತುಕತೆ ನಡೆಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಯುಎಇ ರಾಯಭಾರಿ ಕಚೇರಿ, ನಾವು ತೈಲ ಉತ್ಪಾದನೆ ಮಟ್ಟವನ್ನು ಹೆಚ್ಚು ಮಾಡಲು ಒಲವು ತೋರಿಸಿದ್ದೇವೆ. ಉತ್ಪಾದನೆ ಮಟ್ಟವನ್ನು ಪರಿಗಣಿಸಲು ಒಪೆಕ್‍ನ್ನು ಪ್ರೋತ್ಸಾಹಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಲ್ಯಾಂಡಿಂಗ್

    ರಷ್ಯಾ ಉಕ್ರೇನ್ ಯುದ್ಧದಿಂದ ಈಗಾಗಲೇ ಅಮೆರಿಕ ಹಾಗೂ ಕೆನಡಾ ರಾಷ್ಟ್ರಗಳು ರಷ್ಯಾದ ತೈಲ ಆಮದುಗಳನ್ನು ನಿಷೇಧಿಸಿದೆ. ಆದರೆ ಅಮೆರಿಕ ವರ್ಷಾಂತ್ಯದ ವೇಳೆಗೆ ಅವುಗಳನ್ನು ಹಂತ ಹಂತವಾಗಿ ತೆಗೆಯುವುದಾಗಿ ಹೇಳಿದೆ.

  • ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ

    ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ

    ಕೀವ್: ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಅಲ್ಲಿನ ಜನರು ಮುಂದಿನ ಭವಿಷ್ಯದ ಬಗ್ಗೆ ಯೋಚನೆಯೂ ಮಾಡಲಾರದಂತಹ ಸ್ಥಿತಿಗೆ ಬಂದಿದ್ದಾರೆ. ಹೀಗಿರುವಾಗ ಭೀಕರ ಯುದ್ಧದ ನಡುವೆಯೂ ಉಕ್ರೇನ್‌ನ ಯೋಧನೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಯೋಧ ತನ್ನ ಗೆಳತಿಗೆ ಪ್ರಪೋಸ್ ಮಾಡುವ ಸಂದರ್ಭ ಎಂತಹವರ ಹೃದಯವನ್ನೂ ಕರಗಿಸುವಂತಿದೆ. ಈ ವೀಡಿಯೋ ಮೂಲಕ ಜೋಡಿ ಯುದ್ಧಕ್ಕಿಂತಲೂ ಪ್ರೀತಿ ಶಕ್ತಿಶಾಲಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

    ವೀಡಿಯೋದಲ್ಲಿ ಉಕ್ರೇನ್‌ನ ಚೆಕ್ ಪಾಯಿಂಟ್‌ನಲ್ಲಿ ಪಡೆಗಳು ಕಾರೊಂದನ್ನು ನಿಲ್ಲಿಸಿ, ಪ್ರಯಾಣಿಕರ ಮಾಹಿತಿಗಳನ್ನು ಪರಿಶೀಲಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಕೈಗಳನ್ನು ಕಾರುಗಳ ಮೇಲೆ ಇಟ್ಟು ಪರಿಶೀಲನೆಗೆ ಅವಕಾಶ ನೀಡುತ್ತಿರುತ್ತಾರೆ. ಇದನ್ನೂ ಓದಿ: ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ

    ಅಷ್ಟರಲ್ಲಿ ಯೋಧನೊಬ್ಬ ಪ್ರಯಾಣಿಕರೊಂದಿಗಿದ್ದ ಯುವತಿಯ ಹಿಂದುಗಡೆ ಮೊಣಕಾಲೂರಿ ಉಂಗುರವನ್ನು ನೀಡಲು ಮುಂದಾಗುತ್ತಾನೆ. ಇದರಿಂದ ಆಶ್ಚರ್ಯಕ್ಕೊಳಗಾದ ಯುವತಿ ಯೋಧ ನೀಡುವ ಉಂಗುರವನ್ನು ತೆಗೆದುಕೊಳ್ಳುತ್ತಾಳೆ. ಅವರಿಬ್ಬರೂ ನಿಜವಾಗಿ ಪ್ರೇಮಿಗಳೇ ಆಗಿರುತ್ತಾರೆ. ಅವರಿಬ್ಬರ ಪ್ರೀತಿಗೆ ಸ್ಥಳದಲ್ಲಿ ನೆರೆದಿದ್ದ ನೂರಾರು ಉಕ್ರೇನ್ ಯೋಧರೂ ಸಾಕ್ಷಿಯಾಗುತ್ತಾರೆ. ಇದನ್ನೂ ಓದಿ: ಉಕ್ರೇನ್‌ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ

    ಈ ಅಪರೂಪದ ಸನ್ನಿವೇಶವನ್ನು ಅವರ ಸ್ನೇಹಿತರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಮಾರ್ಚ್ 7 ರಂದು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರಸ್ತಾಪವನ್ನು ಸೋಲಿಸಲು ಕಷ್ಟ (Kinda hard to beat this proposal) ಎಂದು ವೀಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

  • ಉಕ್ರೇನ್‌ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ

    ಉಕ್ರೇನ್‌ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ

    ಮಾಸ್ಕೋ: ಯುದ್ಧದ ಭೀಕರತೆಗೆ ತತ್ತರಿಸಿರುವ ಉಕ್ರೇನ್‌, ರಷ್ಯಾದ ಎರಡು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದೆ. ಉಕ್ರೇನ್‌ ಸರ್ಕಾರವನ್ನು ಉರುಳಿಸಲು ನಾವು ಪ್ರಯತ್ನಿಸುತ್ತಿಲ್ಲ ಎಂದು ರಷ್ಯಾ ತನ್ನ ದಾಳಿ ಕುರಿತು ಸ್ಪಷ್ಟನೆ ನೀಡಿದೆ.

    ಈ ಕುರಿತು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾರಿಯಾ ಜಖರೋವಾ, ಉಕ್ರೇನ್‌ನಲ್ಲಿ ಜೈವಿಕ ಶಸ್ತ್ರಾಸ್ತ್ರಗಳನ್ನು ಯುಎಸ್‌ನಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬುದಕ್ಕೆ ಮಾಸ್ಕೋ ದಾಖಲೆಗಳ ಪುರಾವೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್‍ನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರಲ್ಲ: ಉಕ್ರೇನ್ ಅಧ್ಯಕ್ಷರ ಪತ್ನಿ

    ನಾವು ಶಾಂತಿ, ವೈಜ್ಞಾನಿಕ ಗುರಿಗಳ ಬಗ್ಗೆ ಮಾತನಾಡುತ್ತಿಲ್ಲ. ನೀವು ಅಲ್ಲಿ ಏನು ಮಾಡುತ್ತಿದ್ದೀರಿ? ಶಸ್ತ್ರಾಸ್ತ್ರಗಳ ಅಭಿವೃದ್ಧಿಗಾಗಿ ಯುಎಸ್‌ ರಕ್ಷಣಾ ಇಲಾಖೆಯಿಂದ ಹಣಕಾಸು ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಯುಎಸ್‌ ರಕ್ಷಣಾ ಇಲಾಖೆ ಮತ್ತು ಯುನೈಟೆಡ್‌ ಸ್ಟೇಟ್ಸ್‌ ಅಧ್ಯಕ್ಷೀಯ ಆಡಳಿತವು ಉಕ್ರೇನ್‌ನಲ್ಲಿನ ಕಾರ್ಯಕ್ರಮಗಳ ಬಗ್ಗೆ ಅಧಿಕೃತವಾಗಿ ಜಾಗತಿಕ ಸಮುದಾಯಕ್ಕೆ ವಿವರಿಸಲು ನಿರ್ಬಂಧವನ್ನು ಹೊಂದಿದೆ. ನಾವು ಅದಕ್ಕೆ ಸಂಬಂಧಿಸಿದ ವಿವರಗಳನ್ನು ಕೇಳುತ್ತಿದ್ದೇವೆ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ನಟನ ಸಾವಿನ ಬೆನ್ನಲ್ಲೆ ಅವರ ಕೊನೆಯ ಪೋಸ್ಟ್ ವೈರಲ್

    ಆದರೆ, ಜೈವಿಕ ಶಸ್ತ್ರಾಸ್ತ್ರಗಳ ಕುರಿತು ಆರೋಪವನ್ನು ಉಕ್ರೇನ್‌ ಈ ಹಿಂದೆಯೇ ನಿರಾಕರಿಸಿತ್ತು.