Tag: Ukraine

  • ತಾಯಿಗಾಗಿ ಔಷಧಿ ಹುಡುಕುತ್ತಾ ಹೊರಟ ಮಗಳು- ರಷ್ಯಾ ದಾಳಿಗೆ ಬಲಿ

    ತಾಯಿಗಾಗಿ ಔಷಧಿ ಹುಡುಕುತ್ತಾ ಹೊರಟ ಮಗಳು- ರಷ್ಯಾ ದಾಳಿಗೆ ಬಲಿ

    ಕೀವ್: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಔಷಧಿ ತರಲು ಹೋಗಿದ್ದ ಉಕ್ರೇನ್‍ನ ಮಹಿಳೆಯೊಬ್ಬರು ರಷ್ಯಾದ ದಾಳಿಗೆ ಸಾವನ್ನಪ್ಪಿದ್ದ ಘಟನೆ ನಡೆದಿದೆ.

    ವಲೇರಿಯಾ ಮಕ್ಸೆಟ್ಸ್ಕಾ ಮೃತ ಮಹಿಳೆ. ಘಟನೆ ವೇಳೆ ಕಾರಿನಲ್ಲಿ ಚಲಿಸುತ್ತಿದ್ದ ವಲೇರಿಯಾ, ಚಾಲಕ ಯಾರೋಸ್ಲಾವ್ ಸಾವನ್ನಪ್ಪಿದ್ದಾರೆ. ವಲೇರಿಯಾ ವೈದ್ಯೆಯಾಗಿದ್ದರು. ಅವರಿಗೆ ಉಕ್ರೇನ್ ಬಿಟ್ಟು ಹೋಗುವ ಅವಕಾಶವಿದ್ದರೂ ಹೋಗಿರಲಿಲ್ಲ. ಉಕ್ರೇನ್‍ನಲ್ಲೇ ಉಳಿದುಕೊಂಡು ಅಲ್ಲಿನ ನಿವಾಸಿಗಳಿಗೆ ಸಹಾಯ ಮಾಡಲು ಯೋಚಿಸಿದ್ದರು.

    ಆದರೆ ತಾಯಿಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಕೀವ್ ಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಯಿತು. ಇದರಿಂದ ಚಾಲಕನೊಂದಿಗೆ ವಲೇರಿಯಾ ಮತ್ತು ಅವರ ತಾಯಿ ಕೀವ್ ಬಿಟ್ಟು ಹೊರಟರು. ಆದರೆ ಕೀವ್‍ನ ಪಶ್ಚಿಮ ಮಾರ್ಗದಲ್ಲಿ ರಷ್ಯಾ ನಡೆಸಿದ ಗುಂಡಿನ ದಾಳಿಯಲ್ಲಿ ಇವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ವಲೇರಿಯಾ ಅವರು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‍ಮೆಂಟ್‍ನಲ್ಲಿ ಕೆಲಸ ಮಾಡಿದವರು. ಈ ಏಜೆನ್ಸಿ ಯುನೈಟೆಡ್ ಸ್ಟೇಟ್ಸ್ ಫೆಡರಲ್ ಸರ್ಕಾರದ ಸ್ವತಂತ್ರ ಸಂಸ್ಥೆಯಾಗಿದ್ದು, ವಿದೇಶಿ ನಾಗರಿಕರಿಗೆ ಸಹಾಯ ಮತ್ತು ಅಭಿವೃದ್ಧಿ ನೆರವು ನೀಡುವುದು ಇದರ ಜವಾಬ್ದಾರಿಯಾಗಿದೆ. ಇದನ್ನೂ ಓದಿ:  ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ: ಸಿದ್ದರಾಮಯ್ಯ

    ಈ ಯುಎಸ್‍ಎ ಐಡಿಯ ಆಡಳಿತಾಧಿಕಾರಿ ಸಮಂತಾ ಪವರ್ ಅವರು ವಲೇರಿಯಾ ಸಾವನ್ನು ದೃಢಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ವಲೇರಿಯಾ 32ನೇ ವರ್ಷದ ಹುಟ್ಟಿದ ದಿನವಿತ್ತು. ತುಂಬಾ ಪ್ರತಿಭಾವಂತಳಾಗಿದ್ದಳು. ಅವಳ ಸಾವು ನೋವು ಕೊಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರಲು ಪುಟಿನ್‌ಗೆ ಝೆಲೆನ್ಸ್ಕಿ ಕರೆ

  • ರಷ್ಯಾ, ಉಕ್ರೇನ್ ಯುದ್ಧ – ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರಲು ಪುಟಿನ್‌ಗೆ ಝೆಲೆನ್ಸ್ಕಿ ಕರೆ

    ರಷ್ಯಾ, ಉಕ್ರೇನ್ ಯುದ್ಧ – ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರಲು ಪುಟಿನ್‌ಗೆ ಝೆಲೆನ್ಸ್ಕಿ ಕರೆ

    ಕೀವ್: ಭೀಕರ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್‌ಗೆ ಜೆರುಸಲೇಮ್‌ನಲ್ಲಿ ಸಂಧಾನಕ್ಕೆ ಬರುವಂತೆ ಕರೆ ನೀಡಿದ್ದಾರೆ.

    ಉಕ್ರೇನ್-ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಮಾತುಕತೆ ನಡೆಸಿ ಪರಿಹರಿಸಲು ಝೆಲೆನ್ಸ್ಕಿ, ಪುಟಿನ್‌ಗೆ ಆಫರ್ ನೀಡಿದ್ದು, ಇದರಲ್ಲಿ ಮಧ್ಯವರ್ತಿಯಾಗಿ ಮಾತುಕತೆ ಮುನ್ನಡೆಸಲು ಝೆಲೆನ್ಸ್ಕಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಮನವಿಯಿಟ್ಟಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ 200 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ ಅಮೆರಿಕ

    ವರದಿಗಳ ಪ್ರಕಾರ ಝೆಲೆನ್ಸ್ಕಿ ಸಂಘರ್ಷವನ್ನು ಪರಿಹರಿಸಲು ರಷ್ಯಾ ಅಥವಾ ಉಕ್ರೇನ್‌ನಲ್ಲಿ ಮಾತುಕತೆ ನಡೆಸುವುದು ಸೂಕ್ತವಲ್ಲ. ಹೀಗಾಗಿ ನಾನು ಇಸ್ರೇಲ್‌ನ ಜೆರುಸಲೇಮ್ ಅನ್ನು ಆಯ್ದುಕೊಂಡಿದ್ದೇನೆ. ಎರಡು ಶತ್ರು ರಾಷ್ಟ್ರಗಳ ಮಾತುಕತೆಗೆ ಮಧ್ಯವರ್ತಿಯಾಗಲು ಬೆನೆಟ್‌ಗೆ ತಿಳಿಸಿದ್ದೇನೆ ಎಂದಿದ್ದಾರೆ.

    ನಿನ್ನೆ ಇಸ್ರೇಲ್ ಪ್ರಧಾನಿ ಎರಡು ರಾಷ್ಟ್ರಗಳ ಮಧ್ಯವರ್ತಿಯಾಗಿ ಭಾಗವಹಿಸಿದ್ದು, ಈ ಹಿಂದೆಯೂ ಪುಟಿನ್ ಹಾಗೂ ಝೆಲೆನ್ಸ್ಕಿಯೊಂದಿಗೆ ಪ್ರತ್ಯೇಕವಾಗಿ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನನ್ನು ವಶಪಡಿಸಿಕೊಳ್ಳುವಷ್ಟು ಶಕ್ತಿ ರಷ್ಯಾಕ್ಕಿಲ್ಲ: ಝೆಲೆನ್ಸ್ಕಿ

    ಉಕ್ರೇನ್-ರಷ್ಯಾ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನ 1,300ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದು, ರಷ್ಯಾದ ಸೈನಿಕರ ಸಾವಿನ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದೆ ಎಂದು ಉಕ್ರೇನ್ ತಿಳಿಸಿದೆ. ರಷ್ಯಾ ಉಕ್ರೇನ್‌ನ ಅತೀ ಹೆಚ್ಚು ಜನಸಂಖ್ಯೆಯಿರುವ ನಗರ ಮೆಲಿಟೊಪೊಲ್ ಅನ್ನು ಶನಿವಾರ ವಶಪಡಿಸಿಕೊಂಡಿದೆ. ರಷ್ಯಾ ಉಕ್ರೇನ್‌ನ ನಾಗರಿಕರ ಮೇಲೂ ದಾಳಿ ನಡೆಸುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರೂ ಸಾವನ್ನಪ್ಪುತ್ತಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.

  • ನವೀನ್ ದೇಹ ತರುವ ಬಗ್ಗೆ ಮಾತುಕತೆ ನಡೀತಿದೆ: ಬೊಮ್ಮಾಯಿ

    ನವೀನ್ ದೇಹ ತರುವ ಬಗ್ಗೆ ಮಾತುಕತೆ ನಡೀತಿದೆ: ಬೊಮ್ಮಾಯಿ

    ಬೆಂಗಳೂರು: ಯುಕ್ರೇನ್‍ನಲ್ಲಿರುವ ಭಾರತೀಯರ ಸ್ಥಳಾಂತರ ಅಂತಿಮ ಹಂತಕ್ಕೆ ಬಂದಿದೆ. ನವೀನ್ ದೇಹ ತರುವ ಬಗ್ಗೆ ಮಾತುಕತೆ ನಡೀತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಬಾಂಬಿಂಗ್ ಇನ್ನೂ ನಡೀತಿದೆ. ದಾಳಿ ನಿಂತ ನಂತರ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಉಕ್ರೇನ್‍ನಲ್ಲಿ ಉಳಿದವರಿಗೂ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಲು ಭಾರತ ಮುಂದಾಗಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವಧಿಪೂರ್ವ ಚುನಾವಣೆ ಚರ್ಚೆ ಮಾಧ್ಯಮಗಳಲ್ಲಿ ನಡೀತಿದೆ. ನಮ್ಮ  ಪಕ್ಷದಲ್ಲಿ ಅವಧಿಪೂರ್ವ ಚುನಾವಣೆ ಬಗ್ಗೆ ಚರ್ಚೆ ನಡೀತಿಲ್ಲ. ಯಾವುದೇ ಹಂತದಲ್ಲೂ, ಎಲ್ಲೂ ಕೂಡಾ ಪಕ್ಷದಲ್ಲಿ ಚರ್ಚೆ ನಡೀತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ

    ದೆಹಲಿಗೆ ಹೋಗುವ ವಿಚಾರವಾಗಿ ಮಾತನಾಡಿ, ವರಿಷ್ಠರು ಇನ್ನೂ ಸೂಚನೆ ಕೊಟ್ಟಿಲ್ಲ. ವರಿಷ್ಠರ ಸೂಚನೆ ಕೊಟ್ಟ ಮೇಲೆ ದೆಹಲಿಗೆ ಹೋಗುತ್ತೇನೆ. ವರಿಷ್ಠರು ಯಾವಾಗ ಹೇಳ್ತಾರೋ ಆಗ ಸಚಿವ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

    ನಮ್ಮ ಪಕ್ಷ ಬಿಟ್ಟು ಯಾರೂ ಹೋಗಲ್ಲ. ಇನ್ನೊಂದು ಪಕ್ಷಕ್ಕೆ ಯಾರೂ ನಮ್ಮಿಂದ ಹೋಗಲ್ಲ. ಬೇರೆ ಪಕ್ಷದಿಂದ ಬರುವವರ ಬಗ್ಗೆ ಕಾದು ನೋಡಿ ಎಂದು ಕಾಂಗ್ರೆಸ್, ಜೆಡಿಎಸ್‍ನಿಂದ ಬರುವವರ ಬಗ್ಗೆ ಸುಳಿವು ನೀಡಿದರು. ಇದೇ 30, 31 ರಂದು ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಭೆ ಇದೆ. ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಪ್ರವಾಸ ಸೇರಿ ಎಲ್ಲ ವಿಚಾರಗಳು ಚರ್ಚೆ ಆಗುತ್ತವೆ ಎಂದು ತಿಳಿಸಿದರು. ಇದನ್ನೂ ಓದಿ: ಉಕ್ರೇನ್‍ಗೆ 200 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ ಅಮೆರಿಕ

  • ಉಕ್ರೇನ್‍ನನ್ನು ವಶಪಡಿಸಿಕೊಳ್ಳುವಷ್ಟು ಶಕ್ತಿ ರಷ್ಯಾಕ್ಕಿಲ್ಲ: ಝೆಲೆನ್ಸ್ಕಿ

    ಉಕ್ರೇನ್‍ನನ್ನು ವಶಪಡಿಸಿಕೊಳ್ಳುವಷ್ಟು ಶಕ್ತಿ ರಷ್ಯಾಕ್ಕಿಲ್ಲ: ಝೆಲೆನ್ಸ್ಕಿ

    ಕೀವ್: ರಷ್ಯಾದ ಆಕ್ರಮಣಕಾರರು ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಆದರೆ ಅವರು ಉಕ್ರೇನ್‍ನನ್ನು ವಶಪಡಿಸಿಕೊಳ್ಳುವಷ್ಟು ಶಕ್ತಿಯನ್ನು ರಷ್ಯಾ ಹೊಂದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟೀಕಿಸಿದರು.

    ಫೆಬ್ರವರಿ 24ರಂದು ದಾಳಿ ನಡೆಸಿದ ರಷ್ಯಾದ ವಿರುದ್ಧ ಉಕ್ರೇನ್‍ನ ಜನರನ್ನು ಒಗ್ಗೂಡಿಸಲು ಈ ವೀಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಉಕ್ರೇನ್‌ನ ಜನರಿಗೆ ಧೈರ್ಯ ತುಂಬುವ  ಹಾಗೂ ದೇಶಕ್ಕಾಗಿ ಹೋರಾಡಲು ಸ್ಪೂರ್ತಿ ನೀಡುವ ಸಂದೇಶ ಇದರಲ್ಲಿದೆ.

    ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಸಂದೇಶವನ್ನು ಪೋಸ್ಟ್ ಮಾಡಿರುವ ಅವರು, ರಷ್ಯಾದ ಆಕ್ರಮಣಕಾರರು ನಮ್ಮನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಕೇವಲ ಹಿಂಸೆಯ ಮೇಲೆ ಮಾತ್ರ ಹಿಡಿತವನ್ನು ಸಾಧಿಸಿದ್ದಾರೆ ಜೊತೆಗೆ ಅವರ ಹತ್ತಿರ ಶಸ್ತ್ರಾಸ್ತ್ರಗಳು ಹೆಚ್ಚಿವೆ. ಆದರೆ ಅವರಿಗೆ ಉಕ್ರೇನ್‍ನನ್ನು ವಶ ಪಡಿಸಿಕೊಳ್ಳುವ ಶಕ್ತಿ ಹಾಗೂ ಮನೋಭಾವವು ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

    ರಷ್ಯಾದ ಆಕ್ರಮಣಕಾರರು ಸಾಮಾನ್ಯ ಜೀವನಕ್ಕೆ ಯಾವುದೇ ನೈಸರ್ಗಿಕ ಆಧಾರವನ್ನು ಹೊಂದಿಲ್ಲ. ಆದ್ದರಿಂದ ಜನರು ಸಂತೋಷ ಪಡುತ್ತಿದ್ದಾರೆ. ಜೊತೆಗೆ ಕನಸು ಕಾಣುತ್ತಿದ್ದಾರೆ. ಆದರೆ ಅವರು ಸಾಮಾನ್ಯ ಜೀವನನ್ನು ನಡೆಸಲು ಅಸಮರ್ಥರಾಗಿದ್ದಾರೆ. ರಷ್ಯಾ ವಿದೇಶಿ ಭೂಮಿಗೆ ಬಂದಿದೆ. ಅದರ ಕನಸುಗಳನ್ನು ನನಸು ಮಾಡಿಕೊಳ್ಳಲು ಅಸಾಧ್ಯ. ರಷ್ಯಾವು ದೇಶವನ್ನು ಒಡೆದು, ಉಕ್ರೇನ್‍ನಲ್ಲಿ ಹೊಸ ಸುಳ್ಳು ಗಣರಾಜ್ಯಗಳನ್ನು ರಚಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

  • ಪ್ರಾರ್ಥನಾ ಮಂದಿರದ ಮೇಲೂ ಕ್ಷಿಪಣಿ, ಬಾಂಬ್ ದಾಳಿ – ಕೀವ್ ವಶಕ್ಕೆ ರಷ್ಯಾ ಹರಸಾಹಸ

    ಪ್ರಾರ್ಥನಾ ಮಂದಿರದ ಮೇಲೂ ಕ್ಷಿಪಣಿ, ಬಾಂಬ್ ದಾಳಿ – ಕೀವ್ ವಶಕ್ಕೆ ರಷ್ಯಾ ಹರಸಾಹಸ

    ಕೀವ್: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ದಾಳಿ 18ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‍ನ ಪ್ರಾರ್ಥನಾ ಮಂದಿರಗಳನ್ನು ಬಿಡದೆ ರಷ್ಯಾ ದಾಳಿ ಮುಂದುವರಿಸಿದೆ.

    ರಷ್ಯಾ ಮಿಲಿಟರಿ ಪಡೆ ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ 4 ಕಿ.ಮೀ ದೂರದಲ್ಲಿ ಇದ್ದು ಕೀವ್ ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಉಕ್ರೇನ್‍ನ ಕೀವ್ ಮತ್ತು ಖಾರ್ಕಿವ್ ನಗರದಲ್ಲಿ ಘನಘೋರ ಯುದ್ಧ ಆಗುತ್ತಿದ್ದು, ರಷ್ಯಾದ ಕ್ಷಿಪಣಿ, ಬಾಂಬ್ ದಾಳಿಗೆ ನಗರಗಳು ಹೊತ್ತಿ ಉರಿಯುತ್ತಿದೆ. ಇನ್ನೊಂದೆಡೆ ಮರಿಯುಪೋಲ್‍ನಲ್ಲಿ ರಷ್ಯಾದ ದಾಳಿಗೆ ಸಿಕ್ಕ ಸಿಕ್ಕಲ್ಲಿ ರಕ್ತಪಾತವಾಗುತ್ತಿದೆ. ಕೀವ್ ನಗರಕ್ಕೆ ಮತ್ತಷ್ಟು ಹತ್ತಿರವಾದ ರಷ್ಯಾ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರದೊಂದಿಗೆ ಲಗ್ಗೆ ಇಟ್ಟಿದೆ. ಈಗಾಗಲೇ ಎರಡು ಕಡೆಯ ನೂರಾರು ಯುದ್ಧ ಟ್ಯಾಂಕರ್‌ಗಳು ಉಡೀಸ್ ಆಗಿದೆ. ಇದನ್ನೂ ಓದಿ: ಗೊರಗುಂಟೆಪಾಳ್ಯ ಫ್ಲೈಓವರ್‌ನಲ್ಲಿ ರಾತ್ರಿ ಸಂಚಾರ ಬಂದ್

    ಉಕ್ರೇನ್‍ನಲ್ಲಿರುವ ಪ್ರಾರ್ಥನಾ ಮಂದಿಗಳನ್ನು ಬಿಡದಂತೆ ರಷ್ಯಾ ದಾಳಿ ಮುಂದುವರಿಸಿದ್ದು, ಉಕ್ರೇನ್‍ನ ಜನರನ್ನು ಸ್ಥಳಾಂತರಿಸುವ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ ರಷ್ಯಾ ಸೇನೆ ಗುಂಡಿನ ಮಳೆ ಸುರಿಸಿದೆ. ದಾಳಿಯಲ್ಲಿ 7 ನಾಗರಿಕರು ಸಾವನ್ನಪ್ಪಿರುವ ಬಗ್ಗೆ ಉಕ್ರೇನ್‍ನ ಗುಪ್ತಚರ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಇತ್ತ ಉಕ್ರೇನ್ ಪ್ರತಿರೋಧ ಮತ್ತಷ್ಟು ತೀವ್ರಗೊಳಿಸಿದ್ದು, ರಷ್ಯಾದ 2 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ. ಖೆರ್ಸನ್ ಬಳಿಯ ಒಬ್ಲಾಸ್ಟ್ ಸಮೀಪ ಹೆಲಿಕಾಫ್ಟರ್ ಧ್ವಂಸವಾಗಿದೆ. ಇದನ್ನೂ ಓದಿ: 122 ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಭಗವಂತ್ ಮಾನ್

    ರಷ್ಯಾ ದಾಳಿಗೆ ಉಕ್ರೇನ್ ಪ್ರತಿರೋಧ ಒಡ್ಡುತ್ತಿರುವ ನಡುವೆಯೂ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆಗೆ ಸಿದ್ಧ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಪುನರುಚ್ಚರಿಸಿದ್ದಾರೆ. ನಾವು ಮಾತುಕತೆಗೆ ಸಿದ್ಧ ಆದರೆ ನಾವು ತಿಳಿಸುವ ಸ್ಥಳಕ್ಕೆ ಪುಟಿನ್ ಬಂದರೆ ಮಾತ್ರ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ ಯೋಧರ ತಾಯಂದಿರ ಬಳಿ ಉಕ್ರೇನ್ ಅಧ್ಯಕ್ಷರ ಮನವಿ ಏನು ಗೊತ್ತಾ?

    ಈಗಾಗಲೇ ಯುದ್ಧ ಪ್ರಾರಂಭವಾದಗಿನಿಂದ ಉಕ್ರೇನ್‍ನ 1,300ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ. ಯುದ್ಧ ನಿಲ್ಲಿಸಲು ನಾವು ಸಿದ್ಧರಿದ್ದೇವೆ ಪುಟಿನ್ ಜೊತೆ ಮಾತುಕತೆಗೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಮಧ್ಯಸ್ಥಿಕೆ ವಹಿಸುವಂತೆ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ.

  • ರಷ್ಯಾ ಯೋಧರ ತಾಯಂದಿರ ಬಳಿ ಉಕ್ರೇನ್ ಅಧ್ಯಕ್ಷರ ಮನವಿ ಏನು ಗೊತ್ತಾ?

    ರಷ್ಯಾ ಯೋಧರ ತಾಯಂದಿರ ಬಳಿ ಉಕ್ರೇನ್ ಅಧ್ಯಕ್ಷರ ಮನವಿ ಏನು ಗೊತ್ತಾ?

    ಕೀವ್: ಉಕ್ರೇನ್ (Ukraine) ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮಂದುವರೆಸಿದೆ. ರಷ್ಯಾ ದಾಳಿಗೆ ಸಿಲುಕಿರುವ ಉಕ್ರೇನ್ ಮಂದಿ ಪ್ರಾಣ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಉದ್ವೀಗ್ನ ಪರಿಸ್ಥಿತಿಯ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ (Volodymyr Zelenskyy) ರಷ್ಯಾ ಯೋಧರ ತಾಯಂದಿರ ಬಳಿ ಮನವಿ ಮಾಡಿದ್ದಾರೆ.

    ಬಲವಂತಕ್ಕೆ ಒಳಗಾಗಿ ಮಕ್ಕಳನ್ನು ಯುದ್ಧಕ್ಕೆ ಕಳುಹಿಸಿರುವ ತಾಯಂದಿರಿಗೆ ನಾನು ಇದನ್ನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ನಿಮ್ಮ ಮಕ್ಕಳನ್ನು ವಿದೇಶದಲ್ಲಿ ಯುದ್ಧಕ್ಕೆ ಕಳುಹಿಸಬೇಡಿ. ನಮ್ಮ ದೇಶದ ಮೇಲೆ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸದಂತೆ ನಿಮ್ಮ ಮಕ್ಕಳನ್ನು ತಡೆಯಿರಿ ಎಂದು ಟೆಲಿಗ್ರಾಮ್‍ನಲ್ಲಿ ಬಿಡುಗಡೆ ಮಾಡಿದ ವೀಡಿಯೋ ಸಂದೇಶದಲ್ಲಿ ಝೆಲೆನ್‍ಸ್ಕಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ನಿಮ್ಮ ಮಗ ಎಲ್ಲಿದ್ದಾನೆ? ಎಂಬುದನ್ನು ಖಾತರಿ ಮಾಡಿಕೊಳ್ಳಿ. ಮಗನನ್ನು ಉಕ್ರೇನ್ ವಿರುದ್ಧ ಯುದ್ಧಕ್ಕೆ ಕಳುಹಿಸಬಹುದೆಂಬ ಸಣ್ಣದೊಂದು ಅನುಮಾನವಿದ್ದರೂ, ಸಹ ಅವನನ್ನು ಕೊಲ್ಲುವುದು, ಸೆರೆಹಿಡಿಯುವುದನ್ನು ತಡೆಯಲು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಂದು  ಹೇಳಿದ್ದಾರೆ.

    ಉಕ್ರೇನ್‍ನಲ್ಲಿ ರಾಸಾಯನಿಕ ಮತ್ತು ಜೈವಿಕ ಆಯುಧಗಳಿಗೆ ಸಂಬಂಧಿಸಿದ ಪ್ರಯೋಗಗಳು ನಡೆಯುತ್ತಿವೆ. ಚೆರ್ನೋಬಿಲ್ ರಿಯಾಕ್ಟರ್‍ನಲ್ಲಿ ಅಣು ಆಯುಧ ತಯಾರಿಸುತ್ತಿದೆ ಎಂಬ ಗಂಭೀರ ಆಪಾದನೆಯನ್ನು ರಷ್ಯಾ ಮಾಡಿದೆ. ಆದರೆ ಈ ಆರೋಪಗಳನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ತಳ್ಳಿ ಹಾಕಿದ್ದಾರೆ. ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ, ನಮ್ಮ ದೇಶದಲ್ಲಿ ಸಾಮೂಹಿಕ ನರಮೇಧಕ್ಕೆ ಸಂಬಂಧಿಸಿದ ಯಾವುದೇ ಶಸ್ತ್ರಾಸ್ತಗಳನ್ನು ಯಾವತ್ತಿಗೂ ತಯಾರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಅಷ್ಟು ದೂರದಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದರೂ ಸರ್ಕಾರ ಏನೂ ಮಾಡಿಲ್ಲ ಅಂತಿದ್ದಾರೆ: ಸೂರ್ಯ ಅಸಮಾಧಾನ

    ಅಷ್ಟು ದೂರದಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದರೂ ಸರ್ಕಾರ ಏನೂ ಮಾಡಿಲ್ಲ ಅಂತಿದ್ದಾರೆ: ಸೂರ್ಯ ಅಸಮಾಧಾನ

    ಬೆಂಗಳೂರು: ಸರ್ಕಾರ ಏನೂ ಕೆಲಸ ಮಾಡದೇ ಹೋಗಿದ್ದರೆ ಇಂದು ವಿದ್ಯಾರ್ಥಿಗಳು ಉಕ್ರೇನ್‌ನಿಂದ ಬರಲು ಸಾಧ್ಯವಾಗುತ್ತಿರಲಿಲ್ಲ. ಯಾಕೆ ಕೆಲ ವಿದ್ಯಾರ್ಥಿಗಳು ಆಕ್ರೋಶದಲ್ಲಿ ಹೀಗೆ ಹೇಳಿದರು ಎಂಬುದು ತಿಳಿಯುತ್ತಿಲ್ಲ. ಉಕ್ರೇನ್ ಇಲ್ಲಿಂದ ಶ್ರೀನಿವಾಸಪುರ ಅಥವಾ ಬಸವನಗುಡಿಗೆ ಹೋದಷ್ಟು ಹತ್ತಿರವಿಲ್ಲ. ಅವರೆಲ್ಲರನ್ನೂ ಅಷ್ಟು ದೂರದಿಂದ ಕೆರೆದುಕೊಂಡು ಬಂದಿರುವ ಬಳಿಕವೂ ಸರ್ಕಾರ ಏನೂ ಮಾಡಿಲ್ಲ ಎನ್ನುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಸರ್ಕಾರಿ ವಿರೋಧಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

    ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ತಮ್ಮ ಮೊಬೈಲಿನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬಂದ್ರಾ ಅಥವಾ ನಮ್ಮ ದೇಶ ಕಳುಹಿಸಿದ ವಿಮಾನದಲ್ಲಿ ಬಂದ್ರಾ..? ಈ ರೀತಿಯಾಗಿ ಸರ್ಕಾರವನ್ನು ದೂರುವುದು ತಪ್ಪು ಎಂದು ಹೇಳಿದರು. ಇದನ್ನೂ ಓದಿ: ಕಂದಾಯ ದಾಖಲೆ ಮನೆ ಬಾಗಿಲಿಗೆ- ಯೋಜನೆಗೆ ಸಿಎಂ ಚಾಲನೆ

    ನವೀನ್ ಮೃತದೇಹ ತರುವ ವಿಚಾರವಾಗಿ ಮಾತನಾಡಿದ ತೇಜಸ್ವಿ ಸೂರ್ಯ, ಅಲ್ಲಿನ ಇಂಡಿಯನ್ ಎಂಬಸಿ ಮೃತದೇಹ ಪತ್ತೆ ಮಾಡಿದೆ. ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡುತ್ತಿದೆ. ಜನರಲ್ ರಾವತ್ ಮರಣ ಸಂದರ್ಭದಲ್ಲೂ ದೇಹವನ್ನು ಗುರುತಿಸುವಲ್ಲಿ ತಡವಾಗಿತ್ತು. ಈ ಬಗ್ಗೆ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಅಲ್ಲಿ ಯುದ್ಧದ ಪರಿಸ್ಥಿತಿ ಹೇಗೆ ಇರುತ್ತದೆ ಎಂಬುದು ಅಲ್ಲಿಯವರಿಗೆ ಮಾತ್ರ ತಿಳಿದಿರುತ್ತದೆ. ಹೀಗಾಗಿ ನವೀನ್ ಮೃತದೇಹ ಬರುತ್ತದೆ ಎಂಬ ಭರವಸೆ ಇಟ್ಟುಕೊಳ್ಳೋಣ ಎಂದು ಹೇಳಿದರು.

    3 ವಾರಗಳಿಂದ ಆಪರೇಶನ್ ಗಂಗಾ ಯೋಜನೆ ಜಾರಿಯಲ್ಲಿತ್ತು. ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸಿಲುಕಿದ್ದ 19,448 ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ. ಅದರಲ್ಲಿ 633 ಕರ್ನಾಟಕದ ವಿದ್ಯಾರ್ಥಿಗಳು ಇದ್ದರು. ಆಪರೇಶನ್ ಗಂಗಾ ಕಾರ್ಯಾಚರಣೆ ಅತ್ಯಂತ ಜಟಿಲವಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಸತತ ಪ್ರಯತ್ನದಿಂದ ಉಕ್ರೇನ್ ಹಾಗೂ ರಷ್ಯಾ ಅಧ್ಯಕ್ಷರ ಜೊತೆ ಸಂಪರ್ಕ ಮಾಡಿ ಅದನ್ನು ಯಶಸ್ವಿಯಾಗಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಪರವಾಗಿ ನಾನು ಪ್ರಧಾನಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಸರ್ಕಾರ ತಾರತಮ್ಯ ಮಾಡುತ್ತಿದೆ, ಬಿಜೆಪಿ ಶಾಸಕರಿಗೆ ಹೆಚ್ಚು ನಮಗೆ ಕಡಿಮೆ ಅನುದಾನ ನೀಡಿದೆ: ರಾಮಲಿಂಗಾ ರೆಡ್ಡಿ

    ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ, ಅವರ ಸಾಕು ಪ್ರಾಣಿಗಳನ್ನೂ ಆಪರೇಶನ್ ಗಂಗಾ ಮೂಲಕ ಸುರಕ್ಷಿತವಾಗಿ ಕರೆತರಲಾಗಿದೆ. ನನ್ನ ಕಚೇರಿಯಿಂದಲೂ ಸಾಕಷ್ಟು ಕೆಲಸ ಮಾಡಲಾಗಿದೆ. 400 ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಉಕ್ರೇನ್‌ನ ವಾಟ್ಸಪ್ ಗ್ರೂಪ್‌ಗಳಿಗೆ ಸೇರಿಸಿ ವಿದ್ಯಾರ್ಥಿಗಳ ಸಂಪರ್ಕ ಪಡೆಯಲಾಗಿತ್ತು. ಈ ವಿಚಾರವಾಗಿ ಕೆಲಸ ಮಾಡಿದ ವಿದೇಶಾಂಗ ಸಚಿವ ಜೈಶಂಕರ್, ವಿದ್ಯಾರ್ಥಿಗಳನ್ನು ಕರೆತರಲು ಹೋಗಿದ್ದ ಹರ್ದೀಪ್ ಸಿಂಗ್, ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

    2014ರ ಮೊದಲು ಈ ದೇಶದಲ್ಲಿ ಮೆಡಿಕಲ್ ಕಾಲೇಜು ಸೀಟ್‌ಗಳ ಸಂಖ್ಯೆ 54 ಸಾವಿರ ಇತ್ತು. ಮೋದಿ ಪ್ರಧಾನಿಯಾದ ಬಳಿಕ 86,648 ರಷ್ಟು ಹೆಚ್ಚಳವಾಗಿದೆ. ಮೋದಿ 7 ವರ್ಷಗಳಲ್ಲಿ ಶೇ.55 ರಷ್ಟು ಮೆಡಿಕಲ್ ಸೀಟ್‌ಗಳನ್ನು ಹೆಚ್ಚಳ ಮಾಡಿದ್ದಾರೆ. ಪಿಜಿ ಸೀಟ್‌ಗಳು 24 ಸಾವಿರ ಇತ್ತು. 6 ವರ್ಷಗಳಲ್ಲಿ ಶೇ.73 ರಷ್ಟು ಹೆಚ್ಚಳ ಮಾಡಿದ್ದಾರೆ ಎಂದರು.

  • ಉಕ್ರೇನ್‍ನಿಂದ ಬಂದಿರೋದು ಮೋದಿ ಮಗ, ನನ್ನ ಮಗನಲ್ಲ: ವಿದ್ಯಾರ್ಥಿ ತಂದೆ ಕಣ್ಣೀರು

    ಉಕ್ರೇನ್‍ನಿಂದ ಬಂದಿರೋದು ಮೋದಿ ಮಗ, ನನ್ನ ಮಗನಲ್ಲ: ವಿದ್ಯಾರ್ಥಿ ತಂದೆ ಕಣ್ಣೀರು

    ನವದೆಹಲಿ: ಯುದ್ಧ ಪೀಡಿತ ಉಕ್ರೇನ್‍ನಿಂದ ಮಗ ವಾಪಸ್ಸಾಗುತ್ತಿದ್ದಂತೆ ಭಾವುಕರಾದ ಪೋಷಕರೊಬ್ಬರು ಇವನು ನನ್ನ ಮಗ ಅಲ್ಲ, ಮೋದಿಯವರ ಮಗ ಎಂದು ಹೇಳುತ್ತಾ ಭಾವುಕರಾಗಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ತನ್ನ ಮಗನನ್ನು ಯುದ್ಧ ಪೀಡಿತ ಉಕ್ರೇನ್‍ನಿಂದ ಸ್ಥಳಾಂತರಿಸಿದ ಸರ್ಕಾರಕ್ಕೆ ಭಾವನಾತ್ಮಕವಾಗಿ ಧನ್ಯವಾದ ಅರ್ಪಿಸಿದರು. ಅವನು ಮೋದಿಯವರ ಮಗ, ನನ್ನ ಮಗ ಅಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

    ವೀಡಿಯೋದಲ್ಲಿ ಏನಿದೆ?: ಕಾಶ್ಮೀರದ ಸಂಜಯ್ ಪಂಡಿತ್ ಕಣ್ಣೀರಿಡುತ್ತಾ ಉಕ್ರೇನ್‍ನ ಸುಮಿಯಲ್ಲಿ ಸಿಲುಕಿರುವ ತನ್ನ ಮಗನನ್ನು ಸ್ಥಳಾಂತರಿಸಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳು. ಮರಳಿ ಬಂದಿರುವುದು ಮೋದಿಯವರ ಮಗನೇ ಹೊರತು ನನ್ನ ಮಗನಲ್ಲ ಎಂದು ನಾನು ಹೇಳಬಯಸುತ್ತೇನೆ. ಸುಮಿಯಲ್ಲಿನ ಸಂಘರ್ಷದ ಪರಿಸ್ಥಿತಿಯಿಂದ ಮಗನ ಮರಳುವಿಕೆಯ ಭರವಸೆಯೇ ಇರಲಿಲ್ಲ. ಸರ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಇದನ್ನೂ ಓದಿ: ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ಉಕ್ರೇನ್‍ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ತಮ್ಮ ಮಕ್ಕಳನ್ನು ನೋಡಲು ಪೋಷಕರು ಐದು-ಆರು ಗಂಟೆಗಳ ಕಾಲ ಅಲ್ಲಿಯೇ ಕಾಯುತ್ತಿದ್ದರು. ಕಣ್ಣೀರು ಸುರಿಸುತ್ತಾ ಅನೇಕ ಪಾಲಕರು ಮತ್ತು ಕುಟುಂಬ ಸದಸ್ಯರು ತಮ್ಮ ಮಕ್ಕಳಿಗೆ ಸಿಹಿ ಹಂಚಿ, ಹಾರ ಹಾಕಿ ಸ್ವಾಗತಿಸಿದ್ದಾರೆ.

  • ರಷ್ಯಾ-ಉಕ್ರೇನ್ ಯುದ್ಧ – ಇನ್‍ಸ್ಟಾಗ್ರಾಮ್ ನಿರ್ಬಂಧಿಸಲು ಮುಂದಾದ ರಷ್ಯಾ

    ರಷ್ಯಾ-ಉಕ್ರೇನ್ ಯುದ್ಧ – ಇನ್‍ಸ್ಟಾಗ್ರಾಮ್ ನಿರ್ಬಂಧಿಸಲು ಮುಂದಾದ ರಷ್ಯಾ

    ಮಾಸ್ಕೋ: ಉಕ್ರೇನ್ ಹಾಗೂ ರಷ್ಯಾ ನಡುವೆ ಸಂಘರ್ಷ ಮುಂದುವರಿದಿದ್ದು, ಮಾರ್ಚ್ 14ರಿಂದ ಇನ್‍ಸ್ಟಾಗ್ರಾಮ್ ಬಳಕೆಗೆ ಸಂಪೂರ್ಣ ನಿರ್ಬಂಧ ಹೇರಲು ರಷ್ಯಾ ಸರ್ಕಾರ ಮುಂದಾಗಿದೆ.

    ಈಗಾಗಲೇ ರಷ್ಯಾ ಫೇಸ್‍ಬುಕ್ ಹಾಗೂ ಟ್ವಿಟ್ಟರ್‌ಗೆ ಪ್ರವೇಶವನ್ನು ನಿರ್ಬಂಧಿಸಿದೆ. ಇದೀಗ ಇನ್‍ಸ್ಟಾಗ್ರಾಮ್ ಮೇಲೆ ಮಾರ್ಚ್ 14ರಿಂದ ನಿರ್ಬಂಧ ಹೇರಲು ನಿರ್ಧರಿಸಿದೆ. ರಷ್ಯಾ ಸೈನಿಕರ ವಿರುದ್ಧ ಹಿಂಸಾಚಾರ ನಡೆಸಲು ಇನ್‍ಸ್ಟಾಗ್ರಾಮ್‍ನಲ್ಲಿ ಬಳಕೆದಾರರಿಗೆ ಮೆಟಾ ತನ್ನ ದ್ವೇಷದ ಭಾಷಣದ ಮೂಲಕ ಕರೆ ನೀಡಲು ನಿರ್ಧರಿಸಿದ್ದರಿಂದ ಈ ಕ್ರಮ ಕೈಗೊಳ್ಳಲು ರಷ್ಯಾ ಮುಂದಾಗಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಘರ್ಷನೆಯಿಂದ 3ನೇ ವಿಶ್ವ ಯುದ್ಧವಾಗದಂತೆ ತಡೆಯಲು ನಾವು ಶ್ರಮಿಸಬೇಕು: ಜೋ ಬೈಡೆನ್

    “ಉಗ್ರವಾದಿ ಚಟುವಟಿಕೆಯನ್ನು ಎದುರಿಸುವ” ಫೆಡರಲ್ ಕಾನೂನಿಗೆ ಅನುಸಾರವಾಗಿ, ರಷ್ಯಾದ ಒಕ್ಕೂಟದ ಪ್ರಾಸಿಕ್ಯೂಟರ್ ಜನರಲ್ ಕಚೇರಿಯು ಮೆಟಾ ಪ್ಲಾಟ್‍ಫಾಮ್ರ್ಸ್ ಅನ್ನು ಉಗ್ರಗಾಮಿ ಸಂಘಟನೆ ಎಂದು ಗುರುತಿಸಿದೆ. ರಷ್ಯಾ ಒಕ್ಕೂಟದ ಪ್ರದೇಶದಲ್ಲಿ ಅದರ ಚಟುವಟಿಕೆಗಳನ್ನು ನಿಷೇಧಿಸಲು ನ್ಯಾಯಾಲಯಕ್ಕೆ ಅರ್ಜಿಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದೆ.

    ಈಗಾಗಲೇ ರಷ್ಯಾ ದೇಶದಲ್ಲಿ ಫೇಸ್‍ಬುಕ್ ನಿರ್ಬಂಧಿಸಿದ್ದು, ವಾಟ್ಸಾಪ್ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ಕಾರಣ ವಾಟ್ಸಾಪ್ ಮೆಟಾ ವಿರುದ್ಧದ ಕ್ರಮಗಳಿಂದ ಪ್ರಭಾವಿತವಾಗುವುದಿಲ್ಲ. ಇದು ಮಾಹಿತಿಯನ್ನು ಪೋಸ್ಟ್ ಮಾಡಲಾಗದಂತಹ ಸಂವಹನ ಸಾಧನವಾಗಿದೆ ಎಂದು ಮೂಲವೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆ ಆರ್‍ಐಎ ನೊವೊಸ್ಟಿಗೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಟಿಕ್‍ಟಾಕ್, ಚೀನಾದ ಒಡೆತನದ ವೀಡಿಯೋ ಅಪ್ಲಿಕೇಶನ್ ಆಗಿದ್ದು, ರಷ್ಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮತ್ತು ವೀಡಿಯೋಗಳನ್ನು ಅಪ್‍ಲೋಡ್ ಮಾಡುವುದನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

  • ರಷ್ಯಾ, ಉಕ್ರೇನ್ ಘರ್ಷನೆಯಿಂದ 3ನೇ ವಿಶ್ವ ಯುದ್ಧವಾಗದಂತೆ ತಡೆಯಲು ನಾವು ಶ್ರಮಿಸಬೇಕು: ಜೋ ಬೈಡೆನ್

    ರಷ್ಯಾ, ಉಕ್ರೇನ್ ಘರ್ಷನೆಯಿಂದ 3ನೇ ವಿಶ್ವ ಯುದ್ಧವಾಗದಂತೆ ತಡೆಯಲು ನಾವು ಶ್ರಮಿಸಬೇಕು: ಜೋ ಬೈಡೆನ್

    ನ್ಯೂಯಾರ್ಕ್: ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ನ್ಯಾಟೋ ಮತ್ತು ರಷ್ಯಾ ನಡುವಿನ ಮೊದಲ ಘರ್ಷಣೆಯು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಹೀಗಾಗಿ ನಾವು ಅದನ್ನು ತಡೆಯಲು ಶ್ರಮಿಸಬೇಕು ಎಂದು ಹೇಳಿದ್ದಾರೆ.

    ನ್ಯಾಟೋ ತನ್ನ ಭೂಪ್ರದೇಶದ ಪ್ರತಿಯೊಂದು ಇಂಚನ್ನು ರಕ್ಷಿಸುತ್ತದೆ. ಆದರೆ ಅದು ಉಕ್ರೇನ್‍ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನ್ಯಾಟೋ ಉಕ್ರೇನ್‍ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಏಕೆಂದರೆ ಅದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ನಾನು ಸ್ಪಷ್ಟವಾಗಿರಲು ಬಯಸುತ್ತೇನೆ. ನಾವು ನ್ಯಾಟೋದ ಪ್ರತಿಯೊಂದು ಇಂಚನ್ನು ಒಂದು ಏಕೀಕೃತ ಮತ್ತು ಕಲಾಯಿ ನ್ಯಾಟೋದ ಸಂಪೂರ್ಣ ಶಕ್ತಿಯೊಂದಿಗೆ ರಕ್ಷಿಸುತ್ತೇವೆ. ಆದರೆ ನಾವು ಉಕ್ರೇನ್‍ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ. ನ್ಯಾಟೋ ಮತ್ತು ರಷ್ಯಾದ ನಡುವಿನ ನೇರ ಮುಖಾಮುಖಿ 3ನೇ ವಿಶ್ವ ಯುದ್ಧವಾಗದಂತೆ ನಾವು ತಡೆಯಲು ಶ್ರಮಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಆದಾಗ್ಯೂ, ಬಿಡೆನ್ ಅವರು ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ರಷ್ಯಾದ ಗಡಿಯಲ್ಲಿ 12,000 ಸೈನಿಕರನ್ನು ಸ್ಥಳಾಂತರಿಸಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ನಡೆಸಿದ ಯುದ್ಧದಲ್ಲಿ ವಿಜಯಶಾಲಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ಯುಎಸ್ ನೇತೃತ್ವದ ನಿರ್ಬಂಧಗಳು ರಷ್ಯಾದ ಆರ್ಥಿಕತೆಯ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತಿದೆ. ಇದರ ಮಧ್ಯೆ, ಜಿ7 ರಾಷ್ಟ್ರಗಳು ಪ್ರಮುಖ ಉತ್ಪನ್ನಗಳಿಗೆ ಸಂಬಂಧಿಸಿದಂತೆ ರಷ್ಯಾಕ್ಕೆ ಅತ್ಯಂತ ಒಲವುಳ್ಳ ರಾಷ್ಟ್ರದ ಸ್ಥಾನಮಾನವನ್ನು ನೀಡಲು ನಿರಾಕರಿಸಲು ಒಪ್ಪಿಕೊಂಡಿವೆ. ಇದರಿಂದ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ರಷ್ಯಾದ ಸದಸ್ಯತ್ವದ ಪ್ರಯೋಜನಗಳನ್ನು ಹಿಂತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.