ಎರಡೂ ದೇಶಗಳು ಮಾತುಕತೆಗಳನ್ನು ಸೋಮವಾರ ವಿರಾಮಗೊಳಿಸಿವೆ. ಮಂಗಳವಾರ ಮಾತುಕತೆ ಮುಂದುವರಿಯಲಿದೆ ಎಂದು ಉಕ್ರೇನ್ ಸಮಾಲೋಚಕರೊಬ್ಬರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಈ ನಡುವೆ, ಉಕ್ರೇನ್ ವಿರುದ್ಧದ ಹೋರಾಟಕ್ಕೆ ಮಿಲಿಟರಿ ನೆರವು ನೀಡುವಂತೆ ಚೀನಾಗೆ ರಷ್ಯಾ ಕೇಳಿದೆ ಎಂಬ ಯುಎಸ್ ಸುದ್ದಿ ಸಂಸ್ಥೆಗಳ ವರದಿ ಸುಳ್ಳು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ರಷ್ಯಾದಿಂದ ಯಾವುದೇ ಕೋರಿಕೆ ಬಂದಿಲ್ಲ. ಈ ವಿಚಾರವಾಗಿ ಹರಿದಾಡುತ್ತಿರುವುದು ತಪ್ಪು ಮಾಹಿತಿ ಎಂದು ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್ ಮೆದುಳಿನ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ: ಗುಪ್ತಚರ ವರದಿ
ಯುದ್ಧ ಹೀಗೆ ಮುಂದುವರಿದರೆ ಉಕ್ರೇನ್‌ನ ಆರ್ಥಿಕತೆಯಲ್ಲಿ ಶೇ. 35 ರಷ್ಟು ಕುಸಿತ ಉಂಟಾಗಲಿದೆ. ಆಹಾರ ಭದ್ರತೆಗೂ ಹೊಡೆತ ಬೀಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ.
ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ನಡೆಸುವುದು ಅಕ್ಷಮ್ಯ ಅಪರಾಧ ಎಂಬ ರಷ್ಯಾ ಪೈಲಟ್ ಹೇಳಿಕೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಉಕ್ರೇನ್ ಮೇಲೆ ತನ್ನ ದೇಶವು ನಡೆಸಿದ ದಾಳಿಯನ್ನು ರಷ್ಯಾ ಪೈಲಟ್ ಖಂಡಿಸಿದ್ದಾರೆ. ವಿಮಾನ ಟೇಕಾಫ್ ಆಗುವ ಮುನ್ನ ಪ್ರಯಾಣಿಕರನ್ನು ಉದ್ದೇಶಿಸಿ ಪೈಲಟ್ ಈ ಹೇಳಿಕೆ ನೀಡಿದ್ದಾರೆ. ಪೈಲಟ್ ಇಂಗ್ಲಿಷ್ ಮತ್ತು ರಷ್ಯನ್ ಭಾಷೆಗಳಲ್ಲಿ ಘೋಷಣೆ ಮಾಡುತ್ತಿದ್ದಂತೆ ಪ್ರಯಾಣಿಕರು ಚಪ್ಪಾಳೆ ಮೂಲಕ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಪುಟಿನ್ ಮೆದುಳಿನ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ: ಗುಪ್ತಚರ ವರದಿ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉಕ್ರೇನ್ ರಾಜತಾಂತ್ರಿಕ ಅಲೆಕ್ಸಾಂಡರ್ ಶೆರ್ಬಾ ಸೇರಿದಂತೆ ಹಲವರು ಪೈಲಟ್ ತೋರಿದ ಸೌಹಾರ್ದತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
“Ladies and gentlemen, here is your captain speaking. Welcome to Antalya. Thank you for flying with “Pobeda”. Also, from me personally: the war with Ukraine is a crime…”.
ಮಾನ್ಯರೇ ಮತ್ತು ಮಹಿಳೆಯರೆ, ನಾನು ನಿಮ್ಮ ಕ್ಯಾಪ್ಟನ್ ಮಾತನಾಡುತ್ತಿದ್ದೇನೆ. ಅಂಟಲ್ಯಾಗೆ ನಿಮಗೆ ಸುಸ್ವಾಗತ. ಪೊಬೆಡಾದೊಂದಿಗೆ ಪ್ರಯಾಣಿಸುತ್ತಿರುವುದಕ್ಕಾಗಿ ನಿಮಗೆ ಧನ್ಯವಾದ. ಉಕ್ರೇನ್ ಮೇಲಿನ ಯುದ್ಧ ಅಕ್ಷಮ್ಯ ಅಪರಾಧ ಎಂಬುದು ನನ್ನ ವೈಯಕ್ತಿಕ ಭಾವನೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
#StandWithUkraine ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ರಷ್ಯಾ ಪೈಲಟ್‌ನ ಹೇಳಿಕೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಷ್ಯಾಕ್ಕೆ ಈ ಪೈಲಟ್‌ನಂತಹ ಹೆಚ್ಚು ಧೈರ್ಯಶಾಲಿಗಳ ಅಗತ್ಯವಿದೆ ಎಂದು ಟ್ವಿಟ್ಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಲಂಡನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ಕಾಯಿಲೆ ಅಥವಾ ಕ್ಯಾನ್ಸರ್‌ಗೆ ನೀಡುವ ಸ್ಟೀರಾಯ್ಡ್ ಚಿಕಿತ್ಸೆಯಿಂದ ಉಂಟಾಗುವ `ರಾಯ್ಡ್ ರೇಜ್’ನಿಂದ ಮೆದುಳಿನ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಯುಕೆ ಮತ್ತು ಯುಎಸ್ ಅನ್ನು ಒಳಗೊಂಡಿರುವ ಐದು ದೇಶಗಳ ಗುಪ್ತಚರ ಒಕ್ಕೂಟ ರಷ್ಯಾದ ಮೂಲಗಳನ್ನು ಆಧರಿಸಿ ಡೈಲಿ ಮೇಲ್ ವರದಿ ಪ್ರಕಟಿಸಿದೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
ಮಡಿಕೇರಿ: ಉಕ್ರೇನ್‍ನಲ್ಲಿ ಯುದ್ಧದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕ ಉಕ್ರೇನ್ ದೇಶವೇ ವಿನಾಶದ ಹಂತದಲ್ಲಿದೆ. ಒಂದು ಕಡೆ ಉಕ್ರೇನ್ ವಿನಾಶದ ಅಂಚು ತಲುಪಿದರೆ ಇತ್ತ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿಗಳು ಮರಳಿ ತಮ್ಮ ಊರಿಗೆ ಬಂದಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್ ಓದುತ್ತಿದ್ದವರು ಇದೀಗ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವಂತಾಗಿದೆ.
ಕೊಡಗು ಜಿಲ್ಲೆಯ 14 ವಿದ್ಯಾರ್ಥಿಗಳು ಇದೀಗ ತಮ್ಮ ತವರಿಗೆ ಮರಳಿ ಬಂದಿದ್ದಾರೆ. ಇದೇ ತಿಂಗಳ 25 ರಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನ ಪಾರಂಭಿಸುತ್ತೆ ಅಂತ ಉಕ್ರೇನ್ ಯುನಿವರ್ಸಿಟಿ ಹೇಳಿತ್ತು. ಆದರೆ ಇಂತಹ ಒಂದು ಯುದ್ಧದ ಪರಿಸ್ಥಿತಿಯಲ್ಲಿ ನಿಜಕ್ಕೂ ಯುನಿವರ್ಸಿಟಿಗಳು ಆನ್ ಲೈನ್ ತರಗತಿಗಳನ್ನ ಮಾಡಲು ಸಾಧ್ಯವೇ? ಅನ್ನುವ ಪ್ರಶ್ನೆ ವಿದ್ಯಾರ್ಥಿಗಳಿಗೆ ಕಾಡತೊಡಗಿದೆ.
ಆನ್‍ಲೈನ್ ತರಗತಿಗಳನ್ನ ಮಾಡಿದರು ಅದರಿಂದ ನಮಗೆ ಏನು ಪ್ರಯೋಜನ ಆಗುವುದಿಲ್ಲ. ಕಳೆದ ಎರಡು ವರ್ಷಗಳಿಂದ ಕೂಡ ಕೋವಿಡ್ ಕಾರಣದಿಂದಾಗಿ ಆನ್‍ಲೈನ್ ತರಗತಿಗಳನ್ನ ನಡೆಸಿದರು. ಇದೀಗ ಮತ್ತೆ ಆನ್ ಲೈನ್ ತರಗತಿಗಳನ್ನ ಮಾಡುವುದರಿಂದ ಇದು ನಮ್ಮ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರಲಿದೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗಿಂತ ಪ್ರಾಕ್ಟಿಕಲ್ ತರಗತಿ ಮುಖ್ಯವಾಗಿರುತ್ತದೆ. ಆದರೆ ಈ ಎಲ್ಲಾ ಕಾರಣಗಳಿಂದ ಇದಕ್ಕೆ ಬ್ರೇಕ್ ಬಿದ್ದಿರೋದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಉಕ್ರೇನ್ ಬಹುತೇಕ ನಾಶವಾಗಿರುವದರಿಂದ ಇನ್ನೂ ನಾವು ಅಲ್ಲಿ ಹೋಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ನೂರಾರು ವಿದ್ಯಾರ್ಥಿಗಳಿದ್ದು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಇಲ್ಲಿಯೇ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ಮಾಡಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.
ಇತ್ತ ವಿದ್ಯಾರ್ಥಿಗಳ ಪೋಷಕರಿಗೂ ತಮ್ಮ ಮಕ್ಕಳು ಭವಿಷ್ಯದ ಚಿಂತೆ ಕಾಡುತ್ತಿದೆ. ಮಧ್ಯಮ ವರ್ಗದ ಜನರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸಿದ್ದರು. ಆದರೆ ಇದೀಗ ಉಕ್ರೇನ್ ರಷ್ಯಾ ದೇಶದ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳಿಗೆ ಅನ್‍ಲೈನ್ ಶಿಕ್ಷಣ ನೀಡುವುದಾಗಿ ಯುನಿವರ್ಸಿಟಿ ಅವರು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: 2 ಕೋಟಿ ಸಾಲ ಮಾಡಿರುವ ಸಿದ್ದರಾಮಯ್ಯಗೆ ಭಾರತ ರತ್ನ ನೀಡಲಿ: ಸಾ.ರಾ ಮಹೇಶ್
ಆದರೆ ಅನ್ ಲೈನ್ ಶಿಕ್ಷಣ ದಿಂದ ತಮ್ಮಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಒಂದ ಅಷ್ಟು ಚಿಂತನೆ ನಡೆಸಿ ಸ್ಥಳೀಯವಾಗಿ ಆದರೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಮನವಿ ಮಾಡಿದ್ದಾರೆ.
ಕೋಲ್ಕತ್ತಾ: ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ಉಕ್ರೇನ್‍ನ ಪೋಲಿಷ್ ಮತ್ತು ಹಂಗೇರಿಯ ಗಡಿಯಲ್ಲಿ ಸಿಲುಕಿಕೊಂಡಿದ್ದ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ ಮೂಲಕ 24 ವರ್ಷದ ಭಾರತೀಯ ಮಹಿಳಾ ಪೈಲಟ್ ಗಮನ ಸೆಳೆದಿದ್ದಾರೆ.
ಕೋಲ್ಕತ್ತಾದ ಮಹಾಶ್ವೇತಾ ಚಕ್ರವರ್ತಿ (Mahasweta Chakraborty) ಎನ್ನುವ ಪೈಲಟ್ ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆಪರೇಷನ್ ಗಂಗಾದ ಸದಸ್ಯರಾಗಿರುವ ಚಕ್ರವರ್ತಿ, ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಫೆಬ್ರವರಿ 27 ಮತ್ತು ಮಾರ್ಚ್ 7ರ ನಡುವೆ ಪೋಲೆಂಡ್‍ನಿಂದ ನಾಲ್ಕು ಮತ್ತು ಹಂಗೇರಿಯಿಂದ ಎರಡು ಸ್ಥಳಾಂತರಿಸುವ ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಾಳಾಂತರಿಸುವಲ್ಲಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಕೋಲ್ಕತ್ತಾದ 24 ವರ್ಷದ ಪೈಲಟ್ ಮಹಾಶ್ವೇತಾ ಚಕ್ರವರ್ತಿ ಅವರು ಉಕ್ರೇನ್, ಪೋಲೆಂಡ್ ಮತ್ತು ಹಂಗೇರಿಯ ಗಡಿಯಿಂದ 800ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಆಕೆಗೆ ಅಪಾರ ಗೌರವ ಎಂದು ಬಿಜೆಪಿ ಮಹಿಳಾ ಮೋಚಾ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್
ಮಹಾಶ್ವೇತಾ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪಶ್ಚಿಮ ಬಂಗಾಳ ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಚಕ್ರವರ್ತಿ ಅವರ ಮಗಳು. ಇಂದಿರಾ ಗಾಂಧಿ ರಾಷ್ಟ್ರೀಯ ಯುರಾನ್ ಅಕಾಡೆಮಿಯಿಂದ ಪದವೀಧರರಾಗಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ಖಾಸಗಿ ಕ್ಯಾರಿಯರ್‌ನ್ನು (private carrier) ಹಾರಿಸುತ್ತಿದ್ದಾರೆ.
ಮಹಾಶ್ವೇತಾ ಚಕ್ರವರ್ತಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿ, ಇದು ಜೀವಮಾನದ ಅನುಭವವಾಗಿತ್ತು, ಅವರಲ್ಲಿ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ನಾನು ಅವರ ಹೋರಾಟದ ಮನೋಭಾವನೆಯನ್ನು ಮೆಚ್ಚುತ್ತೇನೆ. ಅವರ ಮನೆಗೆ ಹಿಂದಿರುಗಿದ ಪ್ರಯಾಣದಲ್ಲಿ ನನ್ನ ಪಾತ್ರವನ್ನು ವಹಿಸಿದ್ದಕ್ಕಾಗಿ ನಾನು ತುಂಬಾ ಹೆಮ್ಮೆಪಡುತ್ತೇನೆ. ಎಂದು ಹೇಳಿದ್ದಾರೆ.
ವಾಷಿಂಗ್ಟನ್: ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾ ತನ್ನ ಯುದ್ಧವನ್ನು ಮುಂದುವರಿಸಲು ಡ್ರೋನ್‍ಗಳು ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ರಷ್ಯಾ ಚೀನಾವನ್ನು ಕೇಳಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದರಿಂದ ಅಮೆರಿಕ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ರಷ್ಯಾದ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ರಷ್ಯಾದ ಹಲವಾರು ಪ್ರಮುಖ ಬ್ಯಾಂಕ್‍ಗಳ ಮೇಲೆ ನಿರ್ಬಂಧ ಹೇರಿತು. ಜೊತೆಗೆ ರಷ್ಯಾವನ್ನು SWIFT ಹಣಕಾಸು ವ್ಯವಸ್ಥೆಯಿಂದ ಹೊರಹಾಕಿದೆ.
ನನಗೆ ಈ ಬಗ್ಗೆ ಯಾವುದು ಸಹ ತಿಳಿದಿಲ್ಲ. ಉಕ್ರೇನ್ ಪರಿಸ್ಥಿತಿ ನಿಜಕ್ಕೂ ಅಸ್ತವ್ಯಸ್ತವಾಗಿದೆ. ಚೀನಾ ಉಕ್ರೇನ್‍ಗೆ ಮಾನವೀಯ ನೆರವು ನೀಡುತ್ತಿದೆ ಅದನ್ನು ಮುಂದುವರಿಸುತ್ತದೆ. ಈಗ ಹೆಚ್ಚಿನ ಆದ್ಯತೆ ಉದ್ವಿಗ್ನ ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದಾಗಿದೆ. ಚೀನಾವು ಸಂಯಮದಿಂದ ಮಾನವೀಯತೆಯನ್ನು ತೋರಿಸುವಂತೆ ಕರೆ ನೀಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್
ಬೆಂಗಳೂರು: ಸದ್ಯ ಯುದ್ಧಪೀಡಿತ ಉಕ್ರೇನ್‍ನಿಂದ ವಾಪಸ್ಸಾಗಿರುವ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ ಏನೇ ನಿರ್ಧಾರ ಕೈಗೊಳ್ಳಬೇಕಾದ್ರು, ರಾಜ್ಯಕ್ಕೆ ಕೇಂದ್ರ ಅನುಮತಿ ಬೇಕಾಗುತ್ತದೆ.
ರಾಜ್ಯ ಸರ್ಕಾರದ ಮುಂದಿರುವ ಆಯ್ಕೆಗಳು:
ಉಕ್ರೇನ್ ನಿಂದ ಬಂದಿರೋ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ರಾಜ್ಯ ಸರ್ಕಾರಕ್ಕೂ ಸದ್ಯ ಯಾವುದೇ ಮಾರ್ಗಗಳು ಇಲ್ಲ. ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಕೋರ್ಸ್ ಮುಂದುವರಿಸಲು ಅವಕಾಶ ಕೊಡಲು ಅಧಿಕಾರ ಇಲ್ಲ. ರಾಜ್ಯ ಸರ್ಕಾರ ಏನೇ ನಿರ್ಧಾರ ಮಾಡಬೇಕಾದ್ರು ಕೇಂದ್ರ ಸರ್ಕಾರದ ಅನುಮತಿಬೇಕು. ಕೇಂದ್ರ ಸರ್ಕಾರ ನಿಯಮ ತಂದು ಅವಕಾಶ ಮಾಡಿಕೊಟ್ಟರೆ ಮಾತ್ರ ರಾಜ್ಯ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಬಹುದಾಗಿದೆ.
ವಿದ್ಯಾರ್ಥಿಗಳ ಮುಂದಿರೋ ಆಯ್ಕೆಗಳು:
ವಿದ್ಯಾರ್ಥಿಗಳು ರಾಜ್ಯದಲ್ಲಿ ಕೋರ್ಸ್ ಮುಂದುವರೆಸುತ್ತೇವೆ ಅಂತ ಸಿಎಂ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಬೇಕು. ವಿದ್ಯಾರ್ಥಿಗಳ ಮನವಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ರಾಜ್ಯ ಸರ್ಕಾರ ತರಬೇಕಾಗುತ್ತೆ. ಇದನ್ನೂ ಓದಿ: ಆಲೂಗಡ್ಡೆ, ಟೊಮೆಟೊ ಬೆಲೆ ಪರಿಶೀಲಿಸಲು ನಾನು ರಾಜಕೀಯ ಸೇರಿಲ್ಲ – ಪಾಕ್ ಪ್ರಧಾನಿ
ದೇಶದಲ್ಲಿ ಕೋರ್ಸ್ ಮುಂದುವರಿಸಲು ಕೇಂದ್ರ ಸರ್ಕಾರ ವಿಶೇಷ ಕಾನೂನು ರಚಿಸಿ ರಾಜ್ಯಗಳಿಗೆ ಕೋರ್ಸ್ ಮುಂದುವರಿಸಲು ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಬೇಕು. ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ ವಿದ್ಯಾರ್ಥಿಗಳಿಗೆ ಕೋರ್ಸ್ ಮುಂದುವರಿಸಲು ರಾಜ್ಯ ಸರ್ಕಾರ ಕಾಲೇಜುಗಳನ್ನ ಸಿದ್ಧಪಡಿಸಿ ಕೋರ್ಸ್ ಗೆ ಅವಕಾಶ ಮಾಡಿಕೊಡಬಹುದು.
ಕೀವ್: ರಷ್ಯಾ, ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಮಂದುವರಿಸಿದೆ. ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಾವು ನೋವುಗಳು ಹೆಚ್ಚಾಗುತ್ತಿವೆ. ಇದೀಗ ಒಬ್ಬ ಪತ್ರಕರ್ತರು ಗುಂಡಿಗೆ ಬಲಿಯಾಗಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಉಕ್ರೇನ್‍ನಲ್ಲಿ ಅಮೆರಿಕದ ಪತ್ರಕರ್ತ ಬ್ರೆಂಟ್ ರೆನಾಡ್ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ. ವೈದ್ಯಕೀಯ, ಸಾಕ್ಷಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು
.@nytimes is deeply saddened to learn of the death of an American journalist in Ukraine, Brent Renaud.
Brent was a talented photographer and filmmaker, but he was not on assignment for @nytimes in Ukraine.
Full statement is here. pic.twitter.com/bRcrnNDacQ
ಪತ್ರಕರ್ತ ಬ್ರೆಂಟ್ ರೆನಾಡ್‍ನ ಸಾವಿನ ಬಗ್ಗೆ ತೀವ್ರವಾಗಿ ದುಃಖಿತವಾಗಿದೆ. ಬ್ರೆಂಟ್ ಪ್ರತಿಭಾವಂತ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದರು, ಆದರೆ ಅವರು ಉಕ್ರೇನ್‍ನಲ್ಲಿ ನಿಯೋಜನೆಯಲ್ಲಿರಲಿಲ್ಲ ಎಂದು ಖಾಸಗಿ ವಾಹಿನಿಯ ಉಪ ವ್ಯವಸ್ಥಾಪಕ ಸಂಪಾದಕ ಕ್ಲಿಫ್ ಲೆವಿ ದುರಂತ ಘಟನೆಯ ಕುರಿತು ಮಾಧ್ಯಮ ಸಂಸ್ಥೆಯಿಂದ ಹೇಳಿಕೆಯನ್ನು ನೀಡುವುದರ ಜೊತೆಗೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
ವ್ಯಾಟಿಕನ್: ಕಳೆದ 18 ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣಕಾರಿ ದಾಳಿಯನ್ನು ವಿರೋಧಿಸಿ ಯುದ್ಧವನ್ನು ಕೊನೆಗೊಳಿಸಿ ಎಂದು ಪೋಪ್ ಫ್ರಾನ್ಸಿಸ್ ಇಂದು ಮನವಿ ಮಾಡಿದರು.
ಏಂಜೆಲಸ್ ಪ್ರಾರ್ಥನೆಯ ನಂತರ ಮಾತನಾಡಿದ ಅವರು, ನಾವು ವರ್ಜಿನ್ ಮೇರಿಗೆ ಪ್ರಾರ್ಥಿಸಿದ್ದೇವೆ. ಆಕೆಯ ಹೆಸರನ್ನು ಹೊಂದಿರುವ ನಗರವು ಮಾರಿಯುಪೋಲ್ ಉಕ್ರೇನ್ ನಾಶಪಡಿಸಿಕೊಳ್ಳಲು ಭೀಕರ ಯುದ್ಧ ನಡೆಯುತ್ತಿದೆ. ಪರಿಣಾಮ ಉಕ್ರೇನ್ ಹುತಾತ್ಮರ ನಗರವಾಗಿ ಮಾರ್ಪಟ್ಟಿದೆ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ರಣಬೀರ್ ಕಪೂರ್ಸ್ಪೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್
ಮಕ್ಕಳು, ಮುಗ್ಧರು ಮತ್ತು ನಿರಾಯುಧ ನಾಗರಿಕರ ಬರ್ಬರ ಹತ್ಯೆ ಭಯಾನಕತೆಯನ್ನು ತಿಳಿಸುತ್ತೆ. ಪೂರ್ತಿ ನಗರಗಳನ್ನು ಸ್ಮಶಾನವಾಗಿ ಮಾಡುವ ಮೊದಲು ಅಪಾಯಕಾರಿ ಶಸ್ತ್ರಗಳನ್ನು ಕೊನೆಗೊಳಿಸಬೇಕು. ಮಕ್ಕಳು ಮತ್ತು ನಾಗರಿಕರನ್ನು ಕೊಲ್ಲುವ ‘ಅನಾಗರಿಕತೆ’ಯನ್ನು ನಾನು ಖಂಡಿಸುತ್ತೇನೆ. ದೇವರ ಹೆಸರಿನಲ್ಲಿ ಈ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಂಡರು.
ದೇವರ ಹೆಸರಿನಲ್ಲಿ, ನರಳುತ್ತಿರುವವರ ಕೂಗು ಎಲ್ಲರೂ ಕೇಳಲಿ. ಬಾಂಬ್ ದಾಳಿ ಮತ್ತು ಆಘಾತಕಾರಿ ದಾಳಿಗಳು ನಿಲ್ಲಲಿ. ಮಾನವೀಯತೆಯನ್ನು ಬೆಳಸಿಕೊಳ್ಳಲಿ. ದೇವರ ಹೆಸರಿನಲ್ಲಿ, ನಾನು ನಿಮ್ಮನ್ನು ಕೇಳುತ್ತೇನೆ, ಈ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ಕೇಳಿಕೊಂಡರು.
ದೇವರು ಶಾಂತಿಯ ದೇವರು ಮಾತ್ರ, ಅವನು ಯುದ್ಧದ ದೇವರಲ್ಲ. ಹಿಂಸೆಯನ್ನು ಬೆಂಬಲಿಸುವವರು ಅವನ ಹೆಸರನ್ನು ಅಪವಿತ್ರಗೊಳಿಸುತ್ತಾರೆ. ದೇವರು ಎಂದೂ ಯುದ್ಧ ಕೇಳುವುದಿಲ್ಲವೆಂದು ತಿಳಿಸಿದರು. ಇದನ್ನೂ ಓದಿ: ಹಾಲಿ ಎಂಎಲ್‍ಸಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಸ್ಪೋಟ…!
ಕೀವ್: ರಷ್ಯಾ ಸೈನಿಕರು ಝಪೊರಿಝಿಯಾ ಪ್ರದೇಶದ ಡ್ನಿಪ್ರೊರುಡ್ನೆ ನಗರದ ಮೇಯರ್‌ನನ್ನು ಅಪಹರಿಸಿದ್ದಾರೆ ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ತಿಳಿಸಿದ್ದಾರೆ.
ಯೆವ್ಹೆನ್ ಮ್ಯಾಟ್ವೀವ್ ಅಪಹರಣರಾದ ಮೇಯರ್. ಇವರನ್ನು ರಷ್ಯಾ ಸೈನಿಕರು ಅಪಹರಿಸಿದ್ದಾರೆ ಎಂದು ಜಪೋರಿಝಿಯಾ ಪ್ರದೇಶದ ರಾಜ್ಯ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಸ್ಟಾರುಖ್ ಭಾನುವಾರ ಬೆಳಿಗ್ಗೆ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
Today, Russian war criminals abducted another democratically elected Ukrainian mayor, head of Dniprorudne Yevhen Matveyev. Getting zero local support, invaders turn to terror. I call on all states & international organizations to stop Russian terror against Ukraine and democracy. pic.twitter.com/jEPTBTLikY
ಉಕ್ರೇನ್ ಮೇಲೆ ರಷ್ಯಾ ದಾಳಿ ಅಧಿಕವಾಗುತ್ತಿದೆ. ದ್ನಿಪ್ರೊರುಡ್ನೆಯ ಮೇಯರ್ ಅವರನ್ನು ಅಪಹರಿಸಲಾಗಿದೆ. ರಷ್ಯಾದ ವಿರುದ್ಧ ಸ್ಥಳೀಯ ನಾಗರಿಕರು ತಿರುಗಿಬಿದ್ದರುವುದಕ್ಕೆ ರಷ್ಯಾ ಸೈನಿಕರು ಈ ರೀತಿ ಮಾಡುತ್ತಿದ್ದಾರೆ. ಉಕ್ರೇನ್ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ, ರಷ್ಯಾ ಹನಡೆಸುತ್ತಿರುವ ಇಂತಹ ಕೃತ್ಯವನ್ನುಉ ನಿಲ್ಲಿಸಲು ಎಲ್ಲರೂ ಒಗ್ಗೂಡಬೇಕು ಎಂದು ಸ್ಟಾರುಖ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಯರ್ ಕಿಡ್ನಾಪ್ ಮಾಡಿದ ರಷ್ಯಾ ಸೇನೆ
ಶನಿವಾರ ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ಮಿಲಿಟರಿಯೊಂದಿಗೆ ಸಹಕರಿಸಲು ನಿರಾಕರಿಸಿದ ನಂತರ ದಕ್ಷಿಣ ಉಕ್ರೇನ್‌ನ ಮೆಲಿಟೊಪೋಲ್‌ನ ಮೇಯರ್ ಅವರನ್ನು ರಷ್ಯಾದ ಸೈನಿಕರು ಅಪಹರಿಸಿತ್ತು. ಈ ಬಗ್ಗೆ ಉಕ್ರೇನ್ ಸಂಸತ್ ಟ್ವೀಟ್ ಮಾಡಿ, ೧೦ ಆಕ್ರಮಿತರ ಗುಂಪು ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿದೆ. ಇದರಿಂದಾಗಿ ರಷ್ಯಾ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. ಇದನ್ನೂ ಓದಿ: ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥರಾಗಬೇಕು: ಅಶೋಕ್ ಗೆಹ್ಲೋಟ್