Tag: Ukraine

  • ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭದ್ರತಾ ಮುಖ್ಯಸ್ಥನಿಗೆ ಕರೆ ಮಾಡಿದ್ದರಂತೆ ರಾಮ್ ಚರಣ್

    ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭದ್ರತಾ ಮುಖ್ಯಸ್ಥನಿಗೆ ಕರೆ ಮಾಡಿದ್ದರಂತೆ ರಾಮ್ ಚರಣ್

    ಹೈದರಾಬಾದ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್ ನಟನೆಯ, ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಕೆಲ ದೃಶ್ಯಗಳು ಉಕ್ರೇನ್ ನಲ್ಲಿ ಚಿತ್ರೀಕರಣವಾಗಿದೆ. ಕೆಲ ದಿನಗಳ ಕಾಲ ಇಡೀ ಚಿತ್ರತಂಡ ಉಕ್ರೇನ್ ನಲ್ಲಿಯೇ ಬೀಡುಬಿಟ್ಟು, ಅಲ್ಲಿನ ಸುಂದರ ತಾಣಗಳನ್ನು ಸೆರೆ ಹಿಡಿದಿತ್ತು. ಅದಾದ ಕೆಲವೇ ತಿಂಗಳ ಬಳಿಕೆ ಉಕ್ರೇನ್ ಮತ್ತು ರಷ್ಯಾ ಯುದ್ಧ ಶುರುವಾಯಿತು. ಇಡೀ ದೇಶಕ್ಕೆ ದೇಶವೇ ಯುದ್ಧದ ಭಯದಲ್ಲಿ ಬದುಕಿತ್ತು. ಈ ಸಂದರ್ಭದಲ್ಲಿ ನಟ ರಾಮ್ ಚರಣ್ ತೇಜ್, ತಮಗೆ ಪರಿಚಯ ಇರುವ ಭದ್ರತಾ ಸಿಬ್ಬಂದಿಯ ಮುಖ್ಯಸ್ಥರಿಗೆ ಕರೆ ಮಾಡಿ, ಅಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದಾರೆ.

    ಭದ್ರತಾ ಸಿಬ್ಬಂದಿಯು ನೀಡಿದ ಮಾಹಿತಿ ರಾಮ್ ಚರಣ್ ಅವರಲ್ಲೂ ಆತಂಕ ಮೂಡಿಸಿತ್ತಂತೆ. “ನನ್ನ ತಂದೆ ಬಂದೂಕಿನೊಂದಿಗೆ ರಸ್ತೆಯಲ್ಲಿದ್ದಾರೆ. ಯಾವ ಕಡೆಯಿಂದ ಏನು ಬರುತ್ತದೋ ಗೊತ್ತಿಲ್ಲವೆಂದು’ ಭದ್ರತಾ ಸಿಬ್ಬಂದಿಯ ಮುಖ್ಯಸ್ಥರು ತಿಳಿಸಿದ್ದಾರೆ. “ನನ್ನ ಕೈಲಾದ ಸಹಾಯವನ್ನು ನಾನೂ ಮಾಡುತ್ತೇನೆ. ನಿಮ್ಮ ದೇಶಕ್ಕೆ ಬರಲು ಆಗದೇ ಇರಬಹುದು. ಇಲ್ಲಿಂದಲೇ ನಾನು ಶಾಂತಿಗಾಗಿ ಪ್ರಾರ್ಥಿಸುವೆ” ಎಂದು ಮರು ಉತ್ತರ ಕೊಟ್ಟಿದ್ದರಂತೆ ರಾಮ್ ಚರಣ್ ತೇಜ್. ಈ ಘಟನೆಯನ್ನು ಅವರು ಆರ್.ಆರ್.ಆರ್ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ ಮೆಗಾ ಪವರ್ ಸ್ಟಾರ್. ಅಲ್ಲದೇ, ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ನಾನು ಇಲ್ಲಿಯವರೆಗೆ ಚಿತ್ರೀಕರಿಸಿದ ಅತ್ಯುತ್ತಮ ದೇಶಗಳಲ್ಲಿ ಉಕ್ರೇನ್ ದೇಶವು ಕೂಡ ಒಂದಾಗಿದೆ’ ಎಂದು ಉಕ್ರೇನ್ ಬಗ್ಗೆ ಬಣ್ಣಿಸಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್ 

    ದೇಶದ ಜನತೆ ಮತ್ತು ವಿಶ್ವದಾದ್ಯಂತ ಇರುವ ಅವರು ತಮ್ಮ ಅಭಿಮಾನಿಗಳ ಜತೆ ತಾವು ಸದಾ ಇರುವುದನ್ನು ಅವರು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಇದ್ದಾರೆ. ಕೋವಿಡ್-19 ಸಮಯದಲ್ಲೂ ಅವರು ಹತ್ತಾರು ಕೆಲಸಗಳನ್ನು ಮಾಡಿದ್ದರು. ಸಾಕಷ್ಟು ಕುಟುಂಬಗಳಿಗೆ ಸಹಾಯಹಸ್ತ ಚಾಚಿದ್ದರು. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ

    ‘ಆರ್‍ಆರ್‍ಆರ್’ ಕುರಿತು ಹೇಳುವುದಾದರೆ, ಉಕ್ರೇನ್ ಮತ್ತು ಬಲ್ಗೇರಿಯಾದಲ್ಲಿ ಈ ಚಿತ್ರದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. 400 ಕೋಟಿ ರೂಪಾಯಿ ಬಜೆಟ್‍ನಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಆರಂಭದಲ್ಲಿ ಜುಲೈ 30, 2020 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಂತಿಮವಾಗಿ, ಚಿತ್ರವನ್ನು ಮಾರ್ಚ್ 25, 2022 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

  • ಉಕ್ರೇನ್‍ನಲ್ಲಿ ಈರುಳ್ಳಿ, ಆಲೂಗಡ್ಡೆ ತಿಂದು ಯುದ್ಧ ಮಾಡುತ್ತಿದ್ದಾರೆ ರಷ್ಯಾ ಸೈನಿಕರು

    ಉಕ್ರೇನ್‍ನಲ್ಲಿ ಈರುಳ್ಳಿ, ಆಲೂಗಡ್ಡೆ ತಿಂದು ಯುದ್ಧ ಮಾಡುತ್ತಿದ್ದಾರೆ ರಷ್ಯಾ ಸೈನಿಕರು

    ಕೀವ್: ಉಕ್ರೇನ್‍ನಲ್ಲಿ ಯುದ್ಧ ಮಾಡುತ್ತಿರುವ ರಷ್ಯಾ ಸೈನಿಕರು ಕೇವಲ ಈರುಳ್ಳಿ, ಆಲೂಗಡ್ಡೆ ಮತ್ತು ಉಪ್ಪಿನಕಾಯಿ ತಿಂದು ಬದುಕುತ್ತಿರುವುದು ಬಹಿರಂಗವಾಗಿದೆ.

    ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 21ನೇ ದಿನಕ್ಕೆ ಕಾಲಿಟ್ಟಿದೆ. ಎರಡು ರಾಷ್ಟ್ರಗಳು ಪರಸ್ಪರ ಬಾಂಬ್, ಕ್ಷಿಪಣಿ ದಾಳಿ ಮಾಡುತ್ತಿದ್ದು, ಉಕ್ರೇನ್ ಹಲವು ಸಾವು ನೋವುಗಳೊಂದಿಗೆ ಮುನ್ನುಗ್ಗುತ್ತಿದೆ. ಈ ನಡುವೆ ಉಕ್ರೇನ್ ಸೈನಿಕರು ರಷ್ಯಾದ ಆಹಾರ ತಯಾರಿಕಾ ಟ್ರಕ್ ಒಂದನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

    ಈ ಟ್ರಕ್‍ನಲ್ಲಿ ಕೇವಲ ಈರುಳ್ಳಿ, ಆಲೂಗಡ್ಡೆ ಮತ್ತು ಉಪ್ಪಿನಕಾಯಿ ಮಾತ್ರ ಸಿಕ್ಕಿದೆ. ಇದನ್ನು ಗಮನಿಸುತ್ತಿದ್ದಂತೆ ರಷ್ಯಾದ ಸೈನಿಕರು ಕೇವಲ ಈ ಮೂರು ಆಹಾರವನ್ನು ಮಾತ್ರ ಸೇವಿಸಿ ಯುದ್ಧ ಮಾಡುತ್ತಿರುವ ಸಂಶಯ ಮೂಡಿದೆ. ಈರುಳ್ಳಿ, ಆಲೂಗಡ್ಡೆ ಮತ್ತು ಉಪ್ಪಿನಕಾಯಿ ತಿಂದು ರಷ್ಯಾ ಸೈನಿಕರು ಡಯಟ್ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಉಕ್ರೇನ್ ವಶಪಡಿಸಿಕೊಂಡಿರುವ ರಷ್ಯಾದ ಆಹಾರ ತಯಾರಿಕಾ ಟ್ರಕ್‍ನಲ್ಲಿ ಈರುಳ್ಳಿ, ಆಲೂಗಡ್ಡೆಗಳ ಮೂಟೆ ಸಿಕ್ಕಿದ್ದು, ಈ ಟ್ರಕ್ ಯುದ್ಧದ ವೇಳೆ ಸೈನಿಕರಿಗೆ ಆಹಾರ ತಯಾರಿಸಲೆಂದೇ ತಯಾರಾಗಿರುವ ಅತ್ಯಾಧುನಿಕ ಅಡುಗೆ ಕೋಣೆ ಇರುವ ಟ್ರಕ್ ಆಗಿದೆ. ಮೂಲಗಳ ಪ್ರಕಾರ ಇಂತಹ ಹಲವು ಟ್ರಕ್‍ಗಳು ಆಹಾರ ತಯಾರಿಕೆಗಾಗಿ ಇದ್ದು, ಇದೀಗ ಉಕ್ರೇನ್ ವಶಪಡಿಸಿಕೊಂಡಿರುವ ಟ್ರಕ್‍ನಲ್ಲಿ ಕೇವಲ ಈರುಳ್ಳಿ, ಆಲೂಗಡ್ಡೆ ಮಾತ್ರ ಸಿಕ್ಕಿದೆ. ಇತರ ಟ್ರಕ್‍ನಲ್ಲಿ ಇನ್ನುಳಿದ ಆಹಾರ ಪದಾರ್ಥಗಳಿರುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಆಹಾರ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ವರದಿಯಾಗಿದೆ.

  • ಅಗ್ಗದ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಮುಂದಾದ ಭಾರತ- ಅಮೆರಿಕ ಹೇಳಿದ್ದೇನು?

    ಅಗ್ಗದ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಮುಂದಾದ ಭಾರತ- ಅಮೆರಿಕ ಹೇಳಿದ್ದೇನು?

    ವಾಷಿಂಗ್ಟನ್‌: ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದಂತೆ ರಷ್ಯಾದ ಪ್ರಸ್ತಾಪವನ್ನು ಭಾರತ ಒಪ್ಪಿಕೊಳ್ಳುವುದು, ರಷ್ಯಾ ಮೇಲಿನ ಅಮೆರಿಕ ನಿರ್ಬಂಧಗಳ ಉಲ್ಲಂಘನೆಯಾಗುವುದಿಲ್ಲ ಎಂದು ಶ್ವೇತ ಭವನ ತಿಳಿಸಿದೆ.

    ನಾವು ಜಾರಿಗೆ ತಂದಿರುವ ಮತ್ತು ಶಿಫಾರಸು ಮಾಡಿದ ನಿರ್ಬಂಧಗಳಿಗೆ ಬದ್ಧವಾಗಿರುವಂತೆ ಇತರೆ ದೇಶಗಳಿಗೆ ಅಮೆರಿಕ ಸಂದೇಶ ರವಾನಿಸುತ್ತದೆ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

    ರಿಯಾಯಿತಿ ದರದ ಕಚ್ಚಾ ತೈಲದ ರಷ್ಯಾದ ಪ್ರಸ್ತಾಪವನ್ನು ಭಾರತ ಕೈಗೆತ್ತಿಕೊಳ್ಳುವ ಸಾಧ್ಯತೆಯ ಕುರಿತು ಪ್ರಶ್ನಿಸಿದಾಗ, ಇದು ಅಮೆರಿಕ ನಿರ್ಬಂಧಗಳ ಉಲ್ಲಂಘಿಸುತ್ತದೆ ಎಂದು ನಾನು ನಂಬುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಆದರೆ, ಇತಿಹಾಸದ ಪುಟಗಳನ್ನು ಬರೆಯುವ ಈ ಸಂದರ್ಭದಲ್ಲಿ ನೀವು ಎಲ್ಲಿ ನಿಲ್ಲಬೇಕೆಂದು ಯೋಚಿಸಿ. ರಷ್ಯಾದ ನಾಯಕತ್ವಕ್ಕೆ ಬೆಂಬಲ ನೀಡುವುದು, ಆಕ್ರಮಣನ್ನು ಬೆಂಬಲಿಸಿದಂತೆ. ಅದು ನಿಸ್ಸಂಶಯವಾಗಿ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಬೆಂಬಲಿಸಲಿಲ್ಲ. ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ನವದೆಹಲಿಯು ಎಲ್ಲಾ ಮಧ್ಯಸ್ಥಗಾರರನ್ನು ಕೇಳಿಕೊಂಡಿದೆ. ಆದಾಗ್ಯೂ ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಎಲ್ಲಾ ನಿರ್ಣಯಗಳಿಂದ ಭಾರತ ದೂರವಿತ್ತು.

    ರಷ್ಯಾದ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಭಾರತ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ಬಗ್ಗೆ ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯ ಡಾ. ಅಮಿ ಬೆರಾ ಬೇಸರ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮತ್ತು ಕ್ವಾಡ್‌ನ ನಾಯಕನಾಗಿ, ಪುಟಿನ್ ಮತ್ತು ಅವರ ಆಕ್ರಮಣವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಭಾರತದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  • ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

    ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ

    ಲಂಡನ್: ಕಚ್ಚಾ ತೈಲ, ಅನಿಲಕ್ಕಾಗಿ ರಷ್ಯಾದ ಅವಲಂಬನೆಯಿಂದ ಹೊರಬರುವಂತೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ವಿಶ್ವಕ್ಕೆ ಕರೆ ನೀಡಿದ್ದಾರೆ.

    ಬೋರಿಸ್ ಜಾನ್ಸನ್, ಗಲ್ಫ್ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಈ ವೇಳೆ ಮಾತನಾಡಿ, ಉಕ್ರೇನ್ ಮೇಲಿನ ರಷ್ಯಾದ ಅತಿಕ್ರಮಣ ವಿರುದ್ಧ ಪ್ರತಿಭಟಿಸಲು ಅಲ್ಲಿನ ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು. ರಷ್ಯಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿಹಾಕುವ ಪ್ರಯತ್ನಕ್ಕೆ ಸೌದಿ ಅರೇಬಿಯಾ, ಯುಎಇ ರಾಷ್ಟ್ರಗಳು ಪ್ರಮುಖ ಭಾಗಿದಾರರು. ಈ ರಾಷ್ಟ್ರಗಳೊಂದಿಗೆ ಪ್ರಾದೇಶಿಕ ಭದ್ರತೆ, ಮಾನವೀಯ ಪರಿಹಾರ, ಜಾಗತಿಕ ಇಂಧನ ಮಾರುಕಟ್ಟೆ ನಿಯಂತ್ರಣದ ವಿಚಾರವಾಗಿ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಜಾನ್ಸನ್ ಹೇಳಿದ್ದಾರೆ.  ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ

    ಅಬುಧಾಬಿ, ರಿಯಾದ್ ಮುಖಂಡರನ್ನು ಭೇಟಿ ಮಾಡಲಿರುವ ಜಾನ್ಸನ್ ಅವರು ಉಕ್ರೇನ್ ಸಂಘರ್ಷ ಸೇರಿದಂತೆ ಪ್ರಾದೇಶಿಕ ಭದ್ರತೆ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ರಷ್ಯಾ, ಉಕ್ರೇನ್ ಮೇಲೆ ನಡೆಸಿದ ದಾಳಿ ಪರಿಣಾಮ ಜಾಗತಿಕ ಇಂಧನ ಮತ್ತು ಆಹಾರ ಉತ್ಪನ್ನಗಳ ಬೆಲೆ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

  • ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಕೀವ್: ಉಕ್ರೇನ್‍ನಲ್ಲಿ ಯುದ್ಧ ನಿಲ್ಲದಿದ್ದರೇ ಎಲ್ಲವೂ ಯುರೋಪ್‍ನ ವಿರುದ್ಧ ಹೋಗುತ್ತದೆ. ಆದ್ದರಿಂದ ಉಕ್ರೇನ್‍ಗೆ ಸಹಾಯ ಮಾಡುವುದರ ಮೂಲಕ ನಿಮಗೆ ಸಹಾಯ ಮಾಡಿಕೊಳ್ಳಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದರು.

    ಯೂರೋಪ್ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಸ್ಕೋ ಪಡೆಗಳು ಬಾಂಬ್ ದಾಳಿಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ರಷ್ಯಾದ ಆಕ್ರಮಣಕಾರಿ ದಾಳಿಯನ್ನು ಎದುರಿಸಲು ಹೆಚ್ಚಿನ ಶಸ್ತ್ರಸ್ತ್ರಗಳ ಅಗತ್ಯವಿದೆ ಎಂದು ಮನವಿ ಮಾಡಿದರು.

    ಪಾಶ್ಚಿಮಾತ್ಯ ರಾಷ್ಟ್ರಗಳು ಒದಗಿಸಿದ ಶಸ್ತ್ರಾಸ್ತ್ರಗಳು ಮತ್ತು ಇತರೆ ಆಧುನಿಕ ತಂತ್ರಾಂಶಗಳನ್ನು ಉಕ್ರೇನ್‍ನ ಮಿಲಿಟರಿ ವೇಗವಾಗಿ ಬಳಸುತ್ತಿದೆ. ಇದರಿಂದಾಗಿ ಕೀವ್‍ನಲ್ಲಿ ರಷ್ಯಾ ಮತ್ತು ಉಕ್ರೇನ್‍ನ ಹೋರಾಟ ತೀವ್ರವಾಗಿದೆ ಎಂದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ

    ರಷ್ಯಾದ ಬಾಂಬ್ ದಾಳಿಯಿಂದಾಗಿ ಅಪಾರ್ಟ್‍ಮೆಂಟ್‍ಗಳು ಹೊತ್ತಿ ಉರಿಯುತ್ತಿದೆ. ನಾಗರಿಕರ ಮೇಲೂ ದಾಳಿನಡೆಯುತ್ತಿದೆ. ದಿನೇ ದಿನೇ ರಷ್ಯಾ ದಾಳಿಗೆ ನಾಗರಿಕರು ಸಾವನ್ನಪ್ಪಿರುವ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದಾಗಿ ಇಡೀ ನಗರವೇ ಯುದ್ಧದಿಂದ ಕೋಲಾಹಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ತಡರಾತ್ರಿ ಕಾರು ಅಪಘಾತ- ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

  • ಕೀವ್‍ನಲ್ಲಿ ಕರ್ಫ್ಯೂ ಜಾರಿ – ಖೇರ್ಸಾನ್ ಪ್ರಾಂತ್ಯವನ್ನು ನಿಯಂತ್ರಣಕ್ಕೆ ಪಡೆದ ರಷ್ಯಾ

    ಕೀವ್‍ನಲ್ಲಿ ಕರ್ಫ್ಯೂ ಜಾರಿ – ಖೇರ್ಸಾನ್ ಪ್ರಾಂತ್ಯವನ್ನು ನಿಯಂತ್ರಣಕ್ಕೆ ಪಡೆದ ರಷ್ಯಾ

    ಕೀವ್: ಉಕ್ರೇನ್ ವಿರುದ್ಧ ಸತತ 20ನೇ ದಿನವೂ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾ ದಾಳಿಯಿಂದ ತತ್ತರಿಸಿರುವ ಕೀವ್‍ನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಇಡೀ ಖೇರ್ಸಾನ್ ಪ್ರಾಂತ್ಯವನ್ನು ರಷ್ಯಾ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ.

    ಕೀವ್ ನಗರದ ಜನವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮುಂದುವರಿಸಿದೆ. ಕೀವ್ ಮೆಟ್ರೋ ಸ್ಟೇಷನ್ ಮೇಲೆಯೂ ದಾಳಿ ನಡೆಸಿದೆ. ಅಲ್ಲದೇ, ಉಕ್ರೇನ್‍ಗೆ ಶಸ್ತ್ರಾಸ್ತ್ರ ಪೂರೈಕೆ ಕಟ್ ಮಾಡುವ ಕಸರತ್ತನ್ನು ರಷ್ಯಾ ಆರಂಭಿಸಿದ್ದು, ಇದರ ಭಾಗವಾಗಿ ಡಿನಿಪ್ರೋ ಏರ್‌ಪೋರ್ಟ್‌ನ ರನ್‍ವೇಯನ್ನು ಹಾಳುಗೆಡವಿದೆ. ಕಳೆದ 24 ಗಂಟೆಯಲ್ಲಿ ಉಕ್ರೇನ್ ಸೇನೆ 13 ಡ್ರೋನ್, 16 ಸೈನಿಕ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸುವಂತೆ ಲೈವ್ ವೇಳೆ ಸೆಟ್‍ಗೆ ಓಡಿ ಬಂದ ಮಹಿಳೆ- ಉಕ್ರೇನ್ ಅಧ್ಯಕ್ಷ ಧನ್ಯವಾದ

    ಉಕ್ರೇನ್ ಸೇನೆ ಕೂಡ ಪ್ರತಿ ದಾಳಿ ಸಂಘಟಿಸಿದ್ದು, ರಷ್ಯಾದ ನಾಲ್ಕು ಹೆಲಿಕಾಪ್ಟರ್ ಪತನ ಗೊಳಿಸಿದೆ. ರಷ್ಯಾದ ವಿರುದ್ಧ ನಾವು ಎಲ್ಲಾ ಕಡೆ ಮೇಲುಗೈ ಸಾಧಿಸ್ತಿದ್ದೇವೆ. ಸ್ವಾತಂತ್ರ್ಯ ಬೇಕು ಎಂದರೇ, ಒಂದಿಷ್ಟನ್ನು ಕಳೆದುಕೊಳ್ಳಲೇಬೇಕು. ಅದಕ್ಕಾಗಿಯೇ ನಮ್ಮ ಹೋರಾಟ ಎಂದು ಉಕ್ರೇನ್ ಹೋರಾಟವನ್ನು ಬಲ ಪಡಿಸಿಕೊಂಡಿದೆ. ಇದನ್ನೂ ಓದಿ: ರಷ್ಯಾಗೆ ಸಹಾಯ ಮಾಡದಂತೆ ಚೀನಾಗೆ ಅಮೆರಿಕ ವಾರ್ನಿಂಗ್

    ಉಕ್ರೇನ್‍ಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಪೋಲೆಂಡ್, ಝೇಕ್ ರಿಪಬ್ಲಿಕ್, ಸ್ಲೋವೇನಿಯಾ ಪ್ರಧಾನಿಗಳು ಶೀಘ್ರವೇ ಉಕ್ರೇನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮಧ್ಯೆ, ಅಮೆರಿಕಾದ ವ್ಯೋಮಗಾಮಿ ಈ ಮಾಸಾಂತ್ಯದಲ್ಲಿ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಿಂದ ರಷ್ಯಾದ ಸೂಯೆಜ್ ನೌಕೆಯಲ್ಲಿ ಭೂಮಿಗೆ ವಾಪಸ್ ಆಗಬೇಕಿದೆ. ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ, ಅವರನ್ನು ಕರೆದುಕೊಂಡು ಬರುತ್ತೋ ಇಲ್ಲವೋ ಎಂಬ ಆತಂಕ ಆವರಿಸಿತ್ತು. ಆದರೆ ಹಾಗೇನು ಮಾಡಲ್ಲ. ಅವರನ್ನು ಅಲ್ಲಿಯೇ ಬಿಟ್ಟು ಬರಲ್ಲ. ನಾವು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬರುತ್ತೇವೆ ಎಂದು ರೋಸ್ ಕಾಸ್ಮೋಸ್ ಸ್ಪಷ್ಟಪಡಿಸಿದೆ. ಉಕ್ರೇನ್‍ನಲ್ಲಿ ಖಾಸಗಿ ಮಾಧ್ಯಮವೊಂದರ ವರದಿಗಾರ ಬಾಂಬ್ ಬ್ಲಾಸ್ಟ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಯುದ್ಧದಲ್ಲಿ ಇಬ್ಬರೂ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಉಕ್ರೇನ್‍ನಿಂದ  ಜನ ಮಹಾ ವಲಸೆ ಹೋಗುತ್ತಿದ್ದಾರೆ.

  • ಅತ್ಯಂತ ಸವಾಲಿನ ಕಾರ್ಯಾಚರಣೆಯಲ್ಲೂ 22,500 ಭಾರತೀಯರು ತಾಯ್ನಾಡಿಗೆ: ಜೈಶಂಕರ್

    ನವದೆಹಲಿ: ಉಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರುವ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿದ್ದರೂ 22,500 ಭಾರತೀಯರನ್ನು ಸ್ಥಳಾತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದರು.

    ಉಕ್ರೇನ್ ರಷ್ಯಾದ ಮೇಲೆ ದಾಳಿ ಮಾಡುವುದಕ್ಕೂ ಮೊದಲು ಅಲ್ಲಿದ್ದ ಭಾರತೀಯರನ್ನು ರಕ್ಷಿಸಲು ಭಾರತ ತೆಗೆದುಕೊಂಡ ಕ್ರಮಗಳನ್ನು ಜೈಶಂಕರ್ ಸಂಸತ್ತಿನಲ್ಲಿ ವಿವರಿಸಿದರು.

    ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುವ ಬಗ್ಗೆ ಸುಳಿವು ಸಿಗುತ್ತಿದ್ದಂತೆ ಜನವರಿ ತಿಂಗಳಿನಿಂದಲೇ ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿ ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗಾಗಿ ನೋಂದಣಿ ಕಾರ್ಯವನ್ನು ಪ್ರಾರಂಭಿಸಿತು. ಇದರ ಪರಿಣಾಮವಾಗಿ ಉಕ್ರೇನ್‌ನಲ್ಲಿದ್ದ 20 ಸಾವಿರ ಭಾರತೀಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು ಎಂಬ ಮಾಹಿತಿ ನೀಡಿದರು. ಇದನ್ನೂ ಓದಿ: ಮಲಯಾಳಂ ಸುದ್ದಿ ವಾಹಿನಿ ನಿಷೇಧಿಸಿ ಕೇಂದ್ರ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ತಡೆ

    ಸಲಹೆಯ ಹೊರತಾಗಿಯೂ ಸಾವಿರಾರು ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋದಾಯಿಸಿಕೊಳ್ಳಲು ಹಿಂದೇಟು ಹಾಕಿದರು. ಉಕ್ರೇನ್ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡಿರದ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಭೀಕರ ಯುದ್ಧದ ಸಂದರ್ಭದಲ್ಲಿ ಅಲ್ಲಿದ್ದ ಭಾರತೀಯರು ಉಕ್ರೇನ್‌ನಾದ್ಯಂತ ಚದುರಿ ಹೋಗಿದ್ದರು. ಅವರನ್ನು ಒಟ್ಟಾಗಿಸಿ, ಉಕ್ರೇನ್ ಗಡಿ ದಾಟಿಸಿ ದೇಶಕ್ಕೆ ಕರೆತರುವುದು ಅತ್ಯಂತ ಸವಾಲಿನ ಕೆಲಸವೇ ಆಗಿತ್ತು. ಈ ಕಾರ್ಯಕ್ಕಾಗಿ ಆಪರೇಷನ್ ಗಂಗಾ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲಾಯಿತು ಎಂದು ಜೈಶಂಕರ್ ತಿಳಿಸಿದರು. ಇದನ್ನೂ ಓದಿ: ಹಿಜಬ್‌- ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ

    ಶೆಲ್ ದಾಳಿಗೆ ಮೃತಪಟ್ಟ ಭಾರತೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಎಲ್ಲಾ ಪ್ರಯತ್ನಗಳೂ ನಡೆಯುತ್ತಿವೆ. ಯುದ್ಧದ ಸಂದರ್ಭದಲ್ಲಿ ಗುಂಡು ತಗುಲಿ ಗಾಯಗೊಂಡಿದ್ದ ವಿದ್ಯಾರ್ಥಿ ಹರ್ಜೋತ್ ಸಿಂಗ್‌ನ ಎಲ್ಲಾ ವೈದ್ಯಕೀಯ ಚಿಕಿತ್ಸೆಗೆ ಸರ್ಕಾರ ಖರ್ಚನ್ನು ಭರಿಸಿದೆ ಹಾಗೂ ಅವರನ್ನು ಕೀವ್‌ನಿಂದ ಪೋಲಿಷ್ ಗಡಿಗೆ ತೆರಳಲು ವ್ಯವಸ್ಥೆ ಮಾಡಿ, ವಿಮಾನದಲ್ಲಿ ಭಾರತಕ್ಕೆ ಕರೆ ತರಲಾಗಿದೆ ಎಂದರು.

  • ಯುದ್ಧ ನಿಲ್ಲಿಸುವಂತೆ ಲೈವ್ ವೇಳೆ ಸೆಟ್‍ಗೆ ಓಡಿ ಬಂದ ಮಹಿಳೆ- ಉಕ್ರೇನ್ ಅಧ್ಯಕ್ಷ ಧನ್ಯವಾದ

    ಯುದ್ಧ ನಿಲ್ಲಿಸುವಂತೆ ಲೈವ್ ವೇಳೆ ಸೆಟ್‍ಗೆ ಓಡಿ ಬಂದ ಮಹಿಳೆ- ಉಕ್ರೇನ್ ಅಧ್ಯಕ್ಷ ಧನ್ಯವಾದ

    ಕೀವ್: ಟಿವಿಯಲ್ಲಿ ಲೈವ್ ಹೋಗುತ್ತಿರುವಾಗಲೇ ಸೆಟ್‍ಗೆ ಓಡಿ ಬಂದು, ಯುದ್ಧವನ್ನು ನಿಲ್ಲಿಸಿ ಎನ್ನುವ ಚಿಹ್ನೆಯೊಂದಿಗೆ ಮಹಿಳೆಯೊಬ್ಬರು ನಿಂತಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ರಷ್ಯಾದ ಸರ್ಕಾರಿ ಸ್ವಾಮ್ಯದ ಚಾನೆಲ್‍ವೊಂದರಲ್ಲಿ ಬುಲೆಟಿನ್ ಸಮಯದಲ್ಲಿ, ಯುದ್ಧ-ವಿರೋಧಿ ಚಿಹ್ನೆಯನ್ನು ಹಿಡಿದ ಮಹಿಳೆಯೊಬ್ಬರು ಸೆಟ್‍ಗೆ ಓಡಿ ಬಂದು ನಿರೂಪಕರ ಹಿಂದೆ ನಿಂತರು. ಯುದ್ಧ ಬೇಡ, ಯುದ್ಧವನ್ನು ನಿಲ್ಲಿಸಿ, ಪ್ರಚಾರವನ್ನು ನಂಬಬೇಡಿ, ಅವರು ಇಲ್ಲಿ ನಿಮಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಫಲಕವನ್ನು ಬರೆಯಲಾಗಿತ್ತು. ಇದನ್ನೂ ಓದಿ: ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂತಿರುಗಿ: ಮಾಳವಿಕಾ ಅವಿನಾಶ್

    ಮಹಿಳೆಯನ್ನು ಮರೀನಾ ಒವ್ಸ್ಯಾನಿಕೋವಾ ಎಂದು ಗುರುತಿಸಲಾಗಿದ್ದು, ಬುಲೆಟಿನ್ ವೇಳೆ ಮಹಿಳೆ ಬಂದಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ. ಮತ್ತು ವರದಿಗಳ ಪ್ರಕಾರ ಪ್ರಸ್ತುತ ಆಕೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ಈ ಹಿಂದೆ ಅವಳು ತನ್ನ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಳು. ಅದರಲ್ಲಿ ಅವಳು ರಷ್ಯಾದ ಆಕ್ರಮಣ ಅಪರಾಧವಾಗಿದೆ. ಪ್ರಚಾರಕ್ಕಾಗಿ ಕೆಲಸ ಮಾಡಿದ್ದಕ್ಕಾಗಿ ನಾಚಿಕೆಪಡುತ್ತೇನೆ. ಟೆಲಿವಿಷನ್ ಪರದೆ ಮೂಲಕವಾಗಿ ಸುಳ್ಳು ಹೇಳಲು ನನಗೆ ನಾಚಿಕೆಯಾಗುತ್ತಿದೆ. ರಷ್ಯನ್ನರನ್ನು ಸೋಮಾರಿಗಳಾಗಿ ಪರಿವರ್ತಿಸಲು ನಾನು ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ನಾಚಿಕೆಪಡುತ್ತೇನೆ ಎಂದು ಅವರು ಹೇಳಿದರು.

    ಈ ಘಟನೆ ನಂತರ ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಕೂಡ ವೀಡಿಯೋ ಸಂದೇಶದಲ್ಲಿ ಧನ್ಯವಾದ ತಿಳಿಸಿದ್ದಾರೆ. ಸತ್ಯವನ್ನು ತಿಳಿಸಲು ಪ್ರಯತ್ನಿಸುವುದನ್ನು ನಿಲ್ಲಿಸದ ರಷ್ಯನ್ನರಿಗೆ ಕೃತಜ್ಞನಾಗಿದ್ದೇನೆ. ಯುದ್ಧದ ವಿರುದ್ಧ  ಪೋಸ್ಟ್‌ನೊಂದಿಗೆ ಬುಲೆಟಿನ್ ನಡೆಯುವಾಗ ಸ್ಟುಡಿಯೋಗೆ ಪ್ರವೇಶಿಸಿದ ಮಹಿಳೆಗೆ ವೈಯಕ್ತಿಕವಾಗಿ ಧನ್ಯವಾದ ಎಂದು ಹೇಳಿದ್ದಾರೆ.

  • ರಷ್ಯಾಗೆ ಸಹಾಯ ಮಾಡದಂತೆ ಚೀನಾಗೆ ಅಮೆರಿಕ ವಾರ್ನಿಂಗ್

    ರಷ್ಯಾಗೆ ಸಹಾಯ ಮಾಡದಂತೆ ಚೀನಾಗೆ ಅಮೆರಿಕ ವಾರ್ನಿಂಗ್

    ವಾಷಿಂಗ್ಟನ್: ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾಗೆ ಚೀನಾ ಯಾವುದೇ ಸಹಾಯವನ್ನು ಮಾಡದಂತೆ ಅಮೆರಿಕ ಚೀನಾಗೆ ಎಚ್ಚರಿಕೆ ನೀಡಿದೆ.

    ಉಕ್ರೇನ್ ವಿರುದ್ಧ ದಾಳಿ ತನ್ನ ಯುದ್ಧವನ್ನು ಮುಂದುವರಿಸಲು ರಷ್ಯಾ ಡ್ರೋನ್‍ಗಳು ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ಚೀನಾವನ್ನು ಕೇಳಿತ್ತು. ಈ ಸುದ್ದಿ ಎಲ್ಲೆಡೆ ವರದಿಯಾಗುತ್ತಿದ್ದಂತೆ ಅಮೆರಿಕ ರಷ್ಯಾಗೆ ಯಾವುದೇ ರೀತಿಯ ಸಹಾಯವನ್ನು ಚೀನಾ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ದ – ಚೀನಾದ ಮಿಲಿಟರಿ ನೆರವು ಕೇಳಿದ ರಷ್ಯಾ

    ರಷ್ಯಾದ ಆರ್ಥಿಕತೆಯನ್ನು ಕುಗ್ಗಿಸುವ ಜಾಗತಿಕ ನಿರ್ಬಂಧಗಳಿಂದ ರಷ್ಯಾ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಮತ್ತು ಉಕ್ರೇನ್ ವಿರುದ್ಧ ಯುದ್ಧ ನಡೆಸಲು ಮಾಸ್ಕೋಗೆ ಮಿಲಿಟರಿ ನೆರವು ನೀಡುವಂತೆ ಚೀನಾಗೆ ಕೋರಿದೆ. ಹಾಗಾಗಿ ರಷ್ಯಾಗೆ ಚೀನಾ ಯಾವುದೇ ರೀತಿಯ ಸಹಾಯ ಮಾಡಬಾರದು ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.

    ಮತ್ತೊಂದೆಡೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅಮೆರಿಕವು ಚೀನಾದ ವಿರುದ್ಧ ತಪ್ಪು ಮಾಹಿತಿಗಳನ್ನು ಕೆಟ್ಟ ಉದ್ದೇಶದಿಂದ ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಕುಟುಂಬಕ್ಕೆ ಉಚಿತ ಸೈಟ್: ಎಸ್.ಆರ್ ವಿಶ್ವನಾಥ್

    ಉಕ್ರೇನ್ ವಿಷಯದಲ್ಲಿ ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ. ನಾವು ಯಾವಾಗಲೂ ಶಾಂತಿಯನ್ನು ಮನವೊಲಿಸುವಲ್ಲಿ ಮತ್ತು ಮಾತುಕತೆಗಳನ್ನು ಉತ್ತೇಜಿಸುವಲ್ಲಿ ಹೆಚ್ಚಾಗಿ ಪಾತ್ರವನ್ನು ವಹಿಸಿದ್ದೇವೆ ಎಂದು ಹೇಳಿದ್ದಾರೆ.

  • ಉಕ್ರೇನ್‍ಗೆ ಆಹಾರ, ಹಣ, ಆಯುಧಗಳ ನೆರವು: ಜೋ ಬೈಡನ್

    ಉಕ್ರೇನ್‍ಗೆ ಆಹಾರ, ಹಣ, ಆಯುಧಗಳ ನೆರವು: ಜೋ ಬೈಡನ್

    ವಾಷಿಂಗ್ಟನ್: 20ನೇ ದಿನಕ್ಕೆ ಕಾಲಿಟ್ಟಿರುವ ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‍ಗೆ ಆಯುಧಗಳು, ಆಹಾರ ಮತ್ತು ಹಣದ ರೂಪದಲ್ಲಿ ಬೆಂಬಲ ನೀಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

    ಉಕ್ರೇನ್‍ನ ಮೇಲೆ ರಷ್ಯಾ ದಾಳಿ ತಾರಕಕ್ಕೆ ಏರುತ್ತಿದ್ದು, ಈ ಬಗ್ಗೆ ಅನೇಕ ರಾಷ್ಟ್ರಗಳು ವಿರೋಧವನ್ನು ವ್ಯಕ್ತಪಡಿಸಿದೆ. ಅದರಲ್ಲೂ ಪ್ರಮುಖವಾಗಿ ಅಮೆರಿಕ ಮೊದಲನಿಂದಲೂ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಟ್ವೀಟ್ ಮಾಡಿ, ಉಕ್ರೇನಿನ ಜನರು ಯುದ್ಧದಿಂದ ಹಾನಿಯಾದ ಪ್ರದೇಶಗಳನ್ನು ತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಾಶ್ರಿತರನ್ನು ನಾವು ಸ್ವಾಗತಿಸಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.

    ಟ್ವೀಟ್‍ನಲ್ಲಿ ಏನಿದೆ?:
    ರಷ್ಯಾವನ್ನು ಎದುರಿಸಲು ಉಕ್ರೇನ್‍ನ ಬಳಿ ಸಾಕಷ್ಟು ಶಸ್ತ್ರಗಳಿವೆಯೇ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳುತ್ತಿದ್ದೇವೆ. ಜೊತೆಗೆ ಅಲ್ಲಿನ ನಾಗರಿಕರ ಜೀವವನ್ನು ಉಳಿಸಲು ಹಣ ಮತ್ತು ಆಹಾರವನ್ನು ಕಳಿಸುತ್ತೇವೆ. ಅಲ್ಲದೆ ಉಕ್ರೇನ್‍ನ ನಿರಾಶ್ರಿತರನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ತೀರ್ಪು ಏನೇ ಬಂದ್ರೂ ಗೌರವಿಸಿ, ಶಾಂತಿ ಕಾಪಾಡಿ: ಗೃಹ ಸಚಿವರ ಮನವಿ

    ನಿನ್ನೆ ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾ ತನ್ನ ಯುದ್ಧವನ್ನು ಮುಂದುವರಿಸಲು ಡ್ರೋನ್‍ಗಳು ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ರಷ್ಯಾ ಚೀನಾವನ್ನು ಕೇಳಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದರು. ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಗಾಂಧಿ ಕುಟುಂಬವೇ ಹೊಣೆ: ಅಮರೀಂದರ್ ಸಿಂಗ್

    ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದರಿಂದ ಅಮೆರಿಕ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ರಷ್ಯಾದ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ರಷ್ಯಾದ ಹಲವಾರು ಪ್ರಮುಖ ಬ್ಯಾಂಕ್‍ಗಳ ಮೇಲೆ ನಿಬರ್ಂಧ ಹೇರಿದೆ. ಜೊತೆಗೆ ರಷ್ಯಾವನ್ನು SWIFTಹಣಕಾಸು ವ್ಯವಸ್ಥೆಯಿಂದ ಹೊರಹಾಕಿದೆ.