Tag: Ukraine

  • ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ

    ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ

    ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ತನ್ನ ಸೇನಾ ಬಲದಲ್ಲಿ ಸಾಕಷ್ಟು ನಷ್ಟ ಅನುಭವಿಸಿರುವ ಕುರಿತು ವರದಿಯೊಂದು ಹೊರಬಿದ್ದಿದೆ.

    ರಷ್ಯಾ, ಉಕ್ರೇನ್ ಯುದ್ಧ ಆರಂಭವಾಗಿ ಇಂದಿಗೆ 23 ದಿನಗಳಾಗಿದೆ. ಕೀವ್ ವಶಪಡಿಸಿಕೊಳ್ಳಲು ರಷ್ಯಾ ಹಪಹಪಿಸುತ್ತಿದೆ. ಇತ್ತ ರಷ್ಯಾದ ದಾಳಿಗೆ ತಡೆ ಒಡ್ಡುತ್ತಿರುವ ಉಕ್ರೇನ್ ಕೂಡ ಹೋರಾಡುತ್ತಿದೆ. ಈ ನಡುವೆ ರಷ್ಯಾ ಸೇನೆಯ ಹಲವು ಯುದ್ಧೋಪಕರಣಗಳನ್ನು ಹೊಡೆದುರುಳಿಸಿರುವ ಬಗ್ಗೆ ಉಕ್ರೇನ್ ಸೇನೆ ಮಾಹಿತಿ ನೀಡಿರುವುದು ವರದಿಯಾಗಿದೆ. ಇದನ್ನೂ ಓದಿ: ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

    ಉಕ್ರೇನ್ ಸೇನೆ ನೀಡಿರುವ ಮಾಹಿತಿ ಪ್ರಕಾರ ಈವರೆಗೆ ರಷ್ಯಾದ 14,200 ಸೈನಿಕರು, 93 ಯುದ್ಧ ವಿಮಾನ, 112 ಹೆಲಿಕಾಪ್ಟರ್, 450 ಟ್ಯಾಂಕ್, 205 ಮಿಲಿಟರಿ ಶಸ್ತ್ರಸಜ್ಜಿತ ವಾಹನ, 1,448 ಯುದ್ದೋಪಕರಣ ಸಾಗಾಟ ವಾಹನ, 72 ಎಮ್‍ಎಲ್‍ಆರ್‌ಎಸ್, 3 ಬೋಟ್, 879 ವಾಹನ, 60 ಇಂಧನ ಟ್ಯಾಂಕರ್, 12 ಡ್ರೋನ್‍ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ತಿಳಿಸಿರುವ ಮಾಹಿತಿಯೊಂದನ್ನು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಸೂಟ್‍ಕೇಸ್‍ನಲ್ಲಿ 40 ಕೆಜಿ ಹಸಿರು ಬಟಾಣಿ ತುಂಬಿ ಸಾಗಿಸಿದ ಐಪಿಎಸ್ ಅಧಿಕಾರಿ

    ಉಕ್ರೇನ್, ರಷ್ಯಾದ ಸೇನಾಪಡೆಗಳಿಗೆ ಆದ ನಷ್ಟವನ್ನು ತಿಳಿಸಿದೆ. ಆದರೆ ಉಕ್ರೇನ್‍ಗೆ ಆದ ನಷ್ಟದ ಬಗ್ಗೆ ತಿಳಿಸಿಲ್ಲ. ಈವರೆಗೆ ರಷ್ಯಾದಿಂದ ಹೆಚ್ಚು ನಷ್ಟವನ್ನು ಉಕ್ರೇನ್ ಸೇನಾ ಪಡೆ ಅನುಭವಿಸಿದೆ ಎಂದು ವರದಿಯೊಂದು ತಿಳಿಸಿದ್ದು, ಆದರೆ ಈ ಬಗ್ಗೆ ಉಕ್ರೇನ್ ಸೇನಾ ಪಡೆ ಸ್ಪಷ್ಟಪಡಿಸಿಲ್ಲ. ರಷ್ಯಾ ಇದೀಗ ಶಾಲೆ, ಆಸ್ಪತ್ರೆ ಸೇರಿದಂತೆ ಜನವಸತಿ ಪ್ರದೇಶಗಳ ಮೇಲೆ ದಾಳಿ ಆರಂಭಿಸಿದೆ. ಇನ್ನೊಂದೆಡೆ ಸಂಧಾನ ಮಾತುಕತೆ ಕೂಡ ಪ್ರಗತಿಯಲ್ಲಿದೆ.

  • ರಷ್ಯಾ ರಾಕೆಟ್ ದಾಳಿಗೆ ಉಕ್ರೇನಿಯನ್ ಜನಪ್ರಿಯ ನಟಿ ದುರ್ಮರಣ

    ರಷ್ಯಾ ರಾಕೆಟ್ ದಾಳಿಗೆ ಉಕ್ರೇನಿಯನ್ ಜನಪ್ರಿಯ ನಟಿ ದುರ್ಮರಣ

    ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ ಮುಂದುವರಿದಿದ್ದು, 23ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ರಷ್ಯಾದ ರಾಕೆಟ್ ದಾಳಿಗೆ ಉಕ್ರೇನಿನ ಜನಪ್ರಿಯ ನಟಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.

    ನಟಿಯನ್ನು ಒಕ್ಸಾನಾ ಶ್ವೇಟ್ಸ್‍ನ್ನು(67) ಎಂದು ಗುರುತಿಸಲಾಗಿದೆ. ಕೀವ್‍ನ ರೆಸಿಡೆನ್ಶಿಯಲ್ ಕಟ್ಟಡದ ಮೇಲಾದ ರಾಕೆಟ್ ದಾಳಿಯಲ್ಲಿ ಇವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಒಕ್ಸಾನಾಗೆ ಸ್ಥಳೀಯ ಸರ್ಕಾರ ಉಕ್ರೇನ್‍ನ ಅತ್ಯುನ್ನತ ಕಲಾತ್ಮಕ ಗೌರವಗಳಲ್ಲಿ ಒಂದಾದ ‘ಉಕ್ರೇನ್‍ನ ಗೌರವಾನ್ವಿತ ಕಲಾವಿದೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದನ್ನೂ ಓದಿ: ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

    ಫೆಬ್ರವರಿ 24 ರಂದು ಉಕ್ರೇನ್‍ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಷ್ಯಾಗೆ ಈವರೆಗೂ ಮೇಲುಗೈ ಸಾಧಿಸಲು ಆಗ್ತಿಲ್ಲ. ಉಕ್ರೇನ್ ಸೈನಿಕರ ಸಮರ್ಥ ದಾಳಿಗಳಿಂದ ಕಂಗಟ್ಟಿರುವ ರಷ್ಯಾ ಪಡೆಗಳು ಹೆಚ್ಚುಕಡಿಮೆ ಮುಂದಕ್ಕೆ ಚಲಿಸಲಾಗದ ಚಕ್ರವ್ಯೂಹದಲ್ಲಿ ಸಿಲುಕಿವೆ. ಭೂಮಿ, ಸಮುದ್ರ, ಆಕಾಶ ಮಾರ್ಗವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆಗೆ ಆಗ್ತಿಲ್ಲ. ಬದಲಾಗಿ ಭಾರಿ ನಷ್ಟ ವಾಗುತ್ತಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ನಡುವೆ ಚೆರ್ನಿಹೀವ್‍ನಲ್ಲಿ ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ ನಡೆಸಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ಒಂದು ಹಂತದಲ್ಲಿ ತೀವ್ರ ಒತ್ತಡದಲ್ಲಿರುವ ರಷ್ಯಾ ಪಡೆಗಳು, ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡ್ತಿವೆ ಎಂದು ಉಕ್ರೇನ್ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಇಂದು ಮರಿಯುಪೋಲ್‍ನ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ಹಾಕಿದ್ದು, ರಕ್ತದೋಕುಳಿಯೇ ಹರಿದಿದೆ. ಇಲ್ಲಿ ಮಕ್ಕಳು ಸೇರಿ, 1,200ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದರು. ಇವರೆಲ್ಲಾ ಸತ್ತು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಿಡ್ನಾಪ್ ಆಗಿದ್ದ ಮೆಲಿಟಪೋಲ್ ಮೇಯರ್ರನ್ನು ರಷ್ಯಾ ರಿಲೀಸ್ ಮಾಡಿದೆ. ಇದಕ್ಕೆ ಪ್ರತಿಯಾಗಿ ರಷ್ಯಾದ 9 ಸೈನಿಕರನ್ನು ಉಕ್ರೇನ್ ಬಿಡುಗಡೆ ಮಾಡಿದೆ.

  • ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ಒಟ್ಟಾವಾ: ರಷ್ಯಾ ಮತ್ತು ಉಕ್ರೇನ್ ನಡುವೆ ಭಾರೀ ಯುದ್ಧ ನಡೆಯುತ್ತಿದ್ದು, ಅಲ್ಲಿನ ಜನರು ಪ್ರಾಣ ಉಳಿಸಿಕೊಳ್ಳಲು ದೇಶವನ್ನು ಬಿಟ್ಟು ಹೋಗುತ್ತಿದ್ದಾರೆ. ಈ ಹಿನ್ನೆಲೆ ಉಕ್ರೇನ್ ನಿಂದ ಪಲಾಯನ ಮಾಡುವವರು ಕೆನಡಾದಲ್ಲಿ ಉಳಿದುಕೊಳ್ಳಬಹುದು ಎಂದು ಕೆನಡಾ ರಾಜಧಾನಿ ಒಟ್ಟಾವಾ ಗುರುವಾರ ತಿಳಿಸಿದೆ.

    ರಷ್ಯಾದ ಆಕ್ರಮಣಕಾರಿ ದಾಳಿಯಿಂದ ಪಲಾಯನ ಮಾಡುವ ಉಕ್ರೇನಿಯನ್ನರಿಗೆ ಮೂರು ವರ್ಷಗಳವರೆಗೆ ತಾತ್ಕಾಲಿಕ ಕೆನಡಾದ ನಿವಾಸ ಪರವಾನಗಿಯನ್ನು ನೀಡುವ ಹೊಸ ವಲಸೆ ಕಾರ್ಯಕ್ರಮವನ್ನು ಸ್ಥಾಪಿಸುವುದಾಗಿ ಒಟ್ಟಾವಾ ಘೋಷಿಸಿತು. ಇದರ ಜೊತೆಗೆ ಉಕ್ರೇನಿಯನ್ನರು ತಮ್ಮ ಕೆಲಸ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಈ ವೇಳೆ ತಿಳಿಸಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಆದೇಶ – ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ

    ಹೆಚ್ಚು ಉಕ್ರೇನಿಯನ್ ವಲಸೆಗಾರರನ್ನು ಕೆನಡಾ ಹೊಂದಿದೆ. ಅದರಲ್ಲಿಯೂ ವಿಶೇಷವಾಗಿ ಕೆನಡಾದ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಉಕ್ರೇನ್ ಪ್ರಜೆಗಳು ಉಳಿದುಕೊಂಡಿದ್ದಾರೆ. ಈ ಹಿನ್ನೆಲೆ ಕೆನಡಾ ಸರ್ಕಾರ ಉಕ್ರೇನಿಯನ್ನರು ಮೂರು ವರ್ಷಗಳವರೆಗೆ ತಾತ್ಕಾಲಿಕ ನಿವಾಸಿಗಳಾಗಿ ಕೆನಡಾದಲ್ಲಿ ಉಳಿಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

    ಅರ್ಜಿದಾರರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಫಿಂಗರ್‌ಪ್ರಿಂಟ್‌ಗಳು ಮತ್ತು ಫೋಟೋ ರೂಪದಲ್ಲಿ ಒದಗಿಸಬೇಕಾಗುತ್ತದೆ. ಉಕ್ರೇನಿಯನ್ ನಿರಾಶ್ರಿತರು ಏಕಕಾಲದಲ್ಲಿ ಕೆಲಸ ಮತ್ತು ಅಧ್ಯಯನ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಘೋಷಣೆಯಲ್ಲಿ ವಿವರಿಸಲಾಗಿದೆ.

    ಕೆನಡಾದ ಈಗಾಗಲೇ ನೆಲೆಸಿರುವ ಉಕ್ರೇನಿಯನ್ನರು ಮತ್ತು ಅವರ ಕುಟುಂಬಗಳು ಈ ಹೊಸ ಕ್ರಮಗಳಿಂದ ಪ್ರಯೋಜನ ಪಡೆಯುತ್ತವೆ ಎಂದು ಹೇಳಿದೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ಗುರುವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಎಣಿಕೆಯ ಪ್ರಕಾರ, ಫೆಬ್ರವರಿ 24 ರಂದು ರಷ್ಯಾ, ಉಕ್ರೇನ್ ಮೇಲೆ ನಡೆಸುತ್ತಿರುವ ಮಾರಣಾಂತಿಕ ಆಕ್ರಮಣದಿಂದ ಇಲ್ಲಿವರೆಗೂ ಮೂರು ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‍ನಿಂದ ಪಲಾಯನ ಮಾಡಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪೋಲೆಂಡ್‍ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದೆ.

  • ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಆದೇಶ – ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ

    ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಆದೇಶ – ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ

    ಕೀವ್: ಉಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತ ವಾಡ್ಲಿಮಿರ್ ಪುಟಿನ್ ನಾಯಕತ್ವದ ಪರ ಇದೆ ಎಂದು ನಿನ್ನೆಯಷ್ಟೇ ಅಮೆರಿಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿತ್ತು. ಈ ಬೆಳವಣಿಗೆ ನಡುವೆ ರಷ್ಯಾ ಈ ಕೂಡ್ಲೇ ಯುದ್ಧ ನಿಲ್ಲಿಸಬೇಕು ಎಂದು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಆದೇಶ ನೀಡಿದೆ.

    15 ನ್ಯಾಯಮೂರ್ತಿಗಳ ಪೀಠ 13-2ರ ಅಂತರದಿಂದ ಈ ಆದೇಶ ನೀಡಿದೆ. ಈ ಆದೇಶವನ್ನು ಸಮರ್ಥಿಸಿ ರಷ್ಯಾ ವಿರುದ್ಧ ಭಾರತದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮತ ಹಾಕಿರುವುದು ವಿಶೇಷ. ಇದು ಚರ್ಚೆಗೆ ಗ್ರಾಸವಾಗಿದೆ. ಆದರೆ ಚೀನಾ ಮಾತ್ರ ಐಸಿಜೆಯಲ್ಲೂ ರಷ್ಯಾ ಪರವಾಗಿ ನಿಂತಿದೆ.  ಇದನ್ನೂ ಓದಿ: ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

    ರಷ್ಯಾ-ಉಕ್ರೇನ್ ಯುದ್ಧ ಶುರುವಾಗಿ ಇಂದಿಗೆ 22ನೇ ದಿನ. ಆದರೂ ರಷ್ಯಾಗೆ ಈವರೆಗೂ ಮೇಲುಗೈ ಸಾಧಿಸಲು ಆಗ್ತಿಲ್ಲ. ಉಕ್ರೇನ್ ಸೈನಿಕರ ಸಮರ್ಥ ದಾಳಿಗಳಿಂದ ಕಂಗಟ್ಟಿರುವ ರಷ್ಯಾ ಪಡೆಗಳು ಹೆಚ್ಚುಕಡಿಮೆ ಮುಂದಕ್ಕೆ ಚಲಿಸಲಾಗದ ಚಕ್ರವ್ಯೂಹದಲ್ಲಿ ಸಿಲುಕಿವೆ. ಭೂಮಿ, ಸಮುದ್ರ, ಆಕಾಶ ಮಾರ್ಗವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆಗೆ ಆಗ್ತಿಲ್ಲ. ಬದಲಾಗಿ ಭಾರಿ ನಷ್ಟ ವಾಗುತ್ತಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ನಡುವೆ ಚೆರ್ನಿಹೀವ್‍ನಲ್ಲಿ ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ ನಡೆಸಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ಒಂದು ಹಂತದಲ್ಲಿ ತೀವ್ರ ಒತ್ತಡದಲ್ಲಿರುವ ರಷ್ಯಾ ಪಡೆಗಳು, ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡ್ತಿವೆ ಎಂದು ಉಕ್ರೇನ್ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಇಂದು ಮರಿಯುಪೋಲ್‍ನ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ಹಾಕಿದ್ದು, ರಕ್ತದೋಕುಳಿಯೇ ಹರಿದಿದೆ. ಇಲ್ಲಿ ಮಕ್ಕಳು ಸೇರಿ, 1,200ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದರು. ಇವರೆಲ್ಲಾ ಸತ್ತು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಿಡ್ನಾಪ್ ಆಗಿದ್ದ ಮೆಲಿಟಪೋಲ್ ಮೇಯರ್‍ರನ್ನು ರಷ್ಯಾ ರಿಲೀಸ್ ಮಾಡಿದೆ. ಇದಕ್ಕೆ ಪ್ರತಿಯಾಗಿ ರಷ್ಯಾದ 9 ಸೈನಿಕರನ್ನು ಉಕ್ರೇನ್ ಬಿಡುಗಡೆ ಮಾಡಿದೆ. ಈ ಮಧ್ಯೆ, ಪುಟಿನ್‍ರನ್ನು ಯುದ್ಧಾಪರಾಧಿ ಎಂದು ಬೈಡನ್ ಕರೆದಿರುವುದು ಕ್ರೆಮ್ಲಿನ್ ಸಿಟ್ಟಿಗೆ ಕಾರಣವಾಗಿದೆ.

  • ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ- ಭಾರತದ ನಿಲುವಿನಿಂದ ಬೇಸರವಾಗಿದೆ: ಯುಕೆ ಸಚಿವೆ

    ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ- ಭಾರತದ ನಿಲುವಿನಿಂದ ಬೇಸರವಾಗಿದೆ: ಯುಕೆ ಸಚಿವೆ

    ಲಂಡನ್: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ವಿಚಾರವಾಗಿ ಭಾರತ ತಳೆದಿರುವ ನಿಲುವಿನಿಂದ ತುಂಬಾ ನಿರಾಶೆಯಾಗಿದೆ ಎಂದು ಯುಕೆ ಸಚಿವೆ ಅನ್ನಿ-ಮೇರಿ ಟ್ರೆವೆಲಿಯನ್‌ ಹೇಳಿದ್ದಾರೆ.

    ಈ ನಿಲುವಿನಿಂದಾಗಿ ಭಾರತ ಮತ್ತು ಯುಕೆ ನಡುವಿನ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ನಿಲುವಿನಿಂದ ನಾವು ತುಂಬಾ ನಿರಾಶೆಗೊಂಡಿದ್ದೇವೆ. ಆದರೆ ನಾವು ಭಾರತೀಯ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೀವ್ ರಕ್ಷಣೆಗಾಗಿ ರಾಕೆಟ್ ಬಿಟ್ಟು ಗನ್ ಹಿಡಿದು ಹೋರಾಟಕ್ಕೆ ಮುಂದಾದ ಟೆನ್ನಿಸ್ ಆಟಗಾರ

    ಭಾರತವು ಯುಕೆಗೆ ಪ್ರಮುಖ ವ್ಯಾಪಾರ ಪಾಲುದಾರ. ಭವಿಷ್ಯದಲ್ಲಿ ಪುಟಿನ್ ಈ ಯುದ್ಧಕ್ಕೆ ಧನಸಹಾಯ ನೀಡಲು ಸಾಧ್ಯವಿಲ್ಲ. ಹೀಗಾಗಿ ನಾವು ಪ್ರಪಂಚದಾದ್ಯಂತದ ದೇಶಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

    ಚೀನಾ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಾಗಿದೆ. ಇದು ಯುಎನ್‌ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರ. ಭಾರತ ಖಾಯಂ ರಹಿತ ಸದಸ್ಯ ರಾಷ್ಟ್ರ. ರಷ್ಯಾ ವಿಚಾರವಾಗಿ ನಾವು ರಾಜತಾಂತ್ರಿಕ ಒತ್ತಡವನ್ನು ವಿಸ್ತರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

    ಭಾರತ ಮತ್ತು ಚೀನಾ ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ವಿರುದ್ಧ ಅಂಗೀಕರಿಸಿದ ಯಾವುದೇ ನಿರ್ಣಯದಿಂದ ಉಭಯ ದೇಶಗಳು ದೂರ ಉಳಿದಿವೆ.

  • ಉಕ್ರೇನ್ ಯುದ್ಧ – ಭಾರತದ ಗೋಧಿಗೆ ಬೇಡಿಕೆ

    ಉಕ್ರೇನ್ ಯುದ್ಧ – ಭಾರತದ ಗೋಧಿಗೆ ಬೇಡಿಕೆ

    ನವದೆಹಲಿ: ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಗೋಧಿ ಹೆಚ್ಚಿನ ಮಟ್ಟದಲ್ಲಿ ರಫ್ತಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

    ವರ್ಷದ ಹಿಂದೆ ಭಾರತದಿಂದ 1.08 ಕೋಟಿ ಮೆಟ್ರಿಕ್ ಟನ್‌ನಷ್ಟು ಗೋಧಿ ರಫ್ತಾಗಿತ್ತು. ಉಕ್ರೇನ್ ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಈ ವರ್ಷ ಭಾರತದಿಂದ 1.10 ಕೋಟಿ ಮೆಟ್ರಿಕ್ ಟನ್ ಗೋಧಿ ರಫ್ತಾಗುವ ನಿರೀಕ್ಷೆ ಇದೆ ಎಂದು ಎಸ್ ಆ್ಯಡ್ ಪಿ ಗ್ಲೋಬಲ್ ಪ್ಲಾಟ್ಸ್ ಸಮೀಕ್ಷೆ ಬಹಿರಂಗಪಡಿಸಿದೆ.

    ರಷ್ಯಾ ವಿಶ್ವದಲ್ಲೇ ಅತೀ ಹೆಚ್ಚು ಗೋಧಿಯನ್ನು ರಫ್ತು ಮಾಡುವ ದೇಶಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಉಕ್ರೇನ್ 5ನೇ ಸ್ಥಾನದಲ್ಲಿದ್ದರೆ ಭಾರತ ಸದ್ಯ 10ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಇನ್ನು ಮುಂದೆ ಪಾಸ್‌ವರ್ಡ್ ಹಂಚಿಕೆಗೂ ಹೆಚ್ಚುವರಿ ಶುಲ್ಕ ವಿಧಿಸಲಿದೆ ನೆಟ್‌ಫ್ಲಿಕ್ಸ್

    ಜಾಗತಿಕವಾಗಿ ಉಕ್ರೇನ್ ಹಾಗೂ ರಷ್ಯಾ ಶೇ.25 ರಷ್ಟು ಪಾಲಿನ ಗೋಧಿಯನ್ನು ರಫ್ತು ಮಾಡುತ್ತಿತ್ತು. ಇದೀಗ ಭಾರತದಲ್ಲಿ ಗೋಧಿ ರಫ್ತು ಹೆಚ್ಚಾದಲ್ಲಿ ಉಕ್ರೇನ್ ಹಾಗೂ ರಷ್ಯಾದ ರಫ್ತಿನ ಸ್ಥಾನ ಕೆಳಗಿಳಿಯಲಿದ್ದು, ಭಾರತದ ಸ್ಥಾನ ಏರಲಿದೆ.

    ವಾಣಿಜ್ಯ ಸಚಿವ ಪೀಯುಶ್ ಗೋಯಲ್ ಲೋಕಸಭೆಯಲ್ಲಿ ಬುಧವಾರ ಭಾರತದ ರಫ್ತಿನ ಬಗ್ಗೆ ಉಲ್ಲೇಖಿಸಿದ್ದರು. ಭೀಕರ ಯುದ್ಧದ ಮಧ್ಯೆ ಉಕ್ರೇನ್ ಹಾಗೂ ರಷ್ಯಾದ ರಫ್ತಿಗೆ ತಡೆ ಬೀಳಲಿವೆ. ಅಲ್ಲಿ ತಡೆಯಾಗುವ ಉತ್ಪನ್ನಗಳಿಂದ ಭಾರತಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಕೀವ್ ರಕ್ಷಣೆಗಾಗಿ ರಾಕೆಟ್ ಬಿಟ್ಟು ಗನ್ ಹಿಡಿದು ಹೋರಾಟಕ್ಕೆ ಮುಂದಾದ ಟೆನ್ನಿಸ್ ಆಟಗಾರ

    ರಷ್ಯಾ ಹಾಗೂ ಉಕ್ರೇನ್‌ನಿಂದ ಅತೀ ಹೆಚ್ಚು ರಫ್ತಾಗುವ ಟೆಲಿಕಾಂ ಉಪಕರಣಗಳು, ಕಬ್ಬಿಣ, ಉಕ್ಕು, ಚಹಾ, ರಾಸಾಯನಿಕ ಉತ್ಪನ್ನಗಳು, ಪೆಟ್ರೋಲಿಯಂ ಹೀಗೆ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳಲು ಇತರ ದೇಶಗಳು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ.

  • ಕೀವ್ ರಕ್ಷಣೆಗಾಗಿ ರಾಕೆಟ್ ಬಿಟ್ಟು ಗನ್ ಹಿಡಿದು ಹೋರಾಟಕ್ಕೆ ಮುಂದಾದ ಟೆನ್ನಿಸ್ ಆಟಗಾರ

    ಕೀವ್ ರಕ್ಷಣೆಗಾಗಿ ರಾಕೆಟ್ ಬಿಟ್ಟು ಗನ್ ಹಿಡಿದು ಹೋರಾಟಕ್ಕೆ ಮುಂದಾದ ಟೆನ್ನಿಸ್ ಆಟಗಾರ

    ಕೀವ್: ರಷ್ಯಾ ದಾಳಿಯಿಂದ ಕೀವ್ ನಗರವನ್ನು ರಕ್ಷಿಸಲು ಉಕ್ರೇನ್‍ನ ಮಾಜಿ ಟೆನ್ನಿಸ್ ಆಟಗಾರ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಟೆನ್ನಿಸ್ ರಾಕೆಟ್ ಹಿಡಿದ ಕೈಯಲ್ಲಿ ಗನ್ ಹಿಡಿದು ಹೋರಾಡಲು ಮುಂದಾಗಿದ್ದಾರೆ.

    ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾ ಕೀವ್ ನಗರ ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಈ ನಡುವೆ ಕೀವ್ ವಶಪಡಿಸಿಕೊಳ್ಳಲು ರಷ್ಯಾ ಕ್ಷಿಪಣಿ, ಬಾಂಬ್‍ಗಳ ಸುರಿಮಳೆ ಸುರಿಸುತ್ತಿದೆ. ಹಾಗಾಗಿ ಕೀವ್ ನಗರವನ್ನು ರಷ್ಯಾದಿಂದ ಉಳಿಸಿಕೊಳ್ಳಲು ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಶಸ್ತ್ರಸಜ್ಜಿತನಾಗಿ ನಿಂತಿರುವ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

    ನಾನು ತಾಯ್ನಾಡಿನ ರಕ್ಷಣೆಗಾಗಿ ಮತ್ತೆ ಕೀವ್‍ಗೆ ಬಂದಿದ್ದೇನೆ. ಕೀವ್‍ನ ಜನ ಯುದ್ಧದಿಂದ ತತ್ತರಿಸಿ ಹೋಗಿದ್ದಾರೆ. ಕೀವ್ ರಕ್ಷಣೆಗಾಗಿ ಉಕ್ರೇನ್ ಸೈನಿಕರು ಹೋರಾಡುತ್ತಿದ್ದಾರೆ. ನನ್ನ ಮನೆಯ ಸದಸ್ಯರನ್ನು ರಕ್ಷಿಸಿದ ಬಳಿಕ ನಾನು ಇದೀಗ ದೇಶದ ರಕ್ಷಣೆಗಾಗಿ ಶಸ್ತ್ರಸ್ತ್ರ ಹಿಡಿದಿದ್ದೇನೆ. ಗನ್ ಹಿಡಿದು ಶೂಟಿಂಗ್ ಮಾಡುವ ಬಗ್ಗೆ ನಾನು ತರಬೇತಿ ಕೂಡ ಪಡೆದಿದ್ದೇನೆ. ನನಗೆ ಮಾಜಿ ಸೈನಿಕರೊಬ್ಬರು 5 ರಿಂದ 7 ದಿನಗಳ ಕಾಲ ತರಬೇತಿ ನೀಡಿದ್ದಾರೆ. ನಾನು ಇದೀಗ ಗನ್ ಹಿಡಿದು ಕೀವ್ ರಕ್ಷಣೆಗಾಗಿ ಮುಂದಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ಅಲೆಕ್ಸಾಂಡರ್ ಡೊಲ್ಗೊಪೊಲೊವ್ 2012ರಲ್ಲಿ ವಿಶ್ವ ಟೆನ್ನಿಸ್ ರ್ಯಾಂಕಿಂಗ್‍ನಲ್ಲಿ 12 ಸ್ಥಾನ ಪಡೆದಿದ್ದರು. ಆ ಬಳಿಕ 2021ರಲ್ಲಿ ಅಂತಾರಾಷ್ಟ್ರೀಯ ಟೆನ್ನಿಸ್‍ಗೆ ವಿದಾಯ ಘೋಷಿಸಿದ್ದರು. ಇದೀಗ ಉಕ್ರೇನ್ ರಕ್ಷಣೆಗಾಗಿ ಗನ್ ಹಿಡಿದಿದ್ದಾರೆ. ಈ ಮೊದಲು ಉಕ್ರೇನ್‍ನ ಹಲವು ಕ್ರೀಡಾಪಟುಗಳು ಉಕ್ರೇನ್ ಸೈನ್ಯದೊಂದಿಗೆ ಕೈ ಜೋಡಿಸಿದ್ದು, ಎರಡು ಬಾರಿ ಒಲಿಂಪಿಕ್ಸ್ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ ವಿಜೇತ ವಾಸಿಲಿ ಲೊಮಾಚೆಂಕೊ ಮತ್ತು ವಿಶ್ವ ಹೆವಿವೇಯ್ಟ್ ಚಾಂಪಿಯನ್ ಓಲೆಕ್ಸಾಂಡರ್ ಉಸಿಕ್ ಸೇರಿದಂತೆ ಹಲವು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

  • ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

    ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

    ದಿ ಹೇಗ್: ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸಿ ಭಾರತದ ನ್ಯಾಯಾಧೀಶರೊಬ್ಬರು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮತ ಚಲಾಯಿಸಿದ್ದಾರೆ.

    ಯುಎನ್‌ನ ಉನ್ನತ ನ್ಯಾಯಾಲಯವು ಉಕ್ರೇನ್‌ ಮೇಲಿನ ಆಕ್ರಮಣವನ್ನು ನಿಲ್ಲಿಸುವಂತೆ ರಷ್ಯಾಕ್ಕೆ ಬುಧವಾರ ಆದೇಶ ನೀಡಿತು. ರಷ್ಯಾದ ಒಕ್ಕೂಟವು ಫೆಬ್ರವರಿ 24 ರಂದು ಉಕ್ರೇನ್ ಭೂಪ್ರದೇಶದಲ್ಲಿ ಪ್ರಾರಂಭಿಸಿದ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಪ್ರಕರಣದ ಅಂತಿಮ ತೀರ್ಮಾನ ಬಾಕಿಯಿದೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ನ್ಯಾಯಾಧೀಶ ಜೋನ್ ಡೊನೊಗ್ಯು ಹೇಳಿದ್ದಾರೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ರಷ್ಯಾ ದಾಳಿ ಕುರಿತು ಯುಎನ್‌ ನ್ಯಾಯಾಲಯಕ್ಕೆ ಉಕ್ರೇನ್‌ ಅರ್ಜಿ ಸಲ್ಲಿಸಿತ್ತು. ಆಕ್ರಮಣ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ವೇಳೆ ಭಾರತದ ನ್ಯಾಯಾಧೀಶ ದಲ್ವೀರ್‌ ಭಂಡಾರಿ ಅವರು ರಷ್ಯಾ ವಿರುದ್ಧ ಮತ ಹಾಕಿದ್ದಾರೆ.

    ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಸಾಮಾನ್ಯ ಸಭೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯದಿಂದ ಭಾರತ ದೂರ ಉಳಿದಿದೆ. ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದೆ. ಆದರೆ ಭಾರತದ ನ್ಯಾಯಾಧೀಶ ಈಗ ರಷ್ಯಾ ವಿರುದ್ಧ ಮತ ಚಲಾಯಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

    ದಾಳಿ ನಡೆಸುತ್ತಿರುವ ರಷ್ಯಾವನ್ನು ತಡೆಯಬೇಕು. ಅದನ್ನು ನಿಲ್ಲಿಸುವ ಜವಾಬ್ದಾರಿಯೂ ನ್ಯಾಯಾಲಯದ್ದಾಗಿದೆ ಎಂದು ಉಕ್ರೇನ್‌ ಪ್ರತಿನಿಧಿ ಆಂಟನ್‌ ಕೊರಿನೆವಿಚ್‌ ಹೇಳಿದ್ದರು.

    ಆದರೆ ಉಕ್ರೇನ್‌ ಮೇಲಿನ ದಾಳಿಯನ್ನು ರಷ್ಯಾ ಸಮರ್ಥಿಸಿಕೊಂಡಿದೆ. ಆತ್ಮರಕ್ಷಣೆಗಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದು ರಷ್ಯಾ ಸ್ಪಷ್ಟನೆ ನೀಡಿದೆ.

  • ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ವಾಷಿಂಗ್ಟನ್: ಉಕ್ರೇನ್-ರಷ್ಯಾ ನಡುವೆ ಯುದ್ಧ ತೀವ್ರಗತಿಯಲ್ಲಿ ಸಾಗುತ್ತಿದೆ. ಈ ನಡುವೆ ರಷ್ಯಾ ಸೇನೆ 1,500ಕ್ಕೂ ಹೆಚ್ಚು ಜನರಿಗೆ ಆಶ್ರಯ ಕೊಟ್ಟಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿದೆ. ಈ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾ ಅಧ್ಯಕ್ಷ ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದು ಕರೆದಿದ್ದಾರೆ.

    ಶ್ವೇತಾಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಷ್ಯಾ – ಉಕ್ರೇನ್ ಯುದ್ಧ ಕುರಿತು ಮಾತನಾಡಿದ ಬೈಡನ್, ಉಕ್ರೇನ್‍ನಲ್ಲಿ ರಷ್ಯಾದ ನಾಯಕನ ದಾಳಿಯು ಹೆಚ್ಚು ನಾಗರಿಕರನ್ನು ಬಲಿತೆಗೆದುಕೊಂಡಿತು. ‘ನೂರಾರು’ ಜನರು ಆಶ್ರಯ ಪಡೆದಿದ್ದ ಥಿಯೇಟರ್ ಮೇಲೆ ಬಾಂಬ್ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಇದು ಅಮಾನವೀಯವಾಗಿದೆ. ಈ ಮೂಲಕ ಪುಟಿನ್ ‘ಯುದ್ಧ ಅಪರಾಧಿ’ ಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:‌ ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಮೇಯರ್ ಬಿಡುಗಡೆ

    Joe Biden

    ಬಂದರು ನಗರವಾದ ಮಾರಿಯುಪೋಲ್‍ನ ಅಧಿಕಾರಿಗಳು ಡ್ರಾಮಾ ಥಿಯೇಟರ್‌ನಲ್ಲಿ ಸತ್ತವರನ್ನು ಎಣಿಸಲು ಹೆಣಗಾಡುತ್ತಿದ್ದರು. ಕಟ್ಟಡದ ಅವಶೇಷಗಳಿಂದ ದಟ್ಟವಾದ ಹೊಗೆ ಹೊರಬರುತ್ತಿದೆ ಎಂದು ಹೇಳಿದ್ದಾರೆ.

    ಫೆಬ್ರವರಿ 24 ರಂದು ಪುಟಿನ್ ಆಕ್ರಮಣ ಮಾಡಿದ ನಂತರ ಉಕ್ರೇನ್‍ನಾದ್ಯಂತ ನಾಗರಿಕರ ಮೇಲಿನ ಹಲ್ಲೆ ನಡೆಯುತ್ತ ಇದೆ. ಇತ್ತೀಚೆಗೆ ಇದು ಅತಿರೇಕಕ್ಕೆ ಹೋಗಿದ್ದು, ಮನೆಗಳು, ಆಸ್ಪತ್ರೆಗಳು ಮತ್ತು ಗಿರಣಿ ಅಂಗಡಿಗಳ ಮೇಲೆಯೇ ರಷ್ಯಾ ಸೈನಿಕರು ದಾಳಿ ಮಾಡುತ್ತಿದ್ದಾರೆ. ಇದರಿಂದ ಅಲ್ಲಿನ ನಾಗರಿಕರು ತಮ್ಮ ಸುರಕ್ಷತೆಯ ಜಾಗ ಹುಡುಕುವುದರಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ: ಅಭಿಮಾನಿಗಳ ಫಸ್ಟ್ ರಿಯ್ಯಾಕ್ಷನ್ 

    Biden slams 'war criminal' Putin as Ukraine civilian horror grows

    ಉಕ್ರೇನ್‍ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯು ಯುಎಸ್ ಕಾಂಗ್ರೆಸ್ ಮತ್ತು ಅಧ್ಯಕ್ಷರಿಗೆ ಸಹಾಯಕ್ಕಾಗಿ ಒಂದು ದೊಡ್ಡ ಮನವಿಯನ್ನು ಮಾಡಿದ್ದರು. ಅದಕ್ಕೆ ಬೈಡನ್, ರಷ್ಯಾದ ಆಕ್ರಮಣಕಾರಿ ಸೈನ್ಯದ ವಿರುದ್ಧ ಹೋರಾಡಲು 1 ಬಿಲಿಯನ್ ಹೊಸ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ಪ್ರತಿಕ್ರಿಯಿಸಿದ್ದರು.

  • ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

    ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

    ಕೀವ್: ಕಳೆದ ವಾರ ರಷ್ಯಾ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ನ ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರು ಬಿಡುಗಡೆಗೊಂಡಿದ್ದಾರೆ.

    ಈ ಬಗ್ಗೆ ಉಕ್ರೇನ್‍ನ ರಕ್ಷಣಾ ಸಚಿವಾಲಯ ಅಧಿಕೃತವಾದ ಮಾಹಿತಿ ಹಂಚಿಕೊಂಡಿದ್ದು, ಅಧ್ಯಕ್ಷ ವೊಲೊಡಿಮಿರ್ ಝೆಲೇನ್ಸ್ಕಿ ಅವರು ಮೆಲಿಟೊಪೋಲ್‍ನ ಮೇಯರ್‍ನೊಂದಿಗೆ ಮಾತನಾಡುತ್ತಿರುವ ತುಣುಕನ್ನು ಬಿಡುಗಡೆ ಮಾಡಿದೆ.

    ಈ ವೀಡಿಯೋದಲ್ಲಿ ಮೇಯರ್ ಅವರು ಝೆಲೆನ್ಸ್ಕಿಗೆ ಧನ್ಯವಾದ ತಿಳಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಝೆಲೆನ್ಸ್ಕಿ ನಾವು ನಮ್ಮವರನ್ನು ಬಿಟ್ಟುಕೊಡುವುದಿಲ್ಲ ಎಂದು ಉತ್ತರಿಸಿದ್ದಾರೆ. ಮೇಯರ್‌ನ್ನು ಬಿಡುಗಡೆಗೊಳಿಸಲು ಉಕ್ರೇನ್ ರಷ್ಯಾದ 9 ಸೈನಿಕರನ್ನು ಹಸ್ತಾಂತರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಫೆಡೋರೊವ್‍ನ್ನು ಕಳೆದ ವಾರ ರಷ್ಯಾ ಪಡೆಗಳು ಕಿಡ್ನಾಪ್ ಮಾಡಿದ್ದರು. ಫೆಡೋರೊವ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಝೆಲೆನ್ಸ್ಕಿಯ ಕಚೇರಿ ಈ ಹಿಂದೆ ಹೇಳಿತ್ತು ಆದರೆ ಯಾವುದೇ ವಿವರಗಳನ್ನು ನೀಡಿಲ್ಲ. ಫೆಡೋರೊವ್ ಅವರನ್ನು ಮಾರ್ಚ್ 11 ರಂದು ರಷ್ಯಾದ ಪಡೆಗಳು ಅಪಹರಿಸಿದ್ದವು. 10 ಆಕ್ರಮಿತರ ಗುಂಪು ಮೆಲಿಟೊಪೋಲ್‌ನ ಮೇಯರ್ ಇವಾನ್ ಫೆಡೋರೊವ್ ಅವರನ್ನು ಅಪಹರಿಸಿದೆ ಎಂದು ಉಕ್ರೇನ್ ಸಂಸತ್ ಟ್ವಿಟ್ಟರ್‌ನಲ್ಲಿ ತಿಳಿಸಿತ್ತು. ಇದನ್ನೂ ಓದಿ: ಸದಾ ಹೃದಯಲ್ಲಿ ಪುನೀತ್ ಸವಿ ನೆನಪುಗಳನ್ನು ನೆನೆಯೋಣ: ಸುಮಲತಾ

    ಮೇಯರ್ ಅವರು ನಗರದ ಬಿಕ್ಕಟ್ಟಿನ ಕೇಂದ್ರದಲ್ಲಿ ಮೂಲಸೌಕರ್ಯ ಪೂರೈಕೆಯಲ್ಲಿನ ಸಮಸ್ಯೆಗಳ ಬಗ್ಗೆ ವ್ಯವಹರಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಶುಕ್ರವಾರ ತಡರಾತ್ರಿ ವೀಡಿಯೋ ಸಂದೇಶವೊಂದರಲ್ಲಿ ಝೆಲೆನ್‍ಸ್ಕಿ ಅಪಹರಣವನ್ನು ದೃಢಪಡಿಸಿದ್ದಾರೆ.