Tag: Ukraine

  • ಸೋಮವಾರ ನಸುಕಿನಜಾವ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ

    ಸೋಮವಾರ ನಸುಕಿನಜಾವ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ

    ಹಾವೇರಿ: ಉಕ್ರೇನ್ ಯುದ್ಧದಲ್ಲಿ ಮಾರ್ಚ್ 1ರಂದು ಮೃತಪಟ್ಟ ಹಾವೇರಿ ಜಿಲ್ಲೆ ಚಳಗೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹ ಭಾರತಕ್ಕೆ ರವಾನೆ ಆಗುತ್ತಿದೆ. ಸದ್ಯ ನವೀನ್ ಮೃತದೇಹ ದುಬೈನಲ್ಲಿದೆ. ನವೀನ್ ಮೃತದೇಹ ಹೊತ್ತ ವಿಮಾನ ದುಬೈನಿಂದ ಬೆಂಗಳೂರು ಕಡೆಗೆ ಹೊರಟಿದ್ದು, ನಸುಕಿನಜಾವ ಮೂರು ಗಂಟೆ ಸುಮಾರಿಗೆ ನವೀನ್ ಮೃತದೇಹ ಬೆಂಗಳೂರು ತಲುಪಲಿದೆ.


    ಬೆಳಗ್ಗೆ ಒಂಬತ್ತು ಗಂಟೆಗೆಲ್ಲಾ ನವೀನ್ ಬಾಡಿಯನ್ನು ರಸ್ತೆ ಮಾರ್ಗವಾಗಿ ಹಾವೇರಿಯ ಚಳಗೇರಿಗೆ ಕೊಂಡೊಯ್ಯಲಾಗುತ್ತದೆ. ನವೀನ್ ಮೃತದೇಹವನ್ನು ಬರಮಾಡಿಕೊಳ್ಳಲು ಚಳಗೇರಿಯಿಂದ ಸಹೋದರ ಹರ್ಷ ಸೇರಿ 15 ಮಂದಿ ಬೆಂಗಳೂರಿಗೆ ಧಾವಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಅರುಣ್ ಕುಮಾರ್ ಪೂಜಾರ್ ಸೇರಿ ಹಲವು ಗಣ್ಯರು ನವೀನ್ ಮೃತದೇಹವನ್ನು ಬರ ಮಾಡಿಕೊಳ್ಳಲಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ತೈಲ ಶಾಕ್ – ಡೀಸೆಲ್ ಬೆಲೆ ಲೀ.25 ರೂ. ಏರಿಕೆ

    ಬಳಿಕ ಬೊಮ್ಮಾಯಿ ಚಳಗೇರಿಗೂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ನವೀನ್ ಹುಟ್ಟೂರಿನಲ್ಲಿ ಅಂತಿಮ ವಿಧಿವಿಧಾನ ಪೂರೈಸಿದ ಬಳಿಕ ಕೆಲ ಹೊತ್ತು ಮನೆ ಬಳಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನದ ಅಂತಿಮ ಮೆರವಣಿಗೆ ಮೂಲಕ ನವೀನ್ ಮೃತದೇಹವನ್ನು ದಾವಣಗೆರೆಯ ಎಸ್‍ಎಸ್ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗುತ್ತದೆ. ವೈದ್ಯ ವಿದ್ಯಾರ್ಥಿಗಳ ಅಧ್ಯಯನದ ಸಲುವಾಗಿ ನವೀನ್ ಮೃತದೇಹವನ್ನು ಕಾಲೇಜ್‍ಗೆ ದಾನ ನೀಡಲು ಈಗಾಗಲೇ ಶೇಖರಪ್ಪ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ನಾವು ಸಹ ಹಿಂದೂಗಳೇ, ಭಗವದ್ಗೀತೆಯನ್ನು ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್: ಡಿಕೆಶಿ

    ರಷ್ಯಾ-ಉಕ್ರೇನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದೆ. ಆದಷ್ಟು ಬೇಗ ಉಕ್ರೇನ್ ತೊರೆಯಿರಿ ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟ ಬೆನ್ನಲ್ಲೇ ರಷ್ಯಾ ಶೆಲ್ ದಾಳಿಗೆ ಕನ್ನಡಿಗ ನವೀನ್ ಬಲಿಯಾಗಿದ್ದರು. ಖಾರ್ಕಿವ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿಯ ನವೀನ್ ದುರಂತ ಸಾವನ್ನಪ್ಪಿದ್ದರು. ಖಾರ್ಕಿವ್‌ನಲ್ಲಿ  ಸೂಪರ್ ಮಾರ್ಕೆಟ್‍ಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ಶೆಲ್‌ ದಾಳಿಗೆ ನವೀನ್ ದುರ್ಮರಣಕ್ಕೀಡಾಗಿದ್ದರು.

  • ರಷ್ಯಾದೊಂದಿಗೆ ಸಂಬಂಧ – 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ ಉಕ್ರೇನ್

    ರಷ್ಯಾದೊಂದಿಗೆ ಸಂಬಂಧ – 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ ಉಕ್ರೇನ್

    ಕೀವ್: ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣಾ ಮಂಡಳಿ ರಷ್ಯಾದ ಪರವಾಗಿದ್ದ 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದೆ. ಇದೀಗ ಉಕ್ರೇನ್‌ನಲ್ಲಿ ಸಮರ ಕಾನೂನು ಜಾರಿಗೊಳಿಸಲಾಗಿದೆ.

    ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶದ ಮೇಲೆ ಯುದ್ಧ ಸಾರಿರುವ ರಷ್ಯಾದೊಂದಿಗೆ ಸಂಬಂಧ ಹೊಂದಿದ್ದ 11 ರಾಜಕೀಯ ಪಕ್ಷಗಳನ್ನು ಅಮಾನತುಗೊಳಿಸಿದ್ದಾರೆ. 4.41 ಕೋಟಿ ಜನಸಂಖ್ಯೆ ಇರುವ ಉಕ್ರೇನ್‌ನಲ್ಲಿ 450 ಸಂಸತ್ ಸ್ಥಾನಗಳಲ್ಲಿ 44 ಸ್ಥಾನಗಳನ್ನು ರಷ್ಯಾಗೆ ಬೆಂಬಲ ನೀಡುತ್ತಿದ್ದ ರಾಜಕೀಯ ಪಕ್ಷದವರೇ ಪಡೆದುಕೊಂಡಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ 

    ಭಾನುವಾರ ವೀಡಿಯೋ ಸಂದೇಶವನ್ನು ಕಳುಹಿಸಿದ ಉಕ್ರೇನ್ ಅಧ್ಯಕ್ಷ ರಷ್ಯಾ ಉಕ್ರೇನ್ ಮೇಲೆ ದೊಡ್ಡ ಮಟ್ಟದ ಯುದ್ಧವನ್ನೇ ನಡೆಸಿದೆ. ಈ ಯುದ್ಧಕ್ಕೆ ನಮ್ಮ ದೇಶದ ಒಳಗಡೆಯೇ ಕೆಲವು ರಾಜಕೀಯ ಪಕ್ಷಗಳು ಬೆಂಬಲವನ್ನು ನೀಡಿರುವುದು ಗಮನಕ್ಕೆ ಬಂದಿದೆ. ರಷ್ಯಾದೊಂದಿಗೆ ಸಂಬಂಧವನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಸಮರ ಕಾನೂನಿನ ಅವಧಿಗೆ ಅಮಾನತುಗೊಳಿಸಲಾಗುವುದು ಎಂದಿದ್ದಾರೆ.ಇದನ್ನೂ ಓದಿ: 98ರ ಹರೆಯದಲ್ಲೂ ರಷ್ಯಾ ವಿರುದ್ಧ ಹೋರಾಡಲು ಮುಂದಾದ ವೃದ್ಧೆ

     

  • 98ರ ಹರೆಯದಲ್ಲೂ ರಷ್ಯಾ ವಿರುದ್ಧ ಹೋರಾಡಲು ಮುಂದಾದ ವೃದ್ಧೆ

    98ರ ಹರೆಯದಲ್ಲೂ ರಷ್ಯಾ ವಿರುದ್ಧ ಹೋರಾಡಲು ಮುಂದಾದ ವೃದ್ಧೆ

    ಕೀವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದ ಉಕ್ರೇನ್‍ನ ಪ್ರಮುಖ ನಗರಗಳು ಧ್ವಂಸಗೊಂಡಿದೆ. ಭೀಕರ ದಾಳಿಯ ನಡುವೆ ಲಕ್ಷಾಂತರ ಮಂದಿ ದೇಶವನ್ನು ಬಿಟ್ಟು ವಲಸೆ ಹೋದರು. ಆದರೆ ಈ ನಡುವೆ 98 ವರ್ಷದ ಮಹಿಳೆ ರಷ್ಯಾ ವಿರುದ್ಧ ಹೋರಾಡಲು ಸೇನೆಗೆ ಸೇರಲು ಮುಂದಾಗಿದ್ದಾರೆ.

    ಹೌದು ಈ ಕುರಿತಂತೆ ಉಕ್ರೇನಿಯನ್ ವಿದೇಶಾಂಗ ವ್ಯವಹಾರ ಸಚಿವಾಲಯ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದು, 98 ವರ್ಷದ ಓಲ್ಹಾ ಟ್ವೆರ್ಡೋಖ್ಲಿಬೋವಾ ಅವರು ರಷ್ಯಾ ವಿರುದ್ಧ ಹೋರಾಡಲು ಸೇನೆಗೆ ಸೇರಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಸಕ್ರಿಯವಾಗಿ ಹೋರಾಡಿರುವ ಓಲ್ಹಾ ಟ್ವೆರ್ಡೋಖ್ಲಿಬೋವಾ ಅವರಿಗೆ ಯುದ್ಧ ಮಾಡಿ ಅನುಭವವಿದೆ. ಹಾಗಾಗಿ ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಾಳಿ ನಡೆಸಲು ಆದೇಶಿಸಿದ ಬಳಿಕ ತಮ್ಮ ತಾಯ್ನಾಡನ್ನು ರಕ್ಷಿಸಲು ಸೇನೆಗೆ ಸೇರಲು ಓಲ್ಹಾ ಟ್ವೆರ್ಡೋಖ್ಲಿಬೋವಾ ಅವರು ಮುಂದಾದರು. ಆದರೆ ಅವರ ವಯಸ್ಸಿನ ಕಾರಣದಿಂದಾಗಿ ಸೇನೆಗೆ ಸೇರಿಸಿಕೊಳ್ಳಲು ನಿರಾಕರಿಸಲಾಗಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್

    ಸದ್ಯ ಈ ಪೋಸ್ಟ್‌ಗೆ ಇಲ್ಲಿಯವರೆಗೂ ಸುಮಾರು 3,800 ಲೈಕ್‍ಗಳು ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಹರಿದುಬಂದಿದೆ. ಅಲ್ಲದೇ ನೆಟ್ಟಿಗರು ಓಲ್ಹಾ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರಿಗೆ ದೀರ್ಘಾಯುಷ್ಯ ಸಿಗಲಿ ಹಾರೈಸಿದ್ದಾರೆ. ಇದನ್ನೂ ಓದಿ: ಸರ್ಕಾರವೇ ಜನರ ಬಳಿ ಬಂದು ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಗ್ರಾಮ ವಾಸ್ತವ್ಯ: ಆರ್.ಅಶೋಕ್

  • 3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    ನವದೆಹಲಿ: ಭಾರತಕ್ಕೆ 3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ರಷ್ಯಾದ ತೈಲ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಇದು ಸರ್ಕಾರದ ಮಟ್ಟದಲ್ಲಿ ನಡೆದ ಒಪ್ಪಂದವಲ್ಲ, ತೈಲ ಕಂಪನಿಗಳ ನಡುವೆ ಮಾಡಿಕೊಂಡಿರುವ ಒಪ್ಪಂದ ಆಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಉಕ್ರೇನ್ ಮೇಲಿನ ದಾಳಿಗೆ ಪ್ರತಿಯಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ನಿಬರ್ಂಧಗಳನ್ನು ವಿಧಿಸಿದ್ದರೂ, ರಷ್ಯಾದ ತೈಲ ಕಂಪನಿಗಳಿಂದ ಕಚ್ಚಾ ತೈಲ ಖರೀದಿಸಲು ಭಾರತೀಯ ತೈಲ ಕಂಪನಿಗಳಿಗೆ ಯಾವುದೇ ನಿಬರ್ಂಧಗಳಿಲ್ಲ. ಆದ್ದರಿಂದ ಎರಡೂ ಕಂಪನಿಗಳ ನಡುವೆ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಭಾರತದ ಬಹುತೇಕ ಕಂಪನಿಗಳು ಸಹ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಸಹಮತ ವ್ಯಕ್ತಪಡಿಸಿವೆ ಎಂದು ಐಇಸಿಎಲ್ ಮೂಲಗಳು ತಿಳಿಸಿವೆ.

    ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಒಂದು ಬ್ಯಾರಲ್‍ಗೆ ಗರಿಷ್ಠ 100 ಡಾಲರ್ (ಸುಮಾರು 7,594.67 ರೂ.) ಇರುತ್ತಿತ್ತು. ಆದರೆ ಉಕ್ರೇನ್ ಆಕ್ರಮಣದ ನಂತರ ಕಚ್ಚಾ ತೈಲವು ಬ್ಯಾರಲ್‍ಗೆ 140 ಡಾಲರ್ (ಸುಮಾರು 10,632.53 ರೂ.) ತಲುಪಿದೆ. ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ಕಂಪನಿಗಳು ಅಂದಾಜಿಸಿವೆ. ಇದನ್ನೂ ಓದಿ: ಭಾರತೀಯ ಮೂಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗ್ಲೆನ್ ಮ್ಯಾಕ್ಸ್‌ವೆಲ್

    ಅಮೆರಿಕದ ಆಮದು ಶೇ.11 ಹೆಚ್ಚಳ
    ರಷ್ಯಾದ ಮೇಲಿನ ನಿರ್ಬಂಧವನ್ನು ತಿರಸ್ಕರಿಸಿರುವ ಭಾರತವು ಪ್ರಸಕ್ತ ವರ್ಷದಲ್ಲಿ ಅಮೆರಿಕದಿಂದಲೂ ಶೇ.11 ರಷ್ಟು ಕಚ್ಚಾ ತೈಲ ಆಮದು ಮಾಡಿಕೊಂಡಿರುವುದು ಕಂಡುಬಂದಿದೆ. ಈಗಾಗಲೇ ಭಾರತವು ಇರಾಕ್‍ನಿಂದÀ ಶೇ.23, ಸೌದಿ ಅರೇಬಿಯಾದಿಂದ ಶೇ.18ರಷ್ಟು ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‍ನಿಂದ ಶೇ.11ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ನಡುವೆ ಭಾರತೀಯ ಮಾರುಕಟ್ಟೆಯ ಯುಎಸ್ ಪಾಲು ಶೇ.8ಕ್ಕೆ ಏರಲಿದೆ ಎಂದು ಹೇಳಲಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಶೇ.11 ರಷ್ಟು ಆಮದು ಮಾಡಿಕೊಂಡಿರುವುದು ಗಮನಾರ್ಹ ಅಂಶವಾಗಿದೆ.

  • ದೇಶದಲ್ಲಿ ಹಣದುಬ್ಬರ ಮತ್ತಷ್ಟು ಏರಿಕೆ: ರಾಹುಲ್ ಗಾಂಧಿ ಎಚ್ಚರಿಕೆ

    ದೇಶದಲ್ಲಿ ಹಣದುಬ್ಬರ ಮತ್ತಷ್ಟು ಏರಿಕೆ: ರಾಹುಲ್ ಗಾಂಧಿ ಎಚ್ಚರಿಕೆ

    ನವದೆಹಲಿ: ಹಣದುಬ್ಬರವು ಮತ್ತಷ್ಟುಕ್ಕೂ ಏರಿಕೆಯಾಗಲಿದ್ದು, ದೇಶದ ಜನರನ್ನು ರಕ್ಷಿಸಲು ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದರು.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಣದುಬ್ಬರವು ಎಲ್ಲಾ ಭಾರತೀಯರ ಮೇಲಿನ ತೆರಿಗೆಯಾಗಿದೆ. ರಷ್ಯಾ- ಉಕ್ರೇನ್ ಯದ್ಧ ಪ್ರಾರಂಭವಾಗುವ ಮೊದಲೇ ದಾಖಲೆಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿತ್ತು. ಇದರಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಸಾಕಷ್ಟು ಸಂಕಷ್ಟ ಎದುರಿಸಿದ್ದರು ಎಂದು ತಿಳಿಸಿದರು.

    ಈಗ ಹಣದುಬ್ಬರ ಮತ್ತಷ್ಟು ಏರಿಕೆಯಾಗಲಿದ್ದು, ಕಚ್ಚಾತೈಲ 1ಬ್ಯಾರಲ್‍ಗೆ 100 ಡಾಲರ್(7594 ರೂ.), ಆಹಾರದ ಬೆಲೆಗಳು ಶೇ.22 ಏರಿಕೆಯಾಗುವ ನಿರೀಕ್ಷೆಯಿದೆ. ಕೊರೊನಾದಿಂದಾಗಿ ಜಾಗತಿಕ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸುತ್ತಿದೆ. ಕೇಂದ್ರ ಸರ್ಕಾರವು ಈಗ ಕಾರ್ಯ ನಿರ್ವಹಿಸಿ ಜನರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

    ಸೋಮವಾರ ಬಿಡುಗಡೆಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ ಕಚ್ಚಾ ತೈಲ ಹಾಗೂ ಆಹಾರೇತರ ವಸ್ತುಗಳ ಬೆಲೆ ಶೇ. 13.11ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

    ಫೆಬ್ರವರಿ 24 ರಂದು ಪ್ರಾರಂಭವಾದ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಬೆಲೆ ಏರಿಕೆಯು ಸಗಟು ಬೆಲೆ ಸೂಚ್ಯಂಕದ ಮೇಲೆ ಒತ್ತಡವನ್ನು ಉಂಟುಮಾಡಿದೆ.

  • ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

    ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

    ಹಾವೇರಿ: ಕೊನೆಗೂ ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ತಾಯ್ನಾಡಿಗೆ ಬರುತ್ತಿದೆ. ಸೋಮವಾರ ಬೆಳಗ್ಗೆ ಸುಮಾರು 9.30ಗೆ ಮೃತದೇಹ ಮನೆಗೆ ಬರಲಿದೆ ಎಂದು ಶೇಖರ ಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನದ ಅನುಕೂಲತೆಗಾಗಿ ಮೆಡಿಕಲ್ ಕಾಲೇಜಿಗೆ ನವೀನ್ ಮೃತದೇಹ ಡೊನೇಟ್ ಮಾಡುತ್ತೇವೆ ಎಂದ ಅವರು ಮೃತದೇಹ ಬರಲು ಶ್ರಮಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ

    ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ್ ಮೃತಪಟ್ಟು ಇಂದಿಗೆ 19 ದಿನಗಳು ಕಳೆದಿದೆ. ಇಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ್ ನಿವಾಸಕ್ಕೆ ರಾಣೆಬೆನ್ನೂರು ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮಾರ್ಚ್ 21ಕ್ಕೆ ಬೆಳಗ್ಗೆ ನವೀನ್ ಮೃತದೇಹ ಬರುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿವಾಸಕ್ಕೆ ಸಾಸಕರು ಭೇಟಿ ನೀಡಿದ್ದಾರೆ.

    ಶಾಸಕ ಅರುಣ್ ಕುಮಾರ್ ಅವರಿಗೆ ತಹಶೀಲ್ದಾರ್ ಶಂಕರ.ಜಿ.ಎಸ್ ಸಾಥ್ ನಿಡಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಮಡಿದ ನವೀನ್ ಪಾರ್ಥೀವ ಶರೀರ ಕೊನೆಗೂ ತಾಯ್ನಾಡಿಗೆ

  • ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ

    ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ದಾನಮಾಡಲು ಕುಟುಂಬಸ್ಥರ ನಿರ್ಧಾರ

    ಹಾವೇರಿ: ಉಕ್ರೇನ್‌ನಲ್ಲಿ ಶೆಲ್ ದಾಳಿಯಿಂದ ಮೃತಪಟ್ಟ ಹಾವೇರಿಯ ಚಳಗೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹವನ್ನು ಕುಟುಂಬಸ್ಥರು ಮೆಡಿಕಲ್ ಕಾಲೇಜಿಗೆ ದಾನ ಮಾಡಲು ನಿರ್ಧರಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ ನವೀನ್ ತಂದೆ ಶೇಖರಪ್ಪ ದಾವಣಗೆರೆಯಲ್ಲಿರುವ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ದಾನ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಥಿಯೇಟರ್ ಮೇಲೆ ಬಾಂಬ್ ದಾಳಿ – 130 ಮಂದಿಯ ರಕ್ಷಣೆ

    ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬರಲಿದೆ. ಸೋಮವಾರ ಮುಂಜಾನೆ 3 ಗಂಟೆಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮೃತದೇಹ ಬರಲಿದ್ದು, ಸಂಜೆ ಹೊತ್ತಿಗೆ ಹುಟ್ಟೂರು ತಲುಪುವ ಸಾಧ್ಯತೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಶೆಲ್ ದಾಳಿಗೊಳಗಾದ ಯುವತಿ ನೋಡಲು ಆಸ್ಪತ್ರೆಗೆ ಭೇಟಿಕೊಟ್ಟ ಉಕ್ರೆನ್ ಅಧ್ಯಕ್ಷ

    ಭಾರತ ಆಪರೇಷನ್ ಗಂಗಾ ಮಿಷನ್ ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಕರೆತಂದು ನಿಟ್ಟುಸಿರು ಬಿಟ್ಟಿದೆ.

  • ಥಿಯೇಟರ್ ಮೇಲೆ ಬಾಂಬ್ ದಾಳಿ – 130 ಮಂದಿಯ ರಕ್ಷಣೆ

    ಥಿಯೇಟರ್ ಮೇಲೆ ಬಾಂಬ್ ದಾಳಿ – 130 ಮಂದಿಯ ರಕ್ಷಣೆ

    ಕೀವ್: ಮರಿಯುಪೋಲ್ ನಗರದಲ್ಲಿ ರಷ್ಯಾ ಸೇನೆ ಥಿಯೇಟರ್ ಮೇಲೆ ಬಾಂಬ್ ದಾಳಿ ನಡೆಸಿದೆ. ಥಿಯೇಟರ್‌ನಲ್ಲಿದ್ದ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ.

    ಉಕ್ರೇನ್‍ನ ಹಲವು ಜನ ಈ ಥಿಯೇಟರ್‌ನ ಅಂಡರ್ ಗ್ರೌಂಡ್‍ನಲ್ಲಿ ಆಶ್ರಯ ಪಡೆದಿದ್ದರು. ಇದನ್ನು ಗುರಿಯಾಗಿಸಿ ರಷ್ಯಾ ಸೇನೆ ದಾಳಿ ನಡೆಸಿದೆ. ಈಗಾಗಲೇ ಥಿಯೇಟರ್‌ನಲ್ಲಿದ್ದ 130 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಇನ್ನುಳಿದವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಥಿಯೇಟರ್ ಮೇಲೆ ಬಾಂಬ್ ದಾಳಿಯಾಗುತ್ತಿದ್ದಂತೆ ದಟ್ಟ ಹೊಗೆ ಬರಲಾರಂಭಿಸಿದೆ. ಇದರಿಂದ ಸಾಕಷ್ಟು ಜನ ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಶೆಲ್ ದಾಳಿಗೊಳಗಾದ ಯುವತಿ ನೋಡಲು ಆಸ್ಪತ್ರೆಗೆ ಭೇಟಿಕೊಟ್ಟ ಉಕ್ರೆನ್ ಅಧ್ಯಕ್ಷ

    ಯುದ್ಧ ಪ್ರಾರಂಭವಾದಗಿನಿಂದ ಕೀವ್‍ನಗರದಲ್ಲಿ 60 ನಾಗರೀಕರು ಸೇರಿ ಒಟ್ಟು 222 ಜನ ಮೃತಪಟ್ಟಿರುವ ಬಗ್ಗೆ ಉಕ್ರೇನ್ ಸರ್ಕಾರ ಸ್ಪಷ್ಟಪಡಿಸಿದೆ. ಇನ್ನುಳಿದಂತೆ 241 ನಾಗರೀಕರು ಸೇರಿ ಒಟ್ಟು 889 ಜನ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಯುದ್ಧ ಆರಂಭವಾಗಿ 23 ದಿನಕ್ಕೆ ಕಾಲಿಟ್ಟರು ಯುದ್ಧ ನಿಲ್ಲುವ ಸನ್ನಿವೇಶ ಕಾಣಿಸುತ್ತಿಲ್ಲ. ರಷ್ಯಾ ನಾಗರೀಕರು ಮತ್ತು ಜನವಸತಿ ಪ್ರದೇಶ, ಆಸ್ಪತ್ರೆ, ಶಾಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಮಡಿದ ನವೀನ್ ಪಾರ್ಥೀವ ಶರೀರ ಕೊನೆಗೂ ತಾಯ್ನಾಡಿಗೆ

    https://twitter.com/pokopok54/status/1504758665668341761

    ಉಕ್ರೇನ್ ಸೇನೆ ನೀಡಿರುವ ಮಾಹಿತಿ ಪ್ರಕಾರ ಈವರೆಗೆ ರಷ್ಯಾದ 14,200 ಸೈನಿಕರು, 93 ಯುದ್ಧ ವಿಮಾನ, 112 ಹೆಲಿಕಾಪ್ಟರ್, 450 ಟ್ಯಾಂಕ್, 205 ಮಿಲಿಟರಿ ಶಸ್ತ್ರಸಜ್ಜಿತ ವಾಹನ, 1,448 ಯುದ್ದೋಪಕರಣ ಸಾಗಾಟ ವಾಹನ, 72 ಎಮ್‍ಎಲ್‍ಆರ್‌ಎಸ್, 3 ಬೋಟ್, 879 ವಾಹನ, 60 ಇಂಧನ ಟ್ಯಾಂಕರ್, 12 ಡ್ರೋನ್‍ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ತಿಳಿಸಿರುವ ಮಾಹಿತಿಯೊಂದನ್ನು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

  • ಶೆಲ್ ದಾಳಿಗೊಳಗಾದ ಯುವತಿ ನೋಡಲು ಆಸ್ಪತ್ರೆಗೆ ಭೇಟಿಕೊಟ್ಟ ಉಕ್ರೆನ್ ಅಧ್ಯಕ್ಷ

    ಶೆಲ್ ದಾಳಿಗೊಳಗಾದ ಯುವತಿ ನೋಡಲು ಆಸ್ಪತ್ರೆಗೆ ಭೇಟಿಕೊಟ್ಟ ಉಕ್ರೆನ್ ಅಧ್ಯಕ್ಷ

    ಕೀವ್: ಶೆಲ್ ದಾಳಿಯಲ್ಲಿ ಗಾಯಗೊಂಡ ಯುವತಿಯ ಆರೋಗ್ಯ ವಿಚಾರಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಸ್ಪತ್ರೆಗೆ ತೆರಳಿ  ಧೈರ್ಯ ತುಂಬಿದ್ದಾರೆ.

    ರಾಜಧಾನಿ ಕೀವ್‍ನ ವೊರ್ಜೆಲ್ ಪಟ್ಟಣದಿಂದ ಹೊರಡುವಾಗ ನಡೆದ ಶೆಲ್ ದಾಳಿಯಲ್ಲಿ 16 ವರ್ಷದ ಯುವತಿ ಗಾಯಗೊಂಡಿದ್ದಳು. ಆಕೆಯನ್ನು ಕಟ್ಯಾ ವ್ಲಾಸೆಂಕೊ ಎಂದು ಗುರುತಿಸಲಾಗಿದೆ. ಗಾಯಗೊಂಡ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಅಸ್ಸಾಂ ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು

    ಆಕೆಯನ್ನು ಭೇಟಿಯಾದ ಝಲೆನ್ಸ್ಕಿ ಅವರು ಮಾತನಾಡಿಸಿದ್ದಾರೆ. ಆಕೆಯನ್ನು ಟಿಕ್‍ಟಾಕ್ ಸ್ಟಾರ್ ಎಂದು ಗುರುತಿಸಿ ಹುರಿದುಂಬಿಸಿದ್ದಾರೆ. ಟಿಕ್‍ಟಾಕ್‍ನಲ್ಲಿ ಎಲ್ಲರೂ ನಿಮ್ಮನ್ನು ಬೆಂಬಲಿಸುತ್ತಾರೆ. ಆದ್ದರಿಂದಲೇ ನಾವು ಟಿಕ್‍ಟಾಕ್‍ನ್ನು ಬಳಸುತ್ತಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ಆಕೆಗೆ ಹುರಿದುಂಬಿಸಿದ್ದಾರೆ. ಆಕೆಗೆ ಝೆಲೆನ್ಸ್ಕಿ ಅವರು ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳಿರುವ ಗುಚ್ಚವನ್ನು ನೀಡಿ, ಬೇಗ ಚೇತರಿಸಿಕೊಳ್ಳಿ ಎಂದು ಆಶಿಸಿದ್ದಾರೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನಾನೂ ಹಿಂದೂ ಸಮಾಜದಲ್ಲಿಯೇ ಹುಟ್ಟಿದ್ದೇನೆ: ಎಚ್‍ಡಿಕೆ

    ಶೆಲ್ ದಾಳಿಯಿಂದ ಉಕ್ರೇನಿಗರು ಊರು ತೊರೆಯುತ್ತದ್ದಾರೆ. ಕಟ್ಯಾ ಕುಟುಂಬವೂ ಸ್ಥಳಾಂತರವಾಗಲು ಹೊರಟಿತ್ತು. ಈ ವೇಳೆ ತನ್ನ ಕಿರಿಯ 8 ವರ್ಷದ ಸಹೋದರ ಇಹೋರ್ ಅನ್ನು ಆಲಂಗಿಸಿಕೊಂಡಿದ್ದಳು. ಇದರಿಂದ ಆತ ಸುರಕ್ಷಿತವಾಗಿ ಪಾರಾಗಿದ್ದಾನೆ. ಆದರೆ ಕಟ್ಯಾಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಹಾತ್ಮ ಗಾಂಧಿ ಧರ್ಮಪತ್ನಿ ಕೂಡ ತಲೆಗೆ ಸೆರಗು ಹಾಕುತ್ತಿದ್ದರು: ಹಿಜಬ್‌ ಬೆಂಬಲಿಸಿದ ಹೆಚ್‌ಡಿಕೆ

  • ಅಸ್ಸಾಂ ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು

    ಅಸ್ಸಾಂ ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು

    ಡಿಸ್ಪುರ್: ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಹೀಗಿರುವಾಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಶೌರ್ಯ ಮತ್ತು ಧೈರ್ಯವನ್ನು ಗೌರವಿಸಲು ಅಸ್ಸಾಂ ಮೂಲದ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಹೆಸರಿಡಲಾಗಿದೆ.

    ಭಾರತದ ಅಸ್ಸಾಂನ ಸ್ಟಾರ್ಟ್-ಅಪ್ ಕಂಪನಿಯೊಂದು ಉಕ್ರೇನ್ ಅಧ್ಯಕ್ಷರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊಸ ಚಹಾ ಪುಡಿಗೆ ಅಧ್ಯಕ್ಷ ಝೆಲೆನ್ಸ್ಕಿ ಅವರ ಹೆಸರನ್ನಿಟ್ಟಿದೆ. ದೇಶಕ್ಕಾಗಿ ಹೋರಾಡುತ್ತಿರುವ ಉಕ್ರೇನ್ ಅಧ್ಯಕ್ಷರನ್ನು ತಮ್ಮದೇ ಆದ ರೀತಿಯಲ್ಲಿ ಗೌರವಿಸಲು ಈ ಸ್ಟಾರ್ಟಪ್ ನಿರ್ಧರಿಸಿದ್ದು, ಅವರ ಹೆಸರನ್ನು ಅವರ ಹೊಸ ಚಹಾಕ್ಕೆ ಇಟ್ಟಿದೆ. ಅಧ್ಯಕ್ಷರ ಶೌರ್ಯಕ್ಕೆ ಗೌರವವಾಗಿ ತನ್ನ ಚಹಾವನ್ನು ಝೆಲೆನ್ಸ್ಕಿ ಎಂದು ಹೆಸರಿಸಲು ಸ್ಟಾರ್ಟ್-ಅಪ್ ನಿರ್ಧರಿಸಿದೆ.

    ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸುಗಂಧ ಚಹಾದ ನಿರ್ದೇಶಕ ರಂಜಿತ್ ಬರುವಾ, ‘ಝೆಲೆನ್ಸ್ಕಿ’ ಬ್ರ್ಯಾಂಡ್, ಪ್ರಬಲ ಅಸ್ಸಾಂ ಚಹಾವನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಝೆಲೆನ್ಸ್ಕಿ ಬ್ರ್ಯಾಂಡ್ ಚಹಾದ ಚಿತ್ರವನ್ನು ಟೀ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ಅಧಿಕಾರಿ ಜೋಯ್ದೀಪ್ ಫುಕನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

    ಯುದ್ಧ ಪೀಡಿತ ಉಕ್ರೇನ್‍ನಿಂದ ಪಾರಾಗುವ ಯುಎಸ್ ಪ್ರಸ್ತಾಪವನ್ನು ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷರ ಶೌರ್ಯ ಮತ್ತು ಧೈರ್ಯವನ್ನು ಗೌರವಿಸುವುದು ನಮ್ಮ ಮೂಲ ಆಲೋಚನೆಯಾಗಿದೆ. ಝೆಲೆನ್ಸ್ಕಿ ಅವರು ಯುದ್ಧ ಭೂಮಿ ತೊರೆಯದೇ ಕೊನೆಯ ಸೈನಿಕ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ಇದು ಅವರ ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಸುಗಂಧ ಚಹಾದ ನಿರ್ದೇಶಕ ರಂಜಿತ್ ಬರುವಾ ತಿಳಿಸಿದರು. ಆರೊಮ್ಯಾಟಿಕ್ ಟೀ ಕಂಪನಿಯ ಝೆಲೆನ್ಸ್ಕಿ ಬ್ರಾಂಡ್ ಚಹಾವು ಆನ್‍ಲೈನ್‍ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಾನೂ ಹಿಂದೂ ಸಮಾಜದಲ್ಲಿಯೇ ಹುಟ್ಟಿದ್ದೇನೆ: ಎಚ್‍ಡಿಕೆ

    ರಷ್ಯಾದ ಆಕ್ರಮಣದ ವಿರುದ್ಧ ಕೊನೆಯ ಸೈನಿಕರು ಇರುವವರೆಗೆ ಹೋರಾಡಲು ಪ್ರತಿಜ್ಞೆ ಮಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅನೇಕರು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಅವರ ದೇಶವನ್ನು ಉಳಿಸಲು ಮಾಡುವ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮಹಾತ್ಮ ಗಾಂಧಿ ಧರ್ಮಪತ್ನಿ ಕೂಡ ತಲೆಗೆ ಸೆರಗು ಹಾಕುತ್ತಿದ್ದರು: ಹಿಜಬ್‌ ಬೆಂಬಲಿಸಿದ ಹೆಚ್‌ಡಿಕೆ