Tag: Ukraine

  • ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

    ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

    ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ಸಾರಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಒಂದಲ್ಲ ಒಂದು ವಿಷಯದಲ್ಲಿ ಚರ್ಚೆಗೆ ಒಳಗಾಗುತ್ತಿದ್ದಾರೆ. ಆಡಳಿತ ಹಾಗೂ ಯುದ್ಧ ತಂತ್ರಗಾರಿಕೆ ಅಷ್ಟೇ ಅಲ್ಲ, ಪುಟಿನ್‌ ತಮ್ಮ ಜೀವನ ಶೈಲಿಯಲ್ಲೂ ಕುತೂಹಲಕಾರಿ ವ್ಯಕ್ತಿತ್ವದವರು.

    ಯುದ್ಧದ ಕಾರಣದಿಂದಾಗಿ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಪುಟಿನ್‌ ಗುರುತಿಸಿಕೊಂಡಿದ್ದಾರೆ. ಅವರು ದಶಕಗಳಿಂದ ರಷ್ಯಾದಲ್ಲಿ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದಾರೆ. ಪಾಶ್ಚಿಮಾತ್ಯರು ಮಾತ್ರ ಪುಟಿನ್‌ ಮೇಲೆ ಎಚ್ಚರಿಕೆ ಕಣ್ಣಿಟ್ಟಿದ್ದಾರೆ. 21 ನೇ ಶತಮಾನದಲ್ಲಿ ಉಕ್ರೇನ್‌ ಮೇಲೆ ಯುದ್ಧವನ್ನು ಪ್ರಾರಂಭಿಸುವ ಪುಟಿನ್ ನಿರ್ಧಾರವು ಕೆಲವು ಅನುಭವಿ ರಾಜತಾಂತ್ರಿಕರು ಮತ್ತು ನೀತಿ ನಿರೂಪಕರನ್ನು ಸಹ ಚಕಿತರನ್ನಾಗಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್‌ ಗರ್ಲ್‌ಫ್ರೆಂಡ್‌- ಯಾರೀಕೆ?

    ತಮ್ಮ ವ್ಯಕ್ತಿತ್ವ ಹಾಗೂ ನಿರ್ಧಾರಗಳ ಮೂಲಕವೇ ಜಗತ್ತನ್ನು ಚಕಿತಗೊಳಿಸುವ ಪುಟಿನ್‌ ಎಷ್ಟು ಶ್ರೀಮಂತರು ಗೊತ್ತೆ? ಅವರ ಜೀವನಶೈಲಿ ಹೇಗಿದೆ ಎಂದು ತಿಳಿದಿದೆಯೇ?

    ಫಾರ್ಚೂನ್ ಪ್ರಕಾರ ಪುಟಿನ್ ವಾರ್ಷಿಕ ‌1.06 ಕೋಟಿ ರೂ. (1,40,000 ಯುಎಸ್‌ ಡಾಲರ್) ವೇತನವನ್ನು ಗಳಿಸುತ್ತಾರೆ ಎಂದು ಕ್ರೆಮ್ಲಿನ್ ಉಲ್ಲೇಖಿಸಿದೆ. ಅವರು ಸಾರ್ವಜನಿಕವಾಗಿ ಘೋಷಿಸಿದ ಆಸ್ತಿಗಳಲ್ಲಿ 800 ಚದರಡಿ ಅಪಾರ್ಟ್‌ಮೆಂಟ್, ಟ್ರೇಲರ್ ಮತ್ತು ಮೂರು ಕಾರುಗಳು ಸೇರಿವೆ ಎಂದು ವರದಿ ತಿಳಿಸಿದೆ.

    ಆದರೆ ಪುಟಿನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಹೂಡಿಕೆ ಮತ್ತು ಆಸ್ತಿ ನಿರ್ವಹಣಾ ಕಂಪನಿ ಹರ್ಮಿಟೇಜ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ 2017 ರಲ್ಲಿ ಪುಟಿನ್ ಅವರ ವೈಯಕ್ತಿಕ ಸಂಪತ್ತು 200 ಬಿಲಿಯನ್ ಡಾಲರ್‌ ಎಂದು ತಿಳಿಸಿದೆ.

    ಐಷಾರಾಮಿ ವಾಚ್‌ಗಳು
    ಪುಟಿನ್ ಐಷಾರಾಮಿ ಕೈಗಡಿಯಾರಗಳನ್ನು ಧರಿಸುತ್ತಾರೆ. 4.57 ಕೋಟಿ ರೂ. ಮೌಲ್ಯದ ಪಾಟೆಕ್ ಫಿಲಿಪ್ ಹಾಗೂ 3.81 ಕೋಟಿ ರೂ. ಮೌಲ್ಯದ ಲ್ಯಾಂಗ್ ಮತ್ತು ಸೊಹ್ನ್‌ ಟೂಬೊಗ್ರಾಫ್ ವಾಚ್‌ಗಳನ್ನು ಹಾಕುತ್ತಾರೆ.

    ಹತ್ತು ವರ್ಷಗಳ ಹಿಂದೆ ಎಬಿಸಿ ನ್ಯೂಸ್, ರಷ್ಯಾದ ವಿರೋಧ ಗುಂಪು ಸಾಲಿಡಾರಿಟಿ ಬಿಡುಗಡೆ ಮಾಡಿದ ವೀಡಿಯೋವನ್ನು ಆಧರಿಸಿ ವರದಿಯೊಂದನ್ನು ಮಾಡಿತ್ತು. ಅದರಲ್ಲಿ ಪುಟಿನ್ 5.33 ಕೋಟಿ ರೂ. ಮೌಲ್ಯದ ಐಷಾರಾಮಿ ಕೈಗಡಿಯಾರಗಳನ್ನು ಹೊಂದಿದ್ದಾರೆಂದು. ಅಂದರೆ ಅವರ ಅಧಿಕೃತ ಸಂಬಳದ ಆರು ಪಟ್ಟು ಬೆಲೆ ಆ ವಾಚ್‌ನದ್ದು. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ಕಪ್ಪು ಸಮುದ್ರ ದಂಡೆಯಲ್ಲಿ ಮಹಲು
    ಪುಟಿನ್, ಕಪ್ಪು ಸಮುದ್ರದ ದಂಡೆಯಲ್ಲಿರುವ 1,90,000 ಚದರಡಿ ಮಹಲಿನ ಮಾಲೀಕ. ಈ ಬಂಗಲೆಯಲ್ಲಿ ಅಮೃತಶಿಲೆಯ ಈಜುಕೊಳ, ಸ್ಪಾ, ಆಂಫಿಥಿಯೇಟರ್, ಅತ್ಯಾಧುನಿಕ ಐಸ್ ಹಾಕಿ ರಿಂಕ್, ವೇಗಾಸ್ ಶೈಲಿಯ ಕ್ಯಾಸಿನೊ ಮತ್ತು ರಾತ್ರಿ ಕ್ಲಬ್. ನೂರಾರು ಡಾಲರ್ ಮೌಲ್ಯದ ವೈನ್‌ಗಳಿರುವ ಬಾರ್‌ ಹೊಂದಿದೆ.

    ಶ್ರೀಮಂತ ಪುಟಿನ್‌ ಅವರ ಮಹಲಿನ ಚಿತ್ರಗಳನ್ನು ಈ ಹಿಂದೆ ರಷ್ಯಾದ ವಿರೋಧ ಪಕ್ಷದ ನಾಯಕರು ಬಿಡುಗಡೆ ಮಾಡಿದ್ದರು. ಅದನ್ನು ʼಪುಟಿನ್ ಕಂಟ್ರಿ ಕಾಟೇಜ್ʼ ಎಂದು ಕರೆದಿದ್ದರು. 3.81 ಕೋಟಿ ಮೌಲ್ಯದ ಊಟದ ಕೋಣೆಯ ಪೀಠೋಪಕರಣಗಳು, 41.17 ಲಕ್ಷ ರೂ. ಮೌಲ್ಯದ ಬಾರ್ ಟೇಬಲ್, ಅಲಂಕಾರಿಕ 64,809 ರೂ. ಇಟಾಲಿಯನ್ ಟಾಯ್ಲೆಟ್ ಬ್ರಷ್‌ಗಳು ಮತ್ತು 95,308 ರೂ. ಮೌಲ್ಯದ ಟಾಯ್ಲೆಟ್ ಪೇಪರ್ ಹೋಲ್ಡರ್‌ಗಳೊಂದಿಗೆ ಅಲಂಕರಿಸಿದ ಸ್ನಾನಗೃಹ ಈ ಮಹಲಿನಲ್ಲಿದೆ. ಇದನ್ನೂ ಓದಿ: ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ

    ವಿಮಾನದಲ್ಲಿ ಚಿನ್ನದ ಶೌಚಾಲಯ
    ಕಪ್ಪು ಸಮುದ್ರದ ಮಹಲು ಹೊರತುಪಡಿಸಿಯೂ, 69 ವರ್ಷ ವಯಸ್ಸಿನ ರಷ್ಯಾ ಅಧ್ಯಕ್ಷ ಪುಟಿನ್‌ ಅವರು 19 ಇತರೆ ಮನೆಗಳು, 700 ಕಾರುಗಳು, 58 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಮಾಲೀಕರಾಗಿದ್ದಾರೆ. ಈ ವಿಮಾನಗಳಲ್ಲಿ ಒಂದು ʻದಿ ಫ್ಲೈಯಿಂಗ್ ಕ್ರೆಮ್ಲಿನ್ʼ ಅನ್ನು ಬಹುಕೋಟಿ ವೆಚ್ಚದಲ್ಲಿ ರೂಪಿಸಲಾಗಿದೆ. ಚಿನ್ನದಿಂದ ಮಾಡಿದ ಶೌಚಾಲಯವನ್ನು ವಿಮಾನ ಹೊಂದಿದೆ.

  • ಮಾರುಕಟ್ಟೆಗಳಲ್ಲಿ ಸಕ್ಕರೆಗಾಗಿ ರಷ್ಯನ್ನರ ಕಿತ್ತಾಟ- ವೀಡಿಯೋ ವೈರಲ್‌

    ಮಾರುಕಟ್ಟೆಗಳಲ್ಲಿ ಸಕ್ಕರೆಗಾಗಿ ರಷ್ಯನ್ನರ ಕಿತ್ತಾಟ- ವೀಡಿಯೋ ವೈರಲ್‌

    ಮಾಸ್ಕೋ: ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವುದು ರಷ್ಯಾದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ. ರಷ್ಯಾದ ಸೂಪರ್‌ ಮಾರುಕಟ್ಟೆಗಳಲ್ಲಿ ಸಕ್ಕರೆಗಾಗಿ ಜನರು ಪರಸ್ಪರ ಕಿತ್ತಾಡುತ್ತಿರುವ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

    ಉಕ್ರೇನ್‌ ವಿರುದ್ಧದ ಯುದ್ಧದ ಪರಿಣಾಮ ಆರ್ಥಿಕ ಕುಸಿತದಿಂದಾಗಿ ದೇಶದ ಕೆಲವು ಮಳಿಗೆಗಳು ಪ್ರತಿ ಗ್ರಾಹಕನಿಗೆ 10 ಕೆ.ಜಿ. ಸಕ್ಕರೆ ಕೊಳ್ಳಲು ಮಿತಿಯನ್ನು ವಿಧಿಸಿವೆ. 2015ರ ನಂತರ ರಷ್ಯಾದಲ್ಲಿ ವಾರ್ಷಿಕ ಹಣದುಬ್ಬರವು ಗರಿಷ್ಠ ಮಟ್ಟವನ್ನು ತಲುಪಿರುವುದರಿಂದ ಸಕ್ಕರೆಯ ಬೆಲೆ ಗಗನಕ್ಕೇರಿದೆ. ಇದನ್ನೂ ಓದಿ: ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ, 1 ಟೀಗೆ 100 ರೂ.

    ಶಾಪ್‌ಗಳಲ್ಲಿ ಗುಂಪುಗೂಡಿರುವ ಜನರು, ಸಕ್ಕರೆ ಪೊಟ್ಟಣಗಳಿಗಾಗಿ ಪರಸ್ಪರ ಕಿತ್ತಾಡುತ್ತಿರುವುದು ಹಾಗೂ ಒಬ್ಬರ ಮೇಲೊಬ್ಬರು ಮುಗಿಬಿದ್ದು ಪೊಟ್ಟಣಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ನಡೆಸುತ್ತಿರುವುದರಿಂದ ಸಾಮಾನ್ಯ ಜನತೆ ಎದುರಿಸುತ್ತಿರುವ ತೊಂದರೆಯನ್ನು ಈ ವೀಡಿಯೋ ಪ್ರತಿಬಿಂಬಿಸಿದೆ.

    ರಷ್ಯಾದ ಸರ್ಕಾರಿ ಅಧಿಕಾರಿಗಳು, ಸಕ್ಕರೆ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಗ್ರಾಹಕರು ಅಂಗಡಿಗಳಲ್ಲಿ ಖರೀದಿಸುವ ಭೀತಿಯಿಂದ ಬಿಕ್ಕಟ್ಟು ಹುಟ್ಟುತ್ತಿದೆ ಎಂದು ತಿಳಿಸಿದ್ದಾರೆ. ಆದರೂ ಸರ್ಕಾರವು ದೇಶದಿಂದ ಸಕ್ಕರೆ ರಫ್ತಿನ ಮೇಲೆ ತಾತ್ಕಾಲಿಕ ನಿಷೇಧ ವಿಧಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್‌ ಗರ್ಲ್‌ಫ್ರೆಂಡ್‌- ಯಾರೀಕೆ?

    ಸಕ್ಕರೆಯ ಬೆಲೆಯು ಶೇ.31ರಷ್ಟು ಹೆಚ್ಚಾಗಿದೆ. ಆದರೆ ಪಾಶ್ಚಿಮಾತ್ಯ ನಿರ್ಬಂಧಗಳಿಂದಾಗಿ ಇತರೆ ಉತ್ಪನ್ನಗಳು ಸಹ ದುಬಾರಿಯಾಗಿವೆ. ಕಾರುಗಳು, ಗೃಹೋಪಯೋಗಿ ವಸ್ತುಗಳು ಮತ್ತು ಟಿ.ವಿ ಮೊದಲಾದ ವಿದೇಶದಿಂದ ಆಮದು ಮಾಡುತ್ತಿದ್ದ ಸರಕುಗಳ ಕೊರತೆ ಉಂಟಾಗಿದೆ. ಬೆಲೆಗಳು ದೇಶದಾದ್ಯಂತ ಏರುತ್ತಿರುವುದರಿಂದ ನಾಗರಿಕರು ಇದರ ಎದುರಿಸುತ್ತಿದ್ದಾರೆ.

  • ಉಕ್ರೇನ್‌ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್‌ ಗರ್ಲ್‌ಫ್ರೆಂಡ್‌- ಯಾರೀಕೆ?

    ಉಕ್ರೇನ್‌ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್‌ ಗರ್ಲ್‌ಫ್ರೆಂಡ್‌- ಯಾರೀಕೆ?

    ಮಾಸ್ಕೊ: ಉಕ್ರೇನ್‌ ಮೇಲಿನ ರಷ್ಯಾ ಯುದ್ಧದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಪ್ರೇಯಸಿ ಹೆಸರು ಹೆಚ್ಚು ಸುದ್ದಿಯಾಗುತ್ತಿದೆ.

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ ನಂತರ ಪುಟಿನ್‌ ಅವರ ಗರ್ಲ್‌ಫ್ರೆಂಡ್‌ ತನ್ನ ಮೂವರು ಮಕ್ಕಳೊಂದಿಗೆ ಸ್ವಿಟ್ಜರ್‌ಲೆಂಡಿನ ಪ್ರಸಿದ್ಧ ವಿಲ್ಲಾವೊಂದರಲ್ಲಿ ಅಡಗಿಕೊಂಡಿದ್ದಾರೆ. ಅವರು ದೇಶದಿಂದ ಹೊರಹಾಕಬೇಕು ಎಂದು ಸ್ವಿಟ್ಜರ್‌ಲೆಂಡ್‌ಗೆ ಅನೇಕ ಮಂದಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ರಷ್ಯಾ, ಉಕ್ರೇನ್‌, ಬೆಲಾರಸ್‌ನ ಅನೇಕರು ಸ್ವಿಟ್ಜರ್‌ಲೆಂಡ್‌ಗೆ ಈ ಒತ್ತಾಯ ಮಾಡಿದ್ದಾರೆ. ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಸುಮಾರು 50,000ಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ.

    ಜಿಮ್ನಾಸ್ಟಿಕ್‌ ಒಲಿಂಪಿಕ್‌ ಚಿನ್ನ ಪದಕ ವಿಜೇತೆ 38 ವರ್ಷದ ಅಲೀನಾ ಕಬೇವಾ ಅವರೇ ಪುಟಿನ್‌ ಅವರ ಪ್ರೇಯಸಿ ಎಂದು ಹೇಳಲಾಗಿದೆ. ಆದರೆ ರಷ್ಯಾ ಅಧ್ಯಕ್ಷ ಪುಟಿನ್‌, ಅಲೀನಾ ಅವರನ್ನು ತನ್ನ ಪ್ರೇಯಸಿ ಎಂದು ಎಲ್ಲಿಯೂ ಅಧಿಕೃತವಾಗಿ ಪರಿಚಯಿಸಿಕೊಂಡಿಲ್ಲ. ಇದನ್ನೂ ಓದಿ: ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ

    ಪ್ರಸ್ತುತ ಯುದ್ಧದ ಹೊರತಾಗಿಯೂ ಸ್ವಿಟ್ಜರ್‌ಲೆಂಡ್‌, ಪುಟಿನ್ ಆಡಳಿತದ ಸಹಚರರಿಗೆ ಆಶ್ರಯ ನೀಡುವುದನ್ನು ಮುಂದುವರೆಸಿದೆ ಎಂದು ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್‌ನಲ್ಲಿ ಅರ್ಜಿ ಬರೆದು ಪೋಸ್ಟ್‌ ಮಾಡಲಾಗಿದೆ.

    ಉಕ್ರೇನ್‌ ಮೇಲಿನ ಯುದ್ಧದ ಸಂದರ್ಭದಲ್ಲೇ ಅಲೀನಾ ಅವರನ್ನು ಸ್ವಿಟ್ಜರ್‌ಲೆಂಡ್‌ಗೆ ಕಳುಹಿಸಲಾಗಿದೆ. ಈಕೆ ಪುಟಿನ್‌ ಅವರ ಯುನೈಟೆಡ್‌ ರಷ್ಯಾ ಪಕ್ಷವನ್ನು ಪ್ರತಿನಿಧಿಸುವ ಸಂಸತ್‌ ಸದಸ್ಯರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ಏಳು ವರ್ಷಗಳಿಂದ ಪ್ರಮುಖ ಕ್ರೆಮ್ಲಿನ್‌ ಪರ ಮಾಧ್ಯಮ ಸಮೂಹದ ನ್ಯಾಷನಲ್‌ ಮೀಡಿಯಾ ಗ್ರೂಪ್‌ ನಿರ್ದೇಶಕರ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಅಲೀನಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಸ್ಕೋದಲ್ಲಿ ನಡೆದ ಡಿವೈನ್‌ ಗ್ರೇಸ್‌ ರಿದಮಿಕ್‌ ಜಿಮ್ನಾಸ್ಟಿಕ್‌ ಟೂರ್ನಮೆಂಟ್‌ನಲ್ಲಿ ಅವರು ಕೊನೆಯ ಬಾರಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಇವರು 2004ರ ಒಲಿಂಪಿಕ್ಸ್‌ನಲ್ಲಿ ರಿದಮಿಕ್‌ ಜಿಮ್ನಾಸ್ಟಿಕ್‌ನಲ್ಲಿ ಚಿನ್ನ ಗೆದ್ದಿದ್ದರು.  ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸುಧಾಕರ್ ರಾಜೀನಾಮೆಗೆ ಎಎಪಿ ಆಗ್ರಹ

    ರಷ್ಯಾದ ರಾಜಕೀಯ, ಮಾಧ್ಯಮ ಮತ್ತು ಮಾಜಿ ಅಥ್ಲೀಟ್ ಅಲೀನಾ ಕಬೇವಾ ನಿಮ್ಮ ದೇಶದಲ್ಲಿ ರಷ್ಯಾದ ಒಕ್ಕೂಟದ ಮೇಲೆ ವಿಧಿಸಲಾದ ನಿರ್ಬಂಧಗಳ ಪರಿಣಾಮಗಳನ್ನು ಮರೆಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಉಕ್ರೇನ್‌ ಮೇಲಿನ ಯುದ್ಧ ನಿರ್ಣಯದಲ್ಲಿ ತಟಸ್ಥ ಧೋರಣೆ ಹೊಂದಿರುವ ಸ್ವಿಟ್ಜರ್‌ಲೆಂಡ್‌ ತನ್ನ ನಿಯಮವನ್ನು ಉಲ್ಲಂಘಿಸಿದೆ. ಕೂಡಲೇ ಅವರನ್ನು ದೇಶದಿಂದ ಹೊರಹಾಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬಂದಿದೆ.

  • ಉಕ್ರೇನ್‍ನಿಂದ ಹಿಂದಿರುಗಿದ ವೈದ್ಯ ವಿದ್ಯಾರ್ಥಿಗಳಿಗೆ 60 ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಕಲಿಕೆಗೆ ಅವಕಾಶ: ಸುಧಾಕರ್

    ಉಕ್ರೇನ್‍ನಿಂದ ಹಿಂದಿರುಗಿದ ವೈದ್ಯ ವಿದ್ಯಾರ್ಥಿಗಳಿಗೆ 60 ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಕಲಿಕೆಗೆ ಅವಕಾಶ: ಸುಧಾಕರ್

    -ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಉನ್ನತ ಮಟ್ಟದ ಸಮಿತಿ ರಚನೆ

    ಬೆಂಗಳೂರು: ಉಕ್ರೇನ್ ನಿಂದ ಹಿಂದಿರುಗಿದ ವೈದ್ಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು, ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲೇ ಅವರ ಕಲಿಕೆ ಮುಂದುವರಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ವಿಧಾನಸೌಧದಲ್ಲಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಕ್ರೇನ್ ಹಾಗೂ ರಷ್ಯಾ ನಡುವೆ ನಿರಂತರವಾಗಿ ಯುದ್ಧ ನಡೆಯುತ್ತಿದೆ. ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 700ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಅವರ ಶೈಕ್ಷಣಿಕ ಭವಿಷ್ಯ ರೂಪಿಸುವ ಬಗ್ಗೆ ಅವರೊಂದಿಗೆ ಚರ್ಚಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು. ಅದರಂತೆ ಚರ್ಚೆ ನಡೆಸಿದ್ದು, ತಾತ್ಕಾಲಿಕವಾಗಿ ಒಂದು ಅಭಿಪ್ರಾಯಕ್ಕೆ ಬರಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ: ಆರಗ ಜ್ಞಾನೇಂದ್ರ

    ಮೊದಲ ವರ್ಷದಿಂದ ಆರಂಭವಾಗಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಇಲ್ಲಿದ್ದಾರೆ. ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿವೆ. ಈ ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ತಮ್ಮ ವ್ಯಾಸಂಗವನ್ನು ಆಯಾ ವರ್ಷದಲ್ಲೇ ಮುಂದುವರಿಸುವಂತೆ ಕ್ರಮ ವಹಿಸುವಂತೆ ತೀರ್ಮಾನಿಸಲಾಗಿದೆ. ಈಗ ನಡೆಯುತ್ತಿರುವ ತರಬೇತಿಯನ್ನೇ ಮುಂದುವರಿಸಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ ಒಂದು ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರು ಹಾಗೂ ಮೆಡಿಕಲ್ ಕಾಲೇಜುಗಳ ಕೆಲ ಡೀನ್ ಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಉಕ್ರೇನ್‍ನಿಂದ ಹಿಂದಿರುಗಿದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು, ಎನ್‍ಎಂಸಿ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಬೇಡಿಕೆಗಳನ್ನು ಸಿದ್ಧಪಡಿಸುವ ಕೆಲಸವನ್ನು ಈ ಸಮಿತಿ ಮಾಡಲಿದೆ. ಈ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಆರೋಗ್ಯ ಸಚಿವರ ಮುಂದೆ ಇಡಲಾಗುವುದು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ಕ್ರಮ ವಹಿಸುತ್ತಿದ್ದಾರೆ ಎಂದರು.

    ಯುದ್ಧ ಬೇಗ ಕೊನೆಯಾಗಲಿ ಎಂಬುದೇ ಎಲ್ಲರ ಆಶಯ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರಲಿದೆ ಎಂದು ಗಮನಿಸಿ ಕಾನೂನಿನ ಚೌಕಟ್ಟಿನೊಳಗೆ ಕ್ರಮ ವಹಿಸಿ ಅವರ ಉತ್ತಮ ಭವಿಷ್ಯಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಸುರಕ್ಷಿತವಾಗಿ ಹಿಂದಿಗಿರುವುದೇ ದೊಡ್ಡ ಭಾಗ್ಯ. ನರೇಂದ್ರ ಮೋದಿಯವರು ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲವಾಗಿ ಬೆಳಗಬೇಕಿದೆ. ಎಲ್ಲರೂ ಉತ್ತಮ ಮನೋಸ್ಥೈರ್ಯದಿಂದ ಇರಬೇಕು. ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಇತ್ತು. ಈಗ ಸರ್ಕಾರ ಮಾಡಿರುವ ತೀರ್ಮಾನಕ್ಕೆ ವಿದ್ಯಾರ್ಥಿಗಳು ಕೂಡ ಒಪ್ಪಿದ್ದಾರೆ. ವೈದ್ಯಕೀಯ ಶಿಕ್ಷಣದಲ್ಲಿ ಮಾರ್ಪಾಡು ತರುವ ಬಗ್ಗೆ ವಿದ್ಯಾರ್ಥಿಗಳು ಸಲಹೆ ನೀಡಿದ್ದಾರೆ. ಈ ಬಗ್ಗೆಯೂ ಸಮಿತಿಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ಮೂರು ಕೃಷಿ ಕಾಯ್ದೆಗಳಿಗೆ ಶೇ.86 ರೈತ ಸಂಘಟನೆಗಳ ಬೆಂಬಲವಿತ್ತು: ʻಸುಪ್ರೀಂʼ ಸಮಿತಿ ವರದಿ ಬಹಿರಂಗ

    ಶುಲ್ಕ ಇಲ್ಲ:
    ಸದ್ಯಕ್ಕೆ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳನ್ನು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಆದರೆ ಅವರ ಕಲಿಕೆ, ತರಬೇತಿಯನ್ನು ಇಲ್ಲಿ ಮುಂದುವರಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿ ಮಾಡಬೇಕಿಲ್ಲ. ಉಚಿತವಾಗಿಯೇ ಶಿಕ್ಷಣ ಮುಂದುವರಿಸಬಹುದು. ಸಮಿತಿಯಿಂದ ಕೇಂದ್ರ ಸರ್ಕಾರಕ್ಕೆ ಎಲ್ಲ ಬಗೆಯ ಮನವಿಗಳನ್ನು ಸಲ್ಲಿಸಲಾಗುವುದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಸ್ಪಷ್ಟಪಡಿಸಿದರು.

  • ಉಕ್ರೇನ್ ವೈದ್ಯ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ – ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ

    ಉಕ್ರೇನ್ ವೈದ್ಯ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ – ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ

    ಬೆಂಗಳೂರು: ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜುಗಳಲ್ಲಿ ಕಲಿಕೆಗೆ ನೆರವಾಗಲು ಹೊಸ ಸಮಿತಿ ರಚನೆ ಮಾಡಿರುವುದಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿಕೆ ನೀಡಿದರು.

    ಉಕ್ರೇನ್ ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸುಧಾಕರ್, ಉಕ್ರೇನ್‌ನಿಂದ ಕರ್ನಾಟಕಕ್ಕೆ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇಫಾಗಿ ಬಂದಿದ್ದಾರೆ. ಅವರ ಜೊತೆ ಸಭೆ ನಡೆಸುವಂತೆ ಸಿಎಂ ಹೇಳಿದ್ದರು. ಹೀಗಾಗಿ ಇಂದು ಸಭೆ ನಡೆಸಿದ್ದೇವೆ ಎಂದರು.

    ಉಕ್ರೇನ್‌ನಿಂದ ಬಂದಿರುವ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು. ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳು ಇವೆ. ತಕ್ಷಣಕ್ಕೆ ಅದೇ ಕಾಲೇಜುಗಳಲ್ಲಿ ಉಕ್ರೇನ್‌ನಿಂದ ಬಂದಿರುವ ವಿದ್ಯಾರ್ಥಿಗಳು ಕಲಿಕೆ ಮುಂದುವರಿಸಬಹುದು. ವಿದ್ಯಾರ್ಥಿಗಳು ಇರುವ ಜಿಲ್ಲೆಗಳಲ್ಲೇ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ಇದನ್ನೂ ಓದಿ: ಮಾಧುಸ್ವಾಮಿ ನನಗೆ ದೊಡ್ಡ ಭೂತದ ತರ ಕಾಣಿಸಿಬಿಟ್ರು: ಶಾಸಕ ರಂಗನಾಥ್

    ನಾನು ಸಮಿತಿಯೊಂದನ್ನು ರಚನೆ ಮಾಡಿದ್ದೇನೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿದೆ. ಉಕ್ರೇನ್‌ನಿಂದ ವಾಪಸ್ ಆಗಿರುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಮಿತಿ ವರದಿ ನೀಡಲಿದೆ. ಒಂದು ವಾರ ಅಥವಾ 10 ದಿನಗಳಲ್ಲಿ ಸಮಿತಿ ವರದಿ ಕೊಡಲಿದೆ. ಇದನ್ನ ನಾವು ಕೇಂದ್ರಕ್ಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

    ನ್ಯಾಯ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ನಡೆಸಿದ್ದಾರೆ. ಯುದ್ಧ ಬಹಳ ಬೇಗ ಮುಗಿಯುವ ಲಕ್ಷಣ ಇದೆ. ಇರುವ ನಿಯಮಗಳಡಿ ಅವರ ಭವಿಷ್ಯ ರೂಪಿಸುವ ಕೆಲಸ ಮಾಡುತ್ತೇವೆ. ಅವರು ಬದುಕಿ ಬಂದಿರುವುದೇ ನಮ್ಮ ಭಾಗ್ಯ. ನಿಮ್ಮ ಭವಿಷ್ಯ ಉಜ್ವಲವಾಗಬೇಕು. ಮಾನಸಿಕವಾಗಿ ಕುಗ್ಗಬಾರದು. ಎಲ್ಲಾ ರೀತಿಯ ಸಹಕಾರವನ್ನು ಕೊಡುವ ಕೆಲಸ ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ತವರಿಗೆ ನವೀನ್ ಮೃತದೇಹ- ಪ್ರಧಾನಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ

    ಕಲಿಕೆ ಹಿಂದೆ ಬೀಳುತ್ತದೆ ಎಂಬ ಚಿಂತೆ ವಿದ್ಯಾರ್ಥಿಗಳಲ್ಲಿತ್ತು. ಇದೀಗ ಉತ್ತಮ ಭವಿಷ್ಯ ರೂಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ರಾಜ್ಯದಲ್ಲಿರುವ ಕಾಲೇಜುಗಳಲ್ಲಿ ಅವರ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಆದರೆ ಮೆಡಿಕಲ್ ಕಾಲೇಜುಗಳಲ್ಲಿ ಕಲಿಕೆಗೆ ತಾತ್ಕಾಲಿಕ ಅವಕಾಶ ಮಾಡಿಕೊಡುತ್ತೇವೆ. ಎಲ್ಲವೂ ಉಚಿತವಾಗಿರುತ್ತದೆ. ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ತರಲು ಹಲವು ಸಲಹೆ ನೀಡಿದ್ದಾರೆ. ಅದನ್ನು ಸಮಿತಿಯ ಮುಂದೆ ಹೇಳಲು ಮನವಿ ಮಾಡಿಕೊಂಡಿದ್ದೆನೆ. ಈ ವಿದ್ಯಾರ್ಥಿಗಳು ಕಲಿಕೆಗೆ ಶುಲ್ಕ ಕೊಡಬೇಕಾಗಿಲ್ಲ ಸಮಿತಿ ವರದಿ ಬಂದ ಬಳಿಕ ಶಾಶ್ವತ ಪರಿಹಾರ ನೀಡುತ್ತೆವೆ ಎಂದರು.

  • ದೇಶಪ್ರೇಮ ಸಾರುವ ಟ್ಯಾಟೂಗಳಿಗೆ ಉಕ್ರೇನ್‍ನಲ್ಲಿ ಸಖತ್ ಡಿಮ್ಯಾಂಡ್

    ದೇಶಪ್ರೇಮ ಸಾರುವ ಟ್ಯಾಟೂಗಳಿಗೆ ಉಕ್ರೇನ್‍ನಲ್ಲಿ ಸಖತ್ ಡಿಮ್ಯಾಂಡ್

    ಕೀವ್: ಟ್ಯಾಟೂ ಎಂದರೆ ಇಂದಿನ ಯುವ ಪಿಳಿಗೆ ಅವರಿಗೆ ಸಖತ್ ಕ್ರೇಜ್ ಇದ್ದೆ ಇರುತ್ತದೆ. ಆದರೆ ಇದೀಗ ಯುದ್ಧಪೀಡಿತ ಉಕ್ರೇನ್‍ಲ್ಲಿ ದೇಶ ಪ್ರೇಮ ಸಾರುವ ಟ್ಯಾಟೂ ಕ್ರೇಜ್ ಹೆಚ್ಚಾಗಿದೆ.

    ಉಕ್ರೇನಿನ ಟ್ಯಾಟೂ ಪಾರ್ಲರ್‌ಗಳಲ್ಲಿ ಜನರು ತಮ್ಮ ಮೈಮೇಲೆ ಉಕ್ರೇನ್ ಬಾವುಟ, ಸೇನೆಯ ಚಿಹ್ನೆ, ಯುದ್ಧವಿಮಾನ ಚಿತ್ರ ಮತ್ತಿತರ ಚಿಹ್ನೆಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ದೇಶಪ್ರೇಮ ಸಾರುವ ಫಲಕಗಳಿಗೆ ಬೇಡಿಕೆ ಕುದುರಿದೆ.

    ಉಕ್ರೇನಿನ ಟ್ಯಾಟೂ ಪಾರ್ಲರ್‌ಗಳಲ್ಲಿ ಜನರು ತಮ್ಮ ದೇಹದ ಮೇಲೆ ಉಕ್ರೇನ್ ಬಾವುಟ, ಸೇನೆಯ ಚಿಹ್ನೆ, ಯುದ್ಧವಿಮಾನ ಚಿತ್ರ ಮತ್ತಿತರ ಚಿಹ್ನೆಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಟ್ಯಾಟೂ ಪಾರ್ಲರ್‌ಗಳ ಮಾಲೀಕರು ಹೇಳುತ್ತಾರೆ. ಇದನ್ನೂ ಓದಿ: ರಾಜಕೀಯ ಪಕ್ಷಗಳು ಜನರ ನಡುವೆ ಒಡಕು ಮೂಡಿಸುತ್ತಿವೆ: ಗುಲಾಂ ನಾಬಿ ಅಜಾದ್

    ರಷ್ಯಾ, ಉಕ್ರೇನ್ ಮೇಲೆ ನಡೆಸಿರುವ ದಾಳಿ ಅನ್ಯಾಯದ ಪ್ರತೀಕ. ಇದನ್ನು ನಾವು ಸಹಿಸಲಾರೆವು. ರಷ್ಯಾ ಕೃತ್ಯವನ್ನು ಯಾವತ್ತೂ ಮರೆಯಬಾರದೆಂದೇ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದಾಗಿ ಜನರು ಹೇಳುತ್ತಿದ್ದಾರೆ. ರಷ್ಯಾ ಮಾಡಿರುವ ಯುದ್ದದ ಚಿತ್ರಣವನ್ನು ಮುಂದಿನ ಪೀಳಿಗೆಯವರಿಗೂ ದಾಟಿಸುತ್ತೇವೆ ಎಂದು  ಟ್ಯಾಟು ಪ್ರಿಯರು ಹೇಳುತ್ತಿದ್ದಾರೆ.

    ಫೆಬ್ರವರಿ 24 ರಂದು ರಷ್ಯಾ, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತು. ಯುದ್ಧದ ಪರಿಣಾಮವಾಗಿ, ಉಕ್ರೇನ್‍ನಾದ್ಯಂತ 1 ಕೋಟಿಗೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಇದರಲ್ಲಿ ಸುಮಾರು 30 ಲಕ್ಷ ಜನರು ಪೋಲೆಂಡ್, ಸ್ಲೋವಾಕಿಯಾ, ರೊಮೇನಿಯಾ ಮತ್ತು ಹಂಗೇರಿಯಂತಹ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಮಕ್ಕಳು ಸೇರಿದಂತೆ ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಇದುವರೆಗೆ 14,000ಕ್ಕೂ ಹೆಚ್ಚು ರಷ್ಯಾದ ಸೈನಿಕರು ಹತರಾಗಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ.

  • ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ನವೀನ್ ಮೃತದೇಹ ದಾನ

    ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ನವೀನ್ ಮೃತದೇಹ ದಾನ

    ದಾವಣಗೆರೆ: ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ಇಂದು ತಾಯ್ನಾಡಿಗೆ ಆಗಮಿಸಿದ್ದು, ಇದೀಗ ಅದನ್ನು ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ದಾನ ಮಾಡಲಾಗಿದೆ.

    ಹಾವೇರಿ ಸ್ವಗ್ರಾಮ ಚಳಗೇರೆಯಿಂದ ಎಸ್‍ಎಸ್ ಮೆಡಿಕಲ್ ಕಾಲೇಜ್‍ಗೆ ಪೊಲೀಸರ ಭದ್ರತೆಯಲ್ಲಿ ಮೃತದೇಹ ಆಗಮಿಸಿದೆ. ನಂತರ ಅದನ್ನು ಎಸ್‍ಎಸ್ ಮೆಡಿಕಲ್ ಕಾಲೇಜ್ ಅನಾಟಮಿ ಡಿಪಾರ್ಟ್‌ ಮೆಂಟ್‌ ಹಸ್ತಾಂತರಿಸಲಾಯಿತು. ಹಸ್ತಾಂತರಕ್ಕೂ ಮುನ್ನ ತಾಯಿ ವಿಜಯಲಕ್ಷ್ಮಿ, ಸಹೋದರ ಹರ್ಷ ಪೂಜೆ ಮಾಡಿದರು. ಇದನ್ನೂ ಓದಿ: ನವೀನ್ ಮೃತದೇಹ ರಾಜ್ಯಕ್ಕೆ ಆಗಮನ – ಕುಟುಂಬಕ್ಕೆ ಹಸ್ತಾಂತರಿಸಿದ ಸಿಎಂ

    ಮಗನ ಮೃತದೇಹದ ಮುಂದೆ ತಾಯಿ ಹಾಗೂ ಸಹೋದರ ಕಣ್ಣೀರಿಟ್ಟರು. ಅಲ್ಲದೆ ಮಗನಿಗೆ ಲಟಿಕೆ ತೆಗೆದು ತಾಯಿ ಕೈ ಮುಗಿದರೆ, ಸಹೋದರ ನವೀನ್ ಮೃತದೇಹಕ್ಕೆ ಮುತ್ತಿಟ್ಟರು. ಇತ್ತ ಎಸ್‍ಎಸ್ ಮೆಡಿಕಲ್ ಕಾಲೇಜು ಉಪನ್ಯಾಸಕರು ಹಾಗೂ ಸಿಬ್ಬಂದಿ ಕೂಡ ನವೀನ್ ಮೃತದೇಹಕ್ಕೆ ಪೂಜೆ ಸಲ್ಲಿಸಿದರು. ಮಗನ ಮೃತದೇಹದ ಮೇಲೆಯೇ ಬಿದ್ದು ತಾಯಿ ಅತ್ತ ದೃಶ್ಯ ಕಣ್ಣೀರು ತರಿಸುವಂತಿತ್ತು. ಪೂಜೆ ವೇಳೆ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    ತಾಯಿ ಹಾಗೂ ಸಹೋದರ ದೇಹದಾನದ ಪ್ರಕ್ರಿಯೆಗೆ ಸಹಿ ಹಾಕಿದರು. ಎಸ್ ಎಸ್ ಮೆಡಿಕಲ್ ಕಾಲೇಜು ಪ್ರಿನ್ಸಿಪಲ್ ಡಾ ಪ್ರಸಾದ್ ಸಂತಾಪ ಸೂಚಿಸಿ ದೇಹದಾನದ ಪತ್ರವನ್ನು ತೋರಿಸಿದರು. ಇದೇ ವೇಳೆ ಡಾ. ಪ್ರಸಾದ್ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ವೈದ್ಯರು ನವೀನ್ ತಾಯಿಗೆ ಧನ್ಯವಾದ ತಿಳಿಸಿದ ಪ್ರಮಾಣ ಪತ್ರ ನೀಡಿದರು.

  • ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ಕೀವ್: ಮಾಸ್ಕೋದಲ್ಲಿ ಉಕ್ರೇನ್ ಪ್ರಶ್ನೆಗೆ ಅಂತಿಮ ಪರಿಹಾರದ ಯೋಜನೆಗಳು ನಡೆಯುತ್ತಿವೆ. ಇದು 2ನೇ ಮಹಾಯುದ್ಧದ ಸಮಯದಲ್ಲಿ ಯಹೂದಿಗಳ ನರಮೇಧದ ನಾಜಿ ಯೋಜನೆಯನ್ನು ಉಲ್ಲೇಖಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

    ರಷ್ಯಾದ ಆಕ್ರಮಣದ ಕುರಿತು ಇಸ್ರೇಲ್‍ನ ಸಂಸತ್ತಿನಲ್ಲಿ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಜನರು, ರಾಜ್ಯ, ಸಂಸ್ಕೃತಿ ಸಂಪೂರ್ಣ ವಿನಾಶವಾಗಿದೆ. ಇದರಿಂದಾಗಿ 2ನೇ ಮಹಾಯುದ್ಧಕ್ಕೆ ಉಕ್ರೇನ್‍ನ ದಾಳಿಯನ್ನು ಹೋಲಿಸುವ ಸಂಪೂರ್ಣ ಹಕ್ಕು ನನಗಿದೆ ಎಂದರು.

    ಉಕ್ರೇನ್‍ನ ಜನರ ಪ್ರಸ್ತುತ ಪರಿಸ್ಥಿತಿಯನ್ನು 2ನೇ ಮಹಾಯುದ್ಧದಲ್ಲಿ ಯಹೂದಿಗಳ ನರಮೇಧ ಆದಂತೆ ಆಗಿದೆ ಎಂದ ಅವರು, ನಮ್ಮ ಹಾಗೂ ನಿಮ್ಮ ಬೆದರಿಕೆ ಒಂದೇ ಆಗಿದೆ. ಇದರಿಂದಾಗಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎನ್ನುವ ಸಮಯ ಬಂದಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ

    80 ವರ್ಷಗಳ ಹಿಂದೆ ಯಹೂದಿಗಳನ್ನು ಉಳಿಸಲು ಉಕ್ರೇನ್ ಆಯ್ಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಶ್ವದ ನೀತಿವಂತ ಜನರು ಈಗ ಉಕ್ರೇನ್‍ನೊಂದಿಗೆ ನಿಂತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸುಧಾಕರ್ ರಾಜೀನಾಮೆಗೆ ಎಎಪಿ ಆಗ್ರಹ

    ಅಂತಾರಾಷ್ಟ್ರೀಯ ನಾಯಕರನ್ನು ಆಕರ್ಷಿಸಲು ಝೆಲೆನ್ಸ್ಕಿ ಐತಿಹಾಸಿಕ ದುರಂತಗಳನ್ನು ಆಹ್ವಾನಿಸಿದ್ದು ಇದೇ ಮೊದಲಲ್ಲ. ಅವರು ಪರ್ಲ್ ಹಾರ್ಬರ್ ಮತ್ತು ಸೆಪ್ಟೆಂಬರ್ 11, 2001ರ ಭಯೋತ್ಪಾದಕ ದಾಳಿಯ ಸ್ಮರಿಸಿ ಇತರೆ ದೇಶಗಳಿಗೂ ಸಹಾಯವನ್ನು ಮಾಡುವಂತೆ ಮನವಿ ಮಾಡಿದ್ದರು.

  • ಉಕ್ರೇನ್‍ನಿಂದ 22,500 ವಿದ್ಯಾರ್ಥಿಗಳು ವಾಪಸ್- ಆಪರೇಷನ್ ಗಂಗಾ ಪೂರ್ಣ

    ಉಕ್ರೇನ್‍ನಿಂದ 22,500 ವಿದ್ಯಾರ್ಥಿಗಳು ವಾಪಸ್- ಆಪರೇಷನ್ ಗಂಗಾ ಪೂರ್ಣ

    ನವದೆಹಲಿ: ರಷ್ಯಾ, ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಈವರೆಗೂ 22,500 ವಿದ್ಯಾರ್ಥಿಗಳನ್ನು ಉಕ್ರೇನ್‍ನಿಂದ ಕರೆ ತರಲಾಗಿದ್ದು, ಆಪರೇಷನ್ ಗಂಗಾ ಮಿಷನ್ ಪೂರ್ಣವಾಗಿದೆ ಎಂದು ಸುಪ್ರೀಂ ಕೋರ್ಟ್‍ಗೆ ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ.

    ರಷ್ಯಾ, ಉಕ್ರೇನ್ ಹಿನ್ನೆಯಲ್ಲಿ ಉಕ್ರೇನ್‍ನಲ್ಲಿ ಸಿಲುಕೊಂಡಿದ್ದ ಭಾರತೀಯರನ್ನು ವಾಪಸ್ ಕರೆಸಲು ಕೇಂದ್ರ ಸರ್ಕಾರ ಆಪರೇಷನ್ ಗಂಗಾವನ್ನು ಪ್ರಾರಂಭಿಸಿತ್ತು. ರಷ್ಯಾ ಉಕ್ರೇನ್‍ನ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಅಲ್ಲಿನ ವಿಶ್ವವಿದ್ಯಾಲಯಗಳು ನಾಶವಾಗಿದೆ. ಇದರಿಂದಾಗಿ ಉಕ್ರೇನ್‍ನಿಂದ ವಾಪಸ್ ಆದ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಸಂಬಂಧ ಅರ್ಜಿಗಳನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದರು. ಈ ಅರ್ಜಿಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ.

    ಅಟಾರ್ನಿ ಜನರಲ್  ವೇಣುಗೋಪಾಲ್‌  ಇಲ್ಲಿಯವರೆಗೆ 22,500 ವಿದ್ಯಾರ್ಥಿಗಳು ಸ್ವದೇಶಕ್ಕೆ ಬಂದಿದ್ದು, ಈ ದೊಡ್ಡ ಮಿಷನ್ ಪೂರ್ಣವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗುಜರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ – ಇಬ್ಬರು ಸಜೀವ ದಹನ ಓರ್ವ ಗಂಭೀರ

    ಈ ವೇಳೆ ಅವರ ಶಿಕ್ಷಣದ ಬಗ್ಗೆ ಕೇಳಿದ ಮುಖ್ಯ ನ್ಯಾ. ರಮಣ ಅವರು ಕೇಳಿದ ಪ್ರಶ್ನೆಗೆ, ಉಕ್ರೇನ್‍ನಿಂದ ವಾಪಸ್ ಆಗಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಲಾಗುತ್ತಿದೆ. ಭಾರತದಲ್ಲೇ ಅಧ್ಯಯನ ನಡೆಸಲು ಒತ್ತು ನೀಡಲಾಗುವುದು. ಈ ಬಗ್ಗೆ ತಿರ್ಮಾನ ಕೈಗೊಳ್ಳಲು ಸಮಯ ಬೇಕಾಗಬಹುದು ಎಂದು ಉತ್ತರಿಸಿದರು.

    ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದ ಭಾರತಕ್ಕೆ ವಾಪಸ್ ಆದ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಫಾತಿಮಾ ಅಹಾನಾ ಸೇರಿದಂತೆ ಹಲವು ಜನರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಇತ್ಯರ್ಥ ಪಡಿಸುವ ಸಂಬಂಧ ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು.

    ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಉಕ್ರೇನ್ ನಿಂದ ವಾಪಸ್ ಆದ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಕೋರಿಕೊಂಡರು. ಇಷ್ಟು ಮಾತ್ರವಲ್ಲದೇ ಆನ್ಲೈನ್ ಶಿಕ್ಷಣದ ಮೂಲಕ ಎಂಬಿಬಿಎಸ್ ಪಡೆದ ಉಕ್ರೇನ್ ವಿದ್ಯಾರ್ಥಿಗಳ ಪದವಿಯನ್ನು ಭಾರತ ಸರ್ಕಾರ ಒಪ್ಪಿಕೊಳ್ಳಲು ಸೂಚಿಸುವಂತೆ ಅವರು ಮನವಿ ಮಾಡಿದ್ದರು.

    ಕಳೆದ ಫೆಬ್ರವರಿ ಅಂತ್ಯದಿಂದ ಇಲ್ಲಿಯವರೆಗೂ ಆಪರೇಷನ್ ಗಂಗಾ ಯೋಜನೆಯಡಿ ಭಾರತೀಯರನ್ನು ರಕ್ಷಣೆ ಮಾಡಿ ತವರಿಗೆ ಕರೆ ತರಲಾಗಿದೆ. ಈ ಪೈಕಿ ಬಹುತೇಕರು ವಿದ್ಯಾರ್ಥಿಗಳೇ ಅನ್ನೋದು ವಿಶೇಷವಾಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಮೆಡಿಕಲ್ ಸೀಟ್‍ಗಳ ಶುಲ್ಕ ಕಡಿತಕ್ಕೆ ಚಿಂತನೆ – ಏನಿದು ಬೊಮ್ಮಾಯಿ ಎಬಿಸಿ ಸೂತ್ರ?

  • ರಾಜ್ಯದಲ್ಲಿ ಮೆಡಿಕಲ್ ಸೀಟ್‍ಗಳ ಶುಲ್ಕ ಕಡಿತಕ್ಕೆ ಚಿಂತನೆ – ಏನಿದು ಬೊಮ್ಮಾಯಿ ಎಬಿಸಿ ಸೂತ್ರ?

    ರಾಜ್ಯದಲ್ಲಿ ಮೆಡಿಕಲ್ ಸೀಟ್‍ಗಳ ಶುಲ್ಕ ಕಡಿತಕ್ಕೆ ಚಿಂತನೆ – ಏನಿದು ಬೊಮ್ಮಾಯಿ ಎಬಿಸಿ ಸೂತ್ರ?

    ದಾವಣಗೆರೆ: ಕರ್ನಾಟಕದಲ್ಲಿ ಮೆಡಿಕಲ್ ಸೀಟುಗಳ ಶುಲ್ಕವನ್ನು ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ದಾವಣಗೆರೆಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಮೆಡಿಕಲ್ ಕಾಲೇಜುಗಳ ಸೀಟುಗಳು ಕಡಿಮೆ ಶುಲ್ಕವೇ ಇದೆ. ಖಾಸಗಿ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಹೆಚ್ಚಾಗಿದೆ. ಶೇ.90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೂ ಮೆಡಿಕಲ್ ಸೀಟು ಸಿಗುತ್ತಿಲ್ಲ. ಹಾಗಾಗಿ ಅವರು ಎನ್‍ಆರ್‍ಐ ಅಥವಾ ಮ್ಯಾನೇಜ್ಮೆಂಟ್ ಸೀಟುಗಳನ್ನು ಬಯಸುತ್ತಾರೆ. ಇದರಿಂದ ಶುಲ್ಕ ಹೆಚ್ಚಾಗುತ್ತಿರುವ ಕಾರಣ ಅವರು ವಿದೇಶಗಳಲ್ಲಿ ವ್ಯಾಸಂಗ ಮಾಡಲು ತೆರಳುತ್ತಿದ್ದಾರೆ. ಹಾಗಾಗಿ ಶುಲ್ಕ ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

    ನಮ್ಮ ರಾಜ್ಯದಲ್ಲಿ ಶುಲ್ಕ ಕಡಿತಗೊಳಿಸಲು ಎ-ಬಿ-ಸಿ ಕೆಟಗೆರಿ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಈ ಬಗ್ಗೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಸಹ ಚಿಂತನೆ ನಡೆಸಿದೆ. ಜೊತೆಗೆ ಉಕ್ರೇನ್ ಮಾತ್ರವಲ್ಲದೇ ಬೇರೆ ದೇಶಗಳಿಂದಲೂ ವಿದ್ಯಾಭ್ಯಾಸ ಮೊಟಕುಗೊಳಿಸಿ ಕರ್ನಾಟಕಕ್ಕೆ ಆಗಮಿಸಿರುವ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

    ದೇಶಾದ್ಯಂತ ಸದ್ದು ಮಾಡಿತ್ತು ಬ್ಯಾನ್‍ನೀಟ್
    ವಿದ್ಯಾರ್ಥಿ ನವೀನ್ ಉಕ್ರೇನ್‍ನಲ್ಲಿ ಸಾವಿಗೀಡಾದ ಬೆನ್ನಲ್ಲೇ ರಾಜ್ಯದಲ್ಲಿ ಈಚೆಗಷ್ಟೇ #ಬ್ಯಾನ್ ನೀಟ್ ಅಭಿಯಾನ ನಡೆದಿತ್ತು. ರಾಜ್ಯದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ಇರುವ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಸಿಗದ ಪರಿಣಾಮ ಉಕ್ರೇನ್ ನಂಹತ ದೇಶಗಳಿಗೆ ತೆರಳಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಉಕ್ರೇನ್-ರಷ್ಯಾ ಯುದ್ಧದಿಂದ ನಮ್ಮ ರಾಜ್ಯದ ನವೀನ್ ಅವರನ್ನು ಕಳೆದುಕೊಳ್ಳಬೇಕಾಯಿತು. ಇದೆಲ್ಲಕ್ಕೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀಟ್ ಪರೀಕ್ಷೆ ಕಾರಣವಾಗಿದೆ ಎಂದು ಹಲವರು ಆರೋಪಿಸಿ ಸೋಷಲ್ ಮೀಡಿಯಾಗಳಲ್ಲಿ #ಬ್ಯಾನ್‍ನೀಟ್’ ಅಭಿಯಾನ ಆರಂಭಿಸಿದ್ದರು. ಇದನ್ನೂ ಓದಿ: 13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡ್‍ನಲ್ಲಿ 1, ಆಂಧ್ರಪ್ರದೇಶದಲ್ಲಿ 31, ಅರುಣಾಚಲಂನಲ್ಲಿ 1, ಅಸ್ಸಾಂನಲ್ಲಿ 8, ಬಿಹಾರದಲ್ಲಿ 16, ಛಂಡೀಘರ್‍ನಲ್ಲಿ 1, ಛತ್ತಿಸ್‍ಘರ್‍ನಲ್ಲಿ 10, ದಾದ್ರಾ ನಗರಲ್ಲಿ 1, ದೆಹಲಿಯಲ್ಲಿ 10, ಗೋವಾದಲ್ಲಿ 1, ಗುಜರಾತ್‍ನಲ್ಲಿ 29, ಹರಿಯಾಣದಲ್ಲಿ 12, ಹಿಮಾಚಲ್ ಪ್ರದೇಶದಲ್ಲಿ 7, ಜಮ್ಮು ಮತ್ತು ಕಾಶ್ಮೀರದಲ್ಲಿ 8, ಜಾಖರ್ಂಡ್‍ನಲ್ಲಿ 7, ಕರ್ನಾಟಕದಲ್ಲಿ 60, ಕೇರಳದಲ್ಲಿ 32, ಮಧ್ಯಪ್ರದೇಶದಲ್ಲಿ 22, ಮಹಾರಾಷ್ಟ್ರದಲ್ಲಿ 22, ಮಣಿಪುರದಲ್ಲಿ 2, ಮೇಘಾಲಯ- ಮಿಜೋರಾಂನಲ್ಲಿ ತಲಾ 1, ಒಡಿಶಾದಲ್ಲಿ 12, ಪುದುಚೆರಿನಲ್ಲಿ 9, ಪಂಜಾಬ್‍ನಲ್ಲಿ 10, ರಾಜಾಸ್ತಾನ್‍ನಲ್ಲಿ 23, ಸಿಕ್ಕಿಂನಲ್ಲಿ 1, ತಮಿಳುನಾಡಿನಲ್ಲಿ 50, ತೆಲಂಗಾಣದಲ್ಲಿ 33, ತ್ರಿಪುರದಲ್ಲಿ 2 ಹಾಗೂ ಉತ್ತರ ಪ್ರದೇಶದಲ್ಲಿ 22 ವೈದ್ಯಕೀಯ ಕಾಲೇಜುಗಳು ಇವೆ. ಆದರೆ, ಇಲ್ಲಿನ ದುಬಾರಿ ವೆಚ್ಚದ ಪರಿಣಾಮದಿಂದಾಗಿ ವಿದೇಶಗಳಿಗೆ ತೆರಳಿತ್ತಿದ್ದಾರೆ ಎಂದು ಆರೋಪಿಸಿದ್ದರು.

    ಇದರ ಜೊತೆಗೆ ಫೇಸ್‍ಬುಕ್, ಟ್ವಿಟ್ಟರ್ ಗಳಲ್ಲಿ #ಬ್ಯಾನ್‍ನೀಟ್ ಟ್ರೆಂಡಿಂಗ್ ಸದ್ದು ಮಾಡಿತ್ತು. ಚಲನಚಿತ್ರನಟ ಸೂರ್ಯ ಸಹ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್