ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತ ನಿಲುವು ಬಿಗಿ ಹಗ್ಗದ ಮೇಲೆ ನೃತ್ಯ ಮಾಡುವಂತೆ ಆಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಭಾರತ ಏನನ್ನು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಇತ್ತೀಚೆಗೆ ರಷ್ಯಾದ ವಿರುದ್ಧ ಧ್ವನಿ ಎತ್ತುತ್ತಿದೆ. ಉಕ್ರೇನ್‌ನಲ್ಲಿ 20,000ಕ್ಕೂ ಹೆಚ್ಚು ಭಾರತೀಯ ನಾಗರಿಕರು ಇರುವುದರಿಂದ ಭಾರತದ ಪರಿಸ್ಥಿತಿ ಅನಿಶ್ಚಿತವಾಗಿದೆ ಎಂದರು.
ಎಲ್ಲಾ ಭಾರತೀಯರನ್ನು ಯುದ್ಧ ಪ್ರದೇಶದಿಂದ ರಕ್ಷಿಸಲಾಗಿರುವುದರಿಂದ ಭಾರತವು ಈಗತನ್ನ ಹೆಜ್ಜೆಯನ್ನು ನಿರ್ಣಯಿಸಬಹುದು ಎಂದ ಅವರು, ಭಾರತದ ಸ್ಥಾನವನ್ನು ವಿಶ್ವವು ಸರಿಯಾದ ದೃಷ್ಟಿಯಲ್ಲಿ ನೋಡಿದೆ. ಅದನ್ನು ಖಚಿತ ಪಡಿಸಲು ಭಾರತೀಯ ರಾಜತಾಂತ್ರಿಕತೆ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇರಲ್ಲ: ಮಾಜಿ ಶಾಸಕ ರಾಜಣ್ಣ
ನಾವು ಕ್ವಾಡ್‌ನ ಸದಸ್ಯರಾಗಿದ್ದೇವೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದಾಗ ಭಾರತದ ನಾಗರಿಕರು ಅಲ್ಲಿ ಸಿಲುಕಿದ್ದರು. ಈ ಎಲ್ಲಾ ಕಾರಣದಿಂದಾಗಿ ಭಾರತವು ರಷ್ಯಾವನ್ನು ವಿರೋಧಿಸಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ:ಒಡಿಶಾ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ
ಇಸ್ತಾಂಬುಲ್: ಉಕ್ರೇನ್‌ನ ಕೀವ್ ಮತ್ತು ಚೆರ್ನಿಹಿವ್ ಮೇಲೆ ಕೇಂದ್ರೀಕರಿಸಿದ್ದ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆಯನ್ನು ಕಡಿಮೆಗೊಳಿಸುವುದಾಗಿ ರಷ್ಯಾ ತಿಳಿಸಿದೆ.
ಇಸ್ತಾಂಬುಲ್ ರಷ್ಯಾ ಮತ್ತು ಉಕ್ರೇನಿಯನ್ ಸಮಾಲೋಚನಾ ತಂಡಗಳ ನಡುವಿನ ಮಂಗಳವಾರ ʼಅರ್ಥಪೂರ್ಣʼ ಮಾತುಕತೆ ನಡೆಯಿತು. ಈ ವೇಳೆ ರಷ್ಯಾ ಮಹತ್ವದ ನಿರ್ಧಾರವನ್ನು ತಿಳಿಸಿದ್ದು, ಯುದ್ಧ ಅಂತ್ಯವಾಗುವ ಸೂಚನೆ ಸಿಕ್ಕಿದೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ
ಪರಸ್ಪರ ನಂಬಿಕೆ ಹೆಚ್ಚಿಸಲು, ಹೆಚ್ಚಿನ ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಲು, ಒಪ್ಪಂದಕ್ಕೆ ಸಹಿ ಮಾಡುವ ಅಂತಿಮ ಗುರಿಯನ್ನು ಸಾಧಿಸಲು ಕೀವ್ ಮತ್ತು ಚೆರ್ನಿಹಿವ್ ಭಾಗಗಳಲ್ಲಿ ಮಿಲಿಟರಿ ಚಟುವಟಿಕೆಯನ್ನು ಆಮೂಲಾಗ್ರವಾಗಿ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ತಿಳಿಸಿದ್ದಾರೆ.
ಉಕ್ರೇನ್‌ನ ತಟಸ್ಥತೆ ಮತ್ತು ಪರಮಾಣು ಹೊಂದದ ಸ್ಥಿತಿಯ ಕುರಿತು ಒಪ್ಪಂದ ಮಾಡಿಕೊಳ್ಳುವ ಮಾತುಕತೆ ಪ್ರಾಯೋಗಿಕ ಹಂತಕ್ಕೆ ತಲುಪಿದೆ. ಅಂದರೆ ಮಿಲಿಟರಿ ಮೈತ್ರಿ ಅಥವಾ ಆತಿಥೇಯ ನೆಲೆಗಳನ್ನು ಸೇರುವುದಿಲ್ಲವೆಂದು ಉಕ್ರೇನ್ ಸಮಾಲೋಚಕರು ತಿಳಿಸಿದ್ದಾರೆ ಎಂದು ಅವರು ಫೋಮಿನ್ ಸ್ಪಷ್ಟಪಡಿಸಿದ್ದಾರೆ. ಇದು ʼಅರ್ಥಪೂರ್ಣʼ ಮಾತುಕತೆ ಎಂದು ರಷ್ಯಾದ ಸಮಾಲೋಚಕರು ಬಣ್ಣಿಸಿದ್ದಾರೆ. ಇದನ್ನೂ ಓದಿ: ನಮ್ಮ ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರವೇ ಪರಮಾಣು ಶಸ್ತ್ರಾಸ್ತ್ರ ಬಳಕೆ: ರಷ್ಯಾ
ಮುಖ್ಯ ಸಂಧಾನಕಾರ ವ್ಲಾಡಿಮಿರ್ ಮೆಡಿನ್‌ಸ್ಕಿ ಅವರು, ಉಕ್ರೇನ್ ಪ್ರಸ್ತಾಪಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಂದಿಡಲಾಗುವುದು ಎಂದು ಹೇಳಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಫೆ.24 ರಂದು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಅಂದಿನಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಝೆಲೆನ್ಸ್ಕಿ ಮೇಲೆ ಮತ್ತೊಮ್ಮೆ ದಾಳಿಗೆ ಪ್ರಯತ್ನ – ವಿಫಲವಾದ ರಷ್ಯಾ
ನವದೆಹಲಿ: ಉಕ್ರೇನ್ ಯುದ್ಧದಲ್ಲಿ ಗುಂಡೇಟು ತಗುಲಿ ಗಾಯಗೊಂಡಿದ್ದ ಭಾರತದ ವೈದ್ಯಕೀಯ ವಿದ್ಯಾರ್ಥಿಯು ದೆಹಲಿಯ ಸೇನಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.
ತನ್ನ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ಮಾತನಾಡಿದ ಗಾಯಾಳು ವಿದ್ಯಾರ್ಥಿ ಹರ್ಜೋತ್ ಸಿಂಗ್, ಸುಮಾರು 1 ವರ್ಷ ನನ್ನ ಕೈ, ಕಾಲುಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ನನ್ನ ಆರ್ಥಿಕ ಸ್ಥಿತಿ ಸರಿಯಿಲ್ಲ. ನನ್ನ ತಂದೆ ನಿವೃತ್ತರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಭಾರತ ಸರ್ಕಾರ ನನಗೆ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್
ಮಗನ ಆರೋಗ್ಯ ಕುರಿತು ಪ್ರತಿಕ್ರಿಯಿಸಿದ ಕೇಸರ್ ಸಿಂಗ್, ಈಗ ನನ್ನ ಮಗ ಚೇತರಿಸಿಕೊಳ್ಳುತ್ತಿದ್ದಾನೆ. ಚೇತರಿಸಿಕೊಂಡ ನಂತರ ಅವನು ಏನು ಮಾಡಬೇಕೆಂದು ಯೋಚಿಸುತ್ತಾನೆ. ಯಾವುದೇ ದೇಶವು ಒಳ್ಳೆಯದು ಅಥವಾ ಕೆಟ್ಟದ್ದಲ್ಲ. ಇದು ಎರಡು ಅಹಂಕಾರಗಳ ನಡುವಿನ ಹೋರಾಟವೇ ಹೊರತು ದೇಶಗಳ ನಡುವಿನ ಹೋರಾಟವಲ್ಲ. ಅವನಿಗೆ ಮತ್ತೆ ಅವಕಾಶ ಸಿಕ್ಕರೆ, ಅವನು ಖಂಡಿತವಾಗಿಯೂ ಅಧ್ಯಯನಕ್ಕಾಗಿ ಉಕ್ರೇನ್‌ಗೆ ಹೋಗುತ್ತಾನೆ ಎಂದು ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ವೇಳೆ ಕೀವ್ ನಗರದಲ್ಲಿ ಭಾರತದ ವಿದ್ಯಾರ್ಥಿ ಹರ್ಜೋತ್ ಸಿಂಗ್‌ಗೆ ಗುಂಡೇಟು ಬಿದ್ದಿತ್ತು. ನಂತರ ಆತನಿಗೆ ಉಕ್ರೇನ್‌ನಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಯುದ್ಧಪೀಡಿತ ರಾಷ್ಟ್ರದಿಂದ ʼಆಪರೇಷನ್ ಗಂಗಾʼ ಕಾರ್ಯಾಚರಣೆಯಡಿ ಭಾರತಕ್ಕೆ ವಾಪಸ್ ಕರೆಸಿಕೊಳ್ಳಲಾಯಿತು. ಇದನ್ನೂ ಓದಿ: ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ: ಉಕ್ರೇನ್‍ನಲ್ಲಿ ಗುಂಡು ತಗುಲಿದ ವಿದ್ಯಾರ್ಥಿ
ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ವಿದ್ಯಾರ್ಥಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಆದರೆ ಆತ ಪೂರ್ಣ ಚೇತರಿಸಿಕೊಳ್ಳಲು ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೀವ್: ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ರಷ್ಯಾ ಸೈನಿಕರು ಉಕ್ರೇನ್ ಮಹಿಳೆಯರ ಮೇಲೆ ದೌರ್ಜನ್ಯವನ್ನು ನಡೆಸುತ್ತಿದ್ದಾರೆ. ನನ್ನ ಮೇಲೆ ರಷ್ಯಾ ಸೈನಿಕರು ಅತ್ಯಾಚಾರ ನಡೆಸಿದ್ದಾರೆ ಎಂದು ಉಕ್ರೇನ್ ಮಹಿಳೆಯೊಬ್ಬರು ಆರೋಪಿಸಿ ಕಣ್ಣೀರಿಟ್ಟಿದ್ದಾರೆ.
ಮಹಿಳೆ ಆರೋಪವೇನು?: ನನ್ನ ಗಂಡನನ್ನು ಗುಂಡಿಕ್ಕಿ ಕೊಂದ ಕೆಲವೇ ಕ್ಷಣಗಳಲ್ಲಿ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ನನ್ನ ಪತಿಯನ್ನು ಕೊಂದಿದ್ದರಿಂದ ನನ್ನ 4 ವರ್ಷದ ಮಗ ಗಾಬರಿಯಿಂದ ಅಳುತ್ತಿದ್ದನು. ಆಗ ಅವನ ಅಳುವನ್ನು ಕೇಳಿಸಿಕೊಂಡು ಅಲ್ಲಿಗೆ ಬಂದ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಆಕೆಯ ಆರೋಪವನ್ನು ಈಗ ಉಕ್ರೇನ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾರವಾರ ಬಂದರು ವಿಸ್ತರಣೆ ಕಾಮಗಾರಿ ಮುಂದುವರಿಸಬೇಡಿ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ
ನಡೆದಿದ್ದೇನು?: ಮಾರ್ಚ್ 9ರಂದು ರಷ್ಯಾದ ಸೈನಿಕರು ನಮ್ಮ ಮನೆಯತ್ತ ಬರುತ್ತಿರುವ ಚಪ್ಪಲಿಯ ಸದ್ದು ಕೇಳಿತು. ನಂತರ ಮನೆಯ ಗೇಟ್ ಓಪನ್ ಆದ ಸದ್ದು ಕೇಳಿತು. ಅವರು ಮೊದಲು ನಮ್ಮ ಮನೆಯ ನಾಯಿಯನ್ನು ಕೊಂದು ನಂತರ ನನ್ನ ಪತಿಗೆ ಗುಂಡು ಹಾರಿಸಿ ಕೊಂದರು. ನಾನು ಕಿಟಕಿ ಬಳಿ ಹೋಗಿ ನೋಡಿದಾಗ ರಷ್ಯಾದ ಸೇನೆಯ ಯುವಕನೊಬ್ಬ ನನ್ನ ಗಂಡನಿಗೆ ಗುಂಡು ಹಾರಿಸಿದ್ದ. ನನ್ನ ಗಂಡ ಗೇಟಿನ ಬಳಿ ನೆಲದಲ್ಲಿ ಸತ್ತು ಬಿದ್ದಿದ್ದರು ಎಂದು ಹೇಳುತ್ತಾ ಮಹಿಳೆ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ನಮ್ಮ ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರವೇ ಪರಮಾಣು ಶಸ್ತ್ರಾಸ್ತ್ರ ಬಳಕೆ: ರಷ್ಯಾ
ರಷ್ಯಾದ ಸೈನಿಕರು ಮನೆಯೊಳಗೆ ನುಗ್ಗಿದರು. ನನ್ನ ಮಗ ಪಕ್ಕದ ರೂಮಿನಲ್ಲಿ ಅಳುತ್ತಾ ಕೂತಿದ್ದ. ಆಗ ನನಗೆ ಬಂದೂಕು ತೋರಿಸಿ ಹೆದರಿಸಿ, ನನ್ನ ಮೇಲೆ ಅತ್ಯಾಚಾರವೆಸಗಿದರು. ನಾನು ಬಾಯಿ ಮುಚ್ಚಿಕೊಳ್ಳದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ನಿನ್ನ ಮಗ ಅಳುವುದನ್ನು ನಿಲ್ಲಿಸದಿದ್ದರೆ ಅವನನ್ನೂ ಕೊಲ್ಲುತ್ತೇವೆ ಎಂದು ನನಗೆ ಹೆದರಿಸಿದರು. ಅತ್ಯಾಚಾರ ನಡೆಸಿದ ಮೇಲೆ ನನ್ನ ಹಣೆಗೆ ಬಂದೂಕು ಇಟ್ಟು ಇವಳನ್ನು ಕೊಲ್ಲೋದಾ ಅಥವಾ ಬದುಕಿಸೋದಾ? ಎಂದು ಗೇಲಿ ಮಾಡುತ್ತಾ ಕೊನೆಗೆ ನನ್ನನ್ನು ಸಾಯಿಸದೆ ಅಲ್ಲೇ ಬಿಟ್ಟು ಹೋದರು ಎಂದು ತನಗಾಗಿರುವ ಕಷ್ಟವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು
ಮಾಸ್ಕೋ: ರಷ್ಯಾದ ಅಸ್ತಿತ್ವಕ್ಕೆ ಬೆದರಿಕೆಯಿದ್ದರೆ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸೋಮವಾರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೇಶದ ಕಾರ್ಯತಂತ್ರದ ಪರಮಾಣು ಪಡೆಗೆ ಆಕ್ರಮಣಕ್ಕೆ ತಯಾರಾಗಿರಲು ತಿಳಿಸಿದ್ದರು. ಈ ಆದೇಶ ಜಾಗತಿಕವಾಗಿಯೇ ಎಚ್ಚರಿಕೆಯ ಕರೆಗಂಟೆಯಾಗಿದೆ. ಇದನ್ನೂ ಓದಿ: ಮುಟ್ಟಾಳೆ ಧರಿಸಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಅಮೈ ಮಹಾಲಿಂಗ ನಾಯ್ಕ
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಗಾಗಿ ಪರಮಾಣು ಶಸ್ತ್ರಾಸ್ತ್ರ ಬಳಕೆ ಕಾರಣವಾಗುವುದಿಲ್ಲ. ಬದಲಾಗಿ ರಷ್ಯಾಗೆ ಬೆದರಿಕೆಯಿದ್ದಲ್ಲಿ ಮಾತ್ರವೇ ಪರಮಾಣು ಶಸ್ತ್ರಾಸ್ತ್ರ ಬಳಸುವುಗಿ ಡಿಮಿಟ್ರಿ ಪೆಸ್ಕೋವ್ ಸ್ಪಷ್ಟಪಡಿಸಿದ್ದಾರೆ.
ಕೀವ್: ರಷ್ಯಾ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಪ್ರಯತ್ನಪಟ್ಟಿದ್ದು, ಈ ಬಾರಿಯೂ ಝೆಲೆನ್ಸ್ಕಿ ಪಾರಾಗಿದ್ದಾರೆ ಎಂದು ಸೋಮವಾರ ವರದಿಗಳು ತಿಳಿಸಿವೆ.
ರಷ್ಯಾದ ವಿಶೇಷ ಪಡೆಯ ನೇತೃತ್ವದ 25 ಸೈನಿಕರ ಗುಂಪನ್ನು ಉಕ್ರೇನ್ ಅಧಿಕಾರಿಗಳು ಸ್ಲೋವಾಕಿಯಾ-ಹಂಗೇರಿ ಗಡಿಯ ಬಳಿ ವಶಪಡಿಸಿಕೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷನ ಮೇಲೆ ದಾಳಿ ನಡೆಸುವುದೇ ಈ ಗುಂಪಿನ ಗುರಿಯಾಗಿತ್ತು ಎಂದು ಕೀವ್ ಪೋಸ್ಟ್ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಮೆಕ್ಸಿಕೋದಲ್ಲಿ ಗುಂಡಿನ ದಾಳಿ – 19 ಜನರ ಸಾವು
⚡️Another attempt on the life of #VladimirZelensky failed.
This time, a military group of 25 people led by the Russian special services was captured near the Slovakia-Hungary border. Their goal was the physical elimination of the #UkrainianPresident. pic.twitter.com/Vp0vDEIZnK
ಕಳೆದ ಬಾರಿ ರಷ್ಯಾ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ನಿವಾಸದ ಬಳಿಯಲ್ಲಿ ಬಾಂಬುಗಳ ದಾಳಿ ನಡೆಸಿತ್ತು. ಆ ಸಂದರ್ಭ ಝೆಲೆನ್ಸ್ಕಿ ಪ್ರಾಣಾಪಾಯದಿಂದ ಪಾರಾಗಿದ್ದು, ರಷ್ಯಾ ತನ್ನನ್ನು ಸೆರೆಹಿಡಿಯುವಲ್ಲಿ ವಿಫಲವಾಗಿದೆ ಎಂದು ವ್ಯಂಗ್ಯ ಮಾಡಿದ್ದರು. ಇದನ್ನೂ ಓದಿ: ವುಹಾನ್ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್
ಕೀವ್: ಫೆಬ್ರವರಿ 24 ರಂದು ಉಕ್ರೇನ್‍ನಲ್ಲಿ ರಷ್ಯಾ ನಡೆಸಿದ ಭೀಕರ ಮಿಲಿಟರಿ ದಾಳಿ ಪ್ರಾರಂಭವಾದಾಗಿನಿಂದ 12 ಪತ್ರಕರ್ತರು ಮತ್ತು ಮಾಧ್ಯಮ ವೃತ್ತಿಪರರು ಉಕ್ರೇನ್‍ನಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನ್‍ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯುದ್ಧದಿಂದಾಗಿ ಹಾನಿಗೊಳಗಾದ ರಾಷ್ಟ್ರದ ದುರಾವಸ್ಥೆಯ ಪೋಸ್ಟ್‍ವೊಂದನ್ನು ಹಂಚಿಕೊಂಡ ಅವರು, ಯುದ್ಧದ ಸಮಯದಲ್ಲಿ ಕನಿಷ್ಟ 12 ಮಂದಿ ಪತ್ರಕರ್ತರು ಬಲಿಪಶುಗಳಾಗಿದ್ದಾರೆ. ಇದರೊಂದಿಗೆ ಯುದ್ಧದ ತಿವ್ರತೆಯಿಂದಾಗಿ ಗಂಭೀರ ಗಾಯಗಳನ್ನು ಅನುಭವಿಸುತ್ತಿರುವ ಇತರ 10 ಪತ್ರಕರ್ತರು ಕೂಡಾ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ
ಪ್ರಾಸಿಕ್ಯೂಟರ್ ಜನರಲ್ ಪ್ರಕಾರ, ರಷ್ಯಾದ ಮಿಲಿಟರಿಯು ಒಟ್ಟು 56 ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದು, ಅದರಲ್ಲಿ 15 ಅನ್ಯ ದೇಶದ ಪತ್ರಕರ್ತರಿದ್ದಾರೆ. 15 ರಲ್ಲಿ, ನಾಲ್ವರು ಯುಕೆಯಿಂದ ಬಂದವರು. ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಯುಎಸ್, ಯುನೈಟೆಡ್ ಅರಬ್ ಎಮಿರೇಟ್ಸ್‍ನಿಂದ ತಲಾ ಎರಡು, ಮತ್ತು ಸ್ವಿಟ್ಜಲೆರ್ಂಡ್‍ನ ಒಬ್ಬರು ಎಂದು ವರದಿ ನೀಡಿದ್ದಾರೆ.
ಉಕ್ರೇನ್‍ನಲ್ಲಿ ನಡೆದ ಇತ್ತೀಚಿನ ಘಟನೆಯೊಂದರಲ್ಲಿ, ಉಕ್ರೇನ್‍ನ ಇಬ್ಬರು ಪ್ರಜೆಗಳು ಮತ್ತು ಟರ್ಕಿಶ್ ಟಿಆರ್‍ಟಿ ವಲ್ರ್ಡ್ ಟಿವಿ ಚಾನೆಲ್‍ಗಳ ಕ್ಯಾಮರಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಯುದ್ಧ ರಹಿತ ನಗರವಾದ ಚೆರ್ನಿಹಿವ್‍ನಿಂದ ಚಿತ್ರೀಕರಣವನ್ನು ಸ್ಥಳಾಂತರಿಸುವ ಸಮಯದಲ್ಲಿ ಗುಂಡಿನ ದಾಳಿಗೆ ಒಳಗಾಯಿತು. ಈ ವೇಳೆ ವರದಿಗಾರ ಆಂಡ್ರಿ ತ್ಸಾಪ್ಲಿಯೆಂಕೊ ದಾಳಿಗೆ ಒಳಗಾಗಿದ್ದು, ಅದೃಷ್ಟವಶಾತ್ ಚಿಕ್ಕ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ರಷ್ಯಾದ ಪಡೆಗಳು ಯುದ್ಧದ ಕಾನೂನುಗಳನ್ನು ಮರೆತಿದ್ದು, ಈಗಾಗಲೇ ಶೆಲ್ ದಾಳಿ ನಡೆಸಿ ಅನೇಕ ಟಿವಿ ಟವರ್‍ಗಳು ಮತ್ತು ಟಿವಿ ಮತ್ತು ರೇಡಿಯೊ ಕಂಪನಿಗಳನ್ನು ಧ್ವಂಸ ಮಾಡಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಮಾಸ್ ಮೀಡಿಯಾದ ಸಹಕಾರದೊಂದಿಗೆ ಪ್ರಾಸಿಕ್ಯೂಟರ್ ಕಚೇರಿಯು ಈಗಾಗಲೇ ಪತ್ರಕರ್ತರ ವಿರುದ್ಧದ ಅಪರಾಧಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ವೆನೆಡಿಕ್ಟೋವಾ ಹೇಳಿದರು.
ಅವರ ಮೇಲ್ವಿಚಾರಣೆಯ ಪ್ರಕಾರ, ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ಆರಂಭದಿಂದಲೂ ಉಕ್ರೇನ್‍ನಲ್ಲಿ ಪತ್ರಕರ್ತರು ಮತ್ತು ಮಾಧ್ಯಮಗಳ ವಿರುದ್ಧ 148 ಕಾನೂನುಬಾಹಿರ ಕ್ರಮಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತರಬೇತಿ ನಿರತ ಐಆರ್‌ಬಿ ಪೊಲೀಸ್ ಹೃದಯಾಘಾತದಿಂದ ಸಾವು
ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನೆಲದಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಪ್ರಾರಂಭಗೊಂಡಿದೆ. ಇಲ್ಲಿಯವರೆಗೆ, ವಿಶ್ವಸಂಸ್ಥೆಯ ವರದಿಯ ಪ್ರಕಾರ 6.5 ಮಿಲಿಯನ್‍ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಹೆಚ್ಚುವರಿಯಾಗಿ, ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‍ನಲ್ಲಿ ಕನಿಷ್ಠ 816 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ನೀಡಿದೆ.
ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಇಂದಿಗೆ ಬರೋಬ್ಬರಿ ಒಂದು ತಿಂಗಳು. ಆದರೆ ರಷ್ಯಾ ನಿರೀಕ್ಷಿಸಿದಂತೆ ಯುದ್ಧರಂಗದಲ್ಲಿ ಏನೂ ನಡೆಯುತ್ತಿಲ್ಲ. ಉಕ್ರೇನ್ ಸೈನಿಕರ ಉಕ್ಕಿನಂತಹ ಸಂಕಲ್ಪದ ಮುಂದೆ ರಷ್ಯಾದ ಆಯುಧ ಶಕ್ತಿಗೂ ಏನೂ ಮಾಡಲು ಆಗ್ತಿಲ್ಲ.
ರಷ್ಯಾ ಸೇನೆಯ ದಾಳಿಯ ಧಾಟಿಗೆ ಹಲವು ನಗರಗಳು ಧ್ವಂಸಗೊಳ್ಳುತ್ತಿದ್ದರೂ, ಉಕ್ರೇನಿಗರ ಆತ್ಮಸ್ಥೈರ್ಯ ಒಂದಿನಿತೂ ಕುಸಿದಿಲ್ಲ. ಈವರೆಗೂ ರಾಜಧಾನಿ ಕೀವ್ ಅನ್ನು ಪ್ರವೇಶಿಸಲು ರಷ್ಯಾ ಪಡೆಗಳಿಗೆ ಆಗಿಲ್ಲ. ಈ ಹೊತ್ತಲ್ಲಿ ಹೊರಗೆ ಬಂದಿರುವ ಒಂದು ಕಥನ ಉಕ್ರೇನಿಗರ ಧೈರ್ಯ ಸಾಹಸಗಳನ್ನು ಅನಾವರಣ ಮಾಡಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧದ ನಡುವೆಯೇ ಮುರಿದು ಬಿತ್ತು ಪುಟಿನ್ ಮಗಳ ಮದುವೆ!
ಉಕ್ರೇನ್‍ನ ಸಣ್ಣ ಪಟ್ಟಣ ವೋಜ್ನೇ-ಸೇನ್ಸ್ಕ್. ರಷ್ಯಾ ಸೇನೆ ಎರಡು ವಾರ ಘನಘೋರ ಯುದ್ಧ ಮಾಡಿದರೂ ಇಲ್ಲಿನ ಪ್ರಮುಖ ಸೇತುವೆ ಮೇಲೆ ಹಿಡಿತ ಸಾಧಿಸಲು ಆಗಲಿಲ್ಲ. ಉಕ್ರೇನ್ ಸೈನಿಕರು ಮತ್ತು ಸ್ಥಳೀಯರ ವಿರೋಚಿತ ಹೋರಾಟದ ಮುಂದೆ ರಷ್ಯಾ ಸೇನೆಯ ಆಟ ನಡೆದಿಲ್ಲ. ಆ ಸೇತುವೆಯನ್ನೇ ಉಡೀಸ್ ಮಾಡಿದ ಉಕ್ರೇನ್ ಜನತೆ, ರಷ್ಯಾದ ಸೈನಿಕರನ್ನು ಸುಮಾರು 100 ಕಿಲೋಮೀಟರ್ ಹಿಂದಕ್ಕೆ ಅಟ್ಟಾಡಿಸಿಕೊಂಡು ಹೋಗಿದ್ರು. ಈ ಹೋರಾಟ ನಡೆದು ಮೂರು ವಾರ ಕಳೆದಿವೆ.
ಈಗಲೂ ಈ ಪಟ್ಟಣದ ಸನಿಹಕ್ಕೆ ವಾಪಸ್ ಬರಲು ರಷ್ಯಾಗೆ ಆಗಿಲ್ಲ. ಒಂದೊಮ್ಮೆ ಈ ಸೇತುವೆ ರಷ್ಯಾ ಹಿಡಿತಕ್ಕೆ ಸಿಕ್ಕಿದ್ದಲ್ಲಿ ಬಂದರು ನಗರಿ ಒಡೆಸ್ಸಾ ಯಾವಾಗಲೋ ರಷ್ಯಾ ವಶವಾಗುತ್ತಿತ್ತು. ಅಂದ ಹಾಗೇ, ಇದೇ ಕೋಪದಲ್ಲಿ ಉಕ್ರೇನ್ ಮೇಲೆ ರಷ್ಯಾ ಸೇನೆ ಇಂದು ಫಾಸ್ಫರಸ್ ಬಾಂಬ್ ಪ್ರಯೋಗಿಸಿದೆ. ಇದನ್ನೂ ಓದಿ: ವ್ಲಾಡಿಮಿರ್ ಪುಟಿನ್ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?
ಮಾಸ್ಕೋ: ಉಕ್ರೇನ್ ವಿರುದ್ಧದ ಯುದ್ಧದ ದುಷ್ಪರಿಣಾಮ ರಷ್ಯಾದ ಜನತೆ ಮೇಲಷ್ಟೇ ಅಲ್ಲ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕುಟುಂಬಕ್ಕೂ ತಟ್ಟಿದೆ. ಉಕ್ರೇನ್ ವಿಚಾರವಾಗಿ ಪುಟಿನ್ ತೆಗೆದುಕೊಂಡ ನಿರ್ಧಾರವು ಈಗ ಅವರ ಮಗಳ ಮದುವೆಗೇ ಕಂಟಕ ಪ್ರಾಯವಾಗಿ ಪರಿಣಮಿಸಿದೆ.
ಡಾ. ಮರಿಯಾ ವೊರೊಂಟ್ಸೊವಾ (36) ಅವರೇ ವ್ಲಾಡಿಮಿರ್ ಪುಟಿನ್ ಮತ್ತು ಲ್ಯುಡ್ಮಿಲಾ ದಂಪತಿ ಹಿರಿಯ ಪುತ್ರಿ. ಮರಿಯಾ ಅವರ ಮದುವೆ ಮುರಿದು ಬಿದ್ದಿದೆ. ಇದರ ಜೊತೆಗೆ ಮರಿಯಾ ಅವರ ಆಧುನಿಕ ವೈದ್ಯಕೀಯ ಕೇಂದ್ರ ನಿರ್ಮಿಸುವ ಬಹುದೊಡ್ಡ ಕನಸು ಕನಸಾಗಿಯೇ ಉಳಿದಿದೆ.
ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ಆಧುನಿಕ ವೈದ್ಯಕೀಯ ಕೇಂದ್ರ ನಿರ್ಮಿಸುವ ದೊಡ್ಡ ಯೋಜನೆ ಹೊಂದಿದ್ದೇನೆ. ಯುರೋಪ್ ಮತ್ತು ಪರ್ಷಿಯನ್ ಗಲ್ಫ್ ದೇಶಗಳಿಂದ ಶ್ರೀಮಂತ ಶೇಖ್ ರೋಗಿಗಳನ್ನು ಆಕರ್ಷಿಸುವ ಯೋಜನೆ ಇದಾಗಿದೆ ಎಂದು ಮಾಧ್ಯಮದೊಂದಿಗೆ ಈ ಹಿಂದೆ ಮರಿಯಾ ಹೇಳಿಕೊಂಡಿದ್ದರು. ಆದರೆ ಉಕ್ರೇನ್ ಮೇಲಿನ ಯುದ್ಧದ ನಂತರ ರಷ್ಯಾಗೆ ಯೂರೋಪಿಯನ್ನರಾಗಲಿ ಅಥವಾ ಶೇಖ್‌ಗಳಾಗಲಿ ಯಾರು ಬರುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧದ ನಡುವೆಯೇ ಸುದ್ದಿಯಾಗ್ತಿದ್ದಾರೆ ಪುಟಿನ್ ಗರ್ಲ್‌ಫ್ರೆಂಡ್- ಯಾರೀಕೆ?
ಡಚ್ ಉದ್ಯಮಿ ಜೋರಿಟ್ ಫಾಸೆನ್ ಅವರೊಂದಿಗಿನ ಮರಿಯಾ ವೊರೊಂಟ್ಸೊವಾ ಸಂಬಂಧವೂ ಮುರಿದು ಬಿದ್ದಿದೆ. ಯುದ್ಧ ಆರಂಭವಾದ ನಂತರ ಈ ಜೋಡಿ ಬೇರ್ಪಟ್ಟಿದೆ. ಇವರು ಮಕ್ಕಳನ್ನೂ ಹೊಂದಿದ್ದಾರೆ. ಆದರೆ ಡಚ್ ಉದ್ಯಮಿ ಫಾಸೆನ್ ತಾನು ಪುಟಿನ್ ಅವರ ಅಳಿಯ ಅಲ್ಲ ಎಂದು ಹೇಳಿಕೊಂಡಿದ್ದಾರೆ.
ಪುಟಿನ್ ಮಗಳು ವೊರೊಂಟ್ಸೊವಾ ಪ್ರಖ್ಯಾತ ವೈದ್ಯೆ. ಮಕ್ಕಳಲ್ಲಿ ಕಂಡುಬರುವ ಅಪರೂಪದ ಆನುವಂಶಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ತುಂಬಾ ಪ್ರಖ್ಯಾತಿ ಪಡೆದಿದ್ದಾರೆ. ರಷ್ಯಾ ಆರೋಗ್ಯ ಸಚಿವಾಲಯದ ಎಂಡೊಕ್ರಿನಾಲಜಿ ನ್ಯಾಷನಲ್ ಮೆಡಿಕಲ್ ರಿಸರ್ಚ್ ಸೆಂಟರ್‌ನಲ್ಲಿ ವೈದ್ಯಕೀಯ ಸಂಶೋಧನೆಯ ಮುಖ್ಯಸ್ಥರಾಗಿದ್ದಾರೆ.
ವೊರೊಂಟ್ಸೊವಾ ಅವರು 1986ರಲ್ಲಿ ಜನಿಸಿದರು. ಪುಟಿನ್ ಅವರು ಕೆಜಿಬಿ ಗೂಡಾಚಾರರಾಗಿದ್ದಾಗ ಇವರ ಜನನವಾಯಿತು. ಪುಟಿನ್ ಅವರಿಗೆ ಕತ್ರಿನಾ ಎಂಬ ಮತ್ತೊಬ್ಬರು ಮಗಳಿದ್ದಾರೆ. ವೊರೊಂಟ್ಸೊವಾ ಜನಿಸಿದ ಒಂದು ವರ್ಷದ ನಂತರ ಈಕೆ ಜರ್ಮನಿಯಲ್ಲಿ ಜನಿಸಿದರು. ಇದನ್ನೂ ಓದಿ:ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ
ಪುಟಿನ್ ತನ್ನ ಪ್ರೇಯಸಿ ಅಲೀನಾ ಕಬೇವಾ ಅವರೊಂದಿಗೆ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಅಲೀನಾ ಈಗ ಸ್ವಿಟ್ಜರ್ಲೆಂಡ್‌ನಲ್ಲಿ ಅಡಗಿಕೊಂಡಿದ್ದಾರೆ ಎಂದು ಸಹ ವರದಿಯಾಗಿದೆ.
ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ವಿರೋಧಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ನ ಪ್ರಮುಖ ಸಲಹೆಗಾರ ರಾಜೀನಾಮೆ ನೀಡಿ, ರಷ್ಯಾವನ್ನು ತೊರೆದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ದಿನೇ ದಿನೇ ಹೆಚ್ಚುತ್ತಿದ್ದು, ವಿಶ್ವದಾದ್ಯಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ವಿರುದ್ಧ ಆಕ್ರೋಶವನ್ನು ಪಡೆಸುತ್ತಿದ್ದಾರೆ. ಇದೀಗ ಈ ವಿರೋಧದ ಕಾವು ರಷ್ಯಾ ಸರ್ಕಾರದಲ್ಲೇ ಹಬ್ಬಿದ್ದು ಪುಟಿನ್‍ನ ಪ್ರಮುಖ ಸಲಹೆಗಾರ ಅನಾಟೊಲಿ ಚುಬೈಸ್ ರಾಜೀನಾಮೆಯನ್ನು ನೀಡಿದ್ದಾರೆ.
ಅನಾಟೊಲಿ ಚುಬೈಸ್ ಸುಸ್ಥಿರ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಬಂಧಕ್ಕಾಗಿ ಕ್ರೆಮ್ಲಿನ್‍ನ ವಿಶೇಷ ಪ್ರತಿನಿಧಿಯಾಗಿದ್ದರು. ಆದರೆ ರಷ್ಯಾ, ಉಕ್ರೇನ್‍ನ ಮೇಲೆ ದಾಳಿ ನಡೆಸುತ್ತಿರುವುದರಿಂದ ಪುಟಿನ್ ಮೇಲೆ ಚುಬೈಸ್ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಯನ್ನು ನೀಡಿದ್ದಾರೆ. ಇದನ್ನೂ ಓದಿ: ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್
ಚುಬೈಸ್ ರಾಜೀನಾಮೆಯನ್ನು ನೀಡುವುದರ ಜೊತೆಗೆ ರಷ್ಯಾವನ್ನು ತೊರೆದಿದ್ದಾರೆ. ಸದ್ಯ ಟರ್ಕಿಯಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಬುಧವಾರ ಚುಬೈಸ್ ರಾಜೀನಾಮೆ ನೀಡಿದ್ದಾರೆ ಎಂದು ರಷ್ಯಾ ಸರ್ಕಾರ ದೃಢಪಡಿಸಿದರು. ಆದರೆ ಚುಬೈಸ್ ರಷ್ಯಾವನ್ನು ತೊರೆದಿರುವ ಬಗ್ಗೆ ಇನ್ನೂ ದೃಢಿಕರಿಸಿಲ್ಲ. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ