Tag: Ukraine

  • ರಷ್ಯಾ | ಮಿಲಿಟರಿ ಡ್ರೋನ್‌ ತಯಾರಿಕೆಗೆ ಮಕ್ಕಳ ಬಳಕೆ – ಆಟದ ಜೊತೆಗೆ‌ ಸಕತ್ ಟ್ಯಾಲೆಂಟ್!

    ರಷ್ಯಾ | ಮಿಲಿಟರಿ ಡ್ರೋನ್‌ ತಯಾರಿಕೆಗೆ ಮಕ್ಕಳ ಬಳಕೆ – ಆಟದ ಜೊತೆಗೆ‌ ಸಕತ್ ಟ್ಯಾಲೆಂಟ್!

    ಕ್ರೇನ್‌ (Ukraine) ವಿರುದ್ಧ ನಿರಂತರ ಯುದ್ಧದಲ್ಲಿ ತೊಡಗಿರುವ ರಷ್ಯಾ (Russia) ಈಗ ಮಕ್ಕಳನ್ನು ಸಹ ವೆಪನ್‌ ರೀತಿ ಬಳಕೆ ಮಾಡಿಕೊಳ್ಳುತ್ತಿದೆ. ಉಕ್ರೇನ್‌ನ್ನು ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವ ರಷ್ಯಾ ಮಕ್ಕಳನ್ನು (Children) ಮಿಲಿಟರಿ ಡ್ರೋನ್‌ಗಳ (Military Drone) ತಯಾರಿಕೆಗೆ ಬಳಕೆ ಮಾಡಿಕೊಳ್ಳುತ್ತಿದೆ. ವಿಡಿಯೋ ಗೇಮ್‌ನ್ನು ಬಳಸಿಕೊಂಡು ಪ್ರತಿಭಾವಂತ ಮಕ್ಕಳನ್ನು ಗುರುತಿಸಲಾಗುತ್ತಿದೆ. ಇದಕ್ಕಾಗಿ ಬೆರ್ಲೋಗಾ ಎಂಬ ವಿಡಿಯೋ ಗೇಮ್‌ ಬಳಸಿಕೊಂಡು ಅದರಲ್ಲಿ ಟಾಸ್ಕ್‌ ಪೂರೈಸಿದವರನ್ನು ಮಿಲಿಟರಿ ಡ್ರೋನ್‌ ವಿನ್ಯಾಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ರಷ್ಯಾದಿಂದ ಗಡೀಪಾರಾದ ಸುದ್ದಿ ಸಂಸ್ಥೆ ಇನ್‌ಸೈಡರ್ ನಡೆಸಿದ ತನಿಖಾ ವರದಿಯಲ್ಲಿ ಈ ವಿಚಾರ ಬಯಲಾಗಿದೆ.

    ಏನಿದು ಬೆರ್ಲೋಗಾ ಗೇಮ್‌
    ರಷ್ಯಾದಲ್ಲಿ 2022 ರಲ್ಲಿ ಬೆರ್ಲೋಗಾ ಎಂಬ ವಿಡಿಯೋ ಗೇಮ್‌ ಆರಂಭಿಸಲಾಯಿತು. ಈ ಗೇಮ್‌ನಲ್ಲಿ ʻಕರಡಿಗಳುʼ ಜೇನುನೊಣಗಳ ಹಿಂಡುಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಗೇಮ್‌ನಲ್ಲಿ ಜೇನು ನೊಣಗಳನ್ನು ಹಿಮ್ಮೆಟ್ಟಿಸಲು ಡ್ರೋನ್‌ಗಳನ್ನು ಸಹ ಬಳಸಲಾಗುತ್ತದೆ. ರಷ್ಯಾದ ಲಕ್ಷಾಂತರ ಯುವಕರು ಈ ಆಟವನ್ನು ಆಡುತ್ತಾರೆ. ಅತ್ಯಂತ ಯಶಸ್ವಿ ಆಟಗಾರರಿಗೆ ಹೊಸ ಹೊಸ ಟಾಸ್ಕ್‌ಗಳು ಎದುರಾಗುತ್ತಾ ಹೋಗುತ್ತದೆ. ಹೀಗೆ ಟಾಸ್ಕ್‌ಗಳನ್ನು ಪೂರೈಸಿದವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಡ್ರೋನ್‌ಗಳ ವಿನ್ಯಾಸಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ.

    ಈ ಗೇಮ್‌ನಲ್ಲಿ ಹೆಚ್ಚಿನ ಟಾಸ್ಕ್‌ ಪೂರೈಸಿದವರಿಗೆ ಶಾಲೆಯಲ್ಲಿ ಹೆಚ್ಚಿನ ಅಂಕಗಳು ಸಿಗುತ್ತದೆ ಎನ್ನಲಾಗಿದೆ. ಈ ರೀತಿ ಬೆರ್ಲೋಗಾ ಗೇಮ್‌ ಆಡಲು ಮಕ್ಕಳನ್ನು ಪ್ರೇರೇಪಿಸಲಾಗುತ್ತದೆ. ಶಾಲೆಗಳಲ್ಲಿ ಇದೊಂದು ಅಲಿಖಿತ ನಿಯಮ ಎಂದು ವ್ಯಕ್ತಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ವಿಡಿಯೋ ಗೇಮ್‌ನಿಂದ ಕಂಪನಿಗಳ ಕಡೆಗೆ!
    ರಷ್ಯಾದ ಅಧಿಕಾರಿಗಳು ದೇಶಾದ್ಯಂತ‌ ಮಿಲಿಟರಿ ಡ್ರೋನ್‌ಗಳನ್ನು ವಿನ್ಯಾಸಗೊಳಿಸಲು ಮಕ್ಕಳ ಹುಡುಕಾಟ ನಡೆಸುತ್ತಿದ್ದಾರೆ. ಈ ಹುಡುಕಾಟ, ಮುಗ್ದ ಮಕ್ಕಳ ವಿಡಿಯೋ ಗೇಮ್‌ನೊಂದಿಗೆ ಪ್ರಾರಂಭವಾಗಿ, ಅತ್ಯಂತ ಪ್ರತಿಭಾನ್ವಿತ ಮಕ್ಕಳ ರಕ್ಷಣಾ ಕಂಪನಿಗಳ ಸೇರ್ಪಡೆಯೊಂದಿಗೆ ಕೊನೆಗೊಳ್ಳುತ್ತದೆ. ಅಲ್ಲದೇ ಯುದ್ಧಕ್ಕಾಗಿ ಯುವಕರನ್ನು ಪ್ರಚೋದಿಸಲು ದೇಶಭಕ್ತಿ ಮತ್ತು ಮಿಲಿಟರಿ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಇನ್‌ಸೈಡರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪತ್ರಕರ್ತ ಹೇಳಿದ್ದೇನು?
    ರಷ್ಯಾದ ಮಕ್ಕಳು ಡ್ರೋನ್‌ಗಳ ವಿನ್ಯಾಸದಲ್ಲಿ ಸಕ್ರಿಯರಾಗಿದ್ದಾರೆ. ಡ್ರೋನ್‌ ವಿನ್ಯಾಸ ಮಾಡುವ ಹಲವಾರು ಮಕ್ಕಳ ಬಗ್ಗೆ ನನಗೆ ತಿಳಿದಿದೆ. ಈ ಬಗ್ಗೆ ಮಕ್ಕಳು ಸಹ ನಮಗೆ ಮಾಹಿತಿ ನೀಡಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿಕೊಂಡಿದ್ದಾರೆ.

    14 – 15 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಡ್ರೋನ್ ತಯಾರಿಕೆಯ ಅಧ್ಯಯನ ಮಾಡಲು ಮತ್ತು ನಂತರ ಕಾರ್ಖಾನೆಯಲ್ಲಿ ಕೆಲಸ ಮಾಡಲು ಅಲಬುಗಾ ಕಾರ್ಖಾನೆ ಆಹ್ವಾನಿಸಿದೆ. ಈ ಬಗ್ಗೆ ರಷ್ಯಾದ ಸರ್ಕಾರಿ ಸ್ವಾಮ್ಯದ ಜ್ವೆಜ್ಡಾ ಟಿವಿ ಚಾನೆಲ್‌ನಲ್ಲಿ, ಮಕ್ಕಳು ಕಂಪ್ಯೂಟರ್‌ಗಳ ಬಳಿ ಕುಳಿತ ಹಾಗೂ ಡ್ರೋನ್‌ಗಳನ್ನು ಜೋಡಿಸುವ ದೃಶ್ಯ ಪ್ರಸಾರ ಆಗಿತ್ತು.

    ರಷ್ಯಾ – ಉಕ್ರೇನ್‌ ವಾರ್‌ನಲ್ಲಿ ಡ್ರೋನ್‌ಗಳ ಪಾತ್ರ
    ರಷ್ಯಾ ಮತ್ತು ಉಕ್ರೇನ್‌ಗೆ ಯುದ್ಧದದಲ್ಲಿ ಡ್ರೋನ್‌ಗಳು ಪ್ರಮುಖ ಪಾತ್ರವಹಿಸುತ್ತಿವೆ. ಇದರಿಂದಾಗಿ ಡ್ರೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ವ್ಲಾಡಿಮಿರ್ ಪುಟಿನ್ ರಷ್ಯಾದ ಕಂಪನಿಗಳಿಗೆ ಕರೆ ನೀಡಿದ್ದಾರೆ. ಇನ್ನೂ, ಡ್ರೋನ್‌ಗಳ ಹೆಚ್ಚಿನ ಸಾಮರ್ಥ್ಯಕ್ಕಾಗಿ ಮತ್ತು ಎಲೆಕ್ಟ್ರಾನಿಕ್ ಜಾಮಿಂಗ್ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಎರಡೂ ಕಡೆಯವರು ಹೊಸ ತಂತ್ರಜ್ಞಾನಗಳ ಮೊರೆ ಹೋಗಿದ್ದಾರೆ. ಇದೇ ಕಾರಣಕ್ಕೆ ರಷ್ಯಾ ಹೊಸ ಹೊಸ ಆವಿಷ್ಕಾರಕ್ಕಾಗಿ ಮಕ್ಕಳನ್ನು ಸಹ ಮಿಲಿಟರಿ ಡ್ರೋನ್‌ಗಳ ತಯಾರಿಕೆಗೆ ಬಳಸಿಕೊಳ್ಳುತ್ತಿದೆ.

    ಡ್ರೋನ್‌ ಬಳಸಿ 40 ಯುದ್ಧ ವಿಮಾನ ಧ್ವಂಸ ಮಾಡಿದ್ದ ಉಕ್ರೇನ್‌
    ಇತ್ತೀಚೆಗೆ ಉಕ್ರೇನ್‌ ರಷ್ಯಾದ ಒಲೆನ್ಯಾ ಮತ್ತು ಬೆಲಾಯಾದಲ್ಲಿನ ವಾಯುನೆಲೆಗಳು ಸೇರಿದಂತೆ ರಷ್ಯಾದ ಮಿಲಿಟರಿ ವಾಯುನೆಲೆಗಳ ಮೇಲೆ ಏಕಕಾಲದಲ್ಲಿ ಡ್ರೋನ್ ದಾಳಿ ನಡೆಸಿತ್ತು. ದಾಳಿಯಲ್ಲಿ ವಾಯುನೆಲೆಯಲ್ಲಿದ್ದ 40 ಕ್ಕೂ ಹೆಚ್ಚು ಯುದ್ಧ ವಿಮಾನಗಳು ನಾಶವಾಗಿದ್ದವು.‌ ಅತ್ಯಂತ ಕಡಿಮೆ ಬೆಲೆಯ ಡ್ರೋನ್‌ಗಳಿಂದ ರಷ್ಯಾದ 7 ಬಿಲಿಯನ್ ಡಾಲರ್ ಮೌಲ್ಯದ ಯುದ್ಧ ವಿಮಾನಗಳು ಸುಟ್ಟು ಭಸ್ಮವಾಗಿದ್ದವು. ಇದು ರಷ್ಯಾ ಇತಿಹಾಸದಲ್ಲೇ ಅತಿದೊಡ್ಡ ಡ್ರೋನ್ ದಾಳಿಯಾಗಿದೆ.

    ಮಕ್ಕಳನ್ನು ಈ ರೀತಿ ಬಳಸೋದು ಎಷ್ಟು ಸರಿ?
    ಯುದ್ಧ ಸಾಮಾಗ್ರಿಗಳನ್ನು ತಯಾರಿಸಲು, ಯುದ್ಧಕಾಲದಲ್ಲಿ ಮಿಲಿಟರಿ ಸಂಬಂಧಿತ ಕಾಖಾನೆಗಳಲ್ಲಿ ಮಕ್ಕಳನ್ನು ಬಳಕೆ ಮಾಡೋದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಿದೆ. ಇದು ಮಕ್ಕಳ ಹಕ್ಕುಗಳ ವಿರುದ್ಧವಾಗಿದೆ. ಇದರಿಂದಾಗಿ ಶಿಕ್ಷಣ, ಮಕ್ಕಳ ಆರೋಗ್ಯ, ಅಮೂಲ್ಯವಾದ ಬಾಲ್ಯ ಅವರಿಗೆ ಸಿಗದಂತಾಗುತ್ತದೆ ಎಂದು ತಜ್ಞರು ಆತಂಕ ಹೊರಹಾಕಿದ್ದಾರೆ.

    ಇನ್‌ಸೈಡರ್ ವರದಿ ಮಾಡಿದ್ದು ಹೇಗೆ?
    ರಷ್ಯಾದಲ್ಲಿ ಮಿಲಿಟರಿ ಸಂಬಂಧಿತ ಕಾರ್ಖಾನೆಗಳ ಬಳಿ ತೆರಳಿ ವರದಿ ಮಾಡಲು ಸರ್ಕಾರಿ ಸ್ವಾಮ್ಯದ ಮಾಧ್ಯಮಕ್ಕೆ ಮಾತ್ರ ಅವಕಾಶವಿದೆ. ಹೀಗಿದ್ದರೂ ಇನ್‌ಸೈಡರ್‌ ಮಕ್ಕಳನ್ನು ಬಳಸಿಕೊಂಡು ಡ್ರೋನ್‌ ತಯಾರಿಸುವ ಸ್ಥಳಕ್ಕೆ ತೆರಳಿ ವರದಿ ಮಾಡಿದೆ. ವರದಿಗಾರರು ಸರ್ಕಾರಿ ಸ್ವಾಮ್ಯದ ಮಾಧ್ಯಮದ ಸಿಬ್ಬಂದಿಯಂತೆ ನಟಿಸಿ ವರದಿ ಮಾಡಿದ್ದಾರೆ. ಈ ವಿಚಾರ ಗೊತ್ತಾದ ಬಳಿಕ ಈ ಸಂಸ್ಥೆಯನ್ನು ದೇಶದಿಂದ ಹೊರಗೆ ದಬ್ಬಲಾಗಿದೆ.

  • ರಷ್ಯಾದ ಏರ್‌ಬೇಸ್‌ ಉಡೀಸ್‌ ಮಾಡೋಕೆ ಉಕ್ರೇನ್ ಬಳಸಿದ FPV ಡ್ರೋನ್‌ ವಿಶೇಷವೇನು ಗೊತ್ತಾ?

    ರಷ್ಯಾದ ಏರ್‌ಬೇಸ್‌ ಉಡೀಸ್‌ ಮಾಡೋಕೆ ಉಕ್ರೇನ್ ಬಳಸಿದ FPV ಡ್ರೋನ್‌ ವಿಶೇಷವೇನು ಗೊತ್ತಾ?

    ಷ್ಯಾದ (Russia) ಮೇಲೆ ಉಕ್ರೇನ್‌ (Ukraine) ಜೂ.1ರಂದು ನಡೆಸಿದ ಡ್ರೋನ್‌ ದಾಳಿಯಲ್ಲಿ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಧ್ವಂಸವಾಗಿವೆ. ರಷ್ಯಾದಲ್ಲಿ ಪ್ರಬಲವಾದ ಮಿಲಿಟರಿ ವ್ಯವಸ್ಥೆ ಇದ್ದರೂ ಉಕ್ರೇನ್ ಭಾರೀ ಪ್ರಮಾಣದ ದಾಳಿ‌ಗೆ ಬಳಸಿದ ಎಫ್‌ಪಿವಿ ಡ್ರೋನ್‌ಗಳ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆ ಆರಂಭವಾಗಿದೆ.

    FPV ಡ್ರೋನ್‌ ಎಂದರೇನು?
    ಫಸ್ಟ್‌ ಪರ್ಸನ್‌ ವೀವ್‌ ಡ್ರೋನ್‌ನಲ್ಲಿ (FPV Drones ) ಅಳವಡಿಸಲಾದ ಕ್ಯಾಮೆರಾದ ಮೂಲಕ ಆಪರೇಟರ್‌ಗೆ ನೇರ ದೃಶ್ಯಗಳನ್ನು ರವಾನಿಸುತ್ತವೆ. ಸ್ಮಾರ್ಟ್‌ಫೋನ್‌ಗಳು ಅಥವಾ ಇತರ ಸಾಧನಗಳನ್ನು ಬಳಸಿಕೊಂಡು ಈ ದೃಶ್ಯಾವಳಿಗಳನ್ನು ವೀಕ್ಷಿಸಬಹುದು. ಇನ್ನೂ ದಾಳಿಯ ವೇಳೆ, ರಿಮೋಟ್‌ ಬಳಸಿ ಟಾರ್ಗೆಟ್‌ನ್ನು ನಾಶಪಡಿಸಲಾಗುತ್ತದೆ.

    FPV ಡ್ರೋನ್‌ಗಳನ್ನು ಮಾಧ್ಯಮ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈಗ ಮಿಲಿಟರಿ ಕಾರ್ಯಾಚರಣೆಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತಿದೆ. ಈ ಡ್ರೋನ್‌ಗಳು ಸಾಮಾನ್ಯವಾಗಿ ಕಣ್ಗಾವಲು ಡ್ರೋನ್‌ಗಳಿಗೆ ಹೋಲಿಸಿದರೆ ಕಡಿಮೆ ವ್ಯಾಪ್ತಿಯನ್ನು ಹೊಂದಿರುತ್ತವೆ. ಇದನ್ನೂ ಓದಿ: ರಷ್ಯಾದ ವಾಯುನೆಲೆಗಳ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ – 40 ವಿಮಾನಗಳು ಧ್ವಂಸ

    ಯುದ್ಧದಲ್ಲಿ FPV ಡ್ರೋನ್‌ಗಳ ಬಳಕೆ ಏಕೆ?
    FPV ಡ್ರೋನ್‌ಗಳ ಬೆಲೆ ಬಹಳ ಕಡಿಮೆ. FPV ಡ್ರೋನ್‌ನ ಬೆಲೆಯನ್ನು ಸುಮಾರು 500 ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಯುದ್ದದಲ್ಲಿ ಬಳಸುವ ಬೇರೆ ಶಸ್ತ್ರಾಸ್ತ್ರಗಳಿಗೆ ಹೋಲಿಸಿದರೆ, ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗುತ್ತದೆ.

    FPV ಡ್ರೋನ್‌ಗಳನ್ನು ಪತ್ತೆಹಚ್ಚುವುದು ಕಷ್ಟ, ಇದರಿಂದಾಗಿ ಶತ್ರು ನೆಲೆಗಳ ಮೇಲೆ ಸುಲಭವಾಗಿ ದಾಳಿ ಮಾಡಬಹುದಾಗಿದೆ. ಇದೇ ಕಾರಣಕ್ಕೆ ಈಗ ಉಕ್ರೇನ್ ಮತ್ತು ರಷ್ಯಾ ಎರಡೂ ತಮ್ಮ ಮಿಲಿಟರಿ ಶಕ್ತಿ ಹೆಚ್ಚಿಸಲು ಡ್ರೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಿವೆ.

    ಲಕ್ಷ ವೆಚ್ಚ.. ಕೋಟಿ ಕೋಟಿ ಮೌಲ್ಯದ ವಿಮಾನ, ಟ್ಯಾಂಕರ್ ಧ್ವಂಸ!
    ಎಫ್‌ಪಿವಿ ಡ್ರೋನ್‌ಗಳು ಕಡಿಮೆ ವೆಚ್ಚದ್ದಾಗಿದ್ದು, ಇವುಗಳನ್ನು ಡ್ರೋನ್ ರೇಸಿಂಗ್ ಮತ್ತು ಚಿತ್ರೀಕರಣಕ್ಕೆ ಬಳಕೆ ಮಾಡಲಾಗುತ್ತಿತ್ತು. ಈಗ ಇವುಗಳನ್ನು ಯುದ್ಧಕ್ಕೂ ಬಳಕೆ ಮಾಡಲಾಗುತ್ತಿದೆ. ಇವುಗಳಿಗೆ ಸ್ಫೋಟಕಗಳನ್ನು ಅಳವಡಿಸಿ, ಶತ್ರುಗಳ ನೆಲಕ್ಕೆ ಕಳುಹಿಸಿ ಸ್ಫೊಟಿಸಲಾಗುತ್ತಿದೆ. ಈ ಡ್ರೋನ್‌ಗಳ ಬೆಲೆ ಕಡಿಮೆ ಆದ್ರೂ, ಬೃಹತ್‌ ಟ್ಯಾಂಕರ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ.

    ಆಪ್ಟಿಕಲ್‌ ಫೈಬರ್‌
    ಈ ಡ್ರೋನ್‌ಗಳನ್ನು ಆಪ್ಟಿಕಲ್‌ ಫೈಬರ್‌ ಬಳಸಿ ತಯಾರಿಸಲಾಗುತ್ತದೆ. ಇವು 18 ರಿಂದ 20 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಅತಿ ವೇಗ ಹಾಗೂ ಸಣ್ಣ ಗಾತ್ರ ಹೊಂದಿರುವುದರಿಂದ ಶತ್ರು ರಾಷ್ಟ್ರಗಳ ರಾಡಾರ್‌ಗೆ ಇವುಗಳನ್ನು ಪತ್ತೆ ಹಚ್ಚಲು ಆಗುವುದಿಲ್ಲ. ಇದು ದಾಳಿಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

    ಈ ಡ್ರೋನ್‌ಗಳು ಅಷ್ಟೊಂದು ಬಲಶಾಲಿನಾ?
    ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧ  (Russia – Ukraine War) ದಿನೇ ದಿನೇ ಉಲ್ಬಣವಾಗುತ್ತಿದೆ. ಇತ್ತೀಚೆಗೆ ವಿಶ್ವವೇ ಬೆಚ್ಚಿ ಬೀಳುವಂತೆ ರಷ್ಯಾ ಮೇಲೆ ಉಕ್ರೇನ್‌ ದಾಳಿ ಮಾಡಿದೆ. ದಾಳಿಯಲ್ಲಿ ರಷ್ಯಾದ ಐದು ಏರ್‌ಬೇಸ್‌ಗಳು ಉಡೀಸ್‌ ಆಗಿವೆ. ಇದರಿಂದ FPV ಡ್ರೋನ್‌ಗಳು ಅಷ್ಟೊಂದು ಬಲಶಾಲಿನಾ ಎಂಬ ಚರ್ಚೆಗಳು ಆರಂಭವಾಗಿದೆ. ಉಕ್ರೇನ್‌ ರಷ್ಯಾದ ಮೇಲೆ ನಡೆಸಿದ ದಾಳಿಯ ಬೆನ್ನಲ್ಲೇ ಭಾರತದಲ್ಲೂ ಎಫ್‌ಪಿವಿ ಡ್ರೋನ್‌ಗಳ ಬಗ್ಗೆ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಭಾರತ ಹಾಗೂ ಪಾಕ್‌ ನಡುವಿನ ಉದ್ವಿಗ್ನತೆಯಿಂದ ಈ ವಿಚಾರ ಮತ್ತಷ್ಟು ಗಂಭೀರ ಚರ್ಚೆಗೆ ಕಾರಣವಾಗಿದೆ.

    40 ಲಕ್ಷ ಡ್ರೋನ್‌ ಉತ್ಪಾದನೆ ಗುರಿ!
    ಯುದ್ಧದ ಆರಂಭದಿಂದಲೂ ಉಕ್ರೇನ್ FPV ಡ್ರೋನ್‌ಗಳನ್ನು ಬಳಸುತ್ತಿದೆ. ಮಾರ್ಚ್ 2025 ರಲ್ಲಿ 1,000 FPV ಡ್ರೋನ್‌ಗಳನ್ನು ಉಕ್ರೇನ್‌ ಕೊಂಡುಕೊಂಡಿತ್ತು. ಈ ವರ್ಷ ಉಕ್ರೇನ್ 40 ಲಕ್ಷಕ್ಕೂ ಹೆಚ್ಚು ಡ್ರೋನ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಚೀನಾ ಜಾಗತಿಕ ಡ್ರೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದು, ಲಿಥಿಯಂ-ಐಯಾನ್ ಬ್ಯಾಟರಿಗಳಂತಹ ಅಗತ್ಯ ವಸ್ತುಗಳನ್ನು ಉಕ್ರೇನ್‌ಗೆ ಇಲ್ಲಿಂದಲೇ ಪೂರೈಕೆಯಾಗುತ್ತದೆ.

    ಭಾರತದ ಸೇನೆಯಲ್ಲಿ ಎಷ್ಟು ಎಫ್‌ಪಿವಿ ಡ್ರೋನ್‌ಗಳಿವೆ?
    ಭಾರತದ ಸೇನೆಯ ಬಳಿ ಸದ್ಯ 5 FPV ಡ್ರೋನ್‌ಗಳು ಇವೆ. ಈ ವರ್ಷ ಮಾರ್ಚ್‌ನಲ್ಲಿ ಸೇನೆಯ ಬತ್ತಳಿಕೆಗೆ ಇವು ಸೇರಿಸಲಾಯಿತು. ಇವುಗಳ ಬೆಲೆ ಒಂದಕ್ಕೆ 1.4 ಲಕ್ಷ ರೂ. ಆಗಿದ್ದು, ಭಾರತದಲ್ಲಿರುವ ಡ್ರೋನ್‌ಗಳನ್ನು ದೇಶೀಯವಾಗಿ, ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈಗ 95 ಡ್ರೋನ್‌ಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ. ಈ ವರ್ಷದ ಕೊನೆಯಲ್ಲಿ ಒಟ್ಟು 100 FPV ಡ್ರೋನ್‌ಗಳನ್ನು ಸೇನೆಗೆ ನಿಯೋಜಿಸುವ ಗುರಿಯನ್ನು ಸರ್ಕಾರ ಹೊಂದಿದೆ.

    ಭಾರತದ ಡ್ರೋನ್ ಸಿಸ್ಟಮ್ಸ್
    ಹೆಚ್ಚುತ್ತಿರುವ ಡ್ರೋನ್ ದಾಳಿ ಬೆದರಿಕೆ ವಿರುದ್ಧ ಹೋರಾಡಲು ಭಾರತ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಡ್ರೋನ್‌ ದಾಳಿ ವಿಫಲಗೊಳಿಸಲು ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಬಹು-ಪದರದ ಆಂಟಿ-ಡ್ರೋನ್ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಇದು ಮೈಕ್ರೋ-ಕ್ಷಿಪಣಿಗಳನ್ನು ಬಳಸಿಕೊಂಡು, 6–10 ಕಿಮೀ ವ್ಯಾಪ್ತಿಯಲ್ಲಿನ ಡ್ರೋನ್‌ಗಳನ್ನು ಪತ್ತೆಹಚ್ಚುತ್ತದೆ. 2.5 ಕಿಮೀ ವರೆಗಿನ ಪ್ರತಿಬಂಧಕ ವ್ಯಾಪ್ತಿಯನ್ನು ಈ ಕ್ಷಿಪಣಿಗಳು ಹೊಂದಿವೆ.

    ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಆಕಾಶ್‌ತೀರ್, ಕೆಳಮಟ್ಟದ ವಾಯುಪ್ರದೇಶದ ಮೇಲೆ ಕಣ್ಗಾವಲಿಡುತ್ತದೆ. ಭಾರತ – ಪಾಕ್‌ ಸಂಘರ್ಷದ ಸಮಯದಲ್ಲಿ ಡ್ರೋನ್ ಬೆದರಿಕೆಗಳನ್ನು ತಟಸ್ಥಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿತ್ತು.

    ಇಂದ್ರಜಾಲ್: ಗ್ರೀನ್ ರೊಬೊಟಿಕ್ಸ್ ಅಭಿವೃದ್ಧಿಪಡಿಸಿದ ಇಂದ್ರಜಾಲ್, ಡ್ರೋನ್‌ಗಳನ್ನು ಪತ್ತೆಹಚ್ಚುವ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ AI-ಚಾಲಿತ ಪ್ರತಿ-ಡ್ರೋನ್ ವ್ಯವಸ್ಥೆಯಾಗಿದೆ. ಇದು ಕಠಿಣ ಭೂಪ್ರದೇಶದಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಎರಡು ರೀತಿಯಲ್ಲಿ ಶತ್ರು ಡ್ರೋನ್‌ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ. ಒಂದು ಡ್ರೋನ್‌ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಇನ್ನೊಂದು ಡ್ರೋನ್‌ನ್ನೇ ಹೊಡೆದುರುಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದನ್ನೂ ಓದಿ: ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

  • ಶಾಂತಿ ಸಭೆ ಮೊಟಕು – ಬೇಷರತ್‌ ಕದನ ವಿರಾಮ ಮಾತುಕತೆ ತಿರಸ್ಕರಿಸಿದ ರಷ್ಯಾ

    ಶಾಂತಿ ಸಭೆ ಮೊಟಕು – ಬೇಷರತ್‌ ಕದನ ವಿರಾಮ ಮಾತುಕತೆ ತಿರಸ್ಕರಿಸಿದ ರಷ್ಯಾ

    ಇಸ್ತಾನ್‌ಬುಲ್‌: ಯುದ್ಧಪೀಡಿತ ರಷ್ಯಾ-ಉಕ್ರೇನ್‌ ನಡುವೆ 2022ರ ಬಳಿಕ 2ನೇ ಸುತ್ತಿನ ಶಾಂತಿ ಮಾತುಕತೆ ಸೋಮವಾರ ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ನಡೆಯಿತು. ಸಭೆಯು ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಶುರುವಾದ್ರೂ ಒಂದು ಗಂಟೆಗೆ ಮಾತುಕತೆ ಮುಕ್ತಾಯಗೊಂಡಿತು. ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಕಂಡುಬಂದಿತು.

    ಸಭೆಯ ಆರಂಭದಲ್ಲೇ ಉಕ್ರೇನ್‌ ನಡೆಸಿದ ಡ್ರೋನ್‌ ದಾಳಿ ವಿಚಾರ ಬಲವಾಗಿ ವಿರೋಧಿಸಿದ ರಷ್ಯಾ ಪ್ರತಿನಿಧಿಗಳು, ಉಕ್ರೇನ್‌ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರದ ದಾಳಿಗೆ ತಿರುಗೇಟು ನೀಡುವ ಶಕ್ತಿ ನಮಗೂ ಇದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ನಾವು ಭಿಕ್ಷೆ ಪಾತ್ರೆ ಹಿಡಿದು ಬರುತ್ತೇವೆಂದು ಚೀನಾದಂಥ ಮಿತ್ರರಾಷ್ಟ್ರಗಳು ನಿರೀಕ್ಷಸಲ್ಲ: ಪಾಕ್‌ ಪ್ರಧಾನಿ

    ರಷ್ಯಾ ಮೇಲೆ ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯೇ ಎಲ್ಲದಕ್ಕೂ ಕಾರಣ. ರಷ್ಯಾ ಪ್ರತಿನಿಧಿಗಳು ಉಕ್ರೇನ್‌ನ ಈ ದಾಳಿಯನ್ನು ಬಲವಾಗಿ ವಿರೋಧಿಸಿ, ಷರತ್ತುರಹಿತ ಕದನ ವಿರಾಮ ಮಾತುಕತೆಯನ್ನ ತಿರಸ್ಕರಿಸಿದರು. ʻಆಪರೇಷನ್ ಸ್ಪೈಡರ್ಸ್ ವೆಬ್ʼ ಎಂದು ಹೆಸರಿಸಲಾದ ಈ ರಹಸ್ಯ ಕಾರ್ಯಾಚರಣೆಯಲ್ಲಿ, ಉಕ್ರೇನ್ ಒಂದೂವರೆ ವರ್ಷದಿಂದ ಯೋಜನೆ ರೂಪಿಸಿತ್ತು. ಹೀಗಾಗಿ ಇಸ್ತಾನ್‌ಬುಲ್‌ನಲ್ಲಿ ನಡೆದ ಉಕ್ರೇನ್‌ನೊಂದಿಗಿನ ಶಾಂತಿ ಮಾತುಕತೆಯ ಸಮಯದಲ್ಲಿ ರಷ್ಯಾ ಬೇಷರತ್‌ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದು ಕೈವ್ ಸಂಧಾನಕಾರರು ತಿಳಿಸಿದ್ದಾರೆ.

    ಸೇನಾ ದಾಳಿಯ ವಿಚಾರವಾಗಿ ಉಭಯ ದೇಶಗಳ ಪ್ರತಿನಿಧಿಗಳ ನಡುವಿನ ವಾಗ್ವಾದದಿಂದ ಸಭೆ ಅಪೂರ್ಣಗೊಂಡಿತು. ‘ಕದನ ವಿರಾಮ ಸಂಬಂಧ ಉಭಯ ದೇಶದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಸಂಘರ್ಷ ಪರಿಸ್ಥಿತಿಯ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ಯುದ್ಧ ಕೈದಿಗಳ ಹಸ್ತಾಂತರದ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ, ಸಂಘರ್ಷ ಕೊನೆಗೊಳಿಸುವ ವಿಷಯವಾಗಿ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಟರ್ಕಿ ವಿದೇಶಾಂಗ ಸಚಿವ ಹಕನ್‌ ಫಿಡಾನ್‌ ತಿಳಿಸಿದ್ದಾರೆ. ಇದನ್ನೂ ಓದಿ: America | ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಜನರತ್ತ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿ – 6 ಮಂದಿಗೆ ಗಾಯ

    ಚರ್ಚೆ ವೇಳೆ ರಷ್ಯಾ ಪ್ರತಿನಿಧಿ ಮೆಡಿನ್ಸ್ಕಿ ಅವರು, ಯುದ್ಧದಲ್ಲಿ ಕೊಲಲ್ಪಟ್ಟ 6,000 ಉಕ್ರೇನಿಯನ್ ಸೈನಿಕರ ಶವಗಳನ್ನ ಹಿಂದಿರುಗಿಸುವುದಾಗಿ ತಿಳಿಸಿದರು. ಹಾಗಾಗಿ 2-3 ದಿನಗಳ ಸೀಮಿತ ಕದನ ವಿರಾಮ ಪ್ರಸ್ತಾಪಿಸಲಾಗಿದೆ. ಇದು ಸೈನಿಕರ ಮೃತದೇಹಗಳನ್ನು ಹಸ್ತಾಂತರಿಸುವ ಉದ್ದೇಶ ಮಾತ್ರ ಹೊಂದಿದೆ ಎಂದು ತಿಳಿಸಿದರು.

    ಪರಸ್ಪರ 1,000 ಯುದ್ಧ ಕೈದಿಗಳ ವಿನಿಮಯ ಒಪ್ಪಂದ
    ಉಕ್ರೇನ್‌ ಮತ್ತು ರಷ್ಯಾ ನಡುವೆ ತಲಾ 1,000 ಯುದ್ಧ ಕೈದಿಗಳ ವಿನಿಮಯದ ಕುರಿತು ರಷ್ಯಾ ಮತ್ತು ಉಕ್ರೇನ್ ಒಪ್ಪಂದಕ್ಕೆ ಬಂದಿವೆ. ಮುಂದುವರಿದು… ಯುದ್ಧ ಕೈದಿಗಳ ವಿನಿಮಯಕ್ಕಾಗಿ ಶಾಶ್ವತ ಸಮಿತಿ ರಚನೆಯ ಕುರಿತು ಒಪ್ಪಂದಕ್ಕೆ ಬರಲಾಗಿದೆ. ಇದರಿಂದ ಭವಿಷ್ಯದಲ್ಲಿ ಯುದ್ಧ ಕೈದಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪೂರ್ಣಗೊಳಿಸಬಹುದು ಎಂದು ರಷ್ಯಾ ಪ್ರತಿನಿಧಿ ತಿಳಿಸಿದ್ರು.

    ಅಲ್ಲದೇ, ಕ್ರೈಮಿಯಾ, ಡಾನ್‌ಬಾಸ್, ಖೆರ್ಸನ್ ಮತ್ತು ಜಪೊರೊಝೈಗಳನ್ನು ರಷ್ಯಾದ ಪ್ರದೇಶವೆಂದು ಅಂತಾರಾಷ್ಟ್ರೀಯವಾಗಿ ಗುರುತಿಸಬೇಕೆಂದು ಒತ್ತಾಯಿಸಿ ರಷ್ಯಾ ಉಕ್ರೇನ್‌ಗೆ ಶಾಂತಿ ಜ್ಞಾಪಕ ಪತ್ರವನ್ನ ಪ್ರಸ್ತಾಪಿಸಿದೆ ಎಂದು ತಿಳಿದುಬಂದಿದೆ. ಈ ನಡುವೆ ಎರಡೂ ದೇಶಗಳು ಹೊಸ ಕೈದಿಗಳ ವಿನಿಮಯಕ್ಕಾಗಿ ಒಪ್ಪಿಕೊಂಡಿರುವುದಾಗಿ ಹೇಳಿದರು. ಇದನ್ನೂ ಓದಿ: ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ – ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ ಝೆಲೆನ್ಸ್ಕಿ

  • ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ – ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ ಝೆಲೆನ್ಸ್ಕಿ

    ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ – ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ ಝೆಲೆನ್ಸ್ಕಿ

    – ಡ್ರೋನ್ ದಾಳಿ ಖಚಿತಪಡಿಸಿದ ರಷ್ಯಾ

    ಕೀವ್: ರಷ್ಯಾದ 4 ವಾಯುನೆಲೆ (Russia Airbase) ಮೇಲೆ ಭಾನುವಾರ ಉಕ್ರೇನ್ ಡ್ರೋನ್ ದಾಳಿ (Ukraine Drone Attack) ನಡೆಸಿದ್ದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ್ದಾರೆ.

    ರಷ್ಯಾದಲ್ಲಿ ಉಕ್ರೇನ್ ಡ್ರೋನ್ ದಾಳಿ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಷ್ಯಾದ ಮೇಲೆ ನಡೆಸಿದ ಬೃಹತ್ ಡ್ರೋನ್ ದಾಳಿಯ ಹಿಂದಿನ ಕಾರಣಗಳು ಮತ್ತು ಗುರಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: I’m Loving It – ಕೊನೆಗೂ ಬ್ರೇಕಪ್ ಬಗ್ಗೆ ಮೌನಮುರಿದ ಸಿಡ್ನಿ ಸ್ವೀನಿ!

    ಈ ದಾಳಿ ರಷ್ಯಾದ ಯುದ್ಧ ಸಾಮರ್ಥ್ಯವನ್ನು ಕುಗ್ಗಿಸುವ ಮತ್ತು ಯುದ್ಧದ ಪರಿಣಾಮಗಳನ್ನು ರಷ್ಯಾ ಕೂಡ ಅನುಭವಿಸುವಂತೆ ಮಾಡುವ ಉದ್ದೇಶವನ್ನು ಹೊಂದಿತ್ತು. ‘ಉಕ್ರೇನ್ ಸ್ಪೈಡರ್ ವೆಬ್’ ಕಾರ್ಯಾಚರಣೆಯಲ್ಲಿ 117 ಡ್ರೋನ್‌ಗಳನ್ನು ಬಳಕೆ ಮಾಡಲಾಗಿದೆ. ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ರಷ್ಯಾದ 40ಕ್ಕೂ ಹೆಚ್ಚು ಸೇನಾ ವಿಮಾನಗಳು ನಾಶಗೊಂಡಿವೆ. ಉಕ್ರೇನ್‌ನ ಭದ್ರತಾ ಸೇವೆ ಮತ್ತು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಈ ಬಾರಿ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್‌ – ಹಿಂದಿನ ಆರ್‌ಸಿಬಿ, ಪಂಜಾಬ್‌ ಫೈನಲ್‌ ಪಂದ್ಯಗಳು ಹೇಗಿತ್ತು?

    ಕಾರ್ಯಾಚರಣೆಯ ಸಿದ್ಧತೆ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ನಡೆಯಿತು ಮತ್ತು ಯೋಜನೆ, ಸಂಘಟನೆ ಮತ್ತು ಪ್ರತಿಯೊಂದು ವಿವರವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ. ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಮತ್ತು ರಷ್ಯಾದ ಆಕ್ರಮಣವನ್ನು ಎದುರಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಝೆಲೆನ್ಸ್ಕಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: America | ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಜನರತ್ತ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿ – 6 ಮಂದಿಗೆ ಗಾಯ

  • ರಷ್ಯಾದ ವಾಯುನೆಲೆಗಳ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ – 40 ವಿಮಾನಗಳು ಧ್ವಂಸ

    ರಷ್ಯಾದ ವಾಯುನೆಲೆಗಳ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ – 40 ವಿಮಾನಗಳು ಧ್ವಂಸ

    ಮಾಸ್ಕೋ: ರಷ್ಯಾದ (Russia) ವಾಯುನೆಲೆಗಳ ಮೇಲೆ ಉಕ್ರೇನ್ (Ukraine) ಅತಿದೊಡ್ಡ ಡ್ರೋನ್ ದಾಳಿ ನಡೆಸಿದೆ. ಪೂರ್ವ ಸೈಬೀರಿಯಾದ ರಷ್ಯಾದ ವಾಯು ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಉಕ್ರೇನ್‌ ದಾಳಿಯನ್ನು ಇರ್ಕುಟ್ಸ್ಕ್ ಪ್ರದೇಶದ ರಷ್ಯಾದ ಗವರ್ನರ್ ದೃಢಪಡಿಸಿದ್ದಾರೆ.

    ಒಲೆನ್ಯಾ ಮತ್ತು ಬೆಲಾಯಾದಲ್ಲಿನ ವಾಯುನೆಲೆಗಳು ಸೇರಿದಂತೆ ರಷ್ಯಾದ ಮಿಲಿಟರಿ ವಾಯುನೆಲೆಗಳ ಮೇಲೆ ಏಕಕಾಲದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ವಾಯುನೆಲೆಯಲ್ಲಿದ್ದ 40 ಕ್ಕೂ ಹೆಚ್ಚು ರಷ್ಯಾದ ವಿಮಾನಗಳನ್ನು ಧ್ವಂಸ ಮಾಡಲಾಗಿದೆ ಎಂದು ಉಕ್ರೇನಿಯನ್ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ನಾಶವಾದ ವಿಮಾನಗಳಲ್ಲಿ Tu-95 ಮತ್ತು Tu-22M3 ಬಾಂಬರ್‌ಗಳು ಮತ್ತು ಕನಿಷ್ಠ ಒಂದು A-50 ಸೇರಿವೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

    ಶಸ್ತ್ರಾಸ್ತ್ರಗಳ ಕೊರತೆ ಎದುರಿಸುತ್ತಿರುವ ಉಕ್ರೇನ್‌ ರಷ್ಯಾದ ಮೇಲೆ ದಾಳಿ ನಡೆಸಲು ಡ್ರೋನ್‌ಗಳ ಪಡೆಯನ್ನು ಸಜ್ಜು ಮಾಡಿದೆ. ಹಿಂದೆಯೂ ರಷ್ಯಾದ ಮಿಲಿಟರಿ ಮತ್ತು ತೈಲ ಘಟಕಗಳ ಮೇಳೆ ದಾಳಿ ಮಾಡಲು ಉಕ್ರೇನ್‌ ಡ್ರೋನ್‌ಗಳನ್ನು ಬಳಸಿಕೊಂಡಿತ್ತು.

    ರಷ್ಯಾ ಸೋಮವಾರ ಇಸ್ತಾನ್‌ಬುಲ್‌ನಲ್ಲಿ ಮಾತುಕತೆಯ ಬಗ್ಗೆ ಪ್ರಸ್ತಾಪಿಸಿತ್ತು. ಈ ಪ್ರಸ್ತಾಪವನ್ನು ಉಕ್ರೇನ್ ಅಂಗೀಕರಿಸಿತ್ತು. ಈ ಬಗ್ಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ತಮ್ಮ ಸಚಿವ ರುಸ್ಟೆಮ್ ಉಮೆರೊವ್ ನೇತೃತ್ವದ ನಿಯೋಗ ರಷ್ಯಾದೊಂದಿಗೆ ಮಾತುಕತೆಗಾಗಿ ಇಸ್ತಾನ್‌ಬುಲ್‌ಗೆ ಬರಲಿದೆ ಎಂದು ಹೇಳಿದ್ದರು. ಇದೆಲ್ಲ ಬೆಳವಣಿಗೆಗಳ ನಡುವೆ ಉಕ್ರೇನ್‌ ರಷ್ಯಾ ಮೇಲೆ ದಾಳಿ ನಡೆಸಿದೆ.

  • ಉಕ್ರೇನ್ ಗಡಿಯಲ್ಲಿ ರೈಲ್ವೆ ಬ್ರಿಡ್ಜ್ ಕುಸಿತ – ಹಳಿ ತಪ್ಪಿ 7 ಮಂದಿ ಸಾವು, 30 ಜನಕ್ಕೆ ಗಾಯ

    ಉಕ್ರೇನ್ ಗಡಿಯಲ್ಲಿ ರೈಲ್ವೆ ಬ್ರಿಡ್ಜ್ ಕುಸಿತ – ಹಳಿ ತಪ್ಪಿ 7 ಮಂದಿ ಸಾವು, 30 ಜನಕ್ಕೆ ಗಾಯ

    ಮಾಸ್ಕೋ: ರಷ್ಯಾದ (Russia) ಪಶ್ಚಿಮ ಬ್ರಿಯಾನ್ಸ್ಕ್‌ ಪ್ರದೇಶದಲ್ಲಿ ಶನಿವಾರ ತಡರಾತ್ರಿ ರೈಲು ಸೇತುವೆ ಕುಸಿದ (Bridge Collapse) ಪರಿಣಾಮ ರೈಲು ಹಳಿ ತಪ್ಪಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

    ಸಾರಿಗೆ ಕಾರ್ಯಾಚರಣೆಗಳ ಮೇಲಿನ ಅಕ್ರಮ ದಾಳಿಯಿಂದ ಉಕ್ರೇನ್ (Ukraine) ಗಡಿ ಭಾಗಗಲ್ಲಿರುವ ರೈಲ್ವೆ ಬ್ರಿಡ್ಜ್ ಕುಸಿದು ಬಿದ್ದಿದೆ. ಕ್ಲಿಮೊವೊದಿಂದ ಮಾಸ್ಕೋಗೆ ರೈಲು ಬರುತ್ತಿದ್ದಾಗ ಈ ಸೇತುವೆ ಕುಸಿದಿದೆ. ಪರಿಣಾಮ ರೈಲು ಹಳಿ ತಪ್ಪಿ ದುರಂತ ಸಂಭವಿಸಿದೆ ಎಂದು ರಷ್ಯಾದ ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?

    ಸೇತುವೆ ಕುಸಿದ ನಂತರ ಪಶ್ಚಿಮ ರಷ್ಯಾದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಶನಿವಾರ ರಾತ್ರಿ 10.40ರ ಸುಮಾರಿಗೆ ರೈಲ್ವೆ ಬ್ರಿಡ್ಜ್ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ರಷ್ಯಾ ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಇದನ್ನೂ ಓದಿ: Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ

    3 ವರ್ಷಗಳ ಹಿಂದೆ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಆರಂಭವಾದಾಗಿನಿಂದ ಬ್ರಿಯಾನ್ಸ್ಕ್‌ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಪದೇ ಪದೇ ಉಕ್ರೇನ್, ಡ್ರೋನ್ ದಾಳಿಗಳು, ಶೆಲ್ ದಾಳಿಯನ್ನು ನಡೆಸುತ್ತಲೇ ಬಂದಿದೆ. ಇದನ್ನೂ ಓದಿ: ಗೈಡೆಡ್ ಟೂರ್ ಶುರು – ಇಂದಿನಿಂದ ವಿಧಾನಸೌಧ ವೀಕ್ಷಣೆಗೆ ಮುಕ್ತ ಅವಕಾಶ; ಯಾರಿಗೆ ಉಚಿತ, ಯಾರಿಗೆ ಟಿಕೆಟ್‌ ಖಚಿತ?

    ಕದನ ವಿರಾಮಕ್ಕೆ ಟ್ರಂಪ್ ಒತ್ತಾಯ
    ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳು ಕದನ ವಿರಾಮ ಮಾಡುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಎರಡೂ ದೇಶಗಳ ನಡುವೆ ನಡೆದ ಶಾಂತಿ ಒಪ್ಪಂದ ವಿಫಲವಾಗಿತ್ತು. ಮುಂದಿನ ವಾರ ಇಸ್ತಾನ್‌ಬುಲ್‌ನಲ್ಲಿ ಉಕ್ರೇನ್ ಅಧಿಕಾರಿಗಳೊಂದಿಗೆ ಎರಡನೇ ಸುತ್ತಿನ ವೈಯಕ್ತಿಕ ಮಾತುಕತೆ ನಡೆಸಲು ಮುಂದಾಗಿರುವುದನ್ನು ರಷ್ಯಾ ತಿಳಿಸಿದೆ.

  • ಪುಟಿನ್ ಹೆಲಿಕಾಪ್ಟರ್ ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ – ರಷ್ಯಾದ ಕಮಾಂಡರ್‌ಗೆ ಗಾಯ

    ಪುಟಿನ್ ಹೆಲಿಕಾಪ್ಟರ್ ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ – ರಷ್ಯಾದ ಕಮಾಂಡರ್‌ಗೆ ಗಾಯ

    ಮಾಸ್ಕೋ: ಉಕ್ರೇನ್ ಡ್ರೋನ್ ದಾಳಿಯೊಂದಕ್ಕೆ (Ukraine Drone Attack) ರಷ್ಯಾದ ಉನ್ನತ ಕಮಾಂಡರ್‌ರೊಬ್ಬರು ಗಾಯಗೊಂಡಿದ್ದಾರೆ. ಆದರೆ ಈ ದಾಳಿಯ ಕೇಂದ್ರ ಬಿಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಆಗಿತ್ತು ಎಂದು ವಾಯು ರಕ್ಷಣಾ ವಿಭಾಗದ ಕಮಾಂಡರ್ ಯೂರಿ ಡ್ಯಾಶ್ಕಿನ್ ಆರೋಪ ಮಾಡಿದ್ದಾರೆ. ಈ ಘಟನೆ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಹೊಸ ತಿರುವು ನೀಡಿದೆ.

    ಭಾನುವಾರ ರಾತ್ರಿ ರಷ್ಯಾದ ಗಡಿಯ ಸಮೀಪದಲ್ಲಿ ನಡೆದ ಈ ದಾಳಿಯಲ್ಲಿ ಉಕ್ರೇನ್ ಡ್ರೋನ್‌ಗಳು ರಷ್ಯಾದ ಸೇನಾ ಹೆಲಿಕಾಪ್ಟರ್‌ವೊಂದನ್ನು ಗುರಿಯಾಗಿಸಿವೆ. ಈ ಹೆಲಿಕಾಪ್ಟರ್‌ನಲ್ಲಿ ಪುಟಿನ್ ಆಪ್ತ ಕಮಾಂಡರ್ ಇದ್ದರು ಎಂದು ತಿಳಿದುಬಂದಿದೆ. ದಾಳಿಯಿಂದ ಕಮಾಂಡರ್ ಗಾಯಗೊಂಡಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ರಷ್ಯಾದ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಮೇಲೆ ಸುಳ್ಳು ಆರೋಪ – ಅದಕ್ಕೆ ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್: ಹೆಚ್.ಕೆ ಪಾಟೀಲ್

    ಈ ದಾಳಿಯನ್ನು ಉಕ್ರೇನ್ ಸೇನೆಯ ವಿಶೇಷ ಡ್ರೋನ್ ತಂಡವು ಯೋಜಿಸಿತ್ತು. ಇದು ರಷ್ಯಾದ ಸೇನಾ ಚಟುವಟಿಕೆಗಳಿಗೆ ತಕ್ಕ ಪ್ರತಿಕ್ರಿಯೆ ಎಂದು ಉಕ್ರೇನ್‌ನ ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ. ರಷ್ಯಾದ ಕ್ರೆಮ್ಲಿನ್ ಈ ದಾಳಿಯನ್ನು ಖಂಡಿಸಿದ್ದು, ಉಕ್ರೇನ್‌ನ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಘಟನೆಯಿಂದ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಇದನ್ನೂ ಓದಿ: ಒಂದು ವಾರದಲ್ಲಿ ದೇಶದಲ್ಲಿ 752 ಮಂದಿಗೆ ಕೊರೊನಾ ಸೋಂಕು – ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ

    ಭಾನುವಾರ ಉಕ್ರೇನ್ ವಿರುದ್ಧ ರಷ್ಯಾ ಮಾರಣಾಂತಿಕ ಡ್ರೋನ್ ದಾಳಿ ನಡೆಸಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆರಳಿ ಕೆಂಡವಾಗಿದ್ದಾರೆ. ಯುದ್ಧ ಪೀಡಿತ ಉಭಯ ರಾಷ್ಟ್ರಗಳು ದೊಡ್ಡ ಪ್ರಮಾಣದ ಕೈದಿಗಳ ವಿನಿಮಯ ಪೂರ್ಣಗೊಳಿಸಿದರೂ ರಷ್ಯಾ ಮತ್ತೆ ಡ್ರೋನ್ ದಾಳಿ ನಡೆಸಿ ಹಲವರ ಸಾವಿಗೆ ಕಾರಣವಾಗಿರುವುದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ‘ಕ್ರೇಜಿ’ (ಹುಚ್ಚ) ಎಂದು ಟ್ರಂಪ್ ಕರೆದಿದ್ದಾರೆ. ಭಾನುವಾರ ರಾತ್ರಿ ಉಕ್ರೇನ್ ವಿರುದ್ಧ ರಷ್ಯಾ ಬೃಹತ್ ಡ್ರೋನ್ ದಾಳಿ ನಡೆಸಿದ್ದರಿಂದ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸದ್ಯದಲ್ಲೇ ರಾಜನಾಥ್ ಭೇಟಿ, ಡಿಫೆನ್ಸ್ ಕಾರಿಡಾರ್‌ಗೆ ಪಟ್ಟು: ಎಂಬಿಪಿ

    ವ್ಲಾಡಿಮಿರ್ ಪುಟಿನ್ ಅವರೊಂದಿಗೆ ತಾಳ್ಮೆ ಕಳೆದುಕೊಳ್ಳುತ್ತಿರುವುದಾಗಿ ಟ್ರಂಪ್ ಸ್ಪಷ್ಟಪಡಿಸಿದ್ದು, ರಷ್ಯಾದ ನಾಯಕನ ವಿರುದ್ಧ ತೀಕ್ಷ್ಣವಾಗಿ ಟೀಕೆಗಳನ್ನು ಮಾಡಿದ್ದಾರೆ. ಪುಟಿನ್ ಜೊತೆಗೆ ಯಾವಾಗಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ ಅವರಿಗೆ ಏನೋ ಆಗಿದೆ. ಅವರು ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ  ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ವಚ್ಛವಾಹಿನಿ ಚಾಲಕಿಯರ ವೇತನ, ಸೌಲಭ್ಯಗಳ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿ: ಪ್ರಿಯಾಂಕ್ ಖರ್ಗೆ

  • ಬ್ಲೂ ಫಿಲ್ಮ್ ವೀಕ್ಷಣೆ, ಚಿತ್ರೀಕರಣ ಕಾನೂನುಬದ್ಧಗೊಳಿಸಲು ಮುಂದಾದ ಉಕ್ರೇನ್

    ಬ್ಲೂ ಫಿಲ್ಮ್ ವೀಕ್ಷಣೆ, ಚಿತ್ರೀಕರಣ ಕಾನೂನುಬದ್ಧಗೊಳಿಸಲು ಮುಂದಾದ ಉಕ್ರೇನ್

    ಕೀವ್: ಕಳೆದ 3 ವರ್ಷಗಳಿಂದ ರಷ್ಯಾ (Russia) ಜೊತೆಗೆ ಉಕ್ರೇನ್ (Ukraine) ಯುದ್ಧದಲ್ಲಿ ತೊಡಗಿಕೊಂಡಿದೆ. ಹೀಗಾಗಿ ತನ್ನ ಸೇನೆಯ ಖರ್ಚು ಸೇರಿ ಯುದ್ಧದ ವೆಚ್ಚ ಭರಿಸಲು ನೀಲಿ ಚಿತ್ರಕ್ಕೆ (Blue Film) ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

    ತನ್ನ ದೇಶದಲ್ಲಿ ನೀಲಿ ಚಿತ್ರ ಚಿತ್ರೀಕರಣ, ಪ್ರಸಾರ ಮತ್ತು ವೀಕ್ಷಣೆಗೆ ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದ್ದು, ಈ ಹಿನ್ನೆಲೆ ಕಾನೂನು ತಿದ್ದುಪಡಿ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.ಇದನ್ನೂ ಓದಿ: ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಪೊಲೀಸ್ ರಕ್ಷಣೆ ಇಲ್ಲ: ಹೈಕೋರ್ಟ್

    ಒಂದು ವೇಳೆ ನೀಲಿ ಚಿತ್ರಕ್ಕೆ ಕಾನೂನು ಮಾನ್ಯತೆ ಸಿಕ್ಕರೆ, ಇದರಿಂದ ಬರುವ ಆದಾಯವನ್ನು ಸೇನೆಯ ಖರ್ಚು, ವೆಚ್ಚವನ್ನು ನೋಡಿಕೊಳ್ಳಲು ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಸರ್ಕಾರ ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ ಕಳೆದ ವರ್ಷ ಈ ಕಾನೂನಿನಡಿ 1,400 ಕೇಸುಗಳು ದಾಖಲಾಗಿದ್ದವು.

    ಆದರೆ ದೇಶದಲ್ಲಿ ಈ ಕಾನೂನು ಜಾರಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಕಾನೂನು ಮಾನ್ಯತೆ ಸಿಕ್ಕಲ್ಲಿ ಉಕ್ರೇನ್‌ಗೆ ವಾರ್ಷಿಕ ನೂರಾರು ಕೋಟಿ ರೂ. ಆದಾಯ ಹರಿದುಬರಲಿದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತದಿಂದ 24,000 ಮಾನವ ಬಳಕೆ ಡ್ರೋನ್‌ಗಳನ್ನು ಖರೀದಿಸಬಹುದಾಗಿದೆ ಎಂದು ವರದಿಗಳು ತಿಳಿಸಿದೆ.ಇದನ್ನೂ ಓದಿ: ಹೊಸಪೇಟೆ | ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಭಾರೀ ಬೆಂಕಿ

  • ಉಕ್ರೇನ್‌ನ ಸುಮಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – 21 ಮಂದಿ ಸಾವು

    ಉಕ್ರೇನ್‌ನ ಸುಮಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – 21 ಮಂದಿ ಸಾವು

    ಕೀವ್: ಉತ್ತರ ಉಕ್ರೇನಿಯನ್ (Ukraine) ನಗರದ ಸುಮಿಯ ಹೃದಯಭಾಗದಲ್ಲಿ ಭಾನುವಾರ ಬೆಳಗ್ಗೆ ನಡೆದ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿ (Russian Missile Strike) ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. 83 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಆಂತರಿಕ ಸಚಿವ ಇಹೋರ್ ಕ್ಲಿಮೆಂಕೊ ಹೇಳಿದ್ದಾರೆ.

    ಈ ವರ್ಷ ಉಕ್ರೇನ್ ಮೇಲೆ ನಡೆದ ಅತ್ಯಂತ ಭೀಕರ ದಾಳಿಯನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ. ‘ಕಿಡಿಗೇಡಿಗಳು ಮಾತ್ರ ಈ ರೀತಿ ವರ್ತಿಸಲು ಸಾಧ್ಯ. ಸಾಮಾನ್ಯ ಜನರ ಜೀವ ತೆಗೆಯಲಾಗುತ್ತಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಭಾರತದ ಕಂಪನಿಗಳೇ ಟಾರ್ಗೆಟ್ ಎಂದ ಉಕ್ರೇನ್‌

    ಇಂದು ಜನರು ಚರ್ಚ್‌ಗೆ ಹೋಗುವ ದಿನ. ಪಾಮ್‌ ಸಂಡೆ, ಜೆರುಸಲೇಂಗೆ ಭಗವಂತ ಆಗಮಿಸಿದ ದಿನ. ಚರ್ಚ್‌ನ ಪ್ರಮುಖ ಹಬ್ಬದ ದಿನದಂದೇ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ರಷ್ಯಾ ವಿರುದ್ಧ ಗುಡುಗಿದ್ದಾರೆ.

    ಉಕ್ರೇನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿಯಾಗಿರುವ ವಿಟ್ಕಾಫ್ ಭೇಟಿ ನೀಡಿದ್ದರು. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉಕ್ರೇನ್ ಶಾಂತಿ ಒಪ್ಪಂದದ ಕುರಿತು ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: Donald Trump | ಭಾರತ ಸೇರಿದಂತೆ ಅಮೆರಿಕದಲ್ಲಿರುವ ವಿದೇಶಿಗರು 24×7 ವೀಸಾ ಹೊಂದಿರಬೇಕು

    ರಷ್ಯಾದ ಇಂಧನ ಮೂಲಸೌಕರ್ಯದ ಮೇಲೆ ಉಕ್ರೇನ್ ಐದು ಬಾರಿ ದಾಳಿ ನಡೆಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಶನಿವಾರ ಆರೋಪಿಸಿತ್ತು. ಶಾಂತಿ ಒಪ್ಪಂದಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ ಬಳಿಕವೂ ದಾಳಿ ನಡೆಸುತ್ತಿರುವುದು ನಿಯಮದ ಉಲ್ಲಂಘನೆಯಾಗಿದೆ ಎಂದು ರಷ್ಯಾ ಖಂಡಿಸಿತ್ತು.

  • ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಭಾರತದ ಕಂಪನಿಗಳೇ ಟಾರ್ಗೆಟ್ ಎಂದ ಉಕ್ರೇನ್‌

    ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಭಾರತದ ಕಂಪನಿಗಳೇ ಟಾರ್ಗೆಟ್ ಎಂದ ಉಕ್ರೇನ್‌

    ಕೈವ್‌/ಮಾಸ್ಕೋ: ಉಕ್ರೇನ್‌ನ (Ukraine) ರಾಜಧಾನಿ ಕೈವ್‌ನಲ್ಲಿರುವ ಭಾರತೀಯ (India) ಔಷಧ ಕಂಪನಿಯ ಗೋಡೌನ್‌ ಮೇಲೆ ರಷ್ಯಾ (Russia) ಕ್ಷಿಪಣಿ ದಾಳಿ ಮಾಡಿದೆ.‌ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದಲ್ಲಿರುವ ಉಕ್ರೇನ್ ರಾಯಭಾರ ಕಚೇರಿ, ನಮ್ಮ ದೇಶದಲ್ಲಿರುವ ಭಾರತೀಯ ಕಂಪನಿಗಳನ್ನು ರಷ್ಯಾ ಟಾರ್ಗೆಟ್‌ ಮಾಡಿದೆ ಎಂದು ಆರೋಪಿಸಿದೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಉಕ್ರೇನ್‌ನ ರಾಯಭಾರ ಕಚೇರಿ, ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ರಷ್ಯಾ ದಾಳಿ ಮಾಡಿದೆ. ಭಾರತದೊಂದಿಗೆ ರಷ್ಯಾ ವಿಶೇಷ ಸ್ನೇಹವಿದೆ ಎಂದು ಹೇಳಿಕೊಳ್ಳುತ್ತಲೇ, ಭಾರತೀಯ ಕಂಪನಿಗಳನ್ನು ಗುರಿಯಾಗಿಸಿಕೊಂಡಿದೆ. ಮಕ್ಕಳು ಮತ್ತು ವೃದ್ಧರಿಗೆ ಮೀಸಲಾದ ಔಷಧಿಗಳನ್ನು ನಾಶಪಡಿಸಿದೆ ಎಂದು ಆಕ್ರೋಶ ಹೊರಹಾಕಿದೆ.

    ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಒಡೆತನದ ಕುಸುಮ್, ಉಕ್ರೇನ್‌ನ ಅತಿದೊಡ್ಡ ಔಷಧ ಸಂಸ್ಥೆಗಳಲ್ಲಿ ಒಂದಾಗಿದೆ. ಅಗತ್ಯ ಔಷಧಗಳಿಗಾಗಿ ಕಂಪನಿಯ ಉತ್ಪನ್ನಗಳು ಉಕ್ರೇನ್‌ನಾದ್ಯಂತ ನಿರ್ಣಾಯಕವಾಗಿವೆ. ಇನ್ನೂ ಗೋಡೌನ್‌ ಮೇಲೆ ಕ್ಷಿಪಣಿ ದಾಳಿ ನಡೆದಿಲ್ಲ, ಡ್ರೋಣ್ ದಾಳಿ ನಡೆದಿದೆ ಎನ್ನಲಾಗಿದೆ.‌

    ಮೇ 9ರಂದು ವಿಶ್ವಸಮರದ ವಿಜಯ ದಿನಾಚರಣೆಗೆ ರಷ್ಯಾ ಪ್ರಧಾನಿಯವರನ್ನು ಆಹ್ವಾನಿಸಿದೆ. ಅದಕ್ಕೂ ಮುನ್ನ ಈ ದಾಳಿ ನಡೆದಿದೆ.