Tag: Ukraine

  • ನಿನ್ನನ್ನು ಸ್ವರ್ಗದಲ್ಲಿ ಭೇಟಿಯಾಗುತ್ತೇನೆ- ರಷ್ಯಾ ದಾಳಿಗೆ ಮಡಿದ ತಾಯಿ 9 ವರ್ಷದ ಹುಡುಗಿ ಭಾವುಕ ಪತ್ರ

    ನಿನ್ನನ್ನು ಸ್ವರ್ಗದಲ್ಲಿ ಭೇಟಿಯಾಗುತ್ತೇನೆ- ರಷ್ಯಾ ದಾಳಿಗೆ ಮಡಿದ ತಾಯಿ 9 ವರ್ಷದ ಹುಡುಗಿ ಭಾವುಕ ಪತ್ರ

    ಕೀವ್‌: ರಷ್ಯಾ ಆಕ್ರಮಣದಿಂದಾಗಿ ಮೃತಪಟ್ಟ ತನ್ನ ತಾಯಿಗೆ 9 ವರ್ಷ ವಯಸ್ಸಿನ ಮಗಳು ಬರೆದಿರುವ ಪತ್ರ ಮನಕಲಕುವಂತಿದೆ.

    ಉಕ್ರೇನ್‌ನ ಬೊರೊಡ್ಯಾಂಕದ ಗಾಲಿಯಾ ಎಂಬ ಹುಡುಗಿ, ರಷ್ಯಾ ಆಕ್ರಮಣದಿಂದಾಗಿ ಮೃತಪಟ್ಟ ತನ್ನ ತಾಯಿಗೆ ಭಾವುಕವಾಗಿ ಪತ್ರ ಬರೆದಿದ್ದಾಳೆ. ಪತ್ರದ ಹಸ್ತಾಕ್ಷರದ ಫೋಟೋವನ್ನು ಉಕ್ರೇನ್‌ ಸಚಿವ ಆಂಟನ್ ಗೆರಾಶ್ಚೆಂಕೊ ಅವರು ಟ್ವೀಟ್‌ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ

    ಪತ್ರದಲ್ಲೇನಿದೆ?
    ಅಮ್ಮ! ವಿಶ್ವದಲ್ಲೇ ನೀನು ನನ್ನ ಶ್ರೇಷ್ಠ ಅಮ್ಮ. ನಿನ್ನನ್ನು ನಾನೆಂದಿಗೂ ಮರೆಯುವುದಿಲ್ಲ. ನೀನು ಸ್ವರ್ಗಸ್ಥಳಾಗಿ ಸಂತೋಷದಿಂದಿರಬೇಕು ಎಂದು ನಾನು ಬಯಸುತ್ತೇನೆ. ನಾನು ಕೂಡ ಒಳ್ಳೆಯ ವ್ಯಕ್ತಿಯಾಗಿ ಸ್ವರ್ಗಕ್ಕೆ ಬರುವಂತಹ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮನ್ನು ಸ್ವರ್ಗದಲ್ಲಿ ಭೇಟಿಯಾಗುತ್ತೇನೆ! ಗಾಲಿಯಾ.. ಎಂದು ಭಾವನಾತ್ಮಕವಾಗಿ ಪತ್ರ ಬರೆದಿದ್ದಾಳೆ.

    ಪತ್ರವು ಉಕ್ರೇನ್‌ ಭಾಷೆಯಲ್ಲಿದೆ. ಸಚಿವ ಆಂಟನ್ ಗೆರಾಶ್ಚೆಂಕೊ ಅವರು ಅದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 3 ವಾರದಿಂದ ಮನೆಯಲ್ಲೇ ಬಂಧಿ- ಆಹಾರಕ್ಕಾಗಿ ಶಾಂಘೈ ನಿವಾಸಿಗಳ ಆಕ್ರಂದನ

    ಹುಡುಗಿಯ ಪತ್ರಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಒಳ್ಳೆಯ ಭವಿಷ್ಯ ನಿನ್ನದಾಗಲಿ ಎಂದು ಹಾರೈಸಿದ್ದಾರೆ.

  • ರೈಲು ನಿಲ್ದಾಣದಲ್ಲಿ ರಾಕೆಟ್ ದಾಳಿ – 35 ಸಾವು

    ರೈಲು ನಿಲ್ದಾಣದಲ್ಲಿ ರಾಕೆಟ್ ದಾಳಿ – 35 ಸಾವು

    ಕೀವ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಬಹುತೇಕ ಉಕ್ರೇನ್ ಅನ್ನು ಸರ್ವನಾಶ ಮಾಡಿರುವ ರಷ್ಯಾ ಶುಕ್ರವಾರ ಇನ್ನೊಂದು ಭೀಕರ ದಾಳಿ ನಡೆಸಿದೆ. ಉಕ್ರೇನ್‌ನ ಕ್ರಾಮಾಟೋರ್ಸ್ಕ್ ರೈಲು ನಿಲ್ದಾಣಕ್ಕೆ ರಾಕೆಟ್ ದಾಳಿ ನಡೆಸಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ.

    ನಾಗರಿಕರನ್ನು ಸ್ಥಳಾಂತರಿಲು ಬಳಸಲಾಗುತ್ತಿದ್ದ ರೈಲು ನಿಲ್ದಾಣದ ಮೇಲೆ ಶುಕ್ರವಾರ ರಾಕೆಟ್ ದಾಳಿ ನಡೆದಿದ್ದು, 35 ಜನರು ಸಾವನ್ನಪ್ಪಿದ್ದಾರೆ ಹಾಗೂ ನೂರಾರು ಜನರು ಗಾಯಗೊಂಡಿದ್ದಾರೆ. ಆದರೆ ರಷ್ಯಾ ತಾನು ದಾಳಿ ನಡೆಸಿರುವುದನ್ನು ಅಲ್ಲೆಗಳೆದಿದೆ. ಇದನ್ನೂ ಓದಿ: ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ

    ರಾಕೆಟ್ ದಾಳಿಯ ಬಳಿಕ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾವನ್ನು ಮಿತಿಯೇ ಇಲ್ಲದ ಕ್ರೂರಿ ಎಂದು ಟೀಕಿಸಿದ್ದಾರೆ. ಉಕ್ರೇನ್ ನಾಗರಿಕರನ್ನು ಸಿಕ್ಕ ಸಿಕ್ಕಲ್ಲಿ ಕೊಲ್ಲುತ್ತಿರುವ ರಷ್ಯಾವನ್ನು ಶಿಕ್ಷಿಸದಿದ್ದರೆ ಈ ಕ್ರೂರತನಕ್ಕೆ ಕೊನೆಯೇ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಸಸ್ಪೆಂಡ್‌

    ಇತ್ತೀಚೆಗೆ ಉಕ್ರೇನ್‌ನ ಬುಚಾ ನಗರದಲ್ಲಿ ರಷ್ಯಾ ಪಡೆಗಳು ಉಕ್ರೇನಿಯನ್ನರ ಭೀಕರ ಹತ್ಯೆಗೈದಿದ್ದು, ಇದನ್ನು ಭಾರತ ಸೇರಿದಂತೆ ಹಲವು ದೇಶಗಳು ಬಲವಾಗಿ ಖಂಡಿಸಿದೆ. ಬುಚಾ ನಗರದ ರಸ್ತೆಗಳಲ್ಲಿ ಉಕ್ರೇನಿಯನ್ನರ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಇತ್ತೀಚೆಗೆ ವರದಿ ಮಾಡಲಾಗಿತ್ತು.

  • ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಸಸ್ಪೆಂಡ್‌

    ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಸಸ್ಪೆಂಡ್‌

    ನ್ಯೂಯಾರ್ಕ್‌: ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವನ್ನು ವಿಶ್ವ ಮಾನವ ಹಕ್ಕುಗಳ ಮಂಡಳಿಯಿಂದ ಅಮಾನತುಗೊಳಿಸಲಾಗಿದೆ.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತುಗೊಳಿಸುವ ನಿರ್ಣಯಕ್ಕೆ ಮತ ಹಾಕಲಾಯಿತು. ಈ ವೇಳೆ ರಷ್ಯಾ ವಿರುದ್ಧ 93 ದೇಶಗಳು ಮತ ಚಲಾಯಿಸಿವೆ. ರಷ್ಯಾ ಪರವಾಗಿ 24 ದೇಶಗಳು ಮತ ಹಾಕಿವೆ. ಆದರೆ ಭಾರತ ಸೇರಿದಂತೆ 54 ದೇಶಗಳು ಮತದಾನದಿಂದ ದೂರ ಉಳಿದವು. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್‌ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?

    ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯವನ್ನು ಉಕ್ರೇನ್‌ ಸ್ವಾಗತಿಸಿದೆ. ಮಾನವ ಹಕ್ಕುಗಳ ಮಂಡಳಿಯನ್ನು ಯುದ್ಧ ಅಪರಾಧಿಗಳು ಪ್ರತಿನಿಧಿಸುವುದು ಸರಿಯಲ್ಲ ಎಂದು ಉಕ್ರೇನ್‌ ತಿಳಿಸಿದೆ.

    ಉಕ್ರೇನ್‌ನ ಬುಚಾದಲ್ಲಿ ನಾಗರಿಕರನ್ನು ರಷ್ಯಾ ಸೈನಿಕರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಉಕ್ರೇನ್‌ ಆರೋಪವನ್ನು ರಷ್ಯಾ ನಿರಾಕರಿಸಿತ್ತು. ಇದನ್ನೂ ಓದಿ: ಬುಚಾ ನರಮೇಧವನ್ನು ತೀವ್ರವಾಗಿ ಖಂಡಿಸಿದ ಭಾರತ

    ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ದೇಶವೊಂದನ್ನು ಅಮಾನತು ಮಾಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2011 ರಲ್ಲಿ ಲಿಬಿಯಾವನ್ನು ಮೊದಲ ಬಾರಿಗೆ ಅಮಾನತು ಮಾಡಲಾಗಿತ್ತು.

  • ವ್ಲಾಡಿಮಿರ್‌ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್‌ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?

    ವ್ಲಾಡಿಮಿರ್‌ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್‌ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?

    ವಾಷಿಂಗ್ಟನ್: ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮೇಲೂ ಅಮೆರಿಕ ಹಲವಾರ ಆಪಾದನೆಗಳನ್ನು ಹೊರಿಸಿದೆ. ಈಗ ಅಮೆರಿಕ, ಪುಟಿನ್‌ ಅವರ ಇಬ್ಬರು ಹೆಣ್ಣುಮಕ್ಕಳನ್ನು ಗುರಿಯಾಗಿಸಿ ನಿರ್ಬಂಧಗಳನ್ನು ಹೇರಿದೆ.

    ಪುಟಿನ್ ಅವರ ಮಗಳು ಕ್ಯಾಥರಿನಾ ವ್ಲಾಡಿಮಿರೊವ್ನಾ ಟಿಖೋನೊವಾ ಅವರು ಟೆಕ್ ಎಕ್ಸಿಕ್ಯೂಟಿವ್ ಆಗಿದ್ದಾರೆ. ರಷ್ಯಾದ ಸರ್ಕಾರ ಮತ್ತು ಅದರ ರಕ್ಷಣಾ ಉದ್ಯಮವನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಅವರ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧದ ನಡುವೆಯೇ ಮುರಿದು ಬಿತ್ತು ಪುಟಿನ್‌ ಮಗಳ ಮದುವೆ!

    ಪುಟಿನ್‌ ಅವರ ಇನ್ನೊಬ್ಬ ಮಗಳು ಮಾರಿಯಾ ವ್ಲಾಡಿಮಿರೊವ್ನಾ ವೊರೊಂಟ್ಸೊವಾ ಅವರು ಜೆನೆಟಿಕ್ಸ್ ಸಂಶೋಧನೆಗೆ ಕ್ರೆಮ್ಲಿನ್‌ನಿಂದ ಶತಕೋಟಿ ಡಾಲರ್‌ಗಳನ್ನು ಪಡೆದ ಸರ್ಕಾರಿ-ಹಣಕಾಸಿನ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಅಮೆರಿಕ ತಿಳಿಸಿದೆ.

    ಪುಟಿನ್ ಮತ್ತು ಅವರ ಅನೇಕ ಆಪ್ತರು ತಮ್ಮ ಸಂಪತ್ತನ್ನು ಮರೆಮಾಚಿದ್ದಾರೆ. ಪುಟಿನ್ ಅವರ ಅನೇಕ ಆಸ್ತಿಗಳನ್ನು ಕುಟುಂಬ ಸದಸ್ಯರೊಂದಿಗೆ ಮರೆಮಾಚಲಾಗಿದೆ. ಅದಕ್ಕಾಗಿಯೇ ನಾವು ಅವರನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

    29 ವರ್ಷದ ಕ್ಯಾಥರಿನಾ, ಅಧ್ಯಕ್ಷ ಪುಟಿನ್ ಅವರ ದೀರ್ಘಕಾಲದ ಸ್ನೇಹಿತ ನಿಕೊಲಾಯ್ ಶಮಾಲೋವ್ ಅವರ ಮಗ ಕಿರಿಲ್ ಶಮಾಲೋವ್ ಅವರ ಸಂಗಾತಿಯಾಗಿದ್ದಾರೆ. ಶ್ಯಾಮಲೊವ್ ಸೀನಿಯರ್ ಬ್ಯಾಂಕ್ ರೊಸ್ಸಿಯಾದಲ್ಲಿ‌ ಇವರು ಷೇರುದಾರರಾಗಿದ್ದಾರೆ. ರಷ್ಯಾದ ಗಣ್ಯರ ವೈಯಕ್ತಿಕ ಬ್ಯಾಂಕ್ ಇದಾಗಿದೆ ಎಂದು ಅಮೆರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಹೆಚ್ಚಿದ ಬೆದರಿಕೆ – ಏರ್ ಇಂಡಿಯಾ ವಿಮಾನ ರದ್ದು

    ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಹೆಚ್ಚಿದ ಬೆದರಿಕೆ – ಏರ್ ಇಂಡಿಯಾ ವಿಮಾನ ರದ್ದು

    ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಬೆದರಿಕೆಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ವಿಮಾನಯಾನ ಕಂಪನಿ ಏರ್ ಇಂಡಿಯಾ ತನ್ನ ದೆಹಲಿಯಿಂದ ಮಾಸ್ಕೋಗೆ ತೆರಳಬೇಕಿದ್ದ ವಿಮಾನವನ್ನು ರದ್ದುಗೊಳಿಸಿದೆ.

    ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ ಭಾರತ ಬೆದರಿಕೆಗಳನ್ನು ಗ್ರಹಿಸಿದ್ದು, ದೆಹಲಿ-ಮಾಸ್ಕೋ ವಿಮಾನವನ್ನು ರದ್ದುಗೊಳಿಸಿದೆ. ಈಗಾಗಲೇ ವಿಮಾನದ ಟಿಕೇಟ್‌ಗಳನ್ನು ಖರೀದಿಸಿದ್ದ ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಪೂರ್ಣ ಮರುಪಾವತಿ ಮಾಡುತ್ತದೆ ಎಂದು ಭರವಸೆ ನೀಡಿದೆ. ಇದನ್ನೂ ಓದಿ: ಬೆಳಗಾವಿ ಆರ್‌ಎಸ್‌ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ – ಇನ್ನೊಮ್ಮೆ ಮೋದಿ ಪ್ರಧಾನಿ ಆಗ್ತಾರೆ ಎಂದ ಸಾವಂತ್

    ರಷ್ಯಾದ ರಾಯಭಾರ ಕಚೇರಿ ಈ ಬಗ್ಗೆ ಟೆಲಿಗ್ರಾಮ್ ಮೂಲಕ ಮಾಹಿತಿ ನೀಡಿದೆ. ಭಾರತೀಯ ವಿಮಾಮಯಾನ ಸಂಸ್ಥೆ ಏರ್ ಇಂಡಿಯಾ ದೆಹಲಿ-ಮಾಸ್ಕೋ ಮಾರ್ಗದಲ್ಲಿ ಪ್ರಯಾಣಿಸಬೇಕಿದ್ದ ವಿಮಾನವನ್ನು ಸದ್ಯ ಸ್ಥಗಿತಗೊಳಿಸಿದೆ. ಈಗಿನ ಪರಿಸ್ಥಿತಿಯಲ್ಲಿ ವಿಮಾನ ಪ್ರಯಾಣ ಪುನರಾರಂಭ ಅನಿಶ್ಚಿತವಾಗಿದೆ. ರದ್ದಾದ ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಟಿಕೆಟ್‌ನ ಸಂಪೂರ್ಣ ಮರುಪಾವತಿ ಮಾಡುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ‘ಬಿಗ್ ಬ್ರದರ್’ ಎಂದು ಭಾರತ, ಮೋದಿಗೆ ಧನ್ಯವಾದ ಹೇಳಿದ ಲಂಕಾ ಕ್ರಿಕೆಟಿಗ ಜಯಸೂರ್ಯ

    ವಿಮಾನ ಹಾರಾಟ ಸ್ಥಗಿತವಾಗಿದ್ದರೂ ಸದ್ಯ ತಾಷ್ಕೆಂಟ್, ಇಸ್ತಾಂಬುಲ್, ದುಬೈ, ಅಬುಧಾಬಿ, ದೋಹಾ ಹಾಗೂ ಇತರ ಸ್ಥಳಗಳ ಮೂಲಕ ಸಾರಿಗೆ ಮಾರ್ಗಗಳನ್ನು ಬಳಸಿಕೊಂಡು ದೆಹಲಿಯಿಂದ ಮಾಸ್ಕೋಗೆ ಪ್ರಯಾಣಿಸಲು ಸಾಧ್ಯವಿದೆ ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.

  • ಮಗುವಿನ ಬೆನ್ನ ಮೇಲೆ ಮನೆಯ ವಿಳಾಸ ಬರೆದ ಉಕ್ರೇನಿಯನ್ ತಾಯಿ

    ಮಗುವಿನ ಬೆನ್ನ ಮೇಲೆ ಮನೆಯ ವಿಳಾಸ ಬರೆದ ಉಕ್ರೇನಿಯನ್ ತಾಯಿ

    ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ಸಂಕಷ್ಟವನ್ನು ಎದುರಿಸುತ್ತಿದೆ. ಉಕ್ರೇನಿಯನ್‍ರು ತಮ್ಮ ಪ್ರಾಣವನ್ನು ರಕ್ಷಣೆ ಮಾಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

    ಕುಟುಂಬಗಳು ತಮ್ಮ ಮಕ್ಕಳ ದೇಹಗಳ ಮೇಲೆ ಕುಟುಂಬದ ವಿವರಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ಈ ಆಘಾತಕಾರಿ ಬೆಳವಣಿಗೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಮಕ್ಕಳ ಫೋಟೋಗಳನ್ನು ಅನೇಕ ಪತ್ರಕರ್ತರು ಟ್ವೀಟ್ ಮಾಡಿದ್ದಾರೆ.

    ಉಕ್ರೇನಿಯನ್ ಹುಡುಗಿಯ ಬೆನ್ನ ಮೇಲೆ ಹೆಸರು ದೂರವಾಣಿ ಸಂಖ್ಯೆಯನ್ನು ಆಕೆಯ ತಾಯಿ ಬರೆದಿದ್ದಾರೆ. ಮೂರು ದಿನಗಳ ಹಿಂದೆ ಈ ಫೋಟೋವನ್ನು ಬಾಲಕಿಯ ತಾಯಿ ಸಶಾ ಮಕೋವಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಥಳೀಯ ಭಾಷೆಯಲ್ಲಿದೆ ತಾಯಿ, ಮಗುವಿನ ಬೆನ್ನಿನ ಮೇಲೆ ಬರೆದಿದ್ಧಾರೆ. ಏನಾದರೂ ಅವಘಡ ಸಂಭವಿಸಿದಲ್ಲಿ, ಮಗಳು ವೆರಾಳನ್ನು ಯಾರಾದರೂ ಬದುಳಿದವಳು ಎಂದು ಆಕೆಯನ್ನು ಸ್ವಾಗತಿಸಿ ಎಂದು ಬರೆದಿದ್ದಾರೆ. ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್


    ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧದಿಂದ ಭಯಾನಕ ದೃಶ್ಯಗಳು ಹೊರಹೊಮ್ಮಿವೆ. ರಷ್ಯಾ ದಾಳಿಯಿಂದ ಉಕ್ರೇನ್‌ಯಿಂದ ಜನರು ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕು ಎಂದು ಕಸರತ್ತು ಮಾಡುತ್ತಿದ್ದಾರೆ. ಭಯದಿಂದಲೇ ಅಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ಯುದ್ಧ ನಿಲ್ಲಿಸಲು ಉಳಿದಿರುವುದು ಒಂದೇ ಉಪಾಯ: ಝೆಲೆನ್ಸ್ಕಿ

    ಯುದ್ಧ ನಿಲ್ಲಿಸಲು ಉಳಿದಿರುವುದು ಒಂದೇ ಉಪಾಯ: ಝೆಲೆನ್ಸ್ಕಿ

    ಕೀವ್: ಉಕ್ರೇನ್‌ನ ಬುಚಾ ನಗರದಲ್ಲಿ ನಡೆಯುತ್ತಿರುವ ಘಟನೆಗಳು ಕ್ಷಮಿಸಲಾಗದವು. ಆದರೂ ಉಕ್ರೇನ್ ಮತ್ತು ರಷ್ಯಾ ಮಾತುಕತೆ ಮುಂದುವರಿಸುವಂತಹ ಕಠಿಣ ಆಯ್ಕೆಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

    ಉಕ್ರೇನ್ ಅಧ್ಯಕ್ಷ ಮಂಗಳವಾರ ಯುದ್ಧವನ್ನು ಕೊನೆಗೊಳಿಸಲು ರಷ್ಯಾದೊಂದಿಗೆ ಮಾತುಕತೆ ನಡೆಸುವುದನ್ನು ಬಿಟ್ಟು ಉಕ್ರೇನ್‌ಗೆ ಬೇರೆ ಯಾವುದೇ ದಾರಿಯಿಲ್ಲ. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವೈಯಕ್ತಿಕವಾಗಿ ಮಾತುಕತೆ ನಡೆಸಲು ಒಪ್ಪುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು- ಅಧಿಕಾರ ವಹಿಸಿಕೊಂಡ ಒಂದೇ ದಿನಕ್ಕೆ ಹಣಕಾಸು ಸಚಿವ ರಾಜೀನಾಮೆ

    ಉಕ್ರೇನ್‌ನ ಬುಚಾ ನಗರದಲ್ಲಿ ಇದೀಗ ರಷ್ಯಾವನ್ನು ಕ್ಷಮಿಸಲಾರದಂತಹ ಹತ್ಯಾಕಾಂಡ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಝೆಲೆನ್ಸ್ಕಿ ಮಾತುಕತೆ ನಡೆಸಿ ಯುದ್ಧವನ್ನು ನಿಲ್ಲಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಅಮೆರಿಕದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಮೊದಲ ಬಾರಿಗೆ ನಮಾಜ್- ಇಸ್ಲಾಂ ಬಗ್ಗೆ ತಪ್ಪು ಕಲ್ಪನೆಗಳಿವೆ ಎಂದ ಮುಸ್ಲಿಮರು

    ಉಕ್ರೇನ್ ರಾಜಧಾನಿ ಕೀವ್ ಸುತ್ತಲಿನ ನಗರಗಳಲ್ಲಿ ಇತ್ತೀಚೆಗೆ ನೂರಾರು ಶವಗಳು ಬೀದಿ ಬೀದಿಗಳಲ್ಲಿ ಕಂಡುಬಂದಿದ್ದು ಈ ಮೂಲಕ ರಷ್ಯಾ ಸೈನಿಕರ ಕ್ರೂರತೆ ಬಯಲಾಗಿದೆ. ಜನರ ಕೈಗಳನ್ನು ಕಟ್ಟಿಹಾಕಿ, ಬಾಯಿಗೆ ಗುಂಡು ಹೊಡೆದು ಕ್ರೂರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

  • ರಷ್ಯಾ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದರೆ, ಉಕ್ರೇನ್‌ಗೆ ನೆರವಾಗುತ್ತೇವೆ: ಅಮೆರಿಕ

    ರಷ್ಯಾ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದರೆ, ಉಕ್ರೇನ್‌ಗೆ ನೆರವಾಗುತ್ತೇವೆ: ಅಮೆರಿಕ

    ವಾಷಿಂಗ್ಟನ್: ರಷ್ಯಾ ಉಕ್ರೇನ್ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದರೆ, ಅಮೆರಿಕ ಉಕ್ರೇನ್‌ಗೆ ಜೀವರಕ್ಷಕ ಉಪಕರಣ ಹಾಗೂ ಸರಬರಾಜುಗಳನ್ನು ಒದಗಿಸುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ತಿಳಿಸಿದರು.

    ಅಮೆರಿಕ ಹಾಗೂ ಅಂತರರಾಷ್ಟ್ರೀಯ ಸಮುದಾಯ ಸದಸ್ಯರು ರಷ್ಯಾ, ಉಕ್ರೇನ್ ಮೇಲೆ ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಆಗಾಗ ಎಚ್ಚರಿಸುತ್ತಲೇ ಇದ್ದಾರೆ. ಆದರೆ ಇದು ರಷ್ಯಾದ ಬೆದರಿಕೆಯಷ್ಟೇ ಆಗಿರಬಹುದು ಎಂದು ಜೆನ್ ಪಾಕ್ಸಿ ಹೇಳಿದರು. ಇದನ್ನೂ ಓದಿ: ನೇಪಾಳದಲ್ಲಿ ರೈಲ್ವೇ ಜಾಲ, ರುಪೇಗೆ ಮೋದಿಯಿಂದ ಚಾಲನೆ

    ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದ್ದಲ್ಲಿ, ಉಕ್ರೇನ್‌ಗೆ ಜೀವರಕ್ಷಕ ಉಪಕರಣ ಹಾಗೂ ಸರಬರಾಜನ್ನು ನೀಡುತ್ತೇವೆ. ಆದರೆ ಉಕ್ರೇನ್‌ಗೆ ನೆರವು ನೀಡಲು ಅಮೆರಿಕ ಬದ್ಧವಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು ಪ್ರತಿಭಟನೆ ನಡುವೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಶುಕ್ರವಾರ ಅಮೆರಿಕ ಉಕ್ರೇನ್‌ಗೆ 300 ಮಿಲಿಯನ್ ಡಾಲರ್ (ಸುಮಾರು 2 ಸಾವಿರ ಕೋಟಿ ರೂ.) ಭದ್ರತಾ ನೆರವನ್ನು ನೀಡಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಪ್ರಾರಂಭಿಸಿದಾಗಿನಿಂದ 1.6 ಬಿಲಿಯನ್ ಡಾಲರ್ (ಸುಮಾರು 12 ಸಾವಿರ ಕೋಟಿ ರೂ.) ನೆರವನ್ನು ನೀಡಿದೆ.

  • ಉಕ್ರೇನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರೆಡಿ ಮಾಡಿದ 15ರ ಭಾರತೀಯ ಬಾಲಕ

    ಉಕ್ರೇನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರೆಡಿ ಮಾಡಿದ 15ರ ಭಾರತೀಯ ಬಾಲಕ

    ನವದೆಹಲಿ: 15 ವರ್ಷದ ಭಾರತೀಯ ಹುಡುಗ ಕೇವಲ 2 ವಾರಗಳಲ್ಲಿ ಉಕ್ರೇನಿಯನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರಚಿಸಿದ್ದಾನೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸುದ್ದಿ ವೈರಲ್ ಆಗಿದೆ. ಹುಡುಗನ ಸಾಧನೆಗೆ ನೆಟ್ಟಿಗರು ಪ್ರೋತ್ಸಾಹದ ಮಾತುಗಳಾಡಿದ್ದಾರೆ.

    ರಷ್ಯಾ, ಉಕ್ರೇನ್ ಮೇಲೆ ದಾಳಿಯನ್ನು ಆರಂಭಿಸಿದಾಗಿನಿಂದ, ಜಗತ್ತು ಉಕ್ರೇನ್‍ಗೆ ಸಹಾಯ ಮಾಡಲು ಒಗ್ಗಟ್ಟಿನಿಂದ ನಿಂತಿದೆ. ಉಕ್ರೇನ್‍ಗೆ ದೇಣಿಗೆ ಸಂಗ್ರಹಿಸಲು ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಒಗ್ಗೂಡಿವೆ. ಯುದ್ಧದ ಪರಿಣಾಮವಾಗಿ, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದು, ಅವರಿಗೆ ಇತರ ದೇಶಗಳಲ್ಲಿ ಆಶ್ರಯ ಪಡೆಯಬೇಕಾಗಿದೆ. ಇದನ್ನೂ ಓದಿ: ಹೆಣ್ಣು ಮಗು ಜನಿಸಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ತಂದೆ

    ಯುದ್ಧದಿಂದ ನೋವನ್ನು ಅನುಭವಿಸುತ್ತಿರುವ ನಿರಾಶ್ರಿತರಿಗೆ 15 ವರ್ಷದ ಭಾರತೀಯ ಹುಡುಗ ಇದೀಗ ಬೇರೆ ದೇಶದಲ್ಲಿರುವ ಉಕ್ರೇನಿಯನ್ ನಿರಾಶ್ರಿತರನ್ನು ಸಂಪರ್ಕಿಸಲು ವಿಶೇಷ ಮಾರ್ಗವೊಂದನ್ನು ಹುಡುಕಿದ್ದಾನೆ. ಈ ಪೂರಾ ಉಕ್ರೇನಿಯನ್ ನಿರಾಶ್ರಿತರಿಗಾಗಿ ವಿಶೇಷ ಅಪ್ಲಿಕೇಶನ್ ನಿರ್ಮಿಸಿದ್ದಾನೆ. ಇದರಲ್ಲಿರುವ ವಿಶೇಷ ವಿಷಯವೆಂದರೆ ತೇಜಸ್ ರವಿಶಂಕರ್ ಎಂದು ಗುರುತಿಸಲಾದ ಚಿಕ್ಕ ಹುಡುಗ ಸಿಕ್ವೊಯಾ ಇಂಡಿಯಾದ ವ್ಯವಸ್ಥಾಪಕ, ನಿರ್ದೇಶಕ ಜಿವಿ ರವಿಶಂಕರ್ ಅವರ ಮಗ. ಸಾಫ್ಟ್‍ವೇರ್ ಡೆವಲಪರ್ ಆಗಿರುವ ತೇಜಸ್ ಕೇವಲ ಎರಡು ವಾರಗಳಲ್ಲಿ ಆ್ಯಪ್ ಕಂಡುಹಿಡಿದಿದ್ದಾನೆ.

    ತೇಜಸ್ ಆ್ಯಪ್ ಲಿಂಕ್‍ನನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಇದನ್ನು ಹೇಗೆ ಬಳಸಬೇಕು ಎಂಬುದನ್ನು ವಿವರಿಸಿದ್ದಾನೆ. ಈ ಆ್ಯಪ್‍ನಲ್ಲಿ ಹಲವು ವಿಶೇಷತೆಗಳನ್ನು ಹೊಂದಿದೆ. ಉಕ್ರೇನ್ ನಿರಾಶ್ರಿತರಿಗೆ ಹತ್ತಿರವಿರುವ ಜಾಗದ ಜೊತೆಗೆ ಪ್ರಪಂಚದ ನಕ್ಷೆಯನ್ನು ತೇಜಸ್ ಆ್ಯಪ್‍ನಲ್ಲಿ ಆಳವಡಿಸಿದ್ದಾರೆ. ಈ ಮೂಲಕ ನಿರಾಶ್ರಿತರು ಆಹಾರ, ಉಳಿದುಕೊಳ್ಳಲು ಸುರಕ್ಷಿತ ಸ್ಥಳಗಳು ಮತ್ತು ಪ್ರಪಂಚದಾದ್ಯಂತ ಔಷಧಿಗಳಂತಹ ಅವಶ್ಯಕತೆಗಳನ್ನು ಪೂರೈಸಲು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: ಮನೆಯನ್ನೇ ಸ್ಮಶಾನ ಮಾಡಿದ ಪಾಪಿ – ಪತ್ನಿ, ಅಜ್ಜಿ, ತನ್ನ ಎರಡು ಮಕ್ಕಳನ್ನೆ ಕ್ರೂರವಾಗಿ ಕೊಂದ

    ಸಹಾಯ ಅಗತ್ಯವಿರುವ ವ್ಯಕ್ತಿ ಕೇವಲ ಆ್ಯಪ್ ಮೇಲೆ ಎರಡು ಕ್ಲಿಕ್ ಮಾಡಿದರೆ ಸಹಾಯ ಪಡೆಯಬಹುದು ಎಂದು ತೇಜಸ್ ತಮ್ಮ ಟ್ವೀಟ್‍ನಲ್ಲಿ ಬರೆದಿದ್ದಾರೆ. ಈ ಅಪ್ಲಿಕೇಶನ್ ಇಂಗ್ಲಿಷ್ ಜೊತೆಗೆ 12 ಇತರ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ತೇಜಸ್ ತಂದೆ ಜಿವಿ ರವಿಶಂಕರ್ ಅವರು ತಮ್ಮ ಮಗನ ಸಾಧನೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಮಗನ ಯಶಸ್ಸನ್ನು ಶ್ಲಾಘಿಸಿದ್ದಾರೆ. ಕೆಲವು ದಿನಗಳ ಹಿಂದೆ, ತೇಜಸ್ ತನ್ನ ಅಪ್ಲಿಕೇಶನ್ ಅನುಮೋದಿಸಲು ಗೂಗಲ್ ಪ್ಲೇಗೆ ಮನವಿ ಮಾಡಿದ್ದನು.

  • ಯುದ್ಧದ ನಡುವೆಯೇ ದೆಹಲಿಗೆ ಬಂದಿಳಿದ ರಷ್ಯಾ ವಿದೇಶಾಂಗ ಸಚಿವ

    ಯುದ್ಧದ ನಡುವೆಯೇ ದೆಹಲಿಗೆ ಬಂದಿಳಿದ ರಷ್ಯಾ ವಿದೇಶಾಂಗ ಸಚಿವ

    ನವದೆಹಲಿ: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ತಿಂಗಳು ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ಆರಂಭಿಸಿದ ನಂತರ ಇದು ಭಾರತಕ್ಕೆ ಅವರ ಮೊದಲ ಪ್ರವಾಸವಾಗಿದೆ.

    ಅಧಿಕೃತ ಭೇಟಿಗಾಗಿ ನವದೆಹಲಿಗೆ ಆಗಮಿಸುತ್ತಿರುವ ರಷ್ಯಾದ ಒಕ್ಕೂಟದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಸ್ವಾಗತಿಸುತ್ತೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ

    RUSSIA

    ಲಾವ್ರೊವ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ತಿಳಿಸಿತ್ತು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೊರಡಿಸಿರುವ ಲಾವ್ರೊವ್ ಅವರ ಭೇಟಿಯ ಮಾಧ್ಯಮ ಪ್ರಕಟಣೆಯಲ್ಲಿ ರಷ್ಯಾದ ವಿದೇಶಾಂಗ ಸಚಿವರು ಮತ್ತು ಪ್ರಧಾನಿ ನಡುವಿನ ಯಾವುದೇ ಸಭೆಯನ್ನು ಉಲ್ಲೇಖಿಸಿಲ್ಲ ಎನ್ನಲಾಗಿದೆ.

    ಮಾತುಕತೆಯ ಸಿದ್ಧತೆಗಳ ಬಗ್ಗೆ ತಿಳಿದಿರುವ ಮೂಲಗಳು, ರಷ್ಯಾದಿಂದ ವಿವಿಧ ಮಿಲಿಟರಿ ಯಂತ್ರಾಂಶಗಳು ಮತ್ತು S-400 ಕ್ಷಿಪಣಿ ವ್ಯವಸ್ಥೆಗಳ ಘಟಕಗಳನ್ನು ಸಮಯೋಚಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಒತ್ತಡ ಹೇರುವ ಸಾಧ್ಯತೆಯಿದೆ ಎಂದು ಹೇಳಿವೆ. ಇದನ್ನೂ ಓದಿ: ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು 

    ರಷ್ಯಾ ವಿದೇಶಾಂಗ ಸಚಿವರು ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ಭಾರತಕ್ಕೆ ಆಗಮಿಸಿದ್ದಾರೆ. ಉಕ್ರೇನ್ ಜೊತೆಗಿನ ಸಂಘರ್ಷವನ್ನು ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಭಾರತ, ರಷ್ಯಾವನ್ನು ಒತ್ತಾಯಿಸುತ್ತಿದೆ.

    ಭಾರತ ಇಲ್ಲಿಯವರೆಗೆ ಉಕ್ರೇನ್‌ನ ಆಕ್ರಮಣಕ್ಕಾಗಿ ರಷ್ಯಾವನ್ನು ಟೀಕಿಸಿಲ್ಲ ಮತ್ತು ರಷ್ಯಾದ ಆಕ್ರಮಣವನ್ನು ಖಂಡಿಸುವಲ್ಲಿ ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಮತದಾನದಿಂದ ದೂರವಿತ್ತು. ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟಿನ ಕುರಿತು ರಷ್ಯಾ ನಿರ್ಣಯ ಮಂಡಿಸಿದಾಗ ಭಾರತವೂ ದೂರವಿತ್ತು. ಇದು ಸಂಘರ್ಷದ ಬಗ್ಗೆ ಅದರ ತಟಸ್ಥ ಸ್ಥಾನವನ್ನು ಪ್ರತಿಬಿಂಬಿಸುತ್ತದೆ. ಕಳೆದ ವಾರ ಜೈಶಂಕರ್ ಸಂಸತ್ತಿನಲ್ಲಿ ಉಕ್ರೇನ್ ಸಂಘರ್ಷದ ಬಗ್ಗೆ ಭಾರತದ ನಿಲುವು ಸ್ಥಿರವಾಗಿದೆ ಮತ್ತು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.