ಕೀವ್: ರಷ್ಯಾ ಪಡೆಗಳು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಸೆರೆ ಹಿಡಿಯಲು ಬಹಳ ಹತ್ತಿರಕ್ಕೆ ಬಂದಿದ್ದವು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಅಲ್ಲಿನ ಶಬ್ಧ ಜೋರಾಗಿತ್ತು. ಭಾರೀ ಸ್ಫೋಟಗಳು ಅಲ್ಲಿ ಸಂಭವಿಸಿದ್ದವು. ನಾನಿದ್ದ ಸ್ಥಳ ಸುರಕ್ಷಿತವಲ್ಲ ಎಂಬುದು ತಕ್ಷಣವೇ ನನಗೆ ಖಾತ್ರಿಯಾಯಿತು. ರಷ್ಯಾ ಪಡೆಗಳು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕೊಲ್ಲಲು ಮುಂದಾಗಿವೆ ಎಂದು ನನಗೆ ಮಾಹಿತಿ ದೊರಕಿತು ಎಂದು ಭೀಕರ ಸನ್ನಿವೇಶದ ಬಗ್ಗೆ ತಿಳಿಸಿದರು. ಇದನ್ನೂ ಓದಿ: ಚೀನಿಗಳಿಗೆ ವೀಸಾ ಬಂದ್ ಮಾಡಿದ ಬೆನ್ನಲ್ಲೇ ಭಾರತೀಯ ವಿದ್ಯಾರ್ಥಿಗಳಿಗೆ ಬನ್ನಿ ಎಂದ ಚೀನಾ
ಅಂತಹ ಸನ್ನಿವೇಶವನ್ನು ನಾನು ಅದಕ್ಕೂ ಮೊದಲು ಕೇವಲ ಸಿನಿಮಾಗಳಲ್ಲಿ ಮಾತ್ರವೇ ನೋಡಿದ್ದೆ. ತಕ್ಷಣ ನಮ್ಮ ಭದ್ರತಾ ಸಿಬ್ಬಂದಿ ನಮ್ಮ ಆವರಣವನ್ನು ಭದ್ರಪಡಿಸಲು ಯತ್ನಿಸಿದರು ಎಂದು ವಿವರಿಸಿದರು.
ಹಿಂದಿನ ಪ್ರವೇಶದ್ವಾರದಲ್ಲಿ ಒಂದು ಗೇಟ್ ಅನ್ನು ಪೋಲಿಸ್ ಬ್ಯಾರಿಕೇಡ್‌ಗಳು ಹಾಗೂ ಪ್ಲೈವುಡ್ ಬೋರ್ಡ್‌ಗಳ ರಾಶಿಯಿಂದ ಮುಚ್ಚಲಾಗಿತ್ತು. ದಾಳಿಯ ಹಿಂದಿನ ರಾತ್ರಿ ದೀಪಗಳನ್ನು ಆರಿಸಲಾಗಿತ್ತು. ನಮ್ಮ ಕಾವಲುಗಾರರಿಗೆ ಹಾಗೂ ಎಲ್ಲಾ ಸಹಾಯಕರಿಗೂ ಬುಲೆಟ್ ಪ್ರೂಫ್ ಜಾಕೆಟ್ ಹಾಗೂ ರೈಫಲ್‌ಗಳನ್ನು ತರಿಸಲಾಗಿತ್ತು ಎಂದರು. ಇದನ್ನೂ ಓದಿ: ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು
ಝೆಲೆನ್ಸ್ಕಿ ತಮ್ಮ ನಿವಾಸದಲ್ಲಿ ಹೆಂಡತಿ ಹಾಗೂ ಮಕ್ಕಳೊಂದಿಗೆ ಇರುವಾಗಲೇ 2 ಬಾರಿ ರಷ್ಯಾ ಪಡೆಗಳು ಆಕ್ರಮಣ ಮಾಡಲು ಪ್ರಯತ್ನಿಸಿವೆ ಎಂದು ತಿಳಿಸಿದರು.
ಕೀವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದ್ದು, ಅನೇಕ ಅಮಾನವೀಯ ಘಟನೆಗಳೂ ಇಲ್ಲಿ ಬೆಳಕಿಗೆ ಬರುತ್ತಿವೆ. ಈ ನಡುವೆ ರಷ್ಯಾ ನಿಯಂತ್ರಣದಲ್ಲಿರುವ ಉಕ್ರೇನ್‌ನ ಖೇರ್ಸನ್ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣವೂ ಇದಕ್ಕೆ ಸಾಕ್ಷಿಯಾಗಿದೆ.
ಬಾಂಬ್ ದಾಳಿಯಿಂದ ನೆಲಮಾಳಿಗೆಯಲ್ಲಿ ಆಶ್ರಯ ಪಡೆದಿದ್ದ ಕೆಲವರು, ಮುಸ್ಸಂಜೆ ವೇಳೆಯಲ್ಲಿ ಊಟ ತರಲು ಹೋದ ಮೂವರು, ಸೈನಿಕನ ಕಣ್ಣಿಗೆ ಬಿದ್ದಿದ್ದಾರೆ. ಮೂವರಲ್ಲಿ 12 ಮತ್ತು 16 ವರ್ಷದ ಯುವತಿಯರೂ ಇದ್ದರು. ರಷ್ಯಾ ಸೈನಿಕ ಇಬ್ಬರನ್ನು ಕಳುಹಿಸಿದ್ದಾನೆ. 16 ವರ್ಷದ ಯುವತಿಯನ್ನು ಅಲ್ಲೇ ಇರಲು ಹೇಳಿ, ಆಕೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಇದನ್ನೂ ಓದಿ: ಟ್ವಿಟ್ಟರ್ ಆಯ್ತು ಈಗ ಕೋಕಾ ಕೋಲಾ ಖರೀದಿಸುತ್ತೇನೆಂದ ಎಲಾನ್ ಮಸ್ಕ್
ಈ ಕುರಿತು ಅಳಲು ತೋಡಿಕೊಂಡಿರುವ ಸಂತ್ರಸ್ತೆ, ಮೊದಲು ನನ್ನ ಕತ್ತುಹಿಸುಕಿ ಸಾಯಿಸಲು ಪ್ರಯತ್ನಿಸಿದ್ದಾನೆ. ನಂತರ ನನ್ನ ಬಟ್ಟೆ ತೆಗೆಯಲು ಹೇಳಿದ್ದಾನೆ. ನಾನು ಅದನ್ನು ವಿರೊಧಿಸಿದಾಗ, ನೀನು ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಜನ ಪುರುಷರನ್ನು ಕರೆದುಕೊಂಡು ಬರುತ್ತೇನೆ ಎಂದು ಭಯ ಹುಟ್ಟಿಸಿದ್ದಾನೆ. ಸಮೀಪದಲ್ಲೇ ಇದ್ದ ಮತ್ತೊಬ್ಬ ಸೈನಿಕ ಅತ್ಯಾಚಾರ ನಿಲ್ಲಿಸುವಂತೆ ಕೇಳಿಕೊಂಡರೂ ಆತ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: 90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್
ಸಾಂದರ್ಭಿಕ ಚಿತ್ರ
ನಾವು ಊಟ ತರಲು ಹೊರಗೆ ಹೋಗದೆ ಇದ್ದಿದ್ದರೆ ಅವನು ನನ್ನನ್ನು ನೋಡುತ್ತಿರಲಿಲ್ಲ, ನನ್ನನ್ನು ಮುಟ್ಟುತ್ತಿರಲಿಲ್ಲ. ಸಾಲದ್ದಕ್ಕೆ ಮರುದಿನ, ಇನ್ನೊಬ್ಬ ಸೈನಿಕನ ಬಳಿಗೆ ಕರೆದೊಯ್ದು ಬೆದರಿಕೆಯೊಡ್ಡಿ ಅತ್ಯಾಚಾರ ಮಾಡಿಸಿದ್ದಾರೆ ಎಂದೂ ಆಕೆ ಅಳಲು ತೋಡಿಕೊಂಡಿದ್ದಾಳೆ.
ಕೀವ್: ರಷ್ಯಾ-ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವಿನ ಬಗ್ಗೆ ಮಾತನಾಡಿದ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ತಟಸ್ಥತೆ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡುವುದಿಲ್ಲ ಎಂದು ಹೇಳಿದರು.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿ 2 ತಿಂಗಳು ಕಳೆದಿವೆ. ಭಾರತ ಈ ಎರಡು ದೇಶಗಳಲ್ಲಿ ಯವುದಕ್ಕೂ ಬೆಂಬಲ ನೀಡದೇ ತಟಸ್ಥ ನಿಲುವನ್ನು ಪ್ರದರ್ಶಿಸಿದೆ. ಇದರ ನಡುವೆಯೂ ಹಲವು ಬಾರಿ ಉಕ್ರೇನ್ ಹಾಗೂ ರಷ್ಯಾ ದೇಶಗಳಿಗೆ ಯುದ್ಧ ನಿಲ್ಲಿಸುವಂತೆ ಮನವಿಯನ್ನೂ ಮಾಡಿದೆ. ಇದನ್ನೂ ಓದಿ: ಕರಾಚಿ ಸೂಸೈಡ್ ಬಾಂಬರ್ ಎಂಫಿಲ್ ಪದವೀಧರೆ, 2 ಮಕ್ಕಳ ತಾಯಿ – ಕೃತ್ಯ ಎಸಗಿದ್ದು ಯಾಕೆ?
ಯುದ್ಧದ ಬಗ್ಗೆ ತಟಸ್ಥ ನಿಲುವನ್ನು ಹೊಂದಿರುವ ಭಾರತದ ಬಗ್ಗೆ ಮಾತನಾಡಿದ ಉಕ್ರೇನ್ ವಿದೇಶಾಂಗ ಸಚಿವ, ಭಾರತದ ಸಹಾನುಭೂತಿ ಹಾಗೂ ಯುದ್ಧವನ್ನು ನಿಲ್ಲಿಸಬೇಕು ಎಂಬ ನಿಲುವನ್ನು ಪ್ರಶಂಸಿಸುತ್ತೇವೆ. ಆದರೆ ತಟಸ್ಥ ಧೋರಣೆ ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡುವುದಿಲ್ಲ ಎಂಬುದನ್ನು ನಾನು ತಿಳಿಸಬಯಸುತ್ತೇನೆ ಎಂದರು. ಇದನ್ನೂ ಓದಿ: ಚೀನಿಯರ ನೆತ್ತರು ವ್ಯರ್ಥವಾಗಲು ಬಿಡಲ್ಲ: ಪಾಕ್‌ನಲ್ಲಿ ತನ್ನ ಪ್ರಜೆಗಳ ಹತ್ಯೆಗೆ ಚೀನಾ ಕಿಡಿ
ಯುದ್ಧವನ್ನು ನಿಲ್ಲಿಸಲು ಉತ್ತಮ ಮಾರ್ಗವೆಂದರೆ ಉಕ್ರೇನ್ ಅನ್ನು ಬೆಂಬಲಿಸುವುದು ಹಾಗೂ ಯುದ್ಧವನ್ನು ಗೆಲ್ಲಬಹುದು ಎಂಬ ಭ್ರಮೆಯಲ್ಲಿರುವ ರಷ್ಯಾದ ಕೈ ಬಿಡುವುದು. ಅಪರಾಧಿ ಹಾಗೂ ಬಲಿಪಶುಗಳು ಯಾರೆಂಬುದು ಸ್ಪಷ್ಟವಾಗಿ ಕಾಣಿಸುತ್ತಿರುವಾಗ ಬಲಿಪಶುವಿನ ಪರವಾಗಿರುವುದು ನೈತಿಕ ಹಾಗೂ ರಾಜಕೀಯವಾಗಿ ಬುದ್ಧಿವಂತರ ಕರ್ತವ್ಯ ಎಂದು ಕುಲೆಬಾ ಭಾರತಕ್ಕೆ ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ: ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ವಿದ್ಯಾರ್ಥಿಗಳಿಗೆ ಶೀಘ್ರವೇ ಗುಡ್ ನ್ಯೂಸ್ ಸಿಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ಕೊಟ್ಟರು.
ಉಕ್ರೇನ್ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ ಅವರು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ. ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್ ಸಿಗುತ್ತೆ. ಈಗಾಗಲೇ ಈ ಕುರಿತು ಕೇಂದ್ರ ಸರ್ಕಾರದ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಈ ಬಗ್ಗೆ ಸಮತಿ ರಚನೆ ಮಾಡಿದ್ದೇವೆ. ಅದಷ್ಟು ಬೇಗ ಶುಭ ಸುದ್ದಿ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ – ಮಾರಾಟ ಮಾಡುವಾಗ ಸಿಕ್ಕಿಬಿದ್ದ
ಕೋವಿಡ್-19 ಕುರಿತು ಮಾತನಾಡಿದ ಅವರು, ಏರ್ಪೋರ್ಟ್ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಕೋವಿಡ್ ಹೆಚ್ಚಿರುವ 7-8 ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಗಮನ ಹರಿಸಲು ಸೂಚನೆಯನ್ನು ಕೊಡಲಾಗಿದೆ. ಮನೆಗಳಿಗೆ ಹೋದ ಮೇಲೆ ಟೆಲಿಮಾನಿಟಿರಿಂಗ್ ಮಾಡ್ತಿದ್ದೇವೆ. ಅವಶ್ಯಕತೆ ಇದ್ರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಿದ್ದೇವೆ ಎಂದು ಹೇಳಿದರು.
ನವದೆಹಲಿ: ದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸುವ ಅಗತ್ಯವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವೇಗವಾಗಿ ಬದಲಾಗುತ್ತಿರುವ ವಿಶ್ವ ಕ್ರಮದಿಂದ ಉದ್ಭವಿಸಬಹುದಾದ ಸವಾಲುಗಳನ್ನು ಎದುರಿಸಲು ಎಲ್ಲಾ ಕ್ಷೇತ್ರಗಳನ್ನು ಬಲಪಡಿಸಬೇಕು. ಅದರಲ್ಲೂ ವಿಶೇಷವಾಗಿ ದೇಶದ ರಕ್ಷಣೆಯ ಉಪಕರಣವನ್ನು ನಿರಂತರವಾಗಿ ಬಲಪಡಿಸುವುದು ಅತ್ಯಗತ್ಯವಾಗಿರುತ್ತದೆ ಎಂದು ತಿಳಿಸಿದರು.
ದೇಶಕ್ಕೆ ಒಡ್ಡುವ ಪ್ರತಿ ಹೊಸ ಸವಾಲುಗಳು ಮೊದಲಿನಿಗಿಂತ ಹೆಚ್ಚು ಕಷ್ಟಕರವಾಗಿರುತ್ತದೆ. ಕೋವಿಡ್ ನಂತರ ಇಡೀ ಜಗತ್ತು ಉಕ್ರೇನ್‍ನ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಅಫ್ಘಾನಿಸ್ತಾನದಲ್ಲಿ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಸ್ಥಿರತೆಯನ್ನು ನೋಡಿದ್ದೇವೆ. ಈ ರೀತಿಯ ಘಟನೆಗಳೆಲ್ಲವೂ ನಮ್ಮ ದೇಶದ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಈ ಎಲ್ಲಾ ಕಾರಣದಿಂದಾಗಿ ದೇಶದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ದೇಶದ ಪ್ರತಿಯೊಂದು ಕ್ಷೇತ್ರವನ್ನು ಸಜ್ಜುಗೊಳಿಸುವ ಅವಶ್ಯಕತೆಯಿದೆ. ಭವಿಷ್ಯದ ಹೊಸ ಬೆದರಿಕೆಗಳು ಮತ್ತು ಸವಾಲುಗಳನ್ನು ನಿಭಾಯಿಸಲು ತಂತ್ರಜ್ಞಾನದಲ್ಲಿ ಅಧಿಕ ಅಭಿವೃದ್ಧಿ ಸಾಧಿಸುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು. ಇದನ್ನೂ ಓದಿ:ದೆಹಲಿ ಮಾದರಿ ಎಂದರೆ ಪ್ರಾಮಾಣಿಕ ಸರ್ಕಾರ: ಕೇಜ್ರಿವಾಲ್
ರಕ್ಷಣಾ ತಂತ್ರಜ್ಞಾನಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಬೇಕು. ಸರ್ಕಾರ, ಸಶಸ್ತ್ರ ಪಡೆಗಳು, ಖಾಸಗಿ ವಲಯ, ಸ್ಟಾರ್ಟ್‍ಅಪ್‍ಗಳು, ಎಂಎಸ್‍ಎಂಇಗಳು ಮತ್ತು ಅಕಾಡೆಮಿಗಳು ಒಟ್ಟಾಗಿದ್ದರೆ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಬಹುದು. ಇದರಿಂದಾಗಿ ಆತ್ಮನಿರ್ಭರ ಭಾರತದ ಗುರಿಯನ್ನು ಸಾಧಿಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಇದನ್ನೂ ಓದಿ: ಕೊಪ್ಪಳ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಯಸಿದ್ರೆ, ಆ ಕ್ಷೇತ್ರ ಬಿಟ್ಟುಕೊಡ್ತೀವಿ: ಅಮರೇಗೌಡ
ಕೀವ್: ರಷ್ಯಾ ಉಕ್ರೇನ್ ಮೇಲೆ ಪರಮಾಣು ಬಾಂಬ್ ದಾಳಿ ನಡೆಸುವ ಬೆದರಿಕೆ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನಿಯನ್ನರಿಗೆ ವಿಕಿರಣ ವಿರೋಧಿ ಔಷಧಿಗಳನ್ನು ಸಂಗ್ರಹಿಸಲು ಕರೆ ನೀಡಿದ್ದಾರೆ.
ನಾವು ರಷ್ಯಾದ ಯಾವುದೇ ಬೆದರಿಕೆಗೂ ತಯಾರಾಗಿರಬೇಕು. ರಷ್ಯಾ ನಮ್ಮ ಮೇಲೆ ಯಾವುದೇ ಆಯುಧಗಳನ್ನೂ ಬಳಸಬಹುದು ಎಂಬುದು ನನಗೆ ಮನವರಿಕೆಯಾಗಿದೆ. ಹೀಗಾಗಿ ಇವುಗಳಿಂದಾಗಬಹುದಾದ ಅಡ್ಡ ಪರಿಣಾಮವನ್ನು ನಿಗ್ರಹಿಸಲು ವಿಕಿರಣ ವಿರೋಧಿ ಔಷಧಿಯನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್‌ಫೋನ್‌ನಿಂದ ಉಳಿಯಿತು ಉಕ್ರೇನ್ ಸೈನಿಕನ ಜೀವ
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿತ್ತು. ಇದಾದ ಕೆಲವೇ ದಿನಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಯಾವುದೇ ದೇಶ ಉಕ್ರೇನ್ ಪರವಾಗಿ ನಮ್ಮ ಮೇಲೆ ನೇರವಾಗಿ ಯುದ್ಧ ಮಾಡಿದರೆ ಪರಮಾಣು ದಾಳಿ ಮಾಡುವುದಕ್ಕೂ ನಾವು ಹಿಂಜರಿಯಲ್ಲ ಎಂದ ರಷ್ಯಾ ಹೇಳಿತ್ತು. ಉಕ್ರೇನ್ ಮೇಲೆ ಪರಮಾಣು ದಾಳಿಯ ಬೆದರಿಕೆಯಿದ್ದರೂ, ರಷ್ಯಾ ಇಲ್ಲಿಯವರೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಒಂದೇ ದಿನ ಪೆಟ್ರೋಲ್ ಬೆಲೆ 84 ರೂ. ಏರಿಕೆ – ಪ್ರತಿಭಟನಾಕಾರರ ಮೇಲೆ ಫೈರಿಂಗ್
ನವದೆಹಲಿ: ಉಕ್ರೇನ್ ಆಕ್ರಮಣದ ನಂತರ ರಷ್ಯಾದ ವಿರುದ್ಧ ಯೂರೋಪ್ ಒಕ್ಕೂಟ ವಿಧಿಸಿರುವ ನಿರ್ಬಂಧಗಳ ಪರಿಣಾಮವಾಗಿ, ರಷ್ಯಾ ಭಾರತದಿಂದ ಹೆಚ್ಚಿನ ವೈದ್ಯಕೀಯ ಉಪಕರಣಗಳನ್ನು ಬಯಸಿದೆ.
ಭಾರತ ಮತ್ತು ರಷ್ಯಾದ ವೈದ್ಯಕೀಯ ಉಪಕರಣ ಕಂಪನಿಗಳು ಏಪ್ರಿಲ್ 22 ರಂದು ವರ್ಚುವಲ್ ಸಭೆಯಲ್ಲಿ ಸರಬರಾಜುಗಳನ್ನು ಹೆಚ್ಚಿಸುವ ವಿಧಾನಗಳ ಕುರಿತು ಚರ್ಚಿಸಲಿವೆ ಎಂದು ಭಾರತೀಯ ವೈದ್ಯಕೀಯ ಸಾಧನ ಉದ್ಯಮ ಸಂಘದ ಫೋರಂ ಸಂಯೋಜಕ ರಾಜೀವ್ ನಾಥ್ ಹೇಳಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸುವ ವ್ಯವಹಾರ ಕುರಿತು ರಷ್ಯಾ ದೃಢೀಕರಿಸಿದೆ. ಇದನ್ನೂ ಓದಿ: ಕಾಬೂಲ್ ಶಾಲೆಯಲ್ಲಿ ಸ್ಫೋಟ- 6 ಮಂದಿ ಸಾವು
ರಷ್ಯಾ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿರುವ ಕಾರಣ ದ್ವಿಪಕ್ಷೀಯ ವ್ಯಾಪಾರವನ್ನು ನಿರ್ವಹಿಸಲು ಶೀತಲ ಸಮರದ ಸಮಯದಲ್ಲಿ ಬಳಸಿದಂತೆಯೇ ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ವ್ಯವಸ್ಥೆಗೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ರಷ್ಯಾಕ್ಕೆ ರಫ್ತುಗಳನ್ನು ಹೆಚ್ಚಿಸಲು ಭಾರತವು ಆಶಿಸುತ್ತಿದೆ. ಉಕ್ರೇನ್ ಮೇಲಿನ ಯುದ್ಧದಿಂದಾಗಿ ರಷ್ಯಾವನ್ನು ಪ್ರತ್ಯೇಕಿಸಲು ಪ್ರಯತ್ನಿಸಿದ ನಂತರ ರಷ್ಯಾದ ತೈಲವನ್ನು ಖರೀದಿಸಲು ಮುಂದಾಗಿದ್ದಕ್ಕೆ ಭಾರತವನ್ನು ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ಟೀಕಿಸಿದ್ದವು.
ಈ ವರ್ಷ ರಫ್ತುಗಳನ್ನು ಸುಮಾರು 2 ಶತಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಆಶಯವನ್ನು ಭಾರತ ವ್ಯಕ್ತಪಡಿಸಿದೆ. ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಸಾರಿದ ನಂತರ ಯುರೋಪ್ ಮತ್ತು ಚೀನಾದಿಂದ ಆಮದುಗಳನ್ನು ತೀವ್ರವಾಗಿ ಕಡಿತಗೊಂಡಿದೆ. ಇದನ್ನೂ ಓದಿ: ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ
ನವದೆಹಲಿ: ರಷ್ಯಾ ಆಕ್ರಮಣದ ಮಧ್ಯೆ ಶಿಕ್ಷಣವನ್ನು ನಿಲ್ಲಿಸಿ, ಉಕ್ರೇನ್‌ನಿಂದ ಭಾರತಕ್ಕೆ ವಾಪಸಾದ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಉಕ್ರೇನ್‌ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳು ಭಾನುವಾರ ತಮ್ಮ ಪೋಷಕರೊಂದಿಗೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ಜಮಾಯಿಸಿ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಸಹಾಯ ಮಾಡಲು ಕೋರಿದ್ದಾರೆ. ಇದನ್ನೂ ಓದಿ: ಸಿಡಿಎಸ್ ಹುದ್ದೆಗೆ ಕಾರ್ಯನಿರತ, ನಿವೃತ್ತ ಎರಡೂ ಅಧಿಕಾರಿಗಳ ಪರಿಗಣನೆ
ದೇಶದ 18 ರಾಜ್ಯಗಳಿಂದ ಸುಮಾರು 500 ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಜಮಾಯಿಸಿ, ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ನಾವು ಕೇಂದ್ರವನ್ನು ಒತ್ತಾಯಿಸುತ್ತೇವೆ ಎಂದು ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯ ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅರ್ಜುನ್ ಬಟಿಶ್ ತಂದೆ ಹರೀಶ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ಮಾರ್ಚ್ 4 ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಸನ್ನಿವೇಶಗಳಿಂದ ಇಂಟರ್ನ್ಶಿಪ್ ಬಾಕಿ ಉಳಿದಿರುವ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಉಳಿದ ಭಾಗವನ್ನು ಭಾರತದಲ್ಲಿ ಪೂರ್ಣಗೊಳಿಸಲು ಅರ್ಹರಾಗಿದ್ದಾರೆ. ಆದರೆ ಯಾವುದೇ ನಿರ್ದೇಶನಗಳನ್ನು ನೀಡಲಾಗುವುದಿಲ್ಲ ಎಂದಿತ್ತು.
ನವದೆಹಲಿ: ಭಾರತದಿಂದ ಗೋಧಿಯನ್ನು ಖರೀದಿಸಲು ಈಜಿಪ್ಟ್ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈಜಿಪ್ಟ್ ರಷ್ಯಾ ಮತ್ತು ಉಕ್ರೇನ್‌ನಿಂದ ಗೋಧಿಯನ್ನು ಆಮದು ಮಾಡುತ್ತಿತ್ತು. ಆದರೆ ಯುದ್ಧದಿಂದಾಗಿ ಈಜಿಪ್ಟ್ ಈಗ ಭಾರತದಿಂದ 3 ಮಿಲಿಯನ್ ಟನ್ ಗೋಧಿ ಖರೀದಿಸಲು ಮುಂದಾಗಿದೆ.
ಈಜಿಪ್ಟ್ ದೇಶದ ಕೃಷಿ ಅಧಿಕಾರಿಗಳು ಭಾರತದ ವಿವಿಧ ಸಂಸ್ಕರಣಾ ಘಟಕ, ಬಂದರುಗಳಿಗೆ ಭೇಟಿ ನೀಡಿದ್ದರು. ಜೊತೆಗೆ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್‌ನ ಕೃಷಿ ಭೂಮಿಗಳನ್ನು ವೀಕ್ಷಣೆ ಮಾಡಿದ್ದರು. ಈಗ ಈಜಿಪ್ಟ್‌ಗೆ ಉತ್ತಮ ಗುಣಮಟ್ಟದ ಗೋಧಿಯನ್ನು ರಫ್ತು ಮಾಡಲಿದ್ದೇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಥಳೀಯ ಉತ್ಪನ್ನ ಮಾತ್ರ ಖರೀದಿಸಲು ಜನರನ್ನು ಪ್ರೇರೇಪಿಸಿ: ಸ್ವಾಮೀಜಿಗಳಿಗೆ ಮೋದಿ ಮನವಿ
India, the food security soldier. 🇮🇳
Egypt has turned to India for its supply of wheat trusting us for quick & quality delivery.
Modi Govt. is leading the response to a surging global demand as our farmers give us an upper hand with a bumper harvest. pic.twitter.com/gFk8bjZ4ky
ರಷ್ಯಾ ಮತ್ತು ಉಕ್ರೇನ್ ಯುದ್ಧದ ಹಿನ್ನೆಯಲ್ಲಿ ಗೋಧಿ ಆಮದಿಗಾಗಿ ಈಜಿಪ್ಟ್ ಅಧಿಕಾರಿಗಳು ಬೇರೆ ಬೇರೆ ದೇಶಗಳನ್ನು ಸಂಪರ್ಕಿಸಿತ್ತು. ಕಳೆದ ತಿಂಗಳು ದುಬೈನಲ್ಲಿ ಪಿಯೂಶ್ ಗೋಯಲ್ ಈಜಿಪ್ಟ್ ಸರ್ಕಾರದ ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವ ಡಾ. ಹಾಲಾ ಎಲ್-ಸೈದ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಈಜಿಪ್ಟ್‌ನ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಗೋಧಿಯನ್ನು ಪೂರೈಸಲು ಭಾರತದ ಸಿದ್ಧವಾಗಿದೆ ಎಂದು ತಿಳಿಸಿದ್ದರು.
2021 ರಲ್ಲಿ ಈಜಿಪ್ಟ್ 6.1 ದಶಲಕ್ಷ ಟನ್ (mt) ಗೋಧಿಯನ್ನು ಆಮದು ಮಾಡಿಕೊಂಡಿದೆ. ಭಾರತವು ಈಜಿಪ್ಟ್‌ಗೆ ಗೋಧಿಯನ್ನು ರಫ್ತು ಮಾಡಬಹುದಾದ ಮಾನ್ಯತೆ ಪಡೆದ ದೇಶಗಳ ಪಟ್ಟಿಯಲ್ಲಿ ಇಲ್ಲಿಯವರೆಗೆ ಸ್ಥಾನ ಪಡೆದಿರಲಿಲ್ಲ.
ರಷ್ಯಾ ಮತ್ತು ಉಕ್ರೇನ್‌ನಿಂದ ಈಜಿಪ್ಟ್ ಶೇ.80ರಷ್ಟು ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದು 2021ರಲ್ಲಿ ಅಂದಾಜು 2 ಶತಕೋಟಿ ಡಾಲರ್ ಮೌಲ್ಯದ ಗೋಧಿಯನ್ನು ಆಮದು ಮಾಡಿಕೊಂಡಿದೆ.
ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಶ್ರೀಲಂಕಾ, ಓಮನ್ ಮತ್ತು ಮಲೇಷ್ಯಾದಂತಹ ದೇಶಗಳಲ್ಲಿ ಗೋಧಿಗೆ ಹೆಚ್ಚಿನ ಬೇಡಿಕೆಯಿದ್ದು ಭಾರತ ರಫ್ತು ಮಾಡುತ್ತಿದೆ. ಅಷ್ಟೇ ಅಲ್ಲದೇ ಯೆಮೆನ್, ಅಫ್ಘಾನಿಸ್ತಾನ ಮತ್ತು ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳಿಗೆ ಗೋಧಿ ರಫ್ತು ಹೆಚ್ಚಿಸಲು ಭಾರತ ಪ್ರಯತ್ನಗಳನ್ನು ಮಾಡುತ್ತಿದೆ. ದನ್ನೂ ಓದಿ: ತಾಯ್ನಾಡಲ್ಲಿ 108 ಅಡಿ ಎತ್ತರದ ಹನುಮ ಮೂರ್ತಿಯನ್ನು ಅನಾವರಣಗೊಳಿಸಿದ ಮೋದಿ
2020-21ರವರೆಗೆ ಜಾಗತಿಕ ಗೋಧಿ ವ್ಯಾಪಾರದಲ್ಲಿ ಭಾರತದ ರಫ್ತು ಪ್ರಮಾಣ ಕಡಿಮೆ ಇದೆ. ಭಾರತವು 2019-20 ಮತ್ತು 2020-21 ರಲ್ಲಿ ಕ್ರಮವಾಗಿ ಸುಮಾರು 0.2 ಮತ್ತು 2 ಮಿಲಿಯನ್ ಟನ್ ಗೋಧಿಯನ್ನು ಮಾತ್ರ ರಫ್ತು ಮಾಡಿದೆ.
2021-22ರ ಹಣಕಾಸು ವರ್ಷದಲ್ಲಿ ಭಾರತ 418 ಕೋಟಿ ಡಾಲರ್( ಅಂದಾಜು 31.4 ಲಕ್ಷ ಕೋಟಿ ರೂ.) ದಾಖಲೆ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಈಗ ಗೋಧಿ ರಫ್ತಿನಿಂದಾಗಿ ರೈತರಿಗೂ ಅನುಕೂಲಕರವಾಗಲಿದೆ.
ಭಾರತದಿಂದ ಆಹಾರ ಉತ್ಪನ್ನಗಳು ರಫ್ತು ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ಆಹಾರ ಪರೀಕ್ಷೆ ಮಾಡುವ ಲ್ಯಾಬ್‌ಗಳ ಗುಣಮಟ್ಟವನ್ನು ಹೆಚ್ಚಿಸುತ್ತಿದೆ. ರೈಲ್ವೇ ಮತ್ತು ವಾಣಿಜ್ಯ ಸಚಿವಾಲಯ ಹೆಚ್ಚುವರಿ ಬೋಗಿಗಳನ್ನು ಸೇರಿಸಿ ವೇಗವಾಗಿ ಸರಕು ಬಂದರು ತಲುಪವಂತೆ ಮಾಡಲು ಈಗ ಕೆಲಸ ಮಾಡುತ್ತಿದೆ. ಗೋಧಿಯನ್ನು ತ್ವರಿತವಾಗಿ ರಫ್ತು ಮಾಡಲು ಬಂದರು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆಹಾರ ಸಚಿವಾಲಯ ಅಧಿಕಾರಿಗಳ ಪ್ರಕಾರ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಭಾರತ ವಾರ್ಷಿಕ 10 ದಶಲಕ್ಷ ಟನ್ ಗೋಧಿ ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಮೋದಿ ಹೇಳಿದ್ದೇನು?
ಗುಜರಾತ್‌ನ ಅದಾಲಾಜ್‌ನಲ್ಲಿರುವ ಅನ್ನಪೂರ್ಣ ಧಾಮದ ಬಾಲಕರ ವಿದ್ಯಾರ್ಥಿನಿಲಯ ಮತ್ತು ಶೈಕ್ಷಣಿಕ ಕಾಂಪ್ಲೆಕ್ಸ್ ಉದ್ಘಾಟನೆ ಮಾಡಿದ ಭಾಷಣ ಮಾಡಿದ್ದ ಮೋದಿ, ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಿಗೆ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದರು.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಭಾರತ ಸುಮಾರು 80 ಕೋಟಿ ಜನರಿಗೆ 2 ವರ್ಷಗಳ ಕಾಲ ಉಚಿತವಾಗಿ ಆಹಾರ ಧಾನ್ಯ ಪೂರೈಕೆ ಮಾಡಿದೆ. ಇದನ್ನು ನೋಡಿ ಇಡೀ ವಿಶ್ವವೇ ಬೆರಗಾಗಿದೆ. ಈಗ ಉಕ್ರೇನ್-ರಷ್ಯಾ ಯುದ್ಧ ನಡೆಯುತ್ತಿರುವುದರಿಂದ ಜಗತ್ತು ಆಹಾರದ ಅಭಾವವನ್ನು ಎದುರಿಸುತ್ತಿದೆ. ಹಾಗಾಗಿ ವಿಶ್ವ ವ್ಯಾಪಾರ ಸಂಸ್ಥೆ ಅನುಮತಿ ನೀಡಿದರೆ ಇಡೀ ವಿಶ್ವಕ್ಕೆ ಆಹಾರ ಪೂರೈಕೆ ಮಾಡಲು ಭಾರತ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಜೊತೆಗಿನ ಮಾತುಕತೆಯ ವೇಳೆ ತಿಳಿಸಿದ್ದೇನೆ ಎಂದು ಹೇಳಿದ್ದರು.
ಲಂಡನ್: ಯುದ್ಧದ ನಡುವೆ ರಷ್ಯಾ ಸೈನಿಕರು ಉಕ್ರೇನ್‌ನ ಮಹಿಳೆಯರೊಂದಿಗೆ ಅತ್ಯಾಚಾರಿಗಳಿಗಿಂತಲೂ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಉಕ್ರೇನ್ ಮಹಿಳೆಯರು ಹಾಗೂ ಯುವತಿಯರು ನರಕ ಅನುಭವಿಸುವಂತಾಗಿದೆ.
ಯಾವುದೇ ಯುದ್ಧಗಳು ನಡೆದಾಗ ಸಂತ್ರಸ್ತ ರಾಷ್ಟ್ರದ ಹೆಣ್ಣುಮಕ್ಕಳನ್ನು ಭೋಗದ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇಂತಹದ್ದೇ ಅಮಾನವೀಯ ಘಟನೆಗೆ ಉಕ್ರೇನ್ ಸಾಕ್ಷಿಯಾಗಿದೆ. ಯುವತಿಯರೂ, ಬಾಲಕಿಯರನ್ನೂ 25 ದಿನಗಳ ಕಾಲ ಬೇಸ್ಮೆಂಟ್‌ನಲ್ಲಿ ಇಟ್ಟುಕೊಂಡಿದ್ದ ರಷ್ಯಾ ಸೈನಿಕರು, ನಿರಂತರ ಅತ್ಯಾಚಾರ ಎಸಗಿದ್ದಾರೆ. ಇಂಥದ್ದೊಂದು ಬೆಚ್ಚಿ ಬೀಳಿಸುವ ಸಂಗತಿ ಉಕ್ರೇನ್‌ನಿಂದ ಹೊರಬಿದ್ದಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಭೀಕರ ಚಂಡಮಾರುತಕ್ಕೆ 58 ಮಂದಿ ಸಾವು – ಫಿಲಿಪೈನ್ಸ್‌ನಲ್ಲಿ ಬಿಡುವಿಲ್ಲದೇ ನಡೀತಿದೆ ಕಾರ್ಯಾಚರಣೆ
ಬುಚಾ ನಗರದ ಮನೆಯೊಂದರ ನೆಲಮಾಳಿಗೆಯಲ್ಲಿ ರಷ್ಯಾದ ಸೈನಿಕರು ಉಕ್ರೇನ್‌ನ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇದರಲ್ಲಿ 14 ರಿಂದ 24 ವರ್ಷ ವಯಸ್ಸಿನ ಸುಮಾರು 25 ಮಂದಿ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಅತ್ಯಂತ ಕ್ರೂರವಾಗಿ ನಡೆದುಕೊಂಡಿರುವ ರಷ್ಯಾದ ಸೈನಿಕರು ಮುಂದೆ ಯಾವುದೇ ಪುರುಷನೊಂದಿಗೆ ಅವರು ಲೈಂಗಿಕ ಸಂಪರ್ಕ ಬೆಳೆಸಲು ಸಾಧ್ಯವಾಗದ ಮಟ್ಟಿಗೆ ಅತ್ಯಾಚಾರ ನಡೆಸಿದ್ದಾರೆ. ಆದರೆ, ಮಹಿಳೆಯರು ತಮಗೆ ಏನಾಯಿತೆಂದು ಹೇಳಲು ಸಿದ್ಧವಿಲ್ಲ. ಅವರಲ್ಲಿ ಹೆಚ್ಚಿನವರಿಗೆ ಮಾನಸಿಕವಾಗಿ ಧೈರ್ಯ ತುಂಬುವವರು ಬೇಕಾಗಿದ್ದಾರೆ. ಅವರು ನಮಗೆ ಸಾಷ್ಟ್ಯನೀಡದೇ ಅಪರಾಧಿಗಳಿಂದು ಗುರುತಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.