Tag: Ukraine

  • ಪುಟಿನ್‌ನೊಂದಿಗೆ ನೇರ ಮಾತುಕತೆಗೆ ನಾನು ಸಿದ್ಧ: ಝೆಲೆನ್ಸ್ಕಿ

    ಪುಟಿನ್‌ನೊಂದಿಗೆ ನೇರ ಮಾತುಕತೆಗೆ ನಾನು ಸಿದ್ಧ: ಝೆಲೆನ್ಸ್ಕಿ

    ಬರ್ನ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಧವಾರ ಯುದ್ಧವನ್ನು ನಿಲ್ಲಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಧ್ಯವರ್ತಿಗಳ ಬದಲು ನೇರವಾಗಿ ಮಾತನಾಡಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.

    ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯ ವೇದಿಕೆಯಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ, ಉಕ್ರೇನ್‌ನ ಎಲ್ಲಾ ಪ್ರದೇಶಗಳು ಯುದ್ಧದ ಪರಿಣಾಮದಿಂದ ಚೇತರಿಸಿಕೊಳ್ಳುವವರೆಗೂ ಹೋರಾಡಲಿದೆ. ಇದು ಮಾತುಕತೆಯ ಮೊದಲ ಹೆಜ್ಜೆಯಾಗಬಹುದು ಎಂದು ಹೇಳಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ 3 ತಿಂಗಳು – ಪುಟ್ಟ ರಾಷ್ಟ್ರ ವಶಕ್ಕೆ ತಿಣುಕಾಟ

    ಇದಕ್ಕೂ ಮೊದಲು ರಷ್ಯಾದೊಂದಿಗೆ ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಸಿ ಯುದ್ಧವನ್ನು ನಿಲ್ಲಿಸುವ ಬಗ್ಗೆ ಚರ್ಚಿಸಲು ಝೆಲೆನ್ಸ್ಕಿ ಮುಂದಾಗಿದ್ದರು. ಆದರೆ ರಷ್ಯಾ ಅಧ್ಯಕ್ಷ ಇದಾವುದಕ್ಕೂ ಬಗ್ಗುವುದಿಲ್ಲ ಎಂಬುದು ಖಾತ್ರಿಯಾಗಿರುವುದರಿಂದ ಉಕ್ರೇನ್ ಅಧ್ಯಕ್ಷ ನೇರ ಮಾತುಕತೆ ನಡೆಸಲು ಸಿದ್ದರಿದ್ದಾರೆ ಎಂದಿದ್ದಾರೆ.

    ಕಳೆದ ವಾರ ಝೆಲೆನ್ಸ್ಕಿ ರಾಜತಾಂತ್ರಿಕತೆ ಇಲ್ಲದೇ ಯುದ್ಧವನ್ನು ನಿಲ್ಲಿಸುವುದು ಅಸಾಧ್ಯ ಎಂದು ತಿಳಿಸಿದ್ದರು. ಉಕ್ರೇನ್‌ನ 2ನೇ ಮುಖ್ಯ ನಗರವಾದ ಖಾರ್ಕೀವ್‌ನಲ್ಲಿ ನಮ್ಮ ಪಡೆ ರಷ್ಯಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದೆ. ಆದರೆ ಡಾನ್ಬಾಸ್ ನಗರದಲ್ಲಿ ರಕ್ತಸಿಕ್ತ ಪರಿಸ್ಥಿತಿ ಉಂಟಾಗಿದೆ. ಅಲ್ಲಿ ನಮ್ಮ ಹಲವು ನಾಗರಿಕರನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದಾವೋಸ್‌ನಲ್ಲೂ ಆಪರೇಷನ್ ಕಮಲದ ಸದ್ದು- ಸಿಎಂಗೆ ನೀವು ಸ್ಟೇಬಲ್ ಇದ್ದೀರಾ ಎಂದ ಮಿತ್ತಲ್

    ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿ 3 ತಿಂಗಳು ಕಳೆದಿದೆ. ಜಗತ್ತಿನ 2ನೇ ಅತೀ ದೊಡ್ಡ ರಾಷ್ಟ್ರ ಪುಟ್ಟ ಉಕ್ರೇನ್ ಅನ್ನು ಇನ್ನೂ ಕೂಡಾ ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ದಾಳಿ ನಡೆಸಿ ಅಪಾರ ಸಾವು-ನೋವು ಮಾಡಿದೆ ಬಿಟ್ಟರೆ, ಸಣ್ಣ ಪುಟ್ಟ ಗೆಲುವು ಸಾಧಿಸಿದೆ.

  • ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ 3 ತಿಂಗಳು – ಪುಟ್ಟ ರಾಷ್ಟ್ರ ವಶಕ್ಕೆ ತಿಣುಕಾಟ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ 3 ತಿಂಗಳು – ಪುಟ್ಟ ರಾಷ್ಟ್ರ ವಶಕ್ಕೆ ತಿಣುಕಾಟ

    ಕೀವ್: ಜಗತ್ತಿನ 2ನೇ ಅತಿದೊಡ್ಡ ರಾಷ್ಟ್ರ ರಷ್ಯಾ, ಪುಟ್ಟ ಉಕ್ರೇನ್ ಮೇಲೆ ದಾಳಿ ನಡೆಸಿ ಇಂದಿಗೆ 3 ತಿಂಗಳಾಗಿದೆ. ಇನ್ನೂ ಕೂಡ ಉಕ್ರೇನ್ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.

    ಉಕ್ರೇನ್‍ನ ಪ್ರಬಲ ಪೈಪೋಟಿಯಿಂದಾಗಿ ಇನ್ನೂ ಕೂಡ ವಶಕ್ಕೆ ಪಡೆಯಲು ರಷ್ಯಾ ತಿಣುಕಾಡುತ್ತಿದೆ. ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾ ದಾಳಿ ನಡೆಸಿ, ಅಪಾರ ಸಾವು-ನೋವು ಮಾಡಿದ್ದನ್ನು ಬಿಟ್ಟರೆ ಸಣ್ಣಪುಟ್ಟ ಗೆಲವು ಸಾಧಿಸಿದೆ.  ಇದನ್ನೂ ಓದಿ: ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ- ಕಾರ್ತಿ ಚಿದಂಬರಂಗೆ ಸಿಬಿಐ ಸಮನ್ಸ್

    ಪಾಶ್ಚಿಮಾತ್ಯ ರಾಷ್ಟ್ರಗಳು ಕೊಟ್ಟ ಬೆಂಬಲದಿಂದಾಗಿ, ರಷ್ಯಾ ಪಡೆಯನ್ನು ಉಕ್ರೇನ್ ಸಮರ್ಥವಾಗಿ ಎದುರಿಸುತ್ತಿದೆ. ಮರಿಯುಪೋಲ್ ನಗರ ಮಾತ್ರ ರಷ್ಯಾದ ಕೈವಶವಾಗಿದ್ದು, ಕಳೆದ ತಿಂಗಳು ಕೀವ್ ಹಾಗೂ ಸುತ್ತಮುತ್ತಲ ನಗರದಿಂದ ತನ್ನ ಸೇನೆಯನ್ನು ರಷ್ಯಾ ವಾಪಸ್ ಕರೆಸಿಕೊಂಡಿದೆ. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ

  • ಉಕ್ರೇನ್‌ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ

    ಉಕ್ರೇನ್‌ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ

    ಕೀವ್: ಉಕ್ರೇನ್‌ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಉಕ್ರೇನ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಫೆ.24ರಿಂದ ರಷ್ಯಾದ ಆಕ್ರಮಣದಿಂದ ಉಂಟಾದ ಮೊದಲ ಯುದ್ಧಾಪರಾಧಗಳ ವಿಚಾರಣೆಯಲ್ಲಿ ನಿರಾಯುಧ ನಾಗರಿಕನನ್ನು ಕೊಂದ ರಷ್ಯಾದ ಸೈನಿಕನಿಗೆ ಉಕ್ರೇನಿಯನ್ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿತು. ಇದನ್ನೂ ಓದಿ: ಸ್ಫೋಟಕ ಆಡಿಯೋ ಲೀಕ್ – ತೈವಾನ್ ಮೇಲೆ ಆಕ್ರಮಣಕ್ಕೆ ಚೀನಾ ಯೋಜನೆ

    21 ವರ್ಷ ವಯಸ್ಸಿನ ಕಮಾಂಡರ್ ವಾಡಿಮ್ ಶಿಶಿಮರಿನ್, ಫೆ.28 ರಂದು ಈಶಾನ್ಯ ಉಕ್ರೇನಿಯನ್ ಗ್ರಾಮ ಚುಪಾಖಿವ್ಕಾದಲ್ಲಿ 62 ವರ್ಷದ ವ್ಯಕ್ತಿಗೆ ಗುಂಡು ಹಾರಿಸಿ ಕೊಂದ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    Ukraine Russia
    ಸಾಂದರ್ಭಿಕ ಚಿತ್ರ

    ಫೆ.24ರಂದು ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಿಸಿತು. ರಷ್ಯಾದ ಆಕ್ರಮಣ ಮುಂದುವರಿದಿದ್ದು, ಈಗಾಗಲೇ ಉಕ್ರೇನ್‌ನ ಮರಿಯುಪೋಲ್‌ನ್ನು ಸಂಪೂರ್ಣ ವಶಕ್ಕೆ ಪಡೆದಿದೆ. ಈ ಭಾಗದಲ್ಲಿ ಉಕ್ರೇನ್‌ ಸೈನಿಕರು ರಷ್ಯಾ ಸೈನಿಕರಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ

  • ರಾಜತಾಂತ್ರಿಕತೆಯಿಂದ ಮಾತ್ರ ಯುದ್ಧ ನಿಲ್ಲಿಸಲು ಸಾಧ್ಯ: ಝೆಲೆನ್ಸ್ಕಿ

    ರಾಜತಾಂತ್ರಿಕತೆಯಿಂದ ಮಾತ್ರ ಯುದ್ಧ ನಿಲ್ಲಿಸಲು ಸಾಧ್ಯ: ಝೆಲೆನ್ಸ್ಕಿ

    ಕೀವ್: ರಾಜತಾಂತ್ರಿಕತೆಯಿಂದ ಮಾತ್ರ ರಷ್ಯಾ – ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

    ಉಕ್ರೇನ್‍ಗೆ ಭೇಟಿ ನೀಡುತ್ತಿರುವ ಪೋರ್ಚುಗೀಸ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಸಂಪೂರ್ಣ ಮಿಲಿಟರಿ ವಿಜಯಕ್ಕಿಂತ ರಾಜತಾಂತ್ರಿಕ ಪ್ರಗತಿಯಿಂದ ಮಾತ್ರ ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಹೇಳಿದ್ದಾರೆ.

    Russia-UkraineWar

    ಯುದ್ಧವು ರಕ್ತಮಯವಾಗಿರುತ್ತದೆ, ಹೋರಾಟ ಇರುತ್ತದೆ. ಆದರೆ ರಾಜತಾಂತ್ರಿಕತೆಯ ಮೂಲಕ ಮಾತ್ರ ಯುದ್ಧವನ್ನು ಕೊನೆಗೊಳಿಸಬಹುದು. ಉಕ್ರೇನ್ ಮತ್ತು ರಷ್ಯಾ ನಡುವಿನ ಚರ್ಚೆಗಳು ನಿರ್ಣಾಯಕವಾಗಿ ನಡೆಯುತ್ತವೆ. ಅದು ಯಾವ ಸ್ವರೂಪದಲ್ಲಿ ನನಗೆ ಗೊತ್ತಿಲ್ಲ. ಆದರೆ ಫಲಿತಾಂಶವು ಉಕ್ರೇನ್‍ಗೆ “ನ್ಯಾಯಯುತ” ಎಂದು ಝೆಲೆನ್ಸ್ಕಿ ಭರವಸೆ ನೀಡಿದರು. ಇದನ್ನೂ ಓದಿ: ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗ, ಬಿಜೆಪಿಯಿಂದ ಸ್ಪರ್ಧಿಸಿದ ಗಂಡ-ಹೆಂಡತಿ ಜಯಭೇರಿ

    ಫಿನ್‍ಲ್ಯಾಂಡ್ ನ್ಯಾಟೋ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಂತೆ ರಷ್ಯಾ ನೈಸರ್ಗಿಕ ಅನಿಲ ಸರಬರಾಜನ್ನು ನಿಷೇಧಿಸಿದೆ. ಜೊತೆಗೆ 963 ಅಮೆರಿಕವನ್ನು ರಷ್ಯಾ ಪ್ರವೇಶಿಸದಂತೆ ನಿಷೇಧಿಸಿದೆ. ಈ ಯುದ್ಧದಿಂದಾಗಿ 64 ಲಕ್ಷ ಉಕ್ರೇನಿಯನ್ನರು ದೇಶದಿಂದ ಪಲಾಯನ ಮಾಡಿದ್ದಾರೆ. ಹಾಗಾಗಿ ಈ ಯುದ್ಧವನ್ನು ಬಗೆಹರಿಸಲು ರಾಜತಾಂತ್ರಿಕತೆಯೊಂದೆ ಪರಿಹಾರ ಎಂದು ರಷ್ಯಾ ಅಧ್ಯಕ್ಷ ವೊಲೋಡಿಮಿರ್ ಝಲೆನ್ಸ್ಕಿ ಹೇಳಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

    ಈಗಾಗಲೇ ಮಾರಿಯುಪೋಲ್ ಉಕ್ಕಿನ ಸ್ಥಾವರದಿಂದ ಸುಮಾರು 2,500 ಉಕ್ರೇನಿಯನ್ ಸೈನಿಕರನ್ನು ಸೆರೆಹಿಡಿಯಲಾಗಿದೆ. 20,000 ಕ್ಕೂ ಹೆಚ್ಚು ಉಕ್ರೇನಿಯನ್ ಪ್ರಜೆಗಳು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.

    ಸುಮಾರು ಎರಡೂವರೆ ವರ್ಷಗಳ ನಂತರ, ಸ್ವಿಸ್ ಸ್ಕೀ ರೆಸಾರ್ಟ್ ಪಟ್ಟಣವಾದ ದಾವೋಸ್ ಮತ್ತೊಮ್ಮೆ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯನ್ನು ಆಯೋಜಿಸಲು ಸಿದ್ಧವಾಗಿದೆ. ಭಾರತ ಸೇರಿದಂತೆ ಹಲವಾರು ಜಾಗತಿಕ ನಾಯಕರು ಉಕ್ರೇನ್ ಕುರಿತು ಚರ್ಚಿಸುವ ನಿರೀಕ್ಷೆಯಿದೆ.

  • ಮರಿಯುಪೋಲ್ ನಗರವನ್ನು ಸಂಪೂರ್ಣ ಸ್ವಾಧೀನಪಡಿಸಿಕೊಂಡ ರಷ್ಯಾ

    ಮರಿಯುಪೋಲ್ ನಗರವನ್ನು ಸಂಪೂರ್ಣ ಸ್ವಾಧೀನಪಡಿಸಿಕೊಂಡ ರಷ್ಯಾ

    ಕೀವ್: ಉಕ್ರೇನ್‌ನೊಂದಿಗಿನ ಯುದ್ಧದಲ್ಲಿ ರಷ್ಯಾ ಇದೀಗ ಒಂದು ಮಹತ್ವದ ಗೆಲುವು ಸಾಧಿಸಿದೆ. ಉಕ್ರೇನ್‌ನ ಪ್ರಮುಖ ನಗರಗಳಲ್ಲಿ ಒಂದಾದ ಮರಿಯುಪೋಲ್ ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡಿರುವುದಾಗಿ ರಷ್ಯಾ ಶುಕ್ರವಾರ ತಿಳಿಸಿದೆ.

    ರಷ್ಯಾದ ರಕ್ಷಣಾ ಸಚಿವ ಸರ್ಗೇಯ್ ಶೋಯಿಗು ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಉಕ್ರೇನ್‌ನ ಭದ್ರಕೋಟೆಯಾದ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರವಿರುವ ಮರಿಯುಪೋಲ್ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿರುವ ಬಗ್ಗೆ ತಿಳಿಸಿರುವುದಾಗಿ ವಕ್ತಾರ ಇಗೊರ್ ಕೊನಶೆಂಕೋವ್ ಹೇಳಿದ್ದಾರೆ. ಆದರೆ ಈ ಬಗ್ಗೆ ಉಕ್ರೇನ್ ಯಾವುದೇ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಯಮುನೋತ್ರಿ ದೇವಸ್ಥಾನದ ಹೆದ್ದಾರಿಯಲ್ಲಿ ಗೋಡೆ ಕುಸಿತ – 10 ಸಾವಿರ ಮಂದಿ ಸಂಕಷ್ಟದಲ್ಲಿ

    ಮರಿಯುಪೋಲ್ ಉಕ್ಕಿನ ಕಾರ್ಖಾನೆಯಲ್ಲಿದ್ದ ಒಟ್ಟು 2,439 ಉಕ್ರೇನ್ ಹೋರಾಟಗಾರರು ಸೋಮವಾರ ಶರಣಾಗಿರುವುದಾಗಿ ರಷ್ಯಾ ಸುದ್ದಿ ಸಂಸ್ಥೆ ತಿಳಿಸಿತ್ತು. ಶರಣಾದ ಉಕ್ರೇನ್ ಹೋರಾಟಗಾರರನ್ನು ರಷ್ಯಾ ಸೆರೆಯಾಳಾಗಿ ತೆಗೆದುಕೊಂಡರೆ, ಕೆಲವರನ್ನು ರಷ್ಯಾಗೆ ಕರೆದೊಯ್ಯಲಾಗಿದೆ. ಇನ್ನೂ ಕೆಲವರನ್ನು ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಉಪತಳಿ BA-4 2ನೇ ಪ್ರಕರಣ ತಮಿಳುನಾಡಿನಲ್ಲಿ ಪತ್ತೆ

    ಫೆಬ್ರವರಿ 24ರಂದು ಯುದ್ಧವನ್ನು ಸಾರಿದ ರಷ್ಯಾಗೆ ಉಕ್ರೇನ್‌ನ ಮರಿಯುಪೋಲ್‌ನ ಸ್ವಾಧೀನ ಒಂದು ಮುಖ್ಯವಾದ ವಿಜಯವಾಗಿದೆ. ಆದರೆ ರಷ್ಯಾ ಉಕ್ರೇನ್ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ಇಲ್ಲಿ ವರೆಗೂ ಸಾಧ್ಯವಾಗಿಲ್ಲ.

  • ನಮ್ಮ ಮೇಲೆ ಅತ್ಯಾಚಾರ ನಿಲ್ಲಿಸಿ – ಕಾನ್ ಚಿತ್ರೋತ್ಸವದಲ್ಲಿ ಬೆತ್ತಲಾದ ಉಕ್ರೇನ್ ಮಹಿಳೆ

    ನಮ್ಮ ಮೇಲೆ ಅತ್ಯಾಚಾರ ನಿಲ್ಲಿಸಿ – ಕಾನ್ ಚಿತ್ರೋತ್ಸವದಲ್ಲಿ ಬೆತ್ತಲಾದ ಉಕ್ರೇನ್ ಮಹಿಳೆ

    ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉಕ್ರೇನಿಯಲ್ ಹೋರಾಟಗಾರ್ತಿ ಬಟ್ಟೆಯನ್ನು ಕಿತ್ತೆಸೆದು ಸೆಲೆಬ್ರಿಟಿ ಮತ್ತು ಜನರ ನಡುವೆ ಬೆತ್ತಲಾಗಿ ನಮ್ಮ ಮೇಲೆ ದೌರ್ಜನ್ಯ ನಿಲ್ಲಿಸಿ ಎಂದು ಪ್ರತಿಭಟಿಸಿದ್ದಾಳೆ.

    ಉಕ್ರೇನಿ ಮಹಿಳೆ ಕಾನ್ ಚಿತ್ರೋತ್ಸವದಲ್ಲಿ ತನ್ನ ದೇಹದ ಮೇಲೆ ಉಕ್ರೇನ್ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಸಂದೇಶವನ್ನು ಬರೆದುಕೊಂಡು ಬಂದಿದ್ದಾಳೆ. ಈ ವೇಳೆ ಎಲ್ಲರೂ ಚಿತ್ರೋತ್ಸವಕ್ಕೆ ಬರುತ್ತಿರುವುದನ್ನು ಗಮನಿಸಿ ತನ್ನ ಮೈ ಮೇಲಿದ್ದ ಬಟ್ಟೆಯನ್ನು ಬಿಚ್ಚಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ’ ಎಂದು ಕಿರುಚುತ್ತ ಓಡಾಡಿದ್ದಾಳೆ.

    ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ನಾಲ್ಕನೇ ದಿನದಂದು ಜಾರ್ಜ್ ಮಿಲ್ಲರ್ ಅವರ ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್‍ನ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಉಕ್ರೇನಿಯನ್ ಮಹಿಳೆ ಈ ರೀತಿ ಪ್ರತಿಭಟನೆ ಮಾಡಿದ್ದಾಳೆ. ಈ ಮಹಿಳೆಯೂ ರೆಡ್ ಕಾರ್ಪೆಟ್ ಸಂದರ್ಭದಲ್ಲಿ ಬಟ್ಟೆ ಕಿತ್ತೆಸೆದು ಬೆತ್ತಲಾಗಿದ್ದಾಳೆ. ಈ ವೇಳೆ ಎಲ್ಲರಿಗೂ ಕೇಳಿಸುವಂತೆ ಕೂಗಾಡಲು ಪ್ರಾರಂಭಿಸಿದ್ದಾಳೆ. ಇದನ್ನೂ ಓದಿ:  ಅಕ್ರಮ ಗಣಿ ಮಾಫಿಯಾಗೆ ಮಂಡ್ಯ ವ್ಯಕ್ತಿ ಬಲಿ – ಹೊಳೆನರಸೀಪುರ ಅರಣ್ಯದಲ್ಲಿ ಹೂತು ಹಾಕಿದ್ರಾ ಶವ? 

    ಸಂದೇಶಗಳೇನು?
    ಮಹಿಳೆಯೂ ಆಕೆಯ ಎದೆಯ ಮೇಲೆ ಉಕ್ರೇನ್ ಧ್ವಜದ ನೀಲಿ ಮತ್ತು ಹಳದಿ ಬಣ್ಣದಲ್ಲಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾಳೆ. ಕಾಲು ಮತ್ತು ತೊಡೆಯಲ್ಲಿ ಕೆಂಪು ಬಣ್ಣದಲ್ಲಿ ಚಿತ್ರೀಸಿಕೊಂಡಿದ್ದಾಳೆ. ಮಹಿಳೆ ಕೂಗಾಡಲು ಪ್ರಾರಂಭ ಮಾಡುತ್ತಿದ್ದಂತೆ ಸೆಕ್ಯುರಿಟಿ ಗಾರ್ಡ್‍ಗಳು ಆಕೆಯನ್ನು ಸುತ್ತಿಕೊಂಡು ರೆಡ್ ಕಾರ್ಪೆಟ್‍ನಿಂದ ಕೆಳಗೆ ಇಳಿಸಿದ್ದಾರೆ.

    ಈ ವರ್ಷದ ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್-ರಷ್ಯಾ ಯುದ್ಧ ಎಲ್ಲರ ಗಮನ ಸೆಳೆದಿದೆ. ಈ ಕಾರ್ಯಕ್ರಮದಲ್ಲಿ ಉಕ್ರೇನ್ ನಿರ್ಮಾಪಕರು ಹಲವು ಉಕ್ರೇನ್ ಸಿನಿಮಾವನ್ನು ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದಿದ್ದರು.

  • ಫೈಟರ್ ಜೆಟ್ ಖರೀದಿಸಲು ಉಕ್ರೇನ್‌ಗೆ ಸಹಾಯ ಮಾಡಿದ ಪಾಕಿಸ್ತಾನದ ಶ್ರೀಮಂತ

    ಫೈಟರ್ ಜೆಟ್ ಖರೀದಿಸಲು ಉಕ್ರೇನ್‌ಗೆ ಸಹಾಯ ಮಾಡಿದ ಪಾಕಿಸ್ತಾನದ ಶ್ರೀಮಂತ

    ಕೀವ್: ಪಾಕಿಸ್ತಾನದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬ ಹಾಗೂ ಕೀವ್ ಪೋಸ್ಟ್ ಪತ್ರಿಕೆಯ ಮಾಜಿ ಮಾಲೀಕ ಮೊಹಮ್ಮದ್ ಜಹೂರ್ ಉಕ್ರೇನ್ ಮೇಲೆ ರಷ್ಯಾ ದಾಳಿಯ ಹಿನ್ನೆಲೆ ಉಕ್ರೇನ್‌ಗೆ ಸಹಾಯ ಮಾಡಲು ಫೈಟರ್ ಜೆಟ್‌ಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

    ಜಹೂರ್ ಪತ್ನಿ ಉಕ್ರೇನ್‌ನ ಗಾಯಕಿ ಕಮಲಿಯಾ ಜಹೂರ್, ತಮ್ಮ ಪತಿ ಹಾಗೂ ಇತರ ಶ್ರೀಮಂತ ಸ್ನೇಹಿತರು ಯುದ್ಧದಲ್ಲಿ ಉಕ್ರೇನ್‌ಗೆ ಸದ್ದಿಲ್ಲದೇ ಸಹಾಯ ಮಾಡಿದ್ದಾರೆ. ಉಕ್ರೇನ್‌ನ ವಾಯುಪಡೆಗೆ 2 ಜೆಟ್‌ಗಳನ್ನು ಖರೀದಿಸಲು ತನ್ನ ಪತಿ ಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ತೀರ್ಪಿನಿಂದ ನಮ್ಮ ನ್ಯಾಯಾಂಗದ ಮೌಲ್ಯ, ವ್ಯವಸ್ಥೆ, ನೈತಿಕತೆಯನ್ನು ಬಲಪಡಿಸಿದೆ: ರತನ್ ಟಾಟಾ

    ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ ವಾಸವಿದ್ದ ಹಾಗೂ ಉಕ್ರೇನಿಯನ್ ಪತ್ರಿಕೆ ಕೀವ್ ಪೋಸ್ಟ್‌ನ ಮಾಜಿ ಮಾಲೀಕರಾಗಿದ್ದ ಜಹೂರ್, ಉಕ್ರೇನ್ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಕೆಲಸ ಮಾಡಿದ್ದಾರೆ. ಉಕ್ರೇನ್ ನಿರಾಶ್ರಿತರನ್ನು ಬ್ರಿಟನ್ ಹಾಗೂ ಯುರೋಪ್‌ಗೆ ಸ್ಥಳಾಂತರಿಸಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯ ಧ್ವಂಸ ಮಾಡಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ: ಅಮಿತ್ ಶಾ

    ಜಹೂರ್ ಉಕ್ರೇನಿಯನ್ನರಿಗೆ ಸುರಕ್ಷಿತ ಮಾರ್ಗಗಳನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರದ ಮುಖ್ಯಸ್ಥರು ಹಾಗೂ ಇತರ ಪ್ರಭಾವಿ ವ್ಯಕ್ತಿಗಳನ್ನು ಇಂದಿಗೂ ಭೇಟಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

  • ಭಾರತಕ್ಕೆ 500 ದಶಲಕ್ಷ ಡಾಲರ್ ಮಿಲಿಟರಿ ನೆರವು ನೀಡಲು ಮುಂದಾದ ಅಮೆರಿಕ

    ಭಾರತಕ್ಕೆ 500 ದಶಲಕ್ಷ ಡಾಲರ್ ಮಿಲಿಟರಿ ನೆರವು ನೀಡಲು ಮುಂದಾದ ಅಮೆರಿಕ

    ವಾಷಿಂಗ್ಟನ್: ರಷ್ಯಾದ ಮೇಲಿನ ಶಸ್ತ್ರಾಸ್ತ ಅವಲಂಬನೆಯನ್ನು ಕಡಿತಗೊಳಿಸಲು ಅಮೆರಿಕವು ಭಾರತಕ್ಕಾಗಿ ಬೃಹತ್ ಮಿಲಿಟರಿ ಪ್ಯಾಕೇಜ್ ನೀಡಲು ಮುಂದಾಗುತ್ತಿದೆ.

    ಭಾರತವು ರಷ್ಯಾದ ಮೇಲಿನ ಶಸ್ತ್ರಾಸ್ತಗಳ ಅವಲಂಬನೆಯನ್ನು ಕಡಿಮೆಗೊಳಿಸಲು ಜೊತೆಗೆ ಅಮೆರಿಕ-ಭಾರತದ ನಡುವಿನ ಮಿಲಿಟರಿ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಅಮೆರಿಕ 500 ಮಿಲಿಯನ್ ಡಾಲರ್‌ಗಳ (ಸುಮಾರು 3,800 ಕೋಟಿ ರೂ.) ಬೃಹತ್ ಮೊತ್ತದ ಪ್ಯಾಕೇಜ್ ಅನ್ನು ಸಿದ್ಧಪಡಿಸಿಕೊಂಡಿದೆ ಎಂದು ಅಮೆರಿಕ ಮೂಲಗಳು ತಿಳಿಸಿವೆ. ಇದನ್ನೂ ಓದಿ: 132 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ ಉದ್ದೇಶಪೂರ್ವಕ – ಅಮೆರಿಕ ವರದಿ ಹೇಳಿದ್ದೇನು?

    Military (1)

    ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಸಂಸ್ಥೆಯ ಪ್ರಕಾರ ಕಳೆದ ದಶಕದಲ್ಲಿ ಭಾರತವು ಯುಎಸ್‌ನಿಂದ 4 ಶತಕೋಟಿ ಡಾಲರ್ (ಅಂದಾಜು 3 ಸಾವಿರ ಕೋಟಿ) ಹಾಗೂ ರಷ್ಯಾದಿಂದ 25 ಶತಕೋಟಿ ಡಾಲರ್ (ಅಂದಾಜು 19 ಸಾವಿರ ಕೋಟಿ) ಗಿಂತ ಹೆಚ್ಚಿನ ಮೌಲ್ಯದ ಮಿಲಿಟರಿ ಉಪಕರಣಗಳನ್ನು ಖರೀದಿಸಿದೆ.

    ಸದ್ಯ ಅಮೆರಿಕದಿಂದ ಮೆಗಾ ಆಫರ್ ಸಿದ್ಧವಾಗುತ್ತಿದೆ. ಆದರೆ ಭಾರತದ ವಿದೇಶಾಂಗ ಸಚಿವಾಲಯ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮರಿಯುಪೋಲ್‍ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೈನಿಕರು

    ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತವು ಭಾರತವನ್ನು ದೀರ್ಘಾವಧಿಯ ಭದ್ರತಾ ಪಾಲುದಾರರಾಗಿ ಮಾಡಿಕೊಳ್ಳಲು ಈ ಉಪಕ್ರಮ ರೂಪಿಸಿದೆ. ವಾಷಿಂಗ್ಟನ್ ಭಾರತವನ್ನು ವಿಶ್ವಾಸ ಪಾಲುದಾರನಾಗಿ ಕಾಣಲು ಬಯಸುತ್ತದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಅಗತ್ಯ ಸಾಧನಗಳನ್ನು ಸರಬರಾಜು ಮಾಡಲಿದೆ. ಇದನ್ನು ಖಚಿತಪಡಿಸಿಕೊಳ್ಳಲು ಅಮೆರಿಕ ಮುಂದಾಗಿದೆ ಎಂದು ಯುಎಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಫೈಟರ್ ಜೆಟ್‌ಗಳು, ನೌಕಾಪಡೆಯ ಹಡಗುಗಳು ಮತ್ತು ಯುದ್ಧ ಟ್ಯಾಂಕರ್‌ಗಳಂತಹ ಪ್ರಮುಖ ಶಸ್ತ್ರಾಸ್ತಗಳನ್ನು ಭಾರತಕ್ಕೆ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

  • ಮರಿಯುಪೋಲ್‍ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೈನಿಕರು

    ಮರಿಯುಪೋಲ್‍ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೈನಿಕರು

    ಕೀವ್: ಫೆಬ್ರವರಿ 20ರಿಂದ ರಷ್ಯಾ, ಉಕ್ರೇನ್ ಮೇಲೆ ನಿರಂತರವಾಗಿ ಯುದ್ಧ ಮಾಡುತ್ತಿದೆ. ಈಗ ಮರಿಯುಪೋಲ್‍ ಉಕ್ರೇನ್ ಸೈನಿಕರು ರಷ್ಯಾಗೆ ಶರಣಾಗಿದೆ.

    ಮರಿಯುಪೋಲ್‍ನ ಅಜೋವ್‍ಸ್ಟಾಲ್ ಸ್ಟೀಲ್‌ವರ್ಕ್ಸ್ ನಲ್ಲಿ ರಷ್ಯಾದ ಪಡೆಗಳಿಗೆ 250ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಶರಣಾಗಿದ್ದಾರೆ. ಈ ಹಿನ್ನೆಲೆ ಶರಣಾದ ಉಕ್ರೇನ್ ಸೈನಿಕರ ವಿಶೇಷ ಕಾಳಜಿ ಮಾಡಲು ರಷ್ಯಾ ನಿರ್ಧರಿಸಿದೆ. ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಇಂದು 1 ರಿಂದ 10ನೇ ತರಗತಿವರೆಗೆ ರಜೆ ಘೋಷಣೆ 

    ಕಳೆದ 24 ಗಂಟೆಗಳಲ್ಲಿ 265 ಸೈನಿಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ. ಇದರಲ್ಲಿ 51 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ವೈದ್ಯಕೀಯ ಆರೈಕೆಯ ಅಗತ್ಯವಿರುವವರನ್ನು ನೊವೊಜೊವ್ಸ್ಕ್ ಪಟ್ಟಣದ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    Ukrainian forces hold out in key port of Mariupol as Russia calls for surrender | PBS NewsHour

    ಉಕ್ರೇನ್ ಸೈನಿಕರನ್ನು ಯುದ್ಧಾಪರಾಧಿಗಳು ಅಥವಾ ಯುದ್ಧ ಖೈದಿಗಳು ಎಂದು ಪರಿಗಣಿಸಲಾಗುವುದೇ ಎಂದು ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಕ್ತಾರರು ಉತ್ತರವನ್ನು ನೀಡಲಿಲ್ಲ. ಆದರೆ, ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ಶರಣಾದ ಸೈನಿಕರನ್ನು ನೋಡಿಕೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.  ಇದನ್ನೂ ಓದಿ:  ದೇವೇಗೌಡರ ಜನ್ಮದಿನಕ್ಕೆ ಶುಭ ಕೋರಿದ ಮೋದಿ 

  • ಯುದ್ಧಭೂಮಿಯಲ್ಲೂ ನಿಲ್ಲದ ಪ್ರೇಮ – ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಿನ್ ಪ್ರೇಯಸಿ ಮತ್ತೆ ಗರ್ಭಿಣಿ

    ಯುದ್ಧಭೂಮಿಯಲ್ಲೂ ನಿಲ್ಲದ ಪ್ರೇಮ – ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟಿನ್ ಪ್ರೇಯಸಿ ಮತ್ತೆ ಗರ್ಭಿಣಿ

    ಮಾಸ್ಕೋ: ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಅದು ಯಾರಿಗೆ ಯಾವಾಗ ಬೇಕಾದರೂ ಆಗಬಹುದು. ಹಾಗೆಯೇ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ 69 ವರ್ಷದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸತತ ಉಕ್ರೇನ್ ನಡುವಿನ ಯುದ್ಧದ ಬ್ಯೂಸಿಯಲ್ಲೂ ಪ್ರೇಮಕ್ಕೂ ಸೈ ಎಂದಿದ್ದಾರೆ.

    putin daughters

    ತನ್ನ ಪ್ರೇಯಸಿ ಜಿಮ್‌ಪಟು ಅಲಿನಾ ಕಬೀವಾ ಜೊತೆ ಪ್ರತ್ಯಕ್ಷರಾದ ಪುಟಿನ್ ಆಕೆ ಗರ್ಭಿಣಿಯಾಗಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಜಿಮ್ ಪಟು 3ನೇ ಮಗುವಿನ ತಾಯಿಯಾಗುತ್ತಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ದೊರೆಗೆ ಈ ಸುದ್ದಿ ಖುಷಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ಗೆ ಕೊರೊನಾ ಪಾಸಿಟಿವ್‌

    ಈ ದಂಪತಿ ಈಗಾಗಲೇ 2 ಮಕ್ಕಳನ್ನು ಹೊಂದಿದ್ದಾರೆ. ಮುಂದಿನ ಅಕ್ಟೋಬರ್ ತಿಂಗಳಿಗೆ ಪುಟಿನ್‌ಗೆ 70 ವರ್ಷ ಪೂರ್ಣಗೊಳ್ಳಲಿದೆ. ಕ್ಯಾನ್ಸರ್ ಚಿಕಿತ್ಸೆಯಿಂದ ಬಳಲುತ್ತಿರುವ ಪುಟಿನ್‌ಗೆ ಕೆಲ ದಿನಗಳಲ್ಲೇ ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ನಡುವೆ ಅವರು 3ನೇ ಮಗುವಿಗೆ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

    putin

    ಯಾರಿದು ಅಲಿನಾ ಕಬೀವಾ? ಅಲಿನಾ ಯಶಸ್ವಿ ಜಿಮ್ ಪಟು. ಈಕೆ 2 ಬಾರಿ ಒಲಿಂಪಿಕ್ಸ್ ಪದಕ, 14 ವಿಶ್ವಚಾಂಪಿಯನ್ ಹಾಗೂ 21 ಬಾರಿ ಯುರೋಪಿಯನ್ ಚಾಂಪಿಯನ್ ಶಿಪ್ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪುಟಿನ್ ಹಾಗೂ ಅಲಿನಾ ಮೊದಲಿನಿಂದಲೂ ಪ್ರೀತಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಪುಟಿನ್ ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದೀಗ 3ನೇ ಮಗುವಿಗೆ ತಂದೆಯಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ವಿಷಯ ಬಹಿರಂಗಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ

    putin Alina Kabaeva (1)

    1983 ರಲ್ಲಿ ಲ್ಯುಡ್ಮಿಲಾ ಅಲೆಕ್ಸಾಂಡ್ರೊವ್ನಾ ಒಚೆರೆಟ್ನಾಯಾ ಅವರನ್ನು ವಿವಾಹವಾಗಿದ್ದ ಪುಟಿನ್ 30 ವರ್ಷಗಳ ಕಾಲ ಒಟ್ಟಿಗೆ ಸಂಸಾರ ಮಾಡಿ ನಂತರ ಇಬ್ಬರೂ 2014 ರಲ್ಲಿ ವಿಚ್ಛೇದನ ಪಡೆದರು. ಪುಟಿನ್ ಮತ್ತು ಲ್ಯುಡ್ಮಿಲಾ ಅವರಿಗೆ ಮರಿಯಾ ಪುಟಿನ್ ಮತ್ತು ಕಟೆರಿನಾ ಟಿಖೋನೋವಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪುಟಿನ್‌ನಿಂದ ವಿಚ್ಛೇದನ ಪಡೆದ ಲ್ಯುಡ್ಮಿಲಾ ತನಗಿಂತ 21 ವರ್ಷದ ಕಿರಿಯ ಉದ್ಯಮಿಯನ್ನು ವಿವಾಹವಾಗಿದ್ದರು.