Tag: Ukraine

  • ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ ಭಾವುಕರಾದ ಮೋದಿ

    ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ ಭಾವುಕರಾದ ಮೋದಿ

    ಹಾವೇರಿ: ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ ಕನ್ನಡಿಗ ನವೀನ್ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಸಾಂತ್ವನ ಹೇಳಿದರು.

    ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾವೇಶದ ನಂತರ ಉಕ್ರೇನ್‍ನಲ್ಲಿ ಮೃತಪಟ್ಟಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿಯಾಗಿದ್ದ ನವೀನ್ ಗ್ಯಾನ ಗೌಡರ್ ಅವರ ತಂದೆ ಶೇಖರಪ್ಪ ಗ್ಯಾನಗೌಡರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ಮಾಡಿದರು.

    ಪ್ರಧಾನಿ ಮೋದಿಯವರು ನವೀನ್ ತಂದೆ, ತಾಯಿ ಮತ್ತು ಸಹೋದರ ಜೊತೆಗೆ ನಾಲ್ಕೈದು ನಿಮಿಷಗಳ ಕಾಲ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ನಂತರ ಮೃತ ವಿದ್ಯಾರ್ಥಿ ನವೀನ್ ತಂದೆ ಶೇಖರಗೌಡ ಮಾಹಿತಿ ನೀಡಿದರು. ನಮ್ಮ ಕಣ್ಣೀರು ನೋಡಿ ಪಿಎಂ ನರೇಂದ್ರ ಮೋದಿ ಅವರು ಭಾವುಕರಾದರು. ಮಗನ ಸಾವಿನ ದುಃಖದಲ್ಲೂ ಮಗನ ದೇಹದಾನ ಮಾಡಿದ್ದಕ್ಕೆ ಪಿಎಂ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು ತಿಳಿಸಿದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲ್ಲ: ಗಾಂಧೀಜಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ

    ನವೀನ್ ಮೃತಪಟ್ಟ ನಂತರ ನಿಮ್ಮ ಭೇಟಿಗೆ ಬರಬೇಕಾಗಿತ್ತು. ಆದರೆ ಈಗ ಕಾಲ ಕೂಡಿ ಬಂತು. ನವೀನ್ ಸಹೋದರ ಹರ್ಷ ಕೂಡ ಪ್ರತಿಭಾವಂತ ಇದ್ದಾನೆ. ಉಕ್ರೇನ್‍ನಿಂದ ಬಂದ ಎಂಬಿಬಿಎಸ್ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ವ್ಯವಸ್ಥೆ ಮಾಡುವಂತೆ ಕೇಳಿದೆವು. ಪ್ರಯತ್ನ ಮಾಡುತ್ತೇವೆ ಅಂತಾ ಹೇಳಿದರು. ನಮಗೆ ಧೈರ್ಯವಾಗಿ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಧೈರ್ಯ ತುಂಬಿದರು. ಇದನ್ನೂ ಓದಿ: ಬೆಂಗಳೂರಿನ ಜನರು ಕೈ ಜೋಡಿಸಿದ್ರೆ ಏನೂ ಬೇಕಾದ್ರೂ ಮಾಡಬಹುದು: ಮೋದಿ ಮೆಚ್ಚುಗೆ

    Live Tv

  • ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಕುಟುಂಬವನ್ನು ಭೇಟಿಯಾಗಲಿರುವ ಪ್ರಧಾನಿ

    ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಕುಟುಂಬವನ್ನು ಭೇಟಿಯಾಗಲಿರುವ ಪ್ರಧಾನಿ

    ಹಾವೇರಿ: ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಎಂಬಿಬಿಎಸ್ ವಿದ್ಯಾರ್ಥಿ ಕನ್ನಡಿಗ ನವೀನ್ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದಾರೆ. ಜೂನ್ 20ರಂದು ರಾಜ್ಯಕ್ಕೆ ಭೇಟಿ ನೀಡುವ ವೇಳೆ ಖುದ್ದು ಪ್ರಧಾನಿ ಮೋದಿಯವರು ನವೀನ್ ತಂದೆ, ತಾಯಿ ಮತ್ತು ಸಹೋದರನನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಪ್ರಧಾನಿ ಭೇಟಿ ಸಂಬಂಧ ಪ್ರಧಾನಿ ಕಚೇರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮಾಹಿತಿ ದೊರೆತಿದ್ದು, ನವೀನ್ ತಂದೆ ಮತ್ತು ತಾಯಿ ಈಗಾಗಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

    2022ರ ಮಾರ್ಚ್ 1 ರಂದು ರಾಜ್ಯಕ್ಕೆ ಬರಸಿಡಿಲು ಬಡಿದಂತಾಗಿತ್ತು. ಯಾಕಂದ್ರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ ನವೀನ್ ಗ್ಯಾನಗೌಡರ ಎಂಬಾತ ಮೃತಪಟ್ಟಿದ್ದ. ಮೃತ ನವೀನ್ ಉಕ್ರೇನ್ ನಲ್ಲಿ ಎಂಬಿಬಿಎಸ್ ನಾಲ್ಕನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದ. ನವೀನ್ ಮೃತಪಟ್ಟ ಸುದ್ದಿ ಆತನ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿತ್ತು. ನವೀನ್ ಮೃತಪಟ್ಟ ಸುದ್ದಿ ತಿಳಿದು ಅದೇ ದಿನ ಪ್ರಧಾನಿ ನರೇಂದ್ರ ಮೋದಿಯವರು ಮೃತ ನವೀನ್ ತಂದೆ ಶೇಖರಗೌಡ ಗ್ಯಾನಗೌಡರಗೆ ಕರೆ ಮಾಡಿ ಮಾತನಾಡಿ ಸಾಂತ್ವನ ಹೇಳಿದ್ದರು.

    ನಂತರ ಪ್ರಧಾನಿಯವರಿಗೆ ನವೀನ್ ಕುಟುಂಬವನ್ನು ಭೇಟಿ ಮಾಡಲು ಆಗಿರಲಿಲ್ಲ. ಆದ್ರೆ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬರುತ್ತಿದ್ದಾರೆ. ಮೈಸೂರಿನಲ್ಲಿ ಜೂನ್ 21ರಂದು ನಡೆಯುವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಜೂನ್ 20ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿಯವರು ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ತಂದೆ, ತಾಯಿ ಮತ್ತು ಸಹೋದರನನ್ನು ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮದವರಿಗೆ ನೋಯಿಸುವ ಉದ್ದೇಶವಿಲ್ಲ – ಕ್ಷಮೆಯಾಚಿಸಿದ ಸಾಯಿ ಪಲ್ಲವಿ

    ಪ್ರಧಾನಿಯವರ ಭೇಟಿಗೆ ಪ್ರಧಾನಿಯವರ ಕಚೇರಿಯಿಂದ ಎರಡು ದಿನಗಳ ಹಿಂದೆ ಮೃತ ವಿದ್ಯಾರ್ಥಿ ನವೀನ್ ತಂದೆಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿಯವರ ಕಚೇರಿಯಿಂದ ಮಾಹಿತಿ ಬಂದ ಕೆಲವೇ ನಿಮಿಷಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ನವೀನ್ ತಂದೆಗೆ ಕರೆ ಮಾಡಿ ಮಾತನಾಡಿದ್ದಾರೆ. ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಅವಕಾಶ ಕಲ್ಪಿಸಿದ್ದು, ಭೇಟಿಗೆ ವ್ಯವಸ್ಥೆ ಮಾಡಲಾಗಿದೆ. ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಬರುವಂತೆ ಸಿಎಂ ಹೇಳಿದ್ದಾರೆ ಅಂತಾ ನವೀನ್ ತಂದೆ ಶೇಖರಗೌಡ ಹೇಳಿದ್ದಾರೆ.

    ಪ್ರಧಾನಿಯವರ ಭೇಟಿಗೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷಗೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ರಾತ್ರಿ ನವೀನ್ ತಂದೆ ಶೇಖರಗೌಡ ಮತ್ತು ತಾಯಿ ವಿಜಯಲಕ್ಷ್ಮಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕ ಕೃಷ್ಣಮೂರ್ತಿ ಬೆಳೆಗೆರೆಯವರು ನವೀನ್ ತಂದೆ ಮತ್ತು ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

    ನವೀನ್ ತಂದೆ ಶೇಖರಗೌಡ ಮತ್ತು ವಿಜಯಲಕ್ಷ್ಮೀ ಭಾನುವಾರ ಬೆಳಗ್ಗೆ ಬೆಂಗಳೂರು ತಲುಪಲಿದ್ದಾರೆ. ನವೀನ್ ಸಹೋದರ ಹರ್ಷ ಬೆಂಗಳೂರಿನಲ್ಲಿಯೇ ಇದ್ದು, ಆತನೂ ಬೆಳಗ್ಗೆ ತಂದೆ ತಾಯಿಯ ಜೊತೆಗೂಡಲಿದ್ದಾನೆ. ಸೋಮವಾರ ಮೂವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಮಗ ಮೃತಪಟ್ಟ ದುಃಖದಲ್ಲಿರುವ ನವೀನ್ ತಂದೆ ತಾಯಿ ಮತ್ತು ಅಣ್ಣನಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಸಾಂತ್ವನ ಹೇಳಲಿದ್ದಾರೆ.

    Live Tv

  • ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‍ಗೆ ಹೋಗಿದ್ದ ಇಬ್ಬರು US ಪ್ರಜೆಗಳು ನಾಪತ್ತೆ

    ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‍ಗೆ ಹೋಗಿದ್ದ ಇಬ್ಬರು US ಪ್ರಜೆಗಳು ನಾಪತ್ತೆ

    ವಾಷಿಂಗ್ಟನ್: ರಷ್ಯಾ ಸೈನಿಕರ ವಿರುದ್ಧ ಸ್ವಯಂಸೇವಕ ಹೋರಾಟಗಾರರಾಗಿ ಉಕ್ರೇನ್‍ಗೆ ಹೋಗಿದ್ದ ಇಬ್ಬರು ಯುಎಸ್ ಪ್ರಜೆಗಳು ಒಂದು ವಾರದಿಂದ ನಾಪತ್ತೆಯಾಗಿದ್ದಾರೆ.

    ಅಲಬಾಮಾದ ಟಸ್ಕಲೂಸಾದ ಅಲೆಕ್ಸಾಂಡರ್ ಡ್ರೂಕ್(39) ಮತ್ತು ಅಲಬಾಮಾದ ಹಾಟ್ರ್ಸೆಲ್ಲೆಯ ಆಂಡಿ ಹುಯ್ನ್(27) ನಾಪತ್ತೆಯಾಗಿರುವ ಯುಎಸ್ ಪ್ರಜೆಗಳು. ಇವರಿಬ್ಬರು ಜೂನ್ 8 ರಂದು ತಮ್ಮ ಕುಟುಂಬಗಳೊಂದಿಗೆ ಕೊನೆಯದಾಗಿ ಮಾತನಾಡಿದ್ದು, ಇಲ್ಲಿವರೆಗೂ ಅವರ ಕುರಿತು ಯಾವುದೇ ಅಪ್ಡೇಟ್‍ಗಳು ತಿಳಿದುಬಂದಿಲ್ಲ. ಅಲ್ಲದೇ ಅವರು ಪೂರ್ವ ಉಕ್ರೇನ್‍ನ ಖಾರ್ಕಿವ್ ಪ್ರದೇಶದಿಂದ ಹಿಂತಿರುಗಿಲ್ಲ ಎಂಬುದು ಕುಟುಂಬಗಳಿಗೆ ತಿಳಿದುಬಂದಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂಟಿ ಮಹಿಳೆಯನ್ನ ಭೀಕರವಾಗಿ ಹತ್ಯೆಗೈದು ಪರಾರಿಯಾದ ಪಾಪಿಗಳು 

    ಈ ಹಿನ್ನೆಲೆ ಯುಎಸ್ ಯೋಧರ ಕುಟುಂಬದವರು ಅವರಿಬ್ಬರನ್ನು ರಷ್ಯಾ ಸೇನೆ ಸೆರೆ ಹಿಡಿದಿದೆ ಎಂದು ಆರೋಪಿಸುತ್ತಿದ್ದಾರೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಅವರು, ಒಂದು ವೇಳೆ ರಷ್ಯಾದವರು ನಮ್ಮ ಪ್ರಜೆಗಳನ್ನು ಖೈದಿಗಳನ್ನಾಗಿ ಮಾಡಿಕೊಂಡಿದ್ರೆ, ನಾವು ಅವರನ್ನು ಮರಳಿ ಪಡೆಯಲು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.

    ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ಈ ಕುರಿತು ಮಾತನಾಡಿದ್ದು, ಈ ಕುರಿತು ಯಾವುದೇ ರೀತಿಯ ವರದಿಗಳು ಇಲ್ಲಿವರೆಗೂ ಸಿಕ್ಕಿಲ್ಲ. ಅವರ ಬಗ್ಗೆ ನಮಗೆ ದೃಢವಾಗಿ ಏನೂ ತಿಳಿದಿಲ್ಲ. ಆದರೆ ಅವರಿಬ್ಬರನ್ನು ಎಲ್ಲ ಕಡೆ ಹುಡುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ರಷ್ಯಾದ ರಕ್ಷಣಾ ಸಚಿವಾಲಯ ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಅಲ್ಲದೇ ರಷ್ಯಾದ ಅಧ್ಯಕ್ಷ ಪುಟಿನ್ ಫೆ.24 ರಂದು ಉಕ್ರೇನ್ ಮೇಲೆ ಆಕ್ರಮಣ ಮಾಡಲು ಆದೇಶಿಸಿದ್ದರು. ನಂತರ ಅವರ ಸೇನೆ ಯಾರನ್ನು ಕೈದಿಗಳಾಗಿ ಮಾಡಿಕೊಂಡಿಲ್ಲ. ಒಂದು ವೇಳೆ ಅವರು ಕೈದಿಗಳಾಗಿ ತೆಗೆದುಕೊಂಡಿದ್ರೆ ಅದರಲ್ಲಿ ಯುಎಸ್ ಪ್ರಜೆಗಳೇ ಮೊದಲಿಗರು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಇಡ್ಲಿ ಪಾತ್ರೆಯಲ್ಲಿ ಮಾಡಿ ‘ಚಾಕೊಲೇಟ್ ಚಿಪ್ ಕುಕೀಸ್’

    ಕಳೆದ ವಾರ, ಉಕ್ರೇನ್‍ಗಾಗಿ ಹೋರಾಡುತ್ತಿರುವಾಗ ಸಿಕ್ಕಿಬಿದ್ದ ಇಬ್ಬರು ಬ್ರಿಟಿಷ್ ನಾಗರಿಕರಿಗೆ ಪ್ರತ್ಯೇಕತಾವಾದಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.

    Live Tv

  • ಪುಟಿನ್‌ ಮಲ, ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸ್ತಾರಂತೆ ಅಂಗರಕ್ಷಕರು – ಯಾಕೆ ಗೊತ್ತಾ?

    ಪುಟಿನ್‌ ಮಲ, ಮೂತ್ರವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸ್ತಾರಂತೆ ಅಂಗರಕ್ಷಕರು – ಯಾಕೆ ಗೊತ್ತಾ?

    ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆರೋಗ್ಯದ ಸುದ್ದಿ ಜಗತ್ತಿನ ಪ್ರಮುಖ ಚರ್ಚಾ ವಿಚಾರಗಳಲ್ಲಿ ಒಂದಾಗಿದೆ. ಪುಟಿನ್‌ ಆರೋಗ್ಯದ ವಿಚಾರವಾಗಿ ಹಲವು ಅಚ್ಚರಿದಾಯಕ ಅಂಶಗಳನ್ನು ವಿದೇಶಿ ಮಾಧ್ಯಮಗಳು ಬಹಿರಂಗಪಡಿಸುತ್ತಿವೆ.

    ಪುಟಿನ್‌ ಆರೋಗ್ಯದ ವಿಚಾರವಾಗಿ ಫಾಕ್ಸ್‌ ಸುದ್ದಿ ಸಂಸ್ಥೆ ಈಚೆಗೆ ಅಚ್ಚರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಪುಟಿನ್‌ ಆರೋಗ್ಯದ ಗುಟ್ಟು ರಟ್ಟಾಗದಿರಲಿ ಎಂಬ ಕಾರಣಕ್ಕೆ ಅವರ ಮಲ, ಮೂತ್ರವನ್ನು ಅಂಗರಕ್ಷಕರೇ ಸಂಗ್ರಹಿಸಿ ಅದಕ್ಕೂ ರಕ್ಷಣೆ ನೀಡುತ್ತಿದ್ದಾರೆ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ. ಇದನ್ನೂ ಓದಿ: ಈ ದೇಶದಲ್ಲಿ ಸ್ಮಾರ್ಟ್‌ ಟಿವಿಗಿಂತ ಕಾಂಡೋಮ್ ಬೆಲೆ ದುಬಾರಿ – ಎಷ್ಟು ಅಂದ್ರೆ ನೀವು ಬೆಚ್ಚಿಬೀಳ್ತೀರಾ!

    putin

    ಬ್ರೀಫ್‌ಕೇಸ್‌ನಲ್ಲಿ ಮಲ, ಮೂತ್ರ ಸಂಗ್ರಹ
    ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿದೇಶಿ ಪ್ರವಾಸದಲ್ಲಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯು ವಿದೇಶಿ ಗುಪ್ತಚರ ಸೇವೆಗಳ ಕೈಗೆ ಸಿಗುವ ಸಾಧ್ಯತೆಯ ಬಗ್ಗೆ ಪುಟಿನ್ ಭಯಪಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಮಲ, ಮೂತ್ರವನ್ನೂ ಅಂಗರಕ್ಷಕರು ಸಂಗ್ರಹಿಸಿ, ವಿಲೇವಾರಿಗೆ ಮಾಸ್ಕೋಗೆ ಸೂಟ್‌ಕೇಸ್‌ನಲ್ಲಿ ರವಾನಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪುಟಿನ್‌ ಅಧಿಕಾರದ ಬದಲಾವಣೆಗೆ ಸಂಬಂಧಿಸಿದ ಯಾವುದೇ ಅವ್ಯವಸ್ಥೆಯನ್ನು ತಡೆಯಲು ಮತ್ತು ಅನಿರ್ದಿಷ್ಟವಾಗಿ ರಷ್ಯಾವನ್ನು ಆಳುತ್ತಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಡಿಐಎ ಗುಪ್ತಚರ ಅಧಿಕಾರಿ ರೆಬೆಕಾ ಕಾಫ್ಲರ್ ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

    ಪುಟಿನ್‌ ದೇಹದ ತ್ಯಾಜ್ಯವನ್ನು ವಿಶೇಷ ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಅದನ್ನು ತವರಿಗೆ ಪ್ರಯಾಣಕ್ಕಾಗಿ ಮೀಸಲಾದ ಬ್ರೀಫ್‌ಕೇಸ್‌ನಲ್ಲಿ ಇರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ರಷ್ಯಾದ ಕುರಿತು ಎರಡು ಪುಸ್ತಕಗಳನ್ನು ಬರೆದಿರುವ ಲೇಖಕ ರೆಗಿಸ್ ಗೆಂಟೆ ಹಾಗೂ ಕಳೆದ ಒಂದು ದಶಕದಿಂದ ರಷ್ಯಾದಲ್ಲಿ ಬೀಡುಬಿಟ್ಟಿರುವ ಮಿಖಾಯಿಲ್ ರೂಬಿನ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಮಲವಿಸರ್ಜನೆಯ ಸಂಗ್ರಹದ ಬಗ್ಗೆ ಮಾಹಿತಿಯನ್ನು ಲೇಖಕರು ನೀಡಿದ್ದಾರೆ. ಪುಟಿನ್ ಅವರು 2017 ಮೇ 29ರಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದಾಗ ಹಾಗೂ 2019ರ ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಾಗ ಹೀಗೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಕ್ಷಿಗಳಿಗೆ ಆಹಾರವಿಡುವ ಟ್ರೇ ಹೊಂದಿದ್ದಕ್ಕೆ 3 ವಾರದಲ್ಲಿ 3 ಬಾರಿ ವ್ಯಕ್ತಿ ಅರೆಸ್ಟ್

    ಉಕ್ರೇನ್‌ ವಿರುದ್ಧ ಯುದ್ಧ ಸಾರಿದಾಗಿನಿಂದ ಪುಟಿನ್‌ ಆರೋಗ್ಯದ ವಿಚಾರದ ಬಗ್ಗೆಯೂ ಪ್ರಮುಖ ಚರ್ಚೆಗಳಾಗುತ್ತಿವೆ. ಪುಟಿನ್‌ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಅವರ ಆಪ್ತರಾದ ಒಲಿಗಾರ್ಚ್‌ ಈಚೆಗೆ ತಿಳಿಸಿದ್ದರು.

  • ಉಕ್ರೇನ್‌ಗೆ ಲಾಂಗ್ ರೇಂಜ್ ಕ್ಷಿಪಣಿ ಕಳುಹಿಸಿದರೆ ಪರಿಣಾಮ ನೆಟ್ಟಗಿರಲ್ಲ: ಪುಟಿನ್ ಎಚ್ಚರಿಕೆ

    ಉಕ್ರೇನ್‌ಗೆ ಲಾಂಗ್ ರೇಂಜ್ ಕ್ಷಿಪಣಿ ಕಳುಹಿಸಿದರೆ ಪರಿಣಾಮ ನೆಟ್ಟಗಿರಲ್ಲ: ಪುಟಿನ್ ಎಚ್ಚರಿಕೆ

    ಮಾಸ್ಕೋ: ಉಕ್ರೇನ್‌ಗೆ ಲಾಂಗ್ ರೇಂಜ್ ಕ್ಷಿಪಣಿಗಳನ್ನು ಅಮೆರಿಕ ಪೂರೈಸಿತು ಎಂದಾದರೆ, ನಾವು ಕೂಡಾ ಒಂದು ಸೂಕ್ತ ನಿರ್ಧಾರ ಮಾಡಿ, ಹೊಸದೊಂದು ಗುರಿಯನ್ನೇ ಹೊಡೆಯುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.

    ಉಕ್ರೇನ್‌ಗೆ ಅಮೆರಿಕ ಸುಧಾರಿತ ಶಸ್ತ್ರಾಸ್ತ್ರಗಳನ್ನು ವಿತರಿಸುವ ನಿರ್ಧಾರವನ್ನು ಖಂಡಿಸಿದ ಪುಟಿನ್, ಯುದ್ಧವನ್ನು ಇನ್ನೂ ಹೆಚ್ಚಿನ ಕಡೆಗೆ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ನಾವು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡು, ನಮ್ಮ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಬಳಸುತ್ತೇವೆ ಹಾಗೂ ಇಲ್ಲಿಯವರೆಗೂ ಹೊಡೆದಿರದ ಗುರಿಗಳನ್ನು ಹೊಡೆಯುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿಯಿಂದ ಸ್ಥಳಾಂತರ

    Vladimir Putin

    ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ಯುದ್ಧಪೀಡಿತ ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಒದಗಿಸಿ ಸಹಾಯ ಮಾಡುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಪುಟಿನ್ ಇದೀಗ ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಸಹಾಯ ಮಾಡುವುದನ್ನು ವಿರೋಧಿಸಿ, ಬೆದರಿಕೆ ಒಡ್ಡಿದ್ದಾರೆ. ಇದನ್ನೂ ಓದಿ: ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    ರಷ್ಯಾ ಅಧ್ಯಕ್ಷ ಹೊಸ ಗುರಿಗಳನ್ನು ಹೊಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ನಿಖರವಾಗಿ ಯಾವ ಗುರಿ, ವ್ಯಾಪ್ತಿ ಅಥವಾ ಉಕ್ರೇನ್ ಹೊರತುಪಡಿಸಿ ಇತರ ದೇಶವೋ ಎಂಬುದರ ಬಗ್ಗೆ ಸ್ಪಷ್ಟಪಡಿಸಿಲ್ಲ.

  • ರಷ್ಯಾ, ಉಕ್ರೇನ್ ಯುದ್ಧಕ್ಕೆ 100 ದಿನ ಪೂರ್ಣ- ಮತ್ತೆ ನಗರವನ್ನು ವಶಪಡಿಸಿಕೊಂಡ ಉಕ್ರೇನ್

    ರಷ್ಯಾ, ಉಕ್ರೇನ್ ಯುದ್ಧಕ್ಕೆ 100 ದಿನ ಪೂರ್ಣ- ಮತ್ತೆ ನಗರವನ್ನು ವಶಪಡಿಸಿಕೊಂಡ ಉಕ್ರೇನ್

    ಕೀವ್: ವಿಶ್ವವನ್ನೇ ಬೆಚ್ಚಿ ಬಿಳಿಸುವಂತೆ ಮಾಡಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧ ಪ್ರಾರಂಭವಾಗಿ 100 ದಿನಗಳು ಕಳೆದಿವೆ. ಈ ವೇಳೆ ಸಿವಿರೋಡೋನೆಟ್ಸ್ಕ್‌ಗಾಗಿ ನಡೆದ ಯುದ್ಧದಲ್ಲಿ ದೊಡ್ಡ ಪ್ರಮಾಣದ ಭೂಪ್ರದೇಶವನ್ನು ಉಕ್ರೇನ್ ಪುನಃ ವಶಪಡಿಸಿಕೊಂಡಿದೆ. ಈ ಮೂಲಕ ರಷ್ಯಾ ಸೈನ್ಯದ ಪ್ರಯತ್ನವನ್ನು ಉಕ್ರೇನ್ ವಿಫಲಗೊಳಿಸಿದೆ.

    ಸಾಕಷ್ಟು ಸಾವು ನೋವಿಗೆ ಕಾರಣವಾಗಿರುವ ಹಾಗೂ ಇಡೀ ವಿಶ್ವದ ಮೇಲೆಯೇ ಆರ್ಥಿಕ ಮತ್ತು ಇತರೆ ದುಷ್ಪರಿಣಾಮ ಬೀರಿರುವ ಉಕ್ರೇನ್‍ನ ಮೇಲಿನ ರಷ್ಯಾ ಆಕ್ರಮಣಕ್ಕೆ ಶುಕ್ರವಾರ 100 ದಿನ ಪೂರ್ಣಗೊಂಡಿತ್ತು. ಇದರ ಬೆನ್ನಲ್ಲೇ ಉಕ್ರೇನ್ ರಷ್ಯಾವನ್ನು ಕೀವ್‍ನಿಂದ ಹಿಂದಕ್ಕೆ ಓಡಿಸಿದೆ. ಅಷ್ಟೇ ಅಲ್ಲದೇ ಉಕ್ರೇನಿಯನ್ ಪಡೆಗಳು ಸಿವಿರೋಡೋನೆಟ್ಸ್ಕ್‌ನಲ್ಲಿ ರಷ್ಯಾದ ಪಡೆಗಳಿಂದ ಕಳೆದುಕೊಂಡಿದ್ದ ಸುಮಾರು 20% ಪ್ರದೇಶವನ್ನು ಪುನಃ ವಶಪಡಿಸಿಕೊಂಡಿವೆ.

    ಅಮೆರಿಕ ಮತ್ತು ಬ್ರಿಟನ್ ಈ ವಾರ ಹೇಳಿದಂತೆ ಸುಧಾರಿತ ಕ್ಷಿಪಣಿ ವ್ಯವಸ್ಥೆಗಳನ್ನು ನಿರ್ವಹಿಸಲು ಉಕ್ರೇನ್‍ನ ಸೈನಿಕರು ಯುರೋಪ್‍ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪುಟ್ಟ ರಾಷ್ಟ್ರ ಉಕ್ರೇನ್‍ನನ್ನು ಕೆಲವೇ ದಿನದಲ್ಲಿ ಗೆಲ್ಲಲು ಯೋಜಿಸಿದ್ದ ರಷ್ಯಾ ಮೂರು ತಿಂಗಳಿಗಿಂತಲೂ ಹೆಚ್ಚು ಕಾಲ ಸಾವಿರಾರು ಸೈನಿಕರನ್ನು ಕಳೆದುಕೊಂಡು ಕಷ್ಟ ಪಡುತ್ತಿದೆ.

    ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಜಾಗತಿಕವಾಗಿ ಆಹಾರ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಹಾಗೂ ಇದರಿಂದಾಗಿ ಬಡ ರಾಷ್ಟ್ರಗಳಿಗೆ ಹಾನಿಯಾಗುತ್ತದೆ ಎಂಬ ವಿದೇಶಗಳ ಟೀಕೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ತೀರಸ್ಕರಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಅಶ್ಲೀಲ ಚಿತ್ರಗಳು, ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ – ತಪ್ಪೊಪ್ಪಿಕೊಂಡ ಚರ್ಚ್ ಲೀಡರ್

    ರಷ್ಯಾ ವಿರೋಧಿ ಕೂಟವಾದ ಪಾಶ್ಚಾತ್ಯ ದೇಶಗಳ ನೇತೃತ್ವದ ನ್ಯಾಟೋ ಒಕ್ಕೂಟ ಸೇರಲು ಉಕ್ರೇನ್ ನಿಂತಿತ್ತು. ಇದೇ ವೇಳೆ ಉಕ್ರೇನ್‍ನ ಡಾನ್ ಬಾಸ್ ಸೇರಿದಂತೆ ರಷ್ಯಾದ ಗಡಿಯಂಚಿನಲ್ಲಿರುವ 2 ಪ್ರಾಂತ್ಯಗಳ ಮೇಲೆ ರಷ್ಯಾಗೆ ಮೊದಲಿನಿಂದಲೂ ಕಣ್ಣಿತ್ತು. ಈ ಹಿನ್ನೆಲೆಯಲ್ಲಿ ಫೆ.24ರಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿತ್ತು. ಇದನ್ನೂ ಓದಿ: ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

  • ರಷ್ಯಾ 2 ಲಕ್ಷ ಉಕ್ರೇನ್ ಮಕ್ಕಳನ್ನು ಅಪಹರಿಸಿದೆ – ಝಲೆನ್ಸ್ಕಿ ಗಂಭೀರ ಆರೋಪ

    ರಷ್ಯಾ 2 ಲಕ್ಷ ಉಕ್ರೇನ್ ಮಕ್ಕಳನ್ನು ಅಪಹರಿಸಿದೆ – ಝಲೆನ್ಸ್ಕಿ ಗಂಭೀರ ಆರೋಪ

    ಕೀವ್: ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವು 100ನೇ ದಿನ ಸಮೀಪಿಸುತ್ತಿದೆ. ಈ ಹೊತ್ತಿನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಷ್ಯಾ ಸುಮಾರು 2 ಲಕ್ಷ ಮಕ್ಕಳನ್ನು ಬಲವಂತವಾಗಿ ಕರೆದೊಯ್ದಿದೆ, 1 ಕೋಟಿಗೂ ಅಧಿಕ ಜನರು ವಲಸೆ ಹೋಗುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.

    ಅಂತಾರಾಷ್ಟ್ರೀಯ ಮಕ್ಕಳ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಝಲೆನ್ಸ್ಕಿ, ರಷ್ಯಾದ ಕ್ರಿಮಿನಲ್ ಉದ್ದೇಶವು ಮಕ್ಕಳನ್ನು ಅಪಹರಣ ಮಾಡಿರುವುದು ಮಾತ್ರವಲ್ಲದೆ ವಲಸೆ ಹೋದವರು ಮತ್ತೆ ಉಕ್ರೇನ್‌ಗೆ ಮರಳದಂತೆ ಮಾಡಿದೆ. ಆದರೂ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜನರು ಎಂದಿಗೂ ಶರಣಾಗುವುದಿಲ್ಲ. ನಮ್ಮ ದೇಶದ ಮಕ್ಕಳು ಆಕ್ರಮಣಕಾರರ ಆಸ್ತಿಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    RUSSIA

    ಯುದ್ಧದ ನಡುವೆ ರಷ್ಯಾದ ಪಡೆಗಳು ಪೂರ್ವ ಡೊನ್ಬಾಸ್ ಪ್ರದೇಶದ ಮೇಲೆ ತಮ್ಮ ಹಿಡಿತ ಗಟ್ಟಿಗೊಳಿಸುತ್ತಿವೆ. ಇದಕ್ಕೆ ಪ್ರತಿದಾಳಿ ನಡೆಸುತ್ತಿರುವ ಉಕ್ರೇನ್ ಸೈನ್ಯವೂ ವಾಸ್ತವಿಕ ಆಡಳಿತ ಕೇಂದ್ರವಾದ ಕ್ರಾಮಾಟೋರ್ಸ್ಕ್ ಕಡೆಗೆ ಸ್ಥಿರವಾಗಿ ಹಿಮ್ಮೆಟ್ಟಿಸುತ್ತಿವೆ. ಕಳೆದ ಮೂರು ತಿಂಗಳಿನಿಂದ ರಷ್ಯಾದ ಆಕ್ರಮಣ 1.25 ಲಕ್ಷ ಚದರ ಕಿ.ಮೀ ವರೆಗೆ ಹೆಚ್ಚಾಗಿದೆ. ಸುಮಾರು 3 ಲಕ್ಷ ಕಿ.ಮೀ ಗಳಷ್ಟು ಸ್ಫೋಟಗೊಂಡ ಶಸ್ತ್ರಾಸ್ತ್ರಗಳಿಂದ ಕಲುಷಿತಗೊಂಡಿದೆ. ಒಟ್ಟಾರೆ ಶೇ.20 ರಷ್ಟು ಪ್ರದೇಶವನ್ನು ರಷ್ಯಾ ಸೈನ್ಯ ವಶಪಡಿಸಿಕೊಂಡಿದೆ. ಇದರಿಂದಾಗಿ 1.2 ಕೋಟಿ ಉಕ್ರೇನಿಯನ್ನರು ವಲಸೆ ಹೋಗಿದ್ದಾರೆ. 50 ಲಕ್ಷಕ್ಕೂ ಹೆಚ್ಚು ಮಂದಿ ವಿದೇಶಗಳಿಗೆ ತೆರಳಿದ್ದಾರೆ ಎಂದು ಆರೋಪಿಸಿದ್ದಾರೆ.

  • ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಕಳುಹಿಸುತ್ತೇವೆ: ಬೈಡನ್

    ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಕಳುಹಿಸುತ್ತೇವೆ: ಬೈಡನ್

    ವಾಷಿಂಗ್ಟನ್: ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‌ಗೆ ಅಮೆರಿಕ ಸುಧಾರಿತ ರಾಕೆಟ್ ಸಿಸ್ಟಮ್‌ಗಳನ್ನು ಕಳುಹಿಸಲು ಒಪ್ಪಿಕೊಂಡಿದೆ.

    ಬುಧವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ 700 ಮಿಲಿಯನ್ ಡಾಲರ್(ಸುಮಾರು 5 ಸಾವಿರ ಕೋಟಿ ರೂ.) ಮೌಲ್ಯದ ಶಸ್ತ್ರಾಸ್ತ್ರ ಪ್ಯಾಕೇಜ್ ಅನ್ನು ಉಕ್ರೇನ್‌ಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಅಮೆರಿಕ ಕಳುಹಿಸುತ್ತಿರುವ ಸುಧಾರಿತ ಲಾಂಗ್‌ರೇಂಜ್ ರಾಕೆಟ್ ಸಿಸ್ಟಮ್‌ಗಳು ರಷ್ಯಾದ ಕ್ಷಿಪಣಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪರಮಾಣು ಅಸ್ತ್ರ ಬಳಸಿದರೆ, ಯುಎನ್‌ಗೆ ನಿರ್ಬಂಧ ಕಠಿಣಗೊಳಿಸಲು ಯತ್ನಿಸುತ್ತೇವೆ: ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ

    ಅಮೆರಿಕ ಕಳುಹಿಸುತ್ತಿರುವ ಸುಧಾರಿತ ರಾಕೆಟ್ ಸಿಸ್ಟಮ್‌ಗಳು 80 ಕಿಮೀ ದೂರದ ಗುರಿಯನ್ನು ನಿಖರವಾಗಿ ಹೊಡೆಯಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಷ್ಯಾ ಹಾಗೂ ಉಕ್ರೇನ್ ಯುದ್ಧ ರಾಜತಾಂತ್ರಿಕತೆಯ ಮೂಲಕ ಕೊನೆಗೊಳ್ಳುತ್ತದೆ. ಆದರೂ ಉಕ್ರೇನ್ ರಕ್ಷಣೆಗೆ ಅಮೆರಿಕ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂದು ಬೈಡನ್ ತಿಳಿಸಿದ್ದರು. ಇದನ್ನೂ ಓದಿ: ಭಾರತ, ಪಾಕಿಸ್ತಾನ ಪರಸ್ಪರ ವ್ಯಾಪಾರದಿಂದ ಬಹಳಷ್ಟು ಲಾಭ ಹೊಂದಿದೆ: ಪಾಕ್ ಪ್ರಧಾನಿ

    ಈ ಹಿನ್ನೆಲೆಯಲ್ಲಿ ಬೈಡನ್, ಉಕ್ರೇನ್‌ಗೆ ಹೆಚ್ಚು ಸುಧಾರಿತ ರಾಕೆಟ್ ಸಿಸ್ಟಮ್ ಹಾಗೂ ಇತರ ಅಸ್ತ್ರಗಳನ್ನು ಒದಗಿಸಲು ನಿರ್ಧರಿಸಿದ್ದೇನೆ. ಅವು ಉಕ್ರೇನ್‌ಗೆ ತನ್ನ ಮೇಲೆ ದಾಳಿ ನಡೆಸಬಹುದಾದ ಗುರಿಯನ್ನು ನಿಖರವಾಗಿ ಹೊಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

  • ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

    ಮಾಸ್ಕೋ: ಕಳೆದ 2 ತಿಂಗಳಿಗೂ ಅಧಿಕ ಸಮಯದಿಂದ ಉಕ್ರೇನ್ ವಿರುದ್ಧ ಯುದ್ಧ ಸಾರಿಸುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಮತ್ತೊಂದು ಆತಂಕ ಶುರುವಾಗಿದೆ. ಈಗಾಗಲೇ ಕ್ಯಾನ್ಸರ್ ಕಾಯಿಲೆಯಿಂದ ನಿರಂತರ ಆರೋಗ್ಯ ಸಮಸ್ಯೆಯಲ್ಲಿರುವ ಪುಟಿನ್‌ಗೆ ಡೆಡ್‌ಲೈನ್ ಫಿಕ್ಸ್ ಆಗಿದೆ.

    ಏಕೆಂದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಿರಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿಯ ವರದಿ ಹೇಳಿದೆ.

    69 ವರ್ಷದ ರಷ್ಯಾದ ಅಧ್ಯಕ್ಷ ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಪುಟಿನ್ ಅವರ ಕಣ್ಣಿನ ದೃಷ್ಟಿ ಗಂಭೀರವಾಗಿ ಹದಗೆಟ್ಟಿದೆ. ಅವರ ಬೆರಳುಗಳೂ ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆಯ ಮೂಲಗಳಿಂದ ಮಾಧ್ಯಮಗಳು ವರದಿ ಮಾಡಿವೆ.

    ಗುಪ್ತಚರ ಸಂಸ್ಥೆಯ ವರದಿಯನ್ನು ಬ್ರಿಟನ್ನಲ್ಲಿ ಪುಟಿನ್ ಹತ್ಯೆ ಮಾಡಲು ಸಂಚು ರೂಪಿಸಿರುವವರಿಗೆ ತಿಳಿಯದಂತೆ ಬಚ್ಚಿಡಲಾಗಿದೆ. ದುರ್ಬಲತೆಗೆ ಕಾರಣವಾಗುತ್ತದೆ ಎಂಬ ಭಯದಿಂದ ಗ್ಲಾಸ್ ಧರಿಸಲು ಪುಟಿನ್ ತಿರಸ್ಕರಿಸುತ್ತಿದ್ದಾರೆ. ತನ್ನ ಕೆಳಗೆ ಕೆಲಸ ಮಾಡುವವರ ವಿರುದ್ಧ ಅವರು ಇತ್ತೀಚೆಗೆ ಅನಿಯಂತ್ರಿತ ಕೋಪದಿಂದ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪುಟಿನ್ ಇದೇ ತಿಂಗಳಲ್ಲಿ ಕ್ಯಾನ್ಸರ್ ಸರ್ಜರಿಗೆ ಒಳಗಾಗಿದ್ದರು. ವೈದರ ಸಲಹೆ, ಚಿಕಿತ್ಸೆಯಿಂದ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ರಷ್ಯಾದ ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.

  • ಉಕ್ರೇನ್‍ಗೆ 9 ಬಿಲಿಯನ್ ಯುರೋ ಕಳುಹಿಸಲು ಒಪ್ಪಿಕೊಂಡ ಇಯು

    ಉಕ್ರೇನ್‍ಗೆ 9 ಬಿಲಿಯನ್ ಯುರೋ ಕಳುಹಿಸಲು ಒಪ್ಪಿಕೊಂಡ ಇಯು

    ಬ್ರಸೆಲ್ಸ್: ಉಕ್ರೇನ್ ಮತ್ತು ರಷ್ಯಾ ನಡುವೆ ಕಳೆದ 2 ತಿಂಗಳಿಂದ ನಿರಂತವಾಗಿ ಯುದ್ಧ ನಡೆಯುತ್ತಿದೆ. ಅದಕ್ಕೆ ಉಕ್ರೇನ್ ಆರ್ಥಿಕ ನೆರವನ್ನು ಇತರೆ ರಾಷ್ಟ್ರಗಳಿಗೆ ಕೇಳುತ್ತಿದೆ. ಈ ಹಿನ್ನೆಲೆ ಯುರೋಪಿಯನ್ ಯೂನಿಯನ್(ಇಯು) ನಾಯಕರು ಉಕ್ರೇನ್‍ನಿಗೆ 9 ಬಿಲಿಯನ್(75 ಸಾವಿರ ಕೋಟಿ ರೂ.) ಯುರೋ ಕಳುಹಿಸಲು ಒಪ್ಪಿಗೆ ನೀಡಿದ್ದಾರೆ.

    ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‍ಗೆ ಆರ್ಥಿಕವಾಗಿ ಬೆಂಬಲಿಸಲು ಇಯು ಮುಂದಾಗಿದೆ. ಈ ಹಿನ್ನೆಲೆ ಉಕ್ರೇನ್‍ಗೆ ಒಂಬತ್ತು ಬಿಲಿಯನ್ ಯುರೋಗಳನ್ನು ಕಳುಹಿಸಲು ಒಪ್ಪಿಕೊಳ್ಳಲಾಗಿದೆ ಎಂದು ಇಯು ಮುಖ್ಯಸ್ಥ ಚಾರ್ಲ್ಸ್ ಮೈಕೆಲ್ ಸೋಮವಾರ ಘೋಷಿಸಿದ್ದಾರೆ. ಇದನ್ನೂ ಓದಿ: ಮಾಲೇಕಲ್ ತಿರುಪತಿಯಲ್ಲಿ ದುಷ್ಕರ್ಮಿಗಳಿಂದ ವಿಗ್ರಹ ಧ್ವಂಸ 

    Russia-UkraineWar

    ಬ್ರಸೆಲ್ಸ್‌ನಲ್ಲಿ ಸಭೆ ನಡೆಸಿದ ಯುರೋಪಿಯನ್ ಒಕ್ಕೂಟದ ನಾಯಕರು ಉಕ್ರೇನ್‍ಗೆ ಆರ್ಥಿಕವಾಗಿ ಬೆಂಬಲಿಸಲು ಒಂಬತ್ತು ಬಿಲಿಯನ್ ಯುರೋಗಳನ್ನು ಕಳುಹಿಸಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಮೈಕೆಲ್ ಅವರು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಸುದ್ದಿಯನ್ನು ತಿಳಿಸಿದ್ದಾರೆ.