Tag: Ukraine

  • ಜೈಲಿನಲ್ಲೇ ಉಕ್ರೇನ್ ಖೈದಿಗಳ ಸಾವು – ತನಿಖೆಗೆ UN, ರೆಡ್‍ಕ್ರಾಸ್ ಆಹ್ವಾನಿಸಿದ ರಷ್ಯಾ

    ಜೈಲಿನಲ್ಲೇ ಉಕ್ರೇನ್ ಖೈದಿಗಳ ಸಾವು – ತನಿಖೆಗೆ UN, ರೆಡ್‍ಕ್ರಾಸ್ ಆಹ್ವಾನಿಸಿದ ರಷ್ಯಾ

    ಮಾಸ್ಕೋ: ಜೈಲಿನಲ್ಲಿ ಉಕ್ರೇನ್ ಖೈದಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆ ಮತ್ತು ರೆಡ್‍ಕ್ರಾಸ್‍ನ ತಜ್ಞರನ್ನು ರಷ್ಯಾ ಆಹ್ವಾನಿಸಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

    ಮಾಸ್ಕೋ ಬೆಂಬಲಿತ ಪ್ರತ್ಯೇಕತಾವಾದಿಗಳ ಜೈಲಿನ ಮೇಲೆ ದಾಳಿಯಾಗಿರುವ ಕುರಿತು ವಸ್ತುನಿಷ್ಠ ತನಿಖೆ ನಡೆಸುವ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಾವು ಕೇಳಿಕೊಂಡಿದ್ದೇವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ 

    ಜೈಲಿನಲ್ಲಿ ನಡೆದ ದಾಳಿಯಿಂದ ಮೃತರ ಸಂಖ್ಯೆ 53ಕ್ಕೆ ಏರಿದೆ. ಕೀವ್ ಜೈಲಿಗೆ ರಾಕೆಟ್‍ಗಳಿಂದ ಹೊಡೆಯಲಾಗಿದೆ. ಈ ವೇಳೆ ಉಕ್ರೇನ್‍ನ ಸಶಸ್ತ್ರ ಪಡೆ ಕಾರ್ಯ ನಿರ್ವಹಿಸಲು ವಿಫಲವಾಗಿದೆ. ರಷ್ಯಾದ ಫಿರಂಗಿದಳವು ಜೈಲನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ನೂರಾರು ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ಆರಂಭ

    ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ನೂರಾರು ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ಆರಂಭ

    – ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವಂತೆ ಪ್ರಧಾನಿಗೆ ಮನವಿ

    ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಿಂದ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳು ಭಾರತೀಯ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕೆ ಆಗ್ರಹಿಸಿ 5 ದಿನಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

    ಉಕ್ರೇನ್‌ನಿಂದ ವಾಪಸ್ಸಾದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಕಳೆದುಕೊಳ್ಳುವ ಆತಂಕದಲ್ಲಿದ್ದು, ಖಿನ್ನತೆ, ಆತಂಕ ಇತರ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ತಮ್ಮ ಭವಿಷ್ಯ ಉಳಿಸಬೇಕು. ಅದಕ್ಕಾಗಿ ಸರ್ಕಾರ ನಮಗೆ ಸಹಾಯ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ

    ದೆಹಲಿಯ ರಾಮಲೀಲಾ ಮೈದಾನದಲ್ಲಿ ಜುಲೈ 23 ರಿಂದ 27ರ ವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ. ಕಳೆದ ತಿಂಗಳು, ದೇಶದ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಹಲವಾರು ವಿದ್ಯಾರ್ಥಿಗಳು ರಾಜಧಾನಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.

    ನಾವು ಜಂತರ್ ಮಂತರ್‌ನಲ್ಲಿ ಮೂರು ಬಾರಿ, ದ್ವಾರಕದಲ್ಲಿನ ರಾಷ್ಟ್ರೀಯ ವೈದ್ಯಕೀಯ ಆಯೋಗದ (MNC) ಕಚೇರಿಯಲ್ಲಿ, ಪ್ರಧಾನಮಂತ್ರಿ ಕಚೇರಿ, ಆರೋಗ್ಯ ಸಚಿವಾಲಯ, ಶಿಕ್ಷಣ ಸಚಿವಾಲಯ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಭಾರತದ ರಾಷ್ಟçಪತಿಗಳಿಗೆ ನಮ್ಮ ಬೇಡಿಕೆ-ಕೋರಿಕೆ ಪತ್ರವನ್ನು ಸಲ್ಲಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಭರವಸೆ ಇಲ್ಲ. ಅನಿವಾರ್ಯ ಕಾರಣಗಳಿಂದಾಗಿ ಇಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದರೆ. ಇದನ್ನೂ ಓದಿ: ಇಂಡಿಗೋ ಏರ್‌ಲೈನ್ಸ್‌ನ ಗಗನಸಖಿಯೊಂದಿಗೆ ಅಸಭ್ಯ ವರ್ತನೆ- ಪ್ರಯಾಣಿಕನ ಬಂಧನ

    ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸರಿಸುಮಾರು 12,000 ಅಂತಹ ವಿದ್ಯಾರ್ಥಿಗಳಿರುವುದರಿಂದ 600 ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಸಂಸ್ಥೆಯು ಸುಮಾರು 20 ವಿದ್ಯಾರ್ಥಿಗಳನ್ನು ವ್ಯವಸ್ಥೆಗೊಳಿಸಬಹುದು ಎಂದು ಅವರು ಕೇಳಿಕೊಂಡಿದ್ದಾರೆ.

    ರಷ್ಯಾದ ಪಡೆಗಳು ಉಕ್ರೇನ್ ವಿರುದ್ಧ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಉಕ್ರೇನ್‌ನಾದ್ಯಂತ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ ಕನಿಷ್ಠ 18,000 ವಿದ್ಯಾರ್ಥಿಗಳು ಫೆಬ್ರವರಿಯಲ್ಲಿ ಭಾರತಕ್ಕೆ ಮರಳಿದರು.

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ

    ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ

    ಕೀವ್: ಇಬ್ಬರು ಉನ್ನತ ಅಧಿಕಾರಿಗಳನ್ನು ತನಿಖೆಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮಾನತುಗೊಳಿಸಿದ್ದಾರೆ.

    ರಷ್ಯಾ ಮತ್ತು ಉಕ್ರೇನ್‌ ನಡುವೆ ಕಳೆದ ಮೂರು ತಿಂಗಳಿಂದ ಭೀಕರವಾಗಿ ಯುದ್ಧ ನಡೆಯುತ್ತಿದೆ. ಈ ವೇಳೆ ತಮ್ಮ ದೇಶದಲ್ಲಿಯೇ ಇದ್ದು, ರಷ್ಯಾಗೆ ಸಹಾಯ ಮಾಡುತ್ತಿದ್ದ ಅಧಿಕಾರಗಳ ವಿರುದ್ಧ ಝೆಲೆನ್ಸ್ಕಿ ಅವರು ಕ್ರಮ ತೆಗೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅಧ್ಯಕ್ಷೀಯ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸ್ಮಿರ್ನೋವ್ ಅವರನ್ನು ಅಮಾನತು ಮಾಡಲಾಗಿದೆ. ಐರಿನಾ ವೆನೆಡಿಕ್ಟೋವಾ ಅವರನ್ನು ಸಹ ಪ್ರಾಸಿಕ್ಯೂಟರ್ ಜನರಲ್‍ನಿಂದ ತೆಗೆದುಹಾಕಲಾಗಿದೆ. ಇವರು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುಳಿವು ನಮಗೆ ಸಿಕ್ಕಿದೆ. ಈ ಕುರಿತು ಸಂಪೂರ್ಣವಾಗಿ ತನಿಖೆಯಾಗುವವರೆಗೂ ಅವರನ್ನು ಅಮಾನತು ಮಾಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ:  ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ 

    ಅಧ್ಯಕ್ಷರ ಹಿರಿಯ ಸಹಾಯಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಧ್ಯಕ್ಷೀಯ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸ್ಮಿರ್ನೋವ್, ವೆನೆಡಿಕ್ಟೋವಾ ಅವರನ್ನು ಅಮಾನತುಗೊಳಿಸಲಾಗಿದೆ. ಬಕಾನೋವ್ ಅವರನ್ನು ತಮ್ಮ ಕರ್ತವ್ಯಗಳನ್ನು ಪೂರೈಸುವುದರಿಂದ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಆದರೆ ವಜಾಗೊಳಿಸಲಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟರು.

    ತನಿಖೆ ವೇಳೆ ಅವರನ್ನು ದೋಷಮುಕ್ತಗೊಳಿಸಿದರೆ ಇಬ್ಬರು ಅಧಿಕಾರಿಗಳು ತಮ್ಮ ಉದ್ಯೋಗಗಳಿಗೆ ಮರಳಬಹುದೇ ಎಂದು ಕೇಳಿದಾಗ, ನಾವು ಕಾನೂನು ಪಾಲಿಸುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಖಂಡಿತವಾಗಿ ಸಾಧ್ಯವಾಗುತ್ತೆ. ಈ ಬಗ್ಗೆ ನಾನು ಊಹಿಸಬಲ್ಲೆ ಎಂದು ಉತ್ತರಿಸಿದರು.

    Live Tv
    [brid partner=56869869 player=32851 video=960834 autoplay=true]

  • ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್

    ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್

    ಕೀವ್: ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ ಉಕ್ರೇನ್ ಹೇಳಿದೆ.

    ದೇಶದ ಪೂರ್ವದಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿಗಳು ತಮ್ಮ ಸ್ವಘೋಷಿತ ಗಣರಾಜ್ಯಗಳನ್ನು ಗುರುತಿಸಿದೆ ಎಂದು ಹೇಳಿದ ಸ್ಪಲ್ವ ಸಮಯದ ನಂತರ ಉಕ್ರೇನ್ ಈ ನಿರ್ಧಾರಕ್ಕೆ ಬಂದಿದೆ. ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಲುಗಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ ಘೋಷಣೆಗೆ ಉತ್ತರ ಕೊರಿಯಾದ ಮಾನ್ಯತೆ ಕೊಟ್ಟಿತು. ಅಲ್ಲದೇ ಕಳೆದ ತಿಂಗಳು ರಷ್ಯಾದ ಮತ್ತೊಂದು ಮಿತ್ರರಾಷ್ಟ್ರ ಸಿರಿಯಾ ಸಹ ಅದೇ ಕ್ರಮವನ್ನು ತೆಗೆದುಕೊಂಡಿತ್ತು. ಆದರೆ ಉಕ್ರೇನಿಯನ್ ವಿದೇಶಾಂಗ ಸಚಿವಾಲಯವು ಉತ್ತರ ಕೊರಿಯಾದ ಈ ನಿರ್ಧಾರವನ್ನು ಖಂಡಿಸಿದೆ. ಇದನ್ನೂ ಓದಿ:  ಬಿಜೆಪಿ MLAಗೆ ಮಣ್ಣಿನ ಸ್ನಾನ ಮಾಡಿಸಿದ ಮಹಿಳೆಯರ ಗುಂಪು – ಕಾರಣ ಕೇಳಿ ನೆಟ್ಟಿಗರು ಶಾಕ್ 

    ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಉಕ್ರೇನ್ ಘೋಷಿಸಿದೆ ಎಂದು ಹೇಳಿಕೆ ತಿಳಿಸಿದೆ.

    ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅವಲಂಬಿಸಿರುವ ದೇಶಗಳನ್ನು ಹೊರತುಪಡಿಸಿ, ರಷ್ಯಾವು ಇನ್ನು ಮುಂದೆ ಜಗತ್ತಿನಲ್ಲಿ ಯಾವುದೇ ಮಿತ್ರರಾಷ್ಟ್ರಗಳನ್ನು ಹೊಂದಿಲ್ಲ ಎಂದು ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಲ್ಲ ಉಕ್ರೇನ್ ಪ್ರಜೆಗಳಿಗೆ ವೇಗವಾಗಿ ರಷ್ಯಾದ ಪೌರತ್ವ ಕೊಡಲು ಮುಂದಾದ ಪುಟಿನ್

    ಎಲ್ಲ ಉಕ್ರೇನ್ ಪ್ರಜೆಗಳಿಗೆ ವೇಗವಾಗಿ ರಷ್ಯಾದ ಪೌರತ್ವ ಕೊಡಲು ಮುಂದಾದ ಪುಟಿನ್

    ಮಾಸ್ಕೋ: ರಷ್ಯಾದ ಸೇನೆ ಪ್ರಮುಖ ಉಕ್ರೇನಿಯನ್ ನಗರವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಎಲ್ಲ ಉಕ್ರೇನಿಯನ್ನರಿಗೆ ರಷ್ಯಾದ ಪೌರತ್ವವನ್ನು ಪಡೆಯುವ ವೇಗದ ವಿಧಾನವನ್ನು ವಿಸ್ತರಿಸಿದರು.

    ಈ ಯೋಜನೆಯೂ ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ ಮೇಲೆ ಮಾಸ್ಕೋದ ಪ್ರಭಾವವನ್ನು ಬಲಪಡಿಸುವ ಮತ್ತೊಂದು ಪ್ರಯತ್ನವಾಗಿದೆ. ಇಲ್ಲಿವರೆಗೂ ಉಕ್ರೇನ್‍ನ ಪ್ರತ್ಯೇಕತಾವಾದಿ ಪೂರ್ವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶದ ನಿವಾಸಿಗಳು, ಹಾಗೆಯೇ ದಕ್ಷಿಣದ ಝಪೊರಿಝಿಯಾ ಮತ್ತು ಖೆರ್ಸನ್ ಪ್ರದೇಶದ ನಿವಾಸಿಗಳು ಮತ್ತು ಈಗ ರಷ್ಯಾದ ನಿಯಂತ್ರಣದಲ್ಲಿರುವ ಹೆಚ್ಚಿನ ಭಾಗದ ಜನರು ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹಿನ್ನೆಲೆ ಪುಟಿನ್ ಅವರು ಇದರ ವಿಧಾನವನ್ನು ವೇಗವಾಗಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ – ಮಳೆ ದೇವನಿಗೆ ಸ್ಥಳೀಯರಿಂದ ವಿಶೇಷ ಪೂಜೆ 

    ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕ್ಲುಬಾ ಅವರು ಪಾಸ್‍ಪೋರ್ಟ್ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದು ಉಕ್ರೇನ್‍ನಲ್ಲಿರುವ ನಿವಾಸಿಗಳಿಗೂ ಅನ್ವಯಿಸುತ್ತದೆ.

    ನಮ್ಮ ರಾಜ್ಯದ ಆಕ್ರಮಿತ ಪ್ರದೇಶಗಳ ನಿವಾಸಿಗಳ ಕುತ್ತಿಗೆಗೆ ಕುಣಿಕೆಯನ್ನು ಬಿಗಿಗೊಳಿಸಲು ಪಾಸ್‍ಪೋರ್ಟ್‍ಗಳನ್ನು ನೀಡಲು ರಷ್ಯಾ ಸರಳೀಕೃತ ವಿಧಾನವನ್ನು ಬಳಸುತ್ತಿದೆ. ಆಕ್ರಮಿತ ಆಡಳಿತಗಳು ಮತ್ತು ರಷ್ಯಾದ ಆಕ್ರಮಣಕಾರಿ ಸೈನ್ಯದ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಈ ಮೂಲಕ ಒತ್ತಾಯಿಸುತ್ತಿದೆ ಎಂದು ಉಕ್ರೇನ್‍ನ ವಿದೇಶಿ ಸಚಿವಾಲಯ ಹೇಳಿಕೆಯಲ್ಲಿ ಸೇರಿಸಿದೆ.

    2019 ರ ನಡುವೆ, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ದ 7,20,000 ಜನರಲ್ಲಿ ಸುಮಾರು 18% ಜನರು ರಷ್ಯಾದ ಪಾಸ್‍ಪೋರ್ಟ್‍ಗಳನ್ನು ಸ್ವೀಕರಿಸಿದ್ದಾರೆ. ಇದನ್ನೂ ಓದಿ:  ʼಬೆಲ್ಲದ ದೋಸೆʼ ಮಾಡುವ ಸೂಪರ್‌ ವಿಧಾನ 

    Live Tv
    [brid partner=56869869 player=32851 video=960834 autoplay=true]

  • ಭಾರತ ಸೇರಿದಂತೆ 4 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಝೆಲೆನ್ಸ್ಕಿ

    ಭಾರತ ಸೇರಿದಂತೆ 4 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಝೆಲೆನ್ಸ್ಕಿ

    ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾರತ ಸೇರಿದಂತೆ 4 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿ ಅದೇಶ ಹೊರಡಿಸಿದ್ದಾರೆ.

    ಭಾರತ, ಜರ್ಮನಿ, ಜೆಕ್‍ಗಣರಾಜ್ಯ, ನಾರ್ವೆ ಮತ್ತು ಹಂಗೇರಿ ದೇಶಗಳ ರಾಯಭಾರಿಗಳನ್ನು ಝೆಲೆನ್ಸ್ಕಿ ವಜಾಗೊಳಿಸಿರುವ ಬಗ್ಗೆ ಅಧಿಕೃತವಾಗಿ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಆದರೆ ಯಾವ ಕಾರಣಕ್ಕೆ ವಜಾಗೊಳಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ಹೆತ್ತ ತಾಯಿಯ ಕತ್ತು ಸೀಳಿ ಕೊಂದು, ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಗ

    ಈ ಹಿಂದೆ ರಷ್ಯಾ, ಉಕ್ರೇನ್ ವಿರುದ್ಧ ಯುದ್ಧ ಸಾರಿದಾಗ ಉಕ್ರೇನ್‍ಗೆ ಅಂತಾರಾಷ್ಟ್ರೀಯ ಬೆಂಬಲ ಮತ್ತು ಮಿಲಿಟರಿ ಸಹಾಯವನ್ನು ಹೆಚ್ಚಿಸಲು ಝೆಲೆನ್ಸ್ಕಿ ತನ್ನ ರಾಜತಾಂತ್ರಿಕರ ಬಳಿ ಮನವಿಮಾಡಿಕೊಂಡಿದ್ದರು. ಆದರೆ ಈ ವೇಳೆ ಯಾವುದೇ ನೆರವು ಸಿಕ್ಕಿರಲಿಲ್ಲ. ಆದರೂ ರಷ್ಯಾದೊಂದಿಗೆ ನಿರಂತವಾಗಿ ಯುದ್ಧ ಮಾಡಿ ದೇಶವನ್ನು ಉಳಿಸಿಕೊಳ್ಳಲು ಉಕ್ರೇನ್ ಹೋರಾಡುತ್ತಿದೆ. ಯುದ್ಧ ನಡೆಯುತ್ತಿರುವಂತೆ ಶಕ್ತಿಶಾಲಿ ರಾಕೆಟ್ ಲಾಂಚರ್‌ಗಳನ್ನು ಒಳಗೊಂಡಂತೆ ಕೈವ್‍ಗೆ ಹೊಸ ಮಿಲಿಟರಿ ನೆರವು ನೀಡುವುದಾಗಿ ಯುನೈಟೆಡ್ ಸ್ಟೇಟ್ಸ್ ಭರವಸೆ ನೀಡಿದೆ. ಇದನ್ನೂ ಓದಿ: ಶ್ರೀಲಂಕಾದ ಪ್ರಧಾನಿ ರನೀಲ್ ವಿಕ್ರಮಸಿಂಘೆ ಮನೆಗೆ ಬೆಂಕಿ, ವಾಹನಗಳು ಜಖಂ – ಹೊಸ ಸರ್ಕಾರ ರಚನೆಗೆ ಅಸ್ತು

    ಇತ್ತ ರಷ್ಯಾದ ಪಡೆಗಳು ಯುದ್ಧ ಮುಮದುವರಿಸಿದ್ದು ಉಕ್ರೇನ್‍ನ ಪೂರ್ವ ಡೊನೆಟ್ಸ್ಕ್ ಪ್ರದೇಶದ ಮೇಲೆ ನಿರಂತರ ಶೆಲ್ ದಾಳಿಯನ್ನು ಮುಂದುವರಿಸಿದೆ. ನೆರೆಯ ಲುಗಾನ್ಸ್ಕ್ ಪ್ರದೇಶದ ನಗರಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಮುಂದಾಗಿದ್ದ ವೇಳೆ ಉಕ್ರೇನ್ ಸಮರ್ಥವಾಗಿ ಎದುರಿಸಿ ರಷ್ಯಾ ಪಡೆಯನ್ನು ಹಿಮ್ಮೆಟ್ಟಿಸಿದೆ. ರಷ್ಯಾ ಈಗ ಸಂಪೂರ್ಣ ಡೊನ್ಬಾಸ್ ಪ್ರದೇಶದ ಮೇಲೆ ತನ್ನ ಹಿಡಿತವನ್ನು ಬಲಪಡಿಸಲು ಮುಂದಾಗಿದೆ. ಈ ನಡುವೆ ಉಕ್ರೇನ್ ಈವರೆಗೆ 37,200 ರಷ್ಯಾ ಸೈನಿಕರನ್ನು ಹೊಡೆದುರುಳಿಸುವುದಾಗಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪುಟಿನ್ ಮಹಿಳೆಯಾಗಿದ್ದರೆ, ಯುದ್ಧದ ಹುಚ್ಚು ಆತನಿಗೆ ಬರುತ್ತಿರಲಿಲ್ಲ: ಬೋರಿಸ್ ಜಾನ್ಸನ್

    ಪುಟಿನ್ ಮಹಿಳೆಯಾಗಿದ್ದರೆ, ಯುದ್ಧದ ಹುಚ್ಚು ಆತನಿಗೆ ಬರುತ್ತಿರಲಿಲ್ಲ: ಬೋರಿಸ್ ಜಾನ್ಸನ್

    ಬರ್ಲಿನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಹಿಳೆಯಾಗಿದ್ದರೆ, ಉಕ್ರೇನ್ ಮೇಲೆ ಯುದ್ಧವನ್ನು ಘೊಷಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡಿದ್ದಾರೆ.

    ಜರ್ಮನಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಾನ್ಸನ್, ಪುಟಿನ್‌ಗೆ ಒಬ್ಬ ಮಹಿಳೆಗೆ ಇರುವ ಮನಸ್ಥಿತಿ ಖಂಡಿತವಾಗಿಯೂ ಇಲ್ಲ. ಒಂದು ವೇಳೆ ಆತ ಮಹಿಳೆಯಾಗಿದ್ದರೆ, ಖಂಡಿತವಾಗಿಯೂ ಈ ರೀತಿ ಆಕ್ರಮಣ, ಹಿಂಸಾಚಾರದ ಹುಚ್ಚುತನವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಗ್ನಿಪಥ್ ಯೋಜನೆ – ಇಲ್ಲಿಯವರೆಗೆ 1.83 ಲಕ್ಷ ನೋಂದಣಿ

    ಉಕ್ರೇನ್ ಮೇಲೆ ಪುಟಿನ್ ಅವರ ಆಕ್ರಮಣ ವಿಷಕಾರಿ ಪುರುಷತ್ವದ ಪರಿಪೂರ್ಣ ಉದಾಹರಣೆಯಾಗಿದೆ. ಪ್ರಪಂಚದಾದ್ಯಂತ ಮಹಿಳೆಯರಿಗೆ ಅಧಿಕಾರಗಳಲ್ಲಿ ಉತ್ತಮ ಸ್ಥಾನಗಳನ್ನು ನೀಡುವಂತೆ ಬೋರಿಸ್ ಜಾನ್ಸನ್ ಕರೆ ನೀಡಿದರು. ಇದನ್ನೂ ಓದಿ: ಬೈಡನ್ ಪತ್ನಿ, ಮಗಳು ಸೇರಿದಂತೆ 23 ಅಮೆರಿಕನ್ನರಿಗೆ ನಿಷೇಧ ಹೇರಿದ ರಷ್ಯಾ

    ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಜನರು ಕೊನೆಗೊಳಿಸಬೇಕೆಂದು ಬಯಸುತ್ತಾರೆ. ಆದರೆ ಯಾವುದೇ ಒಪ್ಪಂದಗಳಿಲ್ಲದೇ ಪುಟಿನ್ ಶಾಂತಿಯುತ ಮಾತುಕತೆಗೆ ಮುಂದಾಗುತ್ತಿಲ್ಲ. ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಉಕ್ರೇನ್ ಅನ್ನು ಬೆಂಬಲಿಸಬೇಕು. ಮಾಸ್ಕೊದೊಂದಿಗೆ ಶಾಂತಿಯುತ ಮಾತುಕತೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.

    Live Tv

  • ಉಕ್ರೇನ್‍ ಮೇಲೆ ರಷ್ಯಾ ಕ್ಷಿಪಣಿ ದಾಳಿ- 16 ಮಂದಿ ಸಾವು

    ಉಕ್ರೇನ್‍ ಮೇಲೆ ರಷ್ಯಾ ಕ್ಷಿಪಣಿ ದಾಳಿ- 16 ಮಂದಿ ಸಾವು

    ಕೀವ್: ರಷ್ಯಾದ ಕ್ಷಿಪಣಿ ದಾಳಿಯಿಂದ ಉಕ್ರೇನ್‍ನ 16 ಮಂದಿ ಸಾವನ್ನಪ್ಪಿದ್ದು, 59 ಮಂದಿ ಗಾಯಗೊಂಡಿರುವ ಘಟನೆ ಕ್ರೆಮೆನ್‍ಚುಕ್‍ನಲ್ಲಿರುವ ಶಾಪಿಂಗ್ ಮಾಲ್‍ನಲ್ಲಿ ನಡೆದಿದೆ.

    ರಷ್ಯಾದ ವಿರುದ್ಧ ಕಿಡಿಕಾರಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಘಟನೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮುಷ್ಕರವನ್ನು ಉದ್ದೇಶಪೂರ್ವಕವಾಗಿ ಜನನಿಬಿಡದ ಮಾಲ್‍ನಲ್ಲಿ ಮಾಡಲಾಗಿದೆ. ಇದರಿಂದಾಗಿ ಹೆಚ್ಚಿನ ಜನರು ಮೃತಪಟ್ಟಿದ್ದಾರೆ ಎಂದು ಗುಡುಗಿದರು.

    ಕ್ಷಿಪಣಿ ದಾಳಿ ನಡೆದಾಗ ಸಾವಿರಕ್ಕೂ ಅಧಿಕ ಜನರು ಮಾಲ್‍ನಲ್ಲಿದ್ದರು. ಮಾಲ್‍ನಲ್ಲಿ ಬೆಂಕಿಯನ್ನು ನಂದಿಸಲು ಅನೇಕರು ಹರಸಾಹಸ ಪಡುತ್ತಿದ್ದಾರೆ. ಘಟನೆಯಲ್ಲಿ ಸಂತ್ರಸ್ತರ ಸಂಖ್ಯೆಯನ್ನು ಊಹಿಸಿಕೊಳ್ಳಲು ಅಸಾಧ್ಯ ಎಂದಿದ್ದಾರೆ. ಇದನ್ನೂ ಓದಿ: ಅಗ್ನಿಪಥ್‌ಗೆ ಭರ್ಜರಿ ಪ್ರತಿಕ್ರಿಯೆ – 4 ದಿನಕ್ಕೆ 94 ಸಾವಿರ ಅರ್ಜಿ

    ಪಶ್ಚಿಮ ರಷ್ಯಾದ ಕುರ್ಸ್ಕ್ ಪ್ರದೇಶದಿಂದ Tu-22 ಬಾಂಬರ್‌ಗಳಿಂದ ಹಾರಿಸಲಾದ ಕ್ಷಿಪಣಿಗಳಿಂದ ಮಾಲ್‍ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಉಕ್ರೇನಿಯನ್ ವಾಯುಪಡೆ ಹೇಳಿದೆ. ಇದನ್ನೂ ಓದಿ: ಯೋಧನ ಗುಂಡಿನ ದಾಳಿಗೆ ಇಬ್ಬರು ಅಧಿಕಾರಿಗಳು ಸಾವು

    Live Tv

  • ಯುದ್ಧಪೀಡಿತ ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್‌ನಲ್ಲಿ ಅಭ್ಯರ್ಥಿ ಸ್ಥಾನ

    ಯುದ್ಧಪೀಡಿತ ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್‌ನಲ್ಲಿ ಅಭ್ಯರ್ಥಿ ಸ್ಥಾನ

    ಕೀವ್: ರಷ್ಯಾ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್(EU) ಅಭ್ಯರ್ಥಿ ಸ್ಥಾನ ನೀಡಿದೆ. ಯುರೋಪಿಯನ್ ಯೂನಿಯನ್ ನಾಯಕರು ಗುರುವಾರ ಉಕ್ರೇನ್ ಹಾಗೂ ಮಾಲ್ಡೋವಾಗೆ ಅಭ್ಯರ್ಥಿ ಸ್ಥಾನವನ್ನು ನೀಡಿದ್ದಾರೆ.

    ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ 4 ದಿನಗಳ ಬಳಿಕ ಫೆಬ್ರವರಿ 28ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶಕ್ಕೆ ತಕ್ಷಣವೇ ಒಕ್ಕೂಟದ ಸದಸ್ಯ ಸ್ಥಾನ ನೀಡುವಂತೆ ಕೋರಿಕೊಂಡಿದ್ದರು. ಬಳಿಕ ಉಕ್ರೇನ್‌ಗೆ ಅಭ್ಯರ್ಥಿ ಸ್ಥಾನ ನೀಡಬೇಕೆಂದು ಜೂನ್ 17ರಂದು ಯುರೋಪಿಯನ್ ಕಮಿಷನ್ ಶಿಫಾರಸು ಮಾಡಿತ್ತು. ಇದೀಗ ಉಕ್ರೇನ್ ಇಯುನ ಅಭ್ಯರ್ಥಿಯಾಗಿದೆ. ಇದನ್ನೂ ಓದಿ: ಸಾರ್ವಜನಿಕವಾಗಿ ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

    ಈ ಬಗ್ಗೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ತಮ್ಮ ದೇಶ ಹಾಗೂ ಮಾಲ್ಡೋವಾ ಮೇಲಿನ EU ನಿರ್ಧಾರ ಅನನ್ಯ ಹಾಗೂ ಐತಿಹಾಸಿಕ ಕ್ಷಣ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

    ಉಕ್ರೇನ್ ಭವಿಷ್ಯ ಇದೀಗ EU ನಲ್ಲಿದೆ. ಇನ್ನು ನಮಗೆ ನೆಮ್ಮದಿ ಸಿಗಬಹುದು ಅಥವಾ ಸಿಗದೇ ಹೋಗಬಹುದು. ಆದರೂ ನಾವಿನ್ನು ಗೆಲ್ಲುತ್ತೇವೆ ಹಾಗೂ ದೇಶವನ್ನು ಪುನರ್ ನಿರ್ಮಾಣ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    Live Tv

  • ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

    ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

    ಕೀವ್: ರಷ್ಯಾ ಯುದ್ಧ ಆರಂಭವಾದಾಗಿನಿಂದಲೂ ರಷ್ಯಾ ಉಕ್ರೇನ್ ಮೇಲೆ ಸತತವಾಗಿ ದಾಳಿ ನಡೆಸುತ್ತಲೇ ಇದೆ. ಈ ನಡುವೆ ಉಕ್ರೇನ್‌ನಲ್ಲಿರುವ 152 ಸಾಂಸ್ಕೃತಿಕ ಹಾಗೂ ಐತಿಹಾಸಿಕ ತಾಣಗಳನ್ನು ಸಂಪೂರ್ಣ ನಾಶ ಮಾಡಿರುವುದಾಗಿ ಯುಎನ್ ತಜ್ಞರು ದೃಢಪಡಿಸಿದ್ದಾರೆ ಎಂದು ಯುನೆಸ್ಕೋ ಸಾಂಸ್ಕೃತಿಕ ಸಂಸ್ಥೆ ತಿಳಿಸಿದೆ.

    ಅವುಗಳಲ್ಲಿ ವಸ್ತುಸಂಗ್ರಹಾಲಯಗಳು, ಸ್ಮಾರಕಗಳು, ಚರ್ಚ್‌ಗಳು, ಗ್ರಂಥಾಲಯಗಳು, ಧಾರ್ಮಿಕ ಕಟ್ಟಡಗಳು ಹಾಗೂ ಇತರ ಅಸಾಧಾರಣ ಕಟ್ಟಡಗಳೂ ಸೇರಿವೆ. ಕೆಲವು ಸಂಪೂರ್ಣ ಹಾನಿಯಾಗಿದ್ದಾರೆ, ಕೆಲವು ಭಾಗಶಃ ಹಾನಿಯಾಗಿವೆ ಎಂಬುದಾಗಿ ತಜ್ಞರ ವರದಿ ಹೇಳಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು – ನಾಳೆ ನಾಮಪತ್ರ ಸಲ್ಲಿಕೆ

    ಕಳೆದ ಫೆಬ್ರವರಿ 24 ರಿಂದ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾಯಿತು. ಆಗಿನಿಂದಲೂ ರಷ್ಯಾ ಉಕ್ರೇನಿನ ತಾಣಗಳು ಹಾನಿಗೊಳಗಾಗಿವೆ. ಉಕ್ರೇನಿಯನ್ ಸಾಂಸ್ಕೃತಿಕ ತಾಣಗಳ ಮೇಲಿನ ಈ ಪುನರಾವರ್ತಿತ ದಾಳಿಗಳು ನಿಲ್ಲಬೇಕು. ಯಾವುದೇ ಸಂದರ್ಭದಲ್ಲಿಯೂ ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣಗಳನ್ನು ಗುರಿಯಾಗಿಸಬಾರದು ಎಂದು ಯುನೆಸ್ಕೋದ ಮಹಾನಿರ್ದೇಶಕ ಆಡ್ರೆ ಅಜೌಲೆ ತಿಳಿಸಿದ್ದಾರೆ. ಇದನ್ನೂ ಓದಿ: ರಕ್ತ ಪರೀಕ್ಷೆ ಮೂಲಕ ಸ್ತನ ಕ್ಯಾನ್ಸರ್‌ ಪತ್ತೆ – ತಂತ್ರಜ್ಞಾನ ಭಾರತದಲ್ಲೂ ಲಭ್ಯ

    ರಷ್ಯಾದ ಪಡೆಗಳು ಅಥವಾ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಉಕ್ರೇನ್ ಪಾರಂಪರಿಕ ತಾಣಗಳನ್ನು ನಾಶಪಡಿಸುವಲ್ಲಿ ತಪ್ಪಿತಸ್ಥರೆಂಬುದು ಕಂಡುಬಂದರೆ ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದು ಎಂದು ಯುನೆಸ್ಕೋ ಎಚ್ಚರಿಸಿದೆ.

    Live Tv