Tag: Ukraine-Russia war

  • ರಷ್ಯಾ ಜೊತೆ ಅಮೆರಿಕ ಮಾತುಕತೆಗೆ ಸಿದ್ಧರೆ – ಈಗಾಗಲೇ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ಉಕ್ರೇನ್

    ರಷ್ಯಾ ಜೊತೆ ಅಮೆರಿಕ ಮಾತುಕತೆಗೆ ಸಿದ್ಧರೆ – ಈಗಾಗಲೇ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ಉಕ್ರೇನ್

    ಮಾಸ್ಕೋ/ವಾಷಿಂಗ್ಟನ್‌: ರಷ್ಯಾ-ಉಕ್ರೇನ್ (Ukraine Russia War) ನಡುವೆ ಸುದೀರ್ಘ ಅವಧಿಯಿಂದ ನಡೀತಿರೋ ಯುದ್ಧಕ್ಕೆ ಅಂತ್ಯವಾಡಲು ಎಲ್ಲಾ ಪ್ರಯತ್ನಗಳು ನಡೆದಿವೆ. ಸೌದಿಯಲ್ಲಿ ಉಕ್ರೇನ್-ಅಮೆರಿಕ ನಡುವೆ ಮಹತ್ವದ ಚರ್ಚೆ ನಡೆದಿದೆ. ಅಮೆರಿಕ ಪ್ರಸ್ತಾವದಂತೆ ರಷ್ಯಾ ಜೊತೆಗೆ 30 ದಿನಗಳ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲು ಸಿದ್ಧ ಎಂದು ಉಕ್ರೇನ್ ಘೋಷಿಸಿದೆ.

    ಈ ಬೆನ್ನಲ್ಲೇ, ಉಕ್ರೇನ್‌ಗೆ (Ukraine) ಮಿಲಿಟರಿ ನೆರವು ಸ್ಥಗಿತ ಆದೇಶವನ್ನು ಅಮೆರಿಕ ಹಿಂಪಡೆದಿದೆ. ಅಲ್ಲದೇ ಕದನ ವಿರಾಮಕ್ಕೆ ರಷ್ಯಾವನ್ನು ಒಪ್ಪಿಸಲು ಅಮೆರಿಕ ಪ್ರಯತ್ನ ನಡೆಸಿದೆ. ಪುಟಿನ್ ಜೊತೆ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆದ್ರೆ, ಇದು ಅಂತಿಮ ಹಂತ ತಲುಪಿಲ್ಲ. ಕದನ ವಿರಾಮ ಸಂಬಂಧ ಪುಟಿನ್ ನಿರ್ಣಯ ಬಾಕಿಯಿದೆ. ಗುರುವಾರ (ಮಾ.13) ವ್ಲಾಡಿಮಿರ್‌ ಪುಟಿನ್‌ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿಯೂ ಎಂದು ಟ್ರಂಪ್ ತಿಳಿಸಿದ್ದಾರೆ.

    ಶ್ವೇತಭವನ ಮತ್ತು ಕೈವ್‌ನ ಜಂಟಿ ಹೇಳಿಕೆಯ ಪ್ರಕಾರ, 2 ಕಡೆಯವರೂ ಒಪ್ಪಿದರೆ ಮಾತ್ರವೇ ತಾತ್ಕಾಲಿಕವಾಗಿ 30 ದಿನಗಳ ವರೆಗೆ ಕದನ ವಿರಾಮ ಏರ್ಪಡಲಿದೆ ಎಂದು ಹೇಳಿದೆ. ಇನ್ನೂ ಟ್ರಂಪ್‌ 2ನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮಹತ್ವದ ಹೆಜ್ಜೆಯಾಗಿದೆ.

  • ಉಕ್ರೇನ್‌ಗೆ ಮಿಲಿಟರಿ ನೆರವು ನಿಲ್ಲಿಸಿದ ಟ್ರಂಪ್‌

    ಉಕ್ರೇನ್‌ಗೆ ಮಿಲಿಟರಿ ನೆರವು ನಿಲ್ಲಿಸಿದ ಟ್ರಂಪ್‌

    – ಝೆಲೆನ್ಸ್ಕಿ ಜೊತೆ ಟ್ರಂಪ್ ಘರ್ಷಣೆ ಬೆನ್ನಲ್ಲೇ ನಿರ್ಧಾರ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ಬೆಳವಣಿಗೆ ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿಕೊಳ್ಳಲು ಉಕ್ರೇನ್ ಮೇಲೆ ಒತ್ತಡವನ್ನು ತೀವ್ರವಾಗಿ ಹೆಚ್ಚಿಸಿದೆ.

    ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಯುದ್ಧಕ್ಕೆ ತ್ವರಿತ ಅಂತ್ಯ ಹಾಡಲು ಪ್ರಯತ್ನಿಸುತ್ತಿರುವ ಟ್ರಂಪ್ ನಡುವಿನ ಸಾರ್ವಜನಿಕ ಘರ್ಷಣೆಯ ಕೆಲವೇ ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

    ಅಮೆರಿಕದ ಈ ನಿರ್ಧಾರವು ಉಕ್ರೇನ್‌ಗೆ ಸಂಕಷ್ಟ ತಂದೊಡ್ಡಿದೆ. ಅಮೆರಿಕದ ಶಸ್ತ್ರಾಸ್ತ್ರ ನೆರವಿನಲ್ಲಿ ಅಡಚಣೆಯಾದರೆ, ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸುವುದು ಉಕ್ರೇನ್‌ಗೆ ಕಷ್ಟವಾಗಲಿದೆ.

    ಅಮೆರಿಕ ಅಧ್ಯಕ್ಷರು ಶಾಂತಿಯತ್ತ ಗಮನಹರಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮ ಪಾಲುದಾರರು ಸಹ ಆ ಗುರಿಗೆ ಬದ್ಧರಾಗಿರಬೇಕು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

    ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

    ವಾಷಿಂಗ್ಟನ್‌: ರಷ್ಯಾದ ಹಲವಾರು ಯುದ್ಧನೌಕೆಗಳು ಕ್ರೈಮಿಯಾವನ್ನು ತೊರೆದು ಒಡೆಸ್ಸಾಗೆ ಹೋಗುತ್ತಿವೆ. ಅಲ್ಲದೇ ಉಕ್ರೇನ್‍ನ ಮೂರನೇ ಅತಿದೊಡ್ಡ ನಗರದ ಮೇಲೆ ಯುದ್ಧ ನೌಕೆಯಿಂದಲೂ   ದಾಳಿ ನಡೆಸಬಹುದು ಎಂದು ಅಮೇರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇಂದು ಮುಂಜಾನೆ ಖರ್ಸನ್ ನಗರವನ್ನು ರಷ್ಯಾ ಪಡೆಗಳು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದಾದ ಬಳಿಕ ಕ್ರೈಮಿಯಾ ಬರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ

    ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ 8 ನೇ ದಿನದಂದು, ಕ್ರೈಮಿಯಾದಿಂದ ರಷ್ಯಾದ ಯುದ್ಧನೌಕೆಗಳು ಈಗ ಉಕ್ರೇನಿಯನ್ ನಗರವಾದ ಒಡೆಸ್ಸಾ ಕಡೆಗೆ ಚಲಿಸುತ್ತಿವೆ ಎಂದು ಯುಎಸ್ ಅಧಿಕಾರಿಯೊಬ್ಬರು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದ ಹರ್ಷ ಕುಟುಂಬಕ್ಕೆ ಎಲೆಕ್ಷನ್ ಟಿಕೆಟ್ ವಿಚಾರ- ಗೃಹ ಸಚಿವರು ಹೇಳಿದ್ದೇನು..?

    ಇಂದು ಮುಂಜಾನೆ ರಷ್ಯಾದ ಪಡೆಗಳು ಬಂದರು ನಗರವಾದ ಖರ್ಸನ್ ಅನ್ನು ವಶಪಡಿಸಿಕೊಂಡಿದೆ. ಆದರೆ ಇದನನು ಉಕ್ರೇನ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಇದಾದ ಬಳಿಕ ಇದೀಗ ರಷ್ಯಾದ ಪಡೆಗಳು ಕಪ್ಪು ಸಮುದ್ರದ ಬಳಿ ಒಡೆಸ್ಸಾ ಬಂದರು ನಗರವನ್ನು ಆಕ್ರಮಿಸಲು ಯೋಜಿಸುತ್ತಿವೆ ಎಂದು ತಿಳಿಸಿದ್ದಾರೆ.