Tag: ukraine russia conflict

  • ಉಕ್ರೇನ್‌ ಯುದ್ಧ – ಸಾಕು ನಾಯಿಯೊಂದಿಗೆ ಭಾರತ ಮೂಲದ ವಿದ್ಯಾರ್ಥಿನಿ ಎಸ್ಕೇಪ್‌!

    ಉಕ್ರೇನ್‌ ಯುದ್ಧ – ಸಾಕು ನಾಯಿಯೊಂದಿಗೆ ಭಾರತ ಮೂಲದ ವಿದ್ಯಾರ್ಥಿನಿ ಎಸ್ಕೇಪ್‌!

    ಕೀವ್: ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್‌ನಿಂದ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಎಸ್ಕೇಪ್‌ ಆಗಿದ್ದಾರೆ.

    ಆರ್ಯ ಆಲ್ಡ್ರಿನ್ ಎಸ್ಕೇಪ್‌ ಆಗಿರುವ ವಿದ್ಯಾರ್ಥಿನಿ. ಈಕೆ ತನ್ನ ಸಾಕು ನಾಯಿಯನ್ನು ತಬ್ಬಿಕೊಂಡು ವಾಹನದಲ್ಲಿ ಕುಳಿತಿರುವ ಘೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಫೋಟೋ ಜೊತೆಗೆ, ಆರ್ಯ ಯುದ್ಧ ಭೂಮಿಯಿಂದ ಸಾಕು ನಾಯಿಯನ್ನು ರಕ್ಷಿಸಿದ್ದಾರೆ. ಕೇರಳಕ್ಕೆ ಬಂದಿದ್ದಾರೆ ಎಂದು ಬರೆಯಲಾಗಿದೆ. ಇದನ್ನೂ ಓದಿ: ಕೀವ್‍ನಲ್ಲಿ ರಷ್ಯಾ ರಾಕೆಟ್ ದಾಳಿಗೆ 70 ಉಕ್ರೇನ್ ಸೈನಿಕರು ಬಲಿ

    ಸಾಕು ಪ್ರಾಣಿಯನ್ನು ಉಳಿಸಲು ಆರ್ಯ ಮಾಡಿದ ಪ್ರಯತ್ನಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತನ್ನ ಸಾಕುಪ್ರಾಣಿಯನ್ನು ಉಳಿಸಲು ಆರ್ಯ ಮಾಡಿದ ಪ್ರಯತ್ನಗಳನ್ನು ಬಳಕೆದಾರರು ಪ್ರಶಂಸಿಸಿದ್ದಾರೆ. ʻಉಕ್ರೇನ್ ಅಧ್ಯಕ್ಷರು ತಮ್ಮ ನಾಗರಿಕರನ್ನು ಬಿಟ್ಟು ಓಡಿಹೋಗಲಿಲ್ಲ. ಹಾಗೆಯೇ ವಿದ್ಯಾರ್ಥಿನಿಯೂ ತನ್ನ ನಾಯಿಯನ್ನು ಯುದ್ಧ ವಲಯದಲ್ಲಿ ಬಿಟ್ಟು ಓಡಿ ಹೋಗಲಿಲ್ಲʼ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

    ಇದು ತುಂಬಾ ಹೃದಯ ಸ್ಪರ್ಶಿಯಾಗಿದೆ. ಅಂತಹ ಕರುಣಾಮಯಿಗಳನ್ನು ದೇವರು ಆಶೀರ್ವದಿಸಲಿ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಕೀವ್‍ಗೆ ಮುನ್ನುಗ್ಗುತ್ತಿದೆ 64 ಕಿ.ಮೀ ಉದ್ದದ ರಷ್ಯಾ ಸೇನೆ

     

    ಆರ್ಯ, ಉಕ್ರೇನ್‌ನ ರಾಷ್ಟ್ರೀಯ ಪಿರಗಾವ್‌ ಮೆಮೋರಿಯಲ್‌ ಮೆಡಿಕಲ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿ ಕೇರಳದ ಇಡುಕ್ಕಿ ಜಿಲ್ಲೆಗೆ ವಾಪಸ್ಸಾಗಿದ್ದಾರೆ ಎಂದು ಕೇರಳ ಶಿಕ್ಷಣ ಸಚಿವ ವಿ.ಶಿವಕುಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

    https://twitter.com/kalidas_2k20/status/1498249132846170113?ref_src=twsrc%5Etfw%7Ctwcamp%5Etweetembed%7Ctwterm%5E1498249132846170113%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Fworld-news%2Findian-student-manages-to-rescue-pet-dog-brings-it-to-kerala-2796341

    ಆರ್ಯ, ವಂಡಿಪೆರಿಯಾರ್‌ ಮೂಲದವರು. ಯುದ್ಧ ನಡೆಯುತ್ತಿರುವ ಉಕ್ರೇನ್‌ನಿಂದ ತವರು ಭಾರತಕ್ಕೆ ಮರಳಿದ್ದಾರೆ. ಈ ಜಗತ್ತು ಪ್ರೀತಿಯ ಮೂಲಕ ಬೆಳವಣಿಗೆಯನ್ನು ಬಯಸುತ್ತದೆ ಎಂದು ಕೇರಳ ಶಿಕ್ಷಣ ಸಚಿವ ಶಿವಕುಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

    ರಷ್ಯಾ ಕಳೆದ ವಾರ ಉಕ್ರೇನ್‌ ಮೇಲೆ ಯುದ್ಧ ಸಾರಿದೆ. ಇದರಿಂದಾಗಿ ಇಲ್ಲಿನ ನಾಗರಿಕರು ಯುದ್ಧದ ಭೀತಿಯಿಂದಾಗಿ ಆತಂಕಗೊಂಡಿದ್ದಾರೆ. ಭಾರತ ಸೇರಿದಂತೆ ಅನೇಕ ದೇಶಗಳ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ಉಕ್ರೇನ್‌ ತೊರೆಯುತ್ತಿದ್ದಾರೆ.

  • ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ: ಉಕ್ರೇನ್‌, ರಷ್ಯಾಗೆ ತಾಲಿಬಾನ್‌ ಸಲಹೆ

    ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ: ಉಕ್ರೇನ್‌, ರಷ್ಯಾಗೆ ತಾಲಿಬಾನ್‌ ಸಲಹೆ

    ಕಾಬೂಲ್:‌ ರಷ್ಯಾ ಹಾಗೂ ಉಕ್ರೇನ್‌ ದೇಶಗಳು ತಮ್ಮ ನಡುವಿನ ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ತಾಲಿಬಾನ್‌ ಸಲಹೆ ನೀಡಿದೆ.

    ಸಂವಾದ ಮತ್ತು ಶಾಂತಿಯುತ ವಿಧಾನಗಳ ಮೂಲಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು. ಹಿಂಸಾಚಾರವನ್ನು ತೀವ್ರಗೊಳಿಸುವ ನಿಲುವು ತೆಗೆದುಕೊಳ್ಳುವುದನ್ನು ಎಲ್ಲಾ ದೇಶಗಳು ತ್ಯಜಿಸಬೇಕಾಗಿದೆ ಎಂದು ತಾಲಿಬಾನ್‌ ಕರೆ ನೀಡಿದೆ. ಇದನ್ನೂ ಓದಿ: ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

    ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್‌ ಎಮಿರೇಟ್ಸ್‌ ನಿಕಟವಾಗಿ ಗಮನಿಸುತ್ತಿದೆ. ನಾಗರಿಕರ ಸಾವು-ನೋವುಗಳ ಸಾಧ್ಯತೆಗಳ ಬಗ್ಗೆ ಕಳವಳ ಇದೆ. ಎರಡೂ ರಾಷ್ಟ್ರಗಳು ಸಂಯಮದಿಂದ ಇರುವುದು ಒಳಿತು ಎಂದು ತಾಲಿಬಾನ್‌ ತಿಳಿಸಿದೆ.

    ಅಫ್ಘಾನ್‌ ವಿದ್ಯಾರ್ಥಿಗಳು ಮತ್ತು ಉಕ್ರೇನ್‌ನಲ್ಲಿರುವ ವಲಸಿಗರ ಸುರಕ್ಷತೆಗಾಗಿ ಉಕ್ರೇನ್‌ ಮತ್ತು ರಷ್ಯಾ ದೇಶಗಳಿಗೆ ತಾಲಿಬಾನ್‌ ಮನವಿ ಮಾಡಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

    ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧದ ಯುಎನ್‌ಎಸ್‌ಸಿ ನಿರ್ಣಯದಿಂದ ಸಂಯುಕ್ತ ಅರಬ್‌ ಒಕ್ಕೂಟ (ಯುಎಇ) ಕೂಡ ದೂರ ಉಳಿದಿದೆ. ಆದರೆ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಮಗಳಿಂದ ವಾಯ್ಸ್ ಮೆಸೇಜ್- ಪೋಷಕರಲ್ಲಿ ಆತಂಕ