Tag: Ukraine-Russia

  • ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಉಕ್ರೇನ್ ‌ನಿಂದ ಬಂದ ಕನ್ನಡಿಗ ವೈದ್ಯ‌ವಿದ್ಯಾರ್ಥಿಗಳಿಗೆ ಪ್ರವೇಶ

    ಬೆಂಗಳೂರು : ಉಕ್ರೇನ್-ರಷ್ಯಾ ಯುದ್ದದಿಂದ ಉಕ್ರೇನ್ ನಲ್ಲಿ ಶಿಕ್ಷಣ ವಂಚಿತರಾಗಿ ಕರ್ನಾಟಕಕ್ಕೆ ವಾಪಸ್ ಆಗಿರೋ ಮೆಡಿಕಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಉಕ್ರೇನ್ ನಿಂದ ಅರ್ಧಕ್ಕೆ ಶಿಕ್ಷಣ ಬಿಟ್ಟು ಬಂದಿರೋ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ವೈದ್ಯ ಶಿಕ್ಷಣ ಮುಂದುವರೆಸಲು ಅವಕಾಶ ನೀಡಲು ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯಗಳು ಮುಂದೆ ಬಂದಿದೆ.ಈ ಸಂಬಂಧ ಸಭೆ ಮಾಡಿರೋ ಡೀಮ್ಸ್ ವಿವಿಗಳ ಒಕ್ಕೂಟ ವಿದ್ಯಾರ್ಥಿಗಳಿಗೆ ಪ್ರವೇಶ ನಿಡೋ ಭರವಸೆ ನೀಡಿದ್ದಾರೆ.

    ಪ್ರತಿ ವರ್ಷದ ಕೋರ್ಸ್ ನಲ್ಲಿ ಪ್ರತಿ ವಿಶ್ವವಿದ್ಯಾಲಯಗಳಲ್ಲಿ 25 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿರ್ಧಾರ ಮಾಡಲಾಗಿದೆ. ಒಟ್ಟಾರೆ ಒಂದು ವಿಶ್ವವಿದ್ಯಾಲಯಕ್ಕೆ ವರ್ಷಕ್ಕೆ 125 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಒಕ್ಕೂಟ ನಿರ್ಧಾರ‌ ಮಾಡಲಾಗಿದೆ ಅಂತ ಒಕ್ಕೂಟ ಮಾಹಿತಿ ನೀಡಿದೆ. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ

    ಡೀಮ್ಡ್ ವಿಶ್ವವಿದ್ಯಾಲಯಗಳು ಪ್ರವೇಶ ನೀಡಿದರು. ಸರ್ಕಾರವೇ ನಿರ್ಧಾರ ಮಾಡುವ ಶುಲ್ಕಕ್ಕೆ ಪ್ರವೇಶ ಕೊಡುತ್ತೇವೆ ಅಂತ ಡೀಮ್ಡ್ ವಿಶ್ವವಿದ್ಯಾಲಯಗಳ ಒಕ್ಕೂಟ ತಿಳಿಸಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಪ್ರವೇಶ ನೀಡಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಅನುಮತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡೀಮ್ಡ್ ವಿವಿಗಳ ಒಕ್ಕೂಟ ಪತ್ರ ಬರೆದಿದೆ. ಕೇಂದ್ರದಿಂದ ಅನುಮತಿ ಬಂದ ಕೂಡಲೇ ಪ್ರವೇಶ ನೀಡುವ ಕುರಿತು ಅಂತಿಮ ತೀರ್ಮಾನ ಘೋಷಣೆ ‌ಮಾಡೋದಾಗಿ ಒಕ್ಕೂಟ ತಿಳಿಸಿದೆ. ಇದನ್ನೂ ಓದಿ: 5 ವರ್ಷ ಪೂರ್ಣಗೊಳಿಸಿ ಮತ್ತೆ ಅಧಿಕಾರಕ್ಕೇರಿದ ಮೊದಲ ಯುಪಿ ಸಿಎಂ ಯೋಗಿ

  • ಪರಮಾಣು ಘಟಕ ನಾಶಕ್ಕೆ ಉಕ್ರೇನ್‌ ಅಧ್ಯಕ್ಷರಿಂದ ರಷ್ಯಾ ಪ್ರಚೋದನೆ: ಉಕ್ರೇನ್‌ ಮಾಜಿ ಪಿಎಂ ಆರೋಪ

    ಪರಮಾಣು ಘಟಕ ನಾಶಕ್ಕೆ ಉಕ್ರೇನ್‌ ಅಧ್ಯಕ್ಷರಿಂದ ರಷ್ಯಾ ಪ್ರಚೋದನೆ: ಉಕ್ರೇನ್‌ ಮಾಜಿ ಪಿಎಂ ಆರೋಪ

    ಕೀವ್: ಪರಮಾಣು ವಿದ್ಯುತ್‌ ಸ್ಥಾವರ ನಾಶಪಡಿಸಲು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ, ರಷ್ಯಾವನ್ನು ಪ್ರಚೋದಿಸುತ್ತಿದ್ದಾರೆ ಎಂದು ಉಕ್ರೇನ್‌ ಮಾಜಿ ಪ್ರಧಾನಿ ಮೈಕೋಲಾ ಅಜರೋವ್‌ ಗಂಭೀರ ಆರೋಪ ಮಾಡಿದ್ದಾರೆ.

    ಸಹಜವಾಗಿ ಇದು ಉದ್ದೇಶಪೂರ್ವಕ ಪ್ರಚೋದನೆಯಾಗಿದೆ. ಯೂರೋಪ್‌ನಲ್ಲಿ ಬೃಹತ್‌ ಎನಿಸಿರುವ ಪರಮಾಣು ವಿದ್ಯುತ್‌ ಸ್ಥಾವರ ಘಟಕಗಳು ಉಕ್ರೇನ್‌ನಲ್ಲಿವೆ. ವಿವೇಕಯುತರಾದ ರಷ್ಯಾ ಮತ್ತು ಉಕ್ರೇನ್‌ ಸೈನಿಕರು ಪರಮಾಣು ಸ್ಥಾವರದ ಭೂಪ್ರದೇಶದಲ್ಲಿ ಪ್ರಚೋದನಕಾರಿ ಕ್ರಮಗಳನ್ನು ಕೈಗೊಳ್ಳುವ ಧೈರ್ಯ ಮಾಡುವುದಿಲ್ಲ. ಇದೆಲ್ಲವೂ ಪೂರ್ವನಿರ್ಧರಿತವಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬಹುದು: ಎನ್‍ಎಂಸಿ

    ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರು ಅಮೆರಿಕ ಮತ್ತು ಬ್ರಿಟನ್‌ಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಉಕ್ರೇನ್‌ ಮೇಲೆ ವಿಮಾನ ಹಾರಾಟ ನಿಷೇಧ ವಲಯ ರಚಿಸುವಂತೆ ಒತ್ತಾಯಿಸುವ ಮೂಲಕ ಯುದ್ಧಕ್ಕೆ ಮತ್ತಷ್ಟು ಪ್ರಚೋದನೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

    ರಷ್ಯಾ ಬಾಂಬ್‌ ದಾಳಿಯನ್ನು ತಡೆಗಟ್ಟಲು ಹಾರಾಟ ನಿಷೇಧ ವಲಯ ರಚಿಸುವಂತೆ ನ್ಯಾಟೋಗೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ನ್ಯಾಟೋ ಒಕ್ಕೂಟ ತಿರಸ್ಕರಿಸಿತ್ತು. ಇದರಿಂದ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಬಹುದು ಎಂದು ನ್ಯಾಟೋ ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

  • ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಿ – ಕಲೆ ಮೂಲಕ ಸುದರ್ಶನ್ ಪಟ್ನಾಯಕ್ ಮನವಿ

    ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಿ – ಕಲೆ ಮೂಲಕ ಸುದರ್ಶನ್ ಪಟ್ನಾಯಕ್ ಮನವಿ

    ಭುವನೇಶ್ವರ: ಒಡಿಶಾ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಅದ್ಭುತ ಶಿಲ್ಪಕಲೆಗಳಿಂದ ನೆಟ್ಟಿಗರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ಕಲೆಯಿಂದಲೇ ಎಲ್ಲರ ಗಮನ ಸೆಳೆಯುವುದರ ಜೊತೆಗೆ ವಿಶೇಷ ಗೌರವಗಳನ್ನು ಸ್ವೀಕರಿಸಿದ್ದಾರೆ.

    ಸದ್ಯ ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿಹೋಗಿದೆ ಮತ್ತು ಅಲ್ಲಿನ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದು, ಉಕ್ರೇನ್‍ನಲ್ಲಿ ಅನೇಕ ಸಾವು-ನೋವುಗಳು ಸಂಭವಿಸಿವೆ. ಈ ನಡುವೆ ಸುದರ್ಶನ್ ಪಟ್ನಾಯಕ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕ್ಸಿ ಅವರ ಭಾವಚಿತ್ರವನ್ನು ಮರಳಿನಲ್ಲಿ ರಚಿಸಿದ್ದಾರೆ. ಇದರ ಜೊತೆಗೆ ಯುದ್ಧ ನಿಲ್ಲಿಸಿ ಎಂಬ ಸಂದೇಶವನ್ನು ಬರೆದಿದ್ದಾರೆ.

    ಈ ಶಿಲ್ಪಕಲೆಯ ಫೋಟೋವನ್ನು ಸುದರ್ಶನ್ ಪಟ್ನಾಯಕ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಸ್ಟಾಪ್ ವಾರ್ ಎಂಬ ಸಂದೇಶದೊಂದಿಗೆ STOP WAR ಸಂದೇಶದೊಂದಿಗೆ ಪುರಿ ಬೀಚ್‍ನಲ್ಲಿರುವ ನನ್ನ ಸ್ಯಾಂಡ್‍ಆರ್ಟ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 4,000 ಕ್ಕೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್‍ಗಳು ಹರಿದುಬಂದಿದೆ. ಫೆಬ್ರವರಿ 24 ರಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಆರಂಭಿಸಿದ್ದು, ಇಲ್ಲಿಯವರೆಗೂ ಸುಮಾರು 28 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

  • ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಪ್ಯಾರಿಸ್: ಉಕ್ರೇನ್-ರಷ್ಯಾದ ಯುದ್ಧ ಪ್ರಾರಂಭವಾದ ಬಳಿಕ ಶುಕ್ರವಾರ ಸೈಬರ್ ಅಟ್ಯಾಕ್ ಆಗಿರುವ ಬಗ್ಗೆ ವದಂತಿಗಳು ಹಬ್ಬಿವೆ. ಈ ಕಾರಣದಿಂದ ಯೂರೋಪ್‌ನಾದ್ಯಂತ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಿದ್ದು, ಸಾವಿರಾರು ಬಳಕೆದಾರರು ಇಂಟರ್‌ನೆಟ್ ಇಲ್ಲದೇ ದಿನದೂಡುತ್ತಿದ್ದಾರೆ.

    ಫ್ರಾನ್ಸ್ ಅಂಗಸಂಸ್ಥೆ ನಾರ್ಡ್‌ನೆಟ್ ಒದಗಿಸುತ್ತಿದ್ದ ಉಪಗ್ರಹ ಇಂಟರ್‌ನೆಟ್ ಸೇವೆಯನ್ನು ಸುಮಾರು 9 ಸಾವಿರ ಚಂದಾದಾರರು ಬಳಸುತ್ತಿದ್ದು, ಈ ಸೇವೆಯನ್ನು ಫೆಬ್ರವರಿ 24ರಂದು ಸ್ಥಗಿತಗೊಳಿಸಲಾಗಿದೆ. ಇದೀಗ ಅಷ್ಟೂ ಜನರು ಇಂಟರ್‌ನೆಟ್ ಸೇವೆ ಇಲ್ಲದೇ ಇರಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಇತರ ಇಂಟರ್‌ನೆಟ್ ಮೂಲಗಳನ್ನು ಹುಡುಕಬೇಕಾದ ಸಂದಿಗ್ಧತೆ ಎದುರಾಗಿದೆ. ಇದನ್ನೂ ಓದಿ: ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಯೂರೋಪ್, ಜರ್ಮನಿ, ಫ್ರಾನ್ಸ್, ಹಂಗೇರಿ, ಗ್ರೀಸ್, ಇಟಲಿ ಹಾಗೂ ಪೋಲೆಂಡ್‌ನಲ್ಲಿ ಬಿಗ್‌ಬ್ಲೂನ 40,000 ಚಂದಾದಾರರಿದ್ದಾರೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನರಿಗೆ ಇಂಟರ್‌ನೆಟ್ ಸ್ಥಗಿತದ ಪರಿಣಾಮ ಬೀರಿದೆ. ಈ ಮಾಹಿತಿಯನ್ನು ಬಿಗ್‌ಬ್ಲೂ ಉಪಗ್ರಹ ಇಂಟರ್‌ನೆಟ್ ಸೇವೆಯ ಮೂಲ ಕಂಪನಿ ಯುಟೆಲ್‌ಸಾಟ್ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ 28 ಮಕ್ಕಳು ಸಾವು, 840 ಮಕ್ಕಳಿಗೆ ಗಾಯ – ಉಕ್ರೇನ್ ಸರ್ಕಾರ

    ಉಕ್ರೇನ್ ರಷ್ಯಾದ ಯುದ್ಧದಿಂದಾಗಿ ಸೈಬರ್ ದಾಳಿ ನಡೆದಿದೆ. ಹೀಗಾಗಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಫ್ರಾನ್ಸ್‌ನ ಬಾಹ್ಯಾಕಾಶ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಫ್ರೆಡ್ಲಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲಾಗಿಲ್ಲ. ಇದರ ಬಗ್ಗೆ ಪೊಲೀಸ್ ಹಾಗೂ ರಾಜ್ಯದ ಪಾಲುದಾರರಿಗೆ ಸೂಚನೆ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ.