Tag: Ukrain

  • ರಷ್ಯಾ ಮಿಲಿಟರಿ ಸೇರಿದ್ದ ಭಾರತ ಮೂಲದ ಸೈನಿಕ ಉಕ್ರೇನ್ ಸೇನೆ ಮುಂದೆ ಶರಣು

    ರಷ್ಯಾ ಮಿಲಿಟರಿ ಸೇರಿದ್ದ ಭಾರತ ಮೂಲದ ಸೈನಿಕ ಉಕ್ರೇನ್ ಸೇನೆ ಮುಂದೆ ಶರಣು

    ಕೈವ್: ರಷ್ಯಾ ಮಿಲಿಟರಿಯಲ್ಲಿ ( Russian Army) ಸೇವೆ ಸಲ್ಲಿಸುತ್ತಿದ್ದ ಭಾರತ ಮೂಲದ ಸೈನಿಕ ಉಕ್ರೇನ್ (Ukraine) ಮುಂದೆ ಶರಣಾಗಿದ್ದಾರೆ ಎಂದು ಉಕ್ರೇನ್ ಸೇನೆ ತಿಳಿಸಿದೆ. ಉಕ್ರೇನಿಯನ್ ಮಿಲಿಟರಿ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಈ ವೀಡಿಯೋವನ್ನು ಬಿಡುಗಡೆ ಮಾಡಿದೆ.

    ಗುಜರಾತ್‌ನ (Gujarat) 22 ವರ್ಷದ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಉಕ್ರೇನ್ ಪಡೆ ಮುಂದೆ ಶರಣಾದ ಸೈನಿಕ. ಈ ವಿಷಯದ ಬಗ್ಗೆ ಭಾರತೀಯ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದುವರೆಗೆ ಉಕ್ರೇನ್ ಅಧಿಕಾರಿಗಳಿಂದ ಯಾವುದೇ ಔಪಚಾರಿಕ ಮಾಹಿತಿ ಬಂದಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇನ್ಮುಂದೆ ಬುಕ್ ಆದ ರೈಲ್ವೆ ಟಿಕೆಟ್ ದಿನಾಂಕ ಬದಲಿಸಲು ಅವಕಾಶ

    ಹುಸೇನ್ ಹೆಚ್ಚಿನ ಅಧ್ಯಯನಕ್ಕೆಂದು ರಷ್ಯಾಗೆ ಹೋಗಿದ್ದರು. ಅಲ್ಲಿ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಸಿಲುಕಿ 7 ವರ್ಷಗಳ ಶಿಕ್ಷೆಯನ್ನು ವಿಧಿಸಲಾಯಿತು. ಜೈಲು ಶಿಕ್ಷೆ ತಪ್ಪಿಸಲು ರಷ್ಯಾದ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶವನ್ನು ಹುಸೇನ್‌ಗೆ ನೀಡಲಾಯಿತು. ಇದನ್ನೂ ಓದಿ: LPG ತುಂಬಿದ್ದ ಟ್ರಕ್‌ಗೆ ಟ್ಯಾಂಕರ್ ಡಿಕ್ಕಿ – ಸಿಲಿಂಡರ್‌ಗಳ ಸರಣಿ ಸ್ಫೋಟ, ಕಿ.ಮೀಗಟ್ಟಲೇ ಕಾಣಿಸಿದ ಜ್ವಾಲೆ

    ನನಗೆ ಜೈಲಿನಲ್ಲಿರಲು ಇಷ್ಟವಿರಲಿಲ್ಲ, ಆದ್ದರಿಂದ ನಾನು ವಿಶೇಷ ಮಿಲಿಟರಿ ಕಾರ್ಯಾಚರಣೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ನಾನು ಅಲ್ಲಿಂದ ಹೊರಬರಲು ಬಯಸಿದ್ದೆ ಎಂದು ಹುಸೇನ್ ಹೇಳಿದ್ದಾರೆ. ಕೇವಲ 16 ದಿನಗಳ ತರಬೇತಿಯ ನಂತರ, ನನ್ನನ್ನು ಅಕ್ಟೋಬರ್ 1 ರಂದು ಮೂರು ದಿನಗಳ ಕಾಲ ನಡೆದ ಮೊದಲ ಯುದ್ಧ ಕಾರ್ಯಾಚರಣೆಗೆ ಕಳುಹಿಸಲಾಯಿತು. ತಮ್ಮ ಕಮಾಂಡರ್ ಜೊತೆಗಿನ ಘರ್ಷಣೆಯ ನಂತರ ಉಕ್ರೇನ್ ಸೇನೆ ಮುಂದೆ ಶರಣಾಗಲು ನಿರ್ಧರಿಸಿದೆ ಎಂದು ಹುಸೇನ್ ವೀಡಿಯೋದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಉ.ಕರ್ನಾಟಕದಲ್ಲಿ ಪ್ರವಾಹ – ಕೇಂದ್ರದಿಂದ ನೆರೆಪೀಡಿತ ಜಿಲ್ಲೆಗಳಿಗೆ ಪರಿಹಾರ ನೀಡುವಂತೆ ಮೋದಿಗೆ ಯತ್ನಾಳ್ ಪತ್ರ

  • ಉಕ್ರೇನ್ ವಸತಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ – 8 ಸಾವು, 21 ಮಂದಿಗೆ ಗಾಯ

    ಉಕ್ರೇನ್ ವಸತಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ – 8 ಸಾವು, 21 ಮಂದಿಗೆ ಗಾಯ

    ಕೈವ್: ಪೂರ್ವ ಉಕ್ರೇನ್ (East Ukrain) ನಗರದ ಸ್ಲೋವಿಯನ್ಸ್ಕ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾದ ಕ್ಷಿಪಣಿ ದಾಳಿ (Attack) ನಡೆಸಿದ ಹಿನ್ನೆಲೆ 8 ಜನರು ಸಾವನ್ನಪ್ಪಿದ್ದು, 21 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ನಗರದ ಮೇಲೆ ಏಳು ಕ್ಷಿಪಣಿಗಳನ್ನು ಹಾರಿಸಲಾಗಿದ್ದು, S-300 ಕ್ಷಿಪಣಿಗಳು, 10 ಅಪಾರ್ಟ್ಮೆಂಟ್ ಕಟ್ಟಡಗಳು ಹಾಗೂ ಇತರೆ ಸೈಟ್‌ಗಳನ್ನು ಧ್ವಂಸ ಮಾಡಿವೆ. ಇದರಿಂದಾಗಿ ಕಟ್ಟಡಗಳ ಮಹಡಿಗಳು ಕುಸಿದಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಬದುಕುಳಿದವರಿಗಾಗಿ ರಕ್ಷಣಾ ತಂಡವು ಶೋಧ ನಡೆಸುತ್ತಿದೆ. ಇದನ್ನೂ ಓದಿ: ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ 

    ಶುಕ್ರವಾರ ಸಂಜೆ ತುರ್ತು ಕಾರ್ಯಾಚರಣೆಗಳು ಆರಂಭಗೊಂಡಿದ್ದು, ಅವಶೇಷಗಳನ್ನು ಹೊರತೆಗೆಯುವ ವೇಳೆ 2 ವರ್ಷದ ಮಗುವೊಂದು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಮಗುವನ್ನು ಅವಶೇಷಗಳ ಮಧ್ಯದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: BBC Documentary Controversy: ಗುಜರಾತ್‌ ಗಲಭೆಯ ಬಗ್ಗೆ ಎಲೋನ್‌ ಮಸ್ಕ್‌ ಹೇಳಿದ್ದೇನು? 

    ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನಾಗರಿಕರನ್ನು ಸೈನ್ಯಕ್ಕೆ ಸಜ್ಜುಗೊಳಿಸುವ ಸಲುವಾಗಿ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ. ದೇಶದಿಂದ ಪಲಾಯನ ಮಾಡುವುದನ್ನು ನಿರ್ಬಂಧಿಸಿದ ನಂತರ ಈ ದಾಳಿ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಮ್ಯಾನ್ಮಾರ್: ಪ್ರತಿಭಟನಾಕಾರರ ಮೇಲೆ ವೈಮಾನಿಕ ದಾಳಿ – 100ಕ್ಕೂ ಅಧಿಕ ಜನ ಬಲಿ

  • ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾದಲ್ಲಿ ಮತ್ತೆ 4 ಲಕ್ಷ ಸೈನಿಕರ ನೇಮಕ?

    ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾದಲ್ಲಿ ಮತ್ತೆ 4 ಲಕ್ಷ ಸೈನಿಕರ ನೇಮಕ?

    ಮಾಸ್ಕೋ: ಉಕ್ರೇನ್ (Ukrain) ದೇಶದೊಂದಿಗೆ ಸುದೀರ್ಘ ಹೋರಾಟವನ್ನು ನಡೆಸುವ ಸಲುವಾಗಿ ರಷ್ಯಾ (Russia) ದೇಶವು ಈ ವರ್ಷ 4 ಲಕ್ಷ ಗುತ್ತಿಗೆ ಸೈನಿಕರನ್ನು ನೇಮಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

    ಉಕ್ರೇನ್ ಮುಂಬರುವ ತಿಂಗಳುಗಳಲ್ಲಿ ಯುರೋಪ್ (Europe) ಮತ್ತು ಯುಎಸ್‌ನಲ್ಲಿ (US) ತರಬೇತಿಯಿಂದ ಹೊಸ ಪಡೆಗಳೊಂದಿಗೆ ಮತ್ತು ಹೊಸದಾಗಿ ಸರಬರಾಜು ಮಾಡಿದ ಟ್ಯಾಂಕ್‌ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪ್ರತಿದಾಳಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಇದನ್ನೂ ಓದಿ: ಅದಾನಿ ಬಳಿಕ ಡಾರ್ಸೆ ಕಂಪನಿ ವಿರುದ್ಧ ರಿಪೋರ್ಟ್‌ ಔಟ್‌ – ಷೇರು ಮೌಲ್ಯ ಭಾರೀ ಕುಸಿತ 

    ತನ್ನ ಶ್ರೇಣಿಯನ್ನು ತುಂಬಿಸಲು ಮತ್ತು ವಿಸ್ತರಿಸಲು, ರಷ್ಯಾ ಈಗಾಗಲೇ ಗುತ್ತಿಗೆ ಸೈನಿಕರಿಗೆ ನೇಮಿಸುವ ಅಭಿಯಾನವನ್ನು ಪ್ರಾರಂಭಿಸಿದೆ. ಇದರಲ್ಲಿ ಸೈನಿಕರು ವೇತನಕ್ಕಾಗಿ ಹಲವಾರು ವರ್ಷಗಳವರೆಗೆ ಸೇವೆ ಸಲ್ಲಿಸುತ್ತಾರೆ. ಪ್ರಾದೇಶಿಕ ಅಧಿಕಾರಿಗಳಿಗೆ ನೇಮಕಾತಿಗಾಗಿ ಕೋಟಾಗಳನ್ನು ನೀಡಲಾಗಿದ್ದು, ಡ್ರಾಫ್ಟ್ ಬೋರ್ಡ್‌ಗಳಿಗೆ ಬರಲು ಸಂಭಾವ್ಯ ಸ್ವಯಂಸೇವಕರಿಗೆ ಸಮನ್ಸ್ ನೀಡುತ್ತಿದ್ದಾರೆ. ಆರಂಭದಲ್ಲಿ ಅಧಿಕಾರಿಗಳು, ಅನುಭವಿಗಳು ಮತ್ತು ಗ್ರಾಮೀಣ ನಿವಾಸಿಗಳನ್ನು ಗುರಿಯಾಗಿಸಿಕೊಂಡು ನೇಮಕಾತಿಯನ್ನು ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ಆದರೆ ಈ ವರ್ಷ 4 ಲಕ್ಷ ಗುತ್ತಿಗೆ ಸೈನಿಕರನ್ನು ಆಕರ್ಷಿಸುವ ಗುರಿಯು ಅವಾಸ್ತವಿಕವಾಗಿದೆ. 2022ರ ಫೆಬ್ರವರಿ 24 ರಂದು ಆಕ್ರಮಣವನ್ನು ಪ್ರಾರಂಭಿಸುವ ಮೊದಲು ರಷ್ಯಾ ಹೊಂದಿದ್ದ ವೃತ್ತಿಪರ ಪಡೆಗಳ ಒಟ್ಟು ಸಂಖ್ಯೆಗೆ ಇದು ಸರಿಸುಮಾರು ಸಮಾನವಾಗಿದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: PublicTV Explainer: ನಿತ್ಯಾನಂದನ ಕೈಲಾಸದಲ್ಲಿರಲು ಈ ರೂಲ್ಸ್ ಫಾಲೋ ಮಾಡ್ಲೇಬೇಕಂತೆ 

    ರಕ್ಷಣಾ ಸಚಿವ (Defence Minister) ಸೆರ್ಗೆಯ್ ಶೋಯಿಗು (Sergei Shoigu) ಡಿಸೆಂಬರ್‌ನಲ್ಲಿ ರಷ್ಯಾ ಒಪ್ಪಂದದ ಸೈನಿಕರ ಸಂಖ್ಯೆಯನ್ನು 2023ರ ಅಂತ್ಯದ ವೇಳೆಗೆ 5,21,000 ಕ್ಕೆ ಹೆಚ್ಚಿಸುವುದಾಗಿ ಹೇಳಿದರು. ಇದು ಆಕ್ರಮಣದ ಮೊದಲು 4,05,000 ಆಗಿತ್ತು. ಈ ಪಡೆಗಳು ವಿಶಿಷ್ಟವಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತವೆ. ಇದನ್ನೂ ಓದಿ: ಶಾಲೆಯಲ್ಲಿ ಬ್ರೆಡ್‌ ಮಾರಾಟ ಮಾಡಿ iPhone-14 ಖರೀದಿಸಿದ 12ರ ಬಾಲಕಿ

    ಕಳೆದ ವರ್ಷದ ಕೊನೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ರಷ್ಯಾದ ಮಿಲಿಟರಿಯ (Military) ಗಾತ್ರವನ್ನು ಪ್ರಸ್ತುತ 1.15 ಮಿಲಿಯನ್‌ನಿಂದ 1.5 ಮಿಲಿಯನ್‌ಗೆ ಹೆಚ್ಚಿಸುವ ಯೋಜನೆಯನ್ನು ಅನುಮೋದಿಸಿದರು. ಈ ಯೋಜನೆಯು 2026ರ ವೇಳೆಗೆ ಜಾರಿಗೆ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ: ಉಕ್ರೇನ್‌ ಶಾಲೆ ಮೇಲೆ ರಷ್ಯಾ ಡ್ರೋನ್‌ ದಾಳಿ – 3 ಸಾವು

  • ಭಾರತೀಯರ ಸ್ಥಳಾಂತರಕ್ಕೆ ತೆರಳಿದ ವಾಯುಪಡೆ

    ಭಾರತೀಯರ ಸ್ಥಳಾಂತರಕ್ಕೆ ತೆರಳಿದ ವಾಯುಪಡೆ

    ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವಂತೆ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಅಧಿಕೃತ ಮೂಲ ಹೇಳಿದೆ.

    ವಾಯುಪಡೆಯ ಸಾಮಥ್ರ್ಯವನ್ನು ಸಹಾಯ ಪಡೆದುಕೊಂಡು ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸಬಹುದು. ಇದು ಇದರಿಂದ ಹೆಚ್ಚು ಜನರನ್ನು ಕರೆಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದೆ.

    ಭಾರತದ ವಾಯುಪಡೆಯು ಸಿ-17 ಗ್ಲೋಬ್‍ಮಾಸ್ಟರ್ ವಿಮಾನವನ್ನು ಆಪರೇಷನ್ ಗಂಗಾದ ಭಾಗವಾಗಿ ಅಳವಡಿಸುವ ನಿರೀಕ್ಷೆಯಿದೆ. ಇಂದು ಬೆಳಗ್ಗೆ 182 ಭಾರತೀಯರನ್ನು ಹೊತ್ತ ವಿಮಾನವೊಂದು ಮುಂಬೈಗೆ ಬಂದಿಳಿದಿದೆ. ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಭಾರತೀಯ ವಿಮಾನವು ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ತಲುಪಿದೆ.

    ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಉಕ್ರೇನ್‍ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ ಮತ್ತು ಸ್ಲೋವಾಕ್ ರಿಪಬ್ಲಿಕ್‍ನಲ್ಲಿರುವವರೊಂದಿಗೆ ಮಾತನಾಡಿ ಉಕ್ರೇನ್‍ನಲ್ಲಿ ಸಿಲುಕಿರುವವರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ

    ಉಕ್ರೇನ್‍ನಲ್ಲಿದ್ದ ಅಂದಾಜು 20,000 ಭಾರತೀಯರಲ್ಲಿ ಸುಮಾರು 8,000 ಜನರು ಫೆಬ್ರವರಿ ತಿಂಗಳಲ್ಲಿ ದೇಶವನ್ನು ತೊರೆದಿದ್ದಾರೆ ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ಪುಟಿನ್ ಆದೇಶ ನಿರಾಕರಿಸಿ ಉಕ್ರೇನ್‍ನಿಂದ ಹಿಂದಿರುಗಿದ್ರೆ ಪ್ರತೀ ಸೈನಿಕರೊಂದಿಗೆ ಸೆಕ್ಸ್‌ಗೆ ಸಿದ್ಧಳಿದ್ದೇನೆ: ಮಾಡೆಲ್

  • Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

    Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

    ರಡನೇ ಜಾಗತಿಕ ಯುದ್ಧದ ಬಳಿಕ ನಡೆದ ಶೀತಲ ಸಮರದಲ್ಲಿ ಜಗತ್ತು ಎರಡು ಭಾಗಗಳಾಗಿ ವಿಭಜನೆಗೊಂಡಿತ್ತು. ಒಂದು ಗುಂಪಿಗೆ ಅಮೆರಿಕ ನಾಯಕತ್ವ ವಹಿಸಿದರೆ ಮತ್ತೊಂದಕ್ಕೆ ಸೋವಿಯತ್ ಯೂನಿಯನ್ ನಾಯಕತ್ವ ವಹಿಸಿತ್ತು. ಯುಎಸ್‍ಎಸ್‍ಆರ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು 1949ರಲ್ಲಿ ಅಮೆರಿಕ, ಕೆನಡಾ ಸೇರಿ 12 ದೇಶಗಳು ನಾರ್ತ್ ಅಟ್ಲಾಂಟಿಕ್ ಟ್ರೀಟಿ(ನ್ಯಾಟೋ) ಆರಂಭಿಸಿದವು. ಸದ್ಯ ನ್ಯಾಟೋ ಸದಸ್ಯ ರಾಷ್ಟ್ರಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

    ಈ ಪೈಕಿ ಯಾವುದೇ ದೇಶದ ಮೇಲೆ ದಾಳಿ ನಡೆದರೂ ಅದು ನನ್ನ ಸಂಸ್ಥೆ ಮೇಲಿನ ದಾಳಿ ಎಂದು ಭಾವಿಸಲಾಗುತ್ತದೆ ಎಂದು ಆರಂಭದಲ್ಲಿಯೇ ನ್ಯಾಟೋ ಘೋಷಿಸಿತ್ತು. ಆದರೆ 1991ರ ಡಿಸೆಂಬರ್‌ನಲ್ಲಿ ಯುಎಸ್‍ಎಸ್‍ಆರ್ ಛಿದ್ರವಾದಾಗ ಪರಿಸ್ಥಿತಿ ಬದಲಾಯಿತು. ಅಮೆರಿಕ ವಿಶ್ವದ ದೊಡ್ಡಣ್ಣನಾಗಿ ಅವತರಿಸಿತು.

    ರಷ್ಯಾ ಪರ ದೇಶಗಳು
    ಭಾರತ
    ರಷ್ಯಾಗೆ ಬಹಿರಂಗವಾಗಿ ಬೆಂಬಲ ಘೋಷಿಸಿಲ್ಲ. ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾದ ನಿಲುವನ್ನು ಖಂಡಿಸಿಲ್ಲ. ಉಕ್ರೇನ್ ಸಾರ್ವಭೌಮತ್ವದ ಬಗ್ಗೆ ಮಾತನಾಡಿಲ್ಲ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎನ್ನುತ್ತಿದೆ. 2014ರಲ್ಲಿ ರಷ್ಯಾ ಕ್ರಿಮಿಯಾವನ್ನು ವಶಕ್ಕೆ ಪಡೆದಾಗಲೂ ಭಾರತ ವಿರೋಧಿಸಿರಲಿಲ್ಲ. ಭಾರತದ ಸ್ಥಿತಿ ಹೇಗಿದೆ ಎಂದರೆ ಅಮೆರಿಕ ಜೊತೆ ನಿಲ್ಲುತ್ತಿಲ್ಲ. ರಷ್ಯಾ ಜೊತೆಗೂ ಬಹಿರಂಗವಾಗಿ ಕೈಜೋಡಿಸುತ್ತಿಲ್ಲ. ಯಾರನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಭಾರತ ಇಲ್ಲ.  ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

    ಚೀನಾ
    ನ್ಯಾಟೋ ವಿಸ್ತರಣೆ ಚೀನಾಗೂ ಇಷ್ಟವಿಲ್ಲ. ಇದನ್ನು ಬಹಿರಂಗವಾಗಿ ರಷ್ಯಾ ಜೊತೆ ಸೇರಿ ಘೋಷಿಸಿದೆ. ಈಗ ನಡೆಯುತ್ತಿರುವ ಯುದ್ಧವನ್ನು ಯುದ್ಧ ಎಂದೇ ಚೀನಾ ಪರಿಗಣಿಸಿಲ್ಲ.

    ಪಾಕಿಸ್ತಾನ
    ರಷ್ಯಾ ಪ್ರವಾಸದಲ್ಲಿ ಇಮ್ರಾನ್ ಇದ್ದಾರೆ. ಯುದ್ಧ ಶುರುವಾಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಎಂಥಾ ಟೈಮಲ್ಲಿ ಬಂದಿದ್ದೇನೆ.. ಸಿಕ್ಕಾಪಟ್ಟೆ ಎಕ್ಸೈಟ್ ಆಗ್ತಿದೆ ಎಂದು ಇಮ್ರಾನ್ ಹೇಳಿದ್ದಾರೆ.

    ಕ್ರೊವೇಷಿಯಾ
    2009ರಲ್ಲಿಯೇ ನ್ಯಾಟೋವನ್ನು ಸೇರಿದೆ. ಆದರೆ ಗಡಿ ಭದ್ರತೆ ವಿಚಾರದಲ್ಲಿ ಕ್ರೊವೇಷಿಯಾ ರಷ್ಯಾ ಪರವಾಗಿದೆ. ಜೊತೆಗೆ ಮೊನ್ನೆ ವಿಶ್ವಸಂಸ್ಥೆಯಲ್ಲಿ, ಉಕ್ರೇನ್ ದೇಶವನ್ನು ಮೂರು ಭಾಗ ಮಾಡಿದ ರಷ್ಯಾ ನಿಲುವನ್ನು ಖಂಡಿಸಿದೆ.

    ಅಜರ್‌ಬೈಜನ್‌
    ಅಜರ್ ಬೈಜಾನ್ ಅಧ್ಯಕ್ಷರು ರಷ್ಯಾ ಪ್ರವಾಸದಲ್ಲಿದ್ದು, ರಷ್ಯಾದ ಎಲ್ಲಾ ಕ್ರಮಗಳಿಗೆ ಭೇಷರತ್ ಬೆಂಬಲ ನೀಡಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್

    ಉಕ್ರೇನ್ ಪರ ದೇಶಗಳು
    ಅಮೆರಿಕ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ, ಫ್ರಾನ್ಸ್, ರೋಮೆನಿಯಾ, ಬಲ್ಗೇರಿಯಾ, ಸ್ಲೋವೇಕಿಯಾ, ಲಾಟ್ವೀಯಾ, ಎಸ್ಟೋನಿಯಾ,ಲಿಥುವೇನಿಯಾ, ಆಲ್ಬೇನಿಯಾ

  • 30 ವರ್ಷಗಳಿಂದ ತಾಯಿಯ ಮೃತದೇಹದ ಜೊತೆ ವಾಸಿಸುತ್ತಿದ್ದ ಮಹಿಳೆ

    30 ವರ್ಷಗಳಿಂದ ತಾಯಿಯ ಮೃತದೇಹದ ಜೊತೆ ವಾಸಿಸುತ್ತಿದ್ದ ಮಹಿಳೆ

    ಕೀವ್: ಮೃತದೇಹವನ್ನ ಮನೆಯ ಮುಂದೆ ಅಥವಾ ಮನೆಯ ಒಳಗೆಯೇ ಸಮಾಧಿ ಮಾಡಿರೋ ಸಾಕಷ್ಟು ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬರು ಮಹಿಳೆ ತನ್ನ ತಾಯಿಯ ಮೃತದೇಹವನ್ನ ಮಣ್ಣು ಮಾಡದೆ ಮನೆಯಲ್ಲೇ ಇಟ್ಟುಕೊಂಡು ಅದರೊಂದಿಗೆ ಸುಮಾರು 30 ವರ್ಷಗಳಿಂದ ವಾಸಿಸುತ್ತಿದ್ದರು ಅಂದರೆ ನೀವು ನಂಬಲೇಬೇಕು.

    ಉಕ್ರೇನ್ ನ 77 ವರ್ಷದ ಮಹಿಳೆ ತನ್ನ ತಾಯಿಯ ಮೃತದೇಹವನ್ನ ಕನಿಷ್ಟವಾದ್ರೂ 30 ವರ್ಷಗಳಿಂದ ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿನ ಮೈಕೋಲೇವ್ ನಗರದಲ್ಲಿ ಈ ಮಹಿಳೆ ವಾಸವಿದ್ದು, ನೆರೆಮನೆಯವರೊಬ್ಬರು ಫೋನ್ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಆ ವಿಳಾಸಕ್ಕೆ ಹೋಗಿ ನೋಡಿದಾಗ ಮಹಿಳೆಯ ಮನೆಯ ತುಂಬಾ ಕಸ ಹಾಗೂ ದಿನಪತ್ರಿಕೆಗಳ ರಾಶಿ ಬಿದ್ದಿತ್ತು. ಮೃತದೇಹವನ್ನ ಸೋಫಾ ಮೇಲೆ ಮಲಗಿಸಲಾಗಿತ್ತು. ಮೃತದೇಹ ಸಂರಕ್ಷಿತ ಸ್ಥತಿಯಲ್ಲಿತ್ತು. ದೇಹದ ಮೇಲೆ ಬಿಳಿ ಬಣ್ಣದ ವಸ್ತ್ರವಿದ್ದು, ಕಾಲುಗಳಿಗೆ ಹಸಿರು ಬಣ್ಣದ ಸಾಕ್ಸ್ ಮತ್ತು ನೀಲಿ ಬಣ್ಣದ ಶೂ ಹಾಕಲಾಗಿತ್ತು.

    ಮೃತರ ಮಗಳು ಈಗ ವೃದ್ಧೆಯಾಗಿದ್ದು, ಜೀವಂತವಾಗಿದ್ದರು. ಆದ್ರೆ ಅವರ ಎರಡೂ ಕಾಲುಗಳು ಪಾಶ್ರ್ವವಾಯುವಿಗೆ ಈಡಾಗಿದ್ದವು. ಮಹಿಳೆ ನೆಲದ ಮೇಲೆ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮನೆಯಲ್ಲಿ ನೀರು, ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯೂ ಇರಲಿಲ್ಲ.

    77 ವರ್ಷದ ಮಹಿಳೆಯನ್ನು ರಕ್ಷಣೆ ಮಾಡುವ ಸಲುವಾಗಿ ಫ್ಲ್ಯಾಟ್ ಒಳಗೆ ಪ್ರವೇಶಿಸಲು ಅಧಿಕಾರಿಗಳು ರಕ್ಷಣಾ ಸಿಬ್ಬಂದಿಯನ್ನ ಕರೆಸಿದರು. ಒಂದು ರೂಮಿನಲ್ಲಿ ಮಹಿಳೆ ಕಸದ ರಾಶಿಯ ನಡುವೆ ನೆಲದ ಮೇಲೆ ಕುಳಿತ ಸ್ಥಿತಿಯಲಿದ್ದರು. ಅವರು ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರಿಂದ ತುರ್ತು ಸಹಾಯ ಬೇಕಾಗಿತ್ತು. ಹೀಗಾಗಿ ಅವರಿಗಾಗಿ ಆಂಬುಲೆನ್ಸ್ ಕರೆಸಲಾಯಿತು. ಬೇರೆ ರೂಮ್‍ಗಳನ್ನ ಪರಿಶೀಲಿಸಿಸಾಗ ಮತ್ತೊಬ್ಬ ಮಹಿಳೆಯ ಮೃದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಮಹಿಳೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ನೆರೆಹೊರೆಯವರೊಂದಿಗೆ ಮಾತನಾಡುತ್ತಿರಲಿಲ್ಲ. ಅವರ ಮನೆಯ ಮುಂಬಾಗಿಲನ್ನ ತೆರೆದೇ ಇರಲಿಲ್ಲ. ಆದರೂ ನೆರೆಹೊರೆಯವರು ಅವರ ಆರೈಕೆ ಮಾಡುತ್ತಿದ್ದರು. ಮಹಿಳೆಗಾಗಿ ಮನೆ ಮುಂದೆ ಊಟ ಇಟ್ಟು ಹೋಗುತ್ತಿದ್ದರು. ಮಹಿಳೆ ತನ್ನ ತಾಯಿಯ ಮೃತದೇಹದೊಂದಿಗೆ ವಾಸಿಸುತ್ತಿದ್ದಾರೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಮೃತದೇಹವನ್ನ ಅಲ್ಲಿಂದ ತೆರವುಗಳಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳಸಲಾಗಿದೆ. ಮಹಿಳೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

  • ಇದ್ದಕ್ಕಿದ್ದಂತೆ ಅಂಡರ್‍ಗ್ರೌಂಡ್ ನೀರಿನ ಪೈಪ್ ಸ್ಫೋಟಗೊಂಡು ಕಾರುಗಳು ಜಖಂ- ವಿಡಿಯೋ ನೋಡಿ

    ಇದ್ದಕ್ಕಿದ್ದಂತೆ ಅಂಡರ್‍ಗ್ರೌಂಡ್ ನೀರಿನ ಪೈಪ್ ಸ್ಫೋಟಗೊಂಡು ಕಾರುಗಳು ಜಖಂ- ವಿಡಿಯೋ ನೋಡಿ

    ಕೀವ್: ಇದ್ದಕ್ಕಿದ್ದಂತೆ ಅಂಡರ್‍ಗ್ರೌಂಡ್ ನೀರಿನ ಪೈಪ್ ಸ್ಫೋಟಗೊಂಡು ಕಾರುಗಳ ಗಾಜು ಪುಡಿಪುಡಿಯಾಗಿ ಆಸ್ತಿಪಾಸ್ತಿಗೆ ನಷ್ಟವಾದ ಘಟನೆ ಸೋಮವಾರದಂದು ಉಕ್ರೇನ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಉಕ್ರೇನ್ ರಾಜಧಾನಿ ಕೀವ್‍ನಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭೂಮಿ ನಡುಗುವಂತೆ ಕಾಣಿಸಿದ್ದು ಇದ್ದಕ್ಕಿದ್ದಂತೆ ನೀರಿನ ಪೈಪ್ ಸ್ಫೋಟಗೊಂಡು ರಸ್ತೆ ತುಂಬಾ ಕೆಸರು ಹರಿದಿದೆ. ಸ್ಫೋಟದ ರಭಸಕ್ಕೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳ ಗಾಜು ಹಾಗೂ ಅಕ್ಕಪಕ್ಕದ ಮನೆಗಳ ಗಾಜುಗಳು ಪುಡಿಪುಡಿಯಾಗಿದೆ.

    ವಿಡಿಯೋದ ಆರಂಭದಲ್ಲಿ ರಸ್ತೆ ಪಕ್ಕದಲ್ಲೇ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರೋದನ್ನು ಕಾಣಬಹುದಾಗಿದ್ದು, ಸ್ಫೋಟದ ನಂತರ ಸಿಸಿಟಿವಿ ಕ್ಯಾಮೆರಾ ಕಡೆಗೆ ಮಣ್ಣು ಸಿಡಿದಿದ್ದರಿಂದ ಆಕೆಗೆ ಏನಾಯಿತು ಎಂಬ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಿಲ್ಲ. ಮತ್ತೊಂದು ಸಿಸಿಟಿವಿ ವಿಡಿಯೋದಲ್ಲಿ ಅಲ್ಲಿನ ನಿವಾಸಿಯೊಬ್ಬರು ಗಾಬರಿಯಿಂದ ಹೊರಬಂದು ನೋಡೋದನ್ನ ಕಾಣಬಹುದು.

    ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಸ್ಫೋಟದಿಂದಾಗಿ ಸುಮಾರು 7ನೇ ಮಹಡಿಯಷ್ಟು ಎತ್ತರಕ್ಕೆ ನೀರು ಚಿಮ್ಮಿದೆ ಎಂದು ಹೇಳಲಾಗಿದೆ. ಸ್ಫೋಟದಿಂದ ಸ್ಥಳೀಯ ನಿವಾಸಿಗಳ ಆಸ್ತಿಪಾಸ್ತಿಗಳಿಗೆ ನಷ್ಟವಾಗಿದೆ. ಘಟನೆಯ ನಂತರದ ಫೋಟೋಗಳನ್ನ ಕೆಲ ಸ್ಥಳೀಯ ಪತ್ರಕರ್ತರು ಹಂಚಿಕೊಂಡಿದ್ದಾರೆ.

    ಈ ಅವಘಢಕ್ಕೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಆದ್ರೆ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ಮತ್ತೊಬ್ಬ ಪತ್ರಕರ್ತರು ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ.

    https://www.youtube.com/watch?time_continue=13&v=eeSAEzHyC38

    https://www.facebook.com/avgusew/posts/10210048440903987

    https://www.facebook.com/roman.i.petushkov/posts/1525833887456554

    https://www.facebook.com/infocorr/videos/1753414164675901/