Tag: ukkadagatri

  • ಉಕ್ಕಡಗಾತ್ರಿ ಜಾತ್ರೆಗೆ ಬಂದಿದ್ದ ಯುವಕ ನದಿಯಲ್ಲಿ ಮುಳುಗಿ ಸಾವು

    ಉಕ್ಕಡಗಾತ್ರಿ ಜಾತ್ರೆಗೆ ಬಂದಿದ್ದ ಯುವಕ ನದಿಯಲ್ಲಿ ಮುಳುಗಿ ಸಾವು

    ದಾವಣಗೆರೆ: ತುಂಗಾಭದ್ರಾ ನದಿಯಲ್ಲಿ (Tungabhadra River) ಮುಳುಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ (Ukkadagatri) ನಡೆದಿದೆ.

    ಮೃತ ಯುವಕನನ್ನು ಹಿರೇಕೇರೂರು ತಾಲೂಕಿನ ಹದರಿಹಳ್ಳಿಯ ನಾಗರಾಜ್ (26) ಎಂದು ಗುರುತಿಸಲಾಗಿದೆ. ಯುವಕ ಕುಟುಂಬದವರೊಂದಿಗೆ ಉಕ್ಕಡಗಾತ್ರಿ ಕರಿ ಬಸವೇಶ್ವರ ರಥೋತ್ಸವಕ್ಕೆ ಆಗಮಿಸಿದ್ದ. ಈ ವೇಳೆ ನದಿಗೆ ಇಳಿದು ಸ್ನಾನ ಮಾಡುವಾಗ ಈ ಅವಘಡ ಸಂಭವಿಸಿದೆ.

    ಈ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಕ್ಕಿ ಹರಿಯುತ್ತಿರುವ ತುಂಗಭದ್ರ – ಉಕ್ಕಡಗಾತ್ರಿ ಸ್ನಾನಘಟ್ಟ, ಅಂಗಡಿಗಳು ಜಲಾವೃತ

    ಉಕ್ಕಿ ಹರಿಯುತ್ತಿರುವ ತುಂಗಭದ್ರ – ಉಕ್ಕಡಗಾತ್ರಿ ಸ್ನಾನಘಟ್ಟ, ಅಂಗಡಿಗಳು ಜಲಾವೃತ

    ದಾವಣಗೆರೆ: ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆ ದಾವಣಗೆರೆ (Davanagere) ಭಾಗದಲ್ಲಿ ತುಂಗಭದ್ರ ನದಿ (Tungabhadra river) ಉಕ್ಕಿ ಹರಿಯುತ್ತಿದೆ. ಪರಿಣಾಮ ಉಕ್ಕಡಗಾತ್ರಿ (Ukkadagatri) ದೇವಾಲಯದ ಸ್ನಾನ ಘಟ್ಟ ಹಾಗೂ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಳುಗಡೆಯಾಗಿವೆ.

    ತುಂಗಾ ನದಿಗೆ 75 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಹೊರ ಬಿಡಲಾಗಿದ್ದು, ಹೊನ್ನಾಳಿ, ಹರಿಹರ ಸೇರಿದಂತೆ ನದಿ ಪಾತ್ರದ ಪ್ರದೇಶಗಳು ಮುಳುಗಡೆಯಾಗಿವೆ. ಉಕ್ಕಡಗಾತ್ರಿಗೆ ಪ್ರವೇಶ ಮಾಡುವ ಒಂದು ರಸ್ತೆ ಸಹ ಮುಳುಗಡೆಯಾಗಿದೆ. ಅಲ್ಲದೇ ದೇವಾಲಯದ ಮುಂಭಾಗದವರೆಗೂ ನೀರು ಬಂದಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಕಾರ್ಮಿಕ ಇಲಾಖೆ ಹಣ ಗುಳುಂ – ಗುತ್ತಿಗೆ ನೌಕರನ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ

    ಉಕ್ಕಡಗಾತ್ರಿ ಭಾಗಕ್ಕೆ ಪ್ರವೇಶಿಸುವ ರಸ್ತೆಗೆ ಸೂಕ್ತ ಸೇತುವೆ ಮಾಡಿಸಿ ಎಂದು ದಶಕಗಳಿಂದ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ನದಿಯಲ್ಲಿ ನೀರು ಹೆಚ್ಚಾದಾಗ ಎರಡು ರಸ್ತೆಗಳು ಬಂದ್ ಆಗಿ ಜನರಿಗೆ ತೊಂದರೆಯಾಗುತ್ತದೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.

    ಮಳೆಯ ಅಬ್ಬರದಿಂದ ಹೊನ್ನಾಳಿ, ಹರಿಹರ ಸೇರಿದಂತೆ ಹಲವು ಕಡೆಗಳಲ್ಲಿ ವಸತಿ ಪ್ರದೇಶಕ್ಕೆ ನದಿಯ ನೀರು ನುಗ್ಗುವ ಆತಂಕ ಎದುರಾಗಿದೆ. ನದಿಯಲ್ಲಿ ಹೊರ ಹರಿವು ಕಡಿಮೆಯಾಗದಿದ್ದರೆ ಜನರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಬಳಿಕ ಮಾಲ್‌ನಲ್ಲಿ ರೈತನಿಗೆ ಅವಮಾನ – ಪಂಚೆ ಧರಿಸಿದ್ದಕ್ಕೆ ಮಾಲ್‌ ಒಳಗೆ ಬಿಡದ ಸಿಬ್ಬಂದಿ!

  • ದಾವಣಗೆರೆ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಜಾತ್ರೆ – ಸಾವಿರಾರು ಭಕ್ತರು ಭಾಗಿ

    ದಾವಣಗೆರೆ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಜಾತ್ರೆ – ಸಾವಿರಾರು ಭಕ್ತರು ಭಾಗಿ

    ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಅಜ್ಜಯ್ಯನ ಸುಕ್ಷೇತ್ರದಲ್ಲಿ ವಿಶಿಷ್ಟ ಜಾತ್ರೆ ನಡೆಯುತ್ತಿದೆ. ಮಾನಸಿಕ ಕಾಯಿಲೆಯಿಂದ ಹಿಡಿದು ಎಲ್ಲಾ ರೋಗಗಳನ್ನು ವಾಸಿ ಮಾಡುವ ಶಕ್ತಿ ಈ ಕ್ಷೇತ್ರಕ್ಕಿದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

    ಪ್ರತಿ ಅಮಾವಾಸ್ಯೆಯಲ್ಲಿ ಈ ಕ್ಷೇತ್ರದಲ್ಲಿ ವಿಶಿಷ್ಟವಾದ ಪೂಜೆ ನಡೆಯುತ್ತವೆ. ಅದರಲ್ಲೂ ವರ್ಷದ ಶಿವರಾತ್ರಿ ಅಮಾವಾಸ್ಯೆ ನಂತರ ನಡೆಯುವ ಅಜ್ಜಯ್ಯನ ರಥೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ನೆರೆದು ಜಾತ್ರೆಯನ್ನು ವಿಜೃಂಭಣೆಯಿಂದ ನೆರವೇರಿಸುತ್ತಾರೆ. ಬೆಳ್ಳಗ್ಗೆಯಿಂದಲೂ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಗೆ ವಿಶೇಷವಾದ ಪೂಜೆ ಪುನಸ್ಕಾರ ನಡೆಯುತ್ತವೆ. ಮೊದಲಿಗೆ ಅಜ್ಜಯ್ಯನ ಗದ್ದುಗೆ ಪೂಜೆ ನಡೆಸಿ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾರೆ.

     

    ಅಜ್ಜಯ್ಯನ ಪವಾಡವನ್ನು ನಂಬಿ ಲಕ್ಷಾಂತರ ಮಂದಿ ಭಕ್ತ ಸಂಕುಲವೇ ಇಲ್ಲಿ ನೆರೆಯುತ್ತದೆ. ಶಿವರಾತ್ರಿ ಬಳಿಕ ಅಮವಾಸ್ಯೆಯಂದು ನಡೆಯುವ ಜಾತ್ರೆಯಲ್ಲಿ ಕ್ಷುದ್ರ ಶಕ್ತಿಗಳಿಂದ ತೊಂದರೆ ಅನುಭವಿಸುತ್ತಿರುವ ಭಕ್ತರನ್ನು ಪಾರು ಮಾಡುವ ಶಕ್ತಿ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಗೆ ಇದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

    ಹೀಗಾಗಿ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಕಷ್ಟಗಳನ್ನು ಅಜ್ಜಯ್ಯನ ಮುಂದಿಟ್ಟು ಬೇಡಿಕೊಳ್ಳುತ್ತಾರೆ. ಶ್ರೀ ಕ್ಷೇತ್ರಗಳಲ್ಲಿ ಒಂದಾದ ಉಕ್ಕಡಗಾತ್ರಿಯಲ್ಲಿ ರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ನಂಬಿದ ಭಕ್ತರಿಗೆ ಕ್ಷೇಮವನ್ನಾಚಿಸುವ ಶ್ರೀ ಕರಿಬಸವೇಶ್ವರನ ದರ್ಶನ ಪಡೆದು ಭಕ್ತಾದಿಗಳು ಪುನೀತರಾಗುತ್ತಾರೆ.