Tag: uk women

  • ಹೆಂಡ್ತಿಯನ್ನ ಕ್ರೂರವಾಗಿ ಕೊಂದು, 200 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ ಹಂತಕ!

    ಹೆಂಡ್ತಿಯನ್ನ ಕ್ರೂರವಾಗಿ ಕೊಂದು, 200 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ ಹಂತಕ!

    – ಮೃತದೇಹ ವಿಲೇವಾರಿಗೆ 50 ಡಾಲರ್‌ ಕೊಟ್ಟಿದ್ದ – ಪಾಪಿ ಪತಿ ಸಿಕ್ಕಿಬಿದ್ದದ್ದು ಹೇಗೆ?

    ಲಂಡನ್‌: ಯುಕೆನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು (UK Murder Case) ಬೆಳಕಿಗೆ ಬಂದಿದೆ. 28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನ ಚಾಕುವಿನಿಂದ ಹಿರಿದು ಕೊಂದಿರುವ ಘಟನೆ ನಡೆದಿದೆ. ಹತ್ಯೆಗೈದ ಬಳಿಕ ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ, ಒಂದು ವಾರ ಅಡುಗೆಮನೆಯಲ್ಲಿಟ್ಟು, ಬಳಿಕ ತನ್ನ ಸ್ನೇಹಿತನ ಸಹಾಯದಿಂದ ನದಿಗೆ ಎಸೆದಿದ್ದಾನೆ.

    ಆರೋಪಿ (Accused) ನಿಕೋಲಸ್‌ ಮೆಟ್ಸನ್‌ (28), ತನ್ನ ಪತ್ನಿ ಹಾಲಿ ಬ್ರಾಮ್ಲಿ (26)ಯನ್ನ ಕಳೆದ ಮಾರ್ಚ್‌ 26 ರಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ವಯನಾಡ್ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ ಪ್ರಕರಣ – 29 ಗಂಟೆಗಳ ಕಾಲ ನಿರಂತರ ಹಲ್ಲೆ

    ತುಂಡು ದೇಹ ವಿಲೇವಾರಿಗೆ 50 ಡಾಲರ್‌ ಕೊಟ್ಟಿದ್ದ:
    ತನ್ನ ಹೆಂಡತಿಯನ್ನ ಕ್ರೂರವಾಗಿ ಹತ್ಯೆಗೈದಿದ್ದ ಮೆಟ್ಸನ್‌, ಬಳಿಕ ಸ್ನಾನದ ಕೋಣೆಯಲ್ಲಿ ಆಕೆಯ ಮೃತದೇಹವನ್ನ 200 ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಟ್ಟಿದ್ದ. ದೇಹ ದುರ್ವಾಸನೆ ಬೀರದಂತೆ ನೋಡಿಕೊಳ್ಳಲು ತಂಪಾದ ಪ್ರದೇಶದಲ್ಲಿ ಇಟ್ಟಿದ್ದ, ಜೊತೆಗೆ ರೂಮ್‌ ಸ್ಪ್ರೇ ಸಿಂಪಡಣೆ ಮಾಡುತ್ತಿದ್ದ. ಮೃತ ಮಹಿಳೆಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಒಂದು ವಾರದ ಬಳಿಕ ವಿಚಾರಣೆಗಾಗಿ ಹಂತಕನ ಮನೆಗೆ ಬಂದಿದ್ದರು. ಆದ್ರೆ ಭೂಪ ಮೆಟ್ಸನ್‌ ಅದಕ್ಕೂ ಮುನ್ನವೇ ತನ್ನ ಸ್ನೇಹಿತನಿಗೆ 50 ಡಾಲರ್‌ ಕೊಟ್ಟು ತುಂಡು ದೇಹವನ್ನ ವಿಲೇವಾರಿ ಮಾಡಿಸಿದ್ದ. ತಾನು ಪ್ರಕರಣದಲ್ಲಿ ಸಿಕ್ಕ ಬಳಿಕವೇ ಈ ಸತ್ಯವನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು (UK Police) ತಿಳಿಸಿದ್ದಾರೆ. ಇದನ್ನೂ ಓದಿ: ಹದಿಹರೆಯದ ಹುಡುಗರೇ ಇವಳ ಟಾರ್ಗೆಟ್‌ – ಸೆಕ್ಸ್‌ಗಾಗಿ 14 ವರ್ಷದ ಹುಡುಗಿಯಂತೆ ನಟಿಸಿದ್ದ ಮಾಯಗಾತಿ ಅರೆಸ್ಟ್‌!

    ನದಿಯಲ್ಲಿ ತುಂಡು ದೇಹ ಸಿಕ್ಕಿದ್ದು ಹೇಗೆ?
    ತನ್ನ ಸ್ನೇಹಿತ ಸಹಾಯದಿಂದ ಮೆಟ್ಸನ್‌ ಮೃತ ಹೆಂಡತಿಯ ತುಂಡು ದೇಹವನ್ನು ನದಿಯಲ್ಲಿ ಬಿಸಾಡಿದ ಮರುದಿನ ಬೆಳಗ್ಗೆ ಅಲ್ಲೇ ವಾಕಿಂಗ್‌ ಮಾಡುತ್ತಿದ್ದ ಸ್ಥಳೀಯರು ತೇಲುತ್ತಿದ್ದ ಪ್ಲಾಸ್ಟಿಕ್‌ ಚೀಲವೊಂದನ್ನು ಗಮನಿಸಿದರು. ಅನುಮಾನಗೊಂಡು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಬಳಿಕ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ಮಹಿಳೆಯ ಕೈ-ಕಾಲುಗಳು, ತಲೆ, ದೇಹದ ಇತರ ತುಂಡಾಗಿರುವ 200ಕ್ಕೂ ಹೆಚ್ಚು ಬಿಡಿ ಭಾಗಗಳು ಕಂಡುಬಂದಿತು. ಪೊಲೀಸರಿಗೆ ಮೃಹ ದೇಹ ಯಾರದ್ದು ಅಂತಾ ಗುರುತಿಸೋದಕ್ಕೆ ಕೆಲ ದಿನಗಳು ಬೇಕಾಯಿತು. ಕಳೆದ ಮಾರ್ಚ್‌ 24 ರಂದು ಲಿಂಕನ್‌ಶೈರ್ ಪೊಲೀಸರು ಬ್ರಾಮ್ಲಿ ಅವರ ನಿವಾಸಕ್ಕೆ ವಿಚಾರಣೆಗೆ ತೆರಳಿದ್ದರು. ಈ ವೇಳೆ ಮೆಟ್ಸನ್‌ ಮಾತುಗಳಿಂದ ಅನುಮಾನಗೊಂಡ ಪೊಲೀಸರು ಆತನನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಾನೇ ಕೊಂದಿರುವುದಾಗಿ ಸತ್ಯ ಒಪ್ಪಿಕೊಂಡನು. ಬಳಿಕ ಆತನನ್ನ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಗಂಡ-ಹೆಂಡತಿ ನಡುವೆ ಕೌಟುಂಬಿಕ ಕಲಹ ನಡೆದಿತ್ತು ಎಂಬ ವಿಚಾರವನ್ನು ಮೆಟ್ಸನ್‌ ನ್ಯಾಯಾಲಯಕ್ಕೆ ತಿಳಿಸಿದ್ದನು.

    ಹಂತಕನಿಗೆ ಮಾನಸಿಕ ಕಾಯಿಲೆ ಇರೋದು ನಿಜವೇ?
    ಸದ್ಯ ಆರೋಪಿ ಮತ್ತು ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್‌ ಮೆಟ್ಸನ್‌ನನ್ನ ಅಪರಾಧಿ ಎಂದು ಪರಿಗಣಿಸಿದೆ. ಈ ನಡುವೆ ಹಂತಕನ ಪರ ವಕೀಲರು ಮೆಟ್ಸನ್‌ ಆಟಿಸಂ ಸ್ಪೆಕ್ಟ್ರಮ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಮಾನಸಿಕವಾಗಿ ಒತ್ತಡ ಉಂಟಾಗಿದ್ದರಿಂದ ಅವನು ಹಾಗೆ ಮಾಡಿರಬಹುದು ಎಂದು ವಾದಿಸಿದ್ದಾರೆ.‌ ಈ ಹಿನ್ನೆಲೆಯಲ್ಲಿ ಕೋರ್ಟ್‌ ಮೆಟ್ಸನ್‌ಗೆ ಶಿಕ್ಷೆಯನ್ನು ಕಾಯ್ದಿರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜನರ ಸಮಸ್ಯೆ ಏನೇ ಇದ್ರೂ ಸಹಾಯಕ್ಕೆ ಬರೋದು ನಾವೇ, ದೆಹಲಿಯಿಂದ ಯಾರೂ ಬರಲ್ಲ: ಡಿಕೆಶಿ

  • ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

    ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

    ಲಂಡನ್: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ನಿತ್ಯ ನಿಯಮಿತ ಪ್ರಮಾಣದಲ್ಲಿ ನಿದ್ರೆ ಮಾಡುವುದು ಅಗತ್ಯ. ದಿನಕ್ಕೆ 8 ಗಂಟೆ ನಿದ್ರೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡುವುದು ಕಾಮನ್.‌ ಹೀಗಿದ್ದೂ ಕೆಲಸದ ಒತ್ತಡ, ಬದಲಾದ ಜೀವನ ಶೈಲಿ ಕಾರಣಕ್ಕೆ ಎಷ್ಟೋ ಮಂದಿ ಸರಿಯಾಗಿ ನಿದ್ರೆ ಮಾಡುವುದು. ಆದ್ರೆ ಕೆಲವರು ಸೋಂಬೇರಿಗಳಂತೆ ಹೆಚ್ಚಿನ ಸಮಯ ನಿದ್ರೆ ಮಾಡುತ್ತಾರೆ. ಆದರೆ ಯುಕೆನಲ್ಲಿ ಮಹಿಳೆಯೊಬ್ಬರು ನಿದ್ರೆ ಮಾಡುವ ಸಮಯ ಕೇಳಿದ್ರೆ ನೀವು ಶಾಕ್‌ ಆಗ್ತೀರಾ!

    ಇಂಗ್ಲೆಂಡ್‌ನಲ್ಲಿ (England) 38 ವಯಸ್ಸಿನ ಮಹಿಳೆಯೊಬ್ಬರು ದಿನ 24 ಗಂಟೆಯಲ್ಲಿ 22 ಗಂಟೆಗಳ ಕಾಲ ನಿದ್ರೆ ಮಾಡ್ತಾರೆ. ಇಷ್ಟು ಸಮಯ ನಿದ್ರೆ ಮಾಡುವ ಅಸಮಾನ್ಯ ಸಾಮರ್ಥ್ಯ ಹೊಂದಿರುವ ಈ ಮಹಿಳೆ ʼಸ್ಲೀಪಿಂಗ್‌ ಬ್ಯೂಟಿʼ (Sleeping Beauty) ಎಂದೇ ಹೆಸರಾಗಿದ್ದಾರೆ. ಮಹಿಳೆಗಿರುವ ವಿಶೇಷ ಕಾಯಿಲೆಯೇ ಈಕೆ ನಿತ್ಯ ಹೀಗೆ 22 ಗಂಟೆಗಳ ಕಾಲ ನಿದ್ರೆ ಮಾಡುವುದಕ್ಕೆ ಪ್ರಮುಖ ಕಾರಣವಂತೆ. ಇದನ್ನೂ ಓದಿ: ಸುಂದರಿಯ ದೇಹವನ್ನು ತುಂಡಾಗಿ ಕತ್ತರಿಸಿ, ತಲೆಯನ್ನು ಸೂಪ್ ಮಾಡಲು ಇಟ್ಟಿದ್ರು..!

    ಅಂದಹಾಗೆ, ಈಕೆ ಹೆಸರು ಜೊವಾನ್ನಾ ಕಾಕ್ಸ್. ಇಂಗ್ಲೆಂಡ್‌ನ ವೆಸ್ಟ್ ಕ್ಯಾಸಲ್‌ಫೋರ್ಡ್‌ನಲ್ಲಿ ವಾಸವಾಗಿದ್ದಾರೆ. ಹಾಗಾದ್ರೆ ಈಕೆಗಿರುವ ವಿಶೇಷ ಕಾಯಿಲೆಯಾದರೂ ಏನು ಅಂತಾ ಕೇಳ್ತೀರಾ? ಈ ಕಾಯಿಲೆ ಹೆಸರು ʼಇಡಿಯೋಪಥಿಕ್ ಹೈಪರ್ಸೋಮ್ನಿಯಾʼ ಅಂತಾ. 2021 ರಲ್ಲಿ ಅವರಿಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ಇದರಿಂದ ಜನರಿಗೆ ಹಗಲಿನಲ್ಲೂ ನಿದ್ರೆಯ ತೀವ್ರತೆ ಹೆಚ್ಚಾಗಿರುತ್ತದೆ. ಆಗಾಗ್ಗೆ ಎಚ್ಚರಗೊಳ್ಳಲು ಹೆಣಗಾಡುತ್ತಾರೆ.

    “ಒಮ್ಮೆ ಮಲಗಿದ ಮೇಲೆ ನನ್ನನ್ನು ಎಬ್ಬಿಸಲು ಸಾಧ್ಯವಿಲ್ಲ. ನಾನು ಎಚ್ಚರಗೊಂಡಾಗ ಎಷ್ಟು ಸಮಯ ನಿದ್ರೆ ಮಾಡಿದೆ ಎಂಬುದೇ ತಿಳಿಯುವುದಿಲ್ಲ. ಒಮ್ಮೊಮ್ಮೆ ನಾನು ಎಚ್ಚರಗೊಳ್ಳದೇ ಸತತ ನಾಲ್ಕು ದಿನ ನಿದ್ರೆ ಮಾಡಿದ್ದೇನೆ. ಇದು ನನ್ನ ಜೀವನವನ್ನೇ ಹಾಳು ಮಾಡುತ್ತಿದೆ” ಎಂದು ಕಾಕ್ಸ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ʼಲೇಡಿ ಅಲ್‌ ಖೈದಾʼ ಕರೆತರಲು ಪಾಕ್‌ ಸರ್ಕಾರಕ್ಕೆ ಒತ್ತಾಯ – 13 ವರ್ಷಗಳಿಂದ ಅಮೆರಿಕ ಜೈಲಲಿದ್ದಾಳೆ ಪಾಕ್‌ ಸುಂದರಿ

    ಈಕೆ ಪ್ರೊಟೀನ್ ಶೇಕ್‌ಗಳು ಮತ್ತು ಪೋಷಕಾಂಶಯುಕ್ತ ಊಟದಿಂದ ಬದುಕುಳಿದಿದ್ದಾರೆ. ಏಕೆಂದರೆ ಹೆಚ್ಚಿನ ಸಮಯ ನಿದ್ರೆಯಲ್ಲೇ ಇದ್ದಾಗ ದೇಹಕ್ಕೆ ಅಗತ್ಯ ಪೋಷಕಾಂಶದ ಕೊರತೆ ಹೆಚ್ಚು ಬಾಧಿಸಬಹುದು.

  • ಕಳ್ಳತನ ಮಾಡಿದ್ದೇನೆಂದು ನಿದ್ರೆಯಲ್ಲಿದ್ದಾಗ ಕನವರಿಸಿದ ಪತ್ನಿ – ಪೊಲೀಸರಿಗೆ ದೂರು ನೀಡಿದ ಪತಿ!

    ಕಳ್ಳತನ ಮಾಡಿದ್ದೇನೆಂದು ನಿದ್ರೆಯಲ್ಲಿದ್ದಾಗ ಕನವರಿಸಿದ ಪತ್ನಿ – ಪೊಲೀಸರಿಗೆ ದೂರು ನೀಡಿದ ಪತಿ!

    ಲಂಡನ್: ನಿದ್ರೆಯಲ್ಲಿದ್ದಾಗ ತಾನು ಕಳ್ಳತನ ಮಾಡಿದ್ದೇನೆ ಎಂದು ಪತ್ನಿ ಕನವರಿಸಿರುವುದನ್ನು ಕೇಳಿಕೊಂಡು ಪತಿ, ಪೊಲೀಸ್ ಠಾಣೆಗೆ ಪತ್ನಿ ವಿರುದ್ಧ ದೂರು ನೀಡಿರುವ ಪ್ರಸಂಗ ಲಂಡನ್‌ನಲ್ಲಿ ನಡೆದಿದೆ.

    ರುತ್ ಫೋರ್ಟ್ ಎಂಬ ಮಹಿಳೆ ವಿರುದ್ಧ ಆಕೆಯ ಪತಿ ಆಂಟೊನಿ ಫೋರ್ಟ್ ದೂರು ನೀಡಿದ್ದಾನೆ. ರುತ್ ಫೋರ್ಟ್ಗೆ ಮಲಗಿದ್ದಾಗ ಕನವರಿಸುವ ಕಾಯಿಲೆ ಇದೆ. ಒಮ್ಮೆ ಆಕೆ ನಿದ್ರೆಯಲ್ಲಿದ್ದಾಗ ತಾನು ಆರೈಕೆ ಮಾಡುತ್ತಿರುವ ವೃದ್ಧೆಯೊಬ್ಬರ ಪರ್ಸ್ನಲ್ಲಿದ್ದ 7,000 ಪೌಂಡ್ ಹಣವನ್ನು ಕದ್ದಿರುವುದಾಗಿ ಕನವರಿಸಿದ್ದಾಳೆ. ಇದನ್ನು ಆಕೆಯ ಪತಿ ಕೇಳಿಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಇದನ್ನೂ ಓದಿ: ತಾಲಿಬಾನ್ ಆಡಳಿತ – ಉದ್ಯೋಗ ಕಳೆದುಕೊಂಡು 5 ಲಕ್ಷ ಅಫ್ಘಾನಿಸ್ತಾನಿಯರು ಕಂಗಾಲು

    ರುತ್ ಫೋರ್ಟ್, ಮನೆಯೊಂದರಲ್ಲಿ ಗಾಲಿಕುರ್ಚಿ ಆಶ್ರಿತ ವೃದ್ಧೆಯೊಬ್ಬರ ಆರೈಕೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ಪರ್ಸ್ನಲ್ಲಿ ಹಣ ಕಂಡು, ಅದನ್ನು ಯಾರಿಗೂ ತಿಳಿಯದಂತೆ ಕಳ್ಳತನ ಮಾಡಿದ್ದಳು.

    ತನ್ನ ಪತ್ನಿಯ ಅಪರಾಧದ ಬಗ್ಗೆ ಪ್ರತಿಕ್ರಿಯಿಸಿರುವ ಆಂಟೊನಿ, ನಾನು ರುತ್‌ಳನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಅವಳು ಮಾಡಿದ ಅಪರಾಧವನ್ನು ಕ್ಷಮಿಸಲಾರೆ. ದುರ್ಬಲ ವ್ಯಕ್ತಿಯಿಂದ ಹಣವನ್ನು ಕಳ್ಳತನ ಮಾಡಿರುವುದು ಹೇಯ ಕೃತ್ಯ. ಆ ಕಾರಣದಿಂದಾಗಿ ನನ್ನ ಪತ್ನಿ ವಿರುದ್ಧ ದೂರು ನೀಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಕತ್ತರಿಯಲ್ಲಿ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನ- ರಕ್ತಮಡುವಿನಲ್ಲಿ ವ್ಯಕ್ತಿ ಪತ್ತೆ