Tag: uk pm

  • ಭಾರತದಲ್ಲಿ 9 ಬ್ರಿಟಿಷ್‌ ವಿವಿ ಕ್ಯಾಂಪಸ್‌ಗಳ ಸ್ಥಾಪನೆ: ಬ್ರಿಟನ್‌ ಪ್ರಧಾನಿ ಘೋಷಣೆ

    ಭಾರತದಲ್ಲಿ 9 ಬ್ರಿಟಿಷ್‌ ವಿವಿ ಕ್ಯಾಂಪಸ್‌ಗಳ ಸ್ಥಾಪನೆ: ಬ್ರಿಟನ್‌ ಪ್ರಧಾನಿ ಘೋಷಣೆ

    – ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆಗೆ ಪಿಎಂ ಮೋದಿ ದ್ವಿಪಕ್ಷೀಯ ಮಾತುಕತೆ
    – 12 ಒಪ್ಪಂದಗಳಿಗೆ ಸಹಿ; 2047 ರ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನ ಶ್ಲಾಘಿಸಿದ ಕೀರ್ ಸ್ಟಾರ್ಮರ್

    ಮುಂಬೈ: ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer) ಮುಂಬೈನ ರಾಜಭವನದಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಭೆಯಲ್ಲಿ ವ್ಯಾಪಾರ, ಹೂಡಿಕೆ, ರಕ್ಷಣೆ, ತಾಂತ್ರಿಕ ಸಹಕಾರ ಮತ್ತು ಎರಡೂ ದೇಶಗಳ ನಡುವಿನ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

    ಸಭೆಯಲ್ಲಿ ಒಟ್ಟು 12 ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದರು. ಎರಡೂ ದೇಶಗಳ ನಡುವಿನ ಸಹಯೋಗಕ್ಕಾಗಿ ವಿಷನ್ 2035 ಕಾಲಮಿತಿಯ ಕಾರ್ಯಸೂಚಿಯನ್ನು ಮುನ್ನಡೆಸುವತ್ತ ಗಮನಹರಿಸಿದೆ. ದ್ವಿಪಕ್ಷೀಯ ಒಪ್ಪಂದದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಪ್ರಧಾನಿ ಸ್ಟಾರ್ಮರ್ ಅವರ ನೇತೃತ್ವದಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧಗಳು ಹೊಸ ಎತ್ತರವನ್ನು ತಲುಪಿವೆ ಎಂದು ಹೇಳಿದರು. ಇದನ್ನೂ ಓದಿ: ಕತಾರ್‌ ಏರ್‌ವೇಸ್‌ ವಿಮಾನದಲ್ಲಿ ಸಸ್ಯಾಹಾರಿಗೆ ಮಾಂಸಾಹಾರ ನೀಡಿ ಯಡವಟ್ಟು – ಉಸಿರುಗಟ್ಟಿ ಪ್ರಯಾಣಿಕ ಸಾವು

    ಜುಲೈನಲ್ಲಿ ಬ್ರಿಟನ್‌ಗೆ ಭೇಟಿ ನೀಡಿದಾಗ, ಎರಡೂ ದೇಶಗಳ ನಡುವೆ ಐತಿಹಾಸಿಕ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (ಸಿಇಟಿಎ)ಕ್ಕೆ ಸಹಿ ಹಾಕಲಾಯಿತು. ಇದು ಭಾರತ-ಬ್ರಿಟನ್ ಪಾಲುದಾರಿಕೆಗೆ ದೊಡ್ಡ ಸಾಧನೆ. ಈ ಸಭೆ ಮತ್ತು ಜಂಟಿ ಹೇಳಿಕೆಯನ್ನು ಎರಡೂ ದೇಶಗಳ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧಗಳಿಗೆ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ ಎಂದರು.

    ಭಾರತ ಮತ್ತು ಬ್ರಿಟನ್ ನೈಸರ್ಗಿಕ ಪಾಲುದಾರರು. ನಮ್ಮ ಸಂಬಂಧದ ಅಡಿಪಾಯವು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ನಿಯಮದಂತಹ ಹಂಚಿಕೆಯ ಮೌಲ್ಯಗಳನ್ನು ಆಧರಿಸಿದೆ ಎಂದು ಅವರು ಹೇಳಿದರು. ಎರಡೂ ದೇಶಗಳು ಒಟ್ಟಾಗಿ ಜಾಗತಿಕ ಸವಾಲುಗಳನ್ನು ಎದುರಿಸಬಹುದು ಮತ್ತು ತಮ್ಮ ನಾಗರಿಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಹೇಳಿದರು.

    ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮಾತನಾಡಿ, ಭಾರತ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕರು ಎಂದು ಹೇಳಿದರು. ಈ ನಿಟ್ಟಿನಲ್ಲಿ, ಕೃತಕ ಬುದ್ಧಿಮತ್ತೆ (AI), ಸುಧಾರಿತ ಸಂವಹನ ಮತ್ತು ರಕ್ಷಣಾ ತಂತ್ರಜ್ಞಾನ ಸೇರಿದಂತೆ ಕ್ಷೇತ್ರಗಳಲ್ಲಿ ಹೊಸ ಒಪ್ಪಂದಗಳನ್ನು ಒಳಗೊಂಡಂತೆ ನಮ್ಮ ತಂತ್ರಜ್ಞಾನ ಮತ್ತು ಭದ್ರತಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ನಿರ್ಧರಿಸಿದ್ದೇವೆ ಎಂದರು. ಇದನ್ನೂ ಓದಿ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    2047 ರ ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ಸ್ಟಾರ್ಮರ್ ಶ್ಲಾಘಿಸಿದರು. 2028 ರ ವೇಳೆಗೆ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಪ್ರಧಾನಿ ಮೋದಿಯವರ ನಾಯಕತ್ವಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. 2047 ರ ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ನಿಮ್ಮ ದೃಷ್ಟಿಕೋನವು ಭಾರತವನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವತ್ತ ಒಂದು ಸ್ಪೂರ್ತಿದಾಯಕ ಹೆಜ್ಜೆಯಾಗಿದೆ. ನಾನು ಇಲ್ಲಿ ನೋಡಿರುವ ಎಲ್ಲವೂ ಭಾರತವು ತನ್ನ ಗುರಿಯತ್ತ ಬಲವಾಗಿ ಸಾಗುತ್ತಿದೆ ಎಂಬುದಕ್ಕೆ ಪುರಾವೆಯಾಗಿದೆ. ಈ ಪ್ರಯಾಣದಲ್ಲಿ ನಾವು ನಿಮ್ಮ ಪಾಲುದಾರರಾಗಲು ಬಯಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದರು.

    ಬ್ರಿಟನ್‌ನಲ್ಲಿ ಬಾಲಿವುಡ್ ಚಲನಚಿತ್ರಗಳನ್ನು ನಿರ್ಮಿಸಲು ನಾವು ಈಗ ಮಹತ್ವದ ಒಪ್ಪಂದವನ್ನು ಘೋಷಿಸುತ್ತಿದ್ದೇವೆ. ಶಿಕ್ಷಣದಲ್ಲಿ ನಮ್ಮ ಸಹಕಾರವನ್ನು ಸಹ ಗಾಢಗೊಳಿಸಲಾಗುತ್ತಿದೆ. ಭಾರತದ ಹೊಸ ಪೀಳಿಗೆ 2047 ರ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

    1. ನವೀನ ಉದ್ಯಮಗಳನ್ನು ಬೆಂಬಲಿಸಲು ಬ್ರಿಟನ್ ಸರ್ಕಾರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವಿನ ಒಪ್ಪಂದ
    2. ICMR ಮತ್ತು NIHR ನಡುವಿನ ಆರೋಗ್ಯ ಸಂಶೋಧನೆಗೆ ಸಂಬಂಧಿಸಿದ ಒಪ್ಪಂದ
    3. ಭಾರತ-ಯುಕೆ ಕನೆಕ್ಟಿವಿಟಿ ಅಂಡ್ ಇನ್ನೋವೇಶನ್ ಸೆಂಟರ್ ಸ್ಥಾಪನೆ
    4. ಭಾರತ-ಯುಕೆ ಜಂಟಿ AI ಸೆಂಟರ್ ಸ್ಥಾಪನೆ
    5. ಯುಕೆ-ಭಾರತ ಕ್ರಿಟಿಕಲ್ ಮಿನರಲ್ಸ್ ಸಪ್ಲೈ ಚೈನ್ ಆಬ್ಜರ್ವೇಟರಿ II ಹಂತದ ಲಾಂಚ್ ಮತ್ತು IIT-ISM ಧನ್‌ಬಾದ್‌ನಲ್ಲಿ ಹೊಸ ಸ್ಯಾಟ್‌ಲೈಟ್ ಕ್ಯಾಂಪಸ್ ಸ್ಥಾಪನೆ
    6. ಕ್ರಿಟಿಕಲ್ ಮಿನರಲ್ಸ್ ಇಂಡಸ್ಟ್ರಿ ಗಿಲ್ಡ್ ಸ್ಥಾಪನೆ
    7. ಬೆಂಗಳೂರಿನಲ್ಲಿ ಲ್ಯಾಂಕಾಸ್ಟರ್ ಯೂನಿವರ್ಸಿಟಿ ಕ್ಯಾಂಪಸ್ ತೆರೆಯಲು ಯುಕೆಯ ಲ್ಯಾಂಕಾಸ್ಟರ್ ಯೂನಿವರ್ಸಿಟಿ ಜೊತೆಗೆ ಒಪ್ಪಂದ
    8. ಗಿಫ್ಟ್ ಸಿಟಿಯಲ್ಲಿ ಯೂನಿವರ್ಸಿಟಿ ಆಫ್ ಸರ್ರೆ ಕ್ಯಾಂಪಸ್ ತೆರೆಯಲು ಮೂಲಭೂತ ಅನುಮೋದನೆ
    9. ಯುಕೆಯ ಯೂನಿವರ್ಸಿಟಿ ಆಫ್ ಸರ್ರೆ ಮತ್ತು ಭಾರತ ನಿರ್ಮಾಣ
    10. ಆಫ್‌ಷೋರ್ ವಿಂಡ್ ಟಾಸ್ಕ್‌ಫೋರ್ಸ್ ಸ್ಥಾಪನೆ

  • ಯುಕೆ ಪ್ರಧಾನಿ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಎಣ್ಣೆ, ಮಾಂಸ – ಬ್ರಿಟಿಷ್‌ ಹಿಂದೂಗಳು ಶಾಕ್‌!

    ಯುಕೆ ಪ್ರಧಾನಿ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಎಣ್ಣೆ, ಮಾಂಸ – ಬ್ರಿಟಿಷ್‌ ಹಿಂದೂಗಳು ಶಾಕ್‌!

    ಬ್ರಿಟನ್: ಯುಕೆ ಪ್ರಧಾನಿ (UK PM) ಕೀರ್‌ ಸ್ಟಾರ್ಮರ್‌ ಆಯೋಜಿಸಿದ್ದ ದೀಪಾವಳಿ (Diwali Party) ಪಾರ್ಟಿಯಲ್ಲಿ ಮಾಂಸ, ಮದ್ಯ ಕಂಡು ಬ್ರಿಟಿಷ್‌ ಹಿಂದೂಗಳು ಶಾಕ್‌ ಆಗಿದ್ದಾರೆ.

    ಪ್ರಧಾನಮಂತ್ರಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ, ಸಮುದಾಯದ ಮುಖಂಡರು ಮತ್ತು ಉನ್ನತ ರಾಜಕಾರಣಿಗಳು ಭಾಗವಹಿಸಿದ್ದರು. ದೀಪಾಲಂಕಾರದ ದೀಪಗಳು, ಕೂಚಿಪುಡಿ ನೃತ್ಯ ಪ್ರದರ್ಶನ ಮತ್ತು ಸ್ಟಾರ್ಮರ್ ಅವರ ಭಾಷಣವನ್ನು ಸಮಾರಂಭ ಒಳಗೊಂಡಿತ್ತು. ಇದನ್ನೂ ಓದಿ: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 25ಕ್ಕೂ ಅಧಿಕ ಸಾವು

    ಕೆಲವರು ಬ್ರಿಟಿಷ್ ಹಿಂದೂಗಳು, ಊಟದ ಮೆನುವಿನಲ್ಲಿ ಮದ್ಯ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿರುವುದನ್ನು ಕಂಡು ಆಘಾತ ವ್ಯಕ್ತಪಡಿಸಿದರು. ಅತಿಥಿಗಳಿಗೆ ಲ್ಯಾಂಬ್ ಕಬಾಬ್‌, ಬಿಯರ್ ಮತ್ತು ವೈನ್ ಅನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.

    ಕಳೆದ ವರ್ಷ ರಿಷಿ ಸುನಕ್ ದೀಪಾವಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಊಟದ ಮೆನುವಿನಲ್ಲಿ ಮಾಂಸ ಮತ್ತು ಮದ್ಯ ಇರಲಿಲ್ಲ. ಪ್ರಮುಖ ಬ್ರಿಟಿಷ್ ಹಿಂದೂ ಪಂಡಿತರಾದ ಸತೀಶ್ ಕೆ ಶರ್ಮಾ ಅವರು, ಪ್ರಧಾನ ಮಂತ್ರಿ ಕಚೇರಿಯಲ್ಲಿ ಸಂವೇದನಾಶೀಲತೆ ಕೊರತೆ ಎದ್ದು ಕಂಡಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ದಿನಕ್ಕೆ ಒಂದಲ್ಲ.. 16 ಬಾರಿ ಆಗುತ್ತೆ ಸೂರ್ಯೋದಯ, ಸೂರ್ಯಾಸ್ತ – ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್‌ಗೆ ಆಗ್ತಿರೋ ಅನುಭವಗಳೇನು?

    ಕಳೆದ 14 ವರ್ಷಗಳಿಂದ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ದೀಪಾವಳಿ ಆಚರಣೆಯು ಮಾಂಸ ಮತ್ತು ಮದ್ಯಪಾನವಿಲ್ಲದೇ ನಡೆಯುತ್ತಿದೆ. ಈ ವರ್ಷದ ಆಚರಣೆಯು ಮಾಂಸಾಹಾರ-ಪ್ರೇರಿತ ಮೂರ್ಖತನದ ಪ್ರಾಬಲ್ಯದ ಘಟನೆಯಾಗಿ ಕಂಡುಬಂದಿದ್ದರಿಂದ ನಾನು ನಿರಾಶೆಗೊಂಡಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ. ಇದು ದುರಂತ. ಪ್ರಧಾನ ಮಂತ್ರಿಯ ಸಲಹೆಗಾರರು ತುಂಬಾ ಅಸಡ್ಡೆ ಮತ್ತು ನಿರ್ಲಕ್ಷ್ಯದಿಂದ ಇರುತ್ತಿದ್ದರು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 10, ಡೌನಿಂಗ್ ಸ್ಟ್ರೀಟ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • PublicTV Explainer: ಕರ್ನಾಟಕದ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ

    PublicTV Explainer: ಕರ್ನಾಟಕದ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ

    ಭಾರತ ಮೂಲದ ರಿಷಿ ಸುನಾಕ್‌ (Rishi Sunak) ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದನ್ನು ಭಾರತೀಯರಂತೂ ಇನ್ನಿಲ್ಲದಂತೆ ಸಂಭ್ರಮಿಸಿದ್ದಾರೆ. ನಮ್ಮ ದೇಶದ ಮೂಲದವರೇ ಆದ, ಬಿಳಿಯರಲ್ಲದ ವ್ಯಕ್ತಿಯೊಬ್ಬ ಬ್ರಿಟನ್‌ ಪ್ರಧಾನಿಯಾಗಿದ್ದಾರೆಂದು ಹೆಮ್ಮೆ ಪಟ್ಟಿದ್ದಾರೆ. ಒಂದು ಕಾಲದಲ್ಲಿ ಭಾರತವನ್ನು ಆಳಿದ ನಾಡಿದ ಆಡಳಿತ ಚುಕ್ಕಾಣಿಯನ್ನು ಈಗ ಭಾರತದ ಮೂಲದವರೇ ಹಿಡಿದಿದ್ದಾರೆಂದು ಗರ್ವ ಪಡುತ್ತಿದ್ದಾರೆ ಕೂಡ.

    ಸುನಾಕ್‌ ಪ್ರಧಾನಿಯಾದ ಬೆನ್ನಲ್ಲೇ ಇಂಟರ್‌ನೆಟ್‌ನಲ್ಲಿ ಕೆಲವು ತಮಾಷೆಯ ಮೀಮ್ಸ್‌ಗಳು ಸಹ ಹರಿದಾಡುತ್ತಿವೆ. ಮನೆಯ ಹೊರಗೆ ಚಪ್ಪಲಿಗಳನ್ನು ಬಿಟ್ಟಿರುವುದು (ಸಾಮಾನ್ಯವಾಗಿ ಭಾರತೀಯರು ಮನೆಯ ಒಳಗಡೆ ಚಪ್ಪಲಿ, ಶೂ ಧರಿಸಿ ಹೋಗುವುದಿಲ್ಲ), ಬಾಗಿಲಲ್ಲಿ ಸ್ವಸ್ತಿಕ್‌ ಮುದ್ರೆ ಇರುವುದು (ಪ್ರಚೀನ ಹಿಂದೂ ಮಂಗಳಕರ ಚಿಹ್ನೆ). ಥೇಟ್‌ ಭಾರತ ಕ್ರಿಕೆಟ್‌ ತಂಡದ ಮಾಜಿ ಬೌಲರ್ ಆಶಿಶ್‌ ನೆಹ್ರಾರಂತೆ ರಿಷಿ ಸುನಾಕ್‌ ಕಾಣುತ್ತಾರೆ ಎನ್ನುವಂತಹ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಬ್ರಿಟನ್ ನೂತನ ಪ್ರಧಾನಿ ಭಾರತ ಮೂಲದ ರಿಷಿ ಸುನಾಕ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳಿವು

    ಆದರೆ ಬ್ರಿಟನ್‌ನ 57ನೇ ಪ್ರಧಾನಿ ರಿಷಿ ಸುನಾಕ್‌ ಬಗ್ಗೆ ನೀವು ತಿಳಿಯದ ಎಷ್ಟೋ ವಿಷಯಗಳಿವೆ. ಅದನ್ನು ಕೇಳಿದರೆ ನೀವು ನಿಜಕ್ಕೂ ಶಾಕ್‌ ಆಗುತ್ತೀರಾ. ಆ ಸೀಕ್ರೆಟ್‌ ವಿಷಯಗಳೇನು ಗೊತ್ತಾ?

    1) ರಿಷಿ ಸುನಾಕ್‌ ನಿಜವಾಗಿಯೂ ʼಭಾರತೀಯʼ ಅಲ್ಲ
    ಸುನಕ್ ತಮ್ಮದು ʼಭಾರತೀಯ ಬೇರು’ ಎಂದು ಕರೆದುಕೊಂಡಿದ್ದಾರೆ. ನೀವು ನೆನಪಿಡಬೇಕು, ಅದು ಸ್ವಾತಂತ್ರ್ಯಪೂರ್ವ, ಅವಿಭಜಿತ ಭಾರತದ ಕಾಲದ್ದು. ಇಂದಿನ ಭಾರತದ್ದಲ್ಲ.

    ಪ್ರಧಾನಿ ಸುನಾಕ್ ಕುಟುಂಬವು ಪಂಜಾಬಿ ಖತ್ರಿಯಾಗಿದೆ. ಈಗಿನ ಪಾಕಿಸ್ತಾನದ ಲಾಹೋರ್‌ನ ಉತ್ತರದಲ್ಲಿರುವ ಗುಜ್ರಾನ್‌ವಾಲಾದಲ್ಲಿ ನೆಲಮೂಲದ ಬೇರುಗಳನ್ನು ಹೊಂದಿದೆ. ಕುಟುಂಬದ ಇತಿಹಾಸವನ್ನು ತಿಳಿದಿರುವ ತಜ್ಞರ ಪ್ರಕಾರ, ಸುನಾಕ್ ಅವರ ಅಜ್ಜ ರಾಮದಾಸ್ ಸುನಾಕ್ ಅವರು 1935 ರಲ್ಲಿ ಕೀನ್ಯಾದ ನೈರೋಬಿಗೆ ವಲಸೆ ಹೋದರು. ಅಲ್ಲಿ ಅವರು ಗುಮಾಸ್ತರಾಗಿ ಕೆಲಸ ಮಾಡಿದರು. ರಾಮದಾಸ್ ಅವರ ಪತ್ನಿ, ಸುನಾಕ್ ಅವರ ಅಜ್ಜಿ ಕೂಡ ಗುಜ್ರಾನ್ವಾಲಾದವರು. ಅವರು 1937 ರಲ್ಲಿ ಕೀನ್ಯಾಗೆ ಪ್ರಯಾಣ ಬೆಳೆಸಿದರು. ರಾಮದಾಸ್ ಮತ್ತು ಸುಹಾಗ್ ರಾಣಿ ಸುನಾಕ್ ಅವರಿಗೆ ಆರು ಮಕ್ಕಳಿದ್ದರು. ರಿಷಿ ಸುನಾಕ್ ಅವರ ತಂದೆ ಯಶ್ವೀರ್ 1949 ರಲ್ಲಿ ನೈರೋಬಿಯಲ್ಲಿ ಜನಿಸಿದರು.

    ಯಶ್ವೀರ್ ಸುನಾಕ್ 1966 ರಲ್ಲಿ ಲಿವರ್‌ಪೂಲ್‌ಗೆ ತೆರಳಿದರು. ಅವರು ಪಂಜಾಬಿಯ ರಘುಬೀರ್ ಬೆರ್ರಿಯವರ ಮಗಳು ಉಷಾ ಬೆರ್ರಿ ಅವರನ್ನು ವಿವಾಹವಾದರು. ರಿಷಿ ಸುನಾಕ್ 1980 ರಲ್ಲಿ ಯಶ್ವೀರ್ ಮತ್ತು ಉಷಾ ಸುನಾಕ್ ದಂಪತಿ ಪುತ್ರರಾಗಿ ಜನಿಸಿದರು.

    ರಿಷಿ ಸುನಾಕ್ 1980 ರಲ್ಲಿ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜನಿಸಿದರು. ಖಾಸಗಿ ಬೋರ್ಡಿಂಗ್ ಶಾಲೆ, ವಿಂಚೆಸ್ಟರ್ ಕಾಲೇಜ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಆದಾಗ್ಯೂ, ಸುನಕ್ ಅವರು ಹಿಂದೂ ಧರ್ಮವನ್ನು ಅನುಸರಿಸುವ ಬ್ರಿಟನ್‌ನ ಮೊದಲ ಪ್ರಧಾನಿಯಾಗಲಿದ್ದಾರೆ. ಅಲ್ಲದೇ ಬಿಳಿಯರಲ್ಲದ ವ್ಯಕ್ತಿಯಾಗಿದ್ದಾರೆ.

    ರಿಷಿ ಸುನಾಕ್‌ ಕರ್ನಾಟಕದ ಅಳಿಯ. ಇನ್ಫೋಸಿಸ್‌ ಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವರಿಸಿದ್ದಾರೆ. ಸುನಾಕ್ ಅವರು ಕ್ಯಾಲಿಫೋರ್ನಿಯಾದಲ್ಲಿ ಅಧ್ಯಯನ ನಡೆಸುತ್ತಿದ್ದ ವೇಳೆ ಅಕ್ಷತಾ ಮೂರ್ತಿಯವರನ್ನು ಭೇಟಿಯಾಗಿದ್ದರು. ಬಳಿಕ ವೈವಾಹಿಕ ಜೀನವಕ್ಕೆ ಕಾಲಿಟ್ಟ ಸುನಾಕ್ ಹಾಗೂ ಅಕ್ಷತಾ ಮೂರ್ತಿ ದಂಪತಿಗೆ ಕೃಷ್ಣ ಹಾಗೂ ಅನುಷ್ಕಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಇದನ್ನೂ ಓದಿ: ಭಾರತೀಯ ಸಂಜಾತ, ಸುಧಾಮೂರ್ತಿ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ನೂತನ ಪ್ರಧಾನಿ

    2) 200 ವರ್ಷಗಳ ನಂತರ ಬ್ರಿಟನ್‌ನ ಅತ್ಯಂತ ಕಿರಿಯ ಪ್ರಧಾನಿ ಸುನಾಕ್‌
    ಸುನಾಕ್‌ಗೆ ಈಗ ಕೇವಲ 42 ವರ್ಷ. ಬ್ರಿಟನ್‌ ಪ್ರಧಾನಿ ಹುದ್ದೆ ಅಲಂಕರಿಸಿದ ಕಿರಿಯ ವಯಸ್ಸಿನ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಆದರೆ ವಿಲಿಯಂ ಪಿಟ್ ಅವರು 1783 ರಲ್ಲಿ 24ನೇ ವಯಸ್ಸಿನಲ್ಲಿ ಗ್ರೇಟ್ ಬ್ರಿಟನ್‌ನ ಪ್ರಧಾನಿಯಾಗಿದ್ದರು. 1801 ರವರೆಗೆ ಅಧಿಕಾರದಲ್ಲಿದ್ದರು.

    3) ಕೇವಲ 7 ವರ್ಷದಲ್ಲಿ ಪ್ರಧಾನಿ ಹುದ್ದೆಗೇರಿದ ವ್ಯಕ್ತಿ
    ಸುನಕ್ ಮೊದಲ ಬಾರಿಗೆ ಮೇ 2015 ರಲ್ಲಿ (ರಿಚ್ಮಂಡ್, ಯಾರ್ಕ್ಸ್‌ನ) ಸಂಸದರಾದರು. ಅಕ್ಟೋಬರ್ 2022 ರಲ್ಲಿ ಬ್ರಿಟನ್ ಪ್ರಧಾನ ಮಂತ್ರಿಯಾದರು.‌ 7 ವರ್ಷಗಳ ಅವಧಿಯಲ್ಲಿ ಬಹುಬೇಗ ಪ್ರಧಾನಿ ಹುದ್ದೆಗೇರಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ನಡುವೆ ಖಜಾನೆಯ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸಂಪುಟದಲ್ಲಿ ಹಣಕಾಸು ಸಚಿವರೂ ಆಗಿದ್ದರು.

    ಡೇವಿಡ್ ಕ್ಯಾಮರೂನ್ ಒಂಭತ್ತು ವರ್ಷಗಳ ಅವಧಿಯಲ್ಲಿ ಎಂಪಿಯಿಂದ ಪ್ರಧಾನಿಯಾಗಿದ್ದರು. 2001 ರಲ್ಲಿ ಸಂಸತ್‌ ಪ್ರವೇಶಿಸಿದ್ದ ಕ್ಯಾಮರೂನ್, ಮೇ 2010 ರಲ್ಲಿ ಪ್ರಧಾನಿಯಾಗಿದ್ದರು. ಪಿಟ್ ದಿ ಯಂಗರ್ ಕೇವಲ ಎರಡು ವರ್ಷಗಳಲ್ಲಿ ಪ್ರಯಾಣ ಮಾಡಿದರು. ಇದನ್ನೂ ಓದಿ: UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್

    4) ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ಗಿಂತಲೂ ಸುನಾಕ್‌ ಶ್ರೀಮಂತ
    ಪ್ರಧಾನ ಮಂತ್ರಿ ಸುನಾಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಒಟ್ಟು ಸಂಪತ್ತು 730 ಮಿಲಿಯನ್ ಪೌಂಡ್‌ (6,919 ಕೋಟಿ) ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಇದು ಕಿಂಗ್ 3ನೇ ಚಾರ್ಲ್ಸ್ (King Charles III) ಮತ್ತು ರಾಣಿ ಪತ್ನಿ ಕ್ಯಾಮಿಲ್ಲಾ ಅವರ (300 ಮಿಲಿಯನ್ ಪೌಂಡ್) ಸಂಪತ್ತಿಗಿಂತಲೂ ದುಪ್ಪಟ್ಟು ಎನ್ನಲಾಗಿದೆ. ಸುನಾಕ್ ದಂಪತಿ ಪ್ರಪಂಚದಾದ್ಯಂತ ನಾಲ್ಕು ಆಸ್ತಿಗಳನ್ನು ಹೊಂದಿದ್ದಾರೆ. ಇದು 15 ಮಿಲಿಯನ್‌ ಪೌಂಡ್‌ಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ.

    5) ಕೋಕಾಕೋಲಾ ಅಂದ್ರೆ ಪ್ರಧಾನಿ ಸುನಾಕ್‌ಗೆ ಪಂಚಪ್ರಾಣ
    ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಅವರು ಕೋಕಾಕೋಲಾ ಪ್ರೇಮಿ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ʼಮೆಕ್ಸಿಕನ್‌ ಕೋಕ್‌ʼ ಅವರಿಗೆ ತುಂಬಾ ಇಷ್ಟ. 2021ರಲ್ಲಿ ಶಾಲಾ ವಿದ್ಯಾರ್ಥಿಗಳ ಜೊತೆ ಸುನಾಕ್‌ ಈ ವಿಚಾರವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: 3ನೇ ಕಿಂಗ್ ಚಾರ್ಲ್ಸ್‌ರಿಂದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ನೇಮಕ

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಸಂಜಾತ, ಸುಧಾಮೂರ್ತಿ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ನೂತನ ಪ್ರಧಾನಿ

    ಲಂಡನ್‌: ಬ್ರಿಟನ್‌ ಪ್ರಧಾನಿ ಹುದ್ದೆ (UK PM Polls) ರೇಸ್‌ನಿಂದ ಪೆನ್ನಿ ಮೊರ್ಡಂಟ್‌ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತ ಮೂಲದ ರಿಷಿ ಸುನಾಕ್‌ (Rishi Sunak) ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

    ಕನ್ಸರ್ವೇಟಿವ್‌ ಪಕ್ಷದ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬೋರಿಸ್‌ ಜಾನ್ಸನ್‌ ಭಾನುವಾರ ಘೋಷಿಸಿದ್ದರಿಂದ ರಿಷಿ ಸುನಾಕ್‌ ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿತ್ತು. ಈಗ ಸುನಾಕ್‌ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಪ್ರತಿಸ್ಪರ್ಧಿ ಮೊರ್ಡಂಟ್‌ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಪಕ್ಷದ ಸದಸ್ಯರಿಂದ ಒತ್ತಡ ಕೇಳಿಬಂದಿತ್ತು. ಯುಕೆಯ ಮೊದಲ ಬಿಳಿಯರಲ್ಲದ, ಭಾರತೀಯ ಮೂಲದವರೊಬ್ಬರು ಪ್ರಧಾನಿಯಾದರೆಂಬ ಇತಿಹಾಸ ಕೂಡ ಸೃಷ್ಟಿಯಾಗಿದೆ. ಇದನ್ನೂ ಓದಿ: ಬ್ರಿಟನ್‌ ಪ್ರಧಾನಿ ಚುನಾವಣೆ; ಸುನಾಕ್‌ ಮುನ್ನಡೆ, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮೊರ್ಡಂಟ್‌ಗೆ ಒತ್ತಡ

    ಮೊರ್ಡಂಟ್‌ ಅವರು 100 ಸಂಸದರ ಬೆಂಬಲ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸುನಾಕ್‌ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಶುಕ್ರವಾರ (ಅ.28) ರಂದು ಪ್ರಧಾನಿಯಾಗಿ ರಿಷಿ ಸುನಾಕ್‌ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎನ್ನಲಾಗಿದೆ.

    ರಿಷಿ ಸುನಾಕ್‌ ಅವರು ಇನ್ಫೋಸಿಸ್‌ ಸಂಸ್ಥಾಪಕರಾದ ನಾರಾಯಣ ಮೂರ್ತಿ (Narayana Murthy) ಹಾಗೂ ಸುಧಾಮೂರ್ತಿ (Sudha Murthy) ಅವರ ಅಳಿಯ. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳೆದಿರುವ ಅವರು ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

    ಕೇವಲ 45 ದಿನ ಆಡಳಿತ ನಡೆಸಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ ನೀಡಿದ ನಂತರ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಪ್ರಧಾನಿ ಸ್ಥಾನಕ್ಕೆ ಮತ್ತೆ ರಿಷಿ ಸುನಾಕ್‌ ಸ್ಪರ್ಧಿಸಿದ್ದರು. ಇವರಿಗೆ ಪೆನ್ನಿ ಮೊರ್ಡಂಟ್‌ ಪೈಪೋಟಿ ನೀಡಿದ್ದರು. ಮೊರ್ಡಂಟ್‌ಗೆ ಕೇವಲ 28 ಸಂಸದರು ಬೆಂಬಲ ಸೂಚಿಸಿದರು. ಸುನಾಕ್‌ ಪರವಾಗಿ 198 ಸಂಸದರು ಬೆಂಬಲ ವ್ಯಕ್ತಪಡಿಸಿದರು. ಇದನ್ನೂ ಓದಿ: ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ – ರಿಷಿ ಸುನಾಕ್‌ ಘೋಷಣೆ

    Live Tv
    [brid partner=56869869 player=32851 video=960834 autoplay=true]