Tag: Ujjain

  • ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ

    ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ

    ಭೋಪಾಲ್: ಸವಾಲು ಸೋತ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಮಧ್ಯಪ್ರದೇಶದ ಸಂಸದರಿಗೆ 32 ಸಾವಿರ ಕೋಟಿ ರೂ. ನೀಡಬೇಕಿದೆ.

    ಹೌದು, ನಿತಿನ್ ಗಡ್ಕರಿ ಅವರ ಸವಾಲನ್ನು ಸ್ವೀಕರಿಸಿದ ಸಂದರೊಬ್ಬರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವೇ ತಿಂಗಳುಗಳಲ್ಲಿ 32 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

    ಉಜ್ಜಯಿನಿಯ (Ujjain) ಸಂಸದ ಅನಿಲ್ ಫಿರೋಜಿಯಾ (Anil Firojiya) ಅವರು ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗಡ್ಕರಿಯವರನ್ನು ಭೇಟಿಯಾಗಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸದರು ಗಡ್ಕರಿ ಅವರಲ್ಲಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆಗ ಗಡ್ಕರಿಯವರು ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಿ, ನೀವು ಇಳಿಸಿಕೊಳ್ಳುವ ಪ್ರತಿ ಕೆಜಿಗೆ 1,000 ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಗಡ್ಕರಿ ಅವರು ಚಾಲೆಂಜ್ ನೀಡಿದ ಸಮಯ 135 ಕೆಜಿ ಇದ್ದ ಸಂಸದರು, ತಮ್ಮ ಕ್ಷೇತ್ರಕ್ಕಾಗಿ ವರ್ಕೌಟ್, ಡಯಟ್ ಮಾಡಿ ಇದೀಗ 32 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಈಗ ಸಂಸದರು 93 ಕೆಜಿ ತೂಗುತ್ತಿದ್ದು ಗಡ್ಕರಿಯವರ ಚಾಲೆಂಜ್ ಗೆದ್ದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ

    ಫಿರೋಜಿಯಾ ಅವರು ಜೂನ್‌ನಲ್ಲಿಯೇ 15 ಕೆಜಿ ತೂಕವನ್ನು ಇಳಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಆಂದೋಲನದ ವೇಳೆ ಮಾತನಾಡಿ, ಗಡ್ಕರಿ ನೀಡಿದ ಚಾಲೆಂಜ್ ಬಗ್ಗೆ ತಿಳಿಸಿದ್ದರು. ನಾನು ಕಳೆದುಕೊಳ್ಳುವ ಪ್ರತಿ ಕೆಜಿಗೆ ಗಡ್ಕರಿಯವರು 1,000 ಕೋಟಿ ರೂ. ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ನಾನು ಈಗಾಗಲೇ 15 ಕೆಜಿ ಕಳೆದುಕೊಂಡಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಇನ್ನಷ್ಟು ತೂಕವನ್ನು ಕಳೆದುಕೊಳ್ಳುತ್ತೇನೆ. ನಾನು ತೂಕ ಇಳಿಸಿಕೊಳ್ಳುವುದರಿಂದ ಉಜ್ಜಯಿನಿಗೆ ಹೆಚ್ಚಿನ ಅನುದಾನ ಸಿಗುತ್ತದೆಯಾದರೆ ನಾನು ಫಿಟ್‌ನೆಸ್ ಆಡಳಿತ ಮುಂದುವರೆಸಲು ಸಿದ್ಧ ಎಂದಿದ್ದರು.

    ಫಿರೋಜಿಯಾ ಅವರು ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿ, ತಾವು 32 ಕೆಜಿ ಕಳೆದುಕೊಂಡಿರುವುದರ ಬಗ್ಗೆ ತಿಳಿಸಿದ್ದರು. ಗಡ್ಕರಿ ನೀಡಿರುವ ಭರವಸೆಯಂತೆ ಅವರು 2,300 ಕೋಟಿ ರೂ. ವೆಚ್ಚದ ಪ್ರದೇಶ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

    Live Tv
    [brid partner=56869869 player=32851 video=960834 autoplay=true]

  • ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ

    ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ

    ಭೋಪಾಲ್: ಉಜ್ಜಯಿನಿಯ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ, ಬಿಜೆಪಿ ಯುವ ಮೊರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಬೆಂಬಲಿಗರು, ಮತ್ತು ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ.

    ದೇವಸ್ಥಾನದ ಭೇಟಿಗೆ ತೇಜಸ್ವಿ ಸೂರ್ಯ ತೆರಳಿದ ವೇಳೆ ಈ ಗಲಭೆ ನಡೆದಿದೆ. ಉಜ್ಜಯಿನಿಗೆ ತೆರಳಿದ್ದ ತೇಜಸ್ವಿ ಸೂರ್ಯ ನಿನ್ನೆ ಬೆಳಗ್ಗೆ ದೇವರ ದರ್ಶನಕ್ಕೆ ತೆರಳಿದ್ದರು. ಪೂಜೆಗಾಗಿ ಸೂರ್ಯ ಗರ್ಭಗುಡಿಯ ಕಡೆಗೆ ಹೋದರು. ಅವರನ್ನೇ ಅನುಸರಿಸಿದ ಬೆಂಬಲಿಗರು, ಕಾರ್ಯಕರ್ತರು ಗರ್ಭಗುಡಿ ಪ್ರವೇಶಿಸಲು ಪ್ರಯತ್ನಿಸಿದರು. ಈ ವೇಳೆ ಗರ್ಭಗುಡಿ ಪ್ರವೇಶ ಮಾಡದಂತೆ ಮಂದಿರದ ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿಗೆ ರಾಖಿ ಕಟ್ಟಿದ ಮಕ್ಕಳು

    ಗರ್ಭಗುಡಿ ಪ್ರವೇಶಕ್ಕೆ ನಿರಾಕರಿಸುತ್ತಿದ್ದಂತೆ ಸಿಟ್ಟಿಗೆದ್ದ ಕಾರ್ಯಕರ್ತರು, ಮಂದಿರದ ಸಿಬ್ಬಂದಿ ಜೊತೆಗೆ ಗಲಾಟೆ ನಡೆಸಿದರು. ಬ್ಯಾರಿಕೇಡ್‍ಗಳನ್ನು ತೆಗೆದುಹಾಕಿ ಒಳಗೆ ಪ್ರವೇಶಿಸಿದರು. ಈ ವೇಳೆ ದೇವಸ್ಥಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಇದನ್ನೂ ಓದಿ: ಕಾಸರಗೋಡು ಮಸೀದಿಗೆ ಹೋಗಿದ್ದ ಹಂತಕರು – SDPI, PFI ಲಿಂಕ್‌, ವಾರಂಟ್ ಜಾರಿ ಮಾಡಿ ಆಸ್ತಿ ಸೀಜ್‌

    Live Tv
    [brid partner=56869869 player=32851 video=960834 autoplay=true]

  • ಮದುವೆಗೆ ಹೋಗುತ್ತಿದ್ದವ್ರು ಮಸಣ ಸೇರಿದ್ರು – ಅಪಘಾತದಲ್ಲಿ ವರ ಸೇರಿ 9 ಮಂದಿ ದುರ್ಮರಣ

    ಮದುವೆಗೆ ಹೋಗುತ್ತಿದ್ದವ್ರು ಮಸಣ ಸೇರಿದ್ರು – ಅಪಘಾತದಲ್ಲಿ ವರ ಸೇರಿ 9 ಮಂದಿ ದುರ್ಮರಣ

    ಜೈಪುರ: ಮದುವೆ ಮನೆಗೆ ಹೋಗುತ್ತಿದ್ದ ಕಾರೊಂದು ನದಿಗೆ ಬಿದ್ದು ವರ ಸೇರಿದಂತೆ 9 ಮಂದಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಉಜ್ಜಯಿನಿ ಸಮೀಪ ನಡೆದಿದೆ.

    ಮದುವೆಗೆಂದು 9 ಪ್ರಯಾಣಿಕರು ಕಾರಿನಲ್ಲಿ ಕೋಟಾದಿಂದ ಉಜ್ಜಯಿನಿಗೆ ಹೋಗುತ್ತಿದ್ದರು. ಇನ್ನೇನು ಕೆಲವೇ ಗಂಟೆಯಲ್ಲಿ ಮದುವೆ ಎಂದು ಇಡೀ ಕುಟುಂಬವೇ ಸಂಭ್ರಮದಲ್ಲಿ ತೇಲಾಡುತ್ತಿತ್ತು. ಆದರೆ ಆ ವಿಧಿಯಾಟ ಬೇರೆಯಿತ್ತು. ಮದ್ಯಪಾನ ಸೇವಿಸಿ ಚಾಲಕನು ವರನಿದ್ದ ಕಾರನ್ನು ಚಲಾಯಿಸುತ್ತಿದ್ದ. ಇದರ ಪರಿಣಾಮ ಕಾರು ನಿಯಂತ್ರಣ ತಪ್ಪಿ ಕೋಟಾದ ಚಂಬಲ್ ನದಿಗೆ ಬಿದ್ದಿದೆ. ಇದರಿಂದಾಗಿ ನದಿಯಲ್ಲೇ 9 ಮಂದಿ ಮೃತಪಟ್ಟರು.

    ಮುಂಜಾನೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಈ ಕುರಿತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಇದನ್ನೂ ಓದಿ: ಎಸ್‍ಪಿ ಹಿರಿಯ ನಾಯಕ ಅಹ್ಮದ್ ಹಸನ್ ನಿಧನ – ಕೆಲವೇ ಗಂಟೆಗಳಲ್ಲಿ ಪತ್ನಿ ಕೂಡ ಸಾವು

  • 9ನೇ ಶತಮಾನದ ಶಿವಲಿಂಗ ಉಜ್ಜಯಿನಿಯಲ್ಲಿ ಪತ್ತೆ

    9ನೇ ಶತಮಾನದ ಶಿವಲಿಂಗ ಉಜ್ಜಯಿನಿಯಲ್ಲಿ ಪತ್ತೆ

    ಭೋಪಾಲ್: ಉಜ್ಜಯಿನಿಯ ಮಹಾಕಾಲ್ ಮಂದಿರದ ಉತ್ಖನನದ ವೇಳೆ 9ನೇ ಶತಮಾನದ ಶಿವಲಿಂಗವೊಂದು ಪತ್ತೆಯಾಗಿದೆ.

    ಸ್ಥಳಕ್ಕಾಮಿಗಿಸಿ ಪುರಾತತ್ವ ಶಾಸ್ತ್ರ ಅಧಿಕಾರಿ ಧ್ರುವೇಂದ್ರ ಜೋಧಾ ದೇವಸ್ಥಾನದೊಳಗಿರುವ ಶಿವಲಿಂಗದಷ್ಟು ಎತ್ತರ ಅಂದ್ರೆ 5 ಅಡಿ ಎತ್ತರದ ಶಿವಲಿಂಗ ಇದಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ನಾನು ಅಂಗಾಂಗ ದಾನ ಮಾಡುತ್ತೇನೆ, ನೀವೂ ಮಾಡಿ- ಸಿಎಂ ಬೊಮ್ಮಾಯಿ ಕರೆ

    ಈ ಶಿವಲಿಂಗವನ್ನು ಜಲಧಾರಿ ಎಂದು ಗುರುತಿಸಲಾಗಿದ್ದು, ಸುಮಾರು 9ನೇ ಶತಮಾನದ ಕಾಲದ್ದು ಎಂದು ಗುರುತಿಸಲಾಗಿದೆ. ಇದೇ ವೇಳೆ ಶಿವಲಿಂಗದ ಅಡಿಯಲ್ಲಿ ಇದ್ದ ಇಟ್ಟಿಗೆಗಳು ದೊರಕಿವೆ. ಈ ಇಟ್ಟಿಗೆಗಳು 5ನೇ ಶತಮಾನದವು ಎನ್ನಲಾಗಿದೆ.

    ಶಿವಲಿಂಗದ ಜೊತೆಗೆ ಸಣ್ಣದೊಂದು ವಿಷ್ಣುವಿನ ವಿಗ್ರಹ ಕೂಡ ಪತ್ತೆಯಾಗಿದ್ದು, ವಿಷ್ಣು ಚತುರ್ಭುಜ ಸ್ಥಾನಕ ಆಸನದಲ್ಲಿದ್ದಾನೆ ಎಂದು ಹೇಳಲಾಗಿದೆ. ಈ ವಿಗ್ರಹ ಸುಮಾರು 10ನೇ ಶತಮಾನದ್ದಿರಬಹುದು ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆಯೂ ಈ ಸ್ಥಳದಲ್ಲಿ ಕೆಲವು ಕೆತ್ತನೆಗಳು, ಮೂರ್ತಿ ಸಹ ಪತ್ತೆಯಾಗಿದ್ದವು ಎನ್ನಲಾಗಿದೆ.

  • ತಲೆಕೂದಲಿನಲ್ಲಿ ಡ್ರಗ್ಸ್ ಮರೆಮಾಚಿ ಸಾಗಿಸುತ್ತಿದ್ದ ಮಹಿಳೆ ಅರೆಸ್ಟ್!

    ತಲೆಕೂದಲಿನಲ್ಲಿ ಡ್ರಗ್ಸ್ ಮರೆಮಾಚಿ ಸಾಗಿಸುತ್ತಿದ್ದ ಮಹಿಳೆ ಅರೆಸ್ಟ್!

    – ಮಹಿಳೆ ಸಿಕ್ಕಿಬಿದ್ದಿದ್ದು ಹೇಗೆ

    ಉಜ್ಜಯಿನಿ: ಮಹಿಳೆಯೊಬ್ಬಳು ತನ್ನ ಕೂದಲಿನಲ್ಲಿ 200 ಗ್ರಾಂ ಡ್ರಗ್ಸ್ ಮರೆಮಾಚಿಕೊಂಡು ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಉಜ್ಜಯಿನಿಯಲ್ಲಿ ನಡೆದಿದೆ.

    ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಮಹಿಳೆಯನ್ನು ಕಾಂತಬಾಯಿ ಎಂದು ಗುರುತಿಸಲಾಗಿದೆ. ಮಾದಕ ವಸ್ತುವನ್ನು ತನ್ನ ಕೂದಲಿನಲ್ಲಿ ಮರೆ ಮಾಚಿ ಬೇರೆ ಕಡೆ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.

    200 ಗ್ರಾಂ ಮಾದಕ ವಸ್ತುಗಳನ್ನು ಮಹಿಳೆ ತನ್ನ ತಲೆ ಕೂದಲಿನಲ್ಲಿ ಮರೆಮಾಚಿಕೊಂಡು ಹೋಗುತ್ತಿರುವುದನ್ನು ಪತ್ತೆ ಮಾಡಿ ದೇವಾಸ್‍ಗೇಟ್‍ನಲ್ಲಿ ಬಂಧಿಸಿದ್ದೇವೆ. ಮಾದಕವಸ್ತುಗಳನ್ನು ಮರೆಮಾಚಲು ವಿಶಿಷ್ಟ ವಿಧಾನವನ್ನು ಮಹಿಳೆ ಅಳವಡಿಸಿಕೊಂಡಿದ್ದಾಳೆ. ಅವಳ ಹೇರ್‍ಪಿನ್‍ನಲ್ಲಿ ಬಟ್ಟೆಯ ಚೀಲದಲ್ಲಿ ಡ್ರಗ್ಸ್ ಇಟ್ಟು ಮರೆಮಾಡಿದ್ದಳು. ಆಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಮಹಿಳೆಗೆ ಮಾದಕವಸ್ತು ಮಾರಾಟ ಮಾಡಿದ ಮಾಂಡ್‍ಸೌರ್‍ನ ಮೌವಾರ್ ಗ್ರಾಮದ ವಂಚಕನನ್ನೂ ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ದೇವಾಸ್ಗೇಟ್ ಪ್ರದೇಶದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಳು. ಆಕೆಯ ಬಳಿಯಿಂದ 200 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದೇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 20 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ. ಮೂರು ವರ್ಷಗಳ ಹಿಂದೆ ಡ್ರಗ್ಸ್ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿ ಮಹಿಳೆಯ ಮಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್‍ಟಿಎಫ್ ಟಿಐ ದೀಪಿಕಾ ಶಿಂಧೆ ತಿಳಿಸಿದ್ದಾರೆ.

  • ಅನುಮಾನಾಸ್ಪದವಾಗಿ ರಕ್ತದ ಮಡುವಿನಲ್ಲಿ 22ರ ಧರ್ಮಗುರು ಶವ ಪತ್ತೆ

    ಅನುಮಾನಾಸ್ಪದವಾಗಿ ರಕ್ತದ ಮಡುವಿನಲ್ಲಿ 22ರ ಧರ್ಮಗುರು ಶವ ಪತ್ತೆ

    – ತಲೆಯ ಭಾಗದಲ್ಲಿ ಗಾಯ ಪತ್ತೆ, ತನಿಖೆ ಆರಂಭ

    ಭೋಪಾಲ್: 22 ವರ್ಷದ ಧರ್ಮಗುರುವಿನ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಮಧ್ಯ ಪ್ರದೇಶದ ಉಜೈನ್ ನಗರದ ನಾಗಾದದಲ್ಲಿ ನಡೆದಿದೆ. ಇಂದು ಬೆಳಗ್ಗೆ ಧರ್ಮಗುರುವಿನ ಶವ ಮನೆಯ ಮುಂಭಾಗ ಪತ್ತೆಯಾಗಿದೆ.

    ಬೊಹ್ರಾ ಸಮಾಜದ 22 ವರ್ಷದ ಮುರ್ತುಜಾ ಮೃತ ಧರ್ಮಗುರು. ಮುರ್ತುಜಾ ಮೂಲತಃ ಖಂಡ್ವಾ ನಿವಾಸಿಯಾಗಿದ್ದು, ಕಳೆದ ಒಂದು ವರ್ಷದಿಂದ ನಾಗಾದದಲ್ಲಿ ವಾಸವಾಗಿ ತಮ್ಮ ಸಮಾಜದ ಮಕ್ಕಳಿಗೆ ಧರ್ಮದ ಕುರಿತು ಶಿಕ್ಷಣ ನೀಡುವ ಕೆಲಸ ಮಾಡಿಕೊಂಡಿದ್ದರು.

    ಮಿರ್ಚಿ ಬಜಾರ್ ನಲ್ಲಿಯ ಜಾಬೀರ್ ಎಂಬವರ ಮನೆ ಬಾಡಿಗೆ ಪಡೆದುಕೊಂಡಿದ್ದ ಮುರ್ತುಜಾ ಒಬ್ಬರೇ ವಾಸವಾಗಿದ್ದರು. ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದಾಗ ಮೆಟ್ಟಿಲ ಬಳಿ ಮುರ್ತುಜಾ ಶವ ಕಂಡಿದೆ. ಕೂಡಲೇ ಭಯಗೊಂಡ ಮಹಿಳೆ ಸ್ಥಳೀಯರಿಗೆ ವಿಷಯ ತಿಳಿಸಿದ್ದಾಳೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಕುಟುಂಬಸ್ಥರಿಗೆ ವಿಷಯ ತಲುಪಿಸಿದ್ದಾರೆ. ಮೆಟ್ಟಿಲಿನಿಂದ ಕೆಳಗೆ ಇಳಿಯುವಾಗ ಆಯಕತಪ್ಪಿ ಬಿದ್ದಿದ್ದರಿಂದ ತಲೆ ಭಾಗದಲ್ಲಿ ಪೆಟ್ಟು ಆಗಿದೆ. ತಲೆ ಭಾಗದಲ್ಲಾದ ಗಾಯದಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆ ಧರ್ಮಗುರು ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

     

  • ಭಾರತದ ಕೊರೊನಾ ಡೇಂಜರ್ ಡೆತ್ ಸ್ಪಾಟ್ ಉಜ್ಜೈನಿ- 235ರಲ್ಲಿ 45 ಸೋಂಕಿತರು ಸಾವು!

    ಭಾರತದ ಕೊರೊನಾ ಡೇಂಜರ್ ಡೆತ್ ಸ್ಪಾಟ್ ಉಜ್ಜೈನಿ- 235ರಲ್ಲಿ 45 ಸೋಂಕಿತರು ಸಾವು!

    ಉಜ್ಜೈನಿ (ಮಧ್ಯಪ್ರದೇಶ): ಕೋವಿಡ್ 19 ಅಥವಾ ಕೊರೋನಾ ಸೋಂಕಿನ ಭಾರತದ ಡೆಡ್ಲಿ ಡೇಂಜರ್ ಸ್ಪಾಟ್ ಕುಖ್ಯಾತಿಗೆ ಮಧ್ಯಪ್ರದೇಶದ ಉಜ್ಜೈನಿ ಪಾತ್ರವಾಗಿದೆ. ಕೊರೋನಾ ಸೋಂಕು ಬಾಧಿತರ ಸಂಖ್ಯೆ ಕಡಿಮೆ ಇದ್ದರೂ ಸೋಂಕಿನಿಂದ ಇಲ್ಲಿ ಸಾವನ್ನಪ್ಪುತ್ತಿರುವವರ ಮರಣ ಪ್ರಮಾಣ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಇಲ್ಲಿ ಸೋಂಕು ತಗುಲಿದ 100ರಲ್ಲಿ 19 ಜನ ಸಾವಿಗೀಡಾಗುತ್ತಿದ್ದಾರೆ. ಇದು ಇಲ್ಲಿನ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ಅಂಕಿ ಅಂಶ ಜಗತ್ತಿನ ಎಲ್ಲ ರಾಷ್ಟ್ರಗಳನ್ನೂ ಮೀರಿಸುತ್ತಿದೆ.

    ಇದುವರೆಗೆ ಉಜ್ಜೈನಿಯಲ್ಲಿ 235 ಜನರಿಗೆ ಸೋಂಕು ತಗುಲಿದ್ದು ಇವರಲ್ಲಿ 45 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.3.34ರಷ್ಟಿದ್ದರೆ, ಉಜ್ಜೈನಿಯಲ್ಲಿ ಇದು ಶೇ.19.15ರಷ್ಟಿದೆ. ಕೋವಿಡ್ ರೋಗಿಗಳ ಸಂಖ್ಯೆ ಹಾಗೂ ಮರಣದಲ್ಲಿ ಮುಂಬೈ, ದೆಹಲಿ, ಅಹಮದಾಬಾದ್ ಅಗ್ರಸ್ಥಾನದಲ್ಲಿದ್ದರೂ ಅಲ್ಲಿನ ಮರಣ ಪ್ರಮಾಣ ಉಜ್ಜೈನಿಯಷ್ಟಿಲ್ಲ. ಮುಂಬೈ – ಶೇ.3.91, ದೆಹಲಿ-ಶೇ.1.08, ಅಹಮದಾಬಾದ್ ನಲ್ಲಿ ಶೇ. 6.29ರಷ್ಟಿದೆ. ರೋಗ ಪತ್ತೆ ಹಚ್ಚುವಲ್ಲಿ ಉಂಟಾಗುತ್ತಿರುವ ವಿಳಂಬ, ಚಿಕಿತ್ಸೆಗೆ ಮುಂದಾಗದೇ ಇರುವುದೇ ಮರಣ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

    ವಿಶ್ವದಲ್ಲಿ ಕೋವಿಡ್ ಸೋಂಕಿತರ ಮರಣ ಪ್ರಮಾಣ ಶೇ.6.8ರಷ್ಟಿದೆ. ಯುಕೆಯಲ್ಲಿ ಶೇ.14, ಫ್ರಾನ್ಸ್ ನಲ್ಲಿ ಶೇ.14, ಇಟಲಿಯಲ್ಲಿ ಶೇ. 13, ಸ್ಪೇನ್ ನಲ್ಲಿ ಶೇ.10.11, ಯುಎಸ್‍ಎಯಲ್ಲಿ ಶೇ.5.95 ಹಾಗೂ ರಷ್ಯಾದಲ್ಲಿ ಶೇ. 0.90ರಷ್ಟಿದೆ.

    ಕರ್ನಾಟಕದಲ್ಲಿ ಶೇ. 3.80: ಕೊರೋನಾ ಸೋಂಕಿತರ ಮರಣ ಪ್ರಮಾಣ ಶೇ.3.80 ರಷ್ಟಿದೆ. ಸೋಂಕು ಬಾಧಿತ 789 ಮಂದಿಯಲ್ಲಿ ಇದುವರೆಗೆ 30 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 379 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

    ಮಹಾರಾಷ್ಟ್ರ ಶೇ.3.80, ಮಧ್ಯಪ್ರದೇಶ ಶೇ. 5.90, ಗುಜರಾತ್ ಶೇ.6.06, ಪಶ್ಚಿಮ ಬಂಗಾಳ ಶೇ.9.75 ಹಾಗೂ ಕೇರಳದಲ್ಲಿ ಶೇ. 0.70 ಮರಣ ಪ್ರಮಾಣ ದಾಖಲಾಗಿದೆ.

  • ಉಜ್ಜಯಿನಿ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಿಯಾಂಕ ಗಾಂಧಿ

    ಉಜ್ಜಯಿನಿ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಿಯಾಂಕ ಗಾಂಧಿ

    ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರನಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಮಧ್ಯಪ್ರದೇಶದಲ್ಲಿ ಪ್ರಚಾರ ಕೈಗೊಳ್ಳಲು ಹೆಲಿಕಾಪ್ಟರ್ ಮೂಲಕ ಉಜ್ಜಯಿನಿಗೆ ಆಗಮಿಸಿದ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ ಪಕ್ಷದ ಅನೇಕ ನಾಯಕರು ಸ್ವಾಗತಿಸಿದರು. ಇಲ್ಲಿಂದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಪ್ರಿಯಾಂಕ ಗಾಂಧಿ ಅವರು, ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಸಿಎಂ ಕಮಲ್ ನಾಥ್ ಸಾಥ್ ನೀಡಿದರು.

    ಈ ವಿಶೇಷ ಪೂಜೆ ಬಳಿಕ ಪ್ರಿಯಾಂಕ ಗಾಂಧಿ ಅವರು ರತ್ಲಂ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದರು. ಕೊನೆಯ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಅನೇಕ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ.

    ಕೊನೆಯ ಹಂತದ ಮತದಾನವು ಮೇ 19ರಂದು ನಡೆಯಲಿದೆ. ಅಂದು ಮಧ್ಯಪ್ರದೇಶದ ಇಂದೋರ್, ಉಜ್ಜೈನಿ, ರತ್ಲಂ ಸೇರಿದಂತೆ 8 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.