Tag: ugc

  • ರಾಷ್ಟ್ರೀಯಮಟ್ಟದ ಉನ್ನತ ಶಿಕ್ಷಣ ಸಚಿವರ ಸಮಾವೇಶ – ಏಳು ರಾಜ್ಯಗಳು ಭಾಗಿ

    ರಾಷ್ಟ್ರೀಯಮಟ್ಟದ ಉನ್ನತ ಶಿಕ್ಷಣ ಸಚಿವರ ಸಮಾವೇಶ – ಏಳು ರಾಜ್ಯಗಳು ಭಾಗಿ

    ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗವು (UGC) ಕುಲಪತಿಗಳ ನೇಮಕ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ಹೊರಡಿಸಿರುವ ಕರಡು ನಿಯಮಾವಳಿಗಳ ಕುರಿತು ಚರ್ಚಿಸಲು ಫೆಬ್ರವರಿ 05ರಂದು ಬೆಂಗಳೂರಿನಲ್ಲಿ (Bengaluru) ಕರೆಯಲಾಗಿರುವ ಒಂದು ದಿನದ ಉನ್ನತ ಶಿಕ್ಷಣ ಸಚಿವರ ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ಏಳು ರಾಜ್ಯಗಳ ಸಚಿವರು ಪಾಲ್ಗೊಳ್ಳುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (MC Sudhakar) ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ದೇಶದ ಕೆಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಎನ್.ಡಿ.ಎ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಬಹಿರಂಗವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಲಾರದಂತ ಸ್ಥಿತಿಯಲ್ಲಿವೆ. ಎನ್‌ಡಿಎ ಮೈತ್ರಿಕೂಟದಲ್ಲಿರುವ ಜೆಡಿಯು, ಟಿಡಿಪಿ ಹಾಗೂ ಎಲ್‌ಜೆಪಿ (ರಾಮ್ ವಿಲಾಸ್) ಪಕ್ಷಗಳು ಈಗಾಗಲೇ ಈ ಸಂಬಂಧ ಅತೃಪ್ತಿ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿರುವುದು ಬಹಿರಂಗಗೊಂಡಿದೆ. ಇದನ್ನೂ ಓದಿ: ಯೋಧರ ಪಿಂಚಣಿ ಬಾಕಿ ಉಳಿಸಿಕೊಂಡ ಕೇಂದ್ರ ಸರ್ಕಾರ – ಪಂಜಾಬ್ ಹೈಕೋರ್ಟ್ ಕೆಂಡಾಮಂಡಲ

    ದೆಹಲಿಯಲ್ಲಿ ಚುನಾವಣೆ ಇರುವುದರಿಂದ ದೆಹಲಿಯ ಉನ್ನತ ಶಿಕ್ಷಣ ಸಚಿವರು ಪಾಲ್ಗೊಳ್ಳುತ್ತಿಲ್ಲ. ಉಳಿದಂತೆ ಆತಿಥ್ಯ ವಹಿಸಿರುವ ಕರ್ನಾಟಕವೂ ಸೇರಿದಂತೆ ಜಮ್ಮು ಕಾಶ್ಮೀರ, ಹಿಮಾಚಲ್ ಪ್ರದೇಶ, ಜಾರ್ಖಂಡ್, ತೆಲಂಗಾಣ, ತಮಿಳುನಾಡು ಹಾಗೂ ಕೇರಳದ ಉನ್ನತ ಶಿಕ್ಷಣ ಸಚಿವರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ಏರೋ ಇಂಡಿಯಾ ಶೋ ವಿಪತ್ತು ನಿರ್ವಹಣೆಗೆ ಸಜ್ಜಾಗಲು ಡಿಸಿ ಕರೆ

    ಫೆಬ್ರವರಿ 5 ರಂದು ಬೆಳಗ್ಗೆ 10:30ಕ್ಕೆ ಈ ಸಮಾವೇಶವನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ. ಯುಜಿಸಿ ಕರಡು ನಿಯಮಾವಳಿಗಳಿಂದ ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಮೇಲೆ ಕೇಂದ್ರ ಸರ್ಕಾರ ರಾಜ್ಯಗಳಿಗಿದ್ದ ಅಧಿಕಾರವನ್ನು ಮೊಟಕು ಗೊಳಿಸುವುದು ಮಾತ್ರವಲ್ಲದೆ ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿಗ್ರಹಿಸ ಹೊರಟಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸರಿಯಲ್ಲ. ಇಷ್ಟೇ ಅಲ್ಲದೆ ಉನ್ನತ ಶಿಕ್ಷಣದ ಹಲವಾರು ಹಂತಗಳಲ್ಲಿ ಒತ್ತಾಯಪೂರ್ವಕವಾಗಿ ಕೆಲವು ನಿಯಮಾವಳಿಗಳನ್ನು ಹೇರಲಾಗುತ್ತಿದೆ. ಹಾಗಾಗಿ ಎಲ್ಲಾ ರಾಜ್ಯಗಳ ಒಕ್ಕೊರಲಿನ ಧ್ವನಿಯಾಗಿ ಕೇಂದ್ರಕ್ಕೆ ತಿಳಿಸಲು ಈ ಸಮಾವೇಶ ನಡೆಯುತ್ತಿದೆ ಎಂದರು. ಇದನ್ನೂ ಓದಿ: Microfinance Bill | ರಾಜ್ಯಪಾಲರ ಅಂಕಿತಕ್ಕೆ ಸುಗ್ರೀವಾಜ್ಞೆ ಬಿಲ್ – ಅನಧಿಕೃತವಾಗಿ ಕೊಟ್ಟಿದ್ದರೆ ಸಾಲ ಮನ್ನಾ

    ಸಮಾವೇಶದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಧೋರಣೆಯ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗುವುದು. ಸಮಾವೇಶದ ನಿರ್ಣಯಗಳನ್ನು ಕೇಂದ್ರ ಸರ್ಕಾರ ಹಾಗೂ ಯು.ಜಿ.ಸಿ ಗೆ ಕಳುಹಿಸಿ ಕೊಡಲಾಗುವುದು. ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವುದು ಅತಿ ಮುಖ್ಯವಾಗಿದೆ. ಭಾರತದ ಶೈಕ್ಷಣಿಕ ವ್ಯವಸ್ಥೆ ಅತ್ಯಂತ ಸುಭದ್ರವಾದಂತದ್ದು, ಅದನ್ನು ಯಾವುದೇ ರಾಜ್ಯಗಳೊಂದಿಗೆ ಸಮಾಲೋಚಿಸದೆ ಏಕಾಏಕಿ ಕೇಂದ್ರ ಸರ್ಕಾರ ತನ್ನ ನಿಲುವುಗಳನ್ನು ಬಲವಂತವಾಗಿ ಹೇರುತ್ತಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸೂಕ್ತವಲ್ಲ. ಇದೊಂದು ಸಂವಿಧಾನ ವಿರೋಧಿ ಧೋರಣೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ: ಡಿಕೆಶಿ

    ಸಮಾವೇಶದಲ್ಲಿ ಉನ್ನತ ಶಿಕ್ಷಣ ಸಚಿವರ ಅಭಿಪ್ರಾಯವನ್ನು ಕ್ರೂಡೀಕರಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಯು.ಜಿ.ಸಿ ಮಾಡಿರುವ ಮಾರ್ಪಾಡುಗಳನ್ನು ಪುನರ್ ಪರಿಶೀಲಿಸದಿದ್ದರೆ ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಗುವುದು ಎಂದು ಸುಧಾಕರ್ ತಿಳಿಸಿದರು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸೇರಿ ಕೈ ಸಾಲಭಾದೆ – ವ್ಯಕ್ತಿ ಮನೆಯಲ್ಲೇ ನೇಣಿಗೆ ಶರಣು

  • CSIR-UGC-NET ಪರೀಕ್ಷೆ ಮಂದೂಡಿಕೆ

    CSIR-UGC-NET ಪರೀಕ್ಷೆ ಮಂದೂಡಿಕೆ

    ನವದೆಹಲಿ: ನೀಟ್, ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ಬೆನ್ನಲ್ಲೇ CSIR-UGC-NET ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಮುಂದೂಡಿದೆ.

    ಜೂನ್ 25 ಮತ್ತು ಜೂನ್ 27 ರಂದು ಪರೀಕ್ಷೆಗಳು ನಡೆಯಬೇಕಿತ್ತು. ಲಾಜಿಸ್ಟಿಕ್ ಸಮಸ್ಯೆಗಳಿಂದ ಪರೀಕ್ಷೆ (Exam) ಮುಂದೂಡಲಾಗುತ್ತಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ ಮೂಲಕ ತಿಳಿಸಲಾಗುವುದು ಎಂದು ಎನ್‌ಟಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

     

    ಯುಜಿಸಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳಿಗೆ ಅನುಗುಣವಾಗಿ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF), ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು ಮತ್ತು ಪಿಎಚ್‌ಡಿ ಪ್ರವೇಶಗಳಿಗೆ ಳ ಅರ್ಹತೆಯನ್ನು ನಿರ್ಧರಿಸಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದನ್ನೂ ಓದಿ: 31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    CSIR-UGC-NET ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಜೂನ್ ಮತ್ತು ಡಿಸೆಂಬರ್‌ನಲ್ಲಿ ನಡೆಸಲಾಗುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರೆ ಈ ವರ್ಷ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

     

  • ಎಂಫಿಲ್‌ಗೆ ಮಾನ್ಯತೆ ಇಲ್ಲ, ಅಡ್ಮಿಷನ್‌ ನಿಲ್ಲಿಸಿ – ಯುಜಿಸಿ

    ಎಂಫಿಲ್‌ಗೆ ಮಾನ್ಯತೆ ಇಲ್ಲ, ಅಡ್ಮಿಷನ್‌ ನಿಲ್ಲಿಸಿ – ಯುಜಿಸಿ

    ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ದೇಶದ ವಿಶ್ವವಿದ್ಯಾಲಯಗಳಿಗೆ (University) 2023-24ನೇ ಸಾಲಿನ ಎಂಫಿಲ್ (MPhil) ಕೋರ್ಸ್‌ಗೆ ಪ್ರವೇಶಾತಿ ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಇದು ಮಾನ್ಯತೆ ಪಡೆದ ಪದವಿ ಅಲ್ಲ ಎಂದು ಹೇಳಿದೆ.

    “ಕೆಲವು ವಿಶ್ವವಿದ್ಯಾನಿಲಯಗಳು ಎಂಫಿಲ್ (Master of Philosophy) ಕಾರ್ಯಕ್ರಮಕ್ಕಾಗಿ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿರುವುದು ಯುಜಿಸಿಯ ಗಮನಕ್ಕೆ ಬಂದಿದೆ. ಎಂಫಿಲ್ ಪದವಿಯು ಮಾನ್ಯತೆ ಪಡೆದ ಪದವಿಯಲ್ಲ ಎಂಬುದನ್ನು ಈ ಮೂಲಕ ಎಲ್ಲರ ಗಮನಕ್ಕೆ ತರಲಾಗುತ್ತಿದೆ” ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ: ಮತ್ತೆ 500 ಕಾರ್ಮಿಕರಿಗೆ ಬುಲಾವ್‌, 4000 ಕಾರ್ಮಿಕರಿಂದ ಹಗಲಿರುಳು ಕೆಲಸ

     

    ಯುಜಿಸಿಯ (ಪಿಎಚ್‌ಡಿ ಪದವಿ ಪ್ರದಾನ ಮಾಡಲು ಕನಿಷ್ಠ ಮಾನದಂಡಗಳು ಮತ್ತು ಕಾರ್ಯವಿಧಾನಗಳು) ನಿಯಮಗಳು 2022ರ ನಿಯಮಾವಳಿ 14ರ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಎಂಫಿಲ್ ಕಾರ್ಯಕ್ರಮವನ್ನು ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 39 ದಿನಗಳಲ್ಲಿ ಶಬರಿಮಲೆಗೆ 204 ಕೋಟಿ ರೂ. ಆದಾಯ- ಕಳೆದ ವರ್ಷ ಎಷ್ಟಿತ್ತು?

    ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಭಾರತದ ವಿವಿಧೆಡೆ 140 ಖಾಸಗಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಗುಜರಾತ್‌ನಲ್ಲಿ ಗರಿಷ್ಠ ಖಾಸಗಿ ವಿವಿಗಳು ಸ್ಥಾಪನೆಯಾಗಿವೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ನಂತರದ ಸ್ಥಾನಗಳಲ್ಲಿವೆ. ಗುಜರಾತ್‌ನಲ್ಲಿ 28, ಮಹಾರಾಷ್ಟ್ರದಲ್ಲಿ 15, ಕರ್ನಾಟಕದಲ್ಲಿ 10 ಖಾಸಗಿ ವಿವಿಗಳು ಸ್ಥಾಪನೆಯಾಗಿವೆ.

  • ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಎಚ್‌ಡಿ ಕಡ್ಡಾಯವಲ್ಲ: ಯುಜಿಸಿ

    ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಎಚ್‌ಡಿ ಕಡ್ಡಾಯವಲ್ಲ: ಯುಜಿಸಿ

    ನವದೆಹಲಿ: ಸಹಾಯಕ ಪ್ರಾಧ್ಯಾಪಕರ (Assistant Professors Recruitment) ನೇಮಕಾತಿಗೆ ಪಿಹೆಚ್‌.ಡಿ (PhD) ಮಾನದಂಡ ಅಲ್ಲ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (UGC) ತಿಳಿಸಿದೆ.

    ಈ ಹುದ್ದೆ ನೇಮಕಾತಿಗೆ ಪಿಹೆಚ್‌.ಡಿ ಕಡ್ಡಾಯಗೊಳಿಸುವ ತನ್ನ ನಿರ್ಧಾರವನ್ನು ಯುಜಿಸಿ ಹಿಂತೆಗೆದುಕೊಂಡಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇರ ನೇಮಕಾತಿಗೆ ನೆಟ್‌, ಸೆಟ್‌, ಸ್ಲೆಟ್‌ನಂತಹ ಪರೀಕ್ಷೆಗಳು ಕನಿಷ್ಠ ಮಾನದಂಡವಾಗಿರುತ್ತದೆ ಎಂದು ಯುಜಿಸಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ಹೊರಗೆ ಮೊದಲ ಐಐಟಿ ಸ್ಥಾಪನೆ: MEA

    ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಇನ್ಮುಂದೆ ಪಿಎಚ್‌ಡಿ ಅರ್ಹತೆ ಐಚ್ಛಿಕವಾಗಿರುತ್ತದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್), ರಾಜ್ಯ ಅರ್ಹತಾ ಪರೀಕ್ಷೆ (ಎಸ್‌ಇಟಿ) ಮತ್ತು ರಾಜ್ಯಮಟ್ಟದ ಅರ್ಹತಾ ಪರೀಕ್ಷೆ (ಎಸ್‌ಎಲ್‌ಇಟಿ)ಯು ಹುದ್ದೆಯ ನೇರ ನೇಮಕಾತಿಗೆ ಕನಿಷ್ಠ ಮಾನದಂಡವಾಗಿರುತ್ತದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೇಶ್ ಕುಮಾರ್ ಹೇಳಿದ್ದಾರೆ.

    ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಯುಜಿಸಿ 2018 ರಲ್ಲಿ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿತ್ತು. ಅಭ್ಯರ್ಥಿಗಳು ತಮ್ಮ ಪಿಹೆಚ್‌.ಡಿ ಪೂರ್ಣಗೊಳಿಸಲು 3 ವರ್ಷಗಳ ಕಾಲಾವಕಾಶ ನೀಡಿತ್ತು. 2021-22ರ ಶೈಕ್ಷಣಿಕ ಅವಧಿಯಿಂದ ನೇಮಕಾತಿಗಾಗಿ ಹೊಸ ಮಾನದಂಡಗಳನ್ನು ಅನ್ವಯಿಸುವಂತೆ ಎಲ್ಲಾ ಕಾಲೇಜು ಮತ್ತು ವಿವಿಗಳಿಗೆ ಸೂಚನೆ ನೀಡಿತ್ತು. ಇದನ್ನೂ ಓದಿ: ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಪ್ರಕರಣ – ಸಂತ್ರಸ್ತನ ಕಾಲು ತೊಳೆದು ಗೌರವಿಸಿದ ಮಧ್ಯಪ್ರದೇಶ ಸಿಎಂ

    ಪಿಹೆಚ್‌.ಡಿ ಕಡ್ಡಾಯ ಮಾನದಂಡ ಜಾರಿಗೊಳಿಸುವುದನ್ನು ಯುಜಿಸಿ 2021ರ ಜುಲೈನಿಂದ 2023ರ ಜುಲೈವರೆಗೆ ವಿಸ್ತರಿಸಿತು. ಕೋವಿಡ್‌ ಸಂದರ್ಭದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಪಿಹೆಚ್‌.ಡಿ ಪೂರ್ಣಗೊಳಿಸುವುದು ಕಷ್ಟವಾಗಿದ್ದರಿಂದ 2021ರಲ್ಲಿ ಯುಜಿಸಿ ಈ ನಿರ್ಧಾರ ತೆಗೆದುಕೊಂಡಿತ್ತು.

    ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿಹೆಚ್‌.ಡಿ ಕಡ್ಡಾಯಗೊಳಿಸುವುದು ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅನುಕೂಲಕರವಲ್ಲ ಎಂದು 2021 ರಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು. ಇದನ್ನೂ ಓದಿ: ದೆಹಲಿಗೆ ಮಾನ್ಸೂನ್ ಎಂಟ್ರಿ- ರಾಷ್ಟ್ರ ರಾಜಧಾನಿ ಕೂಲ್ ಕೂಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಧ್ಯಾನ – ಯುಜಿಸಿಯಿಂದ ಪತ್ರ

    ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಧ್ಯಾನ – ಯುಜಿಸಿಯಿಂದ ಪತ್ರ

    ಬೆಂಗಳೂರು: ಕರ್ನಾಟಕ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಧ್ಯಾನ (Meditation) ಮಾಡಿಸುವ ಮಹತ್ವದ ನಿರ್ಧಾರ ತೆಗೆದುಕೊಂಡು ಬೆನ್ನಲ್ಲೇ ದೇಶದಾದ್ಯಂತ ಧ್ಯಾನ ಮಾಡಿಸುವ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸರ್ಕಾರ (Central Government) ಬಂದಿದೆ.

    ಇನ್ಮುಂದೆ ದೇಶದ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳಲ್ಲಿ ಧ್ಯಾನ ಮಾಡಿಸುವಂತೆ ಯುಜಿಸಿ ಎಲ್ಲಾ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು, ವಿದ್ಯಾಸಂಸ್ಥೆಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಕದ್ರಿ ದೇಗುಲಕ್ಕೆ IRCಯಿಂದ ಬೆದರಿಕೆ ಪತ್ರ – ದೇಗುಲದ ಮಂಡಳಿಯಿಂದ ದೂರು

    ಯುಜಿಸಿ ಕಾರ್ಯದರ್ಶಿ ಪ್ರೊ. ರಜನೀಶ್ ಜೈನ್‌ರಿಂದ ವಿಶ್ವವಿದ್ಯಾಲಯಗಳು, ಎಲ್ಲಾ ವಿದ್ಯಾಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನೆನಪಿನಲ್ಲಿ ಈ ಮಹತ್ವದ ನಿರ್ಧಾರವನ್ನ ಕೇಂದ್ರ ಸರ್ಕಾರ ಮಾಡಿದೆ.

    ಧ್ಯಾನ ಮಾಡಿಸುವ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಜೊತೆ ಕೇಂದ್ರ ಸಂಸ್ಕೃತಿ‌ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರಿನ ಅರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳಲ್ಲಿ ಹರ್ ಘರ್ ಧ್ಯಾನ್ ಅಭಿಯಾನ ನಡೆಸಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಹಾಸನ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಎ.ಎಚ್ ಲಕ್ಷ್ಮಣ್ ನೇಮಕ

    ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಅಭಿವೃದ್ಧಿಪಡಿಸಿರೋ ಧ್ಯಾನದ ಮಾದರಿಗಳನ್ನು ಅಳವಡಿಸಿಕೊಳ್ಳಲು‌ ಯುಜಿಸಿ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಈ ಅಭಿಯಾನಕ್ಕೆ ಯಾವುದೇ ವಿಶ್ವವಿದ್ಯಾಲಯಗಳು, ಕಾಲೇಜುಗಳು ಶುಲ್ಕ ಭರಿಸುವಂತೆ ಇಲ್ಲ. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಜೊತೆ ವಿಶ್ವವಿದ್ಯಾಲಯಗಳು, ಕಾಲೇಜುಗಳು ಸಂಪರ್ಕ ಇಟ್ಟುಕೊಂಡು ಅಭಿಯಾನ ನಡೆಸುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪದವಿ, ಸ್ನಾತಕೋತ್ತರ ಪದವಿಯ ಹೊಸ ಕ್ಯಾಲೆಂಡರ್ ಬಿಡುಗಡೆ- ವಾರಕ್ಕೆ ಆರು ದಿನ ಪಾಠ

    ಪದವಿ, ಸ್ನಾತಕೋತ್ತರ ಪದವಿಯ ಹೊಸ ಕ್ಯಾಲೆಂಡರ್ ಬಿಡುಗಡೆ- ವಾರಕ್ಕೆ ಆರು ದಿನ ಪಾಠ

    – ಪ್ರವೇಶ ರದ್ದಾದರೆ ಪೂರ್ತಿ ಶುಲ್ಕ ವಾಪಸ್

    ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಶಿಕ್ಷಣ ಸಚಿವಾಲಯ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಕೊರೊನಾದಿಂದಾಗಿ ಕಳೆದು ಹೋಗಿರುವ ಸಮಯವನ್ನು ಸರಿದೂಗಿಸಲು ವಾರದ 6 ದಿನವೂ ತರಗತಿ ನಡೆಸುವಂತೆ ಸೂಚಿಸಲಾಗಿದೆ.

    ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಹೊಸ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಅಕ್ಟೋಬರ್ 31ರೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನವೆಂಬರ್‍ನಿಂದ ಪ್ರಥಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗಲಿವೆ. ಅಲ್ಲದೆ ನವೆಂಬರ್ 30ರ ಬಳಿಕ ಯಾವುದೇ ಪ್ರವೇಶಾತಿಯನ್ನು ಅನುಮತಿಸಲಾಗುವುದಿಲ್ಲ ಯುಜಿಸಿ ಸ್ಪಷ್ಟಪಡಿಸಿದೆ.

    ಯುಜಿ, ಪಿಜಿ ಮೊದಲ ವರ್ಷದ ಕ್ಯಾಲೆಂಡರ್
    ಕೊರೊನಾ ವೈರಸ್ ಹಿನ್ನೆಲೆ ಯುಜಿಸಿ ಸಮಿತಿಯ ವರದಿಯನ್ನು ಪುರಸ್ಕರಿಸಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ಶೈಕ್ಷಣಿಕ ಕ್ಯಾಲೆಂಡರ್‍ನ ಮಾರ್ಗಸೂಚಿಗಳನ್ನು ತಿಳಿಸಿದೆ. ಈ ಕುರಿತು ಶಿಕ್ಷಣ ಸಚಿವಾಲಯ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದೆ.

    ಯುಜಿಸಿ ಮೊದಲ ಬಾರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್‍ನ್ನು ಏಪ್ರಿಲ್ 29ರಂದು ಬಿಡುಗಡೆ ಮಾಡಿತ್ತು. ಇದರಲ್ಲಿ ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ಅಥವಾ ಟರ್ಮಿನಲ್ ಪರೀಕ್ಷೆಗಳನ್ನು ಜುಲೈ 1ರಿಂದ ಜುಲೈ 15ರ ವರೆಗೆ ಪರೀಕ್ಷೆ ನಡೆಸಬೇಕು. ತಿಂಗಳ ಕೊನೆಯಲ್ಲಿ ಫಲಿತಾಂಶ ಪ್ರಕಟಿಸಬೇಕು ಎಂದು ಸೂಚಿಸಿತ್ತು.

    ಕೊರೊನಾ ಸಮಯದಲ್ಲಿ ಕಳೆದುಹೋದ ಕಲಿಕೆಯ ಸಮಯವನ್ನು ಸರಿದೂಗಿಸಲು ವಾರದಲ್ಲಿ ಆರು ದಿನ ತರಗತಿಗಳನ್ನು ನಡೆಸಬೇಕು ಎಂದು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಅಲ್ಲದೆ ವಿರಾಮ ಹಾಗೂ ರಜಾ ದಿನಗಳನ್ನು ಸಹ ಮೊಟಕುಗೊಳಿಸಲಾಗಿದೆ.

    ಪೂರ್ತಿ ಶುಲ್ಕ ವಾಪಸ್
    ಶಿಕ್ಷಣ ಸಚಿವಾಲಯ ಟ್ವಿಟ್ಟರ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಲಾಕ್‍ಡೌನ್ ಹಾಗೂ ಸಂಬಂಧಿತ ಅಂಶಗಳಿಂದಾಗಿ ಪೋಷಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದನ್ನು ತಪ್ಪಿಸಲು 2020ರ ನವೆಂಬರ್ 30ರ ವರೆಗೆ ವಿದ್ಯಾರ್ಥಿಗಳ ಪ್ರವೇಶ/ ಮೈಗ್ರೇಶನ್ ಗೆ ಸಂಬಂಧಿಸಿದ ಎಲ್ಲ ಹಣವನ್ನು ಪರು ಪಾವತಿ ಮಾಡಲಾಗುವುದು ಎಂದು ತಿಳಿಸಿದೆ.

  • ಅಂತಿಮ ವರ್ಷದ ಪರೀಕ್ಷೆ ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ – ಯುಜಿಸಿ ವಾದ ಎತ್ತಿಹಿಡಿದ ಸುಪ್ರೀಂಕೋರ್ಟ್

    ಅಂತಿಮ ವರ್ಷದ ಪರೀಕ್ಷೆ ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ – ಯುಜಿಸಿ ವಾದ ಎತ್ತಿಹಿಡಿದ ಸುಪ್ರೀಂಕೋರ್ಟ್

    ನವದೆಹಲಿ : ವಿಶ್ವವಿದ್ಯಾನಿಲಯಗಳು ಅಂತಿಮ ವರ್ಷದ ಪರೀಕ್ಷೆ ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ ಎಂದು ಯುಜಿಸಿ‌ ನಿರ್ಧಾರವನ್ನು ಸುಪ್ರೀಂಕೋರ್ಟ್ ಪುನರ್ ಉಚ್ಚರಿಸಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

    ಅಂತಿಮ ವರ್ಷದ ಪದವಿ ಪರೀಕ್ಷೆಗಳ ರದ್ದುಕೋರಿ ಸಲ್ಲಿಸಿದ್ದ ಅರ್ಜಿಗಳ ಸಂಬಂಧ ಮಹತ್ವದ ತೀರ್ಪು ನೀಡಿರುವ ನ್ಯಾ. ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಅಂತಿಮ ವರ್ಷ ಪರೀಕ್ಷೆಗಳು ಕಡ್ಡಾಯ ಎಂದು ಅಭಿಪ್ರಾಯಪಟ್ಟಿದೆ.

    ಸೆಪ್ಟೆಂಬರ್ 30ರೊಳಗೆ ಅಂತಿಮ ವರ್ಷದಲ್ಲಿರುವ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಪೂರ್ಣಗೊಳಿಸಲು ಯುಜಿಸಿ ಸೂಚನೆ ನೀಡಿದೆ. ಆದರೆ ಇದು ಸಾಧ್ಯವಾಗದಿದ್ದರೇ ಈ ಡೆಡ್‌ಲೈನ್ ಬದಲಿಸಲು ರಾಜ್ಯ ಸರ್ಕಾರಗಳು ಮತ್ತು ವಿಶ್ವವಿದ್ಯಾಲಯಗಳು ಯುಜಿಸಿಗೆ ಮನವಿ ಮಾಡಿಕೊಳ್ಳಬಹುದು. ಆದೆರೆ ಪರೀಕ್ಷೆ ನಡೆಸುವುದೇ ಬೇಡ ಎನ್ನುವುದು ಸಮಂಜಸವಲ್ಲ ಎಂದಿದೆ.

    ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಖ್ಯ, ಪರೀಕ್ಷೆಗಳಿಗೆ ಉತ್ತೀರ್ಣ ಮಾಡುವ ಕ್ರಮವನ್ನು ನಾವು ವಿದ್ಯಾರ್ಥಿಗಳಲ್ಲಿ ಉತ್ತೇಜಿಸಬಾರದು. ಹೀಗಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಡ್ಡಾಯ ಎಂದು ಆದೇಶ ನೀಡಿದೆ.

    ಹಿಂದಿನ ವಿಚಾರಣೆ ವೇಳೆ ಯುಜಿಸಿ, ಪದವಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಪರೀಕ್ಷೆಗಳು, ನಾವು ಅದನ್ನು ನಡೆಸದೇ ಪದವಿ ನೀಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಮಾಡುತ್ತಿದ್ದು ಮೊದಲ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಮೇಲೆ ಫಲಿತಾಂಶ ನೀಡಲಾಗುತ್ತಿದೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.

    ಯುಜಿಸಿ ಪರೀಕ್ಷೆಗಳಿಲ್ಲದೇ ಅಂತಿಮ ವರ್ಷದ ಫಲಿತಾಂಶ ನೀಡುವ ಬಗ್ಗೆ ಸಜ್ಜುಗೊಂಡಿಲ್ಲ‌ ಪರೀಕ್ಷೆ ನಡೆಸುವುದು ಉತ್ತಮ ಎಂದು ಯುಜಿಸಿ ವಾದವನ್ನು ಕೇಂದ್ರ ಸರ್ಕಾರ ಪರ ವಕೀಲರು ಬೆಂಬಲಿಸಿದ್ದರು.

    ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗಳು ನಡೆಸುವುದು ಅಪಾಯಕಾರಿ. ವಿದ್ಯಾರ್ಥಿಯ ಹಿಂದಿನ ಪರೀಕ್ಷೆಗಳು ಆಂತರಿಕ ಮೌಲ್ಯಮಾಪನ ಆಧರಿಸಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ನೀಡಲು ಹಲವು ರಾಜ್ಯ ಸರ್ಕಾರಗಳು, ಪೋಷಕರ ಒಕ್ಕೂಟ ಹಾಗೂ ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಿದ್ದವು.

    ಸುಪ್ರೀಂಕೋರ್ಟ್ ಈ ಮಹತ್ವ ತೀರ್ಪುನಿಂದ ಯುಜಿಸಿ ಹಳೆ ಆದೇಶದಂತೆ ಸೆಪ್ಟೆಂಬರ್ 30ರೊಳಗೆ ಪರೀಕ್ಷೆ ನಡೆಯಲಿದ್ದು ಪದವಿ, ಪಿಜಿ, ಡಿಪ್ಲೊಮಾ, ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

     

  • ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜು ಪ್ರಾರಂಭಕ್ಕೆ ಸರ್ಕಾರದ ನಿರ್ಧಾರ!

    ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜು ಪ್ರಾರಂಭಕ್ಕೆ ಸರ್ಕಾರದ ನಿರ್ಧಾರ!

    ಬೆಂಗಳೂರು: ಕೊರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಪದವಿ ಕಾಲೇಜುಗಳನ್ನ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ.

    ಸೆಪ್ಟೆಂಬರ್ 1 ರಿಂದ ಆನ್‍ಲೈನ್ ತರಗತಿಗಳು ಮತ್ತು ಅಕ್ಟೋಬರ್ 1 ರಿಂದ ಆಫ್‍ಲೈನ್ ತರಗತಿ ಪ್ರಾರಂಭಿಸಲಾಗುತ್ತಿರುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಮೂಲಗಳ ಮಾಹಿತಿ ತಿಳಿದು ಬಂದಿದೆ. ಯುಜಿಸಿ ಸೂಚನೆ ಮೇರೆಗೆ ರಾಜ್ಯದಲ್ಲಿ ತರಗತಿ ಪ್ರಾರಂಭಕ್ಕೆ ಸರ್ಕಾರದ ನಿರ್ಧಾರ ಮಾಡಿದೆ ಎನ್ನಲಾಗಿದೆ.

    ಅನ್‍ಲಾಕ್ 4.O ಮಾರ್ಗಸೂಚಿಗಾಗಿ ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ. ಈ ಮಾರ್ಗಸೂಚಿಯಲ್ಲಿ ಏನಿರುತ್ತೆ? ಏನಿರಲ? ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ. ಸೆಪ್ಟೆಂಬರ್ ಒಂದರಿಂದ ಶಾಲೆ-ಕಾಲೇಜುಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತಾ ಅಥವಾ ಇನ್ನಷ್ಟು ದಿನ ಮುಂದೂಡುತ್ತಾ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

  • ವಿದ್ಯಾರ್ಥಿಗಳು ಕಂಟೈನ್ಮೆಂಟ್ ಝೋನ್‍ಗೆ ಹೋಗಬಹುದು, ಪರೀಕ್ಷೆ ನಡೆಸಬೇಡಿ: ಎನ್‍ಎಸ್‍ಯುಐ ಆಗ್ರಹ

    ವಿದ್ಯಾರ್ಥಿಗಳು ಕಂಟೈನ್ಮೆಂಟ್ ಝೋನ್‍ಗೆ ಹೋಗಬಹುದು, ಪರೀಕ್ಷೆ ನಡೆಸಬೇಡಿ: ಎನ್‍ಎಸ್‍ಯುಐ ಆಗ್ರಹ

    ನವದೆಹಲಿ: ಸಿಬಿಎಸ್‍ಇ ಮತ್ತು ಯುಜಿಸಿ ನಡೆಸುತ್ತಿರುವ ಎಲ್ಲ ಪರೀಕ್ಷೆಗಳನ್ನು ಮುಂದೂಡವಂತೆ ಆಗ್ರಹಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ ಪೋಖ್ರಿಯಾಲ್ ನಿವಾಸದೆದರು ಎನ್‍ಎಸ್‍ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಎನ್‍ಎಸ್‍ಯುಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ ಕರಿಯಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಲಾಯಿತು.

    ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಸಿಬಿಎಸ್‍ಇ ಬೋರ್ಡ್ 12ನೇ ತರಗತಿ ಪರೀಕ್ಷೆಗಳನ್ನು ನಡೆಸಲು ತಯಾರಿ ಮಾಡಿಕೊಳ್ಳುತ್ತಿದೆ ಜೊತೆಗೆ ಜೆಇಇ ಮುಖ್ಯ ಪರೀಕ್ಷೆ, ನೀಟ್, ಸಿಎಸ್, ಡಿಬಿಟಿ-ನೆಟ್ ಮತ್ತು ಇತರ ಪರೀಕ್ಷೆಗಳ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚಿಂತನೆ ನಡೆದಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದು ಆರೋಪಿಸಿದರು.

    ಕೊರೊನಾ ವೇಗವಾಗಿ ಹರಡುವ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಮಕ್ಕಳಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚಾಗಲಿದೆ. ಪರೀಕ್ಷೆಗಳಿಗಾಗಿ ಮಕ್ಕಳು ಕಂಟೈನ್ಮೆಂಟ್ ಝೋನ್‍ಗೆ ಬರಬೇಕಾಗಬಹುದು ಅಲ್ಲದೆ ಪ್ರಯಾಣ ಮಾಡುವ ಸಾಧ್ಯತೆಗಳಿದ್ದು, ಇದರಿಂದ ಸೋಂಕು ಹರಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.

    ತಾತ್ಕಾಲಿಕವಾಗಿ ಪರೀಕ್ಷೆಗಳನ್ನು ಮುಂದೂಡಬೇಕು, ಪದವಿ ವಿದ್ಯಾರ್ಥಿಗಳನ್ನು ಹಿಂದಿನ ಫಲಿತಾಂಶ ಮತ್ತು ಆತಂರಿಕ ಮೌಲ್ಯಮಾಪನ ಆಧಾರದಡಿ ಉತ್ತೀರ್ಣಗೊಳಿಸುವಂತೆ ಮನವಿ ಮಾಡಿದರು.