Tag: uganda

  • ಭಾರತೀಯ ಮೂಲದ ಸ್ವಿಸ್ ಉದ್ಯಮಿಯ ಮಗಳನ್ನು ಬಂಧಿಸಿದ ಉಗಾಂಡಾ – ಮಧ್ಯಪ್ರವೇಶಿಸಲು ವಿಶ್ವಸಂಸ್ಥೆಗೆ ಮನವಿ

    ಭಾರತೀಯ ಮೂಲದ ಸ್ವಿಸ್ ಉದ್ಯಮಿಯ ಮಗಳನ್ನು ಬಂಧಿಸಿದ ಉಗಾಂಡಾ – ಮಧ್ಯಪ್ರವೇಶಿಸಲು ವಿಶ್ವಸಂಸ್ಥೆಗೆ ಮನವಿ

    ಕಂಪಾಲಾ: ಭಾರತ (India) ಮೂಲದ ಸ್ವಿಸ್ ಉದ್ಯಮಿ ಪಂಕಜ್ ಓಸ್ವಾಲ್ (Pankaj Oswal) ಅವರ ಮಗಳನ್ನು ಉಗಾಂಡಾದಲ್ಲಿ (Uganda) ಬಂಧಿಸಲಾಗಿದೆ. ಅವರ ಬಂಧನ ಅಕ್ರಮವಾಗಿದ್ದು, ಮಧ್ಯಪ್ರವೇಶಿಸುವಂತೆ ಓಸ್ವಾಲ್ ವಿಶ್ವಸಂಸ್ಥೆಗೆ (United Nations) ಮೇಲ್ಮನವಿ ಸಲ್ಲಿಸಿದ್ದಾರೆ.

    ವಸುಂಧರಾ ಓಸ್ವಾಲ್ (26) ಅವರನ್ನು ಉಗಾಂಡಾದ ಎಕ್ಸ್‌ಟ್ರಾ-ನ್ಯೂಟ್ರಲ್ ಆಲ್ಕೋಹಾಲ್ (ENA) ಸ್ಥಾವರದಿಂದ ಅ.1 ರಂದು ಬಂಧಿಸಲಾಗಿತ್ತು. ಅವರನ್ನು ಸುಮಾರು 20 ಶಸ್ತ್ರಸಜ್ಜಿತ ಪೊಲೀಸರು ಯಾವುದೇ ವಾರಂಟ್ ತೋರಿಸದೆ ಬಂಧಿಸಿದ್ದಾರೆ. ಅವರ ಬಂಧನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಮಧ್ಯೆ ಪ್ರವೇಶಿಸುವಂತೆ ಈ ವಾರದ ಆರಂಭದಲ್ಲಿ ಯುನೈಟೆಡ್ ನೇಷನ್ಸ್ ವರ್ಕಿಂಗ್ ಗ್ರೂಪ್ ಆನ್ ಆರ್ಬಿಟ್ರರಿ ಡಿಟೆನ್ಶನ್‌ಗೆ (WGAD) ಪಂಕಜ್ ಓಸ್ವಾಲ್ ತುರ್ತು ಮನವಿ ಸಲ್ಲಿಸಿದ್ದರು. WGAD ಎಂಬುದು ಮಾನವ ಹಕ್ಕುಗಳ ಕೌನ್ಸಿಲ್‌ನಿಂದ ನೇಮಕಗೊಂಡ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ತಜ್ಞರ ಸಂಸ್ಥೆಯಾಗಿದೆ.

     

    View this post on Instagram

     

    A post shared by Vasundhara Oswal (@vasundharaoswal)

    ವಸುಂಧರಾ ಅವರ ಇನ್ಸ್ಟಾಗ್ರಾಮ್‌ನಲ್ಲಿ ಅವರ ʻಕಾನೂನುಬಾಹಿರ ಬಂಧನʼ ವಿಚಾರವನ್ನು ಪೋಸ್ಟ್‌ ಮಾಡಲಾಗಿದೆ. ಪೋಸ್ಟ್‌ನಲ್ಲಿ ನೆಲದ ಮೇಲೆ ರಕ್ತ ಮತ್ತು ಗಲೀಜಾಗಿರುವ ಶೌಚಾಲಯದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಬಂಧನದ ವೇಳೆ 90 ಗಂಟೆಗಳಿಗೂ ಹೆಚ್ಚು ಕಾಲ ಶೂಗಳಿಂದ ತುಂಬಿದ ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಲಾಗಿದೆ. ಸುಮಾರು ಐದು ದಿನಗಳವರೆಗೆ ಸ್ನಾನ ಮಾಡಲು ಅಥವಾ ಬಟ್ಟೆ ಬದಲಾಯಿಸಲು ಅನುಮತಿಸಲಿಲ್ಲ. ಇಷ್ಟೇ ಅಲ್ಲದೇ ಶುದ್ಧ ನೀರು ಮತ್ತು ಸರಿಯಾದ ಆಹಾರ ನಿರಾಕರಿಸಲಾಗಿದೆ. ಮಲಗಲು ಸಣ್ಣ ಬೆಂಚ್ ನೀಡಲಾಗಿದೆ ಎಂದು ಪೊಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

    ವಸುಂಧರಾ ಅವರಿಗೆ ಸಸ್ಯಾಹಾರ ಆಹಾರವನ್ನು ನಿರಾಕರಿಸಲಾಗಿದೆ. ಅವರ ಕುಟುಂಬ ಮತ್ತು ವಕೀಲರಿಗೆ ಭೇಟಿಯನ್ನೂ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

    ವಸುಂಧರಾ ಅವರ ಬಂಧನವು 68 ವರ್ಷದ ಕಾರ್ಪೊರೇಟ್ ಒಬ್ಬನ ಅಸೂಯೆಯ ಪರಿಣಾಮವಾಗಿದೆ. ಓಸ್ವಾಲ್ ಅವರ ಹಣವನ್ನು ಸುಲಿಗೆ ಮಾಡಲು ಮತ್ತು ಅವರ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಅಧಿಕಾರಿಗಳು ಅವಳನ್ನು ಬಿಡುಗಡೆ ಮಾಡಲಿಲ್ಲ ಎಂದು ಅವರ ಸಹೋದರ ಹೇಳಿಕೊಂಡಿದ್ದಾರೆ.

    ಬಾಣಸಿಗ ಮುಖೇಶ್ ಕುಮಾರ್ ಮೆನಾರಿಯಾ ಅವರನ್ನು ಕೊಲ್ಲುವ ಉದ್ದೇಶದಿಂದ ಅಪಹರಣ ಮಾಡಿದ ಆರೋಪವನ್ನು ವಸುಂಧರಾ ಮತ್ತು ಅವರ ಕಂಪನಿಯ ವಕೀಲ ಎದುರಿಸುತ್ತಿದ್ದಾರೆ.

  • ಉಗಾಂಡಾ ವಿರುದ್ಧ 134 ರನ್‌ಗಳ ಜಯ – T20 ವಿಶ್ವಕಪ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಠಿಸಿದ ವಿಂಡೀಸ್‌!

    ಉಗಾಂಡಾ ವಿರುದ್ಧ 134 ರನ್‌ಗಳ ಜಯ – T20 ವಿಶ್ವಕಪ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಠಿಸಿದ ವಿಂಡೀಸ್‌!

    ಗಯಾನಾ: ಇಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಉಗಾಂಡಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 134 ರನ್‌ಗಳ ಅಂತರದಿಂದ ಗೆದ್ದು T20 ವಿಶ್ವಕಪ್‌ನಲ್ಲಿ ವಿಶೇಷ ಸಾಧನೆ ಮಾಡಿದೆ. ಟಿ20 ವಿಶ್ವಕಪ್‌ ಇತಿಹಾಸದಲ್ಲೇ 2ನೇ ಅತಿ ದೊಡ್ಡ ಅಂತರದ ಗೆಲುವು ಇದಾಗಿದೆ. ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ 2007ರ ಚೊಚ್ಚಲ ಟೂರ್ನಿಯಲ್ಲಿ ಶ್ರೀಲಂಕಾ 172 ರನ್‌ಗಳಿಂದ ಕೀನ್ಯಾ ತಂಡವನ್ನು ಸೋಲಿಸಿತ್ತು. ಇದು ಸಾರ್ವಕಾಲಿಕ ದಾಖಲೆಯಾಗಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ತಂಡ 20 ಓವರ್‌ಗಳಲ್ಲಿ 173 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಉಗಾಂಡಾ ತಂಡ ಕೇವಲ 39 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. 173 ರನ್‌ಗಳ ಸ್ಪರ್ಧಾತ್ಮಕ ರನ್‌ ಗುರಿ ಬೆನ್ನತ್ತಿದ್ದ ಉಗಾಂಡಾ ತಂಡದ ಪರ ಯಾರೊಬ್ಬರೂ ಕ್ರೀಸ್‌ನಲ್ಲಿ ನೆಲೆಯೂರದ ಕಾರಣ 12 ಓವರ್‌ಗಳಲ್ಲಿ 39 ರನ್‌ನ್‌ಗಳಿಗೆ ಸರ್ವಪತನ ಕಂಡಿತು.

    ಸಂಘಟಿತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ವಿಂಡೀಸ್‌ ಪರ ಬೌಲಿಂಗ್‌ನಲ್ಲಿ ಅಕೇಲ್ ಹೊಸೈನ್ ಅಬ್ಬರಿಸಿ ಬೊಬ್ಬಿರಿದರು. ಉಗಾಂಡಾ ಬ್ಯಾಟರ್ಸ್‌ಗಳನ್ನ ದುಸ್ವಪ್ನವಾಗಿ ಕಾಡಿದರು. 4 ಓವರ್‌ ಬೌಲಿಂಗ್‌ ಮಾಡಿದ ಹೊಸೈನ್‌ ಕೇವಲ 11 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರೆ, ಅಲ್ಝಾರಿ ಜೋಸೆಫ್‌ 2 ವಿಕೆಟ್‌ ಹಾಗೂ ರೊಮಾರಿಯೋ ಶೆಫರ್ಡ್ಚ್‌, ಆಂಡ್ರೆ ರಸ್ಸೆಲ್‌, ಗುಡಾಕೇಶ್ ಮೋತಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ಪರ ಜಾನ್ಸನ್ ಚಾರ್ಲ್ಸ್ 44 ರನ್‌, ಬ್ರಾಂಡನ್‌ ಕಿಂಗ್ಸ್‌ 13 ರನ್‌, ನಿಕೋಲಸ್‌ ಪೂರನ್‌ 22 ರನ್‌, ರೋವ್ಮನ್‌ ಪೋವೆಲ್‌ 23 ರನ್‌, ಶೆರ್ಫೇನ್ ರುದರ್ಫೋರ್ಡ್ 22 ರನ್‌, ಆಂಡ್ರೆ ರಸೆಲ್‌ 30 ರನ್‌ ಹಾಗೂ ರೋಮಾರಿಯೋ ಶೆಫರ್ಡ್‌ 5 ರನ್‌ ಗಳಿಸಿದರು.

    T20 ವಿಶ್ವಕಪ್‌ನಲ್ಲಿ ದೊಡ್ಡ ಗೆಲುವು ಸಾಧಿಸಿದ ತಂಡಗಳು
    * ಶ್ರೀಲಂಕಾ – 172 ರನ್‌ – ಕೀನ್ಯಾ ವಿರುದ್ಧ – 2007ರಲ್ಲಿ
    * ವೆಸ್ಟ್ ಇಂಡೀಸ್ – 134 ರನ್‌ – ಉಗಾಂಡಾ ವಿರುದ್ಧ – 2024ರಲ್ಲಿ
    * ಅಫ್ಘಾನಿಸ್ತಾನ – 130 ರನ್‌ – ಸ್ಕಾಟ್‌ಲೆಂಡ್‌ ವಿರುದ್ಧ – 2021ರಲ್ಲಿ
    * ದಕ್ಷಿಣ ಆಫ್ರಿಕಾ – 130 ರನ್‌ – ಸ್ಕಾಟ್‌ಲೆಂಡ್‌ ವಿರುದ್ಧ – 2009 ರಲ್ಲಿ
    * ಅಫ್ಘಾನಿಸ್ತಾನ – 125 ರನ್‌ – ಉಗಾಂಡಾ ವಿರುದ್ಧ – 2024ರಲ್ಲಿ
    * ಇಂಗ್ಲೆಂಡ್ – 116 ರನ್‌ – ಅಫ್ಘಾನಿಸ್ತಾನ ವಿರುದ್ಧ – 2012ರಲ್ಲಿ

  • ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದೆ: ಜೈಶಂಕರ್‌

    ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದೆ: ಜೈಶಂಕರ್‌

    ಕಂಪಾಲ (ಉಗಾಂಡಾ): ವಿದೇಶಾಂಗ ಸಚಿವ ಎಸ್. ಜೈಶಂಕರ್ (Jai Shankar) ಅವರು ಇಂದು ಉಗಾಂಡಾದ (Uganda) ಕಂಪಾಲಾದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಮತ್ತು ಪ್ಯಾಲೆಸ್ತೀನ್ ವಿದೇಶಾಂಗ ಸಚಿವ ಡಾ.ರಿಯಾದ್ ಅಲ್-ಮಲಿಕಿ (Riyad al-Maliki) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ಶುಕ್ರವಾರ ಆರಂಭವಾದ ಅಲಿಪ್ತ ಚಳವಳಿಯ (NAM) ಎರಡು ದಿನಗಳ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಜೈಶಂಕರ್ ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಜೈಶಂಕರ್ ಅವರು, ಡಾ. ರಿಯಾದ್ ಅಲ್-ಮಲಿಕಿ ಅವರನ್ನು ಭೇಟಿಯಾಗಲು ಸಂತೋಷವಾಯಿತು ಎಂದಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಅವರೊಂದಿಗೆ ಸಮಗ್ರ ಚರ್ಚೆ ನಡೆಸಲಾಯಿತು. ಅವರು ಕೂಡ ಸಂಘರ್ಷದ ಮಾನವೀಯ ಮತ್ತು ರಾಜಕೀಯ ಆಯಾಮಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

    ಮಾನವೀಯ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದ್ದು, ಇದು ಯುದ್ಧ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡುವಂತಿರಬೇಕು ಎಂದು ಜೈಶಂಕರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿ ತೀರ್ಥ ಕಡಲತೀರದಲ್ಲಿ ನರೇಂದ್ರ ಮೋದಿ ಪವಿತ್ರ ಸ್ನಾನ

    ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಉಪಕ್ರಮಗಳ ಪ್ರಗತಿಯನ್ನು ಚರ್ಚಿಸಿದರು. ಕಂಪಲಾದಲ್ಲಿ ನಡೆದ NAM ಶೃಂಗಸಭೆಯ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು ಜೈಶಂಕರ್ ಅವರು ಪೋಸ್ಟ್ ಮಾಡಿದ್ದಾರೆ. ವಿದೇಶಿ ವಿನಿಮಯ ಮೀಸಲುಗಳ ತೀವ್ರ ಕೊರತೆಯಿಂದಾಗಿ 2022 ರಲ್ಲಿ ಶ್ರೀಲಂಕಾವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಭಾರತವು ತನ್ನ ‘ನೈಬರ್‌ಹುಡ್ ಫಸ್ಟ್’ ನೀತಿಗೆ ಅನುಗುಣವಾಗಿ ಸಾಲ ಸೌಲಭ್ಯಗಳು ಮತ್ತು ಕರೆನ್ಸಿ ಬೆಂಬಲದ ಮೂಲಕ ಬಹು ಆಯಾಮದ ಸಹಾಯವನ್ನು ನೀಡಿತು ಎಂದರು.

    ಒಟ್ಟಿನಲ್ಲಿ NAM ಶೃಂಗಸಭೆಯಲ್ಲಿ ಅತ್ಯುತ್ತಮ ವ್ಯವಸ್ಥೆಗಳಿಗಾಗಿ ಜೈಶಂಕರ್‌ ಅವರು ಧನ್ಯವಾದಗಳನ್ನು ತಿಳಿಸಿದರು. ಉಗಾಂಡಾದ ಅಧ್ಯಕ್ಷ ಸ್ಥಾನಕ್ಕೆ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಶ್ರೀಲಂಕಾ, ಪ್ಯಾಲೆಸ್ಟೇನ್‌ ಜೊತೆಗೆ ಬಹ್ರೇನ್, ಸರ್ಬಿಯಾ, ಬೊಲಿವಿಯಾ, ಅಜೆರ್ಬೈಜಾನ್ ಮತ್ತು ವೆನೆಜುವೆಲಾದ ತಮ್ಮ ಸಹವರ್ತಿಗಳೊಂದಿಗೆ ಕೂಡ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

  • ಉಗಾಂಡದಲ್ಲಿ ಉಗ್ರರ ದಾಳಿ 37 ವಿದ್ಯಾರ್ಥಿಗಳ ಸಜೀವ ದಹನ

    ಉಗಾಂಡದಲ್ಲಿ ಉಗ್ರರ ದಾಳಿ 37 ವಿದ್ಯಾರ್ಥಿಗಳ ಸಜೀವ ದಹನ

    ಕಂಪಾಲ: ಇಸ್ಲಾಮಿಕ್ ಸ್ಟೇಟ್ ಉಗ್ರರು (Islamic State Militants) ಹಾಸ್ಟೆಲ್ (Hostel) ಒಂದರ ಮೇಲೆ ದಾಳಿ ನಡೆಸಿ 37 ವಿದ್ಯಾರ್ಥಿಗಳನ್ನು ಬೆಂಕಿ ಹಾಕಿ ಸಾಯಿಸಿರುವ ಭೀಕರ ಘಟನೆ ಪಶ್ಚಿಮ ಉಗಾಂಡಾದಲ್ಲಿ (Uganda) ನಡೆದಿದೆ. ಕಳೆದ ಹತ್ತು ವರ್ಷಗಳಲ್ಲಿ ನಡೆದ ಭೀಕರ ಘಟನೆ ಇದಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಎಂಪಾಂಡ್ವೆಯ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮಾಧ್ಯಮಿಕ ಶಾಲೆಯ ಮೇಲೆ ಈ ದಾಳಿ ನಡೆದಿದೆ. ಸೇನೆಯಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಸಾವರ್ಕರ್ ವಿಚಾರ ಕಡಿತದಿಂದ ವಿದ್ಯಾರ್ಥಿಗಳಿಗೆ ವಂಚನೆ: ರಂಜಿತ್ ಸಾವರ್ಕರ್

    37 ಶವಗಳು ಪತ್ತೆಯಾಗಿದ್ದು ಅವುಗಳನ್ನು ಗುರುತಿಸಲಾರದಷ್ಟು ಸುಟ್ಟು ಕರಕಲಾಗಿವೆ. ಅಲ್ಲದೇ ಕೆಲವು ಮೃತ ದೇಹಗಳ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಶವಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗುರುತು ಪತ್ತೆಗೆ ಡಿಎನ್‍ಎ ಪರೀಕ್ಷೆ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾಳಿಯಲ್ಲಿ 8 ಮಂದಿ ಗಾಯಗೊಂಡಿದ್ದು, 6 ಇತರರನ್ನು ದಾಳಿಕೋರರು ಅಪಹರಿಸಿದ್ದಾರೆ. ಸೇನೆ ಉಗ್ರರನ್ನು ಹಿಂಬಾಲಿಸಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಮಿಲ್‌ನಲ್ಲಿ ಇದೆಯಾ ಅಷ್ಟು ಅಕ್ಕಿ?: ಸಿಎಂ ಸಿದ್ದರಾಮಯ್ಯ ತಿರುಗೇಟು

  • ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್‌ ಮಾಡಿದ ಉಗಾಂಡ

    ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್‌ ಮಾಡಿದ ಉಗಾಂಡ

    ಕಂಪಾಲಾ: ಉಗಾಂಡ (Uganda) ಸಂಸತ್ (Parliament) ಲೈಂಗಿಕ ಅಲ್ಪಸಂಖ್ಯಾತ (LGBTQ) ಸಮುದಾಯದ ವಿರುದ್ಧ ವಿವಾದಾತ್ಮಕ ಮಸೂದೆಯೊಂದನ್ನು ಅಂಗೀಕರಿಸಿದೆ. ಸಲಿಂಗ ಸಂಬಂಧಗಳಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಮರಣದಂಡನೆಯಂತಹ ಕಠಿಣ ಕ್ರಮದ ಅಂಶಗಳನ್ನು ಮಸೂದೆ ಒಳಗೊಂಡಿದೆ.

    ಈಗಾಗಲೇ ಆಫ್ರಿಕನ್ ದೇಶಗಳು ಸಲಿಂಗ ಸಂಬಂಧಗಳನ್ನು ನಿಷೇಧಿಸಿ ಕಾನೂನು ರೂಪಿಸಿವೆ. ಆದರೆ ನೂತನ ಮಸೂದೆಯು ಹಿಂದಿನ ನಿಯಮಗಳನ್ನು ಮತ್ತಷ್ಟು ಭದ್ರಪಡಿಸುತ್ತವೆ. ಇದನ್ನೂ ಓದಿ: ಗಗನಕ್ಕೇರಿದ Gold Rate – 60 ಸಾವಿರ ಗಡಿ ದಾಟಿದ ಚಿನ್ನ

    ಮಸೂದೆಯ ಅನ್ವಯ ಅಧಿಕಾರಿಗಳಿಗೆ, ಸಲಿಂಗ ಸಂಬಂಧದಲ್ಲಿರುವವರನ್ನು ಗುರುತಿಸಿ ವರದಿ ಮಾಡಲು ಅವಕಾಶ ನೀಡಲಾಗಿದೆ. ಎಲ್‍ಜಿಬಿಟಿ ಸಮುದಾಯಗಳ ಹಕ್ಕುಗಳಿಗೆ ಹೋರಾಡುವ ಹಾಗೂ ಅಂತಹ ಸಂಸ್ಥೆಗಳಿಗೆ ಬೆಂಬಲ ನೀಡಿ ಹಣಕಾಸಿನ ನೆರವು ನೀಡುವ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳನ್ನು ಶಿಕ್ಷೆಗೆ ಗುರಿಪಡಿಸಲು ನೆರವಾಗಲಿದೆ.

    ಚರ್ಚ್ ಸಂಸ್ಕಂತಿ ರಕ್ಷಿಸುವ ಗುರಿಯಿಂದ ಮಸೂದೆ ರಚಿಸಿ ಮಂಡಿಸಲಾಗಿದೆ. ಕೌಟುಂಬಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿದು ಲೈಂಗಿಕ ಅಶ್ಲೀಲತೆಯಿಂದ ದೇಶವನ್ನು ಕಾಪಾಡಬೇಕಿದೆ. 389 ಸದಸ್ಯರು ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿಯನ್ನು ಅಧ್ಯಕ್ಷ ಯೊವೆರೆ ಮುಸೆವೆನಿಯವರ ಸಹಿಗೆ ಕಳುಹಿಸಿ ಕೊಡಲಾಗುವುದು ಎಂದು ಮಸೂದೆ ಮಂಡಿಸಿರುವ ಶಾಸಕ ಅಸುಮಾನ್ ಬಸಲಿರ್ವಾ ತಿಳಿಸಿದ್ದಾರೆ.

    ಮಸೂದೆಯನ್ನು ವಿರೋಧಿಸಿ ಕಂಪಾಲಾ (Kampala) ಮೂಲದ ವಕೀಲೆ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತೆ (Lawyer and human rights activist)ಸಾರಾ ಕಸಂಡೆ ಟ್ವೀಟ್ ಮಾಡಿ, ಉಗಾಂಡದ ಇತಿಹಾಸದಲ್ಲಿ ದುರಂತದ ದಿನವಾಗಿದೆ. ದ್ವೇಷಕ್ಕೆ ಮಹತ್ವ ಕೊಟ್ಟು ಎಲ್‍ಜಿಬಿಟಿಐಕ್ಯೂ ಸಮುದಾಯದ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಕಾನೂನಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 2 ಸಾವಿರಕ್ಕೂ ಅಧಿಕ ಮೋದಿ ವಿರೋಧಿ ಪೋಸ್ಟರ್‌ಗಳು – ನಾಲ್ವರು ಅರೆಸ್ಟ್

  • ಹೊಸ ವರ್ಷ ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವು

    ಹೊಸ ವರ್ಷ ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವು

    ಕಂಪಾಲಾ: ಹೊಸ ವರ್ಷ (New Year) ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವನ್ನಪ್ಪಿದ ಘಟನೆ ಉಗಾಂಡಾದ ಶಾಪಿಂಗ್ ಮಾಲ್‍ನಲ್ಲಿ (Shopping Mall) ನಡೆದಿದೆ.

    ಉಗಾಂಡಾದ (Uganda) ಕಂಪಾಲಾದ ಫ್ರೀಡಂ ಸಿಟಿ ಮಾಲ್‍ನಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷ ಆಚರಣೆಗಾಗಿ ಈ ಮಾಲ್‍ಗೆ ಜನರು ಸೇರಿದ್ದರು. ಈ ವೇಳೆ ಪಟಾಕಿ ಪ್ರದರ್ಶನವನ್ನು ವೀಕ್ಷಿಸಲು ಜನರಲ್ಲಿ ನೂಕು ನುಗ್ಗಲು ಉಂಟಾಗಿದೆ.

    ಇದರಿಂದಾಗಿ ಮಾಲ್‌ನಲ್ಲಿ ಕಾಲ್ತುಳಿತ ಉಂಟಾಗಿದ್ದು, ಪರಿಣಾಮವಾಗಿ 9 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಜನರಿಗೆ ಗಾಯಗಳಾಗಿದೆ. ಈ ಬಗ್ಗೆ ಉಗಾಂಡಾ ಪೊಲೀಸ್ ಫೋರ್ಸ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ – ಜನಾರ್ದನ ರೆಡ್ಡಿ

    ಟ್ವೀಟ್‍ನಲ್ಲಿ ಏನಿದೆ?: ಫ್ರೀಡಂ ಸಿಟಿ ಮಾಲ್ ನಮಸುಬಾದಲ್ಲಿ ಹೊಸ ವರ್ಷದಂದು ಸಂಭವಿಸಿದ ಘಟನೆಯಲ್ಲಿ ಮಕ್ಕಳು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ವೇಳೆ ಗಾಯಗೊಂಡ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು ಎಂದು ತಿಳಿಸಿದೆ. ಇದನ್ನೂ ಓದಿ: ಸಿ.ಟಿ ರವಿ ಒಬ್ಬ ಕುಡುಕ, ಗಾಂಜಾನೂ ಹೊಡಿತಾರೆ: ಬಿ.ಕೆ ಹರಿಪ್ರಸಾದ್

    Live Tv
    [brid partner=56869869 player=32851 video=960834 autoplay=true]

  • ಆರ್ಥಿಕ ಸಮಸ್ಯೆ ಇದ್ದು, ಇನ್ಮುಂದೆ ಮಕ್ಕಳು ಮಾಡಲ್ಲ ಎಂದ 12 ಪತ್ನಿ, 102 ಮಕ್ಕಳನ್ನು ಹೊಂದಿದ ವ್ಯಕ್ತಿ!

    ಆರ್ಥಿಕ ಸಮಸ್ಯೆ ಇದ್ದು, ಇನ್ಮುಂದೆ ಮಕ್ಕಳು ಮಾಡಲ್ಲ ಎಂದ 12 ಪತ್ನಿ, 102 ಮಕ್ಕಳನ್ನು ಹೊಂದಿದ ವ್ಯಕ್ತಿ!

    ಕಂಪಾಲಾ: ವಯಸ್ಸಾದರೂ ಮದುವೆ ಆಗುತ್ತಿಲ್ಲ ಎಂಬ ಯೋಚನೆ ಅನೇಕರಿಗೆ ಇರುತ್ತದೆ. ಇನ್ನೂ ಕೆಲವರಿಗೆ ಮದುವೆಯಾದರೂ ಮಕ್ಕಳಿಲ್ಲ ಎಂಬ ಕೊರಗಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ 12 ಹೆಂಡತಿ (Wives) ಹಾಗೂ 102 ಮಕ್ಕಳನ್ನು (Kids) ಹೊಂದಿದ್ದು, ಇನ್ನು ಮುಂದೆ ಮಕ್ಕಳನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ.

    ಉಗಾಂಡಾದ (Uganda) ಲುಸಾಕಾದ ಮೂಸಾ ಹಸಾಹ್ಯ (67) ಪ್ರತಿಜ್ಞೆ ಮಾಡಿದ ವ್ಯಕ್ತಿ. ಉಗಾಂಡದಲ್ಲಿ ಬಹುಪತ್ನಿತ್ವ ಜಾರಿಯಲ್ಲಿದೆ. ಮೂಸಾ 16ನೇ ವಯಸ್ಸಿನಲ್ಲಿದ್ದಾಗ ತನ್ನ ಮೊದಲ ಪತ್ನಿ ಹನೀಫಾ ಅವರನ್ನು 1971ರಲ್ಲಿ ಮದುವೆಯಾಗಿದ್ದ. ಆ ಸಂದರ್ಭದಲ್ಲಿ ಶಾಲೆಯನ್ನು ತೊರೆದಿದ್ದ. 2 ವರ್ಷಗಳ ನಂತರ ಹನೀಫಾ ಮೊದಲ ಮಗುವಿಗೆ ಜನ್ಮ ನೀಡಿದ್ದಾಗ ಮೂಸಾ ಅನೇಕ ಮಹಿಳೆಯರನ್ನು ಮದುವೆ ಆಗಿದ್ದ.

    ಹೀಗೆ ಮದುವೆ ಆಗುತ್ತಾ ಆಗುತ್ತಾ ಈತ ಬರೊಬ್ಬರಿ 12 ಮದುವೆಯನ್ನು ಆಗಿದ್ದು, 102 ಮಕ್ಕಳನ್ನು ಹೊಂದಿದ್ದಾನೆ. ವಿಚಿತ್ರವೆಂದರೆ ಮೂಸಾಗೆ ತನ್ನ ಕೆಲವು ಮಕ್ಕಳ ಹಾಗೂ ಮೊಮ್ಮಕ್ಕಳ ಹೆಸರುಗಳೇ ತಿಳಿದಿಲ್ಲ. ಆದರೆ ಈ ಎಲ್ಲ ಪತ್ನಿಯರಿಗೆ ಹಾಗೂ ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕಲು ಈತ ಹೆಣಗಾಡುತ್ತಿದ್ದಾನೆ.

    ಅಷ್ಟೇ ಅಲ್ಲದೇ ಇವರೆಲ್ಲರೂ ಒಂದೇ ಮನೆಯಲ್ಲೇ ವಾಸಿಸುತ್ತಿದ್ದು, 12 ಕೊಣೆ ಮನೆಯಲ್ಲೇ 12 ಹೆಂಡತಿಯರು 102 ಮಕ್ಕಳು, 568 ಮೊಮ್ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಆದರೆ ಇಡೀ ಮನೆಯನ್ನು ನಿರ್ವಹಿಸಲು ಆರ್ಥಿಕ ಸಮಸ್ಯೆಯನ್ನು ಹೊಂದಿದ್ದು, ಈ ಸಮಸ್ಯೆಯನ್ನು ನಿರ್ವಹಿಸಲು ಒಂದು ಪರಿಹಾರವನ್ನು ಹುಡುಕಿದ್ದಾನೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

    ಈತ ಇನ್ನು ಮುಂದೆ ಮಕ್ಕಳನ್ನು ಮಾಡಬಾರದು ಎಂದು ನಿರ್ಧರಿಸಿ, ಮಕ್ಕಳನ್ನು ಹೆರುವ ವಯಸ್ಸಿನ ತನ್ನ ಎಲ್ಲಾ ಪತ್ನಿಯರಿಗೆ ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಆದೇಶಿಸಿದ್ದಾನೆ. ಅಷ್ಟೇ ಅಲ್ಲದೇ ಇತ್ತೀಚೆಗೆ ತನ್ನ ಆರ್ಥಿಕ ಸಮಸ್ಯೆಯಿಂದಾಗಿ ಆತ ಇಬ್ಬರು ಪತ್ನಿಯನ್ನು ತೊರೆದಿದ್ದಾನೆ. ಇದನ್ನೂ ಓದಿ: ವಸ್ತ್ರಸಂಹಿತೆ ವಾರ್ ಮತ್ತೆ ಮುನ್ನೆಲೆಗೆ- ಚಾಮುಂಡಿ ದೇವಿ ದರ್ಶನಕ್ಕೆ ಡ್ರೆಸ್‍ಕೋಡ್‍ಗೆ ಆರ್ಡರ್

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ

    ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ

    ಧಾರವಾಡ: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಸಂಶೋಧನಾ ವಿದ್ಯಾರ್ಥಿ (Student) ಉಗಾಂಡ (Uganda) ದೇಶದ ವಿದ್ಯಾರ್ಥಿಯೊಬ್ಬ ಹೇಳದೇ ಕೇಳದೇ ಎಲ್ಲೋ ಹೋಗಿ ಬಿಟ್ಟಿದ್ದಾನೆ. ಈಗ ಆತನಿಗಾಗಿ ಕರ್ನಾಟಕ ವಿವಿ ಆಡಳಿತ ಮಂಡಳಿ ಶೋಧ ನಡೆಸುತ್ತಿದೆ.

    ವಿಶ್ವವಿದ್ಯಾಲಯದ ಭೀಮಾ ವಸತಿ ನಿಲಯದಲ್ಲಿದ್ದ ಉಗಾಂಡಾದ ಜೋಯೆಲ್ ಕನ್ಯನಾ ಎಂಬ ವಿದ್ಯಾರ್ಥಿ ಸಂಶೋಧನಾ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡುತ್ತಿದ್ದ. ತತ್ವಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಮಾಡುತ್ತಿದ್ದ ಈತ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಾಪತ್ತೆಯಾಗಿದ್ದು, ಆತನ ಶೋಧ ಕಾರ್ಯಕ್ಕೆ ಕರ್ನಾಟಕ ವಿವಿ ಆಡಳಿತ ಮಂಡಳಿ ಉಗಾಂಡ ಸರ್ಕಾರಕ್ಕೂ ಪತ್ರ ಬರೆದಿದೆ. ಅಲ್ಲದೇ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿದೆ.

    ಕವಿವಿಯ ಭೀಮಾ ವಸತಿ ನಿಲಯದಲ್ಲಿದ್ದ ಈ ಜೋಯೆಲ್, ಲಾಕ್‍ಡೌನ್ ಅವಧಿಯಲ್ಲೂ ವಸತಿ ನಿಲಯದಲ್ಲಿದ್ದುಕೊಂಡೇ ಓದುತ್ತಿದ್ದ. ಆದರೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ತನ್ನ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿರುವ ಈತ ಮರಳಿ ಬಂದೇ ಇಲ್ಲ. ಪಿಎಚ್.ಡಿ ಕುರಿತು ಮಾರ್ಗದರ್ಶನ ನೀಡುತ್ತಿದ್ದ ಶಿಕ್ಷಕರಿಗೂ ಈತ ಭೇಟಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೇನಲ್ಲಿ ತನಿಖೆ ನಡೆಸಿದಾಗ ಅವರು ನಾಪತ್ತೆ ಆಗಿರುವುದು ತಿಳಿಸಿದೆ. ಹೀಗಾಗಿ ಜುಲೈನಲ್ಲಿ ಆತನ ಪತ್ತೆಗಾಗಿ ಉಗಾಂಡ ಸರ್ಕಾರ ಹಾಗೂ ಹುಬ್ಬಳ್ಳಿ, ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಇದೀಗ ಉಂಗಾಂಡ ಹೈಕಮಿಷನರ್‌ಗೂ ದೂರು ನೀಡಲಾಗಿದೆ. ಇದನ್ನೂ ಓದಿ: ಪಿಒಕೆ ಮರಳಿ ಪಡೆದಾಗಲೇ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ: ರಾಜನಾಥ್ ಸಿಂಗ್

    ತತ್ವಶಾಸ್ತ್ರ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಜೋಯೆಲ್, ಭೀಮಾ ವಸತಿ ನಿಲಯದ 6ನೇ ನಂಬರ್ ಕೊಠಡಿಯಲ್ಲಿ ಉಳಿದುಕೊಂಡಿದ್ದ. ತಾನು ಹಾಸ್ಟೆಲ್ ಬಿಟ್ಟು ಹೋಗುವಾಗ ತನ್ನ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದು, ಬೀಗ ಕೈಯನ್ನೂ ತನ್ನ ಜೊತೆಗೆ ತೆಗೆದುಕೊಂಡು ಹೋಗಿದ್ದಾನೆ. ಆತ ಹೋದಾಗಿನಿಂದ ಯಾರೂ ಕೂಡ ಆ ಕೊಠಡಿಯ ಬೀಗ ತೆಗೆದು ನೋಡಿಲ್ಲ. ಇನ್ನು ಇಲ್ಲಿ ಇದ್ದಾಗ ಈ ವಿದ್ಯಾರ್ಥಿಯ ಪಾಸ್‍ಪೋರ್ಟ್ ವೀಸಾ ಕೂಡಾ ಮುಗಿದಿತ್ತು. ಹೀಗಾಗಿ ಅವನಿಗೆ ವೀಸಾ ಅವಧಿ ವಿಸ್ತರಣೆ ಮಾಡಿಕೊಳ್ಳಲು ಮಾಹಿತಿ ನೀಡಲಾಗಿತ್ತು. ಅಷ್ಟರಲ್ಲೇ ಈತ ವೀಸಾ ವಿಸ್ತರಣೆ ಮಾಡದೇ ಹೇಳದೇ ಕೇಳದೇ ಹೋಗಿದ್ದಾನೆ. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‍ಗೆ ಬೈಕ್ ಸ್ಟಂಟ್ ಮಾಡಿದ ಜೋಡಿಗಳು

    Live Tv
    [brid partner=56869869 player=32851 video=960834 autoplay=true]

  • ಉಗಾಂಡಾದ ಅಧರ ಶಾಲೆಗೆ ಬೆಂಕಿ – ಮಕ್ಕಳು ಸೇರಿ 11 ಮಂದಿ ದುರ್ಮರಣ

    ಉಗಾಂಡಾದ ಅಧರ ಶಾಲೆಗೆ ಬೆಂಕಿ – ಮಕ್ಕಳು ಸೇರಿ 11 ಮಂದಿ ದುರ್ಮರಣ

    ಕಂಪಾಲಾ: ಅಂಧರ ಶಾಲೆಗೆ (School For The Blind) ಬೆಂಕಿ (Fire) ಬಿದ್ದಿರುವ ಪರಿಣಾಮ ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿರುವ ಭೀಕರ ಘಟನೆ ಉಗಾಂಡಾದಲ್ಲಿ (Uganda) ನಡೆದಿರುವುದಾಗಿ ಮಂಗಳವಾರ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಉಗಾಂಡಾದ ರಾಜಧಾನಿ ಕಂಪಾಲಾದಿಂದ (Kampala) ಹೊರಗಿರುವ ಗ್ರಾಮೀಣ ಸಮುದಾಯದ ಶಾಲೆಯೊಂದರಲ್ಲಿ ನಡೆದಿದೆ. ಮುಕೊನೊ ಜಿಲ್ಲೆಯ ಅಂಧರ ಶಾಲೆಯಲ್ಲಿ ರಾತ್ರಿಯ ವೇಳೆ ಘಟನೆ ಸಂಭವಿಸಿದ್ದಾಗಿ ಪೊಲೀಸ್ ವಕ್ತಾರ ಲ್ಯೂಕ್ ಓವೊಯೆಸಿಗಿರ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ವಾಟ್ಸಪ್‌ಗೂ ಗ್ರಹಣ – ಸಂದೇಶ ಕಳುಹಿಸಲಾಗದೇ ಜನರ ಒದ್ದಾಟ

    ಘಟನೆಯ ಬಗ್ಗೆ ಅಧಿಕಾರಿಗಳು ವಿವರವಾದ ಮಾಹಿತಿ ನೀಡಿಲ್ಲವಾದರೂ ಅನಾಹುತದ ಬಗ್ಗೆ ಪೂರ್ವ ಆಫ್ರಿಕನ್ ದೇಶದ ಶಿಕ್ಷಣ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ 2022ರಲ್ಲಿ ಕಂಪಾಲಾದ ಪ್ರಮುಖ ಬೋರ್ಡಿಂಗ್ ಶಾಲೆಯ 2 ವಸತಿ ನಿಲಯಗಳು ಪ್ರತ್ಯೇಕ ಘಟನೆಗಳಲ್ಲಿ ಬೆಂಕಿ ತಗುಲಿ ನಾಶವಾಗಿತ್ತು. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. 2008ರಲ್ಲಿ ಕಂಪಾಲಾ ಬಳಿಯ ಬೋರ್ಡಿಂಗ್ ಶಾಲೆಯಲ್ಲಿ ರಾತ್ರಿಯ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು, 19 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]

  • ಹಾಸ್ಟೆಲ್ ಮೇಲಿಂದ ಬಿದ್ದು ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು – ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಆಕ್ರೋಶ

    ಹಾಸ್ಟೆಲ್ ಮೇಲಿಂದ ಬಿದ್ದು ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು – ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಆಕ್ರೋಶ

    ಚಿಕ್ಕಬಳ್ಳಾಪುರ: ಹಾಸ್ಟೆಲ್ ಮೇಲಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು, ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಬಳಿಯ ಗೀತಂ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

    ಉಗಾಂಡ ದೇಶದ ಹಸೀನಾ ಮೃತ ದುರ್ದೈವಿಯಾಗಿದ್ದು, ಗೀತಂ ವಿಶ್ವವಿದ್ಯಾಲಯದ ಬಿಬಿಎ ವಿದ್ಯಾರ್ಥಿನಿಯಾಗಿದ್ದಾರೆ. ಬಟ್ಟೆ ತರಲೆಂದು 7ನೇ ಮಹಡಿ ಮೇಲೆ ಹೋಗಿದ್ದ ಹಸೀನಾ ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ 6ನೇ ಮಹಡಿಯಿಂದ ಬಿದ್ದಿದ್ದಾರೆ. ಇದನ್ನೂ ಓದಿ: ಹಲಾಲ್‌ ಮಾಂಸ, ಮಸೀದಿಗಳಲ್ಲಿ ಧ್ವನಿವರ್ಧಕ ಏಕೆ ನಿಷೇಧಿಸಬೇಕು: ಒಮರ್‌ ಅಬ್ದುಲ್ಲಾ ಪ್ರಶ್ನೆ

    ನಂತರ ಒಂದು ಗಂಟೆ ಕಳೆದರೂ ಹಸೀನಾರನ್ನು ಆಸ್ಪತ್ರೆಗೆ ಕರೆದೊಯ್ಯದೆ ನಿರ್ಲಕ್ಷ್ಯ ತೋರಿಸಿದ ಹಿನ್ನೆಲೆ ರೊಚ್ಚಿಗಿದ್ದ ಇತರೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿ ಹಾಸ್ಟೆಲ್‍ನ ಕಿಟಕಿ ಬಾಗಿಲಿನ ಗಾಜುಗಳನ್ನು ಪುಡಿ, ಪುಡಿಗೊಳಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಣಾಮವಾಗಿ ಹಾಸ್ಟೆಲ್‌ನಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದನ್ನೂ ಓದಿ: ಕೊರೊನಾ ಇನ್ನೂ ಮುಗಿದಿಲ್ಲ, ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ: ಉದ್ಧವ್ ಠಾಕ್ರೆ