Tag: Ugadi Festival

  • ಯುಗಾದಿ ಚಂದ್ರನ ದರ್ಶನ – ಏನಿದರ ಮಹತ್ವ?

    ಯುಗಾದಿ ಚಂದ್ರನ ದರ್ಶನ – ಏನಿದರ ಮಹತ್ವ?

    ಹಿಂದೂ ಧರ್ಮದ (Hindu Religion) ಬಹುತೇಕ ಆಚರಣೆಗಳು ಪ್ರಕೃತಿಯೊಂದಿಗೆ ಸಂಬಂಧ ಹೊಂದಿವೆ. ಅದೇ ರೀತಿ ಯುಗಾದಿ ಹಬ್ಬ (Ugadi Festival) ಸಹ ಪ್ರಕೃತಿ ವಸಂತ ಕಾಲದ ಉತ್ತುಂಗದಲ್ಲಿದ್ದಾಗ ಆಚರಿಸುವ ವಿಶೇಷ ಹಬ್ಬವಾಗಿದೆ. ಈ ಸಮಯದಲ್ಲಿ ಪ್ರಕೃತಿಯೇ ಹಸಿರು, ಹೂವಿನ ತಳಿರು ತೋರಣ ಕಟ್ಟಿ ಸಂಭ್ರಮಿಸುತ್ತಿರುತ್ತದೆ. ಈ ಹಬ್ಬದಂದು ಸಂಜೆ ಚಂದ್ರನ (Moon) ದರ್ಶನಕ್ಕೆ ಸಹ ವಿಶೇಷ ಮಹತ್ವವಿದೆ.

    ಗಣಪತಿ ತನ್ನ ವಾಹನ ಇಲಿಯನ್ನೇರಿ ಹೋಗುತ್ತಿದ್ದಾಗ ಆಯತಪ್ಪಿ ಬೀಳುತ್ತಾನೆ. ಇದನ್ನು ಕಂಡು ಆಕಾಶದಲ್ಲಿದ್ದ ಚಂದ್ರ ನಗುತ್ತಾನೆ. ಇದನ್ನು ನೋಡಿದ ಗಣೇಶ, ಚೌತಿಯ ದಿನ ಚಂದ್ರನನ್ನು ನೋಡಿದರೆ ಅಪವಾದ ಬರಲಿ ಎಂದು ಶಾಪ ನೀಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಶಾಪ ವಿಮೋಚನೆಗೆ ಯುಗಾದಿ ಚಂದ್ರನ ದರ್ಶನ ಮಾಡಬೇಕು ಎಂಬ ನಂಬಿಕೆ ಇದೆ.

    ಚಂದ್ರ ಶುದ್ಧತೆ, ಬುದ್ಧಿವಂತಿಕೆಯ ಸಂಕೇತ

    ಹಿಂದೂ ಧರ್ಮದ ಪ್ರಕಾರ, ಚಂದ್ರ ನವಗ್ರಹಗಳಲ್ಲಿ ಒಬ್ಬ, ಶುದ್ಧತೆ, ಬುದ್ಧಿವಂತಿಕೆ ಹಾಗೂ ಉತ್ತಮ ನಡವಳಿಕೆಯ ಸಂಕೇತವಾಗಿ ಆತನನ್ನು ಬಿಂಬಿಸಲಾಗುತ್ತದೆ. ಅಂತಹ ಚಂದ್ರನನ್ನು ವರ್ಷದ ಆದಿ ಪರ್ವವಾದ ಯುಗಾದಿಯಂದು ದರ್ಶನ ಪಡೆದರೆ, ಇಡೀ ವರ್ಷವೆಲ್ಲಾ ಸುಖ-ಸಂತೋಷದಿಂದ ಇರುತ್ತಾರೆ ಎಂಬ ನಂಬಿಕೆ ಇದೆ. ಇದೇ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿ ಚಂದ್ರನನ್ನು ನೋಡುವುದು ವಾಡಿಕೆಯಾಗಿದೆ. ಯುಗಾದಿಯ ಹಿಂದಿನ ದಿನ ಅಮಾವಾಸ್ಯೆಯಲ್ಲಿ ಬರುವುದರಿಂದ ಮರು ದಿನ ಚಂದ್ರನ ದರ್ಶನಕ್ಕೆ ಪುಣ್ಯ ಮಾಡಿರಬೇಕು!

    ಚಂದ್ರ ದರ್ಶನದಿಂದ ಮಳೆ-ಬೆಳೆ ಲೆಕ್ಕಾಚಾರ

    ಯುಗಾದಿ ದಿನದಂದು ಕಾಣಿಸುವ ಚಂದ್ರನನ್ನು ಆಧರಿಸಿ ಹಿಂದೆ ಆ ವರ್ಷದ ಮಳೆ-ಬೆಳೆ, ರೋಗ-ರುಜಿನಗಳು, ಏಳು-ಬೀಳುಗಳ ಬಗ್ಗೆ ಚಿಂತನೆ ಮಾಡುತ್ತಿದ್ದರು. ಯುಗಾದಿಯಂದು ಚಂದ್ರನು ಅತ್ಯಂತ ಚಿಕ್ಕದಾಗಿ ಸಣ್ಣ ಗೆರೆಯ ರೀತಿಯಲ್ಲಿ ಕಾಣ ಸಿಗುತ್ತಾನೆ. ಇದನ್ನು ಆಧರಿಸಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತಿದ್ದರು. ಅದಕ್ಕೆಂದೇ ಹೊಸ ವರ್ಷದ ಪಂಚಾಂಗವನ್ನು ಪಠಿಸಿ, ಅನಂತರ ಚಂದ್ರ ದರ್ಶನವನ್ನು ಮಾಡಲಾಗುತ್ತದೆ.

  • ಯುಗಾದಿ ಹಬ್ಬದಂದು ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ ರಾಗಿಣಿ

    ಯುಗಾದಿ ಹಬ್ಬದಂದು ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ ರಾಗಿಣಿ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ರಾಗಿಣಿ ದ್ವಿವೇದಿ (Ragini Dwivedi)  ಅವರ ಕೈಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ಬ್ಯುಸಿ ನಟಿ ರಾಗಿಣಿ ಇದೀಗ ಯುಗಾದಿ ಹಬ್ಬಕ್ಕೆ ರೆಡ್ ಸ್ಯಾರಿಯಲ್ಲಿ ಮಿಂಚಿದ್ದಾರೆ. ಸದಾ ಹಾಟ್ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದ ಬ್ಯೂಟಿ ಈಗ ಸೀರೆಯುಟ್ಟು ದರ್ಶನ ನೀಡಿದ್ದಾರೆ.

    `ರಾ’ಗಿಣಿ ಕನ್ನಡ ಮಾತ್ರವಲ್ಲದೇ ಸೌತ್ ಮತ್ತು ಬಾಲಿವುಡ್‌ನಲ್ಲಿ (Bollywood)  ಕೂಡ ನಟಿಸುತ್ತಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ನಟಿ ಬರುತ್ತಿದ್ದಾರೆ. ಕೆಂಪೇಗೌಡ, ವೀರ ಮದಕರಿ, ಕಳ್ಳ ಮಳ್ಳ ಸುಳ್ಳ ಸಿನಿಮಾಗಳಿಂದ ಗಮನ ಸೆಳೆದಿದ್ದಾರೆ.‌ ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ನಟನೆಯ `ಬ್ಯಾಡ್ ಮ್ಯಾನರ್ಸ್’ ಫಸ್ಟ್ ಸಾಂಗ್ ಔಟ್

    ಸದಾ ಮಾಡ್ರನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಗಿಣಿ ಈಗ ಮಹಾಲಕ್ಷ್ಮಿಯಂತೆ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಕೆಂಪು ಕಲರ್ ಸೀರೆಗೆ ಸಿಲ್ವರ್ ಬಾರ್ಡರ್ ಹೈಲೈಟ್ ಆಗಿದೆ. ಗ್ರ್ಯಾಂಡ್ ಜ್ಯುವೆಲ್ಲರಿ ಧರಿಸಿ ಸಿಂಪಲ್ ಮೇಕಪ್‌ನಲ್ಲಿ ನಟಿ ಮಿಂಚಿದ್ದಾರೆ.

    ಇನ್ನೂ ರಾಗಿಣಿ ಲಿಸ್ಟ್ ಒಟ್ಟು ಏಳು ಸಿನಿಮಾಗಳಿವೆ. ಇನ್ನೊಂದಿಷ್ಟು ಚಿತ್ರಗಳು ಮಾತುಕತೆಯ ಹಂತದಲ್ಲಿದೆ. ಈ ವರ್ಷ ರಾಗಿಣಿ ಅಭಿಮಾನಿಗಳಿಗೆ ಸಿನಿಮಾಗಳ ಮೂಲಕ ಹಬ್ಬವೋ ಹಬ್ಬ.

  • ಮೊದಲ ಯುಗಾದಿ ಸಂಭ್ರಮದಲ್ಲಿ `ಸಿಂಹಪ್ರಿಯಾ’ ಜೋಡಿ

    ಮೊದಲ ಯುಗಾದಿ ಸಂಭ್ರಮದಲ್ಲಿ `ಸಿಂಹಪ್ರಿಯಾ’ ಜೋಡಿ

    ಸ್ಯಾಂಡಲ್‌ವುಡ್ (Sandalwood) ಸ್ಟಾರ್ ಕಪಲ್ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ (Haripriya) ಇದೀಗ ತಮ್ಮ ಮೊದಲ ಯುಗಾದಿ (Ugadi Festival) ಸಂಭ್ರಮದಲ್ಲಿದ್ದಾರೆ. ಮದುವೆಯಾದ್ಮೇಲೆ ಇದು ಮೊದಲ ಯುಗಾದಿಯಾಗಿದ್ದು, ಅಭಿಮಾನಿಗಳಿಗೆ ಸಿಂಹಪ್ರಿಯಾ ಜೋಡಿ ವಿಶ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಈ ವರ್ಷ ಜನವರಿ 26ರಂದು ಸಿಂಹಪ್ರಿಯಾ (Simhapriya) ಜೋಡಿ ಮೈಸೂರಿನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾಗಿ ಎರಡು ತಿಂಗಳು ಪೂರೈಸಿದೆ. ಇದೀಗ ಖುಷಿ ಖುಷಿಯಾಗಿ ತಮ್ಮ ಮೊದಲ ಯುಗಾದಿ ಹಬ್ಬವನ್ನ ಈ ಜೋಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: KD Film: ಮತ್ತೆ ಕನ್ನಡಕ್ಕೆ ರಾಯಲ್ ಆಗಿ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ

     

    View this post on Instagram

     

    A post shared by Vasishta N Simha (@imsimhaa)

    ನಟಿ ಹರಿಪ್ರಿಯಾ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ರೆ,‌ ವಸಿಷ್ಠ ಕಪ್ಪು ಮತ್ತು ಕಂದು ಬಣ್ಣದ ಕುರ್ತಾ ಕಪ್ಪು ಕಲರ್ ಪ್ಯಾಂಟ್ ಧರಿಸಿದ್ದಾರೆ. ಮುದ್ದಾದ ಜೋಡಿ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ನವಜೋಡಿಗೆ ಯುಗಾದಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

    ಇನ್ನೂ ವಸಿಷ್ಠ ಸಿಂಹ- ಹರಿಪ್ರಿಯಾ ನಟಿಸಿರುವ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಇಬ್ಬರು ತೆರೆಯ ಮೇಲೆ ಮೊದಲ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

  • ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ- ಐತಿಹಾಸಿಕ ದೇವಾಲಯದಲ್ಲಿ ಕೌತುಕ

    ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ- ಐತಿಹಾಸಿಕ ದೇವಾಲಯದಲ್ಲಿ ಕೌತುಕ

    ಬಳ್ಳಾರಿ: ಯುಗಾದಿ ಹಬ್ಬ (Ugadi Festival) ಭಾರತೀಯರ ಹೊಸ ವರ್ಷದ ಮೊದಲ ಹಬ್ಬ. ಈ ವಿಶೇಷ ದಿನದಂದು ವಿಜಯನಗರ ಜಿಲ್ಲೆಯ ಹಳ್ಳಿಯಲ್ಲಿ ಸೂರ್ಯನ ಕೌತುಕವೊಂದು ನಡೆಯುತ್ತೆ. ಸಾವಿರ ವರ್ಷ ಇತಿಹಾಸ ಇರುವ ಲಿಂಗಕ್ಕೆ ಸೂರ್ಯ ರಶ್ಮಿ ನೇರವಾಗಿ ಬೀಳುತ್ತದೆ. ಹೀಗಾಗಿ ಇಲ್ಲಿನ ಭಕ್ತರು ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.

    ಯುಗಾದಿ ಹಬ್ಬವನ್ನು ಹಿಂದು ಸಂಸ್ಕೃತಿ ಪ್ರಕಾರ, ಹೊಸ ವರ್ಷವಾಗಿ ಆಚರಣೆ ಮಾಡಲಾಗುತ್ತೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಕಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಈ ದೇವಸ್ಥಾನದಲ್ಲಿ ಯುಗಾದಿ ವೇಳೆ ಎರಡ್ಮೂರು ದಿನಗಳ ಕಾಲ ಸೂರ್ಯ ರಶ್ಮಿ ಲಿಂಗದ ಮೇಲೆ ಬೀಳುತ್ತದೆ. ಆದರೆ ಹಬ್ಬದ ದಿನ ಮಾತ್ರ ಸೂರ್ಯೋದಯವಾಗುತ್ತಿದ್ದಂತೆ ನೇರವಾಗಿ ಹೊಂಗಿರಣಗಳು ಲಿಂಗದ ಮೇಲೆ ಬೀಳುತ್ತದೆ.

    ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಸೂರ್ಯನ ಚಲನೆ ಆಧಾರದ ಮೇಲೆ ನಿರ್ಮಿಸಲಾಗಿರುವ ವಿಶಿಷ್ಟ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಪ್ರತಿವರ್ಷ ಯುಗಾದಿಯ ದಿನ ಈ ಅಚ್ಚರಿಗೆ ಕಾರಣವಾಗುತ್ತಿದೆ. ದೇವಸ್ಥಾನದಲ್ಲಿ ಯುಗಾದಿ ಹಬ್ಬದ ದಿನದಂದು, ವಿಶೇಷ ಪೂಜೆ ಮಾಡಲಾಗುತ್ತದೆ. ನೂರಾರು ಭಕ್ತರು ಸೂರ್ಯನ ಮೊದಲ ಕಿರಣ ಶಿವಲಿಂಗದ ಮೇಲೆ ಬೀಳುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.

    ವರ್ಷಕ್ಕೆ ಒಂದು ಬಾರಿ ನಡೆಯುವ ಈ ದೇವಸ್ಥಾನದ ಕುತೂಹಲವನ್ನು ಜನರು ಕಾತುರದಿಂದ ಎದರು ನೋಡುತ್ತಾರೆ. ಶತಮಾನದ ಇತಿಹಾಸ ಇರುವ ಈ ದೇವಾಲಯ ಖಗೋಳ ಕೌತುಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸಮುದಾಯ ನಂಬದೇ ಅಭಿವೃದ್ಧಿ ಕೆಲಸದಿಂದ ಜಯ: ಇದು ಕಲಬುರಗಿ ವಿಶೇಷತೆ

  • ಯುಗಾದಿ ನಂತರ ಮೆಗಾ ಆಪರೇಷನ್‌ಗೆ `ಕೈ’ ಪಾಳಯ ಸಿದ್ಧತೆ?

    ಯುಗಾದಿ ನಂತರ ಮೆಗಾ ಆಪರೇಷನ್‌ಗೆ `ಕೈ’ ಪಾಳಯ ಸಿದ್ಧತೆ?

    ಬೆಂಗಳೂರು: ಯುಗಾದಿ ಹಬ್ಬದ (Ugadi Festival) ನಂತರ 20 ಪ್ರಮುಖ ಬಿಜೆಪಿ (BJP) ನಾಯಕರು ಹಾಗೂ ಶಾಸಕರ ಆಪರೇಷನ್‌ಗೆ ಕಾಂಗ್ರೆಸ್ (Congress) ಪಾಳಯದಲ್ಲಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.

    ವಲಸಿಗ ಸಚಿವರೂ ಸೇರಿದಂತೆ ಹಾಲಿ ಶಾಸಕರು ಹಾಗೂ ಆಯ್ದ ಪ್ರಮುಖ ನಾಯಕರನ್ನ ಕರೆತರುವ ಕಸರತ್ತು ಜೋರಾಗಿ ನಡೆದಿದೆ. ತೆರಮರೆಯಲ್ಲಿ ನಡೆದ ಮಾತುಕತೆಗೆ ತೆರೆ ಎಳೆಯಲು ಕಾಂಗ್ರೆಸ್ ಯುಗಾದಿ ಹಬ್ಬಕ್ಕೆ ಡೆಡ್ ಲೈನ್ ಹಾಕಿಕೊಂಡಿದೆ. ಇದನ್ನೂ ಓದಿ: ಮಾನವ ಹಕ್ಕುಗಳನ್ನು ಬಳಸಿ ನಮ್ಮಲ್ಲಿ ಇರಲು ಸಾಧ್ಯವಿಲ್ಲ: ಅಕ್ರಮ ವಲಸಿಗರ ನಿಯಂತ್ರಣಕ್ಕೆ ಮುಂದಾದ ಬ್ರಿಟನ್

    ಈ ಬಾರಿ ಕೈ ನಾಯಕರು ದೊಡ್ಡ ಮಟ್ಟದ ವಲಸೆ ನಿರೀಕ್ಷೆ ಮಾಡುತ್ತಿದ್ದಾರೆ. ಸಂಖ್ಯಾಬಲ ಹೆಚ್ಚಿಸಿಕೊಂಡು 2023 ರಲ್ಲಿ ಅಧಿಕಾರ ಹಿಡಿಯೋದಕ್ಕೆ ಪಕ್ಕಾ ಲೆಕ್ಕಾಚಾರ ಮಾಡಿದೆ. ಅದಕ್ಕಾಗಿ ಬಿಜೆಪಿ (BJP), ಜೆಡಿಎಸ್‌ನ (JDS) ಪ್ರಮುಖ ನಾಯಕರು ಬರಲು ಮನಸ್ಸು ಮಾಡಿದ್ರೆ, ಅವರನ್ನ ಕರೆತರಲು ಕೈ ಪಾಳಯ ಲೆಕ್ಕಾಚಾರ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ – ಅತ್ತೆ ಮನೆಯಲ್ಲಿ ಹೋಳಿ ಆಚರಿಸೋಕೆ 10 ದಿನ ರಜೆ ಕೇಳಿದ ಇನ್ಸ್‌ಪೆಕ್ಟರ್‌

    ಸಾಧ್ಯವಾದಷ್ಟು ಮಟ್ಟಿಗೆ ಯುಗಾದಿ ಹಬ್ಬದ ಆಸುಪಾಸಿನಲ್ಲೇ ಪಕ್ಷ ಸೇರ್ಪಡೆ ಮಾಡಿಕೊಳ್ಳುವುದು ಕೈ ಪಾಳಯದ ಲೆಕ್ಕಾಚಾರ. ಆದ್ದರಿಂದ ಪಕ್ಷ ಸೇರ್ಪಡೆ ಬಗ್ಗೆ ಒಲವು ತೋರಿದವರು, ಕಾಂಗ್ರೆಸ್ ನಾಯಕರೇ ಆಹ್ವಾನ ಕೊಟ್ಟವರು ಎಲ್ಲರಿಗೂ ಯುಗಾದಿಯ ಡೆಡ್ ಲೈನ್ ನೀಡಲಾಗಿದೆ. ಯುಗಾದಿ ಮುಗಿಯುತ್ತಿದ್ದಂತೆ ಅಧಿಕೃತವಾಗಿ ಪಕ್ಷ ಸೇರ್ಪಡೆಗೆ ಆಸಕ್ತಿ ತೋರಿದರೆ ಬನ್ನಿ, ತಡವಾದರೆ ನಮಗೂ ಕಷ್ಟವಾಗಲಿದೆ ಎಂಬ ಸಂದೇಶ ರವಾನಿಸಲಾಗಿದೆ. ಮಾತುಕತೆ ನಡೆಸಿದವರು `ಕೈ’ ಪಾಳಯ ಸೇರ್ಪಡೆಗೆ ಒಪ್ಪಿದರೆ ಯುಗಾದಿಗೆ ಕಾಂಗ್ರೆಸ್‌ನಿಂದ ಮೆಗಾ ಆಪರೇಷನ್ ಫಿಕ್ಸ್ ಎಂದು ಆಪ್ತ ವಲಯದಲ್ಲಿ ಸದ್ದು ಕೇಳಿಬರುತ್ತಿದೆ.

  • ಯುಗಾದಿ ಹಬ್ಬದ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ದಂಪತಿ

    ಯುಗಾದಿ ಹಬ್ಬದ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ದಂಪತಿ

    ಹೊಸ ವರ್ಷದ ಯುಗಾದಿ ಹಬ್ಬದ ಸಡಗರ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ಸ್ಯಾಂಡಲ್‌ವುಡ್ ಸ್ಟಾರ್‌ಗಳ ಮನೆಯಲ್ಲೂ ಹಬ್ಬ ಜೋರಾಗಿದೆ. ಪ್ರತಿವರ್ಷದಂತೆ ಈ ಬಾರಿಯು ಕೂಡ ರಾಕಿಂಗ್ ಸ್ಟಾರ್ ದಂಪತಿ ಯುಗಾದಿ ಹಬ್ಬವನ್ನ ಸರಳವಾಗಿ ಆಚರಿಸಿದ್ದಾರೆ. ‌

    ಹೌದು. ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಹಬ್ಬದ ಸಂಭ್ರಮದಲ್ಲಿ ಕುಟುಂಬದೊಂದಿಗೆ ವಿಶೇಷ ಭೋಜನ ಸವಿಯುತ್ತಿರುವ ಫೋಟೋವನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ರಾಧಿಕಾ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ಕೂಡ ದಂಪತಿಗೆ ಶುಭ ಹಾರೈಸುತ್ತಿದ್ದಾರೆ. ಇದನ್ನು ಓದಿ:‘ಬೆಲ್ ಬಾಟಮ್ 2’ ಮೊದಲೇ ಧನ್ವೀರ್​ಗೆ ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕ ಜಯತೀರ್ಥ

     

    View this post on Instagram

     

    A post shared by Radhika Pandit (@iamradhikapandit)

    ರಾಧಿಕಾ ಪಕ್ಕದಲ್ಲಿ ಐರಾ ಕೂತಿದ್ದರೆ, ಯಶ್‌ ಪಕ್ಕದಲ್ಲಿ ಯಥರ್ವ್ ಕೂತು ಊಟ ಮಾಡುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಫೋಟೋ ಜೊತೆಗೆ ʻಈ ವರ್ಷ ಬೇವಿಗಿಂತಾ ಬೆಲ್ಲ ಜಾಸ್ತಿಯಿರಲಿ. ಒಬ್ಬಟ್ಟು ಜಾಸ್ತಿ ತಿನ್ನಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳುʼ ಅಂತಾ ಅಭಿಮಾನಿಗಳಿಗೆ ರಾಧಿಕಾ ವಿಶ್ ಮಾಡಿದ್ದಾರೆ. ರಾಕಿಂಗ್ ದಂಪತಿಯ ಹಬ್ಬದ ಸಂಭ್ರಮದ ಫೋಟೋಸ್ ನೋಡಿ ಅಭಿಮಾನಿಗಳು ಕೂಡ ಸಂತಸಗೊಂಡಿದ್ದಾರೆ. ಇದನ್ನು ಓದಿ: ಯುಗಾದಿ ಸಂಭ್ರಮದಲ್ಲಿ ಮಿಂದೆದ್ದ ಸ್ಯಾಂಡಲ್‌ವುಡ್ ತಾರೆಯರು

    ಯುಗಾದಿ ಹಬ್ಬದ ಖುಷಿಯಲ್ಲಿರೋ ಅಭಿಮಾನಿಗಳು `ಕೆಜಿಎಫ್ 2′ ಸಿನಿಮಾಗಾಗಿ ಕಾಯ್ತಿದ್ದಾರೆ. ರಾಕಿಬಾಯ್ ಜೋಶ್‌ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಕಾತರರಾಗಿದ್ದಾರೆ.

     

  • ಯುಗಾದಿ ಸ್ಪೆಷಲ್ – ಬೇವು, ಬೆಲ್ಲ ಮಾಡುವ ವಿಧಾನ

    ಯುಗಾದಿ ಸ್ಪೆಷಲ್ – ಬೇವು, ಬೆಲ್ಲ ಮಾಡುವ ವಿಧಾನ

    ಹೊಸ ವರ್ಷದ ಆರಂಭದ ಸಂಕೇತವಾಗಿ ಯುಗಾದಿ ಹಬ್ಬ ಬರುತ್ತಿದೆ. ಹಬ್ಬದ ತಯಾರಿಗೆ ಈಗಾಗಲೇ ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಎಂದರೆ ಸಿಹಿ-ಕಹಿಯ ಹಬ್ಬವಾಗಿದೆ. ಹಾಗಾಗಿ ಈ ಹಬ್ಬದಲ್ಲಿ ಬೇವು-ಬೆಲ್ಲ ಮಾಡುವುದು ಸಂಪ್ರದಾಯ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಬೇವು ಬೆಲ್ಲ ಮಾಡುವ ವಿಧಾನ ಇಲ್ಲಿದೆ. ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ಬೇಕಾಗುವ ಸಾಮಾಗ್ರಿ
    1. ಹುರಿಗಡಲೆ- 2 ಚಮಚ
    2. ಬೆಲ್ಲ- 1 ಚಮಚ
    3. ಒಣ ಕೊಬ್ಬರಿ ತುರಿ- 2 ಚಮಚ
    4. ಬೇವಿನ ಹೂವಿನ ದಳಗಳು -ಸ್ವಲ್ಪ ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ವಿಶೇಷ ಪಾನಕ

    ಮಾಡುವ ವಿಧಾನ:
    * ಮೊದಲಿಗೆ ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಬೇಕು.
    * ನಂತರ ಬೆಲ್ಲವನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಿ.
    * ಒಣಕೊಬ್ಬರಿಯನ್ನು ಸಣ್ಣದಾಗಿ ತುರಿದುಕೊಳ್ಳಬೇಕು.
    * ಬೇವು ಸೊಪ್ಪಿನಲ್ಲಿನ ಕೇವಲ ಹೂವಿನ ದಳಗಳನ್ನು ಮಾತ್ರ ಬಿಡಿಸಿಟ್ಟುಕೊಳ್ಳಬೇಕು. ಇಲ್ಲಿ ಎಲೆಗಳ ಬದಲಾಗಿಯೇ ಹೂವಿನ ದಳ ತೆಗೆದುಕೊಳ್ಳಲಾಗಿರುತ್ತದೆ.
    * ಮೊದಲಿಗೆ ಹುರಿಗಡಲೆ ಪೌಡರ್‍ಗೆ ಬೇವು ಹೂವಿನ ದಳಗಳನ್ನು ಹದವಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಕೊಬ್ಬರಿ ತುರಿ ಹಾಕಿ ಕಲಸಿಕೊಳ್ಳಿ.
    * ಕೊನೆಗೆ ಬೆಲ್ಲದ ಪುಡಿಯನ್ನು ಮಿಶ್ರಣದಲ್ಲಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಯುಗಾದಿ ಹಬ್ಬ ಆಚರಿಸಲು ಬೇವು-ಬೆಲ್ಲ ರೆಡಿ ಇದನ್ನೂ ಓದಿ: ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

  • ಯುಗಾದಿ ಹಬ್ಬಕ್ಕೆ ನಮಗೆ ಮೀಸಲಾತಿ ಸಿಗುವ ವಿಶ್ವಾಸ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಯುಗಾದಿ ಹಬ್ಬಕ್ಕೆ ನಮಗೆ ಮೀಸಲಾತಿ ಸಿಗುವ ವಿಶ್ವಾಸ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಬೆಂಗಳೂರು: ಮಾರ್ಚ್ ನಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲೇ ನಮಗೆ ಮೀಸಲಾತಿ ಸಿಗುವ ವಿಶ್ವಾಸ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಇಂದು ಹಿಂದುಳಿದ ವರ್ಗಗಳ ಆಯೋಗದ ವಿಚಾರಣೆಯಲ್ಲಿ ಹಾಜರಾಗಿ ಗೌಡ ಲಿಂಗಾಯತ ಸಮುದಾಯದ ಬಗ್ಗೆಯೂ ವಿವರಣೆ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜ, ಗೌಡ, ಲಿಂಗಾಯತ ಸಮಾಜವನ್ನು 2ಎಗೆ ಸೇರ್ಪಡೆ ಮಾಡಬೇಕೆಂದು ಹೋರಾಟ ನಡೆಯುತ್ತಿದೆ. ಪಂಚಮಸಾಲಿಗಳೆಂದರೆ, ಉತ್ತರ ಕರ್ನಾಟಕ ಮಾತ್ರ ಅಲ್ಲ, ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಗೌಡ ಲಿಂಗಾಯತ ಹೆಸರಿನಲ್ದಿದ್ದಾರೆ. ಅವರೆಲ್ಲ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಹಿಂದುಳಿದ ವರ್ಗಗಳ ಆಯೋಗ ಗೌಡ ಲಿಂಗಾಯತದ ಬಗ್ಗೆ ವಿವರಣೆ ಕೇಳಲು ಕರೆದಿದ್ದರು. ನಾವು ನಮ್ಮ ವಕೀಲರ ಜೊತೆ ಬಂದು ಅಭಿಪ್ರಾಯ ತಿಳಿಸಿದ್ದೇವೆ ಎಂದರು. ಇದನ್ನೂ ಓದಿ: ಪಂಚಮಸಾಲಿ ಸ್ವಾಮೀಜಿಗೆ ಬಸವಣ್ಣನವರ ಹೆಸರು ಹೇಳೋ ನೈತಿಕತೆಯೇ ಇಲ್ಲ: ಪುಟ್ಟಸಿದ್ಧಶೆಟ್ಟಿ

    ಗೌಡ, ಲಿಂಗಾಯತರು ನಮ್ಮ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದವರು. ಅವರಿಗೆ 2ಎ ಮೀಸಲಾತಿ ನೀಡಬೇಕು ಎಂದು ಮನವಿ ಸಹ ಮಾಡಿದ್ದೇವೆ. ಈಗಾಗ್ಲೇ ಸರ್ಕಾರಕ್ಕೆ ನಮ್ಮ ಮನವಿಯನ್ನು ತಿಳಿಸಿದ್ದೇವೆ. ಹಿಂದೆ ನಮ್ಮ ಮನವಿ ಹೇಳಲು ಸಿಎಂ ಮನೆ ಬಾಗಿಲಿಗೆ ಹೋಗಬೇಕಿತ್ತು, ಈಗಿನ ಸಿಎಂ ಹುಬ್ಬಳ್ಳಿಯಲ್ಲಿ ನಮ್ಮ ಸಭೆಗೆ ಬಂದು ನಮ್ಮ ಮನವಿ ಆಲಿಸಿದ್ದಾರೆ. ಹಿಂದೆ ಯಡಿಯೂರಪ್ಪನರ ಕಿವಿಗೆ ಯಾರೋ ಏನೋ ತುಂಬಿದ್ದರು. ಹೀಗಾಗಿ ಯಡಿಯೂರಪ್ಪನವರು ನಮಗೆ ಅಷ್ಟಾಗಿ ಸ್ಪಂದಿಸಲಿಲ್ಲ. ಈಗ ಬೊಮ್ಮಾಯಿಯವರು ನಮ್ಮ ಮನವಿಗೆ ಸ್ಪಂದಿಸುತ್ತಿದ್ದರೆ, ಅದಷ್ಟು ಬೇಗ ನಮಗೆ ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೂಸ್ಟರ್‌ ಡೋಸ್‌ ಪಡೆಯಲು 60 ವರ್ಷ ಮೇಲ್ಪಟ್ಟವರಿಗೆ ಹೊಸ ಮಾರ್ಗಸೂಚಿ

    ಬೊಮ್ಮಾಯಿ ಅವರು ಸಿಎಂ ಆಗಿ ಎಲ್ಲಿಯವರೆಗೆ ಇರ್ತಾರೆ ಅಲ್ಲಿಯವರೆಗೆ ನಮ್ಮ ಬೆಂಬಲವಿದೆ ಎಂದು ಜಯಮೃತ್ಯುಂಜಯ ಶ್ರೀಗಳು ಪ್ರತಿಕ್ರಿಯೆ ನೀಡಿದರು. 2023ರವರೆಗೆ ಅವರೇ ಮುಂದುವರೆಯುತ್ತಾರೆ. ಅಲ್ಲಿಯವರೆಗೂ ನಮ್ಮ ಬೆಂಬಲವಿದೆ. ಬದಲಾವಣೆ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ಮಾತನಾಡುವುದು ಅಷ್ಟು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು.

    ಹಿಂದುಳಿದ ವರ್ಗಗಳ ಆಯೋಗದ ವಿಚಾರಣೆ ವೇಳೆ ಜಯಮೃತ್ಯುಂಜಯ ಶ್ರೀಗಳ ನಿಯೋಗದಲ್ಲಿ ಲಿಂಗಾಯತಗೌಡ ಮಹಾಸಭಾ ಅಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ್, ಮೈಸೂರು ಭಾಗದ ಮುಖಂಡರಾದ ದೂರ ಮಂಜುನಾಥ್ ಉಪಸ್ಥಿತರಿದ್ದರು.

  • ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬ ಹತ್ತಿರ ಬರುತ್ತಿದೆ. ಮನೆಯಲ್ಲಿ ಸಿಹಿಯಾದ ತಿಂಡಿಗಳನ್ನು ಮಾಡಬೇಕು. ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದೆ ಹೋಳಿಗೆ. ಬೇಳೆ ಹೋಳಿಗೆ ತಿಂದು ಬೇಸರವಾಗಿದ್ರೆ ಈ ಬಾರಿ ಮನೆಯೆಲ್ಲಿ ಕಾಯಿ ಹೋಳಿಗೆ ಮಾಡಿ ಸವಿಯಿರಿ. ಇಲ್ಲಿದೆ ಮಾಡುವ ವಿಧಾನ…

    ಬೇಕಾಗುವ ಸಾಮಗ್ರಿಗಳು:
    * ಕಾಯಿ- 3 ಕಪ್
    * ಬೆಲ್ಲ- 2 ಕಪ್
    * ಹುರಗಡಲೆ- 1 ಟೇಬಲ್ ಸ್ಪೂನ್
    * ಗಸಗಸೆ- 2 ಟೀ ಸ್ಪೂನ್
    * ಏಲಕ್ಕಿ ಪುಡಿ – 1 ಟೀ ಸ್ಪೂನ್
    * ಹೋಳಿಗೆ ರವೆ- ಕಾಲು ಕೆಜಿ
    * ಮೈದಾಹಿಟ್ಟು- 100 ಗ್ರಾಂ
    * ಅರಿಶಿನ- 1 ಟೀ ಸ್ಪೂನ್
    * ಅಡುಗೆ ಎಣ್ಣೆ- 1 ಕಪ್
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಒಂದು ಅಗಲವಾದ ಪಾತ್ರೆಗೆ ಹೋಳಿಗೆ ರವೆ, ಮೈದಾಹಿಟ್ಟು, ಅರಿಶಿನ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ. ಹಿಟ್ಟು ಮೃದುವಾಗಿರಬೇಕು, ಹೆಚ್ಚು ಗಟ್ಟಿಗಿದ್ರೆ ಹೋಳಿಗೆ ಲಟ್ಟಿಸುವುದು ಕಷ್ಟವಾಗುತ್ತದೆ.
    * ಈ ಮಿಶ್ರಣಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ಮುಚ್ಚಿ ಇಟ್ಟಿರಬೇಕು.

    * ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹುರಿಗಡೆಲೆ ಹಾಕಿ 2 ಸ್ಪೂನ್ ನೀರು ಹಾಕಿ ಸಣ್ಣದಾಗಿ ರುಬ್ಬಿಕೊಳ್ಳಬೇಕು.
    * ಒಲೆ ಮೇಲೆ ಒಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಕುದಿಸಿ. ಬೆಲ್ಲ ಕರಗಿ ನೀರು ಕುದಿಯುವಾಗ ಅದಕ್ಕೆ ರುಬ್ಬಿರುವ ಕಾಯಿ ಮಿಶ್ರಣವನ್ನು ಹಾಕಬೇಕು.
    * ಏಲಕ್ಕಿ ಪುಡಿ ಹಾಕಿ ಕಲಸಿ. ಈ ಮಿಶ್ರಣ ಬಣ್ಣ ಬದಲಾಗಿ ಗಟ್ಟಿಯಾಗಿ ಬರುವವರೆಗೆ ಸಣ್ಣ ಉರಿ ಬೆಂಕಿಯಲ್ಲಿ ಬೇಯಿಸಬೇಕು. ಇದಕ್ಕೆ ಗಸಗಸೆ, ಏಲಕ್ಕಿ ಹಾಕಿ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಬೇಕು.

    * ಊರ್ಣಕ್ಕೆ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಿ.
    * ಕೈಗೆ ಎಣ್ಣೆ ಸವರಿಕೊಂಡು ತೆಗೆದುಕೊಂಡು ಹಿಟ್ಟನ್ನು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಊರ್ಣವನ್ನು ಅದರೊಳಗೆ ಇಟ್ಟು ಹೋಳಿಗೆ ಪೇಪರ್ ಮೇಲೆ ಇಟ್ಟು ಲಟ್ಟಿಸಿ.
    * ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ಕಾಯಿ ಹೋಳಿಗೆ ಸವಿಯಲು ಸಿದ್ಧವಾಗುತ್ತದೆ. ಬಿಸಿಯಾದ ತುಪ್ಪದೊಂದಿಗೆ ಹೋಳಿಗೆಯನ್ನು ಸವಿಯ ಬಹುದಾಗಿದೆ.

  • ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟ ಮೆಗಾಸ್ಟಾರ್- ಯುಗಾದಿ ಸಿಹಿಗೆ ಅಭಿಮಾನಿಗಳು ಫಿದಾ

    ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟ ಮೆಗಾಸ್ಟಾರ್- ಯುಗಾದಿ ಸಿಹಿಗೆ ಅಭಿಮಾನಿಗಳು ಫಿದಾ

    ಹೈದರಾಬಾದ್: ಮೆಗಾ ಸ್ಟಾರ್ ಚಿರಂಜೀವಿ ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅಭಿಮಾನಿಗಳಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಚಿರಂಜೀವಿ ಅವರು ಈ ಪ್ರಯತ್ನಕ್ಕೆ ಮುಂದಾಗಿದ್ದು, ಅಭಿಮಾನಿಗಳು ಇದಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ಈ ಸಮಯದಲ್ಲಿ ಮೆಗಾ ಸ್ಟಾರ್ ಇಂತಹ ನಿರ್ಧಾರ ಯಾಕೆ ಕೈಗೊಂಡರು ಎಂಬುದು ಇನ್ನೂ ತಿಳಿದಿಲ್ಲ. ಆದರೆ ಮೆಗಾಸ್ಟಾರ್ ಚಿರಂಜೀವಿ ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ಕೊಟ್ಟಿದ್ದರಿಂದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

    ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅವರು ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್ ಗಳಲ್ಲಿ ಖಾತೆ ತೆರೆದಿದ್ದು, ಈ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಹತ್ತಿರವಾಗಲು ಪ್ರಯತ್ನ ನಡೆಸಿದ್ದಾರೆ. ಸಿನಿಮಾ, ರಾಜಕೀಯ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದರೂ ಚಿರಂಜೀವಿ ಅವರು ಈ ವರೆಗೆ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು.

    ಇದೀಗ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಸಿನಿಮಾಗಳ ಕುರಿತು ಮಾಹಿತಿ ಹಂಚಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದಾರಂತೆ. ಈ ನಿರ್ಧಾರ ಅಭಿಮಾನಿಗಳಿಗೆ ಖುಷಿ ತಂದಿದ್ದು, ಲಕ್ಷಾಂತರ ಜನ ಅವರನ್ನು ಹಿಂಬಾಲಿಸುತ್ತಿದ್ದಾರೆ.

    ಯುಗಾದಿ ಹಬ್ಬದ ದಿನದಂದು ಇದೀಗ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ. ಈ ವಿಷಯವನ್ನು ಕೋನಿಡೇಲ ಪ್ರೊಡಕ್ಷನ್ಸ್ ನ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಬಹಿರಂಗಪಡಿಸಲಾಗಿದೆ. ಇನ್‍ಸ್ಟಾಗ್ರಾಮ್ ನಲ್ಲಿ ಚಿರಂಜೀವಿಕೋನಿಡೇಲ ಹೆಸರಿನಲ್ಲಿ ಖಾತೆ ತೆರೆದಿದ್ದು, ಈಗಾಗಲೇ 4 ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಕರಾಗಿದ್ದಾರೆ. ಚಿರಂಜೀವಿ ಅವರು ಇದುವರೆಗೆ ಕೇವಲ ಒಂದು ಫೋಟೋವನ್ನು ಮಾತ್ರ ಹಂಚಿಕೊಂಡಿದ್ದಾರೆ.

    ಇನ್ನು ಟ್ವಟ್ಟರ್ ನಲ್ಲಿಯೂ ಆಕ್ಟಿವ್ ಆಗಿರುವ ಚಿರಂಜೀವಿ ಅವರಿಗೆ ಒಂದೇ ದಿನಕ್ಕೆ 86 ಸಾವಿರಕ್ಕೂ ಅಧಿಕ ಫಾಲೋವರ್ಸ್ ಆಗಿದ್ದಾರೆ. ಅಲ್ಲದೆ ಚಿರು ಕೊರೊನಾ ಕುರಿತು ಮೊದಲ ಟ್ವೀಟ್ ಮಾಡಿದ್ದಾರೆ. ದೇಶದಿಂದ ಕೊರೊನಾ ಮಹಾಮಾರಿ ತೊಲಗಿಸಲು ಎಲ್ಲರೂ ಕೈ ಜೋಡಿಸಬೇಕಿದೆ. ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಕೇಳಿಕೊಂಡಿದ್ದಾರೆ. ಇದರೊಂದಿಗೆ ಯುಗಾದಿ ಹಬ್ಬದ ಶುಭ ಕೋರಿರುವ ಚಿರು ಎಲ್ಲರೂ ಮನೆಗಳಲ್ಲೇ ಇದ್ದು, ಈ ಸೋಂಕು ಹರಡದಂತೆ ಎಚ್ಚರವಹಿಸೋಣ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇನ್ನು ಎರಡನೇ ಟ್ವೀಟ್‍ನಲ್ಲಿ ಆರ್‍ಆರ್‍ಆರ್ ಸಿನಿಮಾದ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ.

    ಸದ್ಯ ಚಿರು ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆಚಾರ್ಯ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಕೊರೊನಾ ಭೀತಿಯಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಇದೇ ಸಮಯದಲ್ಲಿ ಚಿರಂಜೀವಿ ಅವರು ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ಕೊಟ್ಟಿದ್ದಾರೆ.