Tag: UG NEET

  • 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು: ಕೆಇಎ

    ಬೆಂಗಳೂರು: ಅಖಿಲ ಭಾರತ ಮಟ್ಟದಲ್ಲಿನ ವೈದ್ಯಕೀಯ ಸೀಟು ಉಳಿಸಿಕೊಳ್ಳಲು ಇಚ್ಛಿಸಿರುವವರು ಸೇರಿದಂತೆ ಇತರ ಒಟ್ಟು 206 ಮಂದಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ತಮಗೆ ಹಂಚಿಕೆಯಾಗಿದ್ದ ಸೀಟುಗಳನ್ನು ಶುಕ್ರವಾರ ರದ್ದು ಮಾಡಿಕೊಂಡಿದ್ದಾರೆ.

    ಇಷ್ಟೂ ಮಂದಿಯ ಸೀಟುಗಳನ್ನು ಮೆರಿಟ್ ಮೇಲೆ ಇತರ ಅರ್ಹರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ವೈದ್ಯಕೀಯ ಕೋರ್ಸ್ ನಲ್ಲಿ ಅತಿ ಹೆಚ್ಚು‌, ಅಂದರೆ 107 ಮಂದಿ ತಮ್ಮ ಸೀಟುಗಳನ್ನು ರದ್ದುಪಡಿಸಿಕೊಂಡು, ಕೆಇಎಗೆ ವಾಪಸ್ ಮಾಡಿದ್ದಾರೆ. ದಂತ ವೈದ್ಯಕೀಯದಲ್ಲಿ 20, ಆಯುಷ್ ಕೋರ್ಸ್‌ನಲ್ಲಿ 33, ಎಂಜಿನಿಯರಿಂಗ್‌ನಲ್ಲಿ 5 ಮತ್ತು ನರ್ಸಿಂಗ್‌ನಲ್ಲಿ 4 ಮಂದಿ ಸೀಟು ರದ್ದು ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ರೀ ರನ್’ ಮಾಡಲು ಆರಂಭಿಸಿದ್ದು, ಅದರ ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

  • ಯುಜಿ ನೀಟ್ ಸೀಟು ರದ್ದತಿಗೆ ಅವಕಾಶ – ಸೆ.20ಕ್ಕೆ ಕೆಇಎಗೆ ಬರಲು ಅಭ್ಯರ್ಥಿಗಳಿಗೆ ಸೂಚನೆ

    ಯುಜಿ ನೀಟ್ ಸೀಟು ರದ್ದತಿಗೆ ಅವಕಾಶ – ಸೆ.20ಕ್ಕೆ ಕೆಇಎಗೆ ಬರಲು ಅಭ್ಯರ್ಥಿಗಳಿಗೆ ಸೂಚನೆ

    ಬೆಂಗಳೂರು: ಎರಡನೇ ಸುತ್ತಿನ ಯುಜಿ ನೀಟ್ (UG NEET) ಅಖಿಲ ಭಾರತ ಸೀಟು ಹಂಚಿಕೆ ಫಲಿತಾಂಶ ಇಂದು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಎರಡನೇ ಸುತ್ತಿನ ಅಖಿಲ ಭಾರತ ಯುಜಿ ನೀಟ್ ಎಂಸಿಸಿ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ, ಕೆಇಎನಿಂದ (KEA) ಹಂಚಿಕೆಯಾದ ಸೀಟಿಗೆ ಸೇರಲು ಅಥವಾ ಅಖಿಲ ಭಾರತ ಕೌನ್ಸಿಲಿಂಗ್ ಮೂಲಕ ಹಂಚಿಕೆಯಾದ ಸೀಟನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಯವನ್ನು ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

    ಕೆಇಎದಿಂದ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಂಡು ಅಖಿಲ ಭಾರತ ಸೀಟು ಉಳಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು, ಸೆ.20ರ ಬೆಳಿಗ್ಗೆ 11 ರೊಳಗೆ ಕೆಇಎದಿಂದ ಹಂಚಿಕೆಯಾದ ಯುಜಿನೀಟ್ ಸೀಟನ್ನು ಕೆಇಎ ಕಚೇರಿಗೆ ಖುದ್ದಾಗಿ ಬಂದು ರದ್ದು ಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇಂದು ನಾಗಮಂಗಲಕ್ಕೆ ಹೆಚ್‌ಡಿಕೆ ಭೇಟಿ – ನೊಂದವರಿಗೆ ಧನ ಸಹಾಯ

    ಇಂತಹ ಅಭ್ಯರ್ಥಿಗಳಿಗೆ 10,000 ರೂ. ದಂಡ ವಿಧಿಸಿ, ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಸೀಟು ರದ್ದು ಪಡಿಸಿಕೊಳ್ಳುವ ಸಮಯದಲ್ಲಿ ಅಖಿಲ ಭಾರತ ಕೌನ್ಸಿಲಿಂಗ್ ನಲ್ಲಿ ಹಂಚಿಕೆಯಾದ ಸೀಟುಗಳ ವಿವರವನ್ನು ಕೆಇಎ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

    ಕೆಇಎದಲ್ಲಿ ರದ್ದಾದ ಎಲ್ಲಾ ಸೀಟುಗಳನ್ನು ಪರಿಗಣಿಸಿ ಮತ್ತು ಅರ್ಹ ಅಭ್ಯರ್ಥಿಗಳು ಎರಡನೇ ಸುತ್ತಿಗೆ ನಮೂದಿಸಿದ ಅದೇ ಆದ್ಯತಾ ಕ್ರಮದಲ್ಲಿನ ಆಯ್ಕೆಗಳೊಂದಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ‘ರೀ ರನ್’ ಮಾಡಿ, ಎರಡನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಆಯ್ಕೆಗಳ ಆದ್ಯತೆಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

    ಇತರೆ ಅಭ್ಯರ್ಥಿಗಳಿಗೆ ದಂಡವಿಲ್ಲದೆ ಯಾವುದೇ ಸೀಟನ್ನು ರದ್ದು ಪಡಿಸುವುದಿಲ್ಲ. ಮುಂದಿನ ಪ್ರಕ್ರಿಯೆ ಮತ್ತು ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ ಹೇಳಿದ್ದಾರೆ. ಇದನ್ನೂ ಓದಿ: 2040ಕ್ಕೆ ಮಾನವ ಸಹಿತ ಚಂದ್ರಯಾನ – 2,104 ಕೋಟಿ ಅನುದಾನಕ್ಕೆ ಕೇಂದ್ರ ಅಸ್ತು

  • ಯುಜಿ ನೀಟ್-2024 ಆಗಸ್ಟ್ 12, 13 ಕ್ಕೆ ದಾಖಲಾತಿ ಪರಿಶೀಲನೆ: ಕೆಇಎ

    ಯುಜಿ ನೀಟ್-2024 ಆಗಸ್ಟ್ 12, 13 ಕ್ಕೆ ದಾಖಲಾತಿ ಪರಿಶೀಲನೆ: ಕೆಇಎ

    ಬೆಂಗಳೂರು: ಯುಜಿ ನೀಟ್-2024ಕ್ಕೆ (UG NEET) ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ‘ಎ’ ಮತ್ತು ಕ್ಲಾಸ್ ‘ವೈ’ ಅಭ್ಯರ್ಥಿಗಳಿಗೆ ಪರಿಶೀಲನಾ ಪತ್ರವನ್ನು (ವೆರಿಫಿಕೇಶನ್ ಸ್ಲಿಪ್) ಪ್ರಾಧಿಕಾರದ ವೆಬ್‌ಸೈಟಿನ ಸೂಕ್ತ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶುಕ್ರವಾರ ಸೂಚಿಸಿದೆ.

    ಒಂದು ವೇಳೆ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳು ಯುಜಿ ನೀಟ್- 24ಕ್ಕೆ ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದು, ಎನ್ ಆರ್ ಐ-ವಾರ್ಡ್ ಎಂದು ಕ್ಲೇಮ್ ಮಾಡಿದ್ದಲ್ಲಿ ಅಥವಾ ಪ್ರವರ್ಗ 2ರಿಂದ ಪ್ರವರ್ಗ 8ರ ಅಡಿಯಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕ್ಲೇಮ್ ಮಾಡಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಿಜಿಯಲ್ಲಿ ಯುವತಿ ಹತ್ಯೆ ಬಳಿಕ ಎಚ್ಚೆತ್ತ ಬಿಬಿಎಂಪಿ – ಹೊಸ ಗೈಡ್ ಲೈನ್ಸ್ ಬಿಡುಗಡೆ

    ಯುಜಿ ನೀಟ್-2024ಕ್ಕೆ ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಒ ಅಭ್ಯರ್ಥಿಗಳು ಹಾಗೂ ಒಸಿಐ/ ಪಿಐಒ / ಎನ್‌ಆರ್‌ಐ / ವಿದೇಶ ಪ್ರಜೆ ಅಭ್ಯರ್ಥಿಗಳು ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಸ್ಪಷ್ಟಪಡಿಸಲಾಗಿದೆ.

    ದಾಖಲೆಗಳ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳ ಬಗ್ಗೆ ತಿಳಿಯಲು ಯುಜಿ ನೀಟ್-2024 ಮಾಹಿತಿ ಪುಸ್ತಕ ನೋಡಬಹುದು ಎಂದು ಹೇಳಲಾಗಿದೆ. ಆ.7ರಿಂದ 9ರವರೆಗೆ ನಡೆದ ದಾಖಲಾತಿ ಪರಿಶೀಲನೆಗೆ ಹಾಜರಾಗದಿದ್ದವರು ಕೂಡ ಈ ಮೇಲಿನ ದಿನಗಳಂದು ಭೇಟಿ ಕೊಡಬಹುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಸೇಡಿನ ರಾಜಕೀಯ ಮಾಡುವ ಮನಸ್ಥಿತಿ ಇರೋದು ದೇವೇಗೌಡರು, ಅವರ ಕುಟುಂಬಕ್ಕೆ: ಸಿಎಂ ವಾಗ್ದಾಳಿ

  • ಯುಜಿಆಯುಷ್-2023: ಕೊನೆ ಸುತ್ತಿನ ಸೀಟು ಹಂಚಿಕೆ ಅ.13ಕ್ಕೆ ದಾಖಲೆ ಪರಿಶೀಲನೆ

    ಯುಜಿಆಯುಷ್-2023: ಕೊನೆ ಸುತ್ತಿನ ಸೀಟು ಹಂಚಿಕೆ ಅ.13ಕ್ಕೆ ದಾಖಲೆ ಪರಿಶೀಲನೆ

    ಬೆಂಗಳೂರು: ಆರ್ಯುವೇದ, ಯುನಾನಿ ಮತ್ತು ಹೋಮಿಯೋಪತಿ ಓದಲು ಆಸಕ್ತಿ ಇರುವ ಹಾಗೂ ಯುಜಿ ನೀಟ್ (UG NEET) ಪರೀಕ್ಷೆಯಲ್ಲಿ ಅರ್ಹತೆ ಪಡೆದ ರಾಜ್ಯದ ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಅ.13ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲು ತೀರ್ಮಾನಿಸಿದೆ.

    ಅಂದು ಕೆಇಎ ಕಚೇರಿಯಲ್ಲಿ ಬೆಳಗ್ಗೆ 10ರಿಂದ ದಾಖಲೆಗಳ ಪರಿಶೀಲನೆ ನಡೆಯಲಿದೆ. ಇದು ಕೊನೆಯ ಅವಕಾಶ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಈಗಾಗಲೇ ವೆರಿಫಿಕೇಷನ್ ಸ್ಲಿಪ್ ಪಡೆದಿರುವವರು ದಾಖಲಾತಿ ಪರಿಶೀಲನೆಗೆ ಹಾಜರಾಗಲು ಅವಕಾಶ ಇರುವುದಿಲ್ಲ. ಇದುವರೆಗೂ ದಾಖಲಾತಿಗಳನ್ನು ಪರಿಶೀಲನೆ ಮಾಡಿಸಿಕೊಳ್ಳದಿರುವವರು ಮಾತ್ರ ಹಾಜರಾಗಬೇಕು ಎಂದು ಅವರು ವಿವರಿಸಿದ್ದಾರೆ.  ಇದನ್ನೂ ಓದಿ: ಸಣ್ಣ ಮಕ್ಕಳ ಹಾಲಿಗೆ 4, ದೊಡ್ಡ ಮಕ್ಕಳ ಕ್ವಾಟರ್‌ಗೆ 40 ರೂ. ಜಾಸ್ತಿ – ಸರ್ಕಾರದ ವಿರುದ್ಧ ಅಶೋಕ್ ಕಿಡಿ

    ಯುಜಿ ಆಯುಷ್ (UG AYUSH) ಕೊನೆಯ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಅ.16ರಿಂದ ಆರಂಭವಾಗಲಿದೆ. ಅಂದು ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಪ್ರಕಟಿಸಲಾಗುತ್ತದೆ. ಹಾಗೆಯೇ ತಮ್ಮ ಇಚ್ಛೆಗಳನ್ನು ದಾಖಲು ಮಾಡುವುದಕ್ಕೂ ಅಂದೇ ಅವಕಾಶ ನೀಡಲಾಗಿದೆ. ಒಟ್ಟಾರೆ ಅ.21ಕ್ಕೆ ಇಡೀ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.

    ಯೋಗ ಮತ್ತು ನ್ಯಾಚುರೋಪತಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು ಆಪ್ಷನ್ ಎಂಟ್ರಿಗೆ ಅ.15ರವರೆಗೆ ಅವಕಾಶ ನೀಡಲಾಗಿದೆ. ಪ್ರವೇಶ ಪ್ರಕಿಯೆ ಅ.18ರೊಳಗೆ ಮುಗಿಯಲಿದೆ ಎಂದು ಅವರು ವಿವರಿಸಿದ್ದಾರೆ. ವಿವರಗಳಿಗೆ ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಅವರು ಕೋರಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]