Tag: Udupi puttige mutt

  • ಮಠಗಳು ಸಾಮರಸ್ಯ ಬೆಳೆಸುವ ಕೇಂದ್ರವಾಗಲಿ: ಯು.ಟಿ ಖಾದರ್

    ಮಠಗಳು ಸಾಮರಸ್ಯ ಬೆಳೆಸುವ ಕೇಂದ್ರವಾಗಲಿ: ಯು.ಟಿ ಖಾದರ್

    ಉಡುಪಿ: ಕೃಷ್ಣ ಮಠ (Krishna Mutt) ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಗಿಸಿಕೊಂಡ ಕೇಂದ್ರ. ಪುತ್ತಿಗೆ ಮಠದ ಪರ್ಯಾಯದಲ್ಲಿ ಭಾಗಿಯಾಗಿರೋದು ಪುಣ್ಯದ ಕೆಲಸ ಎಂದು ವಿಧಾನಸಭೆ ಸಭಾಪತಿ ಯು.ಟಿ ಖಾದರ್ (UT Khader) ಹೇಳಿದರು.

    ಉಡುಪಿ (Udupi) ಕೃಷ್ಣ ಮಠದ ಪುತ್ತಿಗೆ ಪರ್ಯಾಯ ದರ್ಬಾರ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧಾರ್ಮಿಕ ಕೇಂದ್ರಗಳಿಗೆ ಸಮಾಜವನ್ನು ತಿದ್ದುವ ಶಕ್ತಿಯಿದೆ. ಸಮಾಜ ಒಡೆದು ಹೋಗುವ ಸಂದರ್ಭದಲ್ಲಿ ಮಠಾಧೀಶರು ಜೋಡಿಸಬೇಕು. ಪುತ್ತಿಗೆ ಶ್ರೀಗಳು ಧಾರ್ಮಿಕವಾಗಿ ದೇಶ-ವಿದೇಶದಲ್ಲಿ ತೊಡಗಿಸಿಕೊಂಡವರು ಎಂದರು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ನೀಡಿದ್ದ SC ಒಳಮೀಸಲಾತಿಯನ್ನ ಪುನರ್ ಪರಿಶೀಲನೆ ಮಾಡ್ತೀವಿ: ಪರಮೇಶ್ವರ್

    ರಾಜ್ಯ, ದೇಶದಲ್ಲಿ ಸಾಮರಸ್ಯ ಬೆಳೆಯಲು ಮಠಗಳು ದಾರಿದೀಪವಾಗಬೇಕು. ಹಿಂದಿನಿಂದಲೂ ನಾನು ಕೃಷ್ಣ ಮಠಕ್ಕೆ ಸಂಬಂಧಪಟ್ಟ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮಠ ಕೇವಲ ಧಾರ್ಮಿಕವಾಗಿ ಕಾರ್ಯಾಚರಿಸದೆ, ಶೈಕ್ಷಣಿಕ, ಸಾಮಾಜಿಕವಾಗಿ ಕೂಡಾ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ದಿನವೇ ಮಂಡ್ಯದಲ್ಲೂ ರಾಮಮಂದಿರ ಲೋಕಾರ್ಪಣೆ

  • ಕೋಟಿ ಗೀತಾ ಯಜ್ಞಕ್ಕೆ ಚಾಲನೆ – ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಹೇಳಿಕೆ

    ಕೋಟಿ ಗೀತಾ ಯಜ್ಞಕ್ಕೆ ಚಾಲನೆ – ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಹೇಳಿಕೆ

    ನವದೆಹಲಿ: 2024ರ ಜನವರಿಯಲ್ಲಿ ನಡೆಯಲಿರುವ ಪರ್ಯಾಯದ ಸಲುವಾಗಿ ವಿಶ್ವ ಸಂಚಾರ ಮುಗಿಸಿದ್ದು, ಕೋಟಿ ಗೀತಾ ಯಜ್ಞಕ್ಕೂ (Koti Gita Yajna) ಚಾಲನೆ ನೀಡಲಾಗಿದೆ ಎಂದು ಉಡುಪಿಯ ಶ್ರೀಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು (Sugunendra Theertha Swamiji) ಹೇಳಿದರು.

    ದೆಹಲಿಯ ಪೇಜಾವರ ಶಾಖಾ ಮಠದಲ್ಲಿ ಮಾತನಾಡಿದ ಅವರು, 4ನೇ ಬಾರಿ ಪರ್ಯಾಯ ಪಟ್ಟ ಅಲಂಕರಿಸುತ್ತಿದ್ದು, ಗೀತೆಯ ಸಂದೇಶ ತತ್ವ ಸಾರುವ ಸಲುವಾಗಿ ಜಾಗತಿಕ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಧರ್ಮ, ಜಾತಿ ಮೀರಿ ಭಾಗವಹಿಸಬಹುದು ಎಂದರು. ಇದನ್ನೂ ಓದಿ: ಬಿಪರ್ಜೋಯ್ ಚಂಡಮಾರುತ ಎಫೆಕ್ಟ್- ಅಲೆಯ ಅಬ್ಬರಕ್ಕೆ ಯುವತಿಯರು ತಬ್ಬಿಬ್ಬು

    ಆಂದೋಲನದ ಭಾಗವಾಗಿ ಪುಸ್ತಕಗಳನ್ನು ನೀಡಲಾಗುತ್ತಿದ್ದು ಯಾವ ಭಾಷೆಯಲ್ಲಿ ಬೇಕಾದರೂ ಜನರು ಪುಸ್ತಕದಲ್ಲಿ ಗೀತೆಯನ್ನು ಬರೆದು‌ ನಮಗೆ ಕಳುಹಿಸಬಹುದು. ಬಳಿಕ ಅದನ್ನು ನಾವು ವಾಪಸ್ ಜನರಿಗೆ ಮರಳಿಸಲಿದ್ದು, ಅದನ್ನು ಪೂಜೆ ಮಾಡಬೇಕು. ಇದರಿಂದ ಭಗವದ್ಗೀತೆ ಹೆಚ್ಚು ಪಸರಿಸಲಿದೆ. ಆಂದೋಲನದಲ್ಲಿ ಭಾಗಿಯಾಗುವರು ಇತತರೂ ಭಾಗಿಯಾಗುವಂತೆ ಪ್ರೇರೆಪಿಸಬೇಕು ಎಂದು ಸಲಹೆ ನೀಡಿದರು.

    ಭಗವದ್ಗೀತೆ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನ ತಂದಿದೆ. ಮಾನಸಿಕ ಯಾತನೆ ಮುಕ್ತಿಗೆ ಗೀತೆ ಬಹಳ ಪರಿಣಾಮಕಾರಿಯಾಗಿದೆ. ಗೀತೆಯ ಪ್ರಚಾರ ವಿಶ್ವದಲ್ಲಿ ನಡೆಯಬೇಕು ಹಾಗಾಗಿ ಪ್ರತಿಯೊಬ್ಬರು ಕೂಡ ಈ ಗೀತೆಯ ಯಜ್ಞದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು ‘ಮಿಯಾಝಾಕಿ’

    ಕೋಟಿ ಗೀತಾ ಯಜ್ಞ ಸಲುವಾಗಿ ಪಾರ್ಥಸಾರಥಿಯ ಚಿನ್ನದ ರಥವನ್ನು ಮಾಡಿಸುವ ಯೋಜನೆ ರೂಪಿಸಲಾಗಿದೆ. ಪರ್ಯಾಯಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi), ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಸಾಮಾಜಿಕ, ಧಾರ್ಮಿಕ ಚಿಂತಕರಿಗೂ ಆಹ್ವಾನ ನೀಡಲಾಗಿದೆ ಎಂದು ಶ್ರೀಗಳು ಹೇಳಿದರು.