Tag: Udupi murder Case

  • ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್ – ಆರೋಪಿ ಅರುಣ್ ಚೌಗಲೆ ಜಾಮೀನು ಅರ್ಜಿ ವಜಾ

    ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್ – ಆರೋಪಿ ಅರುಣ್ ಚೌಗಲೆ ಜಾಮೀನು ಅರ್ಜಿ ವಜಾ

    ಬೆಂಗಳೂರು/ಉಡುಪಿ: ಉಡುಪಿಯಲ್ಲಿ (Udupi) ಒಂದೇ ಕುಟುಂಬದ ನಾಲ್ವರ ಹತ್ಯೆ (Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುಣ್ ಚೌಗಲೆ (Arun Chaugale) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು (Bail Application) ಹೈಕೋರ್ಟ್ (High Court) ವಜಾ ಮಾಡಿದೆ.

    ಹೈಕೋರ್ಟ್‌ನ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಆರೋಪಿ ಅರುಣ್ ಚೌಗಲೆ 2023ರ ನವೆಂಬರ್ 12ರಂದು ಉಡುಪಿಯ ತೃಪ್ತಿ ಲೇಔಟ್‌ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು. ಇದನ್ನೂ ಓದಿ: ಲಂಕಾ ನೌಕಪಡೆಯ ನಾವಿಕ ಸಾವು – ಭಾರತೀಯ ಮೀನುಗಾರರ ಮೇಲೆ ಹತ್ಯೆ ಆರೋಪ

    ಪ್ರಕರಣ ಏನು?
    2023ರ ನವೆಂಬರ್ 12ರಂದು ಸಂತೆಕಟ್ಟೆ ನೇಜಾರು ಸಮೀಪದ ತೃಪ್ತಿ ಲೇಔಟ್‌ನಲ್ಲಿ ಕೊಲೆ ನಡೆದಿತ್ತು. ವಿದೇಶದಲ್ಲಿದ್ದ ನೂರ್ ಮಹಮ್ಮದ್ ಕುಟುಂಬದ ನಾಲ್ವರ ಕೊಲೆಯಾಗಿತ್ತು. ಏರ್ ಇಂಡಿಯಾ ಉದ್ಯೋಗಿಯಾಗಿದ್ದ ಪ್ರವೀಣ್ ಅರುಣ್ ಚೌಗುಲೆ  ಬರ್ಬರವಾಗಿ ನಾಲ್ವರ ಹತ್ಯೆ ಮಾಡಿದ್ದ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್‌ – ವಿಕಿಪೀಡಿಯದಲ್ಲಿ ಪೇಜ್‌ ಓಪನ್‌

    ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಯ್ನಜ್ ಮೇಲೆ ಇದ್ದ ಅತಿಯಾದ ಗೆಳೆತನ, ಪ್ರೀತಿ, ವ್ಯಾಮೋಹ, ಕೆಲ ಸಮಯ ನಂತರ ಆಕೆ ಆತನನ್ನು ದೂರ ಮಾಡಿದ್ದಕ್ಕಾಗಿ ಹುಟ್ಟಿಕೊಂಡ ದ್ವೇಷಕ್ಕೆ ಪ್ರವೀಣ್ ಈ ಕೃತ್ಯ ಎಸಗಿದ್ದಾನೆ ಎಂಬ ವಿಚಾರ ತನಿಖೆಯಿಂದ ಪ್ರಕಟವಾಗಿದೆ.‌ ಇದನ್ನೂ ಓದಿ: ಇಷ್ಟೆಲ್ಲಾ ಅವಮಾನ ಆದ್ಮೇಲೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರಲ್ಲ ಅನ್ಸುತ್ತೆ: ಆರ್.ಅಶೋಕ್

    ಮಗಳ ಮೇಲೆ ಮುಗಿಬಿದ್ದಾಗ ತಡೆಯಲು ಬಂದ ತಾಯಿ ಹಸೀನಾ, ಅಕ್ಕ ಅಫ್ನಾನ್ ಮತ್ತು ತಮ್ಮ ಆಸಿಂನನ್ನು ಇರಿದು ಕೊಂದಿದ್ದ. ತಲೆಮರೆಸಿಕೊಂಡು ಓಡಾಡಿದ್ದ ಆರೋಪಿಯನ್ನು ಬೆಳಗಾವಿ ಜಿಲ್ಲೆಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಸಾಕ್ಷಾಧಾರಗಳನ್ನು ಪೊಲೀಸರು ಸಂಗ್ರಹ ಮಾಡಿದ್ದರು. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕೃತ್ಯಕ್ಕೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಇದನ್ನೂ ಓದಿ: ಜುಲೈ 8 ರಂದು ರಷ್ಯಾಗೆ ಮೋದಿ – ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ

  • ನಾಲ್ವರನ್ನು ಹತ್ಯೆ ಮಾಡಿ ಆರೋಪಿ ಚೂರಿಯನ್ನ ಅಡುಗೆ ಮನೆಯಲ್ಲಿ ಇಟ್ಟಿದ್ದ: ಉಡುಪಿ ಕೇಸ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್‌ಪಿ

    ನಾಲ್ವರನ್ನು ಹತ್ಯೆ ಮಾಡಿ ಆರೋಪಿ ಚೂರಿಯನ್ನ ಅಡುಗೆ ಮನೆಯಲ್ಲಿ ಇಟ್ಟಿದ್ದ: ಉಡುಪಿ ಕೇಸ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್‌ಪಿ

    – ಪೊಸೆಸಿವ್‌ನೆಸ್‌ನಿಂದ ಅಯ್ನಾಝ್‌ ಕೊಲೆ 

    ಉಡುಪಿ: ಒಂದೇ ಕುಟುಂಬದ ನಾಲ್ವರ (Udupi Murder Case) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳನ್ನು ಉಡುಪಿ ಎಸ್‌ಪಿ ಅರುಣ್ ಅವರು ಹಂಚಿಕೊಂಡಿದ್ದಾರೆ.

    ನೇಜಾರು ತೃಪ್ತಿ ನಗರದಲ್ಲಿ ಹಸೀನಾ, ಆಫ್ನಾನ್, ಅಯ್ನಾಝ್, ಆಸಿಮ್ ಹತ್ಯೆಯಾಗಿತ್ತು. ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿ ನಾಲ್ವರ ಕೊಲೆಗೈದು ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದ. ಪತ್ನಿಗೆ ಸಂಶಯ ಬಾರದ ಹಾಗೆ ಮನೆಯಲ್ಲಿ ಪ್ರವೀಣ್ ಚೌಗಲೆ ವರ್ತಿಸಿದ್ದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ವರ ಕೊಲೆ ಆರೋಪಿ ಪ್ರವೀಣ್ ಚೌಗುಲೆಗೆ ನ್ಯಾಯಾಂಗ ಬಂಧನ

    ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ. ಇಬ್ಬರಿಗೂ ಎಂಟು ತಿಂಗಳಿಂದ ಪರಿಚಯ ಇತ್ತು. ಇಬ್ಬರ ಮಧ್ಯೆ ಗೆಳೆತನ ಇತ್ತು. ಪ್ರವೀಣ್, ಆಯ್ನಾಸ್‌ಗೆ ಹಲವಾರು ಸಹಾಯ ಮಾಡದ್ದಾನೆ. ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಪೊಸೆಸಿವ್‌ನೆಸ್‌ನಿಂದ ಕೊಲೆ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಪ್ರವೀಣ್. ಆರಂಭದಲ್ಲಿ ಅಯ್ನಾಸ್‌ಗೆ ಮೊದಲ ಅಟ್ಯಾಕ್ ಮಾಡುತ್ತಾನೆ. ಹಸೀನಾ, ಅಫ್ನಾನ್, ಆಸಿಂಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಬೇರೆ ಬೇರೆ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು ಹೆಂಡತಿ ತವರು ಮನೆಗೆ ಹೋಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

    ನಾವು ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಪ್ರವೀಣ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. 2007 ರಲ್ಲಿ ಪೂನಾ ಪೊಲೀಸ್ ಆಗಿದ್ದ, ಉತ್ತಮ ಸಂಬಳಕ್ಕಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇರಿದ್ದಾನೆ. ಅಮಲು ಪದಾರ್ಥ ಸೇವನೆ ಮಾಡಿದ್ದನೋ ಎಂಬ ಬಗ್ಗೆ ಮೆಡಿಕಲ್ ರಿಪೋರ್ಟ್ ಬರಲಿದೆ. ಒಂದೇ ಚಾಕುವಿನಲ್ಲಿ ನಾಲ್ವರ ಕೊಲೆಗೈದಿದ್ದಾನೆ. ಕುಡುಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ ವ್ಯಕ್ತಿಯ ವಿಚಾರಣೆ ಮಾಡಿದ್ದೇವೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯುತ್ತೇವೆ. ಕೈಗೆ ಗಾಯವಾಗಿದೆ ಎಂಬ ಬಗ್ಗೆ ಪತ್ನಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ. ಗಂಭೀರ ಪ್ರಕರಣ ಆಗಿರುವ ಕಾರಣ ಎಲ್ಲಾ ಮಾಹಿತಿ ಮಾಧ್ಯಮಕ್ಕೆ ಕೊಡಲು ಸಾಧ್ಯವಿಲ್ಲ. ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಆಗಿದೆ ಎಂದು ಎಸ್‌ಪಿ ಹೇಳಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ- ಕೊಲೆಗೆ ಬಳಸಿದ್ದ ಆಯುಧ ವಶಕ್ಕೆ

    ಉಡುಪಿ ನಗರದಲ್ಲಿ ಹೆಚ್ಚುವರಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು. ಜಿಲ್ಲೆಯ ಎಲ್ಲಾ ಗಡಿಪ್ರದೇಶದಲ್ಲಿ ಸಿಸಿಟಿವಿ ಕಣ್ಗಾವಲು ಇರಿಸ್ತೇವೆ. ಆರೋಪಿ ಪ್ರವೀಣ್ ಮತ್ತು ಅಯ್ನಾಝ್ ಕುಟುಂಬ ತನಿಖೆಗೆ ಸಹಕಾರ ನೀಡಿದೆ. ನೂರ್ ಮೊಹಮ್ಮದ್ ಕುಟುಂಬ ಬಹಳ ನೋವಲ್ಲಿದ್ದಾರೆ. ವಿಶೇಷ ಪಿ.ಪಿ ನೇಮಕಕ್ಕೆ ನಾವು ಸಹಕಾರ ನೀಡುತ್ತೇವೆ. ಫಾಸ್ಟ್ ಟ್ರ‍್ಯಾಕ್ ಕೋರ್ಟ್ ಬಗ್ಗೆ ಕುಟುಂಬ ಮನವಿ ನೀಡಿದೆ. ತನಿಖೆಗೆ ಒಟ್ಟು 11 ತಂಡ ರಚನೆ ಮಾಡಿದ್ದೆವು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಯಿಂದ ಮಾಹಿತಿ ಬಂದ ಕಾರಣ ಎಲ್ಲವನ್ನು ತನಿಖೆ ಮಾಡಿದ್ದೇವೆ. ಹಸೀನಾಗೆ ಆರ್ಥಿಕ ಮೋಸವಾದ ಬಗ್ಗೆ ಮಾಹಿತಿ ಸಿಕ್ಕಿದೆ. ಕುಟುಂಬದಿಂದ ದೂರು ಪಡೆದುಕೊಂಡು ತನಿಖೆ ಮಾಡುತ್ತೇವೆ ಎಂದು ವಿವರಿಸಿದ್ದಾರೆ.

    ನಾಲ್ವರ ಕೊಲೆ ಪ್ರಕರಣ ತನಿಖೆ ದೊಡ್ಡ ಸವಾಲಾಗಿತ್ತು. ರಾಷ್ಟ್ರಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಚಾರ್ಜ್‌ಶೀಟ್‌ ಸಲ್ಲಿಕೆಗೆ ಇನ್ನೂ 70-80 ದಿನ ಇದೆ. ಎಲ್ಲಾ ಸಾಕ್ಷಿಗಳ ಸಂಗ್ರಹ ಮಾಡುತ್ತಿದ್ದೇವೆ. ಸುಮಾರು 50 ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ. ಒಂದು ಆಪ್ ಮೂಲಕ ಆಯ್ನಾಝ್ ಮನೆಯನ್ನು ಪ್ರವೀಣ್ ಕಂಡು ಹುಡುಕಿದ್ದಾನೆ. ಆಪ್ ಲೊಕೇಶನ್ ಮೂಲಕ ಆರೋಪಿ ಮನೆಗೆ ಬಂದಿದ್ದಾನೆ. ಆರೋಪಿ ಕೃತ್ಯಕ್ಕೆ ಮೊದಲು ಮನೆಗೆ ಬಂದಿರಲಿಲ್ಲ. ಹೆಚ್ಚುವರಿ ತಾಂತ್ರಿಕ ಮಾಹಿತಿಗಳನ್ನು ನಾವು ಕೊಡುವುದಿಲ್ಲ. ಚಾರ್ಜ್‌ಶೀಟ್‌ನಲ್ಲಿ ನ್ಯಾಯಾಲಯಕ್ಕೆ ಎಲ್ಲಾ ಮಾಹಿತಿಗಳನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:

    ನಾಲ್ವರ ಕೊಂದ ಆರೋಪಿ ಮೇಲೆ ಜನಾಕ್ರೋಶ; ರಸ್ತೆ ತಡೆದು ಸಾರ್ವಜನಿಕರ ಪ್ರತಿಭಟನೆ, ಲಾಠಿ ಪ್ರಹಾರ – ಉಡುಪಿ ಉದ್ವಿಗ್ನ

    ಆರೋಪಿ ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಇಲಾಖೆಗೆ 1.50 ಲಕ್ಷ ರೂ. ಬಹುಮಾನ ಕೊಡುವ ಬಗ್ಗೆ ಶಿಫಾರಸ್ಸು ಮಾಡಿದ್ದೇನೆ ಎಂದು ಎಸ್‌ಪಿ ಅರುಣ್ ತಿಳಿಸಿದ್ದಾರೆ.

  • ನಾಲ್ವರ ಕೊಂದ ಆರೋಪಿ ಮೇಲೆ ಜನಾಕ್ರೋಶ; ರಸ್ತೆ ತಡೆದು ಸಾರ್ವಜನಿಕರ ಪ್ರತಿಭಟನೆ, ಲಾಠಿ ಪ್ರಹಾರ – ಉಡುಪಿ ಉದ್ವಿಗ್ನ

    ನಾಲ್ವರ ಕೊಂದ ಆರೋಪಿ ಮೇಲೆ ಜನಾಕ್ರೋಶ; ರಸ್ತೆ ತಡೆದು ಸಾರ್ವಜನಿಕರ ಪ್ರತಿಭಟನೆ, ಲಾಠಿ ಪ್ರಹಾರ – ಉಡುಪಿ ಉದ್ವಿಗ್ನ

    ಉಡುಪಿ: ನಾಲ್ವರನ್ನು ಕೊಂದ ಪಾಪಿ ಆರೋಪಿ ಇದ್ದ ಪೊಲೀಸ್ ಜೀಪ್‌ಗೆ ಸಾರ್ವಜನಿಕರ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಆಕ್ರೋಶಿತರನ್ನು ಚದುರಿಸಲು ಪೊಲೀಸರ ಲಘು ಲಾಠಿ ಪ್ರಹಾರ ನಡೆಸಿದರು. ಆರೋಪಿಯನ್ನ ನಮಗೆ ಕೊಡಿ ಎಂಬ ಆಕ್ರೋಶದ ಮಾತು ಪ್ರತಿಭಟನಾಕಾರರಿಂದ ಕೇಳಿಬಂತು. ಈ ಎಲ್ಲಾ ದೃಶ್ಯಗಳಿಂದಾಗಿ ಉಡುಪಿಯ ತೃಪ್ತಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಉಡುಪಿಯ ತೃಪ್ತಿ ನಗರದಲ್ಲಿ ನಾಲ್ವರನ್ನು ಕೊಂದ ಆರೋಪಿಯ ತನಿಖೆ ಆಗುತ್ತಿದೆ. 14 ದಿನ ಪೊಲೀಸ್ ಕಸ್ಟಡಿಗೆ ಪಡೆದು ಮಲ್ಪೆ ಠಾಣಾ ಪೊಲೀಸರು ಆರೋಪಿ ಪ್ರವೀಣ್ ಚೌಗುಲೆಯನ್ನು ವಿಚಾರಣೆ ಮತ್ತು ಮಹಜರು ಪ್ರಕ್ರಿಯೆಗೆ ಒಳಪಡಿಸಿದ್ದಾರೆ. ದಿನಪೂರ್ತಿ ಮಾಹಿತಿ ಸಂಗ್ರಹಿಸಿ ಕೃತ್ಯ ನಡೆದ ತೃಪ್ತಿ ಲೇಔಟ್‌ಗೆ ಆರೋಪಿಯನ್ನು ಪೊಲೀಸರು ಇಂದು (ಗುರುವಾರ) ಸಂಜೆ ಕರೆ ತಂದಿದ್ದರು.

    ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆರೋಪಿಯನ್ನ ಕೃತ್ಯ ನಡೆದ ಮನೆಯಲ್ಲಿ ಮಹಜರು ನಡೆಸಲಾಯಿತು. ಆಗಲೇ ಧಿಕ್ಕಾರದ ಕೂಗು ಜಮಾಯಿಸಿದ ಜನರಿಂದ ಕೇಳಿಬಂತು. ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಸಂಜೆ 4:55 ಕ್ಕೆ ನೇಜಾರು ತೃಪ್ತಿ ನಗರದ ಕೃತ್ಯ ನಡೆದ ಮನೆಗೆ ಪೊಲೀಸರು ಕರೆತಂದರು. ಅಷ್ಟೊತ್ತಿಗಾಗಲೇ ನೂರಾರು ಮಂದಿ ಸ್ಥಳದಲ್ಲಿ ಜವಾಯಿಸಿದ್ದರು. ಆರೋಪಿಯನ್ನ ಕರೆ ತಂದಿದ್ದಾರೆ ಎಂಬ ಮಾಹಿತಿ ತಿಳಿದ ಸಾರ್ವಜನಿಕರು ಆಕ್ರೋಶ ಮತ್ತು ಕುತೂಹಲ ಹೆಚ್ಚಿ ಮತ್ತಷ್ಟು ಸಂಖ್ಯೆಯಲ್ಲಿ ಜಮಾಯಿಸಿದರು.

    ಪೊಲೀಸರು ಬ್ಯಾರಿಕೇಡ್‌ಗಳನ್ನ ಹಾಕಿ ಜನರನ್ನ ತಡೆಯಲು ಯತ್ನಿಸಿದರೂ ಆಕ್ರೋಶಿತರ ಕೋಪ ಎಷ್ಟಿತ್ತೆಂದರೆ, ಆರೋಪಿ ಇದ್ದ ವಾಹನಕ್ಕೆ ಮುತ್ತಿಗೆ ಹಾಕಲು ಜನ ನುಗ್ಗಿದರು. ತಡೆದ ಪೊಲೀಸರು ಜನರನ್ನು ತಳ್ಳಿ, ಲಘು ಲಾಠಿ ಪ್ರಹಾರ ಮಾಡಿ ಜನರನ್ನ ಚದುರಿಸಿದರು. ಜನಸಂದಣಿ ನಡುವೆ ಸಿಲುಕಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಸ್ಥಳದಿಂದ ಕರೆದೊಯ್ದರು. ಈ ಸಂದರ್ಭ ಹತ್ತಾರು ಜನರಿಗೆ ಲಾಟಿಯೇಟು ಬಿದ್ದಿದೆ. ಜನರ ಆಕ್ರೋಶ ಪೊಲೀಸರ ಕಡೆ ತರುಗಿತು.

    ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದ ಮುಂದುವರೆಯಿತು. ರಸ್ತೆಯಲ್ಲಿ ಕೂತು ಜನ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಎಸ್‌ಪಿ, ಡಿಸಿ ಬರಬೇಕು ಎಂದು ಒತ್ತಾಯಿಸಿದರು. ಮುಸ್ಲಿಂ ಸಮುದಾಯದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಆರೋಪಿಯನ್ನು ಚುಚ್ಚಿ ಚುಚ್ಚಿ ಸಾಯಿಸಿ ಎಂದು ಆಕ್ರೋಶ ಹೊರಹಾಕಿದರು.

    ಸುಮಾರು ಅರ್ಧ ಗಂಟೆಗಳ ಕಾಲ ಸಂತೆಕಟ್ಟೆ-ಕೆಮ್ಮಣ್ಣು-ಮಲ್ಪೆ ರಸ್ತೆಯಲ್ಲಿ ಯಾವುದೇ ವಾಹನಗಳು ಓಡಾಡಲಿಲ್ಲ. ವಾಹನಗಳನ್ನ ಪ್ರತಿಭಟನಾಕಾರರು ವಾಪಸ್ ಕಳುಹಿಸಿದರು. ಮಲ್ಪೆ ಎಸ್ಐ ಗುರುನಾಥ ಹಾದಿಮನಿ ಪ್ರತಿಭಟನೆಕಾರರ ಮನವೊಲಿಕೆ ಮಾಡಿದರು. ಮುಸಲ್ಮಾನ ಸಮುದಾಯದ ಮುಖಂಡರು ಪರಿಸ್ಥಿತಿಯನ್ನು ವಿವರಿಸಿದರು. ಆನಂತರ ಸಾರ್ವಜನಿಕರು ರಸ್ತೆ ತಡೆಯನ್ನು ವಾಪಸ್ ತೆಗೆದುಕೊಂಡು. ಸುಗಮ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟರು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಜನರನ್ನ ಸ್ಥಳದಿಂದ ಚದುರಿಸಲಾಗಿದೆ. ಆರೋಪಿ ಬಗೆಗಿನ ಆಕ್ರೋಶ ಜನರಲ್ಲಿ ಮಡುಗಟ್ಟಿದೆ.