ದಾವಣಗೆರೆ: ಹೊನ್ನಾಳಿ ಹಿರೇಕಲ್ಮಠದ (Honnali Hirekal Mutt) ಆನೆ ಸುಭದ್ರೆಯನ್ನು (32) (Subhadre Elephant) ಕೊಂಡೊಯ್ಯಲು ಬಂದಿದ್ದ ಉಡುಪಿ ಮಠದ (Udupi Krishna Mutt) ಸಿಬ್ಬಂದಿಗೆ ನಿರಾಸೆಯಾಗಿದೆ. ಸುಭದ್ರೆಯನ್ನು ಕೊಡಲು ಹಿರೇಕಲ್ಮಠದಿಂದ ನಿರಾಕರಿಸಲಾಗಿದೆ.
ಸುಭದ್ರೆಯನ್ನು ಕರೆದಕೊಂಡು ಹೋಗಲು ಏಕಾಏಕಿ ಲಾರಿ ಸಹಿತ ಉಡುಪಿ ಮಠದ ಸಿಬ್ಬಂದಿ ಬಂದಿದ್ದರು. ಈ ವೇಳೆ, ಮಠದ ಆವರಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ನಡುವೆ ಪ್ರವೇಶಿಸಿ, ಸಾಮರಸ್ಯದಿಂದ ಎಲ್ಲರೂ ನಡೆದುಕೊಳ್ಳೋಣ ಎಂದು ಮನವಿ ಮಾಡಿದರು. ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್?
ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಕರೆ ಮಾಡಿ ಸುಭದ್ರೆಯನ್ನು ಹೊನ್ನಾಳಿ ಮಠದಲ್ಲಿ ಉಳಿಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಸಚಿವರು ಸಹಮತ ವ್ಯಕ್ತಪಡಿಸಿದರು. ಇದರಿಂದ ಸಾವಿರಾರು ಭಕ್ತರ ಆಪೇಕ್ಷೆಯಂತೆ ಹೊನ್ನಾಳಿ ಮಠದಲ್ಲಿ ಸುಭದ್ರೆ ಉಳಿದುಕೊಂಡಿದೆ.
ಯಾರು ಈ ಸುಭದ್ರೆ?
ಈ ಹಿಂದೆ ಸುಭದ್ರೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸೇರಿತ್ತು. ಆಗ ಆನೆ ಕಾಲಿಗೆ ಗ್ಯಾಂಗ್ರೀನ್ ಆಗಿ ಬಳಲುತ್ತಿತ್ತು. ಇದರಿಂದ ಸಾಕಲು ಆಗಲ್ಲ ಎಂದು 2019ರಲ್ಲಿ ಅರಣ್ಯ ಇಲಾಖೆಗೆ ವಾಪಸ್ ಮಾಡಲಾಗಿತ್ತು. ಬಳಿಕ ಶಿವಮೊಗ್ಗದ ಸಕ್ರೆಬೈಲ್‍ನಲ್ಲಿ ಆನೆಯನ್ನು ಇರಿಸಲಾಗಿತ್ತು. ಹೊನ್ನಾಳಿ ಹಿರೇಕಲ್ಮಠ, ಆನೆಗೆ 12.20 ಲಕ್ಷ ರೂ. ಖರ್ಚು ಮಾಡಿ ಚಿಕಿತ್ಸೆ ಕೊಡಿಸಿತ್ತು. ಆರೈಕೆಯಿಂದ 4 ಟನ್ ಇದ್ದ ಆನೆ ಈಗ 8 ಟನ್ ಆಗಿದೆ. ಇದನ್ನೂ ಓದಿ: ದಸರಾ ನಿಮಿತ್ತ ಸಿಡಿಮದ್ದು ತಾಲೀಮು – ವಿಚಲಿತಗೊಂಡ ಗಜಪಡೆಯ ಶ್ರೀಕಂಠ, ಹೇಮಾವತಿ






