Tag: udupi krishna

  • ಶ್ರೀಕೃಷ್ಣನ ಪೂಜಾಧಿಕಾರ ಶಿರೂರು ಮಠಕ್ಕೆ- ಅಕ್ಕಿ ಮುಹೂರ್ತದಲ್ಲಿ ಒಂದಾದ ಅಷ್ಟಮಠ

    ಶ್ರೀಕೃಷ್ಣನ ಪೂಜಾಧಿಕಾರ ಶಿರೂರು ಮಠಕ್ಕೆ- ಅಕ್ಕಿ ಮುಹೂರ್ತದಲ್ಲಿ ಒಂದಾದ ಅಷ್ಟಮಠ

    ಉಡುಪಿ: ಶ್ರೀಕೃಷ್ಣನಿಗೆ ಮುಂದಿನ ವರ್ಷ ಪೂಜೆ ಮಾಡುವ ಅಧಿಕಾರ ಶಿರೂರು ಮಠದ (Shiruru Mutt) ಪಾಲಾಗಲಿದೆ. ಅತಿ ಕಿರಿ ವಯಸ್ಸಿನ ಶ್ರೀಗಳ ಪರ್ಯಾಯ ಪೂರ್ವಭಾವಿ ಅಕ್ಕಿ ಮಹೂರ್ತಕ್ಕೆ ಅಷ್ಟಮಠಗಳ ಯತಿಗಳು ಮತ್ತೆ ಒಂದಾದರು. ಅಕ್ಕಿಗೆ ಪೂಜೆ ಮಾಡಿ, ಆಶೀರ್ವಾದಗೈದು ಧೈರ್ಯ ತುಂಬಿದರು.

    ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದೆ. ಮುಂದಿನ ಜನವರಿ ನಂತರ ಕೃಷ್ಣನ ಪೂಜಾಧಿಕಾರ, ಅಷ್ಟಮಠಗಳಲ್ಲೇ ಕಿರಿಯ ಶ್ರೀಗಳಾದ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಗಳಿಗೆ ಸಿಗಲಿದೆ. ಪರ್ಯಾಯ ಮಹೂರ್ತದ ಪೂರ್ವಭಾವಿ ಅಕ್ಕಿ ಮಹೂರ್ತವನ್ನು ಶೀರೂರು ಮಠ ಶಾಸ್ತ್ರೋಕ್ತವಾಗಿ, ಅದ್ದೂರಿಯಾಗಿ ನೆರವೇರಿಸಿತು.

    ಅಷ್ಟಮಠಗಳು, ಉಡುಪಿ ದಕ್ಷಿಣ ಕನ್ನಡದ ಪ್ರಸಿದ್ಧ ತೀರ್ಥಕ್ಷೇತ್ರಗಳಿಂದ ಪ್ರಸಾದ ರೂಪದಲ್ಲಿ ಅಕ್ಕಿಯನ್ನು ಮುಡಿ ಕಟ್ಟಿ ಮೆರವಣಿಗೆ ಮೂಲಕ ಹೊತ್ತು ತರಲಾಯಿತು. ಅನಂತೇಶ್ವರ ಚಂದ್ರಮೌಳೇಶ್ವರ ಕೃಷ್ಣ ಮಠದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಅಕ್ಕಿ ಮಹೂರ್ತ ನಡೆಸಲಾಯಿತು.

    ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸಾವಿನ ನಂತರ ಉಳಿದ ಮಠಗಳು ಶಿರೂರು ಮಠದ ಜೊತೆ ಅಂತರ ಕಾಯ್ದುಕೊಂಡಿದ್ದವು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜೊತೆಯಾಗುತ್ತಿತ್ತು. 7 ವರ್ಷದ ನಂತರ 8 ಮಠಗಳ ಸ್ವಾಮೀಜಿಗಳು ಶಿರೂರು ಮಠಕ್ಕೆ ಪ್ರವೇಶಿಸಿ ಅಕ್ಕಿ ಮಹೂರ್ತದಲ್ಲಿ ಭಾಗಿಯಾದರು. ಪರ್ಯಾಯ ಪೀಠ ಏರಲಿರುವ ಅತಿ ಕಿರಿಯ ಶ್ರೀಗಳಿಗೆ ಈ ಮೂಲಕ ಆಶೀರ್ವದಿಸಿ ಧೈರ್ಯ ತುಂಬಿದ್ದಾರೆ. ಮಠದ ಭಕ್ತರ ಜೊತೆ ನೂರಾರು ಸಾರ್ವಜನಿಕರು ಭಾಗಿಯಾಗಿದ್ದರು.

  • ಕೃಷ್ಣ ಮಠದ ಫಲಕದಲ್ಲಿ ಕನ್ನಡ ಕಾಣೆ – ಸಂಸ್ಕೃತ, ತುಳು ಪ್ರತ್ಯಕ್ಷ

    ಕೃಷ್ಣ ಮಠದ ಫಲಕದಲ್ಲಿ ಕನ್ನಡ ಕಾಣೆ – ಸಂಸ್ಕೃತ, ತುಳು ಪ್ರತ್ಯಕ್ಷ

    – ಕನ್ನಡಾಭಿಮಾನಿ ಮಠದ ಭಕ್ತರಿಗೆ ಬೇಸರ

    ಉಡುಪಿ: ಕೇಂದ್ರ ಸರ್ಕಾರ ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪದ ನಡುವೆಯೇ ಉಡುಪಿ ಕೃಷ್ಣಮಠದಲ್ಲಿ ಕನ್ನಡ ಮಾಯವಾಗಿದೆ. ಉಡುಪಿ ಶ್ರೀಕೃಷ್ಣಮಠದ ಮಹಾದ್ವಾರದಲ್ಲಿ ಹಾಕಲಾದ ಫಲಕದಲ್ಲಿ ಕನ್ನಡ ಕಾಣೆಯಾಗಿದೆ.

    ಈ ಹಿಂದೆ ಕೃಷ್ಣಮಠದ ಮುಖ್ಯ ಮಹಾದ್ವಾರದಲ್ಲಿ ಕನ್ನಡದಲ್ಲಿ ಕೃಷ್ಣಮಠ ಎಂಬ ದೊಡ್ಡ ಫಲಕವನ್ನು ಹಾಕಲಾಗಿತ್ತು. ಈಗ ಉಡುಪಿಯಲ್ಲಿ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಮಠವನ್ನು ನವೀಕರಣ ಮಾಡುವ ಜೊತೆಗೆ ಕನ್ನಡದ ಬೋರ್ಡು ಕಳಚಿ ಹೊಸ ಬೋರ್ಡ್ ಅಳವಡಿಸಿದ್ದಾರೆ.

    ಹೊಸ ಫಲಕದಲ್ಲಿ ಕನ್ನಡ ಕಾಣೆಯಾಗಿದೆ. ತುಳು ಮತ್ತು ಸಂಸ್ಕೃತದಲ್ಲಿ ಶ್ರೀಕೃಷ್ಣಮಠ ಎಂದು ಬರೆಯಲಾಗಿದೆ. ಶ್ರೀಕೃಷ್ಣಮಠ ರಜತಪೀಠ ಪುರ ಎಂದು ತುಳುವಿನಲ್ಲೂ, ಶ್ರೀಕೃಷ್ಣಮಠ ರಜತಪೀಠ ಪುರಂ ಎಂದು ಸಂಸ್ಕೃತದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ – ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ

    ಈ ಬಗ್ಗೆ ಕನ್ನಡ ಅಭಿಮಾನಿಗಳು ಮಠದ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಕೃಷ್ಣಮಠದಲ್ಲಿ ಕನ್ನಡಕ್ಕೆ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.