Tag: Udhashar

  • ದರ್ಶನ್‍ಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ ಸ್ನೇಹಿತ..!

    ದರ್ಶನ್‍ಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ ಸ್ನೇಹಿತ..!

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಸಿನಿಮಾದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬುಧವಾರ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ವೇಳೆ ಅವರಿಗೆ ಬರೊಬ್ಬರಿ 1 ಕೆಜಿ ತೂಕದ ವಾಚ್ ಉಡುಗೊರೆಯಾಗಿ ಸಿಕ್ಕಿದೆ.

    ನಟ ಠಾಕೂರ್ ಅನೂಪ್ ಸಿಂಗ್ ಅವರು ದರ್ಶನ್ ಅವರಿಗೆ 1 ಕೆಜಿ ತೂಕದ ವಾಚ್ ಗಿಫ್ಟ್ ನೀಡಿದ್ದಾರೆ. ದರ್ಶನ್ ಅವರು ಸ್ನೇಹಿತ ಅನೂಪ್ ಸಿಂಗ್ ಹಾಗೂ ಸುನೀಲ್ ಕುಮಾರ್ ದೇಸಾಯಿ ಆಹ್ವಾನಿಸಿದ್ದರಿಂದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು.

    ಅನೂಪ್ ಸಿಂಗ್ ಅವರು ದರ್ಶನ್ ಅಭಿನಯದ ‘ಯಜಮಾನ’ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿದ್ದಾರೆ. ಹೀಗಾಗಿ ಠಾಕೂರ್ ಮತ್ತು ದರ್ಶನ್ ಇಬ್ಬರು ಸ್ನೇಹಿತರಾಗಿದ್ದರು. ‘ಉದ್ಘರ್ಷ’ ಸಿನಿಮಾದಲ್ಲಿ ಅನೂಪ್ ಸಿಂಗ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಠಾಕೂರ್ ತನ್ನ ಗೆಳೆಯ ದರ್ಶನ್‍ಗೆ ಒಂದು ಕೆಜಿ ತೂಕದ ವಾಚ್ ನೀಡಿದ್ದಾರೆ. ಆದರೆ ವಾಚಿನ ಬೆಲೆ ಮಾತ್ರ ತಿಳಿಸಲಿಲ್ಲ.

    ಹೊರಗಡೆಯಿಂದ ಬರುವ ಕೆಲವು ಕಲಾವಿದರು, ಕನ್ನಡ ಸಿನಿಮಾದಲ್ಲಿ ಅಭಿನಯಿಸಿ ಹಣ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ವಿಚಾರದಲ್ಲಿ ಠಾಕೂರ್ ಅನೂಪ್ ಅವರ ಕಮಿಟ್ ಮೆಂಟ್ ನನಗೆ ತುಂಬಾ ಸಂತಸ ತಂದಿದೆ. ಸಿನಿಮಾದಲ್ಲಿ ಅಭಿನಯಿಸಿ ಡೈಲಾಗ್ ಅಭ್ಯಾಸ ಮಾಡಿ, ಅವರೇ ಡಬ್ ಮಾಡಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ” ಎಂದು ದರ್ಶನ್ ಹೇಳಿದ್ದರು.

    ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬರುತ್ತಿದೆ. ಕಿಚ್ಚ ಸುದೀಪ್ ಈ ಟ್ರೈಲರ್ ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ‘ಉದ್ಘರ್ಷ’ ಶೂಟಿಂಗ್ ಕಂಪ್ಲೀಟ್

    ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ‘ಉದ್ಘರ್ಷ’ ಶೂಟಿಂಗ್ ಕಂಪ್ಲೀಟ್

    ಬೆಂಗಳೂರು: ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹುನಿರೀಕ್ಷಿತ ಉದ್ಘರ್ಷ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರದ ಬಹುತೇಕ ಶೂಟಿಂಗ್ ಅನ್ನು ಈಗಾಗಲೇ ಕಂಪ್ಲೀಟ್ ಮಾಡಿ, ಎಡಿಟಿಂಗ್ ಕೂಡ ಮುಗಿಸಿರೋ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ಸದ್ಯ ಕುಂಬಳಕಾಯಿ ಒಡೆದಿದ್ದಾರೆ.

    ಕನ್ನಡ ಮತ್ತು ತೆಲುಗಿನಲ್ಲಿ ಉದ್ಘರ್ಷ ಹೆಸರಿನಿಂದ ಚಿತ್ರ ತೆರೆಕಾಣಲಿದ್ದು, ತಮಿಳಿನಲ್ಲಿ ಉಚ್ಚಕಟ್ಟಮ್ ಅಂತಾ ಹೆಸರಿಡಲಾಗಿದೆ. ಇನ್ನು ಚಿತ್ರದ ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದ್ದು, ಬೆಂಗಳೂರು, ಹೈದರಾಬಾದ್ ಹಾಗೂ ಕೇರಳದಲ್ಲೂ ಕೆಲ ದೃಶ್ಯಗಳ ಚಿತ್ರೀಕರಣವಾಗಿದೆ. ಚಿತ್ರದಲ್ಲಿ ಸಿಂಗಂ 3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ನಾಯಕ ನಟರಾಗಿ ನಟಿಸಿದ್ದರೆ, ತಮಿಳಿನ ಕಬಾಲಿ ಖ್ಯಾತಿಯ ಧನ್ಸಿಕಾ ಹಾಗೂ ನವ ನಟಿ ತಾನ್ಯಾ ಹೋಪ್ ನಾಯಕಿಯರಾಗಿ ಅಭಿನಯಿಸಿದ್ದಾರೆ.

    ಅಲ್ಲದೇ ಬಾಲಿವುಡ್ ವಿಲನ್ ಕಬೀರ್ ಸಿಂಗ್ ದುಹಾನ್, ತೆಲುಗಿನ ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್ ಮುಂತಾದವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹುಭಾಷಾ ತಾರೆ ಕನ್ನಡಿಗ ಕಿಶೋರ್ ಮತ್ತೊಂದು ಪ್ರಮುಖ ಹಾಗೂ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಚಿತ್ರಕ್ಕೆ ಪಿ ರಾಜನ್ ಹಾಗೂ ದಿವಂಗತ ವಿಷ್ಣುವರ್ಧನ್ ಅವರ ಕ್ಯಾಮರಾ ವರ್ಕ್ ಮಾಡಿದ್ದರೆ, ಹಿಂದಿಯ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸಂಜೋಯ್ ಚೌಧುರಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ನಿರ್ದೇಶಕ ದೇಸಾಯಿ ಅವರ ಸ್ನೇಹಿತ ಆರ್. ದೇವರಾಜ್ ಹಣ ಹೂಡಿದ್ದು, ರಾಜೇಂದ್ರ ಹಾಗೂ ಡಿ. ಮಂಜುನಾಥ್ ಸಹ ನಿರ್ಮಾಪಕರಾಗಿದ್ದು, ಡಿ ಕ್ರಿಯೇಶನ್ಸ್ ಬ್ಯಾನರ್ ಅಡಿ ಚಿತ್ರ ಮೂಡಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv