Tag: UddhavThackeray

  • ಭಿನ್ನಮತಕ್ಕೆ ಬ್ರೇಕ್ ಹಾಕಲು ಉದ್ಧವ್ ಠಾಕ್ರೆ – ಶಿಂಧೆ ಸಭೆ, ಬಿಜೆಪಿ ನಾಯಕರೇ ಮಧ್ಯಸ್ಥಿಕೆ: ದೀಪಾಲಿ ಸೈಯದ್

    ಭಿನ್ನಮತಕ್ಕೆ ಬ್ರೇಕ್ ಹಾಕಲು ಉದ್ಧವ್ ಠಾಕ್ರೆ – ಶಿಂಧೆ ಸಭೆ, ಬಿಜೆಪಿ ನಾಯಕರೇ ಮಧ್ಯಸ್ಥಿಕೆ: ದೀಪಾಲಿ ಸೈಯದ್

    ಮುಂಬೈ: ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಮಹಾರಾಷ್ಟ್ರದ ನೂತನ ಸಿಎಂ ಏಕನಾಥ್ ಶಿಂಧೆ ಹಾಗೂ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಶಿವಸೇನೆ ನಾಯಕಿಯಾಗಿ ಗುರುತಿಸಿಕೊಂಡಿರುವ ಮರಾಠಿ ನಟಿ ದೀಪಾಲಿ ಸೈಯದ್ ಹೇಳಿದ್ದಾರೆ.

    ಶಿಂಧೆ ಹಾಗೂ ಠಾಕ್ರೆ ನಡುವಿನ ಸಭೆಗೆ ಬಿಜೆಪಿಯ ಕೆಲ ನಾಯಕರೇ ಮಧ್ಯಸ್ಥಿಕೆ ವಹಿಸುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಬಳಿಕ ಶಿವಸೇನಾ ಅಧಿಕಾರಿಯೊಬ್ಬರು ಸೈಯದ್ ಅವರು ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲ ಎಂಬುದಾಗಿ ಹೇಳಿದ್ದಾರೆ. ಇದನ್ನೂ ಓದಿ: ತಂದೆ ಎದುರೇ ಮಗುವನ್ನು ಟೆರೇಸ್ ಮೇಲಿಂದ ಕೆಳಗೆಸೆದ ಕೋತಿ ಗ್ಯಾಂಗ್ – ಹಸುಗೂಸು ಸಾವು

    ದೀಪಾಲಿ 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಥಾಣೆ ಜಿಲ್ಲೆಯ ಮುಂಬ್ರಾ-ಕಲ್ವಾ ಕ್ಷೇತ್ರದಿಂದ ಶಿವಸೇನೆಯಿಂದ ಸ್ಫರ್ಧಿಸಲು ಉತ್ಸಾಹಿಯಾಗಿದ್ದರು. ಆದರೆ ಟಿಕೆಟ್ ಸಿಕ್ಕಿರಲಿಲ್ಲ. ಇದಕ್ಕೂ ಮುನ್ನ 2014ರಲ್ಲಿ ಆಮ್ ಆದ್ಮಿ (ಎಎಪಿ) ಪಕ್ಷದಿಂದ ಅಹ್ಮದ್‌ನಗರ ಜಿಲ್ಲೆಯಿಂದ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ತೆಲಂಗಾಣದ ಮೇಘಸ್ಫೋಟದ ಹಿಂದೆ ವಿದೇಶಿ ಶಕ್ತಿಗಳ ಷಡ್ಯಂತ್ರ – KCR

    ಸದ್ಯ ಶಿವಸೇನೆ ರಾಜಕೀಯ ಬೆಳವಣಿಗೆಗಳ ಕುರಿತು ಟ್ವೀಟ್ ಮಾಡಿರುವ ಅವರು, `ಶಿವಸೈನಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಅವರ ಭೇಟಿ ಇನ್ನೆರಡು ದಿನಗಳಲ್ಲಿ ನಡೆಯಲಿದೆ ಎಂದು ತಿಳಿಯಲು ನನಗೆ ಸಂತೋಷವಾಗಿದೆ. ಶಿಂಧೆ ಸೈನಿಕರ ಭಾವನೆಗಳನ್ನು ಅರ್ಥಮಾಡಿಕೊಂಡರು. ಠಾಕ್ರೆ ಅವರು ತಮ್ಮ ಪಾತ್ರದಲ್ಲಿ ದೊಡ್ಡ ಮನಸ್ಸಿನಿಂದ ಅವರನ್ನ ಸ್ವೀಕರಿಸುತ್ತಿದ್ದಾರೆ. ಕೆಲವು ಬಿಜೆಪಿ ನಾಯಕರು ಈ ಸಭೆಗೆ ಮಧ್ಯಸ್ಥಿಕೆ ವಹಿಸುತ್ತಿದ್ದಾರೆ’ ಎಂದು ಸೈಯದ್ ಟ್ವೀಟ್ ಮಾಡಿದ್ದು, ಶಿವಸೇನಾ ನಾಯಕಿ ಎಂದೂ ಉಲ್ಲೇಖಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಅಂತಹ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ತಿಳಿದಿಲ್ಲ. ನಾನು ಪಕ್ಷದಲ್ಲಿ ಬಹಳ ಸಣ್ಣ ಕಾರ್ಯಕರ್ತ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸೆ.3ರಂದು ವಿಶ್ವದ ಮೊದಲ ರಣಹದ್ದು ಸಂರಕ್ಷಣೆ ಕೇಂದ್ರ ಉದ್ಘಾಟಿಸಲಿರುವ ಯೋಗಿ

    ಅಲ್ಲದೆ ಏಕನಾಥ್ ಶಿಂಧೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 15 ದಿನಗಳ ನಂತರವೂ ಪ್ರಮಾಣವಚನ ಸ್ವೀಕರಿಸಿಲ್ಲ. ಸಾಂವಿಧಾನಿಕ ಸಮಸ್ಯೆಗಳು ಇರುವುದರಿಂದ ಸಚಿವ ಸಂಪುಟವೂ ವಿಸ್ತರಣೆಯಾಗಿಲ್ಲ. ಶಿವಸೇನೆಯ 50 ಬಂಡಾಯ ಶಾಸಕರಲ್ಲಿ 40 ಮಂದಿ ಅನರ್ಹತೆಯ ಆತಂಕ ಎದುರಿಸುತ್ತಿದ್ದಾರೆ. ಇದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದರಿಂದ ಇನ್ನೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಒಂದು ವೇಳೆ ವಿಸ್ತರಣೆ ಮಾಡಿದರೂ ಅವರನ್ನು ಅನರ್ಹಗೊಳಿಸಲಾಗುತ್ತದೆ ಎಂದು ಟೀಕಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಪ್ರೀಂನಿಂದ ಮಹಾರಾಷ್ಟ್ರದ ಎರಡೂ ಬಣದ ಶಾಸಕರಿಗೆ ತಾತ್ಕಾಲಿಕ ರಿಲೀಫ್‌

    ಸುಪ್ರೀಂನಿಂದ ಮಹಾರಾಷ್ಟ್ರದ ಎರಡೂ ಬಣದ ಶಾಸಕರಿಗೆ ತಾತ್ಕಾಲಿಕ ರಿಲೀಫ್‌

    ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆದ‌ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದಾಖಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಪರಿಶೀಲಿಸಿದೆ. ಏಕನಾಥ್ ಶಿಂಧೆ ಸರ್ಕಾರ ರಚನೆ ವಿರೋಧಿಸಿ ಉದ್ಧವ್ ಠಾಕ್ರೆ ಬಣ ದಾಖಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.

    ಇಂದು ಅರ್ಜಿಗಳನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕ ಸಂವಿಧಾನಿಕ ಪೀಠ ರಚನೆ ಮಾಡುವ ಅಗತ್ಯವಿದೆ. ಈ ಕಾರ್ಯಕ್ಕೆ ಸ್ವಲ್ಪ ಸಮಯವಕಾಶ ಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‍.ವಿ ರಮಣ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ಅರ್ಜಿ ಇತ್ಯರ್ಥವಾಗುವವರೆಗೂ, ಶಿವಸೇನೆಯ ರೆಬೆಲ್ ಶಾಸಕರು, ಮತ್ತು ಉದ್ಧವ್ ಬಣದ ಶಾಸಕರ ಅನರ್ಹತೆಗೆ ಸಂಬಂಧಿಸಿ ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆ ಸ್ಪೀಕರ್‌ಗೆ ಸ್ಪಷ್ಟವಾಗಿ ಸೂಚಿಸಿದೆ. ಇದನ್ನೂ ಓದಿ: ಎಡಿಜಿಪಿ ಬೆದರಿಕೆ ಬಗ್ಗೆ `ಹೈ’ ಆದೇಶದಲ್ಲಿ ಉಲ್ಲೇಖ – ಎಸಿಬಿಗೆ ಕಳಂಕಿತರ ನೇಮಿಸದಂತೆ ಸರ್ಕಾರಕ್ಕೆ ನಿರ್ದೇಶನ

    ಹೀಗಾಗಿ ಶಿವಸೇನೆಯ ಎರಡು ಬಣಗಳು ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಟ್ಟಿವೆ. ಈ ಮಧ್ಯೆ, ವಿಪಕ್ಷ ನಾಯಕನ ಸ್ಥಾನ ತಮಗೆ ಬೇಕೆಂದು ಶಿವಸೇನೆ, ಮಿತ್ರಪಕ್ಷಗಳ ಬಳಿ ಕೇಳಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ 16 ಬಂಡಾಯ ಶಾಸಕರು ತಮಗೆ ಸ್ಪೀಕರ್ ನೀಡಿದ್ದ ಅನರ್ಹತೆ ನೋಟಿಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇನ್ನೊಂದೆಡೆ ಸರ್ಕಾರ ರಚನೆಗೆ ಹಾಗೂ ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಶಿಂಧೆಗೆ ನೀಡಿದ್ದ ಆಹ್ವಾನ ಪ್ರಶ್ನಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಅರ್ಜಿ ಸಲ್ಲಿಸಿತ್ತು. ಇದೇ ವೇಳೆ ನೂತನ ಸ್ಪೀಕರ್ ಶಿವಸೇನೆಯ ಹೊಸ ಮುಖ್ಯ ಸಚೇತಕರನ್ನು ನೇಮಿಸಿದ್ದನ್ನೂ ಶಿವಸೇನೆ ಪ್ರಶ್ನಿಸಿತ್ತು. ಇದನ್ನೂ ಓದಿ: ಜುಲೈ 21ಕ್ಕೆ ಹಾಜರಾಗಿ – ಸೋನಿಯಾ ಗಾಂಧಿಗೆ ಮತ್ತೆ ED ಸಮನ್ಸ್

    Live Tv
    [brid partner=56869869 player=32851 video=960834 autoplay=true]

  • ಮಸೀದಿ ಬಳಿ ನಿಂತು ಜೈ ಶ್ರೀರಾಮ್ ಘೋಷಣೆ ಕೂಗಿ ಹನುಮಾನ್ ಚಾಲೀಸಾ ಪಠಿಸಿದ MNS

    ಮಸೀದಿ ಬಳಿ ನಿಂತು ಜೈ ಶ್ರೀರಾಮ್ ಘೋಷಣೆ ಕೂಗಿ ಹನುಮಾನ್ ಚಾಲೀಸಾ ಪಠಿಸಿದ MNS

    ಮುಂಬೈ: ಮುಂಬೈನಲ್ಲಿರುವ ಮಸೀದಿಯೊಂದರ ಸ್ವಲ್ಪ ದೂರದಲ್ಲೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಇದರೊಂದಿಗೆ ಜೈ ಶ್ರೀರಾಮ್ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾ… ಜೈ ಸೋ’ ಎಂಬ ಘೋಷಣೆಗಳನ್ನೂ ಕೂಗಿದ್ದು, ತೀವ್ರ ವಿವಾದಕ್ಕೆ ತಿರುಗಿದೆ.

    MUMBAI

    ಎಂಎನ್‌ಎಸ್ ಮುಖ್ಯಸ್ಥ ರಾಜ್‌ಠಾಕ್ರೆ ನಿನ್ನೆ ತಮ್ಮ ಬೆಂಬಲಿಗರಿಗೆ ಹನುಮಾನ್ ಚಾಲೀಸಾ ಪಠಿಸುವಂತೆ ಕರೆ ನೀಡಿದ್ದರು. ಅದರಂತೆ ಹನುಮಾನ್ ಚಾಲೀಸಾ ಪಠಣ ಹಾಗೂ ಜೈ ಶ್ರೀರಾಮ್ ಘೋಷಣೆಗಳು ಮೊಳಗಿವೆ. ಬೆಳಿಗ್ಗೆ 5 ಗಂಟೆಯ ಆಜಾನ್ ಸಮಯದಲ್ಲಿ ಕಟ್ಟಡದ ಮೇಲಿಂದ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸಾ ಕೇಳುವಂತೆ ಮಾಡಿದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡುತ್ತಿರುವುದಾಗಿ ವರದಿಯಾಗಿದೆ.

    MUMBAI POLICE

    ಎರಡು ದಿನಗಳ ಹಿಂದೆಯೇ ಮಹಾರಾಷ್ಟçದ ಔರಂಗಾಬಾದ್‌ನಲ್ಲಿ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾಜ್ ಠಾಕ್ರೆ, ಡಬಲ್ ಪವರ್‌ನಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಔರಂಗಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರು ಪರಸ್ಪರ ಧರ್ಮವನ್ನು ಗೌರವಿಸಬೇಕು: ನಿತೀಶ್ ಕುಮಾರ್

    ಪೊಲೀಸರಿಗೆ ತಲೆನೋವು: ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆಗೆಯುವಂತೆ ಆಗ್ರಹಿಸಿದ್ದ ರಾಜ್ ಠಾಕ್ರೆ, ಅದಕ್ಕೆ ಮೇ 3 ಕೊನೆಯ ದಿನವೆಂದು ಗಡುವು ನೀಡಿದ್ದರು. ಅದು ಸಾಧ್ಯವಾಗದಿದ್ದರೆ, ಮಸೀದಿಗಳ ಎದುರೇ ಹನುಮಾನ್ ಚಾಲೀಸಾ ಪಠಣ ಆರಂಭಿಸುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಮಹಾರಾಷ್ಟ್ರ ಪೊಲೀಸರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ತಲೆಕಡೆಸಿಕೊಂಡಿದ್ದಾರೆ.

    ಈ ನಡುವೆ ರಾಜ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ತಂದೆ ಬಾಳಾಸಾಹೇಬ್ ಠಾಕ್ರೆ ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರ ಹಳೆಯ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    36 ಸೆಕೆಂಡ್‌ಗಳ ಈ ವೀಡಿಯೋನಲ್ಲಿ ಬಾಳಾ ಠಾಕ್ರೆ, ಧ್ವನಿವರ್ಧಕಗಳ ಬಳಕೆ ವಿರುದ್ಧ ಎಚ್ಚರಿಕೆ ನೀಡಿರುವುದು ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯಲಾಗುತ್ತದೆ ಎಂದಿದ್ದಾರೆ.

    ಜಾಮೀನು ರಹಿತ ವಾರೆಂಟ್: 14 ವರ್ಷಗಳ ಹಿಂದಿನ ಪ್ರಕರಣದ ಸಂಬಂಧ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನ್ಯಾಯಲಯವು ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಮುಂಬೈ ಪೊಲೀಸರು ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಿಆರ್‌ಪಿಸಿ ಸೆಕ್ಷನ್ ಅಡಿಯಲ್ಲಿ ಠಾಕ್ರೆ ಹಾಗೂ ನೂರಾರು ಮಂದಿಗೆ ನೋಟಿಸ್ ನೀಡಿದ್ದಾರೆ. ಅದರ ಬೆನ್ನಲ್ಲೇ ರಾಜ್ ಠಾಕ್ರೆ ಅವರ ಮುಂಬೈ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.