Tag: uddav thackery

  • ಮಹಾ ಹೈಡ್ರಾಮಾ ಅಂತ್ಯ – ವಿಶ್ವಾಸ ಪರೀಕ್ಷೆ ಗೆದ್ದ ಏಕನಾಥ್‌ ಶಿಂಧೆ

    ಮಹಾ ಹೈಡ್ರಾಮಾ ಅಂತ್ಯ – ವಿಶ್ವಾಸ ಪರೀಕ್ಷೆ ಗೆದ್ದ ಏಕನಾಥ್‌ ಶಿಂಧೆ

    ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟ ಕೊನೆಗೂ ಅಂತ್ಯವಾಗಿದೆ. ಸಿಎಂ ಏಕನಾಥ್‌ ಶಿಂಧೆ ಬಹುಮತ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ.

    ಒಟ್ಟು ಬಿಜೆಪಿ ಮತ್ತು ಶಿವಸೇನೆ ಬಣದ ಒಟ್ಟು 164 ಶಾಸಕರು ಶಿಂಧೆ ಪರ ನಿಂತರೇ, 99 ಶಾಸಕರು ವಿರುದ್ಧವಾಗಿ ನಿಂತಿದ್ದಾರೆ. ಈ ಮೂಲಕ ಬಿಜೆಪಿ ಬೆಂಬಲಿತ ಶಿವಸೇನೆ ಬಂಡಾಯ ಸರ್ಕಾರ ಎರಡೂವರೆ ವರ್ಷದ ಬಳಿಕ ಅಧಿಕಾರ ಹಿಡಿದಿದೆ. ಇದನ್ನೂ ಓದಿ: ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ-ಭಾರತ ಗಡಿಯಲ್ಲಿನ ಸೇತುವೆ

    ಎರಡು ದಿನಗಳ ಕಾಲ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ, ಭಾನುವಾರದಂದು ಸ್ಪೀಕರ್ ಆಯ್ಕೆ ಮಾಡಲಾಗಿತ್ತು. ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಬಂಡಾಯ ಶಾಸಕರ ನೆರವಿನೊಂದಿಗೆ 164 ಮತಗಳನ್ನು ಗಳಿಸುವ ಮೂಲಕ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಶಿಂಧೆ ಬಹುಮತ ಸಾಬೀತಿಗೆ ಮತಗಳ ಕೊರತೆಯಾಗಲಿಲ್ಲ. ಇದನ್ನೂ ಓದಿ: ಮೆಟ್ಟಿಲಿನಿಂದ ಎಡವಿ ಬಿದ್ದ ಲಾಲೂ ಪ್ರಸಾದ್ ಯಾದವ್ – ಭುಜದ ಮೂಳೆ ಮುರಿತ

    288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಮತಗಳ ಅವಶ್ಯಕತೆ ಇದ್ದು, ಓರ್ವ ಶಾಸಕನ ನಿಧನದಿಂದ ಇದು 144ಕ್ಕೆ ಇಳಿದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ 55, ಎನ್‍ಸಿಪಿ 53, ಕಾಂಗ್ರೆಸ್ 44, ಬಿಜೆಪಿ 106, ಬಹುಜನ ವಿಕಾಸ್ ಅಘಾಡಿ 3, ಸಮಾಜವಾದಿ 2, ಎಐಎಂಐಎಂ 2, ಪ್ರಹರ್ ಜನಶಕ್ತಿ 1, ಸಿಪಿಐ (ಎಂ) 1, ಪಿಡಬ್ಲ್ಯೂಪಿ 1, ಸ್ವಾಭಿಮಾನಿ ಪಕ್ಷ 1, ರಾಷ್ಟ್ರೀಯ ಸಮಾಜ ಪಕ್ಷ 1, ಜನಸುರಾಜ್ಯ ಶಕ್ತಿ ಪಕ್ಷ 1, ಕ್ರಾಂತಿಕಾರಿ ಶೆಟ್ಕರಿ ಪಕ್ಷ 1 ಸ್ಥಾನಗಳನ್ನು ಹೊಂದಿದೆ.

    107 ಮತಗಳನ್ನು ಹೊಂದಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ವಿರೋಧ ಪಕ್ಷವಾಗಲಿದೆ. ಈ ಮೂಲಕ ಮೂರು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಕ್ಕೆ ಅಧಿಕೃತ ತೆರೆ ಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ವಾಣಿಜ್ಯ ನಗರಿಯಲ್ಲಿ ಎಲೆಕ್ಟ್ರಿಕ್ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸಲಿವೆ: ಆದಿತ್ಯ ಠಾಕ್ರೆ

    ವಾಣಿಜ್ಯ ನಗರಿಯಲ್ಲಿ ಎಲೆಕ್ಟ್ರಿಕ್ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸಲಿವೆ: ಆದಿತ್ಯ ಠಾಕ್ರೆ

    ಮುಂಬೈ: ವಾಣಿಜ್ಯ ನಗರಿಯಲ್ಲಿ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸಲಿವೆ. ದಹನಕಾರಿ ಎಂಜಿನ್‍ಗಳ ಬದಲಿಗೆ ಎಲೆಕ್ಟ್ರಿಕ್ ಮೊಟಾರುಗಳು ಈ ಬಸ್‍ಗಳಿಗೆ ಶಕ್ತಿ ನೀಡುತ್ತವೆ. ಬೃಹತ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಕಂಪನಿಯು ಮುಂಬೈಗೆ 900 ಎಸಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‍ಗಳನ್ನು ನೀಡಲಿದೆ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.

    ನಗರದಲ್ಲಿ ಐಕಾನಿಕ್ ಡಬಲ್ ಡೆಕ್ಕರ್ ಬಸ್‍ಗಳ ಸಂಚಾರವನ್ನು ಪ್ರಾರಂಭಿಸಲು ನಾನು ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವೈಯಕ್ತಿಕವಾಗಿ ಉತ್ಸುಕರಾಗಿದ್ದೇವೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    ಬೆಸ್ಟ್ ಕಂಪನಿಯ 900 ಎಲೆಕ್ಟ್ರಿಕ್ ಬಸ್‍ಗಳನ್ನು ರೋಡಿಗೆ ಇಳಿಸುವ ಯೋಜನೆಯಲ್ಲಿದ್ದೇವೆ. ನಗರವನ್ನು ಹೊಗೆ ರಹಿತ ಮಾಡುವ ಉದ್ದೇಶ ನಮ್ಮದಾಗಿದೆ. 10,000 ಎಲೆಕ್ಟ್ರಿಕ್/ಕ್ಲೀನ್ ಪರ್ಯಾಯ ಇಂಧನ ಬಸ್‍ಗಳನ್ನು ಹೆಚ್ಚಿಸುವುದು ಮತ್ತು ಗರಿಷ್ಠ ಡಬಲ್ ಡೆಕ್ಕರ್ ಬಸ್‍ಗಳನ್ನು ಹೊಂದುವುದು ನಮ್ಮ ಗುರಿಯಾಗಿದೆ. ಇದು ನಮ್ಮ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ ಎಂದರು. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

    ಬಿಡುವಿಲ್ಲದ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‍ಗಳು ಹೆಚ್ಚಾಗಿ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಇತರ ನಗರಗಳ ಮುನ್ಸಿಪಲ್ ಕಮಿಷನರ್‍ಗಳಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

  • ಯೋಗಿ ಆದಿತ್ಯನಾಥ್‍ಗೆ ಅವರ ಚಪ್ಪಲಿಯಿಂದಲೇ ಹೊಡೆಯಬೇಕು ಅನ್ನಿಸಿತು: ಉದ್ದವ್ ಠಾಕ್ರೆ

    ಯೋಗಿ ಆದಿತ್ಯನಾಥ್‍ಗೆ ಅವರ ಚಪ್ಪಲಿಯಿಂದಲೇ ಹೊಡೆಯಬೇಕು ಅನ್ನಿಸಿತು: ಉದ್ದವ್ ಠಾಕ್ರೆ

    ಮುಂಬೈ: ಯೋಗಿ ಆದಿತ್ಯನಾಥ್ ಅವರ ಇತ್ತೀಚೆಗೆ ಪಾಲ್ಗರ್ ಭೇಟಿ ವೇಳೆ ಅವರ ಚಪ್ಪಲಿಯಿಂದಲೇ ಅವರಿಗೆ ಹೊಡೆಯಬೇಕು ಅಂತ ಅನ್ನಿಸಿತು ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಕಿಡಿ ಕಾರಿದ್ದಾರೆ.

    ಯೋಗಿಯವರು ಚಪ್ಪಲಿ ಹಾಕಿಕೊಂಡೆ ಮರಾಠ ಯೋಧ ಛತ್ರಪತಿ ಶಿವಾಜಿಯವರ ಫೋಟೋಕ್ಕೆ ಹಾರವನ್ನು ಹಾಕಿದ್ದನ್ನು ನೋಡಿ ಅದೇ ಚಪ್ಪಲಿಯಿಂದ ಅವರ ಮುಖಕ್ಕೆ ಹೊಡೆಯುವ ಮನಸ್ಸಾಯಿತು. ಯೋಗಿಯವರು ಕಪಟವೇಷಧಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿಎಂ ಆದಿತ್ಯನಾಥ್ ಯೋಗಿ ಅಲ್ಲ ಒಬ್ಬ ಭೋಗಿ. ಯೋಗಿ ಅಗಿದ್ದರೆ ಎಲ್ಲವನ್ನು ತ್ಯಜಿಸಿ ಗುಹೆಯಲ್ಲಿ ಕೂರಬೇಕಿತ್ತು. ಇವರು ಮುಖ್ಯಮಂತ್ರಿ ಗಾದಿಯಲ್ಲಿ ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಈ ಹಿಂದಿನ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು ತಮ್ಮ ದಾರಿಯಲ್ಲಿ ಬರುವವರನ್ನು ಬಿಜೆಪಿ ಕೊಲೆಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

    ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ. ನಾಸಿಕ್ ಮತ್ತು ಪರ್ಭಾನಿ ಹಾಗೂ ಪಾಲ್ಗರ್ ಲೋಕಸಭಾ ಉಪಚುನಾವಣೆ ಗೆಲುವು ವಿಜಯದ ಟ್ರೇಲರ್ ಅಷ್ಟೆ. ಮುಂದಿನ ನಮ್ಮ ಹೆಜ್ಜೆಗಳು ಮಹಾರಾಷ್ಟ್ರ ರಾಜಕಾರಣದ ದಿಶೆಯನ್ನೇ ಬದಲಾಯಿಸುತ್ತದೆ ಎಂದು ಗುಡುಗಿದರು.