Tag: Udbhav Thackeray

  • ಮಹಾರಾಷ್ಟ್ರ ಸರ್ಕಾರ ಬದಲಾವಣೆ- ಬಾಲಿವುಡ್‌ನಲ್ಲಿ ಕಿತ್ತಾಟ ಶುರು

    ಮಹಾರಾಷ್ಟ್ರ ಸರ್ಕಾರ ಬದಲಾವಣೆ- ಬಾಲಿವುಡ್‌ನಲ್ಲಿ ಕಿತ್ತಾಟ ಶುರು

    ಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಬದಲಾಗುತ್ತಿದ್ದಂತೆಯೇ ಬಾಲಿವುಡ್ ಕೆಲ ನಟಿಯರು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಅಲ್ಲದೇ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಈ ವಿವಾದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಸರಕಾರದ ಪತನ ಮತ್ತು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಾಲಿವುಡ್ ನಲ್ಲೂ ಕಿತ್ತಾಟ ಶುರುವಾಗಿದೆ.

    ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಭವ್ ಠಾಕ್ರೆ ರಾಜೀನಾಮೆ ನೀಡಿ, ಇದೀಗ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಕುರಿತಾಗಿಯೇ ಬಾಲಿವುಡ್ ನಲ್ಲಿ ಪರ ವಿರೋಧದ ಮಾತು ಕೇಳಿ ಬಂದಿವೆ. ಹೊಸ ಮುಖ್ಯಮಂತ್ರಿಯನ್ನು ಕಂಗನಾ ರಣಾವತ್ ಸ್ವಾಗತಿಸಿದ್ದರೆ, ನಿರ್ಗಮಿಸಿರುವ ಉದ್ಭವ್ ಠಾಕ್ರೆ ಬೆಂಬಲಕ್ಕೆ ದಿಯಾ ಮಿರ್ಜಾ ನಿಂತಿದ್ದಾರೆ. ಈ ಇಬ್ಬರ ನಡೆಗೂ ಪರ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

    ಉದ್ಭವ್ ಠಾಕ್ರೆ ಅವರನ್ನು ದಿಯಾ ಮಿರ್ಜಾ ಮನಸಾರೆ ಹೊಗಳಿದ್ದಾರೆ. ಮುಂದಿನ ದಿನಗಳು ನಿಮಗೆ ಹೊಸ ಭರವಸೆ ಮತ್ತು ಚೈತನ್ಯವನ್ನು ನೀಡಲಿವೆ. ಮತ್ತೆ ನೀವು ಈ ರಾಜ್ಯವನ್ನು ಆಳುತ್ತೀರಿ ಎಂದು ಹೇಳಿದ್ದಾರೆ. ಈ ಮಾತಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವ್ಯಂಗ್ಯವಾಡಿದ್ದಾರೆ. ಯಾವ ರಾಜ್ಯ, ಯಾವ ರಾಜ? ಎಂದು ಪರೋಕ್ಷವಾಗಿಯೇ ಉದ್ಭವ್ ಠಾಕ್ರೆ ಅವರನ್ನು ಕಾಲೆಳೆದಿದ್ದಾರೆ.

    Live Tv

  • ಕಂಗನಾ ರಣಾವತ್ ವಿರುದ್ಧ ತಿರುಗಿ ಬಿದ್ದ ಠಾಕ್ರೆ ಅಭಿಮಾನಿಗಳು

    ಕಂಗನಾ ರಣಾವತ್ ವಿರುದ್ಧ ತಿರುಗಿ ಬಿದ್ದ ಠಾಕ್ರೆ ಅಭಿಮಾನಿಗಳು

    ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ಮಹಾರಾಷ್ಟ್ರದ ಸಿಎಂ ಉದ್ಭವ ಠಾಕ್ರೆ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಸ್ತ್ರೀಯರಿಗೆ ಅಪಮಾನ ಯಾರು ಮಾಡುತ್ತಾರೋ ಅವರ ಪತನ ನಿಶ್ಚಿತ ಎಂದು ಹೇಳಿದ್ದ ವಿಡಿಯೋ, ಪ್ರಸ್ತುತ ಮಹಾರಾಷ್ಟ್ರದ ಸಿಎಂ ಉದ್ಭವ ಠಾಕ್ರೆ ಅವರಿಗೆ ಅನ್ವಯಿಸುತ್ತಿದೆ ಎಂದು ಬಣ್ಣಿಸಲಾಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಠಾಕ್ರೆ ಅಭಿಮಾನಿಗಳು ಕಂಗನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಕಂಗನಾ ರಣಾವತ್ ನಟಿಸಿದ್ದ ಧಾಕಡ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ನಿರ್ಮಾಪಕರಿಗೆ ಐವತ್ತು ಕೋಟಿಗೂ ಅಧಿಕ ನಷ್ಟವನ್ನುಂಟು ಮಾಡಿದೆ. ಯಾರಿಗೆ ನಟನೆ ಬರುವುದಿಲ್ಲವೋ ಅವರಿಗೆ ಸೋಲು ನಿಶ್ಚಿತ ಎನ್ನುವ ಅರ್ಥದಲ್ಲಿ ಠಾಕ್ರೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕಂಗನಾಗೆ ನಟಿಸುವುದು ಮಾತ್ರ ಗೊತ್ತು, ಅವರಿಗೆ ರಾಜಕೀಯ ಗಂಧಗಾಳಿ ಗೊತ್ತಿಲ್ಲ. ಅವರು ಕಾಸಿಗಾಗಿ ನಟಿಸಿದರೆ ಉತ್ತಮ ಎಂದು ಠಾಕ್ರೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    ಈ ಹಿಂದೆ ಕಂಗನಾ ರಣಾವತ್ ಮತ್ತು ಉದ್ಭವ್ ಠಾಕ್ರೆ ಸರಕಾರದ ನಡುವೆ ಜಟಾಪಟೆ ನಡೆದಿತ್ತು. ಕಂಗನಾಗೆ ಮಹಾರಾಷ್ಟ್ರದಲ್ಲಿ ನೆಲೆಯೂರಲು ಏನಿಲ್ಲದ ತೊಂದರೆ ಮಾಡಿತ್ತು. ಕಂಗನಾ ಆಫೀಸು ಸೇರಿದಂತೆ ನಾನಾ ಕಡೆ ಅಧಿಕಾರಿಗಳನ್ನು ಬಿಟ್ಟು, ಕಿರುಕುಳ ನೀಡಿದ್ದರು. ಈ ಸಂದರ್ಭದಲ್ಲಿ ಕಂಗನಾ ವಿಡಿಯೋವೊಂದನ್ನು ಮಾಡಿ ಸ್ತ್ರೀಯರಿಗೆ ತೊಂದರೆ ಕೊಟ್ಟವರಿಗೆ ಪತನ ನಿಶ್ಚಿತ ಎಂದು ಭವಿಷ್ಯ ನುಡಿದಿದ್ದರು. ಸದ್ಯ ಅದು ನಿಜವಾಗುತ್ತಿದೆ.

    Live Tv