– ಸನಾತನ ಧರ್ಮ ಮಲೇರಿಯಾ ಎಂದಿದ್ದ ಸ್ಟಾಲಿನ್ ಪುತ್ರ ಉದಯನಿಧಿ – ಮನೆಯವರ ವಿಚಾರಗಳಿಂದ ಅಂತರ ಕಾಯ್ದುಕೊಂಡಿರುವ ಸ್ಟಾಲಿನ್ ಪತ್ನಿ
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ (Kollur Mookambika Temple) ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ (M.K.Stalin) ಅವರ ಪತ್ನಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಸ್ನೇಹಿತೆಯರ ಜೊತೆ ದೇಗುಲಕ್ಕೆ ಭೇಟಿ ನೀಡಿದ ದುರ್ಗಾ ಸ್ಟಾಲಿನ್ ಅವರು, ಮೂಕಾಂಬಿಕೆಯ ದರ್ಶನ ಮಾಡಿದರು. ದುರ್ಗಾ ಅವರು ಕೊಲ್ಲೂರು ಮೂಕಾಂಬಿಕೆಯ ಭಕ್ತರಾಗಿದ್ದಾರೆ.
ತಮಿಳುನಾಡು ಸಿಎಂ ಪತ್ನಿ ಜೊತೆಗೆ ಬಂದಿದ್ದ ಅವರ ಸ್ನೇಹಿತರೆಯರು ಮೂಕಾಂಬಿಕಾ ದೇವಿಗೆ ಚಿನ್ನದ ಕಿರೀಟ ಅರ್ಪಣೆ ಮಾಡಿದ್ದಾರೆ. ಖಾಸಗಿಯಾಗಿ ದೇವಿಗೆ ಕಿರೀಟ ಅರ್ಪಿಸಿ ದೇವಿ ಕೃಪೆಗೆ ಪಾತ್ರರಾಗಿದ್ದಾರೆ.
ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ನಿರಂತರವಾಗಿ ಟೀಕಾಪ್ರಹಾರ ನಡೆಸಿದ್ದಾರೆ. ‘ಸನಾತನ ಧರ್ಮ ಮಲೇರಿಯಾ ಇದ್ದಂತೆ.. ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ಡಿಸಿಎಂ ಉದಯನಿಧಿ ಹೇಳಿಕೆ ನೀಡಿದ್ದರು. ವಿವಾದಿತ ಹೇಳಿಕೆಯು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಮನೆಯವರ ಇಂತಹ ಹೇಳಿಕೆಗಳಿಂದ ದುರ್ಗಾ ಸ್ಟಾಲಿನ್ ಅವರು ಅಂತರ ಕಾಯ್ದುಕೊಂಡಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಮನೆಯವರ ವಿಚಾರಧಾರೆ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ದಕ್ಷಿಣ ಭಾರತದ ವಿವಿಧ ದೇಗುಲಗಳಿಗೆ ಭೇಟಿ ನೀಡಿ, ಕೊಡುಗೆಗಳಿಂದ ದೈವ ಭಕ್ತೆ ಎನಿಸಿಕೊಂಡಿದ್ದಾರೆ.
ಬೆಂಗಳೂರು: ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತಮಿಳುನಾಡು ಸಚಿವ (Tamilnadu Minister) ಎಂ.ಕೆ ಉದಯನಿಧಿ ಸ್ಟಾಲಿನ್‍ಗೆ (Udhayanidhi Stalin) ಬಿಗ್ ರಿಲೀಫ್ ಸಿಕ್ಕಿದೆ.
ಪ್ರಕರಣ ಸಂಬಂಧ ನೋಟಿಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು ಇಂದು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಸ್ಟಾಲಿನ್ ಹಾಜರಾತಿಯನ್ನು ಪರಿಗಣಿಸಿದ ಕೋರ್ಟ್, 5 ಸಾವಿರ ನಗದು ಹಾಗೂ 50 ಸಾವಿರ ಮೊತ್ತದ ಆರೋಪಿ ವೈಯಕ್ತಿಕ ಬಾಂಡ್ ಮೇರೆಗೆ ಜಾಮೀನು ನೀಡಿದೆ. ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಯಿತು.
ಸ್ಟಾಲಿನ್ ಪರ ವಕೀಲರ ವಾದ ಏನಿತ್ತು?: ಉಳಿದ ಆರೋಪಿಗಳು ಎಲ್ಲಿ ಜಡ್ಜ್ ಪ್ರಶ್ನೆಗೆ ಸ್ಟಾಲಿನ್ ಪರ ವಕೀಲರು, 2- 4 ವರೆಗಿನ ಆರೋಪಿಗಳಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ದೇಶಾದ್ಯಂತ ಏಳು ಪ್ರಕರಣಗಳು ದಾಖಲಾಗಿವೆ. ಅವರಲ್ಲಿ ಒಬ್ಬರು ರಾಜ್ಯದ ಕ್ರೀಡಾ ಸಚಿವ. ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಕೋರ್ಟ್‍ಗೆ ಮನವಿ ಮಾಡಿಕೊಂಡರು. ಇದೇ ವೇಳೆ ಸುಪ್ರೀಂ ಕೋರ್ಟ್ ನಿಂದ ವಿನಾಯಿತಿ ಸಿಕ್ಕಿದೆ. ಸುಪ್ರೀಂ ಕೋರ್ಟ್ ಆದೇಶ ಪ್ರತಿ ಸಿಕ್ಕಿಲ್ಲ. ಹೀಗಾಗಿ ಜುಲೈ ಕೊನೆಯ ವಾರದ ಒಳಗೆ ಪ್ರತಿ ನೀಡಲು ಸೂಚನೆ ನೀಡಲಾಗಿದೆ ಎಂದರು.
ಏನಿದು ಪ್ರಕರಣ?: 2023ರ ಸೆಪ್ಟೆಂಬರ್ 3 ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸನಾತನನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಯಾವುದೇ ಕ್ಷಣದಲ್ಲಾದ್ರೂ ಪ್ರೀತಂ ಗೌಡಗೆ ಎಸ್‍ಐಟಿಯಿಂದ ನೊಟೀಸ್
ಸನಾತನ ಧರ್ಮದ ನಿರ್ಮೂಲನೆ ಆಗಬೇಕು. ಅದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಕರೆ ನೀಡಿದ್ದರು. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅದನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ ವೈರಸ್ ಅನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ಕೊಟ್ಟಿದ್ದರು. ಈ ಸಂಬಂಧ ದೇಶಾದ್ಯಂತ ಪ್ರತಿಪಕ್ಷ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಇದರ ಹೊರತಾಗಿಯೂ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಚೆನ್ನೈ: ಬಿಜೆಪಿ (BJP) ನೇತೃತ್ವದ ಎನ್‍ಡಿಎ ಒಕ್ಕೂಟದೊಂದಿಗಿನ 4 ವರ್ಷಗಳ ಮೈತ್ರಿಯಿಂದ ಹೊರಬಂದಿರುವುದಾಗಿ ಎಐಎಡಿಎಂಕೆ (AIADMK) ಹೇಳಿಕೆ ನೀಡಿದ ಬೆನ್ನಲ್ಲೇ ತಮಿಳುನಾಡು ಸಚಿವ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಪ್ರತಿಕ್ರಿಯಿಸಿದ್ದಾರೆ.
‘ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ’ ಎಂಬಂತೆ ಎರಡೂ ಪಕ್ಷಗಳು ಒಟ್ಟಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಬಹುದು. ಎಐಎಡಿಎಂಕೆ ಬಿಜೆಪಿಯೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡರೂ, 2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ವಿಜಯಶಾಲಿಯಾಗಲಿದೆ ಎಂದು ಅವರು ಭವಿಷ್ಯ ನುಡಿದರು.
ದೋಸ್ತಿ ಖತಂಗೆ ಕಾರಣವೇನು?: ಜಯಲಲಿತಾ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅಣ್ಣಾಮಲೈ ಮಾತನಾಡಿದ್ದರು. ಪಕ್ಷದ ಸಂಸ್ಥಾಪಕ ಅಣ್ಣಾದುರೈ ಬಗ್ಗೆ ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಣ್ಣಾಮಲೈ ಬಗ್ಗೆ ದೂರು ಕೊಟ್ಟರೂ ಹೈಕಮಾಂಡ್ ಸ್ಪಂದಿಸಲಿಲ್ಲ ಎಂಬ ಕೋಪವೂ ಇದೆ. ಇನ್ನು ಪೆರಿಯಾರ್ವಾವಾದದ ವಿರುದ್ಧ ಬಿಜೆಪಿಗರ ನಿರಂತರ ವಾಗ್ದಾಳಿ ನಡೆಸಿತ್ತು. ಬಿಜೆಪಿ ಜೊತೆ ಕೈಜೋಡಿಸಿದ್ದರಿಂದಲೇ ಕಳೆದ ಬಾರಿ ಸೋಲು ಎಂಬ ಅಭಿಪ್ರಾಯಕ್ಕೆ ಅಣ್ಣಾಡಿಎಂಕೆ ಬಂದಿದ್ದು, ಸೀಟು ಹಂಚಿಕೆ ಸಂಬಂಧ ಬಿಜೆಪಿ ಜೊತೆ ಒಮ್ಮತದ ಸಹಮತ ಮೂಡದ ಪರಿಣಾಮ ಬಿಜೆಪಿಗೆ ಶಾಕ್ ನೀಡಿದೆ.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ (Udayanidhi Stalin) ನೀಡಿರುವ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಈ ಬಗ್ಗೆ ನಟ ಚೇತನ್ ಮಾತನಾಡಿದ್ದಾರೆ. ಧರ್ಮದ ಬಗ್ಗೆ ಉದಯನಿಧಿ ಯಾವ ವ್ಯಾಪ್ತಿಯಲ್ಲಿ ಮಾತನಾಡಿದ್ದಾರೆ ಅನ್ನೋದನ್ನು ನೋಡಬೇಕು ಎಂದು ನಟ ಚೇತನ್ (Chethan) ಮಾತನಾಡಿದ್ದಾರೆ.
ತುಮಕೂರಿನಲ್ಲಿ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ಚೇತನ್ ಪ್ರತಿಕ್ರಿಯಿಸಿ, ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಸನಾತನ ಧರ್ಮದ ಬಗ್ಗೆ ಉದಯನಿಧಿ ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು. ನಾನು ಸನಾತನ ಧರ್ಮದ ವಿರೋಧಿಯಲ್ಲ. ಸನಾತನ ಧರ್ಮದಲ್ಲಿನ ಅಸಮಾನತೆಯ ವಿರೋಧಿ ಆಗಿದ್ದೇನೆ ಎಂದು ಚೇತನ್ ಮಾತನಾಡಿದರು.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ. ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆ ವಿಚಾರವಾಗಿ ಸಹಮತವಿದೆ. ಅದು ಸಮಾಜದ ಸಿವಿಲ್ ಕೋಡ್ ಆಗಿರಬೇಕು. ಕಮ್ಯೂನಿಸ್ಟ್‌ಗಳು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ ಎಂದರು ಚೇತನ್. ಇದನ್ನೂ ಓದಿ:Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್
ಬಳಿಕ ಕಾಂಗ್ರೆಸ್‌ನವರು ಐದು ಗ್ಯಾರಂಟಿ ತಂದು ತೇಪೆ ಹೆಚ್ಚುವ ಕೆಲಸ ಮಾಡುತ್ತಿದ್ದಾರೆ. ಅದನ್ನು ದೇವರಾಜ ಅರಸು ಆಡಳಿತಕ್ಕೆ ಹೋಲಿಸಬೇಡಿ ಎಂದಿದ್ದಾರೆ. ಎಸ್ಸಿ ಎಸ್ಟಿಗಳ ಅನುದಾನ ಗ್ಯಾರಂಟಿಗೆ ಬಳಸಿಕೊಂಡು ಪಕ್ಷದವರು ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ರೈತರ ಭೂಮಿಯನ್ನು ಗಣಿಗಾರಿಕೆಗೆ ಕೊಟ್ಟಿದ್ದಾರೆ ಎಂದು ಚೇತನ್ ಕಿಡಿಕಾರಿದ್ದರು. ಅಂದು ಗಣಿಗಾರಿಕೆ ವಿರುದ್ಧವೇ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದರು ಎಂದು ಟಾಂಗ್ ಕೊಟ್ಟರು.
ಲೇಖಕರ ಸಮಾವೇಶವೊಂದರಲ್ಲಿ ಇತ್ತೀಚಿಗೆ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನಂತರ ವಿವಾದ ಭುಗಿಲೆದ್ದಿದೆ.
ತಮಿಳುನಾಡು ಯುವಜನ- ಕ್ರೀಡಾ ವ್ಯವಹಾರಗಳ ಸಚಿವ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯ್‌ನಿಧಿ ಸ್ಟಾಲಿನ್ (Udayanidhi Stalin) ಸನಾತನ ಧರ್ಮದ ಕುರಿತಾಗಿ ದ್ವೇಷಪೂರಿತ ನೀಡಿದ್ದ ಹೇಳಿಕೆ ಕನ್ನಡದ ‘ಬಿಗ್ ಬಾಸ್’ ಪ್ರಥಮ್ (Bigg Boss Pratham) ಪ್ರತಿಕ್ರಿಯೆ ನೀಡಿದ್ದಾರೆ. ಬೇರೆಯವರ ಭಾವನೆಗಳನ್ನು ನೋಯಿಸಿದರೆ ನಮ್ಮನ್ನು ಮನುಷ್ಯರು ಅಂತಾರಾ ಎಂದು ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ನಟ ಪ್ರಥಮ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ಮಾಸ್ ಮಹಾರಾಜ ರವಿತೇಜ ಜೊತೆ ಹೆಜ್ಜೆ ಹಾಕಿದ ನೂಪುರ್ ಸನೋನ್
ಈ ನಡುವೆ ಉದಯ್‌ನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಕ್ಕೆ ಪ್ರಥಮ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲರಿಗೂ ಅವರದ್ದೇ ಆದ ಧರ್ಮ ಇದೆ ನಂಬಿಕೆ ಇದೆ, ನಿನಗಿಷ್ಟ ಇಲ್ಲ ಅಂದ್ರೆ ಬೇಡ. ಬೇರೆಯವರ ಭಾವನೆಗಳನ್ನ ನೋಯಿಸಿದರೆ ಮನುಷ್ಯರು ಅಂತಾರಾ? ಸನಾತನ ಧರ್ಮ ಬಹಳ ಕಾಲದಿಂದ ಇದೆ. ಪ್ರತಿಯೊಂದು ಧರ್ಮವನ್ನು ನಾವು ಗೌರವಿಸಬೇಕು ಎಂದು ಪ್ರಥಮ್ ಮಾತನಾಡಿದ್ದಾರೆ.
ನಿನಗಿಷ್ಟ ಇಲ್ಲ ಅಂದ್ರೆ ಬೇಡ. ಆದರೆ ಸಾರ್ವಜನಿಕವಾಗಿ ಹೆಂಗೆಂಗೋ ಮಾತಾಡೋದು ಸರಿಯಲ್ಲ ಎಂದು ಉದಯ್‌ನಿಧಿ ವಿರುದ್ಧ ಪ್ರಥಮ್ ವಾಗ್ದಾಳಿ ನಡೆಸಿದ್ದಾರೆ. ಒಂದು ಬಾರಿ ಹೇಳಿದ ಮೇಲೆ ತಿದ್ಕೊಬಹುದು ಅಂದ್ಕೊಂಡಿದ್ದೆ. ನೀಡಿದ ಹೇಳಿಕೆ ತಪ್ಪಾಗಿದ್ರೆ ತಿದ್ದುಕೊಳ್ಳಲು ಬಹಳಷ್ಟು ವೇದಿಕೆಗಳಿವೆ. ಆದರೆ ನಾನು ಮಾತನಾಡಿದ್ದೆ ಸರಿ ಅಂತಾ ಹೇಳೋದು ಅದೆಷ್ಟರ ಮಟ್ಟಿಗೆ ಸರಿ. ಈ ಉಡಾಫೆಯ ಮಾತು ಎಷ್ಟೋ ಜನರ ಭಾವನೆಗಳಿಗೆ ನೋವಾಗುತ್ತೆ.
ಲೇಖಕರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನಂತರ ವಿವಾದ ಭುಗಿಲೆದ್ದಿದೆ.
ಈ ನಡುವೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತಾಗಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಕಾನೂನು ಹಕ್ಕುಗಳ ವೀಕ್ಷಣಾಲಯ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಸೋಮವಾರ ಚೆನ್ನೈನ ಪೊಲೀಸ್ ಕಮಿಷನರ್‌ಗೆ ಲೀಗಲ್ ನೋಟಿಸ್ ಕಳುಹಿಸಿದೆ.
ಬೆಂಗಳೂರು: ಯಾವ ಧರ್ಮದಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಇಲ್ಲವೋ, ಯಾವ ಧರ್ಮದಲ್ಲಿ ಮನುಷ್ಯರ ನಡುವೆ ಭೇದ-ಭಾವ ಇರುತ್ತದೆಯೋ ಅದು ಧರ್ಮವೇ ಅಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿ ಕಾರಿದ್ದಾರೆ.
ಉದಯನಿಧಿ ಸ್ಟಾಲಿನ್ ಯಾವ ಸಂದರ್ಭದಲ್ಲಿ ಆ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಯಾವ ಧರ್ಮದಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಇಲ್ಲವೋ, ಯಾವ ಧರ್ಮದಲ್ಲಿ ಮನುಷ್ಯರ ನಡುವೆ ಭೇದ-ಭಾವ ಇರುತ್ತದೆಯೋ ಅದು ಧರ್ಮವೇ ಅಲ್ಲ. ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಇದ್ದೇವೆ. ಸಂವಿಧಾನವೇ (Constitution) ನಮ್ಮ ಧರ್ಮ, ಬುದ್ಧ, ಬಸವ ಹಾಕಿಕೊಟ್ಟಿರುವುದನ್ನ ಅನುಸರಿಸುತ್ತೇವೆ. ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ ಸಂವಿಧಾನವೇ ನಮ್ಮ ಧರ್ಮ ಆಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ; ಆನ್‌ಲೈನ್ ಮೂಲಕ ದೂರು ದಾಖಲಿಸಲು ಮುಂದಾದ ಹಿಂದೂ ಸಂಘಟನೆಗಳು
ಇದೇ ವೇಳೆ ಉಚಿತ ಯೋಜನೆಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ಮೇಲೆ ಪ್ರಧಾನಿಗೆ ದೇಶದ ಆರ್ಥಿಕತೆ ಮೇಲೆ ಪ್ರೀತಿ ಬಂದಿದೆ. ಬರೀ ಮನ್ ಕೀ ಬಾತ್ ಅಂತಾರೆ, ಆರ್ಥಿಕತೆ ಬಗ್ಗೆ ಒಂದು ಮಾತನ್ನೂ ಆಡುವುದಿಲ್ಲ. ನಾವು ಇವರ ಬಳಿ ಪಾಠ ಕಲಿಯುವ ಅವಶ್ಯಕತೆ ಇಲ್ಲ. ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ. ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಯೇ ಇದೆ. ರೇವಡಿ ಕಲ್ಚರ್ ಅಂತೀರಾ, ಆರ್ಥಿಕ ದಿವಾಳಿ ಅಂತೀರಾ, ನಮ್ಮ ಗೃಹಲಕ್ಷ್ಮಿ ಯೋಜನೆಗಳನ್ನೇ ಕಾಪಿ ಮಾಡಿ, ಮಧ್ಯಪ್ರದೇಶದಲ್ಲಿ ಲಾಡ್ಲಿ ಬೆಹೆನ್ ಅಂತಾ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೋದಿಯವರೇ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಬಗ್ಗೆ ನೀವು ಚಿಂತೆ ಮಾಡ್ಬೇಡಿ. ಕರ್ನಾಟಕದಲ್ಲಿ 14 ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ಇದ್ದಾರೆ. ನೀವು ದೇಶವನ್ನ ನೋಡಿಕೊಳ್ಳಿ ಸಾಕು ಎಂದು ತಿರುಗೇಟು ನೀಡಿದ್ದಾರೆ.
ಮುಂದಿನ ನವೆಂಬರ್ 29 ರಿಂದ ಡಿಸೆಂಬರ್ 01ರ ವೆರೆಗೆ ಬೆಂಗಳೂರಿನಲ್ಲಿ ಟೆಕ್ ಸಮ್ಮಿಟ್-2023 ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿಗಳ ಜೊತೆ ಮಾತುಕತೆ ನಡೆಸಲು ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಪೂರ್ವಭಾವಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಉದ್ಯಮಿ ಕಿರಣ್ ಮುಜುಂದಾರ್ ಶಾ ಸೇರಿ ಹಲವು ಉದ್ಯಮಿಗಳು ಉಪಸ್ಥಿತರಿದ್ದರು.
ಮಹಾನಟಿ (Mahanati) ಸಿನಿಮಾ ಮೂಲಕ ಸಖತ್ ಫೇಮಸ್ ಆಗಿರುವ ಕೀರ್ತಿ ಸುರೇಶ್ (Keerthi Suresh) , ವಾರಕ್ಕೊಂದು ಸಲ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿ ಆಗುತ್ತಿದ್ದಾರೆ. ಈ ಹಿಂದೆ ಅವರ ಮದುವೆ ವಿಚಾರವಾಗಿ ಸಾಕಷ್ಟು ಸದ್ದು ಮಾಡಿದ್ದರು. ಈ ಕುರಿತು ಸ್ವತಃ ಅವರ ತಂದೆಯೇ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಬೇಕಾಯಿತು.
ಈ ಹಿಂದೆ ಡೇಟಿಂಗ್ ವಿಚಾರವಾಗಿಯೂ ಕೀರ್ತಿ ಸುರೇಶ್ ಗಾಸಿಪ್ ಖಾಲಂನಲ್ಲಿ ಕಾಣಿಸಿಕೊಂಡಿದ್ದರು. ದಳಪತಿ ವಿಜಯ್ ಜೊತೆ ಕೀರ್ತಿ ಡೇಟಿಂಗ್ ಮಾಡುತ್ತಿದ್ದು, ವಿಜಯ್ ಅವರ ಸಂಸಾರ ಹಾಳಾಗಿದೆ ಎಂದು ವರದಿಯಾಗಿತ್ತು. ಈ ವಿಚಾರವಾಗಿ ಕೀರ್ತಿ ಮಾತನಾಡಿ, ಅಂಥದ್ದೇನೂ ಇಲ್ಲ. ನಾವಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದರು. ಅಲ್ಲಿಗೆ ಆ ಗಾಸಿಪ್ ಗೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದರು. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು
ಇದೀಗ ಮತ್ತೊಂದು ಕಾರಣಕ್ಕಾಗಿ ಕೀರ್ತಿ ಸುರೇಶ್ ಸುದ್ದಿಗೆ ಸಿಕ್ಕಿದ್ದಾರೆ. ಮಹಾನಟಿ ಸದ್ಯದಲ್ಲೇ ರಾಜಕಾರಣ (Politics) ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಅವರು ಉದಯನಿಧಿ ಸ್ಟಾಲಿನ್ ಜೊತೆ ಮಾಮನನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಾಜಕೀಯ ಹಿನ್ನೆಲೆಯನ್ನು ಕಥೆಯನ್ನು ಹೊಂದಿದೆ. ಸೆಲ್ವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಈ ಸಿನಿಮಾದ ಪ್ರಚಾರದಲ್ಲಿ ಕೇಳಿ ಬಂದ ಪ್ರಶ್ನೆಗೆ ಕೀರ್ತಿ ನೀಡಿದ ಉತ್ತರವೇ ಅವರ ರಾಜಕೀಯ ಕುರಿತಾದ ಸುದ್ದಿಗೆ ಕಾರಣವಾಗಿದೆ.
ನಿಮಗೇನಾದರೂ ರಾಜಕಾರಣಕ್ಕೆ ಬರುವ ಆಲೋಚನೆ ಇದೆಯಾ? ಎಂದು ಕೇಳಿದ ಪ್ರಶ್ನೆಗೆ, ‘ಆ ವಿಚಾರದ ಬಗ್ಗೆ ಆಲೋಚಿಸಬೇಕಿದೆ’ ಎಂದು ಹೇಳಿದ ಉತ್ತರವೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಹೇಳಿ ಕೇಳಿ ಈ ಸಿನಿಮಾದ ನಟ ಉದಯನಿಧಿ (Udayanidhi Stalin) ರಾಜಕಾರಣಿ. ತಮಿಳು ನಾಡು ಸರಕಾರದ ಸಚಿವ ಕೂಡ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರಚಾರಕ್ಕಾದರೂ ಕೀರ್ತಿ ಸುರೇಶ್ ಬರುತ್ತಾರೆ ಎನ್ನುವ ನಂಬಿಕೆ ಅವರ ಅಭಿಮಾನಿಗಳದ್ದು.
ಚೆನ್ನೈ: ಅಮೆರಿಕ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಕುಸಿತಗೊಂಡಿರುವ ಮತ್ತು ಮಧುರೈನ AIIMS ಯೋಜನೆ (AIIMS Project) ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ(Dravida Munnetra Kazhagam) (ಡಿಎಂಕೆ) ಶಾಸಕ ಉದಯನಿಧಿ ಸ್ಟಾಲಿನ್ (Udhayanidhi Stalin) ವಾಗ್ದಾಳಿ ನಡೆಸಿದ್ದಾರೆ.
ಅಕ್ಟೋಬರ್ 27 ರಂದು ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್‍ಗೆ (Nirmala Sitharaman) ಪ್ರಶ್ನೆ ಕೇಳಿದರೆ ಅವರು ನೀಡುವ ಉತ್ತರ ಕೇಳದರೆ ಯಾರನ್ನಾದರೂ ಬೆಚ್ಚಿ ಬೀಳಿಸುತ್ತದೆ. ಇತ್ತೀಚೆಗೆ ಅಮೆರಿಕಾ ಡಾಲರ್ (US Dollar) ಎದುರು ಭಾರತೀಯ ರೂಪಾಯಿ (Indian rupee) ಹೇಗೆ ಕುಸಿಯುತ್ತಿದೆ ಎಂದು ಅವರನ್ನು ಕೇಳಿದರೆ, ನೀವು ಅದನ್ನು ಏಕೆ ನೆಗೆಟಿವ್ ಆಗಿ ನೋಡುತ್ತಿದ್ದೀರಾ, ಅಮೆರಿಕಾ ಡಾಲರ್ ಬಲಗೊಳ್ಳುತ್ತಿರುವುದನ್ನು ಪಾಸಿಟಿವ್ ಆಗಿ ನೋಡಿ ಎಂದಿದ್ದರು. ನಮಗೆ ಎಂತಹ ಹಣಕಾಸು ಮಂತ್ರಿ ಸಿಕ್ಕಿದ್ದಾರೆ ನೋಡಿ. ಮೋದಿ ಹೇಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೋ, ಅದೇ ರೀತಿ ಬಿಜೆಪಿಯ ಬಹುತೇಕ ನಾಯಕರು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಇದೇ ವೇಳೆ ಮಧುರೈನಲ್ಲಿ (Madurai) ಸ್ಥಾಪಿಸಲಾಗುತ್ತಿರುವ ಏಮ್ಸ್ ಯೋಜನೆಯ ಬಗ್ಗೆ ಮಾತನಾಡಿದ ಅವರು, ಯೋಜನೆಯ ಫಲಿತಾಂಶವನ್ನು ಬಿಜೆಪಿ ನಾಯಕರು ತೋರಿಸಬೇಕು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು, ಶೇ 95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು. ಆದರೆ ಅವರು ಒಂದೇ ಒಂದು ಕಲ್ಲು ಕೂಡ ಹಾಕಿಲ್ಲ. ಬಿಜೆಪಿಯವರು ಕೇವಲ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪತ್ನಿಯ ಶವ ತರಲು ಹಣವಿಲ್ಲದೇ ಪರದಾಟ – ಸಹಾಯ ಮಾಡಿ ಮಾನವೀಯತೆ ಮೆರೆದ ಅಪ್ಪು ಅಭಿಮಾನಿಗಳು
Live Tv
[brid partner=56869869 player=32851 video=960834 autoplay=true]