Tag: Uday Garudachar

  • ಶಾಸಕ ಉದಯ್ ಗರುಡಾಚಾರ್‌ಗೆ ಲಘು ಹೃದಯಾಘಾತ

    ಶಾಸಕ ಉದಯ್ ಗರುಡಾಚಾರ್‌ಗೆ ಲಘು ಹೃದಯಾಘಾತ

    ಬೆಂಗಳೂರು: ಶಾಸಕ ಉದಯ್ ಗರುಡಾಚಾರ್‌ಗೆ ಲಘು ಹೃದಯಾಘಾತವಾಗಿದೆ.

    ಇಂದು ಸಂಜೆ ಮನೆಯಲ್ಲಿ ಜಿಮ್ ಮಾಡುತ್ತಿದ್ದಾಗ ಲಘು ಹೃದಯಾಘಾತವಾಗಿದ್ದು, ಶಾಸಕರನ್ನು ಕೂಡಲೇ ಜಯನಗರದ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವೈದ್ಯರು ಸದ್ಯ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುತ್ತಿದ್ದು, ಶಾಸಕರು ಅಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

  • ಶಾಸಕ ಉದಯ್ ಗರುಡಾಚಾರ್‌ಗೆ ಜೈಲು ಶಿಕ್ಷೆ- ಅದೇ ಕೋರ್ಟ್‍ನಿಂದ ಜಾಮೀನು

    ಶಾಸಕ ಉದಯ್ ಗರುಡಾಚಾರ್‌ಗೆ ಜೈಲು ಶಿಕ್ಷೆ- ಅದೇ ಕೋರ್ಟ್‍ನಿಂದ ಜಾಮೀನು

    ಬೆಂಗಳೂರು: ಚುನಾವಣಾ ಆಯೋಗ (Election Commission) ಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್ (Uday Garudachar)ಗೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ (ACMM Court) ಶಿಕ್ಷೆ ವಿಧಿಸಿದೆ.

    court order law

    2 ತಿಂಗಳು ಜೈಲು ಶಿಕ್ಷೆಯ ಜೊತೆಗೆ 10 ಸಾವಿರ ರೂಪಾಯಿ ದಂಡ (Fine) ವಿಧಿಸಿತು. ಆದರೆ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಆದೇಶ ಹಿನ್ನೆಲೆಯಲ್ಲಿ ಅದೇ ಕೋರ್ಟ್ ಶಾಸಕ ಉದಯ್ ಗರುಡಾಚಾರ್ ಗೆ ಜಾಮೀನು (Bail) ಮಂಜೂರು ಮಾಡಿದೆ. ಜೊತೆಗೆ ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಹೋಗಲು ಅವಕಾಶ ನೀಡಿದೆ. ಇದನ್ನೂ ಓದಿ: ಹಿಜಬ್ ಪ್ರಕರಣ ಸಿಜೆಐಗೆ ಒಪ್ಪಿಸಿದ್ರಿಂದ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ: ಹೊರಟ್ಟಿ

    ಇದು ನನಗೆ ಗೊತ್ತಲ್ಲದೇ ಆದ ಎಡವಟ್ಟು ಆಗಿದ್ದು, ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಹೋಗ್ತೀನಿ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ. ಉದಯ್ ಗರುಡಾಚಾರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‍ನಲ್ಲಿ 2 ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಹೆಚ್.ಜಿ.ಪ್ರಶಾಂತ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮೋದಿಯ ಡಿಜಿಟಲ್ ಇಂಡಿಯಾ ಮೂಲಕ ಪ್ರತಿ ಮನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು: ಉದಯ್ ಗರುಡಚಾರ್

    ಮೋದಿಯ ಡಿಜಿಟಲ್ ಇಂಡಿಯಾ ಮೂಲಕ ಪ್ರತಿ ಮನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು: ಉದಯ್ ಗರುಡಚಾರ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್ ಇಂಡಿಯಾ ಕನಸಿನ ಭಾರತ ನನಸು ಮಾಡಲು ಪ್ರತಿ ಮನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಚಿಕ್ಕಪೇಟೆ ಶಾಸಕರಾದ ಉದಯ್ ಗರುಡಾಚಾರ್ ಅಭಿಪ್ರಾಯಪಟ್ಟಿದ್ದಾರೆ.

    ಸ್ಲಂ ಪ್ರದೇಶದ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಆನಾಥ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಪ್ರಾಜೆಕ್ಟ್ ವರ್ಕ್ ಮಾಡಲು ಅನುಕೂಲಕ್ಕೆ ಬಿಗ್-ಬಿ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಸ್ಲಂ ಪ್ರದೇಶದ ಶಾಲಾ ಮಕ್ಕಳು ಮತ್ತು ಆನಾಥ ಮಕ್ಕಳು ಕಾಲೇಜು ,ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಮತ್ತು ಪ್ರಾಜೆಕ್ಟ್ ವರ್ಕ್ ಮಾಡಲು ತರಬೇತಿ ಕೇಂದ್ರ ಉದ್ಘಾಟನೆಯನ್ನು ಉದಯ್ ಗರುಡಾಚಾರ್, ಅರಣ್ಯ ಅಭಿವೃದ್ದಿ ನಿಗಮ ನಿರ್ದೇಶಕಿ ಭಾಗ್ಯವತಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಮರೇಶ್ (ಅಂಬರೀಶ್) ಮತ್ತು ಚಲನಚಿತ್ರ ನಿರ್ಮಾಪಕ ಜಾಕ್ ಮಂಜು ಉದ್ಘಾಟನೆ ಮಾಡಿದರು. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ನಲ್ಲಿ ಮತ್ತೆ ಬಿರುಕು – ಚರಣ್‍ಜಿತ್ ಸಿಂಗ್ ಛನ್ನಿ Vs ಸಿಧು

    ಬಳಿಕ ಮಾತನಾಡಿದ ಉದಯ್ ಗರುಡಾಚಾರ್, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಸ್ಲಂ ಪ್ರದೇಶವಿದೆ. ಅಲ್ಲಿ ಪ್ರತಿಭಾವಂತ ಮಕ್ಕಳು ಇದ್ದಾರೆ ಅವರಿಗೆ ಉತ್ತಮ ಕಂಪ್ಯೂಟರ್ ತಂತ್ರಜ್ಞಾನ ಹೊಂದಲು ಮತ್ತು ಶಾಲಾ, ಕಾಲೇಜು ಮಕ್ಕಳ ಪ್ರಾಜೆಕ್ಟ್ ವರ್ಕ್ ಮಾಡಲು ಉಚಿತವಾಗಿ ಕಲಿಸುವುದರಿಂದ ಶ್ರೀಮಂತರ ಮಕ್ಕಳಿಗೆ ಸಿಗುವ ಕಂಪ್ಯೂಟರ್ ಶಿಕ್ಷಣ ಸ್ಲಂ ಪ್ರದೇಶದ ಮಕ್ಕಳಿಗೆ ಸಿಕ್ಕರೆ ಭಾರತ ಭವಿಷ್ಯ ಉಜ್ವಲವಾಗಲಿದೆ .ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಯಶ್ವಸಿಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಎಲ್ಲರಿಗೂ ಅಶ್ವಿನಿ ಧನ್ಯವಾ

    ಭಾಗ್ಯವತಿ ಅಮರೇಶ್ ಮಾತನಾಡಿ, ಶಿಕ್ಷಣದಿಂದ ದೇಶ ಅಭಿವೃದ್ದಿ ಸಾಧ್ಯ. ಆರ್ಥಿಕವಾಗಿ ಸಬಲರಾದವರಿಗೆ ಉನ್ನತ ಶಿಕ್ಷಣ ಸಿಗುತ್ತದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಉಚಿತವಾಗಿ ಕಂಪ್ಯೂಟರ್ ತರಬೇತಿ ಮತ್ತು ಪ್ರಾಜೆಕ್ಟ್ ವರ್ಕ್ ಮಾಡಲು 10 ಕಂಪ್ಯೂಟರ್‍ ಗಳನ್ನು ಅಳವಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಆಶಯ ನಮ್ಮದು ಎಂದು ಹೇಳಿದರು. ಇದನ್ನೂ ಓದಿ: ನಾನು ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್

    ಕಾರ್ಯಕ್ರಮದಲ್ಲಿ ಬಿ.ಜೆ.ಪಿ.ಪ್ರಮುಖ ಮುಖಂಡರು, ಸ್ಲಂ ಪ್ರದೇಶದ ಮಕ್ಕಳು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.

  • ಟಿಕೆಟ್ ಕೈತಪ್ಪೋದಕ್ಕೆ ಅನಂತ್ ಕುಮಾರ್ ನೇರ ಹೊಣೆ: ರಮೇಶ್ ಆರೋಪ

    ಟಿಕೆಟ್ ಕೈತಪ್ಪೋದಕ್ಕೆ ಅನಂತ್ ಕುಮಾರ್ ನೇರ ಹೊಣೆ: ರಮೇಶ್ ಆರೋಪ

    ಬೆಂಗಳೂರು: ಅಕ್ರಮಗಳ ವಿರುದ್ಧ ಹೋರಾಟ ನನ್ನ ಮೊದಲ ಆದ್ಯತೆಯಾಗಿದ್ದು ಕಳೆದ 10 ವರ್ಷಗಳಿಂದ ಹಲವು ಅಕ್ರಮ ಬಯಲಿಗೆಳೆದಿದ್ದೇನೆ. ನನಗೆ ಟಿಕೆಟ್ ಕೈ ತಪ್ಪುವುದಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ನೇರ ಹೊಣೆಗಾರರು ಎಂದು ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್‍ಆರ್ ರಮೇಶ್ ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಯಡಿಯೂರು ವಾರ್ಡ್ ಅನ್ನು ಮಾದರಿ ವಾರ್ಡ್ ಆಗುವ ರೀತಿ ಅಭಿವೃದ್ಧಿಗೊಳಿಸಿದ್ದೇನೆ. 2018 ರ ಚುನಾವಣೆಯಲ್ಲಿ ಚಿಕ್ಕಪೇಟೆ ಟಿಕೆಟ್ ಆಕಾಕ್ಷಿಯಾಗಿದ್ದೆ. ನಮ್ಮ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯ ಆಯ್ಕೆಗಾಗಿ ನಡೆಸಿದ ಸರ್ವೆಯಲ್ಲಿಯೂ ನನಗೆ ಮತದಾರರು ಒಲವು ತೋರಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಸರ್ವೆಯಲ್ಲೂ ಪಕ್ಷದ ಎಲ್ಲ ವರಿಷ್ಠರೂ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಎಂದು ತಿಳಿಸಿದರು.

    ಸುಮಾರು 17 ಬಾರಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ. ಎದೆಗುಂದದೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೇಂದ್ರ ಸಚಿವರು, ಸಂಸದರೂ ಆಗಿರುವ ಅನಂತ್ ಕುಮಾರ್ ಅವರಿಗೆ, ನಾನು ಚಿಕ್ಕಪೇಟೆ ಕ್ಷೇತ್ರದ ಆಕಾಂಕ್ಷಿ ಎಂದು ಗೊತ್ತಿದೆ. ಉದಯ್ ಗರುಡಾಚಾರ್ ಹೆಸರು ಪಟ್ಟಿಯಲ್ಲಿ ಬರುವುದಕ್ಕೆ ಹಾಗೂ ನನಗೆ ಟಿಕೆಟ್ ಕೈತಪ್ಪುವುದಕ್ಕೆ ಅನಂತ್ ಕುಮಾರ್ ನೇರ ಹೊಣೆಗಾರರು. ಅನಂತ್ ಕುಮಾರ್ ಹೊರತು ಪಡಿಸಿದರೆ ಬೇರೆ ಯಾವ ನಾಯಕರು ಇದರಲ್ಲಿ ಭಾಗಿಯಾಗಿಲ್ಲ ಎಂದು ದೂರಿದರು.

    ಉದಯ್ ಗರುಡಾಚಾರ್ ಕಳೆದ ಬಾರಿ ಸೋತ ನಂತರ ಇದುವರೆಗೂ ಚಿಕ್ಕಪೇಟೆಗೆ ಕಾಲಿಟ್ಟಿಲ್ಲ. ಅನಂತ್ ಕುಮಾರ್ ಭ್ರಷ್ಟಾಚಾರ ಹೊತ್ತಿರುವ ಉದ್ಯಮಿಗೆ ಸಾಥ್ ನೀಡಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ ಎಂದರು.

    ಹಲವು ದಿನಗಳ ಹಿಂದೆಯೇ ಫೇಸ್‍ಬುಕ್‍ನಲ್ಲಿ ಬ್ಲಾಕ್ ಕಾಂಗ್ರೆಸ್‍ನ ಕಾರ್ಯಕರ್ತರು ಬಿಜೆಪಿ ಟಿಕೆಟ್ ಸೇಲ್ ಆಗಿದೆ ಅನ್ನುವುದಾಗಿ ಹಾಕಿದ್ದರು. 8 ದಿನಗಳ ಹಿಂದೆಯೇ ಉದಯ್ ಗರುಡಾಚಾರ್ ಗೆ ಟಿಕೆಟ್ ಕನ್ಫರ್ಮ್ ಆಗಿರುವ ಕುರಿತು ವಿಷಯ ಲೀಕ್ ಆಗಿದ್ದು ಹೇಗೆ ಎಂದು ಪ್ರಶ್ನಿಸಿದರು.

    ಅನಂತ್ ಕುಮಾರ್ ಗೆ ಬುದ್ಧಿವಂತ ಹೋರಾಟಗಾರರು ಬೇಕಾಗಿಲ್ಲ ಹಾಗಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಪಕ್ಷ ಬಿಡಬೇಕಾ ಅಥವಾ ಇರಬೇಕೋ ಅನ್ನುವ ತೀರ್ಮಾನ ನಾಳೆ ನನ್ನ ಅಭಿಮಾನಿಗಳ ಜೊತೆ ಸಭೆ ಮಾಡಿ ತೀರ್ಮಾನಿಸುತ್ತೇನೆ. ರಾಜ್ಯಾಧ್ಯಾಕ್ಷರ ಜೊತೆ ಮಾತನಾಡ ಬೇಕಿದೆ ಎಂದರು.

    ಅಶೋಕ್ ಅವರು ನನ್ನ ಹೋರಾಟ, ಸಂಘಟನೆ, ಅಭಿವೃದ್ಧಿಯನ್ನು ಕಂಡವರು. ಅವರು ನನಗೆ ಸಹಕಾರ ನೀಡಬೇಕಿತ್ತು. ನಾಳೆ ಸಂಜೆಯೊಳಗೆ ನನಗೆ ಆಗಿರುವ ಅನ್ಯಾಯ ಸರಿ ಪಡಿಸುವ ಆಕಾಂಕ್ಷೆ ಇದೆ. ಆರ್ ಅಶೋಕ್ ಅವರು ಬ್ಲಾಕ್ ಮೇಲ್ ಮಾಡುವಂತವರಿಗೆ ಮಣಿಯುತ್ತಾರೆ. ನಮ್ಮಂಥಹ ಪ್ರೀತಿ ವಿಶ್ವಾಸ ಇರುವಂತವರಿಗೆ ಮಣಿಯುವುದಿಲ್ಲ. ಮುರಳೀಧರ್ ಹಾಗೂ ಜಾವಡೇಕರ್ ಅವರು ಇವತ್ತು ಭೇಟಿ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

    ಎನ್.ಆರ್. ರಮೇಶ್ ಅಸಮಾಧಾನ ವಿಚಾರ ಎಲ್ಲವೂ ಸುಳ್ಳು ಸುದ್ದಿ. ಯಾವುದೇ ಸಮಸ್ಯೆ ಇಲ್ಲ. ನಾನು ಕರೆದು ಮಾತನಾಡುತ್ತೇನೆ. ರಮೇಶ್ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ರಮೇಶ್ ಅವರಿಗೆ ಎಲ್ಲಾದರೂ ವಿಧಾನಸಭಾ ಟಿಕೆಟ್ ಕೊಡುತ್ತೇವೆ, ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.