Tag: uber cab

  • ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಬಲವಂತವಾಗಿ ಕ್ಯಾಬ್‌ನಲ್ಲಿ ಕೂರಿಸಿದ ಯುವಕ – ವೀಡಿಯೋ ವೈರಲ್

    ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಬಲವಂತವಾಗಿ ಕ್ಯಾಬ್‌ನಲ್ಲಿ ಕೂರಿಸಿದ ಯುವಕ – ವೀಡಿಯೋ ವೈರಲ್

    ನವದೆಹಲಿ: ಯುವಕನೊಬ್ಬ ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಎಳೆದಾಡಿ ಆಕೆಯನ್ನ ಬಲವಂತವಾಗಿ ಕ್ಯಾಬ್‌ನಲ್ಲಿ (Cab) ಕೂರಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ವೀಡಿಯೋ ಜಾಲತಾಣದಲ್ಲಿ (Social Media) ಸದ್ದು ಮಾಡ್ತಿದೆ.

    ದೆಹಲಿಯ (New Delhi) ಮಂಗೋಲ್‌ಪುರಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವೀಡಿಯೋವನ್ನ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹಾಗೂ ದೆಹಲಿ ಪೊಲೀಸರಿಗೂ ಟ್ಯಾಗ್ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪನೊಂದಿಗೆ ಸೇರಿ ಹೆಂಡ್ತಿ ಮೇಲೆ ಅತ್ಯಾಚಾರ – ತಂದೆಗೆ 14, ಮಗನಿಗೆ 10 ವರ್ಷ ಜೈಲು

    ಈ ಘಟನೆ ಶನಿವಾರ ತಡರಾತ್ರಿ 11:30ರ ಸುಮಾರಿಗೆ ಗುರುಗ್ರಾಮ್‌ನ ಐಎಫ್‌ಎಫ್‌ಸಿಎಒ ಚೌಕ್‌ನಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಲಭ್ಯವಾದ ಬಳಿಕ ತನಿಖೆಗೆ ಕೈಗೊಂಡಿದ್ದಾರೆ.

    ಸದ್ಯ ದೆಹಲಿ ಪೊಲೀಸರು (Delhi Police) ಕ್ಯಾಬ್ ಮತ್ತು ಚಾಲಕನನ್ನು ಪತ್ತೆಹಚ್ಚಿದ್ದಾರೆ. ವೀಡಿಯೋದಲ್ಲಿ ಕಾಣುತ್ತಿರುವ ಇಬ್ಬರು ಯುವಕರು ಯುವತಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಕ್ಕನ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮನ ಕೊಲೆ ಪ್ರಕರಣ – 8 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್

    ದೆಹಲಿಯ ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಆ್ಯಪ್ (Uber App) ಮೂಲಕ ಕ್ಯಾಬ್ ಬುಕ್ ಮಾಡಲಾಗಿತ್ತು. ಮಾರ್ಗಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದು ಅದು ದೈಹಿಕ ಹಲ್ಲೆಗೆ ಕಾರಣವಾಗಿದೆ ಎನ್ನಲಾಗಿದೆ.

  • ಕ್ಯಾಬ್‍ನಲ್ಲಿ ಟೆಕ್ಕಿ ಯುವತಿ ನಿದ್ದೆ – ಹಿಂಬದಿ ಸೀಟಿಗೆ ಹೋಗಿ ಚಾಲಕನಿಂದ ಲೈಂಗಿಕ ದೌರ್ಜನ್ಯ

    ಕ್ಯಾಬ್‍ನಲ್ಲಿ ಟೆಕ್ಕಿ ಯುವತಿ ನಿದ್ದೆ – ಹಿಂಬದಿ ಸೀಟಿಗೆ ಹೋಗಿ ಚಾಲಕನಿಂದ ಲೈಂಗಿಕ ದೌರ್ಜನ್ಯ

    – ಉಬರ್ ಕ್ಯಾಬ್‍ನಲ್ಲಿ ನಿದ್ದೆ ಮಾಡೋ ಮುನ್ನ ಹುಷಾರ್

    ಬೆಂಗಳೂರು: ಕ್ಯಾಬ್‍ನಲ್ಲಿ ನಿದ್ದೆ ಮಾಡುವ ಮುನ್ನ ಯುವತಿಯರು ಹುಷಾರಾಗಿರಿ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಟೆಕ್ಕಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಉಬರ್ ಕ್ಯಾಬ್ ಚಾಲಕನ ಬಂಧನವಾಗಿದೆ.

    ಬಂಧಿತ ಆರೋಪಿಯನ್ನು ಕ್ಯಾಬ್ ಚಾಲಕ ನಾಗರಾಜ್ ಎಂದು ಗುರುತಿಸಲಾಗಿದೆ. ಈತ 25 ವರ್ಷದ ಟೆಕ್ಕಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಚಾಲಕನ ವಿರುದ್ದ ಕೇಸ್ ದಾಖಲಾಗಿದೆ.

    ಏನಿದು ಪ್ರಕರಣ?
    ಟೆಕ್ಕಿ ಯುವತಿ ಮಾರ್ಚ್ 7ರ ಮಧ್ಯಾಹ್ನ ಹೊಸೂರು ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿದ್ದ ಸ್ನೇಹಿತರನ್ನು ಭೇಟಿ ಮಾಡಿ, ಮನೆಗೆ ತೆರಳಲು ಕ್ಯಾಬ್ ಹತ್ತಿ ಹಿಂಬದಿ ಸೀಟ್ ನಲ್ಲಿ ಕುಳಿತು ನಿದ್ದೆ ಮಾಡಿದ್ದಾಳೆ. ಈ ವೇಳೆ ಆರೋಪಿ ಚಾಲಕ ಸ್ವಲ್ಪ ದೂರ ಕ್ರಮಿಸಿ ಕಾರು ನಿಲ್ಲಿಸಿ ಹಿಂಬದಿ ಸೀಟ್‍ಗೆ ಬಂದು ಕುಳಿತು ಈ ಕೃತ್ಯ ಎಸಗಿದ್ದಾನೆ.

    ಕಾಮುಕ ಕ್ಯಾಬ್ ಚಾಲಕ ಸಂತ್ರಸ್ತೆಯ ಖಾಸಗಿ ಅಂಗಾಂಗಳನ್ನು ಸ್ಪರ್ಶಿಸಿ ದೌರ್ಜನ್ಯ ಎಸಗಿದ್ದಾನೆ. ಯುವತಿ ಎಚ್ಚರಗೊಂಡು ಕಿರುಚಿಕೊಳ್ಳುತ್ತಿದ್ದಂತೆ ಚಾಲಕ ಸೀಟ್‍ಗೆ ವಾಪಸ್ ಆಗಿ ವೇಗವಾಗಿ ಕಾರು ಚಾಲನೆ ಮಾಡಲು ಆರಂಭಿಸಿದ್ದಾನೆ. ನಂತರ ಸಂತ್ರಸ್ತೆ ಇಳಿಯಬೇಕಿದ್ದ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಕ್ಯಾಬ್ ನಿಲ್ಲಿಸಿದ್ದಾನೆ.

    ಕೂಡಲೇ ಕ್ಯಾಬ್‍ನಿಂದ ಇಳಿದು ಸಂತ್ರಸ್ತೆ ಮನೆ ತಲುಪಿದ್ದಳು. ಈ ಬಗ್ಗೆ ಆರೋಪಿ ಚಾಲಕನ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾಳೆ. ಟವರ್ ಲೊಕೇಶನ್, ಗಾಡಿ ನಂಬರ್ ಆಧಾರದ ಮೇಲೆ ಚಾಲಕನನ್ನ ಬಂಧಿಸಿ ಪೊಲೀಸರು ಜೈಲಿಗೆ ಹಾಕಿದ್ದಾರೆ.

  • ಸಡನ್ ಬ್ರೇಕ್ ಹಾಕಿದ್ದರಿಂದ ಲಾರಿಗೆ ಕಾರು ಡಿಕ್ಕಿ: ಪ್ರಶ್ನಿಸಲು ಹೋದ ಕಾರು ಚಾಲಕ ಲಾರಿಯಡಿ ಸಿಲುಕಿ ಸಾವು

    ಸಡನ್ ಬ್ರೇಕ್ ಹಾಕಿದ್ದರಿಂದ ಲಾರಿಗೆ ಕಾರು ಡಿಕ್ಕಿ: ಪ್ರಶ್ನಿಸಲು ಹೋದ ಕಾರು ಚಾಲಕ ಲಾರಿಯಡಿ ಸಿಲುಕಿ ಸಾವು

    ಬೆಂಗಳೂರು: ನಗರದ ಯಶವಂತಪುರದಲ್ಲಿ ಶನಿವಾರ ರಾತ್ರೀ ಭೀಕರ ಅಪಘಾತವೊಮದು ಸಂಭವಿಸಿದ್ದು. ಘಟನೆಯಲ್ಲಿ ಉಬರ್ ಕ್ಯಾಬ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅನಿಲ್ ಕುಮಾರ್ ಮೃತ ದುರ್ದೈವಿ ಉಬರ್ ಕ್ಯಾಬ್ ಚಾಲಕ.

    ನಡೆದಿದ್ದೇನು?: ನಿನ್ನೆ ರಾತ್ರಿ ಬಿಇಎಲ್ ಫ್ಲೈ ಓವರ್ ಬಳಿ ವೇಗವಾಗಿ ಹೋಗುತ್ತಿದ್ದ ಲಾರಿ ಸಡನ್ ಆಗಿ ಬ್ರೇಕ್ ಹಾಕಿದೆ. ಪರಿಣಾಮ ಹಿಂದುಗಡೆಯಿಂದ ಬರುತ್ತಿದ್ದ ಉಬರ್ ಕ್ಯಾಬ್ ಲಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕ್ಯಾಬ್ ಚಾಲಕ ಸಿಟ್ಟಿನಿಂದ ಕೆಳಗಿಳಿದು ಲಾರಿ ಚಾಲಕನನ್ನು ಪ್ರಶ್ನೆ ಮಾಡಲು ಹೋಗಿದ್ದಾರೆ. ಆದ್ರೆ ನಿಲ್ಲದೇ ನಿಧಾನವಾಗಿ ಹೋಗುತ್ತಿದ್ದ ಲಾರಿ ಚಕ್ರಕ್ಕೆ ಸಿಲುಕಿ ಕಾರು ಚಾಲಕ ಅನಿಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ವಿಷಯ ತಿಳಿದ ಯಶವಂತಪುರ ಸಂಚಾರಿ ಠಾಣೆ ಪೊಲೀಸ್ರಿಗೆ ಶಾಕ್ ಆಗಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ಒಂದು ಕಡೆ ತಾನೇ ಹಿಂದಿನಿಂದ ಆಕ್ಸಿಡೆಂಟ್ ಮಾಡಿದ ಕಾರು ರಸ್ತೆ ಬದಿ ನಿಂತಿದ್ರೆ, ಡ್ರೈವರ್ ಮುಂದೆಯಿದ್ದ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವುದನ್ನು ಕಂಡು ಶಾಕ್ ಆಗಿತ್ತು. ಬಳಿಕ ಅಲ್ಲಿನ ಸಿಸಿಟಿವಿ ಮತ್ತು ಬೇರೆ ಪ್ರಯಾಣಿಕರ ಬಳಿ ವಿಚಾರಣೆ ಮಾಡಿದಾಗ ಪ್ರಕರಣದ ಸತ್ಯಾಂಶ ಗೊತ್ತಾಗಿದೆ.

    ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.