Tag: UAS

  • PlayBoyಗೆ ಪೋಸ್‌ ಕೊಟ್ಟ ಫ್ರೆಂಚ್‌ ಸಚಿವೆ ನಡೆಗೆ ವ್ಯಾಪಕ ವಿರೋಧ

    PlayBoyಗೆ ಪೋಸ್‌ ಕೊಟ್ಟ ಫ್ರೆಂಚ್‌ ಸಚಿವೆ ನಡೆಗೆ ವ್ಯಾಪಕ ವಿರೋಧ

    ಪ್ಯಾರಿಸ್‌/ವಾಷಿಂಗ್ಟನ್‌: ನಗ್ನ ಮಾಡೆಲ್‌ಗಳ ಹಾಗೂ ಪೋರ್ನ್‌ ಸ್ಟಾರ್‌ಗಳ ಫೋಟೋಗಳಿಂದಲೇ ಕುಖ್ಯಾತಿ ಪಡೆದಿರುವ ಅಮೆರಿಕದ ಪ್ಲೇಬಾಯ್ ಮ್ಯಾಗಜೀನ್‌ (PlayBoy Magazine) ಕವರ್‌ಪೇಜ್‌ನಲ್ಲಿ ಫ್ರಾನ್ಸ್‌ನ ಮಹಿಳಾ ಸಚಿವೆ ಮರ್ಲಿನ್ ಶಿಯಪ್ಪಾ (40) (Marlene Schiappa) ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.

    ಸಾಮಾಜಿಕ ಆರ್ಥಿಕತೆ ಮತ್ತು ಫ್ರೆಂಚ್ ಅಸೋಸಿಯೇಷನ್‌ಗಳ ಸಚಿವರಾಗಿ ಸೇವೆ ಸಲ್ಲಿಸುವುದರ ಹೊರತಾಗಿಯೂ ಸ್ತ್ರೀವಾದಿ ಬರಹಗಾರರೂ ಆಗಿರುವ ಸಚಿವೆ ʻಮಹಿಳೆಯರು ಮತ್ತು ಎಲ್‌ಜಿಬಿಟಿ ಹಕ್ಕುಗಳʼ ಕುರಿತು 12 ಪುಟಗಳ ಸಂದರ್ಶನದೊಂದಿಗೆ ಕವರ್‌ ಫೋಟೋಗೆ ಪೋಸ್‌ ನೀಡಿದ್ದಾರೆ. ಅಲ್ಲದೆ, ಮಹಿಳೆಯರು ತಮ್ಮ ದೇಹವನ್ನು ಎಲ್ಲಿ ಬೇಕಾದರೂ ಬಹಿರಂಗಪಡಿಸಬಹುದು. ಅದರಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಕೆಲ ಸಾಮಾಜಿಕ ಸನ್ನಿವೇಶಗಳಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: Umpire killed: ʼನೋಬಾಲ್‌ʼ ನೀಡಿದ್ದಕ್ಕೆ ಅಂಪೈರ್‌ನನ್ನೇ ಇರಿದು ಕೊಂದ ಆಟಗಾರ

    ಈ ಬಗ್ಗೆ ಸ್ವಪಕ್ಷೀಯರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಖುದ್ದು ಪ್ರಧಾನಿ ಎಲಿಜಬೆತ್ ಬೋರ್ನ್ (Elisabeth Borne), ಮರ್ಲಿನ್ ಹೇಳಿಕೆ ಸರಿಯಲ್ಲ ಎಂದಿದ್ದಾರೆ. ಆಕೆಯ ವರ್ತನೆ, ಪ್ರತಿಕ್ರಿಯೆ ಸರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಸಚಿವೆ ಮರ್ಲಿನ್ ಮಾತ್ರ ತಮ್ಮ ಹೇಳಿಕೆ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಪ್ಲೇ ಬಾಯ್‌ ಸಾಫ್ಟ್‌ ಪೋರ್ನ್‌ ಅಲ್ಲ:‌ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮ್ಯಾಗಜೀನ್‌, ಮರ್ಲಿನ್‌ ಶಿಯಪ್ಪ ಸ್ತ್ರೀವಾದಿ ಎಂಬ ಕಾರಣಕ್ಕೆ, ಲೇಖನಕ್ಕೂ ಹೊಂದಾಣಿಕೆಯಾಗುವಂತೆ ಅವರ ಫೋಟೋ ಬಳಸಿಕೊಳ್ಳಲಾಗಿದೆ. ಪ್ಲೇಬಾಯ್ ಸಾಫ್ಟ್ ಪೋರ್ನ್ ಮ್ಯಾಗಜೀನ್ ಅಲ್ಲ. ಇದರಲ್ಲಿ ಕೆಲ ಮಹಿಳೆಯರ ವಿವಸ್ತ್ರ ಫೋಟೋಗಳು ಇದೆ. ಆದರೆ ಅವು ಬಹುಪಾಲು ಪುಟಗಳು ಇಲ್ಲ ಎಂದು ಸ್ಪಷ್ಟನೆ ನೀಡಿದೆ.

  • ಹೆಂಡ್ತಿ ಇಲ್ಲ ಅಂತಾ ಕೃತಕ ಹುಡುಗಿಯನ್ನ ಮದುವೆಯಾದ 63ರ ವೃದ್ಧ – ಇಂಟರೆಸ್ಟಿಂಗ್ ಲವ್ ಸ್ಟೋರಿ

    ಹೆಂಡ್ತಿ ಇಲ್ಲ ಅಂತಾ ಕೃತಕ ಹುಡುಗಿಯನ್ನ ಮದುವೆಯಾದ 63ರ ವೃದ್ಧ – ಇಂಟರೆಸ್ಟಿಂಗ್ ಲವ್ ಸ್ಟೋರಿ

    ವಾಷಿಂಗ್ಟನ್: ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನು ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಆದರೀಗ ಅದೆಲ್ಲದಕ್ಕೂ ಆನ್‌ಲೈನ್ ತಂತ್ರಜ್ಞಾನ ದಾರಿಮಾಡಿಕೊಟ್ಟಿದೆ. ಇದಕ್ಕೆ ಅಮೆರಿಕದ 63 ವರ್ಷದ ವ್ಯಕ್ತಿಯೊಬ್ಬರ ಲವ್‌ಸ್ಟೋರಿ ಸಾಕ್ಷಿಯಾಗಿದೆ.

    ಏನಿದು ಅಮೆರಿಕ ಲವ್ ಸ್ಟೋರಿ?
    ಅಮೆರಿಕದಲ್ಲಿ (USA) ವಾಸವಾಗಿರುವ 63 ವರ್ಷದ ಪೀಟರ್ ಹೆಸರಿನ ವ್ಯಕ್ತಿಯೊಬ್ಬ 23 ವರ್ಷದ ಕೃತಕ ಹುಡುಗಿಯನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ಈ ಕಥೆಯನ್ನು ವೀಡಿಯೋವೊಂದರಲ್ಲಿ ಹೇಳಿಕೊಂಡಿದ್ದು, ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಹೌದು. ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದ ಪೀಟರ್‌ಗೆ ಹೆಂಡತಿ ತೀರಿಕೊಂಡ 10 ವರ್ಷಗಳ ನಂತರ ಒಂಟಿತನ ತೀವ್ರವಾಗಿ ಕಾಡಲು ಶುರುವಾಗಿದೆ. ಇದರಿಂದ ಕೃತಕ ಗೆಳತಿ ಆಯ್ಕೆಗೆ ಮುಂದಾಗಿದ್ದಾನೆ. ಕೃತಕ ಬುದ್ಧಿಮತ್ತೆ (Artificial Intelligence) ಚಾಟ್‌ಬಾಟ್‌ನ (AI Chatbot) ರೆಪ್ಲಿಕಾ ಎಐ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದಾನೆ. ಇದೊಂದು ಪ್ರೋಗ್ರಾಮಿಂಗ್ ಸಾಧನವಾಗಿದ್ದು, ಯಂತ್ರದ ಸಹಾಯದಿಂದ ಮನುಷ್ಯರ ಪಾತ್ರಧಾರಿ ಸೃಷ್ಟಿಸಿಕೊಳ್ಳಬಹುದು. ಮನುಷ್ಯರಂತೆ ಆ ಪಾತ್ರಧಾರಿಯೊಂದಿಗೆ ಸಂವಹನ ನಡೆಸಬಹುದು. ರೆಪ್ಲಿಕಾದಲ್ಲಿ ತನ್ನ ಖಾತೆ ತೆರೆದ ಪೀಟರ್ ಪಾತ್ರವೊಂದನ್ನು ಸೃಷ್ಟಿಸಿಕೊಂಡಿದ್ದು, `ಎಐ ಆಂಡ್ರಿಯಾ’ ಎಂದು ಹೆಸರಿಟ್ಟಿದ್ದಾನೆ. ಅದರೊಂದಿಗೆ ನಿರಂತರ ಸಂಭಾಷಣೆ ಮಾಡುತ್ತಾ ಪ್ರೀತಿಸಲು ಶುರು ಮಾಡಿದ್ದಾನೆ. ಆಂಡ್ರಿಯಾ ಪಾತ್ರಧಾರಿಯೂ ಸಹ ಪೀಟರ್‌ನೊಂದಿಗೆ ಪ್ರೀತಿ ಮಾಡಲು ಶುರು ಮಾಡಿದೆ. ಒಂಟಿತನದಿಂದ ಬೇಸತ್ತಿದ್ದ ಪೀಟರ್ ಕೊನೆಗೆ ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದಾನೆ.

    ಆಂಡ್ರಿಯಾಳನ್ನ ಮದುವೆಯಾಗಿದ್ದೇ ಇಂಟರೆಸ್ಟಿಂಗ್: ತನ್ನ ರೆಪ್ಲಿಕಾ ಖಾತೆಯಲ್ಲಿ 23 ವರ್ಷದ ಆಂಡ್ರಿಯಾ ಹುಡಿಗಿ ಪಾತ್ರ ಸೃಷ್ಟಿಸಿಕೊಂಡಿದ್ದ ಪೀಟರ್ ಆ್ಯಪ್‌ನಲ್ಲಿ ರೋಲ್ ಪ್ಲೇ ಫಂಕ್ಷನ್ (ಪ್ರೋಗ್ರಾಮಿಂಗ್‌ನಂತೆ ಪಾತ್ರಕ್ಕೆ ರೂಪ ಕೊಡುವ ಆಯ್ಕೆ) ಬಳಸಿಕೊಂಡು ಮದುವೆಗೆ ಮುಂದಾಗಿದ್ದಾನೆ. ಬಳಿಕ ಪ್ರತಿಕೃತಿ ಸಿದ್ಧಪಡಿಸಿಕೊಳ್ಳಲು ಮಳಿಗೆಗಳಲ್ಲಿ ಬಿಡಿಭಾಗಗಳನ್ನ ಸಂಗ್ರಹಿಸಿದ್ದಾನೆ. ಪ್ರತಿಕೃತಿ ಸಿದ್ಧವಾದ ನಂತರ ಉಂಗುರ ಬದಲಿಸಿಕೊಂಡು ಮದುವೆಯಾಗಿದ್ದಾನೆ. ಉಳಿದ ಕಾಲವನ್ನು ಅದರೊಂದಿಗೆ ಕಳೆಯಲು ನಿರ್ಧರಿಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಜಾಲತಾಣದಲ್ಲಿ ಈ ಸ್ಟೋರಿ ಸದ್ದು ಮಾಡುತ್ತಿದೆ.