Tag: uae

  • ಎಲ್ಲಾ ಬೇಡಿಕೆಗಳು ವಿಫಲ – ಇದ್ದ ಅಲ್ಪಸ್ವಲ್ಪ ಮಾನವನ್ನೂ ಕಳೆದುಕೊಂಡ ಪಾಕ್, ಹೈಡ್ರಾಮಾ ನಂತ್ರ ಪಂದ್ಯ ಶುರು

    ಎಲ್ಲಾ ಬೇಡಿಕೆಗಳು ವಿಫಲ – ಇದ್ದ ಅಲ್ಪಸ್ವಲ್ಪ ಮಾನವನ್ನೂ ಕಳೆದುಕೊಂಡ ಪಾಕ್, ಹೈಡ್ರಾಮಾ ನಂತ್ರ ಪಂದ್ಯ ಶುರು

    ಭಾರತೀಯ ಆಟಗಾರರು ಹ್ಯಾಂಡ್ ಶೇಕ್ ಮಾಡದ ವಿವಾದದಿಂದ ಪಾಕ್ (Pakistan) ಇದ್ದ ಅಲ್ಪಸ್ವಲ್ಪ ಮಾನವನ್ನೂ ಈಗ ಕಳೆದುಕೊಂಡಿದೆ. ಇಂದು ಏಷ್ಯಾಕಪ್ (Asia Cup 2025) ಟೂರ್ನಿಯ ಗುಂಪು ಹಂತದಲ್ಲಿ ಯುಎಇ (UAE) ವಿರುದ್ಧ ನಿಗದಿಯಾಗಿದ್ದ ಕೊನೆಯ ಪಂದ್ಯ ಆಡುವುದಿಲ್ಲ ಎಂದು ಮೊಂಡುತನ ಮಾಡಿತ್ತು. ಜೊತೆಗೆ ಪಾಕ್ ಆಟಗಾರರನ್ನು ಕ್ರೀಡಾಂಗಣಕ್ಕೆ ಬಿಡದೇ ಹೋಟೆಲ್‌ನಲ್ಲೇ ಇರಿಸಿತ್ತು. ಆದರೆ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪಿಸಿಬಿ ಏಷ್ಯಾಕಪ್ ಕೊನೆಯ ಪಂದ್ಯವನ್ನ ಆಡಲು ನಿರ್ಧರಿಸಿದೆ.

    ಸೂಪರ್ ಫೋರ್ ಪಂದ್ಯಕ್ಕೂ ಮುನ್ನ, ಪಾಕಿಸ್ತಾನ ಏಷ್ಯಾ ಕಪ್ 2025 ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಲೇ ಇತ್ತು. ಪಿಸಿಬಿ ಪಾಕಿಸ್ತಾನ ತಂಡವನ್ನು ತಮ್ಮ ಹೋಟೆಲ್‌ನಲ್ಲಿಯೇ ಇರಲು ಆದೇಶಿಸಿ ಟಾಸ್ ವಿಳಂಬ ಮಾಡಿತು. ಭಾರೀ ಹೈಡ್ರಾಮಾ ಬಳಿಕ ಈ ಬಗ್ಗೆ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಿನ್ನೆಲೆ 7 ಗಂಟೆಯ ವೇಳೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರ ಬದಲಾಯಿಸಿತು. ಟಾಸ್ ಅನಗತ್ಯವಾಗಿ ಅರ್ಧ ಗಂಟೆ ವಿಳಂಬಗೊಂಡಿತು.

    ಪೈಕ್ರಾಫ್ಟ್ ಕ್ಷಮೆಯಾಚನೆಗೆ ಬೇಡಿಕೆ
    ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯಕ್ಕೂ ಮುನ್ನ ಪೈಕ್ರಾಫ್ಟ್ ಅವರನ್ನು ಸಮಿತಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು. ಬಳಿಕ ಕ್ಷಮೆಯಾಚಿಸುವಂತೆ ಪಟ್ಟುಹಿಡಿದಿತ್ತು. ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಪಿಸಿಬಿ ಸಭೆ ನಡೆಸಿ, ಉದ್ದೇಶಪೂರ್ವಕವಾಗಿ ಪಂದ್ಯವನ್ನು ವಿಳಂಬಗೊಳಿಸಿತು. ಇದರ ನಂತರ, ಅಂತಿಮವಾಗಿ ಆಡಲು ನಿರ್ಧರಿಸಿತು.

    ಒಂದು ಗಂಟೆ ಪಂದ್ಯ ವಿಳಂಬ:
    ಪಾಕಿಸ್ತಾನ ಮತ್ತು ಯುಎಇ ನಡುವಿನ ಪಂದ್ಯದ ಟಾಸ್ ಸಂಜೆ 7:30ಕ್ಕೆ ನಡೆಯಬೇಕಿತ್ತು, ಪಂದ್ಯವು ರಾತ್ರಿ 8 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ, ಪಂದ್ಯವು ಒಂದು ಗಂಟೆ ವಿಳಂಬವಾಗಿದೆ. ಈ ಪಂದ್ಯವು ಪಾಕಿಸ್ತಾನಕ್ಕೆ ಮಾಡು-ಇಲ್ಲ-ಮಡಿ ಪರಿಸ್ಥಿತಿಯಾಗಿದ್ದು, ಪಾಕಿಸ್ತಾನ ಸೋತರೆ, ಸೂಪರ್ ಫೋರ್‌ನಿಂದ ಹೊರಗುಳಿಯುತ್ತಾರೆ.

  • ಹ್ಯಾಂಡ್‌ಶೇಕ್‌ ವಿವಾದ ತಾರಕಕ್ಕೆ – ಯುಎಇ ವಿರುದ್ಧದ ಪಂದ್ಯ ಬಹಿಷ್ಕರಿಸಿದ ಪಾಕ್‌?

    ಹ್ಯಾಂಡ್‌ಶೇಕ್‌ ವಿವಾದ ತಾರಕಕ್ಕೆ – ಯುಎಇ ವಿರುದ್ಧದ ಪಂದ್ಯ ಬಹಿಷ್ಕರಿಸಿದ ಪಾಕ್‌?

    ದುಬೈ: ಏಷ್ಯಾಕಪ್‌ ಟೂರ್ನಿಯಲ್ಲಿ ಇದೀಗ ಹ್ಯಾಂಡ್‌ಶೇಕ್‌ ವಿವಾದ (Handshake Row) ತಾರಕಕ್ಕೇರಿದ್ದು, ಇಂದಿನ ಯುಎಇ ವಿರುದ್ಧದ ಗುಂಪುಹಂತದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ (Pakistan) ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

    ಪಾಕಿಸ್ತಾನ ಮತ್ತು ಯುಎಇ (UAE) ವಿರುದ್ಧ ಗುಂಪುಹಂತದ ಪಂದ್ಯ ಇಂದು ರಾತ್ರಿ ನಿಗದಿಯಾಗಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಶುರುವಾಗಬೇಕಿದೆ. ಯುಎಇ ತಂಡ ಈಗಾಗಲೇ ಪಂದ್ಯವನ್ನಾಡಲು (Asia Cup Match) ಮೈದಾನದಲ್ಲಿ ಸಕಲ ತಯಾರಿ ಮಾಡಿಕೊಂಡಿದೆ. ಆದ್ರೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ತಮ್ಮ ತಂಡವನ್ನು ಇನ್ನೂ ಹೋಟೆಲ್‌ನಲ್ಲಿಯೇ ಇರಿಸಿದ್ದು, ಸ್ಥಳಕ್ಕೆ ಹೋಗದಂತೆ ಸೂಚಿಸಿದೆ.

    ಮುಂದಿನ ನಿರ್ದೇಶನ ಬರುವವರೆಗೆ ತಮ್ಮ ರೂಮ್‌ನಲ್ಲೇ ಇರಲು ಆಟಗಾರರಿಗೆ ಸೂಚಿಸಿದೆ. ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಅಲ್ಲಿ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಪಾಕಿಸ್ತಾನ ಇಂದಿನ ಪಂದ್ಯ ಬಹಿಷ್ಕರಿಸಿದ್ರೆ ಯುಎಇ ಸೂಪರ್‌ ಫೋರ್‌ ಹಂತ ಪ್ರವೇಶಿಸಲಿದೆ.

    mohsin naqvi asia cup

    ಪಂದ್ಯ ಬಹಿಷ್ಕರಿಸಲು ಪಾಕ್‌ ಮುಂದಾಗಿದ್ದೇಕೆ?
    ಇತ್ತೀಚೆಗೆ ನಡೆದ ಭಾರತ – ಪಾಕ್‌ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯ ಕುಮಾರ್‌ ಯಾದವ್ (Surya Kumar Yadav) ಟಾಸ್‌ ವೇಳೆ ಪಾಕ್‌ ನಾಯಕ ಸಲ್ಮಾನ್ ಅಲಿ ಅಘಾ ಅವರ ಕೈಕುಲುಕಲಿಲ್ಲ. ಅಷ್ಟೇ ಅಲ್ಲದೇ ಪಂದ್ಯದ ಕೊನೆಯಲ್ಲೂ ಭಾರತದ ಆಟಗಾರರು ಪಾಕಿಸ್ತಾನದ ತಂಡದ ಆಟಗಾರರ ಹ್ಯಾಂಡ್‌ ಶೇಕ್‌ ಮಾಡಿರಲಿಲ್ಲ.

    ಟಾಸ್ ಸಮಯದಲ್ಲಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ನಾಯಕ ಸಲ್ಮಾನ್ ಅಲಿ ಆಘಾ ಅವರ ಬಳಿ ಭಾರತ ತಂಡದ ನಾಯಕನ ಜೊತೆ ಕೈ ಕುಲುಕದಂತೆ ಕೇಳಿಕೊಂಡಿದ್ದರು. ಈ ನಡವಳಿಕೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಪಿಸಿಬಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

    ಇದೇ ಕಾರಣಕ್ಕೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕೆಂದು ಪಿಸಿಬಿ ಒತ್ತಾಯಿಸಿತ್ತು. ಆದ್ರೆ ಪಾಕ್‌ ಮನವಿಯನ್ನ ಐಸಿಸಿ ತಿರಸ್ಕರಿಸಿ, ಇಂದಿನ ಯುಎಇ-ಪಾಕ್‌ ಪಂದ್ಯಕ್ಕೆ ರೆಫರಿಯಾಗಿ ಆಂಡಿ ಪೈಕ್ರಾಫ್ಟ್ ಅವರನ್ನೇ ನಿಯೋಜಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಪಾಕ್‌ ಇಂದಿನ ಪಂದ್ಯ ಬಹಿಷ್ಕರಿಸಲು ಮುಂದಾಗಿದೆ.

    ಸದ್ಯ ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಪ್ರಕಟಿಸಿರುವುದಾಗಿ ಹೇಳಿರುವ ಪಾಕ್‌, ಕೊನೇ ಕ್ಷಣದಲ್ಲಿ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದರೆ, ಇಂದಿನ ಪಂದ್ಯವನ್ನಾಡುವ ಸಾಧ್ಯತೆಗಳಿವೆ.

  • Asia Cup 2025 | ಅಬ್ಬರಿಸಲು ʻಯಂಗ್‌ ಇಂಡಿಯಾʼ ರೆಡಿ – ಪ್ರಾಕ್ಟೀಸ್‌ ಸೆಷನ್‌ನಲ್ಲೇ 30 ಸಿಕ್ಸರ್‌ ಸಿಡಿಸಿದ ಶರ್ಮಾ

    Asia Cup 2025 | ಅಬ್ಬರಿಸಲು ʻಯಂಗ್‌ ಇಂಡಿಯಾʼ ರೆಡಿ – ಪ್ರಾಕ್ಟೀಸ್‌ ಸೆಷನ್‌ನಲ್ಲೇ 30 ಸಿಕ್ಸರ್‌ ಸಿಡಿಸಿದ ಶರ್ಮಾ

    ದುಬೈ: 2025ರ ಟಿ20 ಏಷ್ಯಾಕಪ್‌ (Asia Cup 2025) ಟೂರ್ನಿ ಶುರುವಾಗಿದ್ದು, ಇಂದು ಟೀಂ ಇಂಡಿಯಾ (Team India), ಯುಎಇ ವಿರುದ್ಧ ಪಂದ್ಯದ ಮೂಲಕ ಅಭಿಯಾನ ಶುರು ಮಾಡಲಿದೆ.

    ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿರುವ ಭಾರತ ತಂಡವು ಇಂದು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ವಿರುದ್ಧ ತನ್ನ ಅಭಿಯಾನ ಶುರು ಮಾಡಲಿದೆ. ರಾತ್ರಿ 8ಕ್ಕೆ ಪಂದ್ಯ ಶುರುವಾಗಲಿದೆ. ಭಾರತ ತನ್ನ ಮುಂದಿನ ಪಂದ್ಯವನ್ನ ಪಾಕಿಸ್ತಾನ (Pakistan) ವಿರುದ್ಧ ಸೂಪರ್‌ ಸಂಡೇ ಎದುರಿಸಲಿದೆ. ಹೀಗಾಗಿ ಆ ದೊಡ್ಡ ಪಂದ್ಯಕ್ಕೂ ಮೊದಲು, ಟೀಂ ಇಂಡಿಯಾಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಇದನ್ನೂ ಓದಿ: Asia Cup 2025 | ಏಷ್ಯಾ ಕಪ್‌ಗೆ 30 ವರ್ಷಗಳ ಇತಿಹಾಸ

    ʻಎʼ ತಂಡದಲ್ಲಿರುವ ಭಾರತ ಸೂಪರ್‌ ಸಿಕ್ಸ್‌ ಹಂತ ಪ್ರವೇಶಿಸಲು ಯುಎಇ, ಒಮನ್‌ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಸೆಣಸಬೇಕಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಹಳೆಯ ತಂತ್ರದೊಂದಿಗೆ ಮುಂದುವರಿದರೆ, ಸೂರ್ಯಕುಮಾರ್ ಯಾದವ್ (Suryakumar Yadav) ಚೊಚ್ಚಲ ಬಾರಿಗೆ ನಾಯಕನಾಗಿ ಏಷ್ಯಾ ಕಪ್​ನಲ್ಲಿ ಮುನ್ನಡೆಸುತ್ತಿದ್ದು, ಯಾವ ತಂತ್ರ ಹೂಡಲಿದ್ದಾರೆ ಅನ್ನೋದನ್ನ ಕಾದುನೋಡಬೇಕಿದೆ.

    ಆಲ್‌ರೌಂಡರ್‌ಗಳಿಗೆ ಆದ್ಯತೆ
    ಇನ್ನೂ ಗಂಭೀರ್‌ ಟೀಂ ಇಂಡಿಯಾದ ಮುಖ್ಯಕೋಚ್‌ ಆದಾಗಿನಿಂದ ಭಾರತ ತಂಡ ಎಲ್ಲಾ ಸ್ವರೂಪಗಳಲ್ಲಿ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬ್ಯಾಟಿಂಗ್ ಅನ್ನು ಬಲಪಡಿಸಲು ಮತ್ತು 8ನೇ ಕ್ರಮಾಂಕದವರೆಗೆ ಉತ್ತಮ ಬ್ಯಾಟ್ಸ್‌ಮನ್‌ಗಳನ್ನ ಹೊಂದಲು ಈ ಆದ್ಯತೆ ನೀಡಲಾಗಿದೆ. ಅದರಂತೆ ಇಂದಿನ ಪಂದ್ಯದಲ್ಲಿ ಆಲ್‌ರೌಂಡರ್‌ ಆಗಿ ಹಾರ್ದಿಕ್‌ ಪಾಂಡ್ಯ ಹಾಗೂ ಸ್ಪಿನ್‌ ಆಲ್‌ರೌಂಡರ್‌ ಆಗಿ ಅಕ್ಷರ್‌ ಪಟೇಲ್‌ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದನ್ನೂ ಓದಿ: Asia Cup 2025 | ಒಮ್ಮೆ ಏಕದಿನ, ಒಮ್ಮೆ ಟಿ20 – ಸ್ವರೂಪ ಬದಲಾಗೋದು ಏಕೆ?

    ಪ್ಲೇಯಿಂಗ್‌-11 ನಿಂದ ಸ್ಯಾಮ್ಸನ್‌ ಔಟ್‌ ಸಾಧ್ಯತೆ
    ಇನ್ನೂ ವಿಕೆಟ್‌ ಕೀಪರ್‌ಗಳ ಪೈಕಿ ಜಿತೇಶ್‌ ಶರ್ಮಾ, ಸಂಜು ಸ್ಯಾಮ್ಸನ್‌ ತಂಡದಲ್ಲಿದ್ದಾರೆ. ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್‌ಗಿಂತ ಜಿತೇಶ್ ಅವರ ಫಿನಿಷರ್ ಪಾತ್ರಕ್ಕೆ ಆದ್ಯತೆ ಸಿಗುವುದು ಖಚಿತ ವಾಗಿದೆ, ಅಲ್ಲದೇ ಶುಭ್‌ಮನ್ ಗಿಲ್ (Shubman Gill) ಅಗ್ರ ಕ್ರಮಾಂಕಕ್ಕೆ ಮರಳಿರುವುದರಿಂದ ಸ್ಯಾಮ್ಸನ್‌ಗೆ ಪ್ಲೇಯಿಂಗ್‌ 11ನಲ್ಲಿ ಸ್ಥಾನ ಸಿಗುವುದೂ ಸಹ ಅನುಮಾನ ಎಂದೇ ಹೇಳಲಾಗುತ್ತಿದೆ. ಇದನ್ನೂ ಓದಿ: Asia Cup 2025 | ಇಂದಿನಿಂದ ಟೂರ್ನಿ – 8 ತಂಡಗಳ ಬಲಾಬಲ ಹೇಗಿದೆ?

    ಪ್ರಾಕ್ಟೀಸ್‌ ಸೆಷನ್‌ನಲ್ಲೇ ಅಬ್ಬರಿಸಿದ ಅಭಿ
    ಇನ್ನೂ ಯುಎಇ ವಿರುದ್ಧ ಪಂದ್ಯಕ್ಕೂ ಮುನ್ನ ನಡೆದ ಪ್ರಾಕ್ಟೀಸ್‌ ಸೆಷನ್‌ನಲ್ಲಿ ಅಭಿಷೇಕ್‌ ಶರ್ಮಾ (Abhishek Sharma) ಅಬ್ಬರಿಸಿದ್ದಾರೆ. ಬ್ಯಾಟಿಂಗ್‌ ಅಭ್ಯಾಸದ ವೇಳೆ 25 ರಿಂದ 30 ಸಿಕ್ಸರ್‌ಗಳನ್ನ ಬಾರಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್‌ ಮಾಡಲು ಕಣಕ್ಕಿಳಿದರೆ, ಬೃಹತ್‌ ಮೊತ್ತ ಪೇರಿಸುವ ವಿಶ್ವಾಸವನ್ನು ಮೂಡಿಸಿದ್ದಾರೆ.

  • ಇಂದಿನಿಂದ ಏಷ್ಯಾಕಪ್‌| ಭಾರತ – ಪಾಕ್‌ ಮೂರು ಬಾರಿ ಮುಖಾಮುಖಿ?

    ಇಂದಿನಿಂದ ಏಷ್ಯಾಕಪ್‌| ಭಾರತ – ಪಾಕ್‌ ಮೂರು ಬಾರಿ ಮುಖಾಮುಖಿ?

    ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ (Asia Cup T20 Cricket) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಯುಎಇ (UAE) ದೇಶದ ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು  ಆಡಲಿವೆ.

    ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್‌ ಮಧ್ಯೆ ನಡೆದರೆ ಸೆ.28ರಂದು ಫೈನಲ್‌ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಭಾರತ (India) ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.

    ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್‌ ‘ಎ’ ಗುಂಪಿನಲ್ಲಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಕಾಂಗ್‌ ‘ಬಿ’ ಗುಂಪಿನಲ್ಲಿವೆ.

    ಪ್ರತಿ ತಂಡಗಳು ಗುಂಪು ಹಂತದಲ್ಲಿ ಒಮ್ಮೆ ಪರಸ್ಪರ ಸೆಣಸಾಡಲಿವೆ. ಗುಂಪಿನ ಅಗ್ರ-2 ತಂಡಗಳು ಸೂಪರ್‌-4 ಹಂತ ಪ್ರವೇಶಿಸಲಿವೆ. ಸೂಪರ್‌-4ನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ. ಇದನ್ನೂ ಓದಿ: ತಂಡದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ, ಕುಂಬ್ಳೆ ಮುಂದೆ ಅತ್ತಿದ್ದೆ: ಕ್ರಿಸ್‌ ಗೇಲ್‌

    ಪ್ರತಿ 2 ವರ್ಷಕ್ಕೊಮ್ಮೆ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ನಡೆಯುತ್ತಿದ್ದು ಈವರೆಗೂ 16 ಬಾರಿ ಆಯೋಜನೆಗೊಂಡಿವೆ. ಈ ಪೈಕಿ ಭಾರತ 8 ಬಾರಿ ಟ್ರೋಫಿ ಗೆದ್ದರೆ 3 ಆವೃತ್ತಿಗಳಲ್ಲಿ ರನ್ನರ್‌-ಅಪ್‌ ಆಗಿದೆ. ಶ್ರೀಲಂಕಾ 6, ಪಾಕಿಸ್ತಾನ 2 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿವೆ.

    ಸೆ.15ರ ಯುಎಇ-ಒಮಾನ್‌(ಸಂಜೆ 5.30ಕ್ಕೆ) ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌ನಲ್ಲಿ ಪಂದ್ಯಗಳು ನೇರಪ್ರಸಾರವಾಗಲಿದೆ.

    ದುಬೈ ಕ್ರೀಡಾಂಗಣದಲ್ಲಿ 11 ಪಂದ್ಯ ನಡೆಯಿದ್ದು 25,000 ಆಸನ ಸಾಮರ್ಥ್ಯವನ್ನು ಹೊಂದಿದರೆ ಅಬುಧಾಬಿಯಲ್ಲಿ 8 ಪಂದ್ಯಗಳು ನಿಗದಿಯಾಗಿದ್ದು 20,000 ಆಸನ ಸಾಮರ್ಥ್ಯ ಹೊಂದಿದೆ.  ಇದನ್ನೂ ಓದಿ: BCCI ಬ್ಯಾಂಕ್ ಬ್ಯಾಲೆನ್ಸ್‌ 20 ಸಾವಿರ ಕೋಟಿಗೂ ಅಧಿಕ 5 ವರ್ಷದಲ್ಲಿ 14,627 ಕೋಟಿ ಆದಾಯ ಹೆಚ್ಚಳ

    ಭಾರತ vs ಪಾಕಿಸ್ತಾನ 3 ಬಾರಿ ಮುಖಾಮುಖಿ?
    ಪಹಲ್ಗಾಮ್‌ ಉಗ್ರ ದಾಳಿ ಹಾಗೂ ಆ ಬಳಿಕ ನಡೆದ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿ ಭಾರತ-ಪಾಕ್‌ (India vs Pakistan) ತಂಡಗಳು ತಂಡಗಳು ಮುಖಾಮುಖಿಯಾಗಲಿವೆ. ಒಂದಲ್ಲ ಮೂರು ಬಾರಿ ಇತ್ತಂಡಗಳು ಕಾದಾಟ ನಡೆಸುವ ಸಾಧ್ಯತೆಯಿದೆ.

    ಸೆ.14ರಂದು ಗುಂಪು ಹಂತದಲ್ಲಿ ಮೊದಲ ಬಾರಿಗೆ ಸೆಣಸಾಟವಾಡಲಿವೆ. ಒಂದು ವೇಳೆ ಗುಂಪು ಹಂತದಲ್ಲಿ ಗೆದ್ದು ಸೂಪರ್‌ 4 ಪ್ರವೇಶಿಸಿದರೆ ಅಲ್ಲೂ ಕಾದಾಟ ನಡೆಸಬೇಕಾಗುತ್ತದೆ. ಸೂಪರ್‌ 4 ರಲ್ಲಿ ಅಗ್ರ ಸ್ಥಾನ ಪಡೆದರೆ ಫೈನಲ್‌ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.

     

  • ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ಅಬು ಧಾಬಿ: ಕೇರಳದ ಮಹಿಳೆಯೊಬ್ಬರು (Kerala Woman) ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (UAE) ನಡೆದಿದೆ.

    ಕೇರಳದ ಕೊಲ್ಲಂ (Kollam) ಮೂಲದ ಅತುಲ್ಯ ಶೇಖರ್ (29) ಮೃತ ಮಹಿಳೆ. 2014ರಲ್ಲಿ ಅತುಲ್ಯ ಕೊಲ್ಲಂ ನಿವಾಸಿ ಶೇಖರ್ ಎಂಬವರನ್ನು ಮದುವೆಯಾಗಿ ಶಾರ್ಜಾದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದರು. ಮದುವೆ ವೇಳೆ ಸತೀಶ್‌ಗೆ 320 ಗ್ರಾಂ ಚಿನ್ನ ಹಾಗೂ ಒಂದು ಬೈಕ್ ಅನ್ನು ವರದಕ್ಷಿಣೆ (Dowry) ರೂಪದಲ್ಲಿ ನೀಡಲಾಗಿತ್ತು. ಆದರೆ ಮದುವೆಯಾದಾಗಿನಿಂದ ಪತಿ ಅತುಲ್ಯಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಪೇದೆಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ – ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್

    ಜುಲೈ 18 ಮತ್ತು ಜುಲೈ 19ರ ನಡುವೆ ಸತೀಶ್ ಅತುಲ್ಯಳನ್ನು ಉಸಿರುಗಟ್ಟಿಸಿ, ಹೊಟ್ಟೆಗೆ ಒದ್ದು, ತಲೆಗೆ ತಟ್ಟೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಪತಿ ಸತೀಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.  ಇದನ್ನೂ ಓದಿ: ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಮೂವರು ಅಂತರರಾಜ್ಯ ದರೋಡೆಕೋರರ ಬಂಧನ

  • ಯುಎಇಯಲ್ಲಿ ಕೇರಳದ ಮಹಿಳೆ ಆತ್ಮಹತ್ಯೆ; ಪತಿ, ಅತ್ತೆ-ಮಾವ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

    ಯುಎಇಯಲ್ಲಿ ಕೇರಳದ ಮಹಿಳೆ ಆತ್ಮಹತ್ಯೆ; ಪತಿ, ಅತ್ತೆ-ಮಾವ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

    – ಬೆಳ್ಳಗಿದ್ದಾಳೆಂದು ತಲೆಗೂದಲು ಕತ್ತರಿಸಿ ಕಪ್ಪಗಿದ್ದ ಪತಿ ಮನೆಯವರಿಂದ ಚಿತ್ರಹಿಂಸೆ

    ತಿರುವನಂತಪುರಂ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ಮಗುವಿನೊಂದಿಗೆ ಕೇರಳದ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.

    32 ವರ್ಷದ ಕೇರಳ ಮಹಿಳೆಯ ಪತಿ ಮತ್ತು ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯ ಮೂಲದ ಸಂತ್ರಸ್ತೆ ವಿಪಂಚಿಕಾ ಮಣಿಯನ್ ಜುಲೈ 8 ರಂದು ತನ್ನ ಶಾರ್ಜಾ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಆಕೆಯ ಒಂದು ವರ್ಷದ ಮಗಳು ಕೂಡ ಸಾವನ್ನಪ್ಪಿದ್ದಾಳೆ. ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ವಿಧಿವಿಜ್ಞಾನ ವರದಿಯಿಂದ ಬಹಿರಂಗವಾಗಿದೆ. ಮೃತ ಮಹಿಳೆ ಬರೆದಿದ್ದಾರೆ ಎನ್ನಲಾದ ಮಲಯಾಳಂ ಭಾಷೆಯ ಕೈಬರಹದ ಪತ್ರವೊಂದು ಮನೆಯಲ್ಲಿ ಸಿಕ್ಕಿದೆ. ಮನೆಯಲ್ಲಿ ದೌರ್ಜನ್ಯ, ಚಿತ್ರಹಿಂಸೆ ನೀಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.

    ಪತಿ ನಿಧೀಶ್ ವಲಿಯವೀಟ್ಟಿಲ್ ಮತ್ತು ಅವರ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಮಗಳಿಗೆ ಆಕೆಯ ಪತಿ ಮತ್ತು ಅತ್ತೆ-ಮಾವ ಎಲ್ಲ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆಯ ತಾಯಿ ಶ್ಯಾಮಲಾ ಆರೋಪಿಸಿದ್ದಾರೆ.

    ಮಣಿಯನ್ ಮತ್ತು ವಲಿಯವೀಟ್ಟಿಲ್ 2020 ರಲ್ಲಿ ವಿವಾಹವಾದರು. ಸಂತ್ರಸ್ತೆಯ ಪತಿ ಮತ್ತು ಆಕೆಯ ಕುಟುಂಬದವರು ಕಪ್ಪು ವರ್ಣೀಯರಾಗಿದ್ದರು. ಬೆಳ್ಳಗಿದ್ದ ಆಕೆಯನ್ನು ಆಕರ್ಷಕವಾಗಿ ಕಾಣಬಾರದೆಂದು ತಲೆಗೂದಲನ್ನು ಕತ್ತರಿಸಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.

  • ಅನಿವಾಸಿ ಭಾರತೀಯರಿಗೆ ಗುಡ್‌ ನ್ಯೂಸ್‌ – 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್‌ ವೀಸಾ’ ಪರಿಚಯಿಸಿದ ಯುಎಇ

    ಅನಿವಾಸಿ ಭಾರತೀಯರಿಗೆ ಗುಡ್‌ ನ್ಯೂಸ್‌ – 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್‌ ವೀಸಾ’ ಪರಿಚಯಿಸಿದ ಯುಎಇ

    ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (UAE) ಅತಿದೊಡ್ಡ ವಲಸಿಗ ಸಮುದಾಯಗಳಲ್ಲಿ ಒಂದಾಗಿರುವ ಭಾರತೀಯ ಪ್ರಜೆಗಳಿಗೆ ಗುಡ್‌ ನ್ಯೂಸ್‌ ನೀಡಿದೆ.

    ನಾಮನಿರ್ದೇಶನದ ಆಧಾರದ ಮೇಲೆ ಕೆಲವು ಷರತ್ತುಗಳೊಂದಿಗೆ ಹೊಸ ರೀತಿಯ ಗೋಲ್ಡನ್‌ ವೀಸಾ ಪರಿಚಯಿಸಿದೆ. ‘ಹೊಸ ನಾಮನಿರ್ದೇಶನ ಆಧಾರಿತ ವೀಸಾ ನೀತಿ’ ಅಡಿಯಲ್ಲಿ, ಭಾರತೀಯರು AED 1,00,000 (ಸುಮಾರು 23.30 ಲಕ್ಷ ರೂ.) ಶುಲ್ಕ ಪಾವತಿಸಿ ಯುಎಇ ಗೋಲ್ಡನ್‌ ವೀಸಾ ಪಡೆಯಬಹುದು.

    ಇದು ಜೀವಿತಾವಧಿ ವರೆಗಿನ ವೀಸಾ ಆಗಿದೆ. ಸುಮಾರು 5,000 ಕ್ಕೂ ಹೆಚ್ಚು ಭಾರತೀಯರು ನಾಮನಿರ್ದೇಶನ ಆಧಾರಿತ ವೀಸಾಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಯುಎಇ ಆಡಳಿತ ತಿಳಿಸಿದೆ.

    ಗೋಲ್ಡನ್‌ ವೀಸಾದ ಪ್ರಯೋಜನ ಏನು?
    ಈ ವೀಸಾ ಪಡೆದ ನಂತರ ಒಬ್ಬರು ತಮ್ಮ ಕುಟುಂಬ ಸದಸ್ಯರನ್ನು ದುಬೈಗೆ ಕರೆತರುವ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ವೀಸಾ ಆಧರಿಸಿ ಸೇವಕರು ಮತ್ತು ಚಾಲಕರನ್ನು ನೇಮಿಸಿಕೊಳ್ಳಬಹುದು. ಯುಎಇಯಲ್ಲಿ ಯಾವುದೇ ವ್ಯವಹಾರ ಅಥವಾ ವೃತ್ತಿಪರ ಕೆಲಸವನ್ನು ಮಾಡಬಹುದು. ಆದರೆ, ಆಸ್ತಿ ಮಾರಾಟ ಅಥವಾ ವಿಭಜನೆಯ ಸಂದರ್ಭದಲ್ಲಿ ನಾಮನಿರ್ದೇಶಿತ ಆಧಾರಿತ ವೀಸಾ ಶಾಶ್ವತವಾಗಿ ಉಳಿಯುತ್ತದೆ.

    ಅಮೆರಿಕದ ಗೋಲ್ಡನ್ ವೀಸಾ ದುಬಾರಿಯಾಗಿದ್ದು,‌ ಇದಕ್ಕೆ ಹೋಲಿಸಿದರೆ ಯುಎಇ ಗೋಲ್ಡನ್‌ ವೀಸಾ ಕೈಗೆಟುಕುವ ದರದಲ್ಲಿದೆ.

  • SKSSF ಅಬುಧಾಬಿ ಕರ್ನಾಟಕ & ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಆಶ್ರಯದಲ್ಲಿ 4ನೇ ಯಶಸ್ವಿ ರಕ್ತದಾನ ಶಿಬಿರ

    SKSSF ಅಬುಧಾಬಿ ಕರ್ನಾಟಕ & ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಆಶ್ರಯದಲ್ಲಿ 4ನೇ ಯಶಸ್ವಿ ರಕ್ತದಾನ ಶಿಬಿರ

    ಅಬುಧಾಬಿ (ಯುಎಇ): SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಘದ ಜಂಟಿ ಆಶ್ರಯದಲ್ಲಿ ಕಳೆದ ಜೂನ್‌ 28ರಂದು ಹಮ್ಮಿಕೊಂಡಿದ್ದ 4ನೇ ಸಾರ್ವಜನಿಕ ರಕ್ತದಾನ ಶಿಬಿರವು (Blood Camp) ಅಬುಧಾಬಿ ಖಾಲಿದಿಯ್ಯಾದಲ್ಲಿರುವ ಸೇಹಾ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ಜರುಗಿತು.

    ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕರ್ತ ಮಜೀದ್ ಬೊಳ್ವಾರು ಅವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದಲ್ಲಿ ಒಟ್ಟು 86 ಮಂದಿ ರಕ್ತದಾನ ಮಾಡಿದ್ದು, ಈ ಪೈಕಿ ಮೂವರು ಸಿಂಗಲ್ ಡೋನರ್ ಪ್ಲೇಟ್ಲೆಟ್ಸ್ ದಾನ ಮಾಡಿದ್ದಾರೆ. ರಕ್ತದಾನ ಪ್ರಕ್ರಿಯೆಯಲ್ಲಿ ಸೇಹಾ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದರು. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ

    ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿಬಿರದ ಮುಖ್ಯ ಸಂಯೋಜಕ ಮುನೀರ್ ಬೆಳ್ಳಾರೆ ಅವರು ಮಾತನಾಡಿ, ಇದು ಅಬುಧಾಬಿಯಲ್ಲಿ ನಮ್ಮ ಸಂಘಟನೆ ನಡೆಸಿದ 4ನೇ ಯಶಸ್ವಿ ಶಿಬಿರ. ಮುಂದೆಯೂ ಇಂತಹ ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಕೋವಿಶೀಲ್ಡ್‌ ಲಸಿಕೆ ಸುರಕ್ಷಿತವಾಗಿದೆ, ಹಠಾತ್‌ ಸಾವಿಗೆ ಸಂಬಂಧವಿಲ್ಲ: ಸೀರಮ್‌ ಇನ್‌ಸ್ಟಿಟ್ಯೂಟ್‌

    ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಉಸ್ತಾದ್ ಶಹೀರ್ ಹುದವಿ ಅವರು ರಕ್ತದಾನದ ಇಸ್ಲಾಮಿಕ್ ಮಹತ್ವವನ್ನು ವಿವರಿಸಿದರು. ಒಬ್ಬ ಮನುಷ್ಯ ತನ್ನ ಸಹೋದರನ ನೆರವಿಗೆ ನಿಲ್ಲುವುದಾದರೆ, ಅಲ್ಲಾಹ್ ತನ್ನ ನೆರವಿನಲ್ಲಿ ಅವನ ಜೊತೆಗಿರುತ್ತಾನೆ ಎಂಬ ಹದೀಸ್ ಉಲ್ಲೇಖಿಸಿ, ರಕ್ತದಾನವೆಂದರೆ ಕೇವಲ ಮಾನವೀಯತೆ ಅಲ್ಲ, ಇದು ಇಮಾನ್‌ನ ಭಾಗವಾಗಿದೆ ಎಂದು ತಿಳಿಸಿದರು.

    SKSSF ಅಬುಧಾಬಿ ಕರ್ನಾಟಕದ ಅಧ್ಯಕ್ಷ ಹನೀಫ್ ಹರಿಯಮೂಲೆ ಅವರು ಸಂಘಟನೆ ನಿರಂತರವಾಗಿ ಸಮಾಜದ ಒಳಿತಿಗಾಗಿ ತೊಡಗಿಕೊಂಡಿದ್ದು, ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ಸಹಯೋಗದೊಂದಿಗೆ ಈ ಶಿಬಿರ ಯಶಸ್ವಿಯಾಗಿ ನಡೆದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸನ | ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ಬೆಂಗಳೂರು – ಮುರುಡೇಶ್ವರ ರೈಲು ಸ್ಥಗಿತ

    ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಖ್ಯಾತ ಸಾಹಿತಿ ಅನ್ಸಾರ್ ಕಾಟಿಪಳ್ಳ ಅವರು, ನಾವೆಲ್ಲರೂ ಅನಿವಾಸಿಗಳಾದರೂ ಸಮಾಜದ ಒಳಿತಿಗಾಗಿ ಜವಾಬ್ದಾರಿ ವಹಿಸಬೇಕು ಎಂದು ಹೇಳಿ, ಸ್ವತಃ ತಮ್ಮದೇ ಬರವಣಿಗೆಯಲ್ಲಿ ರಕ್ತದಾನದ ಬಗ್ಗೆ ಕವನವನ್ನು ವಾಚಿಸಿ ಕಾರ್ಯಕ್ರಮಕ್ಕೆ ಸಾಹಿತ್ಯದ ನೋಟವನ್ನು ಜೋಡಿಸಿದರು.

    ಕಾರ್ಯಕ್ರಮದಲ್ಲಿ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ವ್ಯವಸ್ಥಾಪಕ ಸಿರಾಜುದ್ದೀನ್ ಪರ್ಲಡ್ಕ ಮತ್ತು ಕಾರ್ಯ ನಿರ್ವಾಹಕ ಶಾಫಿ ಮಾಣಿ ಹಾಗೂ ಇಕ್ಬಾಲ್ ಕನಕಮಜಲು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಅಯಾನ್ ರಿಯಲ್ ಎಸ್ಟೇಟ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅನ್ಸಾರ್ ಬೆಳ್ಳಾರೆ ಹಾಗೂ ಕೆಎಂಸಿಸಿ ಪ್ರಮುಖರಾದ ಅಝೀಝ್ ಪರ್ಮುದೆ, ಕಾಸರಗೋಡು SKSSF ಪ್ರಮುಖರಾದ ನೌಫಲ್ ಪಟ್ಟಾಂಬಿ, ಕೆ.ಎಚ್ ಅಲಿ ಮಾಸ್ತಿಕುಂಡು, ಕಮಾಲ್ ಮಲ್ಲಮ್, ಅಶ್ರಫ್ ಮೀನಾಪೀಸ್, ಫೈಝಲ್ ಸೀತಾಂಗೋಳಿ, ಬಾದುಷಾ ಕಾಞಂಗಾಡ್, ಹನೀಫಾ ಎರಿಯಾಲ್, ಪಿಕೆ ಅಶ್ರಫ್ ಮುಂತಾದ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ಶುಭಾಶಯಗಳೊಂದಿಗೆ ಪ್ರೋತ್ಸಾಹ ನೀಡಿದರು.

    ಶಿಬಿರದಲ್ಲಿ SKSSF ಅಬುಧಾಬಿ ಕರ್ನಾಟಕದ ಪ್ರಮುಖರಾದ ಉಸ್ತಾದ್ ಹಾರಿಸ್ ಮಕ್ದೂಮಿ ಕುಕ್ಕಾಜೆ, ಅಬೂಬಕ್ಕರ್ ಸಕಲೇಶಪುರ, ದಾರುಲ್ ಹಸನಿಯ್ಯ ಅಬುಧಾಬಿ ಸಮಿತಿ ಅಧ್ಯಕ್ಷ ಶಾಕಿರ್ ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿ ಜಾಫರ್ ಉಪ್ಪಿನಂಗಡಿ, ಶಿಬಿರದ ಉಸ್ತುವಾರಿ ಹಾಗೂ ಕೆಐಸಿ ಕುಂಬ್ರ ಅಬುಧಾಬಿ ಘಟಕದ ಪ್ರಧಾನ ಕಾರ್ಯದರ್ಶಿ ಹಂಝ ನಾಳ, SKSSF ಕಾರ್ಯಕರ್ತರಾದ ತ್ವಾಹ ಉಪ್ಪಿನಂಗಡಿ, ಅಬೂಬಕ್ಕರ್ ಮುಂಡೋಳೆ,ಅನಸ್ ಕರಾಯ, ಅನ್ಸಾರ್ ಅಲ್ ಐನ್, ಯಾಸೀರ್ ಬೋಳಿಯಾರ್,ಶಾಫಿ ಕಿನ್ಯಾ, ಸಫ್ವಾನ್ ಕೊಡಾಜೆ, ಸ್ವಾದಿಕ್ ಬೆಳ್ಳಾರೆ, ಉಮ್ಮರ್ ಪಾಂಡವರಕಲ್ಲು,ಬಶೀರ್ ಕಾವು, ಬಿಡಬ್ಲ್ಯೂ ಎಫ್ ಅಬುದಾಬಿ ಪ್ರತಿನಿಧಿಗಳಾದ ನವಾಝ್ ಉಚ್ಚಿಲ, ಮುಜೀಬ್ ಉಚ್ಚಿಲ ಹಾಗೂ ಇನ್ನೂ ಅನೇಕರು ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದರು.

    ಕಾರ್ಯಕ್ರಮವನ್ನು SKSSF ಅಬುಧಾಬಿ ಕರ್ನಾಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಫಿಳ್ ಝೈನ್ ಸಖಾಫಿ ನಿರೂಪಣೆ ಮಾಡಿದರೆ, ಬಶೀರ್ ಕೊಡ್ಲಿಪೇಟೆ ಧನ್ಯವಾದ ಸಲ್ಲಿಸಿದರು. ಧಾರ್ಮಿಕ ಕ್ಷೇತ್ರದೊಂದಿಗೆ ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿರುವ SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ (ರಿ.) ಇದರ ಜಂಟಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

  • ಏಷ್ಯಾ ಕಪ್‌ ಟೂರ್ನಿಗೆ ಮುಹೂರ್ತ ಫಿಕ್ಸ್‌; ಸೆ.7ಕ್ಕೆ ಭಾರತ-ಪಾಕ್‌ ಮುಖಾಮುಖಿ

    ಏಷ್ಯಾ ಕಪ್‌ ಟೂರ್ನಿಗೆ ಮುಹೂರ್ತ ಫಿಕ್ಸ್‌; ಸೆ.7ಕ್ಕೆ ಭಾರತ-ಪಾಕ್‌ ಮುಖಾಮುಖಿ

    ಮುಂಬೈ: ಏಷ್ಯಾ ಕಪ್‌ (Asia Cup 2025) ಕ್ರಿಕೆಟ್‌ ಟೂರ್ನಿಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಯುಎಇನಲ್ಲಿ ಸೆಪ್ಟೆಂಬರ್‌ 5 ರಿಂದ ಟೂರ್ನಿ ಆರಂಭವಾಗಲಿದ್ದು, ಸೆ.7 ರಂದು ಭಾರತ ಮತ್ತು ಪಾಕ್‌ (India vs Pakistan) ನಡುವಿನ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ.

    ಸೆ.21 ರಂದು ಫೈನಲ್‌ ಪಂದ್ಯ ನಡೆಯಲಿದೆ. 17 ದಿನಗಳ ಟೂರ್ನಿಯ ವೇಳಾಪಟ್ಟಿ ಬಹುತೇಕ ಪೂರ್ಣಗೊಂಡಿದೆ. ಭಾರತ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ರಾಷ್ಟ್ರಗಳು ತಮ್ಮ ಸರ್ಕಾರಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಇದನ್ನೂ ಓದಿ: ಪತ್ನಿಗೆ ತಿಂಗಳಿಗೆ 4 ಲಕ್ಷ ಕೊಡಿ: ಮೊಹಮ್ಮದ್‌ ಶಮಿಗೆ ಹೈಕೋರ್ಟ್‌ ಸೂಚನೆ

    ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಯುಎಇ ಟೂರ್ನಿಯಲ್ಲಿ ಭಾಗವಹಿಸಲಿವೆ. ಗುಂಪುಹಂತ ಮತ್ತು ಸೂಪರ್‌ ಫೋರ್‌ ವಿಧಾನದಲ್ಲಿ ಸ್ಪರ್ಧೆಗಳು ನಡೆಯಲಿವೆ.

    ಪಹಲ್ಗಾಮ್‌ ಘಟನೆ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದು ಉಭಯ ದೇಶಗಳ ನಡುವಿನ ಕ್ರಿಕೆಟ್‌ ಪಂದ್ಯದ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆ ಇತ್ತು. ಈ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಂಘರ್ಷದ ಬಳಿಕ ಬಹುರಾಷ್ಟ್ರ ಟೂರ್ನಿಯಲ್ಲಿ ಎರಡೂ ದೇಶಗಳು ಭಾಗವಹಿಸುತ್ತಿರುವುದು ಇದೇ ಮೊದಲು. ಇದನ್ನೂ ಓದಿ: ಹಲವು ಮಹಿಳೆಯರ ಜೊತೆ ಅಫೇರ್‌ ಇಟ್ಕೊಂಡಿದ್ದ – ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ

  • ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ

    ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ

    ದುಬೈ: ಮರೀನಾದಲ್ಲಿರುವ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶುಕ್ರವಾರ ತಡರಾತ್ರಿ ಮರಿನಾದ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆ ಕಟ್ಟಡದಲ್ಲಿದ್ದ ಸುಮಾರು 4,000 ಜನರನ್ನು ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

    35ನೇ ಮಹಡಿಯ ಕಟ್ಟಡ ಒಣಗಿದ ಮರದಂತೆ ಹೊತ್ತಿ ಉರಿದಿದೆ. ಇದರಿಂದ ಇಡೀ ನಗರಾದ್ಯಂತ ಹೊಗೆ ಆವರಿಸಿತ್ತು. ಇಂತಹ ಅಗ್ನಿ ದುರಂತವನ್ನು ರಕ್ಷಣಾ ತಂಡಗಳು ಜಾಗರೂಕತೆಯಿಂದ ನಿಭಾಯಿಸಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

    ರಕ್ಷಣಾ ತಂಡಗಳು ಆರು ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿ ಬೆಂಕಿಯನ್ನು ನಂದಿಸಿದವು. ಅವಘಡದಿಂದ ಸಮಸ್ಯೆಗೊಳಗಾದವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲು ಅಧಿಕಾರಿಗಳು ಸಭೆ ನಡೆಸಿದ್ದಾರೆ.

    ಟೈಗರ್ ಟವರ್ ಎಂದು ಕರೆಯಲ್ಪಡುವ ಮರೀನಾ ಪಿನಾಕಲ್‌ ಕಟ್ಟಡದಲ್ಲಿ ಮೇ 2015 ರಲ್ಲಿ ಸಹ ಅಗ್ನಿ ಅವಘಡ ಸಂಭವಿಸಿತ್ತು. ಆಗ 47 ನೇ ಮಹಡಿಯಲ್ಲಿ ಬೆಂಕಿ ತಗುಲಿ 48 ನೇ ಮಹಡಿಗೂ ವ್ಯಾಪಿಸಿತ್ತು.