Tag: U19 World Cup 2020

  • ಪಾಕ್ ವಿರುದ್ಧ ಶತಕ ಸಿಡಿಸಿದ ಪಾನಿಪುರಿ ಮಾರುತ್ತಿದ್ದ 18ರ ಪೋರ ಜೈಸ್ವಾಲ್

    ಪಾಕ್ ವಿರುದ್ಧ ಶತಕ ಸಿಡಿಸಿದ ಪಾನಿಪುರಿ ಮಾರುತ್ತಿದ್ದ 18ರ ಪೋರ ಜೈಸ್ವಾಲ್

    ಪೊಷೆಫ್‍ಸ್ಟ್ರೂಮ್: ಅಂಟರ್ 19 ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧ 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಮಿಂಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

    ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ 18 ವರ್ಷದ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 7ನೇ ಬಾರಿ ಭಾರತ ಫೈನಲ್ ಪ್ರವೇಶಿಸಿದೆ. 3 ಓವರ್ ಬೌಲಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಕೇವಲ 11 ರನ್ ನೀಡಿ, ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.

    ಪಾನಿಪುರಿ ಮಾರುತ್ತಿದ್ದ ಜೈಸ್ವಾಲ್:
    ಕೆಲವು ವರ್ಷಗಳ ಹಿಂದೆ ಮುಂಬೈನ ಜನನಿಬಿಡ ಪ್ರದೇಶದಲ್ಲಿ ವಾಸಿಸುತ್ತಿದ್ದ ಯಶಸ್ವಿ ಜೈಸ್ವಾಲ್ ಇಂದು ಭಾರತೀಯ ಕ್ರಿಕೆಟ್‍ನಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ. ಕೇವಲ 18ನೇ ವಯಸ್ಸಿನಲ್ಲಿ, ಯಶಸ್ವಿ ದೇಶೀಯ ಕ್ರಿಕೆಟ್‍ನಲ್ಲಿ ದ್ವಿಶತಕ ಬಾರಿಸಿ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಶತಕ ಸಾಧನೆ ಮಾಡಿದ್ದಾರೆ.

    ಆದರೆ ಸೆಲೆಬ್ರಿಟಿಗಳಿಗೆ ಎಲ್ಲವೂ ಅಷ್ಟು ಸುಲಭವಲ್ಲ. ಮುಂಬೈನ ಭಾರತೀಯ ಕ್ರಿಕೆಟ್ ದೈತ್ಯರ ಮುಂದೆ ತನ್ನ ಛಾಪು ಮೂಡಿಸಲು ಯಶಸ್ವಿ 10ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಭಾದೋಹಿ ತೊರೆದಿದ್ದರು. ಆ ಬಳಿಕ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು. ಕ್ರಿಕೆಟಿಗನಾಗುವ ಮೂಲಕ ದೇಶಕ್ಕಾಗಿ ಆಡುವ ಕನಸು ಹೊತ್ತಿದ್ದ ಯಶಸ್ವಿ ಮುಂದೆ ಅನೇಕ ಸವಾಲುಗಳು ಎದುರಾದವು. ಆದರೆ ಎಲ್ಲವನ್ನೂ ಸ್ಥಿರವಾಗಿ ಎದುರಿಸಿದ ಯಶಸ್ವಿ ಜೈಸ್ವಾಲ್ ಮುಂಬೈನ ಬೀದಿಯ ಅಂಗಡಿಯೊಂದರಲ್ಲಿ ಪಾನಿಪುರಿ ಮಾರುತ್ತಿದ್ದರು.

    ಯಶಸ್ವಿ ಜೈಸ್ವಾಲ್ 12ನೇ ವಯಸ್ಸಿನಲ್ಲಿ ರಾಜ ಶಿವಾಜಿ ವಿದ್ಯಾಮಂದಿರ್ (ದಾದರ್) ವಿರುದ್ಧದ ಪಂದ್ಯದಲ್ಲಿ 319 ರನ್ ಗಳಿಸಿದ್ದರು. ಜೈಸ್ವಾಲ್ 2014ರ ಜನವರಿಯಲ್ಲಿ ಅಂಜುಮಾನ್ ಇಸ್ಲಾಂ ಪ್ರೌಢಶಾಲೆ (ಕೋಟೆ) ಪರ ಆಡುತ್ತಿದ್ದರು. ಗೈಲ್ಸ್ ಶೀಲ್ಡ್ ಸ್ಕೂಲ್ ಪಂದ್ಯದಲ್ಲಿ ಅವರು ತ್ರಿಶತಕ ಸಿಡಿಸಿದ್ದರು. ಜೊತೆಗೆ 99ರನ್ ನೀಡಿ 13 ವಿಕೆಟ್ ಪಡೆದಿದ್ದರು. ಕಳೆದ ವರ್ಷ ದೇಶಿ ಕ್ರಿಕೆಟ್‍ನಲ್ಲಿ ಜಾರ್ಖಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದರು. ಈ ಮೂಲಕ ಲಿಸ್ಟ್-ಎ ಟೀಂನಲ್ಲಿ ದ್ವಿಶತಕ ಬಾರಿಸಿದ ಏಳನೇ ಭಾರತೀಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದರು.

    ಈ ಹಿಂದೆ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಟೀಂ ಇಂಡಿಯಾ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ, ಶಿಖರ್ ಧವನ್, ಕರ್ಣ ಕೌಶಲ್ ಮತ್ತು ಸ್ಯಾಮ್ಸನ್ ದ್ವಿಶತಕ ಸಾಧನೆ ಮಾಡಿದ್ದಾರೆ. ಅದರಲ್ಲೂ ಹಿಟ್‍ಮ್ಯಾನ್ ರೋಹಿತ್ ಶರ್ಮ ಅತಿ ಹೆಚ್ಚು ದ್ವಿಶತಕ ಗಳಿಸಿದ್ದಾರೆ.

  • ವೇಗವಾಗಿ ಓಡಿ ಡೈ ಹೊಡೆದು ಕ್ಯಾಚ್- ಪಂದ್ಯಕ್ಕೆ ತಿರುವುಕೊಟ್ಟ ಸಕ್ಸೇನಾ

    ವೇಗವಾಗಿ ಓಡಿ ಡೈ ಹೊಡೆದು ಕ್ಯಾಚ್- ಪಂದ್ಯಕ್ಕೆ ತಿರುವುಕೊಟ್ಟ ಸಕ್ಸೇನಾ

    ಪೊಷೆಫ್‍ಸ್ಟ್ರೂಮ್: ಭಾರತ ಯುವ ತಂಡ ಆಟಗಾರ ದಿವ್ಯಾಂಶ್ ಸಕ್ಸೇನಾ ಪಾಕಿಸ್ತಾನದ ಅಂಡರ್ 19 ತಂಡದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಅಷ್ಟೇ ಅಲ್ಲದೆ ಕ್ಷೇತ್ರ ರಕ್ಷಣೆಯಲ್ಲೂ ಮಿಂಚಿದ್ದಾರೆ.

    ಅಂಡರ್ 19 ವಿಶ್ವಕಪ್ ಟೂರ್ನಿಯ ಭಾಗವಾಗಿ ಮಂಗಳವಾರ ಪೊಷೆಫ್ ಸ್ಟ್ರೂಮ್‍ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಸೆಮಿಫೈನಲ್‍ನಲ್ಲಿ ಸೆಕ್ಸೇನಾ ಅದ್ಭುತ ಕ್ಯಾಚ್ ಪಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಸೆಕ್ಸೇನಾ ಕ್ಯಾಚ್ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಪಾಕಿಸ್ತಾನ 172/10, ಭಾರತ 176/0- ಯುವಪಡೆಯ ಆಟಕ್ಕೆ ಪಾಕ್ ಔಟ್, ಫೈನಲಿಗೆ ಟೀಂ ಇಂಡಿಯಾ

    https://twitter.com/_Cricnews_/status/1224644726361489408

    ಪಾಕಿಸ್ತಾನದ ಬ್ಯಾಟ್ಸ್‍ಮನ್ ಮೊಹಮ್ಮದ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ ತಂಡದ ರನ್ ಏರಿಸಲು ಯತ್ನಿಸಿದರು. ಆದರೆ ಎ.ವಿ.ಅಂಕೋಲೆಕರ್ ಎಸೆದ ಇನ್ನಿಂಗ್ಸಿನ 34ನೇ ಓವರಿನ 3ನೇ ಎಸೆತವನ್ನು ಹ್ಯಾರೀಸ್ ಬೌಂಡರಿಗೆ ಅಟ್ಟಲು ಬಿರುಸಿನ ಹೊಡೆತ ಹೊಡೆದರು. ಈ ವೇಳೆ ಬೌಂಡರಿ ಲೈನ್ ಬಳಿ ನಿಂತಿದ್ದ ದಿವ್ಯಾಂಶ್ ಸಕ್ಸೇನಾ ವೇಗವಾಗಿ ಓಡಿ ಬಂದು ಡೈ ಹೊಡೆದು ಕ್ಯಾಚ್ ಹಿಡಿದು ಸಂಭ್ರಮಿಸಿದರು. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ

    146 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಆಟವಾಡುತ್ತಿದ್ದಾಗ ಹ್ಯಾರಿಸ್ ವಿಕೆಟ್ ಒಪ್ಪಿಸಿದ್ದೇ ಒಪ್ಪಿಸಿದ್ದು ನಂತರ ಪಾಕ್ ಗಳಿಸಿದ್ದು ಕೇವಲ 26 ರನ್. ಈ 26 ರನ್ ಗಳಿಸುವಷ್ಟರಲ್ಲಿ ಪಾಕ್ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಇದನ್ನೂ ಓದಿ: ಕೀಪಿಂಗ್ ಆಯ್ತು, ಈಗ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತ ಕನ್ನಡಿಗ ರಾಹುಲ್

    ಮೊಹಮ್ಮದ್ ಹ್ಯಾರಿಸ್ 21 ರನ್ (15 ಎಸೆತ, ಬೌಂಡರಿ, ಸಿಕ್ಸ್) ಪೇರಿಸಿದ್ದರು. ಪಾಕ್ ತಂಡ ಪರ ಮೊಹಮ್ಮದ್ ಹ್ಯಾರಿಸ್ ಮಾತ್ರ ಸಿಕ್ಸ್ ಸಿಡಿಸಿದ್ದಾರೆ. ಉಳಿದ ಎಲ್ಲಾ ಆಟಗಾರರು ಸಿಕ್ಸ್ ಸಿಡಿಸುವಲ್ಲಿ ವಿಫಲರಾದರು. ಇದನ್ನೂ ಓದಿ: ಟಿ 20ಯಲ್ಲಿ ವೃತ್ತಿ ಜೀವನ ಶ್ರೇಷ್ಠ ಸಾಧನೆಗೈದ ಕನ್ನಡಿಗ ರಾಹುಲ್

    ಪಾಕಿಸ್ತಾನದ ಅಂಡರ್ 19 ತಂಡ ನೀಡಿದ್ದ 173 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತದ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯನ್ನು ಮುರಿಯಲು ಪಾಕ್ ಬೌಲರ್‍ಗಳು ತಿಣುಕಾಡಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಭಾರತವು ಯಾವುದೇ ವಿಕೆಟ್ ಕಳೆದುಕೊಳ್ಳದೆ 35.2 ಓವರಿನಲ್ಲಿ 176 ರನ್ ಪೇರಿಸಿ ಜಯಗಳಿಸಿತು.

    ಪಾಕ್ ವಿರುದ್ಧ ಭಾರತವು 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಪಾಕ್ ತಂಡವು ಅಂಡರ್ 19 ವಿಶ್ವಕಪ್ ಟೂರ್ನಿಯಿಂದ ಬಿದ್ದಿದ್ದು, ಭಾರತವು 7ನೇ ಬಾರಿ ಫೈನಲ್ ಪ್ರವೇಶ ಮಾಡಿದೆ.

  • ಪಾಕಿಸ್ತಾನ 172/10, ಭಾರತ 176/0- ಯುವಪಡೆಯ ಆಟಕ್ಕೆ ಪಾಕ್ ಔಟ್, ಫೈನಲಿಗೆ ಟೀಂ ಇಂಡಿಯಾ

    ಪಾಕಿಸ್ತಾನ 172/10, ಭಾರತ 176/0- ಯುವಪಡೆಯ ಆಟಕ್ಕೆ ಪಾಕ್ ಔಟ್, ಫೈನಲಿಗೆ ಟೀಂ ಇಂಡಿಯಾ

    – ಜೈಸ್ವಾಲ್ ಶತಕ, ಸಕ್ಸೇನಾ ಅರ್ಧಶಕತ ಸಂಭ್ರಮ
    – ಮೊದಲ ವಿಕೆಟಿಗೆ 176 ರನ್ ಜೊತೆಯಾಟಕ್ಕೆ ಅಭಿಮಾನಿಗಳು ಫಿದಾ

    ಪೊಷೆಫ್‍ಸ್ಟ್ರೂಮ್: ಸುಶಾಂತ್ ಮಿಶ್ರಾ ಸೂಪರ್ ಬೌಲಿಂಗ್, ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಭರ್ಜರಿ ಬ್ಯಾಟಿಂಗ್‍ನಿಂದ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧದ ಅಂಡರ್ 19 ವಿಶ್ವಕಪ್​ನಲ್ಲಿ ಭರ್ಜರಿ ಗೆಲುವು ದಾಖಲಿಸಿ, ಅಜೇಯವಾಗಿ ಫೈನಲಿಗೆ ಲಗ್ಗೆ ಇಟ್ಟಿದೆ.

    ಮಂಗಳವಾರ ಪೊಷೆಫ್‍ಸ್ಟ್ರೂಮ್‍ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‍ನಲ್ಲಿ ಭಾರತವು 88 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್ 105 ರನ್ (113 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ 59 ರನ್ (99 ಎಸೆತ, 6 ಬೌಂಡರಿ) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 7ನೇ ಬಾರಿ ಭಾರತ ಫೈನಲ್ ಪ್ರವೇಶ ಮಾಡಿದೆ.

    ಪಾಕಿಸ್ತಾನದ ಅಂಡರ್ 19 ತಂಡ ನೀಡಿದ್ದ 173 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತದ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯನ್ನು ಮುರಿಯಲು ಪಾಕ್ ಬೌಲರ್‍ಗಳು ತಿಣುಕಾಡಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಭಾರತವು ಯಾವುದೇ ವಿಕೆಟ್ ಕಳೆದುಕೊಳ್ಳದೆ 35.2 ಓವರಿನಲ್ಲಿ 176 ರನ್ ಪೇರಿಸಿ ಜಯಗಳಿಸಿತು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನ ಅಂಡರ್ 19 ತಂಡವನ್ನು ಭಾರತದ ಯುವ ಪಡೆ ಸಮರ್ಥವಾಗಿ ಕಟ್ಟಿ ಹಾಕಿತ್ತು. ಇನ್ನಿಂಗ್ಸ್ ನ ಎರಡನೇ ಓವರಿನಲ್ಲಿ ಪಾಕ್ ಒಂದು ವಿಕೆಟ್ ಕಳೆದುಕೊಂಡು ಆಘಾತಕ್ಕೆ ತುತ್ತಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಹೈದರ್ ಅಲಿ ವಿಕೆಟ್ ಕಾಯ್ದುಕೊಂಡು ಆಡಿದರಾದರೂ ಮೈದಾನಕ್ಕಿಳಿದ ಉಳಿದ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿದ್ದರು. ಇದರಿಂದಾಗಿ ಪಾಕ್ ತಂಡವು ಮೂರನೇ ವಿಕೆಟ್‍ಗೆ 96 ರನ್ ಪೇರಿಸಿತ್ತು.

    ಹೈದರ್ ಅಲಿ, ರೋಹೈಲ್ ನಜೀರ್ ಹಾಗೂ ಮೊಹಮ್ಮದ್ ಹರಿಸ್ ಮಾತ್ರ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಆದರೆ ಎಂಟು ಜನ ಆಟಗಾರರು ಎರಡಂಕಿ ದಾಟಲು ವಿಫರಾದರು. ಈ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಕೇವಲ ಒಂದು ಸಿಕ್ಸ್ ಸಿಡಿಸಿದ್ದರು. 146 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಾಕ್ 26 ರನ್‍ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು 172 ರನ್‍ಗೆ ಆಲೌಟ್ ಆಗಿತ್ತು.

    ಮಿಶ್ರಾ ಕಮಾಲ್:
    ಭಾರತದ ಯುವ ಪಡೆಯ ಬೌಲರ್ ಸುಶಾಂತ್ ಮಿಶ್ರಾ 8.1 ಓವರ್ ಬೌಲಿಂಗ್ ಮಾಡಿ 28 ರನ್ ನೀಡಿ, 3 ವಿಕೆಟ್ ಕಿತ್ತು ಮಿಂಚಿದರು. ಕಾರ್ತಿಕ್ ತ್ಯಾಗಿ ಹಾಗೂ ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಪಡೆದರೆ, ಎ.ವಿ.ಅಂಕೋಲೆಕರ್ ಹಾಗೂ ಯಶಸ್ವಿ ಜೈಸ್ವಾಲ್ ತಲಾ ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.

    ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ನಡುವೆ ಫೆ.6 ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು ಫೆ.9 ರಂದು ಫೈನಲ್ ಪಂದ್ಯ ನಡೆಯಲಿದೆ.