Tag: U19 World Cup

  • U19 World Cup ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ ಯಾರು ಗೊತ್ತಾ?

    U19 World Cup ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ ಯಾರು ಗೊತ್ತಾ?

    ಮುಂಬೈ: ಟೀಂ ಇಂಡಿಯಾ ಅಂಡರ್-19 ವಿಶ್ವಕಪ್ ಜಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ, 1948ರ ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದ ತರ್ಲೋಚನ್ ಸಿಂಗ್ ಬಾವಾರ ಮೊಮ್ಮಗ ಎಂಬ ವಿಷಯ ಇದೀಗ ರಿವೀಲ್ ಆಗಿದೆ.

    2022ರ ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಇಂಗ್ಲೆಂಡ್ ಅಲ್ಪ ಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ ಬಾವಾ ಫೈನಲ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು. ಟೀಂ ಇಂಡಿಯಾದ ಅಂಡರ್-19 ತಂಡದಲ್ಲಿ ಆಲ್‍ರೌಂಡರ್ ಆಗಿ ತಂಡದೊಂದಿಗಿದ್ದ ರಾಜ್‍ಬಾವಾ ಪ್ರತಿ ಪಂದ್ಯದಲ್ಲೂ ಅದ್ಭುತ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಇದನ್ನೂ ಓದಿ: ಧೋನಿ ಸಿಕ್ಸರ್ ನೆನಪಿಸಿದ ದಿನೇಶ್ ಬಣ ಫಿನಿಶಿಂಗ್ ಶಾಟ್

    ರಾಜ್ ಬಾವಾರದ್ದು, ಹಿಂದಿನಿಂದಲೂ ಕ್ರೀಡಾ ಆಸಕ್ತರ ಕುಟುಂಬ ರಾಜ್ ಬಾವಾರ ಅಜ್ಜ ತರ್ಲೋಚನ್ ಸಿಂಗ್ ಬಾವಾ ಭಾರತದ ಹಾಕಿ ತಂಡದಲ್ಲಿ ಮಿಂಚಿದ ಪ್ರತಿಭೆ. 1948ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಹಾಕಿಯಲ್ಲಿ ಚಿನ್ನಗೆದ್ದಾಗ ಭಾರತದ ಜಯದಲ್ಲಿ ತರ್ಲೋಚನ್ ಸಿಂಗ್ ಬಾವಾ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅವರ ಮೊಮ್ಮಗ 74 ವರ್ಷದ ಬಳಿಕ ಭಾರತದ ಮುಡಿಗೆ ಪ್ರಶಸ್ತಿ ಗೆದ್ದುಕೊಡಲು ಪ್ರಮುಖ ಪಾತ್ರ ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಕೈಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ

    ರಾಜ್ ಬಾವಾ ಅಂಡರ್-19 ವಿಶ್ವಕಪ್‍ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ 2ನೇ ಮತ್ತು ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ರಾಜ್ ಬಾವ ಒಟ್ಟು 252 ರನ್ ಮತ್ತು 9 ವಿಕೆಟ್ ಪಡೆದು ಯುವ ಆಲ್‍ರೌಂಡರ್ ಆಟಗಾರನಾಗಿ ಭರವಸೆ ಮೂಡಿಸಿದ್ದಾರೆ.

  • 21 ರನ್‍ಗೆ ಭಾರತದ 6 ವಿಕೆಟ್ ಪತನ- ಬಾಂಗ್ಲಾಗೆ 178 ರನ್ ಗುರಿ

    21 ರನ್‍ಗೆ ಭಾರತದ 6 ವಿಕೆಟ್ ಪತನ- ಬಾಂಗ್ಲಾಗೆ 178 ರನ್ ಗುರಿ

    – ಜೈಸ್ವಾಲ್ ಏಕಾಂಗಿ ಹೋರಾಟಕ್ಕೆ ತಿಲಕ್ ಆಸರೆ

    ಪೋಷೆಫ್‍ಸ್ಟ್ರೋಮ್: ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ, ತಿಲಕ್ ವರ್ಮಾ ಆಸರೆಯಿಂದ ಭಾರತದ ಕಿರಿಯ ತಂಡವು ಬಾಂಗ್ಲಾದೇಶ ಅಂಡರ್ 19 ತಂಡಕ್ಕೆ 178 ರನ್ ಸಾಧಾರಣ ಮೊತ್ತದ ಗುರಿ ನೀಡಿದೆ.

    ಅಂಡರ್ 19 ವಿಶ್ವಕಪ್ ಟೂರ್ನಿಯ ಪೋಷೆಫ್‍ಸ್ಟ್ರೋಮ್‍ಯಲ್ಲಿ ಭಾಗವಾಗಿ ಭಾನುವಾರ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತವು 47.2 ಓವರಿಗೆ ಎಲ್ಲಾ ವಿಕೆಟ್ ಕಳೆದುಕೊಂಡು 177 ರನ್ ಪೇರಿಸಿದೆ. ತಂಡದ ಪರ ಯಶಸ್ವಿ ಜೈಸ್ವಾಲ್ 88 ರನ್ (121 ಎಸೆತ, 8 ಬೌಂಡಿರಿ, ಒಂದು ಸಿಕ್ಸ್), ತಿಲಕ್ ವರ್ಮಾ 38 ರನ್ (65 ಎಸೆತ, 3 ಬೌಂಡರಿ) ಹಾಗೂ ಧ್ರುವ ಜುರೇಲ್ 22 ರನ್ (38 ಎಸೆತ, 1 ಬೌಂಡರಿ) ಗಳಿಸಿದರು. ಇದನ್ನೂ ಓದಿ: ಪಾಕ್ ವಿರುದ್ಧ ಶತಕ ಸಿಡಿಸಿದ ಪಾನಿಪುರಿ ಮಾರುತ್ತಿದ್ದ 18ರ ಪೋರ ಜೈಸ್ವಾಲ್ 

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶದ ಅಂಡರ್ 19 ತಂಡವು ಭಾರತದ ಕಿರಿಯರ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಇನ್ನಿಂಗ್ಸ್ ನ ಮೊದಲೆರಡು ಓವರ್‍ಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ನಂತರದ ಓವರ್‌ಗಳಲ್ಲಿ ಈ ಜೋಡಿಯು ನಿಧಾಗತಿಯ ಜೊತೆಯಾಟವಾಡಿತು. ಇದರಿಂದಾಗಿ ಇನ್ನಿಂಗ್ಸ್ ನ ಆರನೇ ಓವರ್ ಮುಕ್ತಾಯಕ್ಕೆ ಭಾರತದ ಕಿರಿಯರ ತಂಡ 8 ರನ್ ಗಳಿಸಿತ್ತು. ನಂತರ ಓವರಿನಲ್ಲಿ 2 ರನ್ (17 ಎಸೆತ) ಗಳಿಸಿದ್ದ ದಿವ್ಯಾಂಶ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಯಶಸ್ವಿ ಜೈಸ್ವಾಲ್‍ಗೆ ಸಾಥ್ ನೀಡಿದ ತಿಲಕ್ ವರ್ಮಾ ಉತ್ತಮ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು. ಈ ಜೋಡಿಯು ಎರಡನೇ ವಿಕೆಟ್‍ಗೆ 94 ರನ್‍ಗಳ ಕೊಡುಗೆ ನೀಡಿತು. ತನ್ಜೀದ್ ಹಸನ್ ಇನ್ನಿಂಗ್ಸ್ 29ನೇ ಓವರಿನ ಕೊನೆಯ ಎಸೆತದಲ್ಲಿ ತಿಲಕ್ ವರ್ಮಾ ಅವರ ವಿಕೆಟ್ ಕಿತ್ತರು. ತಿಲಕ್ ವರ್ಮಾ 38 ರನ್ (65 ಎಸೆತ, 3 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತದ ಕಿರಿಯರ ತಂಡ ಎರಡು ವಿಕೆಟ್‍ಗೆ 103 ರನ್ ಗಳಿಸಿತು.

    ತಿಲಕ್ ವರ್ಮಾ ವಿಕೆಟ್ ಬಳಿಕ ಮೈದಾನಕ್ಕಿಳಿದ ಭಾರತದ ಅಂಡರ್ 19 ಕ್ರಿಕೆಟ್ ತಂಡದ ನಾಯಕ ಪ್ರಿಯಂ ಗರ್ಗ್ 7 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಈ ಮಧ್ಯೆ ಏಕಾಂಗಿ ಹೋರಾಟ ನಡೆಸಿದ್ದ ಯಶಸ್ವಿ ಜೈಸ್ವಾಲ್ 89ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಈ ಸಂಭ್ರಮದ ಬೆನ್ನಲ್ಲೇ ಜೈಸ್ವಾಲ್ ಇನ್ನಿಂಗ್ಸ್ ನ ಮೊದಲ ಸಿಕ್ಸ್ ಸಿಡಿಸಿದರು.

    ಧ್ರುವ ಜುರೇಲ್ ಜೊತೆಗೂಡಿ ಜೈಸ್ವಾಲ್ 42 ರನ್ ಜೊತೆಯಾಟದ ಕೊಡುಗೆ ನೀಡಿದ ಜೈಸ್ವಾಲ್ ವಿಕೆಟ್ ಒಪ್ಪಿಸಿದರು. ಜೈಸ್ವಾಲ್ 88 ರನ್ (121 ಎಸೆತ, 8 ಬೌಂಡಿರಿ, ಒಂದು ಸಿಕ್ಸ) ಗಳಿಸಿ ತಂಡಕ್ಕೆ ಆಸರೆಯಾದರು. ಬಳಿಕ ಮೈದಾನಕ್ಕಿಳಿದ ಸಿದ್ಧೇಶ್ ವೀರ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರು. ಬಳಿಕ ಮೈದಾನಕ್ಕಿಳಿದ ಆಟಗಾರರು ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು.

    ಜೈಸ್ವಾಲ್ ಸಾಧನೆ:
    ಅಂಡರ್ 19 ವಿಶ್ವಕಪ್‍ನಲ್ಲಿ ಭಾರತದ ಕಿರಿಯರ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಜೈಸ್ವಾಲ್ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 2020ರ ಅಂಡರ್ 19 ವಿಶ್ವಕಪ್‍ನಲ್ಲಿ ಯಶಸ್ವಿ ಜೈಸ್ವಾಲ್ ಒಟ್ಟು 400 ರನ್ ಗಳಿಸಿದ್ದಾರೆ. 2018ರ ಅಂಡರ್ 19 ವಿಶ್ವಕಪ್‍ನಲ್ಲಿ 372 ರನ್ ಗಳಿಸಿದ್ದ ಶುಭಮನ್ ಗಿಲ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಪಟ್ಟಿಯಲ್ಲಿ ಶಿಖರ್ ಧವನ್ ಇದ್ದಾರೆ. ಅವರು 2004ರ ಅಂಡರ್ 19 ವಿಶ್ವಕಪ್‍ನಲ್ಲಿ 505 ರನ್ ಗಳಿಸಿದ್ದರು. ಉಳಿದಂತೆ ಸರ್ಫರಾಜ್ ಖಾನ್ 2016ರ ಅಂಡರ್ 19 ವಿಶ್ವಕಪ್‍ನಲ್ಲಿ 355 ರನ್ ಹಾಗೂ ಚೇತೇಶ್ವರ್ 2006ರಲ್ಲಿ 349 ರನ್ ದಾಖಲಿಸಿದ್ದರು.

  • ಶುಭಮನ್ ಗಿಲ್ ಹಿಂದಿಕ್ಕಿ ಯಶಸ್ವಿ ಜೈಸ್ವಾಲ್ ವಿಶೇಷ ಸಾಧನೆ

    ಶುಭಮನ್ ಗಿಲ್ ಹಿಂದಿಕ್ಕಿ ಯಶಸ್ವಿ ಜೈಸ್ವಾಲ್ ವಿಶೇಷ ಸಾಧನೆ

    ಪೋಷೆಫ್‍ಸ್ಟ್ರೋಮ್: 2020ರ ಅಂಡರ್ 19 ವಿಶ್ವಕಪ್‍ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಯಶಸ್ವಿ ಜೈಸ್ವಾಲ್ ವಿಶೇಷ ಸಾಧನೆ ಮಾಡಿದ್ದಾರೆ.

    ಅಂಡರ್ 19 ವಿಶ್ವಕಪ್ ಟೂರ್ನಿಯ ಭಾಗವಾಗಿ ಭಾನುವಾರ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಏಕಾಂಗಿಯಾಗಿ ಹೋರಾಡಿದರು. ಈ ಪಂದ್ಯದಲ್ಲಿ ಜೈಸ್ವಾಲ್ 88 ರನ್ (121 ಎಸೆತ, 8 ಬೌಂಡಿರಿ, ಒಂದು ಸಿಕ್ಸ) ಗಳಿಸಿ ತಂಡಕ್ಕೆ ಆಸರೆಯಾದರು. ಇದನ್ನೂ ಓದಿ: ಪಾಕ್ ವಿರುದ್ಧ ಶತಕ ಸಿಡಿಸಿದ ಪಾನಿಪುರಿ ಮಾರುತ್ತಿದ್ದ 18ರ ಪೋರ ಜೈಸ್ವಾಲ್ 

    ಫೈನಲ್ ಪಂದ್ಯದಲ್ಲಿ 88 ರನ್ ಗಳಿಸುವ ಮೂಲಕ ಜೈಸ್ವಾಲ್ ವಿಶೇಷ ಸಾಧನೆಗೆ ಪಾತ್ರರಾದರು. ಅಂಡರ್ 19 ವಿಶ್ವಕಪ್‍ನಲ್ಲಿ ಭಾರತದ ಕಿರಿಯರ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಜೈಸ್ವಾಲ್ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

    ಈ ಪಂದ್ಯ ಸೇರಿದಂತೆ 2020ರ ಅಂಡರ್ 19 ವಿಶ್ವಕಪ್‍ನಲ್ಲಿ ಯಶಸ್ವಿ ಜೈಸ್ವಾಲ್ ಒಟ್ಟು 400 ರನ್ ಗಳಿಸಿದ್ದಾರೆ. 2018ರ ಅಂಡರ್ 19 ವಿಶ್ವಕಪ್‍ನಲ್ಲಿ 372 ರನ್ ಗಳಿಸಿದ್ದ ಶುಭಮನ್ ಗಿಲ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ರನ್ ದಾಖಲೆಯ ಪಟ್ಟಿಯಲ್ಲಿ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದಾರೆ. ಅವರು 2004ರ ಅಂಡರ್ 19 ವಿಶ್ವಕಪ್‍ನಲ್ಲಿ 505 ರನ್ ಗಳಿಸಿದ್ದರು. ಉಳಿದಂತೆ ಸರ್ಫರಾಜ್ ಖಾನ್ 2016ರ ಅಂಡರ್ 19 ವಿಶ್ವಕಪ್‍ನಲ್ಲಿ 355 ರನ್ ಹಾಗೂ ಚೇತೇಶ್ವರ್ 2006ರ ಅಂಡರ್ 19 ವಿಶ್ವಕಪ್‍ನಲ್ಲಿ 349 ರನ್ ದಾಖಲಿಸಿದ್ದಾರೆ.

  • 26 ರನ್‍ಗಳಿಗೆ 6 ವಿಕೆಟ್ ಪತನ – 172ಕ್ಕೆ ಪಾಕ್ ಆಲೌಟ್

    26 ರನ್‍ಗಳಿಗೆ 6 ವಿಕೆಟ್ ಪತನ – 172ಕ್ಕೆ ಪಾಕ್ ಆಲೌಟ್

    – 3 ವಿಕೆಟ್ ಕಿತ್ತ ಮಿಶ್ರಾ
    – ಬಿಷ್ಣೋಯಿ, ತ್ಯಾಗಿಗೆ ತಲಾ ಎರಡು ವಿಕೆಟ್
    – ಕೇವಲ ಒಂದು ಸಿಕ್ಸ್ ಹೊಡೆದ ಪಾಕ್ ಆಟಗಾರರು

    ಪೊಷೆಫ್‍ಸ್ಟ್ರೂಮ್: ಭಾರತ ಯುವ ತಂಡದ ಬೌಲರ್‌ಗಳ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಪಾಕಿಸ್ತಾನದ ಅಂಡರ್ 19 ತಂಡವು 172 ರನ್ ಆಲೌಟ್ ಆಗಿದೆ.

    ಅಂಡರ್ 19 ವಿಶ್ವಕಪ್ ಟೂರ್ನಿಯ ಭಾಗವಾಗಿ ಮಂಗಳವಾರ ಪೊಷೆಫ್ ಸ್ಟ್ರೂಮ್‍ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಸೆಮಿಫೈನಲ್‍ನಲ್ಲಿ ಪಾಕಿಸ್ತಾನ ತಂಡವು 43.1 ಓವರಿನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 172 ರನ್ ಪೇರಿಸಲು ಶಕ್ತವಾಯಿತು. ಪಾಕ್ ಪರ ಹೈದರ್ ಅಲಿ 56 ರನ್ (77 ಎಸೆತ, 9 ಬೌಂಡರಿ), ರೋಹೈಲ್ ನಜೀರ್ 62 ರನ್ (102 ಎಸೆತ, 6 ಬೌಂಡರಿ) ಹಾಗೂ ಮೊಹಮ್ಮದ್ ಹರಿಸ್ 21 ರನ್ (15 ಎಸೆತ, ಬೌಂಡರಿ, ಸಿಕ್ಸ್) ಪೇರಿಸಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಅಂಡರ್ 19 ತಂಡವನ್ನು ಭಾರತದ ಯುವ ಪಡೆ ಸಮರ್ಥವಾಗಿ ಕಟ್ಟಿ ಹಾಕಿತು. ಇನ್ನಿಂಗ್ಸ್ ನ ಎರಡನೇ ಓವರಿನಲ್ಲಿ ಪಾಕ್ ಒಂದು ವಿಕೆಟ್ ಕಳೆದುಕೊಂಡು ಆಘಾತಕ್ಕೆ ತುತ್ತಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಹೈದರ್ ಅಲಿ ವಿಕೆಟ್ ಕಾಯ್ದುಕೊಂಡು ಆಡಿದರಾದರೂ ಮೈದಾನಕ್ಕಿಳಿದ ಉಳಿದ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಪಾಕ್ ತಂಡವು ಮೂರನೇ ವಿಕೆಟ್‍ಗೆ 96 ರನ್ ಪೇರಿಸಿತು.

    ಹೈದರ್ ಅಲಿ, ರೋಹೈಲ್ ನಜೀರ್ ಹಾಗೂ ಮೊಹಮ್ಮದ್ ಹರಿಸ್ ಮಾತ್ರ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಆದರೆ ಎಂಟು ಜನ ಆಟಗಾರರು ಎರಡಂಕಿ ದಾಟಲು ವಿಫರಾದರು. ಈ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರು ಕೇವಲ ಒಂದು ಸಿಕ್ಸ್ ಸಿಡಿಸಿದ್ದಾರೆ. 146 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಾಕ್ 26 ರನ್‍ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು 172 ರನ್‍ಗೆ ಆಲೌಟ್ ಆಯಿತು.

    ಮಿಶ್ರಾ ಕಮಾಲ್:
    ಭಾರತದ ಯುವ ಪಡೆಯ ಬೌಲರ್ ಸುಶಾಂತ್ ಮಿಶ್ರಾ 8.1 ಓವರ್ ಬೌಲಿಂಗ್ ಮಾಡಿ 28 ರನ್ ನೀಡಿ, 3 ವಿಕೆಟ್ ಕಿತ್ತು ಮಿಂಚಿದರು. ಕಾರ್ತಿಕ್ ತ್ಯಾಗಿ ಹಾಗೂ ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಪಡೆದರೆ, ಎ.ವಿ.ಅಂಕೋಲೆಕರ್ ಹಾಗೂ ಯಶಸ್ವಿ ಜೈಸ್ವಾಲ್ ತಲಾ ಒಂದು ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾದರು.

    ವಿಕೆಟ್ ಪತನ:
    ಮೊದಲ ವಿಕೆಟ್- 9 ರನ್
    ಎರಡನೇ ವಿಕೆಟ್- 34 ರನ್
    ಮೂರನೇ ವಿಕೆಟ್- 96 ರನ್
    ನಾಲ್ಕನೇ ವಿಕೆಟ್- 118 ರನ್
    ಐದನೇ ವಿಕೆಟ್- 146 ರನ್
    ಆರನೇ ವಿಕೆಟ್- 156 ರನ್
    ಏಳನೇ ವಿಕೆಟ್- 163 ರನ್
    ಎಂಟನೇ ವಿಕೆಟ್- 196 ರನ್
    ಒಂಬತ್ತನೇ ವಿಕೆಟ್- 172 ರನ್
    ಹತ್ತನೇ ವಿಕೆಟ್- 172 ರನ್