Tag: u.u.lalit

  • ಮದ್ಯಪಾನ ತಡೆ ನೀತಿ ಜಾರಿಗೆ ತರಲು ಮನವಿ – ಈ ವಿಷಯವನ್ನು ಮುಟ್ಟುವುದಿಲ್ಲ ಎಂದ ಸುಪ್ರೀಂಕೋರ್ಟ್

    ಮದ್ಯಪಾನ ತಡೆ ನೀತಿ ಜಾರಿಗೆ ತರಲು ಮನವಿ – ಈ ವಿಷಯವನ್ನು ಮುಟ್ಟುವುದಿಲ್ಲ ಎಂದ ಸುಪ್ರೀಂಕೋರ್ಟ್

    ನವದೆಹಲಿ: ರಾಷ್ಟ್ರಮಟ್ಟದಲ್ಲಿ ಮದ್ಯಪಾನ ತಡೆ ನೀತಿಯನ್ನು (national liquor policy) ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠ ವಿಚಾರಣೆಗೆ ನಿರಾಕರಿಸಿದೆ.

    ವಿನಿಯೋಗ್ ಪರಿವಾರ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಈ ಪ್ರಕರಣ ಆದಾಯದ ಅಂಶದಿಂದ ಕೂಡಿದೆ. ಕೆಲವು ಸಂದರ್ಭಗಳಲ್ಲಿ ನಾವು ಸೂಚನೆಗಳನ್ನು ನೀಡಿದರೆ ಅದು ರಾಜ್ಯ ಸರ್ಕಾರದ ಆದಾಯವನ್ನು ನಿರ್ಬಂಧಿಸಿದಂತಾಗಲಿದೆ. ಈ ಆದಾಯವನ್ನು ಸರ್ಕಾರಗಳು ಸಾಮಾಜಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿವೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಮನವಿಯು ಸರ್ಕಾರ ಹೊಸ ನೀತಿ ಹೊಂದಲು ನಿರ್ದೇಶಿಸುವಂತಿದೆ. ನೀತಿ ರೂಪಿಸಲು ಸೂಚಿಸುವುದು ನಮ್ಮ ವ್ಯಾಪ್ತಿ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ (U.U.Lalit) ಹೇಳಿದರು. ಇದನ್ನೂ ಓದಿ: ಕೊಹಿನೂರ್‌ ವಜ್ರ ಜಗನ್ನಾಥ ದೇವರಿಗೆ ಸೇರಿದ್ದು; ಬ್ರಿಟನ್‌ನಿಂದ ವಾಪಸ್‌ ತರಿಸಿ – ರಾಷ್ಟ್ರಪತಿಗೆ ಮನವಿ

    ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಈ ಸಮಸ್ಯೆಯು ಭಾರತದ ಸಂವಿಧಾನದಲ್ಲಿ ಸಮಕಾಲೀನ ಪಟ್ಟಿಯಲ್ಲಿದೆ. ಆದರೂ ಕೇಂದ್ರ ಸರ್ಕಾರವೂ ಸಮಸ್ಯೆಯನ್ನು ಸಂಪೂರ್ಣವಾಗಿ ಕೈತೊಳೆದುಕೊಂಡಿದೆ. ಇದರಿಂದ ಆರೋಗ್ಯ ಸಂಬಂಧಿ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೇ ಅನೇಕ ಕುಟುಂಬಗಳಿಗೆ ಇದು ಮಾರಕವೂ ಆಗಿದೆ ಎಂದರು.

    ಅದೇನೆ ಇದ್ದರೂ ನಾವು ಈ ಬಗ್ಗೆ ನೀತಿಗಳನ್ನು ರೂಪಿಸಲು ನಿರ್ದೇಶನ ನೀಡಲು ಸಾಧ್ಯವಿಲ್ಲ. ಈ ಅರ್ಜಿಯ ವಿಚಾರಣೆ ಬೇರೆಯ ಸ್ವರೂಪ ಪಡೆಯಲಿದೆ. ನೀವೂ ಬೇಕಾದ್ದನ್ನು ಮಾಡಬಹುದು. ನಾವು ಈ ಅರ್ಜಿಯನ್ನು ಮುಟ್ಟುವುದಿಲ್ಲ ಎಂದು ಅರ್ಜಿ ವಜಾ ಮಾಡುವ ಮುನ್ನ ಪೀಠ ಸ್ಪಷ್ಟಪಡಿಸಿತು. ಇದನ್ನೂ ಓದಿ: ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

    Live Tv
    [brid partner=56869869 player=32851 video=960834 autoplay=true]

  • ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಮೂರ್ತಿ ಯು.ಯು.ಲಲಿತ್‌ ಅವರ ಹೆಸರನ್ನು ಶಿಫಾರಸು ಮಾಡಿ ಸಿಜೆಐ ಎನ್‌.ವಿ.ರಮಣ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಎನ್.ವಿ.ರಮಣ ಅವರು 2022ರ ಆಗಸ್ಟ್ 26 ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೆ ನ್ಯಾ.ಯು.ಯು.ಲಲಿತ್‌ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ರಮಣ ಅವರು ಭಾರತದ 48ನೇ ಮತ್ತು ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾಯಮೂರ್ತಿ ಲಲಿತ್ ಅವರು 49ನೇ ಸಿಜೆಐ ಆಗಲಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

    ಉದಯ್ ಉಮೇಶ್ ಲಲಿತ್ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು. ನ್ಯಾಯಾಧೀಶರಾಗುವ ಮೊದಲು, ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದರು. ನ್ಯಾಯಮೂರ್ತಿ ಲಲಿತ್ ಅವರು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಏರಿದ 6ನೇ ಹಿರಿಯ ವಕೀಲರಾಗಿದ್ದಾರೆ.

    ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (CJI) ಆಗುವ ಹಾದಿಯಲ್ಲಿರುವ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ‘ತ್ರಿವಳಿ ತಲಾಖ್’ ರದ್ದು ಸೇರಿದಂತೆ ಹಲವಾರು ಮಹತ್ವದ ತೀರ್ಪುಗಳ ಭಾಗವಾಗಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಭಾರತದ ಕಮಾಲ್- ಸ್ಕ್ವಾಷ್‌ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್

    Live Tv
    [brid partner=56869869 player=32851 video=960834 autoplay=true]