Tag: u turn film

  • ಕನ್ನಡತಿ ಶ್ರದ್ಧಾ ಶ್ರೀನಾಥ್‌ಗೆ ಬಾಲಿವುಡ್‌ನಿಂದ ಬಂತು ಬಿಗ್ ಆಫರ್

    ಕನ್ನಡತಿ ಶ್ರದ್ಧಾ ಶ್ರೀನಾಥ್‌ಗೆ ಬಾಲಿವುಡ್‌ನಿಂದ ಬಂತು ಬಿಗ್ ಆಫರ್

    ಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಶ್ರದ್ಧಾ ಶ್ರೀನಾಥ್ ಇದೀಗ ಮತ್ತೊಂದು ಬಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ ಹಿಂದಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶ್ರದ್ಧಾ ಇದೀಗ ಮತ್ತೆ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ.

    ಯೂ ಟರ್ನ್, ಆಪರೇಷನ್ ಅಲಮೇಲಮ್ಮ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟಿ ಶ್ರದ್ಧಾ ಇದೀಗ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಬಾಲಿವುಡ್‌ನ `ಮಿಲನ್ ಟಾಕೀಸ್’ ಚಿತ್ರದಲ್ಲಿ ಶ್ರದ್ಧಾ ಈ ಹಿಂದೆ ನಟಿಸಿದ್ದರು. ಮಿಲಿಂದ್ ಧೈಮಡೆ ನಿರ್ದೇಶನದ `ಲೆಟರ್ಸ್ ಟು ಮಿಸ್ಟರ್ ಖನ್ನಾ’ ರಣ್‌ಬೀರ್‌ ಕಪೂರ್‌ ತಾಯಿ ನೀತು ಕಪೂರ್, ಸನ್ನಿ ಕೌಶಲ್ ಜೊತೆ ಶ್ರದ್ಧಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣದ ವೇಳೆ ತೆಗೆದ ಫೋಟೋ ಸಖತ್ ವೈರಲ್ ಆಗುತ್ತಿದೆ.

    ತಾಯಿ ಮತ್ತು ಮಗನ ಬಂಧ ಸಾರುವಂತಹ ಕಥೆಯಲ್ಲಿ ನೀತು ಕಪೂರ್ ಜೊತೆ ಶ್ರದ್ಧಾ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ. ಎಂದೂ ಕಾಣಿಸಿಕೊಂಡಿರದ ಡಿಫರೆಂಟ್ ರೋಲ್‌ನಲ್ಲಿ ಯೂ ಟರ್ನ್ ಬೆಡಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಲಯನ್ಸ್‌ಗೇಟ್‌ ಇಂಡಿಯಾ ಸ್ಟುಡಿಯೋ ಸಾಥ್ ನೀಡುತ್ತಿದೆ. ಇದನ್ನೂ ಓದಿ:ತಮಗಿಂತ 33 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ನಟ ಪೃಥ್ವಿರಾಜ್

    ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ಈ ಚಿತ್ರದ ಮತ್ತಷ್ಟು ಅಪ್‌ಡೇಟ್ ಅನ್ನ ಚಿತ್ರತಂಡ ಕೊಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?

    ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?

    `ಯೂ ಟರ್ನ್’ ಬೆಡಗಿ ಶ್ರದ್ಧಾ ಶ್ರೀನಾಥ್ ಫುಲ್ ಗರಂ ಆಗಿದ್ದಾರೆ. ತನ್ನ ಹೆಸರನ್ನು ತಪ್ಪಾಗಿ ಬರೆಯುವವರಿಗೆ ಕರೆದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ಸ್ಟಾಗ್ರಾಂನಲ್ಲಿ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.

    ಕನ್ನಡತಿ ಶ್ರದ್ಧಾ ಶ್ರೀನಾಥ್ `ಯೂ ಟರ್ನ್’, `ಆಪರೇಷನ್ ಅಲಮೇಲಮ್ಮ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ಈಗ ಬಹುಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಇನ್ನು ಚಿತ್ರರಂಗದಲ್ಲಿ ಶ್ರದ್ಧಾ ದಾಸ್, ಶ್ರದ್ಧಾ ಕಪೂರ್ ಅಂತಾ ಸಾಕಷ್ಟು ನಟಿಯರಿದ್ದಾರೆ. ಹೀಗಿರುವಾಗ ಮಾಧ್ಯಮವೊಂದು ಶ್ರದ್ಧಾ ಶ್ರೀನಾಥ್ ಹೆಸರನ್ನ ತಪ್ಪಾಗಿ ಬರೆಯಲಾಗಿದೆ. ಹಾಗಾಗಿ ಶ್ರದ್ಧಾ ಅಪ್‌ಸೆಟ್ ಆಗಿ ತಮ್ಮ ಹೆಸರನ್ನೇ ಬದಲಿಸಿ, ತಪ್ಪಾಗಿ ತಮ್ಮ ಹೆಸರನ್ನು ಹೇಳುವವರಿಗೆ ಟ್ವಿಟ್ಟರ್‌ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:‘ಆಪರೇಷನ್ ಲಂಡನ್ ಕೆಫೆ’ ಚಿತ್ರತಂಡದಿಂದ ಮೇಘಾ ಶೆಟ್ಟಿ ಹುಟ್ಟು ಹಬ್ಬಕ್ಕೆ ಗಿಫ್ಟ್

    ನನ್ನ ಹೆಸರನ್ನು ಯಾರೆಲ್ಲಾ ಸರಿಯಾಗಿ ಹೇಳುತ್ತಿದ್ದಾರೋ ಅವರಿಗೆಲ್ಲಾ ಧನ್ಯವಾದಗಳು. ದಾಸ್ ಅಥವಾ ಕಪೂರ್ ಅಂತ ಕೀ ಬೋರ್ಡ್ ತೋರಿಸುತ್ತಿದ್ದರೂ ನನ್ನ ಹೆಸರನ್ನು ಸರಿಯಾಗಿ ಬರೆಯುತ್ತಿರುವವರಿಗೆ ಧನ್ಯವಾದಗಳು. ಶ್ರೀನಾಥ್ ಅನ್ನುವುದು ಸರಿಯಾದ ಹೆಸರು ಎಂದು ನಿಮ್ಮ ಮನಸ್ಸಿಗೆ ಬರುತ್ತಿದ್ದರೆ ಅಷ್ಟೇ ಸಾಕು. ಅದೇ ನೀವು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ಸಾಕ್ಷಿ. ಇನ್ನು ಇನ್ಸ್ಟಾಗ್ರಾಂನಲ್ಲಿ ಹೆಸರು ಬದಲಿಸಿಕೊಂಡಿರುವುದನ್ನು ಟ್ವೀಟ್ ಮಾಡಿ ಶ್ರದ್ಧಾ ಶ್ರೀನಾಥ್ ತಿಳಿಸಿದ್ದಾರೆ.ಇನ್ಸ್ಟಾಗ್ರಾಂನಲ್ಲಿ ನನ್ನ ಹೆಸರನ್ನು ಶ್ರದ್ಧಾ ರಮಾ ಶ್ರೀನಾಥ್ ಎಂದು ಬದಲಿಸಿಕೊಂಡಿದ್ದೇನೆ. ಟ್ವಿಟ್ಟರ್‌ನಲ್ಲೂ ಇದೇ ರೀತಿ ಬದಲಿಸಿಕೊಂಡರೆ ಸರಿ ಅನ್ನಿಸುತ್ತೆ. ರಮಾ ನನ್ನ ತಾಯಿಯ ಹೆಸರು. ಹಾಗಾಗಿ ಇನ್ನು ಮುಂದೆ ನನ್ನನ್ನು ಶ್ರದ್ಧಾ ರಮಾ ಶ್ರೀನಾಥ್ ಎಂದು ಪರಿಚಯಿಸಿಕೊಳ್ಳುತ್ತೇನೆ. ನೀವೇ ನೋಡುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ.

    ನನ್ನನ್ನು ಶ್ರದ್ಧಾ ದಾಸ್ ಅಂತ ಶ್ರದ್ಧಾ ಕಪೂರ್ ಅಂತ ಅಲ್ಲದೇ ಶ್ರದ್ಧಾ ಶ್ರೀನಾಥ್ ಎಂದು ಕರೆದರೆ ಸಾಕು. ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳು ನನ್ನ ಹೆಸರನ್ನು ಸರಿಯಾಗಿ ಬರೆಯುತ್ತಿಲ್ಲ. ಆದರೆ ಇನ್ನಾದರೂ ನನ್ನ ಹೆಸರನ್ನು ಸರಿಯಾಗಿ ಬರೆಯಿರಿ ಅಂತ ತಿರುಗೇಟು ಕೊಟ್ಟಿದ್ದಾರೆ. ಇನ್ನು ಶ್ರದ್ಧಾ ಟ್ವಿಟ್‌ಗೆ ನೆಟ್ಟಿಗರಿಂದ ಉತ್ತಮ ಬೆಂಬಲ ಸಿಕ್ಕಿದೆ. ಒಟ್ನಲ್ಲಿ ನಟಿಯ ನಡೆ ನೋಡಿ ಫ್ಯಾನ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಸ್ಯಾಂಡಲ್‌ವುಡ್‌ನ `ಯೂ ಟರ್ನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಶ್ರದ್ಧಾ ಶ್ರೀನಾಥ್ ರಾತ್ರೋ ರಾತ್ರಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ವೊಂದನ್ನ ಕೊಟ್ಟಿದ್ದಾರೆ. ಈಗ ಹೆಲೋ ಗುಡ್ ಬೈ ಅಂತಾ ಟ್ವೀಟರ್‌ನಲ್ಲಿ ಶ್ರದ್ಧಾ ಪೋಸ್ಟ್ ಮಾಡಿದ್ದು, ಇದೀಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

    `ಯೂ ಟರ್ನ್’, `ಆಪರೇಷನ್ ಅಲಮೇಲಮ್ಮ’, `ರುಸ್ತುಂ’ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ ನಟಿ ಶ್ರದ್ಧಾ ಶ್ರೀನಾಥ್, ಸದ್ಯ ತೆಲುಗು, ತಮಿಳು, ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋ ನಟಿ ಈಗ ರಾತ್ರೋ ರಾತ್ರಿ ದಿಢೀರ್ ಅಂತಾ ಬ್ಯಾಕ್‌ & ವೈಟ್‌ ಫೋಟೋ ಶೇರ್‌ ಮಾಡಿ ʻಹೆಲೋ ಗುಡ್ ಬೈʼ ಅಂತಾ ಟ್ವೀಟ್ ಮಾಡಿ, ಪೋಸ್ಟ್ ಮಾಡಿರೋದು ಶ್ರದ್ಧಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ:ನಟ ಜೈಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಬ್ಯೂಟಿ ಜತೆ ಪ್ರತಿಭೆಯಿರೋ ಮಹಾನ್ ನಟಿ ಶ್ರದ್ಧಾ, ಸ್ಟಾರ್‌ಗಳ ಜತೆಗೆ ತೆರೆಹಂಚಿಕೊಳ್ತಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯ ಏಳಿಗೆ ಇರುವಾಗ ಬೈ ಅಂತಾ ಪೋಸ್ಟ್ ಮಾಡಿದ್ಯಾಕೆ, ವಯಕ್ತಿಕ ಜೀವನದಲ್ಲಿ ಏನಾದ್ರೂ ಸಮಸ್ಯೆ ಇದ್ಯಾ, ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ರಾ ಅಥವಾ ಸಾಮಾಜಿಕ ಜಾಲತಾಣಕ್ಕೆ ಬೈ ಹೇಳಿದ್ರಾ ಎಂದೆಲ್ಲಾ ನಟಿ ಶ್ರದ್ಧಾ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಈ ಎಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಕಾದುನೋಡಬೇಕಿದೆ.