Tag: u t khadar

  • ಕೈ ಋಣ ತೀರಿಸಲು ಮೋದಿಯನ್ನು ನೇರವಾಗಿ ಎದುರಿಸಲಾಗದೇ ಪುಕ್ಕಲುತನದಿಂದ ಬಂದ್ ಮಾಡ್ತಿದ್ದಾರೆ: ಸಿಎಂ ವಿರುದ್ಧ ಪ್ರತಾಪ್ ಸಿಂಹ ಕಿಡಿ

    ಕೈ ಋಣ ತೀರಿಸಲು ಮೋದಿಯನ್ನು ನೇರವಾಗಿ ಎದುರಿಸಲಾಗದೇ ಪುಕ್ಕಲುತನದಿಂದ ಬಂದ್ ಮಾಡ್ತಿದ್ದಾರೆ: ಸಿಎಂ ವಿರುದ್ಧ ಪ್ರತಾಪ್ ಸಿಂಹ ಕಿಡಿ

    ಮೈಸೂರು: ಪ್ರಧಾನಿ ಮೋದಿಯನ್ನು ನೇರವಾಗಿ ಎದುರಿಸಲಾಗದೇ ಕಾಂಗ್ರೆಸ್ಸಿನ ಋಣ ತೀರಿಸಲು ರಾಜ್ಯದಲ್ಲಿ ಬಂದ್ ಮಾಡಿಸಿದ್ದಾರೆ ಎಂದು ಎಂದು ಸಂಸದ ಪ್ರತಾಪ ಸಿಂಹ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡಿರುವ ರಾಹುಲ್ ಗಾಂಧಿಯ ಋಣ ತೀರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಬಂದ್‍ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇವರಿಗೇನಾದರೂ ಯೋಗ್ಯತೆ ಇದ್ದರೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಬಾರದಿತ್ತು. ಸಾರಿಗೆ ಸಂಸ್ಥೆಗಳಿಗೆ ನಿರ್ದೇಶನ ನೀಡಬಾರದಿತ್ತು. ಅದನ್ನು ಬಿಟ್ಟು ಪ್ರಧಾನಿ ಮೋದಿಯವರನ್ನು ನೇರವಾಗಿ ಎದುರಿಸಲಾಗದೇ ಈ ರೀತಿ ಬಂದ್‍ಗೆ ಬೆಂಬಲ ಕೊಡುತ್ತಿದ್ದಾರೆ. ಮೋದಿ ಮೇಲಿನ ಭಯದ ಪುಕ್ಕಲುತನದಿಂದ ಬಂದ್ ಮಾಡಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

    ಈ ವೇಳೆ ವಸತಿ ಸಚಿವ ಯು ಟಿ.ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಬಂದ್ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಅಂತಾ ಖಾದರ್ ಹೇಳಿದ್ದರು. ಆದರೆ ಈಗ ಅವರು ಚಪ್ಪಲಿ ಎಲ್ಲಿ ಇಟ್ಟಿದ್ದಾರೆ? ಈಗ ಯಾರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಪ್ರಶ್ನಿಸಿದರು.

    ಬಂದ್‍ಗೆ ಬೆಂಬಲ ನೀಡಿದ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಪ್ರತಿಕ್ರಿಯಿಸಿ, ದೇವೆಗೌಡರೇ ನೀವು ದೇಶದ ಆಡಳಿತ ನಡೆಸಿದ್ದವರು, ಬಂದ್‍ಗೆ ಬೆಂಬಲ ಸೂಚಿಸುವ ಮುನ್ನ ಸ್ವಲ್ಪ ಯೋಚಿಸಬೇಕಿತ್ತು. ಮೊದಲು ನಿಮ್ಮ ಮಗ ಮುಖ್ಯಮಂತ್ರಿಗೆ ಪೆಟ್ರೋಲ್ ದರವನ್ನು ಹೇಗೆ ಕಡಿಮೆ ಮಾಡೋದು ಎನ್ನುವುದನ್ನು ಹೇಳಿ ಕೊಡಿ, ನಂತರ ಬಂದ್‍ಗೆ ಬೆಂಬಲ ನೀಡಿ ಎಂದು ಹೇಳಿದರು.

    ಮೂರು ತೆರಿಗೆ ಲೂಟಿ ಮಾಡ್ತಿರೋದು ರಾಜ್ಯ ಸರ್ಕಾರಗಳು, ಪೆಟ್ರೋಲ್, ಮದ್ಯ ಹಾಗೂ ರಿಯಲ್ ಎಸ್ಟೇಟ್ ಮೂರರ ಮೇಲೆ ಅತಿ ಹೆಚ್ಚು ತೆರೆಗೆ ಹಾಕುತ್ತಿದ್ದಾರೆ. ಈ ಮೂರರ ಮೇಲೆ ತೆರಿಗೆ ಹಾಕಿ ಲೂಟಿ ಮಾಡಲಾಗುತ್ತದೆ ಎಂದು ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುಟಿ ಖಾದರ್ ಹೇಳಿಕೆಗೆ ಟಾಂಗ್ ನೀಡಿದ ಪ್ರಥಮ್

    ಯುಟಿ ಖಾದರ್ ಹೇಳಿಕೆಗೆ ಟಾಂಗ್ ನೀಡಿದ ಪ್ರಥಮ್

    ಮಂಗಳೂರು: ಮುಸ್ಲಿಂ ಎನ್ನುವ ಕಾರಣಕ್ಕೆ ಅನುಮಾನದಿಂದ ನೋಡಲಾಗುತ್ತಿದೆ ಎಂಬ ಸಚಿವ ಯು.ಟಿ ಖಾದರ್ ಹೇಳಿಕೆಗೆ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಟಾಂಗ್ ನೀಡಿದ್ದಾರೆ.

    ಈ ಬಗ್ಗೆ ಫೇಸ್ ಬುಕ್ ಪೇಜ್‍ನಲ್ಲಿ ಬರೆದುಕೊಂಡಿರುವ ಪ್ರಥಮ್, ನಿಮಗೆ ಅಷ್ಟೊಂದು ಅನುಮಾನ, ಅವಮಾನ ಆಗುತ್ತಿದ್ದರೆ ಬೇರೆ ಧರ್ಮಕ್ಕೆ ಮತಾಂತರವಾಗಿಬಿಡಿ. ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಿ. ಯಾಕೆ ಪಾಪ ಕಷ್ಟಪಟ್ಟು ಮುಸ್ಲಿಂ ಆಗಿರುತ್ತೀರಾ. ಭಾರತದಲ್ಲಿ ಯಾರು ಯಾವ ಧರ್ಮಕ್ಕೆ ಬೇಕಾದರೂ ಮತಾಂತರ ಆಗಬಹುದು ಎಂದು ಹೇಳಿದ್ದಾರೆ.

    ಅಷ್ಟೇ ಅಲ್ಲದೇ ನೀವೇನಾದರೂ ಹಿಂದೂ ಧರ್ಮಕ್ಕೆ ಬರೋದಾದರೆ ಬನ್ನಿ. ಆದರೆ ನಮ್ಮ ಟರ್ಮ್ಸ್ ಆಂಡ್ ಕಂಡಿಷನ್ ಗೆ ಒಪ್ಪಬೇಕು. ನಿಮ್ಮ ಜೊತೆ ಸೆಲ್ಫಿ ತಗೊಂಡ ಆರೋಪಿಗಳಿಗೆ ಎಂಟ್ರಿ ಇಲ್ಲ. ಜೊತೆಗೆ ಮೋಸ್ಟ್ ಇಂಪಾರ್ಟೆಂಟ್, ಪೇಜಾವರ ಶ್ರೀಗಳ ಆಶೀರ್ವಾದ ತಗೆದುಕೊಂಡು, ನಡೆದಾಡುವ ದೇವರ ಪಾದಕ್ಕೆ ವಂದಿಸಿ, ನಿರ್ಮಾಲಾನಂದರಿಗೆ ಹಿತವಚನ ಕೇಳಿ ಆಮೇಲೆ ಹಿಂದೂಧರ್ಮಕ್ಕೆ ಬನ್ನಿ. ಇನ್ನು ಹಿಂದು ಧರ್ಮದಲ್ಲಿ ಯಾವ ಜಾತಿಗೆ ಸೇರಬೇಕಂಕೊಂಡಿದ್ದೀರೋ ಆ ಆಯ್ಕೆ ನಿಮಗೆ ಬಿಟ್ಟುಬಿಡ್ತೀನಿ. ಇದನ್ನೂ ಓದಿ: ಮುಸ್ಲಿಂರನ್ನು ಎಲ್ಲ ಕಡೆ ಅನುಮಾನದಿಂದ ನೋಡ್ತಾರೆ: ಯು.ಟಿ.ಖಾದರ್

    ನನ್ನ ಪ್ರೀತಿಯ ದಲಿತರಾಗಿ, ನಾಯಕ, ಕುರುಬರಾದರೂ ಆಗಿ. ಫುಲ್ ಫ್ರೀಡಮ್ ಇದೆ. ನಾನು ಗ್ಯಾರಂಟಿ ಕೊಡ್ತೀನಿ. ಹಿಂದು ಧರ್ಮದಲ್ಲಿ ಯಾರೂ ನಿಮ್ಮನ್ನ ಅನುಮಾನದಿಂದ ನೋಡಲ್ಲ. ಆರಾಮಾಗಿ ಬನ್ನಿ ಖಾದರ್ ಅವ್ರೇ ಎಂದು ಪ್ರಥಮ್ ಹೇಳಿದ್ದಾರೆ.

    ಆಮೇಲೆ ಪ್ರೀತಿಯ ಮುಸ್ಲಿಂ ಸಹೋದರರೇ ಪ್ಲಿಸ್ ನನ್ನ ಮೇಲೆ ಕೋಪ ಮಾಡ್ಕೋಬೇಡಿ. ನನ್ನ ಪ್ರೀತಿಯ ಧರ್ಮ. ಆದರ ಮೇಲೆ ಯಾರೇ ಅನುಮಾನಪಟ್ಟರೂ ನನ್ನ ಮನಸ್ಸಿಗೆ ನೋವಾಗುತ್ತೆ. ನಾನು ಹೇಳಿದ್ದು ತಪ್ಪಾ? ಒಮ್ಮೆ ಯೋಚಿಸಿ. ಯಾರೂ ಸಿಂಪತಿ ತಗೊಳೋ ಡೈಲಾಗ್, ಧರ್ಮಾಧಾರಿತವಾಗಿ ಎಮೋಷನಲಿ ಡಿರ್ಸ್ಟಬ್ ಮಾಡೋ ಮಾತು ಹೇಳಬಾರದು. ಅದಷ್ಟೇ ನನ್ನ ಕಳಕಳಿ. ನಿಮಗೆ ಇಷ್ಟವಾಗ್ಲಿಲ್ವಾ? ಉರ್ಕೊಳಿ ಎಂದು ಪ್ರಥಮ್ ಫೇಸ್‍ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಎರಡು ದಿನಗಳ ಹಿಂದೆ ಸಚಿವ ಖಾದರ್ ಧಾರವಾಡದಲ್ಲಿ ಮಾತನಾಡುತ್ತಾ, ವಿಮಾನ ನಿಲ್ದಾಣದಲ್ಲಿ ತನ್ನನ್ನು ಎರಡೆರಡು ಬಾರಿ ತಪಾಸಣೆ ಮಾಡುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಮುಸ್ಲಿಂರನ್ನು ಅನುಮಾನದಿಂದ ನೋಡುತ್ತಾರೆ ಹೇಳಿಕೆಗೆ ಕ್ಷಮೆ ಕೋರಿದ ಸಚಿವ ಯು.ಟಿ.ಖಾದರ್

  • ರೆಡ್‍ಲೈಟನ್ನು ನನ್ನ ತಲೆ ಮೇಲೆ ಇಟ್ಕೊಂಡು ಸುತ್ತಾಡ್ತಿಲ್ಲ: ಖಾದರ್

    ರೆಡ್‍ಲೈಟನ್ನು ನನ್ನ ತಲೆ ಮೇಲೆ ಇಟ್ಕೊಂಡು ಸುತ್ತಾಡ್ತಿಲ್ಲ: ಖಾದರ್

    ಮಂಗಳೂರು: ಕೆಂಪು ದೀಪ ಸರ್ಕಾರಿ ಕಾರು ಮೇಲೆ ಇದೆ. ಕೆಂಪು ದೀಪ ನನ್ನ ತಲೆ ಮೇಲೆ ಇಲ್ಲ ಅಂತಾ ಆಹಾರ ಸಚಿವ ಯುಟಿ ಖಾದರ್ ಖಡಕ್ ಉತ್ತರ ನೀಡಿದ್ದಾರೆ.

    ವಿಐಪಿ ಸಂಸ್ಕೃತಿ ಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರಿಗೆ ಕೆಂಪು ಗೂಟವನ್ನು ಇಂದಿನಿಂದ ಅಧಿಕೃತವಾಗಿ ನಿಷೇದಿಸಿದ್ದು, ಆದ್ರೆ ಯು ಟಿ ಖಾದರ್ ಮಾತ್ರ ಇಂದು ಕೆಂಪುಗೂಟ ಇದ್ದ ಕಾರಿನಲ್ಲೇ ತಿರುಗಾಡಿದ್ದಾರೆ.

    ಕಾರಿನಿಂದ ಕೆಂಪು ದೀಪ ತೆಗೆಯೋಕೆ ಕೆಂಪು ದೀಪ ನನ್ನ ತಲೆ ಮೇಲಿಲ್ಲ. ತಲೆ ಮೇಲೆ ಇರ್ತಿದ್ರೆ ಕೆಳಗಿಡ್ತಾ ಇದೆ. ಆದ್ರೆ ಇದು ಸರ್ಕಾರಿ ಕಾರಿನ ಮೇಲೆ ಇದೆ. ಕೆಂಪು ದೀಪ ತೆಗೆಯೋದ್ರಿಂದ ಬಡವರ ಹೊಟ್ಟೆ ತುಂಬುವುದಿಲ್ಲ. ನನಗೆ ರಾಜ್ಯ ಸರ್ಕಾರ ಕಾರು ಕೊಟ್ಟಿರೋದು. ಕೇಂದ್ರ ಸರ್ಕಾರ ಕೊಟ್ಟಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಆದೇಶ ಕೊಟ್ರೆ ಕಾರಿನಿಂದ ಕೆಂಪು ದೀಪ ತೆಗೆಯೋದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಇಂದಿನಿಂದ ವಿಐಪಿ ಸಂಸ್ಕೃತಿಗೆ ಅಧಿಕೃತ ಬ್ರೇಕ್ – ಕೆಂಪೂಗೂಟದ ಕಾರು ಬಳಸಿದ್ರೆ ಬೀಳುತ್ತೆ ದಂಡ

    ಸರ್ಕಾರ ಕೊಟ್ಟ ಕಾರಿನಲ್ಲಿ ನಾನು ಕುತ್ಕೊಂಡು ಓಡಾಡೋದಷ್ಟೇ ನಮ್ಮ ಕೆಲಸ ಹೊರತು ಅದನ್ನು ಆಲ್ಟರ್ ಮಾಡೋ ಅವಕಾಶ ನಮಗಿಲ್ಲ. ಅಂತಹ ಸಂದರ್ಭಗಳು ಬಂದ್ರೆ ಇಲಾಖೆಯೇ ಕಾರನ್ನು ಆಲ್ಟರ್ ಮಾಡ್ತಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಆದೇಶಕ್ಕೆ ನಾವು ಬದ್ಧರಾಗುತ್ತೇವೆ ಅಂತಾ ಖಡಕ್ಕಾಗಿಯೇ ನುಡಿದಿದ್ದಾರೆ.

    ಇದನ್ನೂ ಓದಿ: ನಾನು ಈಗ ಯಾಕೆ ಕೆಂಪು ದೀಪ ತೆಗೆಯಬೇಕು?- ಪ್ರಶ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿದ ಸಿಎಂ

    https://www.youtube.com/watch?v=XRZCCsr64A8

  • ಹೋಟೆಲ್, ರೆಸ್ಟೋರೆಂಟ್‍ನಲ್ಲಿ ಸೇವಾ ಶುಲ್ಕ ರದ್ದು: ಮುಂದಿನ ವಾರ ಸಭೆ

    ಹೋಟೆಲ್, ರೆಸ್ಟೋರೆಂಟ್‍ನಲ್ಲಿ ಸೇವಾ ಶುಲ್ಕ ರದ್ದು: ಮುಂದಿನ ವಾರ ಸಭೆ

    ಬೆಂಗಳೂರು: ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸೇವಾ ಶುಲ್ಕ ರದ್ದುಪಡಿಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ, ಕೇಂದ್ರದ ಆದೇಶ ರಾಜ್ಯ ಸರ್ಕಾರದ ಕೈಸೇರಿದ್ದು, ಈ ನಿಟ್ಟಿನಲ್ಲಿ ಮುಂದಿನವಾರ ಹೋಟೆಲ್, ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ಮಾಡಿ, ಸೇವಾಶುಲ್ಕ ರದ್ದು ಮಾಡಲಾಗುವುದು ಎಂದು ಆಹಾರ ನಾಗರೀಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸೇವಾ ಶುಲ್ಕ ರದ್ದುಪಡಿಸಬೇಕೆಂದು ಕೇಂದ್ರ ಆದೇಶಿಸಿದೆ. ಅದರಂತೆ ಹೋಟೆಲ್, ರೆಸ್ಟೋರೆಂಟ್ ಮಾಲೀಕರ ಸಭೆ ಮಾಡಿ ಸೇವಾ ಶುಲ್ಕ ರದ್ದು ಮಾಡುತ್ತೇವೆ. ಆದೇಶ ಜಾರಿ ಬಳಿಕವೂ ಶುಲ್ಕ ವಸೂಲಿ ಮಾಡಿದರೆ ಕೇಂದ್ರ ಸರ್ಕಾರದ ಆದೇಶದಂತೆ ದಂಡ ವಿಧಿಸಿಲಾಗುವುದು. ಅಲ್ಲದೆ ಗ್ರಾಹಕರು ಕೂಡ ನೇರವಾಗಿ ಗ್ರಾಹಕರ ಕೋರ್ಟ್‍ಗೆ ದೂರು ನೀಡಬಹುದು ಎಂದ್ರು.

    ಸಮಾರಂಭಗಳಲ್ಲಿ ಅನಗತ್ಯವಾಗಿ ಆಹಾರ ವ್ಯರ್ಥವಾಗುತ್ತಿದೆ. ಈ ನಿಟ್ಟಿನಲ್ಲಿ ಎನ್‍ಜಿಓಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ. ಸಭೆ ಸಮಾರಂಭಗಳಲ್ಲಿ ವ್ಯರ್ಥವಾಗುತ್ತಿರುವ ಆಹಾರವನ್ನು ತಡೆಯಲು ನಿಯಮ ರೂಪಿಸಿ, ಸರ್ಕಾರೇತರ ಸಂಸ್ಥೆಗಳ ಮೂಲಕ ಹಸಿದವರಿಗೆ ವ್ಯರ್ಥ ಆಹಾರವನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿಯಮವನ್ನು ತರಲು ಮುಂದಾಗಿದೆ ಅಂತಾ ಸಚಿವರು ಹೇಳಿದ್ರು.

  • ಮಾರ್ಚ್ ನಂತ್ರ ನ್ಯಾಯಬೆಲೆ ಅಂಗಡಿಗಳಲ್ಲಿ ಸಕ್ಕರೆ ಸಿಗಲ್ಲ!

    ಮಾರ್ಚ್ ನಂತ್ರ ನ್ಯಾಯಬೆಲೆ ಅಂಗಡಿಗಳಲ್ಲಿ ಸಕ್ಕರೆ ಸಿಗಲ್ಲ!

    ಬೆಂಗಳೂರು: ಮುಂಬರುವ ಮಾರ್ಚ್ ತಿಂಗಳಿನಿಂದ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಕ್ಕರೆ ವಿತರಣೆಯನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವ ಬಗ್ಗೆ ಆಹಾರ ಸಚಿವ ಯು ಟಿ ಖಾದರ್ ಸುಳಿವು ನೀಡಿದ್ದಾರೆ.

    ಇಂದು ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಕೆ.ಜಿ ಸಕ್ಕರೆಗೆ ಕೇಂದ್ರ ಸರ್ಕಾರ ಹದಿನೆಂಟೂವರೆ ರೂ. ಸಬ್ಸಿಡಿ ನೀಡುತ್ತಿತ್ತು. ಕಳೆದ ಬಜೆಟ್‍ನಲ್ಲಿ ಆ ಸಬ್ಸಿಡಿಯನ್ನ ನಿಲ್ಲಿಸಿದೆ. ಇದ್ರಿಂದ ರಾಜ್ಯ ಸರ್ಕಾರಕ್ಕೆ ಸಕ್ಕರೆ ವಿತರಣೆ ಮಾಡುವುದು ಹೊರೆಯಾಗುತ್ತಿದೆ ಅಂತಾ ಹೇಳಿದ್ರು.

    ಗ್ರಾಮೀಣಪ್ರದೇಶದಲ್ಲಿ ಎಲ್‍ಪಿಜಿ ಕನೆಕ್ಷನ್ ಇದ್ದವರಿಗೆ ಒಂದು ಲೀಟರ್ ಸೀಮೆಎಣ್ಣೆ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಈ ಕುರಿತು ಗ್ರಾಮಪಂಚಾಯತಿಯಲ್ಲಿ ನೊಂದಾವಣಿ ಮಾಡಿಕೊಂಡ್ರೆ ಮಾರ್ಚ್‍ನಿಂದಲೇ ಸೀಮೆಎಣ್ಣೆ ವಿತರಣೆ ಆರಂಭವಾಗಲಿದೆ. ಎಲ್‍ಪಿಜಿ ಕನೆಕ್ಷನ್ ಇಲ್ಲದವರಿಗೆ 3 ಲೀಟರ್ ಸೀಮೆಎಣ್ಣೆ ವಿತರಿಸೋದಾಗಿ ಸಚಿವ ಖಾದರ್ ಹೇಳಿದ್ದಾರೆ.

    ರೇಷನ್ ಕಾರ್ಡ್‍ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಕೊಳ್ಳುವುದು ಜೂನ್ ತಿಂಗಳ ಕಾಲ ರಾಜ್ಯ ಸರ್ಕಾರ ಸಮಯ ನೀಡಿದೆ. ನಾಲ್ಕು ಕೋಟಿ ಸದಸ್ಯರಲ್ಲಿ ಮೂರೂವರೆ ಕೋಟಿ ಜನರು ಮಾತ್ರ ರೇಷನ್ ಕಾರ್ಡ್ ನಲ್ಲಿ ಆಧಾರ್ ಲಿಂಕ್ ಮಾಡಿಸಿಕೊಂಡಿದ್ದಾರೆ. ಇನ್ನೂ 55 ಲಕ್ಷ ಜನ ಸದಸ್ಯರು ಆಧಾರ್ ಲಿಂಕ್ ಮಾಡಿಸಿಕೊಂಡಿಲ್ಲ. ಆಧಾರ್ ಲಿಂಕ್ ಮಾಡಿಸಿಕೊಳ್ಳದವರಿಗೆ ಏಪ್ರಿಲ್ ನಿಂದ ಪಡಿತರ ವಿತರಣೆ ನಿಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಅಂತಾ ಖಾದರ್ ವಿವರಿಸಿದ್ರು.

    ಚಪ್ಪಲಿ ಹೇಳಿಕೆ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಅವರ ಮಂಗಳೂರು ಭೇಟಿಯನ್ನ ವಿರೋಧಿಸುತ್ತಿದ್ದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಹೇಳಿಕೆ ಕುರಿತಂತೆ ಸಚಿವರು ಈ ವೇಳೆ ವಿಷಾದ ವ್ಯಕ್ತಪಡಿಸಿದ್ದಾರೆ. ನನ್ನ ಹೇಳಿಕೆ ಸಂವಿಧಾನ ವಿರೋಧಿಸುತ್ತಿದ್ದವರಿಗೆ ಮಾತ್ರ ಅನ್ವಯಿಸುತ್ತದೆ. ಆದ್ರೆ ಚಪ್ಪಲಿ ಅನ್ನೋ ಭಾಷೆ ಬಳಸಬಾರದಿತ್ತು. ಮುಂದೆ ಈ ರೀತಿಯ ಹೇಳಿಕೆ ನೀಡುವಾಗ ಎಚ್ಚರಂದಿರುತ್ತೇನೆ ಅಂತಾ ಹೇಳಿದ ಅವರು, ಪಾಕಿಸ್ತಾನದ ಪ್ರಧಾನಿಯವರನ್ನು ರಾಷ್ಟ್ರಕ್ಕೆ ಕರೆದು ಟೀ ಕುಡಿಸಿ ಕಳುಹಿಸುತ್ತಾರೆ. ನಮ್ಮ ಪಕ್ಕದ ರಾಜ್ಯದ ಕೇರಳ ಮುಖ್ಯಮಂತ್ರಿ ರಾಜ್ಯಕ್ಕೆ ಆಗಮಿಸೋದ್ರಲ್ಲಿ ತಪ್ಪೇನಿದೆ. ಇದನ್ನ ವಿರೋಧಿಸಿದ್ದು ಸರಿಯಲ್ಲ ಅಂತಾ ಖಾದರ್ ಹೇಳಿದ್ರು.