Tag: u t khadar

  • ವಿಧಾನಸಭೆ ಲಾಂಜ್‌ನಲ್ಲಿ ಶಾಸಕರ ವಿಶ್ರಾಂತಿಗೆ recliner chair ವ್ಯವಸ್ಥೆ: ಸ್ಪೀಕರ್ ಹೊಸ ಐಡಿಯಾ

    ವಿಧಾನಸಭೆ ಲಾಂಜ್‌ನಲ್ಲಿ ಶಾಸಕರ ವಿಶ್ರಾಂತಿಗೆ recliner chair ವ್ಯವಸ್ಥೆ: ಸ್ಪೀಕರ್ ಹೊಸ ಐಡಿಯಾ

    ಬೆಂಗಳೂರು: ತಿಂಡಿ ವ್ಯವಸ್ಥೆ ಆಯ್ತು.. ಊಟದ ವ್ಯವಸ್ಥೆ ಆಯ್ತು.. ಈಗ ಮಲಗಲು ವ್ಯವಸ್ಥೆ ಅಂತೆ. ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ವಿಶ್ರಾಂತಿ ಮಾಡಲು ಸ್ಪೀಕರ್ ಯು.ಟಿ.ಖಾದರ್ ಹೊಸ ಐಡಿಯಾ ಮಾಡಿದ್ದಾರೆ. ಲಾಂಜ್‌ನಲ್ಲಿ recliner chair ಹಾಕಿಸಿದ್ದು, ಅದರ ಪ್ರಯೋಜನ ಪಡೆಯುವಂತೆ ಸ್ಪೀಕರ್ ಖಾದರ್ (U.T.Khadar) ಸೂಚಿಸಿದ್ದಾರೆ.

    ವಿಧಾನಸಭೆಯಲ್ಲಿ ಇವತ್ತು ಘೋಷಣೆ ಮಾಡಿದ ಸ್ಪೀಕರ್, ತಿಂಡಿ, ಊಟ ವ್ಯವಸ್ಥೆ ಮಾಡಿದ್ವಿ. ಈಗ ಕೆಲ ಶಾಸಕರು ಊಟ ಮಾಡಿ ಮಲಗಲು ಎಲ್‌ಹೆಚ್‌ಗೆ ಹೋಗಿ ಬರುತ್ತೇವೆ ಅಂತೇಳಿ ಹೋಗ್ತಿದ್ದಾರೆ. ಕೆಲವರು ಬರುವುದೇ ಇಲ್ಲ. ಹಾಗಾಗಿ ಶಾಸಕರು ವಿಶ್ರಾಂತಿ ಮಾಡಲು ಲಾಂಜ್‌ನಲ್ಲಿ recliner chair ಹಾಕಿಸಿದ್ದೇವೆ. ಇಲ್ಲೇ ಮಲಗಿ, ಬೇಕಾದಾಗ ಕರೆಯುತ್ತೇವೆ ಎಂದು ಖಾದರ್ ಹೇಳಿದರು. ಇದನ್ನೂ ಓದಿ: ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಅನ್ನೋ ಸಿದ್ದರಾಮಯ್ಯ ಮಾತನ್ನ ಯಾರೂ ನಂಬಲ್ಲ: ಸಿ.ಟಿ ರವಿ

    ಇನ್ನು ಇದೇ ವೇಳೆ ಶಾಸಕರು ಪಿಎಗಳನ್ನ ವಿಧಾನಸಭೆ ಲಾಂಜ್‌ಗೆ ಕರೆದುಕೊಂಡು ಬರಬೇಡಿ. ಶಾಸಕರು ಕೂರಲು ಜಾಗ ಇರಲ್ಲ. ಈ ವಿಚಾರದಲ್ಲಿ ಶಾಸಕರು ಮಾರ್ಷಲ್‌ಗಳ ಜೊತೆ ವಾಗ್ವಾದ ಮಾಡಬೇಡಿ ಎಂದು ಸ್ಪೀಕರ್ ಸೂಚಿಸಿದರು.

  • ನಿಮ್ಮ ಬೆಂಕಿಗೆ ನಾವು ನೀರು ಹಾಕ್ತೇವೆ: ಕೋಟಾ ಶ್ರೀನಿವಾಸ ಪೂಜಾರಿ

    ನಿಮ್ಮ ಬೆಂಕಿಗೆ ನಾವು ನೀರು ಹಾಕ್ತೇವೆ: ಕೋಟಾ ಶ್ರೀನಿವಾಸ ಪೂಜಾರಿ

    ಧಾರವಾಡ: ಪೌರತ್ವ ಕಾಯ್ದೆ ವಿರೋಧಿಸಿ ಮಾಜಿ ಸಚಿವ ಯು.ಟಿ ಖಾದರ್ ಹೇಳಿಕೆ ವಿಚಾರವಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದು, ನೀವು ಹಾಕುವ ಬೆಂಕಿಗೆ ನೀರು ಹಾಕಿ ನಂದಿಸುವ ಸಾಮರ್ಥ್ಯ ನಮಗಿದೆ ಎಂದು ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಷ್ಟ್ರೀಯತೆ ಗಮನ ಇಟ್ಟುಕೊಂಡು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್‍ನಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿಯಾಗಿ ರೂಪಗೊಂಡಿದೆ. ಬಹುಮತದಿಂದ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದಿದೆ. ಈ ತಿದ್ದುಪಡಿ ಕಾಯ್ದೆಯನ್ನು ಇಡೀ ರಾಷ್ಟ್ರವೇ ಸ್ವಾಗತಿಸಿದೆ. ಆದರೆ ಅಧಿಕಾರ ಕಳೆದುಕೊಂಡ ಕೆಲವರು ರಾಜಕೀಯ ಪ್ರೇರಿತ ಚರ್ಚೆಗಳನ್ನು ಮುಂದಿಟ್ಟಿದ್ದಾರೆ. ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ರಾಜ್ಯದಲ್ಲಿ ಬೆಂಕಿ ಬೀಳುತ್ತೆ ಅಂತಾ ಯು.ಟಿ ಖಾದರ್ ಹೇಳಿದ್ದಾರೆ. ಆದರೆ ವರುಣ ದೇವನ ಕೃಪೆಯಿಂದ ಕರ್ನಾಟಕದಲ್ಲಿ ಸಮೃದ್ಧವಾದ ಜಲವಿದೆ. ನದಿಗಳೆಲ್ಲಾ ಭರ್ತಿಯಾಗಿವೆ. ನೀವು ಹಾಕುವ ಬೆಂಕಿಗೆ ನೀರು ಹಾಕುವ ಸಾಮರ್ಥ್ಯ ನಮಗಿದೆ ಎಂದು ಸಚಿವರು ಕೈ ನಾಯಕನಿಗೆ ಟಾಂಗ್ ಕೊಟ್ಟರು.

    ಇದೇ ವೇಳೆ ಹಿಂದಿನ ಸರ್ಕಾರ ಮಠಗಳಿಗೆ ನೀಡಿದ ಅನುದಾನ ದೇವಸ್ಥಾನಗಳಿಗೆ ವರ್ಗಾಯಿಸುವ ವಿಚಾರವಾಗಿ ಮಾತನಾಡಿ, 60 ಕೋಟಿ ಹಣವನ್ನು ಮಠಗಳಿಗೆ ನೀಡುವ ಪ್ರಸ್ತಾಪ ಇದೆ. ಯಾವುದೇ ಮಠಗಳನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಯಾವುದೇ ಸರ್ಕಾರ ಹಣ ನೀಡಿದ್ದರೂ ಅದನ್ನು ನಾವು ನ್ಯಾಯಸಮ್ಮತವಾಗಿ ತಲುಪಿಸುತ್ತೇವೆ ಎಂದು ಹೇಳಿದರು. ಮಠಗಳಿಗೆ ನೀಡುವ ಹಣವನ್ನು ಯಾವ ದೇವಸ್ಥಾನಕ್ಕೂ ನೀಡುತ್ತಿಲ್ಲ. ಹಣಕಾಸಿನ ಹೊಂದಾಣಿಕೆ ವಿಷಯದಲ್ಲಿ ಮಾತ್ರ ಸ್ವಲ್ಪ ತಡವಾಗಿದೆ. ಪರಿಶೀಲನೆ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

  • ಎದುರಾಗಿರುವ ರಾಜಕೀಯ ಸನ್ನಿವೇಶಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಯು.ಟಿ ಖಾದರ್

    ಎದುರಾಗಿರುವ ರಾಜಕೀಯ ಸನ್ನಿವೇಶಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಯು.ಟಿ ಖಾದರ್

    – ಪಕ್ಷ ಬಿಟ್ಟವರು ನಮ್ಮ ಮಿತ್ರರೇ

    ಕಲಬುರಗಿ: ಎದುರಾಗಿರುವ ರಾಜಕೀಯ ಸನ್ನಿವೇಶಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐದು ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ. ಪಕ್ಷ ಬಿಟ್ಟವರು ನಮ್ಮ ಮಿತ್ರರೇ ಎಂದು ಕಾಂಗ್ರೆಸ್ ಶಾಸಕ, ಆನಂದ್ ಸಿಂಗ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅಷ್ಟೇ ಅಲ್ಲದೆ ಎದುರಾಗಿರುವ ರಾಜಕೀಯ ಸನ್ನಿವೇಶಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಎಲ್ಲರನ್ನ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ತೆರೆಮರೆಯಲ್ಲಿ ಸರ್ಕಾರನ್ನ ಕೆಡವಲು ಸಿದ್ದರಾಮಯ್ಯ ಅವರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವುದು ತಪ್ಪು. ಹಿಂದೆ ಬಿಜೆಪಿ ಸರ್ಕಾರದಲ್ಲಿ ಕೂಡ ಅನೇಕರು ರಾಜೀನಾಮೆ ನೀಡಿದ್ದರೂ ಸರ್ಕಾರ ಬೀಳಲಿಲ್ಲ. ಅದರಂತೆ ಈಗಲೂ ಕೂಡ ಸರ್ಕಾರ ಬೀಳಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಮಾತನಾಡಿ, ನಮ್ಮ ಸಂಪರ್ಕದಲ್ಲಿ ಕೂಡ ಬಿಜೆಪಿಯ ಅನೇಕ ಶಾಸಕರಿದ್ದಾರೆ. ಆದರೆ ನಾವಾಗಿಯೇ ಆಪರೇಷನ್ ಮಾಡಲು ಹೋಗಿಲ್ಲ ಎಂದು ಕಮಲಕ್ಕೆ ಟಾಂಗ್ ಕೊಟ್ಟಿದ್ದಾರೆ.

  • ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ, ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ – ಖಾದರ್

    ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ, ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ – ಖಾದರ್

    ಬಳ್ಳಾರಿ: ಡಿಸಿಎಂ ಪರಮೇಶ್ವರ್ ಅವರು ಸಣ್ಣತನದ ಮನುಷ್ಯ ಅಲ್ಲ. ಅವರು ಬಹಳ ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಡಿಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಡಿಸಿಎಂ ಪರಮೇಶ್ವರ್ ಅವರು ತೆರಳುತ್ತಿದ್ದ ದಾರಿಯಲ್ಲಿ ಬಿಜೆಪಿ ಬಾವುಟ ಹಾಕಿದವರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿಕಾರಿಗಳು ನೋಟಿಸ್ ಕೊಟ್ಟಿರಬಹುದು. ಅದನ್ನು ಡಿಸಿಎಂ ಮೇಲೆ ಹಾಕುವುದು ಸರಿಯಲ್ಲ. ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ. ಅವರು ಬಹಳ ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ. ಈ ಬಗ್ಗೆ ಹೆಚ್ಚು ವಿಚಾರ ನನಗೆ ಗೊತ್ತಿಲ್ಲ ಎಂದು ಡಿಸಿಎಂ ಅವರನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಡಿಸಿಎಂ ಬರುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾರುವಂತಿಲ್ಲ

    ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಮಾತೇ ಇಲ್ಲ. ಈ ಸರ್ಕಾರ ಭದ್ರವಾಗಿ ಇರುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಸಿಎಂ ಆಗಿ ಹೆಚ್.ಡಿ ಕುಮಾರಸ್ವಾಮಿ ಅವರೇ ಇರುತ್ತಾರೆ. ಡಿಸಿಎಂ ಪರಮೇಶ್ವರ್ ಅವರೇ ಆಗಿರುತ್ತಾರೆ ಎಂದರು. ನಮ್ಮ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯರ ನೇತೃತ್ವದಲ್ಲಿ ಈ ಸರ್ಕಾರ ಮುನ್ನಡೆಯುತ್ತದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡರ ಒಪ್ಪಂದದ ಮೇಲೆ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದರು.

    ದೇವೇಗೌಡರು ಹಾಗೂ ವೀರಪ್ಪ ಮೊಯ್ಲಿ ಹೇಳಿಕೆಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ನಾಯಕರೆಲ್ಲ ವಿರೋಧಿಗಳಲ್ಲ. ಆದರೆ ಅವರ ಸಿದ್ಧಾಂತಗಳಿಗೆ ವಿರೋಧವಿದೆ. ನಾವೆಲ್ಲ ಜೊತೆಯಾಗಿಯೇ ಇದ್ದೇವೆ. ನೀವು ನಮ್ಮನ್ನು ಬೇರೆ, ಬೇರೆ ಮಾಡಬೇಡಿ ಎಂದು ಕೊನೆಗೆ ಹಾಸ್ಯ ಚಟಾಕಿ ಹಾರಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಿದ್ದರಾಮಯ್ಯರ ಹೆಸರು ಹೇಳಲಿಕ್ಕೂ ಶೋಭಾಗೆ ಯೋಗ್ಯತೆ ಇಲ್ಲ: ಖಾದರ್ ತಿರುಗೇಟು

    ಸಿದ್ದರಾಮಯ್ಯರ ಹೆಸರು ಹೇಳಲಿಕ್ಕೂ ಶೋಭಾಗೆ ಯೋಗ್ಯತೆ ಇಲ್ಲ: ಖಾದರ್ ತಿರುಗೇಟು

    ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳಲಿಕ್ಕೂ ಕೂಡ ಸಂಸದೆ ಶೋಭಾ ಕರಂದ್ಲಾಜೆಗೆ ಯೋಗ್ಯತೆ ಇಲ್ಲ ಎಂದು ಸಚಿವ ಯು.ಟಿ ಖಾದರ್ ತಮ್ಮ ನಾಯಕರ ಬಗ್ಗೆ ಮಾತನಾಡಿದ್ದಕ್ಕೆ ತಿರುಗೇಟು ನೀಡಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರ ಹೆಸರು ಹೇಳಲಿಕ್ಕೂ ಕೂಡ ಶೋಭಾ ಅವರಿಗೆ ಯೋಗ್ಯತೆ ಇಲ್ಲ. ಬಿಜೆಪಿ ಸಹೋದರರಿಗೆ ಹೇಳುವುದೇನೆಂದರೆ ದಯವಿಟ್ಟು ನಮ್ಮ ಪಕ್ಷದಲ್ಲಿ ಗೊಂದಲ ಸೃಷ್ಠಿಸಬೇಡಿ. ನಮ್ಮ ಮೈತ್ರಿಯನ್ನ ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ತನ್ನ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಬಳಿಕ ರಾಜ್ಯದಲ್ಲಿ ಸಿಎಂ ಸ್ಥಾನದ ಬಗ್ಗೆ ನಡೆಯುತ್ತಿರುವ ಚರ್ಚೆ ವಿಚಾರವಾಗಿ ನಾನು ಏನು ಮಾತನಾಡುವುದಿಲ್ಲ. ಇಲ್ಲಿ ನಾವು ಉಪಚುನಾವಣೆಗೆ ಬಂದಿದ್ದೇವೆ. ಎಲ್ಲ ವಿಚಾರದಲ್ಲೂ ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಮೈತ್ರಿ ಸರ್ಕಾರಕ್ಕೆ ಏನೂ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಶೋಭಾ ಕರಂದ್ಲಾಜೆ ಹೇಳಿದ್ದೇನು?
    ಸಿದ್ದರಾಮಯ್ಯನವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದೇವರಾಜ ಅರಸು ಅವರನ್ನ ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಅವರನ್ನ ಹೋಲಿಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಅವರ ಶಾಸಕರನ್ನು ಹಿಡೆದಿಟ್ಟುಕೊಳ್ಳಲು ಆಗಲ್ಲ, ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದರು.

  • ಮೃದು ಹಿಂದುತ್ವದ ಪ್ರಶ್ನೆಗೆ ನಮ್ಮದು ಉತ್ತಮ ಹಿಂದುತ್ವ ಎಂದ ಖಾದರ್

    ಮೃದು ಹಿಂದುತ್ವದ ಪ್ರಶ್ನೆಗೆ ನಮ್ಮದು ಉತ್ತಮ ಹಿಂದುತ್ವ ಎಂದ ಖಾದರ್

    ಮಂಗಳೂರು: ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಮೃದು ಹಿಂದುತ್ವದತ್ತ ಮರಳುತ್ತಿದೆಯೇ ಅನ್ನುವ ಸಂಶಯ ಮೂಡಿದೆ. ದ.ಕ. ಉಸ್ತುವಾರಿ ಸಚಿವ ಯು.ಟಿ ಖಾದರ್ ಬಳಿ, ಈ ಪ್ರಶ್ನೆ ಮುಂದಿಟ್ಟಾಗ ಕಾಂಗ್ರೆಸಿನದ್ದು ಉತ್ತಮ ಹಿಂದುತ್ವ ಅನ್ನುವ ಉತ್ತರ ನೀಡಿದ್ದಾರೆ.

    ಕಾಂಗ್ರೆಸ್, ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರು ಹೇಳಿಕೊಟ್ಟ ಹಿಂದುತ್ವವನ್ನು ಪಾಲಿಸುತ್ತದೆ. ಆದರೆ ಬಿಜೆಪಿಯದ್ದು ಬೇರೆಯದ್ದೇ ಹಿಂದುತ್ವ ಎಂದಿದ್ದಾರೆ. ಇದೇ ವೇಳೆ, ದ.ಕ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪ್ರಚಾರ ಸಂದರ್ಭದಲ್ಲಿ ಹನುಮಾನ್ ಚಾಲೀಸಾ, ಖುರಾನ್ ಪಠಣ ಮಾಡಿದ್ದನ್ನು ಸಚಿವ ಖಾದರ್ ಸಮರ್ಥಿಸಿಕೊಂಡಿದ್ದಾರೆ.

    ಹನುಮಾನ್ ಚಾಲೀಸಾ ಪಠಿಸಿದರೆ ಒಂದು ವೋಟು ಹೆಚ್ವು ಕೊಡಬೇಕು. ಖುರಾನ್ ಪಠಣ ಮಾಡಿದರೆ ಮತ್ತೂ ಹೆಚ್ಚು ವೋಟು ಲಭಿಸಲಿದೆ ಎಂದು ಖಾದರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್, ಚುನಾವಣೆಗಾಗಿ ಮೃದು ಹಿಂದುತ್ವದತ್ತ ಮರಳುತ್ತಿರುವುದರ ಸಂಕೇತ ಇದು ಎನ್ನಲಾಗುತ್ತಿದೆ.

  • ಎಲ್ಲರಿಗೂ ದೇಶ, ಸೈನಿಕರ ಚಿಂತೆಯಾದರೆ ಬಿಎಸ್‍ವೈಗೆ ಸೀಟಿನ ಚಿಂತೆ: ಯು.ಟಿ ಖಾದರ್

    ಎಲ್ಲರಿಗೂ ದೇಶ, ಸೈನಿಕರ ಚಿಂತೆಯಾದರೆ ಬಿಎಸ್‍ವೈಗೆ ಸೀಟಿನ ಚಿಂತೆ: ಯು.ಟಿ ಖಾದರ್

    ಬೆಳಗಾವಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಈ ವೇಳೆ ಎಲ್ಲರಿಗೂ ದೇಶ ಹಾಗೂ ಸೈನಿಕರ ಚಿಂತೆಯಾದರೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಟೀಕಿಸಿದ್ದಾರೆ.

    ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿಯ ಟಿಳಕವಾಡಿಯಲ್ಲಿ ನಾಥ ಪೈ ಉದ್ಯಾನವನ ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶ ಹಾಗೂ ಸೈನಿಕರ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿರಬೇಕು. ಇಂಥ ವಿಷಯಗಳಲ್ಲಿ ರಾಜಕೀಯ ಮಾಡದೇ ವಿಶ್ವಕ್ಕೆ ಏಕತೆ ಸಂದೇಶ ಸಾರಬೇಕು ಎಂದರು.

    ಏರ್ ಸ್ಟ್ರೈಕ್‍ನಿಂದ 22 ಎಂಪಿ ಸೀಟು ಗೆಲ್ಲುವ ಬಿಎಸ್‍ವೈ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ದೇಶದ ಸೈನ್ಯ ಮತ್ತು ಭದ್ರತೆ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕೆಲವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಈ ರೀತಿ ಮಾಡುವುದು ಎಲ್ಲರಿಗೂ ಕೂಡ ಕಪ್ಪು ಚುಕ್ಕೆ. ಎಲ್ಲರಿಗೂ ಕೂಡ ದೇಶದ ಮತ್ತು ಸೈನಿಕರ ಚಿಂತೆಯಾದರೆ ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಮುಂಬೈ ಸ್ಫೋಟದ ವೇಳೆ ಚಿತ್ರೀಕರಣ ನೋಡಲು ಅಲ್ಲಿನ ಮುಖ್ಯಮಂತ್ರಿಯ ಮಗ ಮತ್ತು ನಿರ್ದೇಶಕ ಹೋಗಿದ್ದಕ್ಕೆ ಅಂದು ಮುಖ್ಯಮಂತ್ರಿ ಅವರನ್ನು ಬದಲಿಸಲಾಗಿತ್ತು. ಬಹಿರಂಗವಾಗಿ ಹೇಳಿಕೆ ನೀಡಿರುವ ಬಿಎಸ್‍ವೈ ವಿರುದ್ಧ ಬಿಜೆಪಿ ಹೈಕಮಾಂಡ್ ಯಾವ ಕ್ರಮ ಜರುಗಿಸಲಿದೆ ಎನ್ನುವದನ್ನು ದೇಶಕ್ಕೆ ತೋರಿಸಲಿ ಎಂದು ಸವಾಲು ಹಾಕಿದರು.

    ಶಾಸಕ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಫೈಟ್ ವಿಡಿಯೋ ವಿಚಾರ ಮಾತನಾಡಿ, ಅವರಿಬ್ಬರ ನಡುವೆ ಹೆಣ್ಣುಮಗಳ ವಿಚಾರವಾಗಿ ಜಗಳವಾಗಿರುವುದು ನಂಬಲು ಸಾಧ್ಯವಿಲ್ಲ. ವೈಯುಕ್ತಿಕ ವಿಚಾರಕ್ಕಾಗಿ ಜಗಳ ನಡೆದಿದೆ. ಹೆಣ್ಣುಮಗಳ ವಿಷಯವಾಗಿ ಅವರಿಬ್ಬರ ಮಧ್ಯೆ ಜಗಳವಾಗಿದ್ದು ನನಗೆ ಗೊತ್ತಿಲ್ಲ. ಇದನ್ನು ನಾನು ನೋಡಿಯೂ ಇಲ್ಲ ಕೇಳಿಯೂ ಇಲ್ಲ. ಅವರಿಬ್ಬರು ಸಹೋದರರಂತೆ ಇದ್ದಾರೆ. ಜಗಳ ಕೆಟ್ಟಗಳಿಗೆಯಲ್ಲಿ ಆಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗುತ್ತದೆ. ಮುಂದೆ ಎಲ್ಲವೂ ಸರಿ ಹೋಗಲಿದೆ ಎನ್ನುವ ವಿಶ್ವಾಸವಿದೆ ಎಂದು ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲ ಎಂಡ್ ಮಾಡೋಕೆ ನಮ್ಮಿಂದ ರೆಸಾರ್ಟ್ ಆಪರೇಷನ್: ಯು.ಟಿ ಖಾದರ್

    ಆಪರೇಷನ್ ಕಮಲ ಎಂಡ್ ಮಾಡೋಕೆ ನಮ್ಮಿಂದ ರೆಸಾರ್ಟ್ ಆಪರೇಷನ್: ಯು.ಟಿ ಖಾದರ್

    ಬೆಂಗಳೂರು: ನಾವು ರೆಸಾರ್ಟ್‍ಗೆ ಹೋಗಿದಕ್ಕೆ ಬಿಜೆಪಿಯವರು ರೆಸಾರ್ಟ್ ಬಿಟ್ಟು ವಾಪಾಸ್ ಬರ್ತಿದ್ದಾರೆ. ಆಪರೇಷನ್ ಕಮಲ ಮುಕ್ತಾಯ ಮಾಡೋಕೆ ನಾವು ರೆಸಾರ್ಟ್ ಆಪರೇಷನ್ ಶುರುಮಾಡಿದ್ದು ಅಂತ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಬಿಜೆಪಿಯವರನ್ನ ಟೀಕಿಸಿದ್ದಾರೆ.

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲ ವಿಫಲವಾದ ಹಿನ್ನೆಲೆ ಶಾಸಕರು ವಾಪಸಾಗುತ್ತಿದ್ದಾರೆ. ಬಿಜೆಪಿಯವರು 10 ದಿನಗಳ ಕಾಲ ರೆಸಾರ್ಟ್‍ನಲ್ಲೆ ಇರುವಂತಹ ಕೆಲಸವೇನಿತ್ತು. ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋದವರ ಕಥೆ ಏನಾಗಿದೆ ಎಂಬುದನ್ನು ಅತೃಪ್ತರು ತಿಳಿಯಬೇಕು. ವಿಶೇಷವಾಗಿ ಮುಂಬೈನಲ್ಲಿ ಇರೋ ಶಾಸಕರು ಅರ್ಥ ಮಾಡಿಕೊಳ್ಳಲಿ ಎಂದ ಖಾದರ್ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಹಬ್ಬ ಇದ್ದರು ಕೂಡ ಬಿಜೆಪಿ ಅವರು ತಮ್ಮ ಶಾಸಕರನ್ನ ದೆಹಲಿಗೆ ಕರೆದೊಯ್ದರು. ಬಿಜೆಪಿ ಅವರು ಕಳೆದ 6 ತಿಂಗಳಿಂದ ಸಮ್ಮಿಶ್ರ ಸರ್ಕಾರ ಬೀಳತ್ತೆ ಅಂತಾನೇ ಹೇಳಿಕೊಂಡು ಬಂದಿದ್ದಾರೆ. ಆದ್ರೆ ನಮ್ಮ ಸರ್ಕಾರಕ್ಕೆ ಯಾವುದೇ ಆಪಾಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿಯವರು ಆಪರೇಷನ್ ಕಮಲ ಶುರುಮಾಡಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದವರ ಪರಿಸ್ಥಿತಿ ಏನಾಗಿದೆ ಯೋಚಿಸಿ. ನಿನ್ನೆ ನಾವು ರೆಸಾರ್ಟ್‍ಗೆ ಹೋಗಿದ್ದಕ್ಕೆ ಬಿಜೆಪಿಯವರು ರೆಸಾರ್ಟ್ ಬಿಟ್ರು. ಅವರು ರೆಸಾರ್ಟ್ ಬಿಟ್ಟು ರಾಜ್ಯಕ್ಕೆ ಬರಲಿ ಅಂತ ನಾವು ರೆಸಾರ್ಟ್‍ಗೆ ಹೋದೆವು ಎಂದು ಯು.ಟಿ ಖಾದರ್ ಹೇಳಿದ್ದಾರೆ.

    ಕಾಂಗ್ರೆಸ್ ಶಾಸಕರಲ್ಲಿರುವ ಒಗ್ಗಟ್ಟಿನ ಸಂದೇಶ ತಿಳಿದು ಬಿಜೆಪಿಯವರು ವಾಪಾಸ್ಸಾಗುತ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಎಂಡ್ ಮಾಡೋಕೆ ನಮ್ಮಿಂದ ರೆಸಾರ್ಟ್ ಆಪರೇಷನ್ ಸ್ಟಾರ್ಟ್ ಆಗಿದ್ದು. ರೆಸಾರ್ಟ್ ವಾಸ್ತವ್ಯ ಯಾವಾಗ ಮುಗಿಯುತ್ತೋ ಅದನ್ನ ಪಕ್ಷದ ನಾಯಕರು ತೀರ್ಮಾನಿಸಲಿದ್ದಾರೆ ಎಂದು ಯು.ಟಿ ಖಾದರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವ್ರದ್ದೆಲ್ಲ ಟೆಸ್ಟ್ ಮ್ಯಾಚ್, ನಮ್ದೆಲ್ಲ ಒನ್ ಡೇ ಮ್ಯಾಚ್: ಆಪರೇಷನ್ ಕಮಲಕ್ಕೆ ಖಾದರ್ ವ್ಯಂಗ್ಯ

    ಅವ್ರದ್ದೆಲ್ಲ ಟೆಸ್ಟ್ ಮ್ಯಾಚ್, ನಮ್ದೆಲ್ಲ ಒನ್ ಡೇ ಮ್ಯಾಚ್: ಆಪರೇಷನ್ ಕಮಲಕ್ಕೆ ಖಾದರ್ ವ್ಯಂಗ್ಯ

    ಮಂಗಳೂರು: ಬಿಜೆಪಿಯವರು ಮಾಡೋದೆಲ್ಲ ವ್ಯರ್ಥ ಕಸರತ್ತು. ಬಿಜೆಪಿ ಅವರದೆಲ್ಲ ಟೆಸ್ಟ್ ಮ್ಯಾಚ್, ನಾವೆಲ್ಲ ಒನ್ ಡೇ ಮ್ಯಾಚಲ್ಲಿ ಕೆಲಸ ಮುಗಿಸುತ್ತೇವೆ ಅಂತ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ.

    ಬಿಜೆಪಿಯ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿಯಲ್ಲಿ ಇರುವ ನಾಲ್ಕು ಸದಸ್ಯರನ್ನು ಹಿಡಿಯಲಾಗದವರು, ಕಾಂಗ್ರೆಸ್‍ನ 15 ಶಾಸಕರನ್ನು ಹಿಡಿಯೊಕ್ಕಾಗುತ್ತಾ? ಅವರದ್ದೆಲ್ಲ ಟೆಸ್ಟ್ ಮ್ಯಾಚ್ ಆದ್ರೆ ನಮ್ದೆಲ್ಲ ಒನ್ ಡೇ ಮ್ಯಾಚ್. ಒಂದೇ ದಿನದಲ್ಲಿ ಕೆಲಸ ಮಾಡಿ ಮುಗಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರಕ್ಕೆ ಬಹುಮತ ಬರುತ್ತದೆ ಎಂದು ಗೊತ್ತಾಗಿ ಬಿಜೆಪಿ ಅವರು ಗೊಂದಲ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಅವರನ್ನು ಜನರು ಪ್ರಶ್ನೆ ಮಾಡಬೇಕಾಗಿದೆ ಎಂದರು.

    ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಪಕ್ಷಕ್ಕೆ ತೊಂದರೆಯಾಗುವ ಯಾವುದೇ ಕೆಲಸವನ್ನು ಅವರು ಮಾಡುವುದಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ಮುಂದೆ ಕೂಡ ಚೆನ್ನಾಗಿ ನಡೆಯುತ್ತದೆ. ಬಿಜೆಪಿ ಅವರು ವಿರೋಧ ಪಕ್ಷದಲ್ಲಿದ್ದು ಸಾಮಾಜಕ್ಕೆ ಒಳ್ಳೆಯದನ್ನ ಮಾಡಲು ಸಲಹೆ ಸೂಚನೆ ಕೊಡುವುದನ್ನು ಬಿಟ್ಟು ಈ ರೀತಿ ಕೆಲಸ ಮಾಡುವುದು ತಪ್ಪು ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವರಾದ್ರೂ ರಸ್ತೆಗಿಳಿದು ಟ್ರಾಫಿಕ್ ನಿರ್ವಹಣೆ ಕೆಲ್ಸ ಮಾಡಿದ್ರು

    ಸಚಿವರಾದ್ರೂ ರಸ್ತೆಗಿಳಿದು ಟ್ರಾಫಿಕ್ ನಿರ್ವಹಣೆ ಕೆಲ್ಸ ಮಾಡಿದ್ರು

    ಮಂಗಳೂರು: ಉನ್ನತ ಸ್ಥಾನದಲ್ಲಿದ್ದರು ಯಾವುದೇ ಬೇಸರವಿಲ್ಲದೆ ರಸ್ತೆ ಮಧ್ಯೆ ಟ್ರಾಫಿಕ್ ಪೋಲಿಸ್ ಜೊತೆ ಟ್ರಾಫಿಕ್ ಸೇವಕನಾಗಿ ನಿಂತ್ಕೊಂಡು ಸುಗಮವಾಗಿ ವಾಹನಗಳು ಸಂಚರಿಸುವಂತೆ ಸಚಿವರೊಬ್ಬರು ಕೆಲಸ ಮಾಡಿದ್ದಾರೆ.

    ಸಚಿವರಾದ ಮೇಲೆ ಝೀರೋ ಟ್ರಾಫಿಕ್‍ನಲ್ಲಿ ಓಡಾಡೋರನ್ನ ನೋಡಿದ್ದೀರಾ. ಆದ್ರೆ ಉನ್ನತ ಸ್ಥಾನದಲ್ಲಿದ್ದು, ಸಚಿವರಾಗಿದ್ದರೂ ಯಾವುದೇ ಮುಲಾಜಿಲ್ಲದೆ ಟ್ರಾಫಿಕ್ ಕೆಲಸ ಮಾಡೋದನ್ನ ನೀವು ನೋಡಿರಲ್ಲ. ಆದ್ರೆ ವಸತಿ ಹಾಗೂ ನಗರ ಪಾಲಿಕೆಗಳ ಸಚಿವರಾದ ಯುಟಿ ಖಾದರ್ ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಸೇವಕನಾಗಿ ಸಲೀಸಾಗಿ ವಾಹನ ಸಂಚರಿಸುವಂತೆ ಕೆಲಸ ಮಾಡಿ ಟ್ರಾಫಿಕ್ ಪೊಲೀಸರಿಗೆ ಸಹಾಯ ಮಾಡಿದ್ದಾರೆ.

    ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಪಂಪ್ ವೆಲ್ ಬಳಿ ನಿರ್ಮಾಣವಾಗುತ್ತಿರುವ ಫ್ಲೈಓವರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ದಿನ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಇಂದು ಸಚಿವ ಯುಟಿ ಖಾದರ್ ಪಂಪ್ ವೆಲ್ ಮಾರ್ಗದಲ್ಲಿ ಬರ್ತಿದ್ದಂತೆ ಟ್ರಾಫಿಕ್ ಹೆಚ್ಚಾಗಿತ್ತು. ಇದನ್ನ ಕಂಡು ಸಚಿವರು ತಾವೇ ಖುದ್ದಾಗಿ ಕಾರಿನಿಂದ ಇಳಿದು ಪೊಲೀಸರ ಜೊತೆಗೆ ನಿಂತು ಟ್ರಾಫಿಕ್ ನಿರ್ವಹಣೆ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv