Tag: TYSON

  • ಮಲಯಾಳಂ ಪೃಥ್ವಿರಾಜ್ ನಟನೆಯ ಮೊದಲ ಕನ್ನಡ ಸಿನಿಮಾ ಐಎಎಸ್ ಆಫೀಸರ್ ಬದುಕಿನ ಕಥೆಯಾ?

    ಮಲಯಾಳಂ ಪೃಥ್ವಿರಾಜ್ ನಟನೆಯ ಮೊದಲ ಕನ್ನಡ ಸಿನಿಮಾ ಐಎಎಸ್ ಆಫೀಸರ್ ಬದುಕಿನ ಕಥೆಯಾ?

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈಗಷ್ಟೇ ಘೋಷಣೆ ಆಗಿರುವ ಟೈಸನ್ ಸಿನಿಮಾದಲ್ಲಿ ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಐಎಎಸ್ ಅಧಿಕಾರಿಯಾಗಿ ನಟಿಸಲಿದ್ದಾರಾ? ಹಾಗೆಂದು ಸೂಚನೆ ನೀಡುತ್ತದೆ ಬಿಡುಗಡೆ ಆಗಿರುವ ಪೋಸ್ಟರ್. ಈ ಪೋಸ್ಟರ್ ನಲ್ಲಿ ವ್ಯಕ್ತಿಯೊಬ್ಬ ‘ರಂಜನ್ ಘೋಷ್ ಐಎಎಸ್’ ಎಂದು ಬರೆಯುತ್ತಿರುವ ಬೋರ್ಡ್ ಕಾಣುತ್ತದೆ. ಹಾಗಾಗಿ ಇದು ಐಎಎಸ್ ಅಧಿಕಾರಿಯ ಬದುಕಿನ ಕಥೆ ಎನ್ನುವ ಪ್ರಶ್ನೆ ಮೂಡಿಸುತ್ತದೆ.

    ಇದೇ ಬೋರ್ಡ್ ನಲ್ಲೇ ಅವರು ಮತ್ತೊಂದು ಇಂಟ್ ಕೊಟ್ಟಿದ್ದಾರೆ. ಇದೇ ವರ್ಷವೇ ಈ ಸಿನಿಮಾ ಶೂಟಿಂಗ್ ಶುರು ಮಾಡಿಕೊಂಡು 2023ರಲ್ಲಿ ತೆರೆ ಕಾಣಬಹುದು. ಹಾಗಾಗಿ ರಂಜನ್ ಘೋಷ್ ಹೆಸರಿನ ಮುಂದೆ 2022-23 ಎಂದು ಇಸವಿಯನ್ನೂ ಬರೆಯಲಾಗಿದೆ. ಬಹುಬೇಗ ಸಿನಿಮಾ ಶುರು ಮಾಡಿ, ಬೇಗ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಮಲಯಾಳಂ ಸಿನಿಮಾ ಮೇಕರ್ಸ್ ತಡಮಾಡಿ ಸಿನಿಮಾ ಮಾಡುವುದು ಕಡಿಮೆ. ಹಾಗಾಗಿ ಈ ಸಿನಿಮಾ ಆದಷ್ಟು ಬೇಗ ತೆರೆಗೆ ಬರಬಹುದು. ಇದನ್ನೂ ಓದಿ: ತಂದೆಯ ಬ್ಯಾನರ್ ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾ ರಂಗವನ್ನೇ ಒಗ್ಗೂಡಿಸಿತ್ತು. ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಯ ಕಲಾವಿದರು ಕೆಜಿಎಫ್ 2 ಚಿತ್ರಕ್ಕಾಗಿ ಒಂದಾಗಿ, ತಮ್ಮ ಭಾಷೆಯಲ್ಲೇ ಈ ಚಿತ್ರವನ್ನು ನೋಡಿ ಕೊಂಡಾಡಿದ್ದರು. ಹಾಗಾಗಿ ಹೊಂಬಾಳೆ ಫಿಲ್ಸ್ಮ್ ಜೊತೆಗೆ ಭಾರತೀಯ ಸಿನಿಮಾ ರಂಗದ ಬಹುತೇಕ ಕಲಾವಿದರ ಒಡನಾಟ ಬೆಳೆದಿತ್ತು. ಇಂತಿಪ್ಪ ಈ ಬೆಳವಣಿಗೆಯ ಕಾರಣದಿಂದಾಗಿಯೇ ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಕನ್ನಡಕ್ಕೆ ಬಂದಿದ್ದಾರೆ.

  • ಮಲಯಾಳಂ ಪೃಥ್ವಿರಾಜ್ ಜೊತೆ ಹೊಂಬಾಳೆ ಫಿಲ್ಮ್ಸ್ ಘೋಷಣೆ : ಐದು ಭಾಷೆಗಳಲ್ಲಿ ಸಿನಿಮಾ

    ಮಲಯಾಳಂ ಪೃಥ್ವಿರಾಜ್ ಜೊತೆ ಹೊಂಬಾಳೆ ಫಿಲ್ಮ್ಸ್ ಘೋಷಣೆ : ಐದು ಭಾಷೆಗಳಲ್ಲಿ ಸಿನಿಮಾ

    ಒಂದು ಗಂಟೆಯ ಹಿಂದೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಲಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯನ್ನು ಪ್ರಕಟಿಸಿತ್ತು. ಅದು ಈಗ ನಿಜವಾಗಿದೇ ನಾಲ್ಕು ಭಾಷೆಗಳಲ್ಲಿ ಟೈಸನ್ ಸಿನಿಮಾ ಮಾಡುತ್ತಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಪೃಥ್ವಿರಾಜ್ ಈ ಸಿನಿಮಾದಲ್ಲಿ ಅವರೇ ಮುಖ್ಯ ಪಾತ್ರ ಮಾಡಿ, ನಿರ್ದೇಶನವನ್ನೂ ಮಾಡಲಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾ ರಂಗವನ್ನೇ ಒಗ್ಗೂಡಿಸಿತ್ತು. ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಯ ಕಲಾವಿದರು ಕೆಜಿಎಫ್ 2 ಚಿತ್ರಕ್ಕಾಗಿ ಒಂದಾಗಿ, ತಮ್ಮ ಭಾಷೆಯಲ್ಲೇ ಈ ಚಿತ್ರವನ್ನು ನೋಡಿ ಕೊಂಡಾಡಿದ್ದರು. ಹಾಗಾಗಿ ಹೊಂಬಾಳೆ ಫಿಲ್ಸ್ಮ್ ಜೊತೆಗೆ ಭಾರತೀಯ ಸಿನಿಮಾ ರಂಗದ ಬಹುತೇಕ ಕಲಾವಿದರ ಒಡನಾಟ ಬೆಳೆದಿತ್ತು. ಇಂತಿಪ್ಪ ಈ ಬೆಳವಣಿಗೆಯ ಕಾರಣದಿಂದಾಗಿಯೇ ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಕನ್ನಡಕ್ಕೆ ಬಂದಿದ್ದಾರೆ. ಇದನ್ನೂ ಓದಿ: ತಂದೆಯ ಬ್ಯಾನರ್ ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

    ಮಲಯಾಳಂನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗಾಯಕರೂ ಆಗಿರುವ ಪೃಥ್ವಿರಾಜ್ ಸುಕುಮಾರನ್ ಕೆಜಿಎಫ್ 2 ಸಿನಿಮಾವನ್ನು ಮಲಯಾಳಂನಲ್ಲಿ ಪ್ರೆಸೆಂಟ್ ಮಾಡಿದ್ದರು. ಈ ಸಿನಿಮಾದ ವಿತರಕರೂ ಕೂಡ ಅವರೇ ಆಗಿದ್ದರು. ಬೆಂಗಳೂರಿನಲ್ಲಿ ನಡೆದ ಕೆಜಿಎಫ್ 2 ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೂ ಆಗಮಿಸಿದ್ದರು. ಇದೀಗ ಹೊಂಬಾಳೆ ಬ್ಯಾನರ್ನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ.