Tag: Tyre

  • ಟೈರ್ ಸ್ಫೋಟಗೊಂಡು ದೇವಸ್ಥಾನಕ್ಕೆ ಗುದ್ದಿದ ಲಾರಿ- ತಪ್ಪಿದ ಭಾರೀ ಅನಾಹುತ

    ಟೈರ್ ಸ್ಫೋಟಗೊಂಡು ದೇವಸ್ಥಾನಕ್ಕೆ ಗುದ್ದಿದ ಲಾರಿ- ತಪ್ಪಿದ ಭಾರೀ ಅನಾಹುತ

    ಧಾರವಾಡ: ಟೈರ್ ಸ್ಫೋಟಗೊಂಡು ಲಾರಿಯೊಂದು ದೇವಸ್ಥಾನಕ್ಕೆ ಗುದ್ದಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ಧಾರವಾಡ ಜಿಲ್ಲೆಯ ಗುಳೇದಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿಯಿಂದ ಧಾರವಾಡಕ್ಕೆ ತೆರಳುತ್ತಿದ್ದಾಗ ಲಾರಿ ಐತಿಹಾಸಿಕ ಈಶ್ವರ ದೇವಸ್ಥಾನಕ್ಕೆ ಹಿಂದಿನಿಂದ ಗುದ್ದಿದೆ. ಅಕ್ಕಪಕ್ಕದಲ್ಲಿ ಮನೆಗಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ದೇವಸ್ಥಾನ ಇದಾಗಿದೆ. ಇಂದು ಬೆಳಗಿನ ಜಾವ 7ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

    ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ನಡೆದಿದೆ.

  • ಮೈಲಾರಕ್ಕೆ ತೆರಳಿ ವಾಪಸ್ಸಾಗುವಾಗ ಟ್ರ್ಯಾಕ್ಟರ್ ಟಯರ್ ಸ್ಫೋಟ- ಇಬ್ಬರ ಸಾವು, ಒಂದೂವರೆ ವರ್ಷದ ಮಗುವಿಗೆ ಗಾಯ

    ಮೈಲಾರಕ್ಕೆ ತೆರಳಿ ವಾಪಸ್ಸಾಗುವಾಗ ಟ್ರ್ಯಾಕ್ಟರ್ ಟಯರ್ ಸ್ಫೋಟ- ಇಬ್ಬರ ಸಾವು, ಒಂದೂವರೆ ವರ್ಷದ ಮಗುವಿಗೆ ಗಾಯ

    ದಾವಣಗೆರೆ: ಮೈಲಾರಕ್ಕೆ ತೆರಳಿ ವಾಪಸ್ಸಾಗುವಾಗ ಟ್ರ್ಯಾಕ್ಟರ್ ಟಯರ್ ಸ್ಫೋಟಗೊಂಡು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯ ಹೊರವಲಯದಲ್ಲಿ ನಡೆದಿದೆ.

    ಮೀನಾ ಹಾಗೂ ಹನುಮಕ್ಕ ಮೃತ ದುರ್ದೈವಿಗಳು. ಘಟನೆಯಲ್ಲಿ ಒಂದೂವರೆ ವರ್ಷದ ಕಾವೇರಿ ಎಂಬ ಮಗುವಿಗೆ ಗಂಭೀರ ಗಾಯಗಳಾಗಿದೆ.

    ಶನಿವಾರ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಮೈಲಾರದ ಕಾರಣಿಕ ಜಾತ್ರೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಶಾಮನೂರು ಬಳಿ ಟ್ರ್ಯಾಕ್ಟರ್ ಟಯರ್ ಬ್ಲಾಸ್ಟ್ ಆಗಿ ಹೆದ್ದಾರಿಯಿಂದ ಸರ್ವಿಸ್ ರೋಡಿಗೆ ಉರುಳಿ ಬಿದ್ದಿದೆ.

    ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.