ಆನೇಕಲ್: ಟೈರ್ ಬ್ಲಾಸ್ಟ್ (Tyre Blast) ಆದ ಪರಿಣಾಮ ನಿಯಂತ್ರಣ ತಪ್ಪಿ ಖಾಸಗಿ ಕಂಪನಿಯ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ (Private Bus) ಡಿಕ್ಕಿಯಾಗಿ 10 ಮಂದಿ ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನ (Tamil Nadu) ಹೊಸೂರಿನ (Hosur) ದರ್ಗಾ ಎಂಬಲ್ಲಿ ನಡೆದಿದೆ.
ಬೆಂಗಳೂರು-ಹೊಸೂರು ಹೆದ್ದಾರಿಯ ಹೊಸೂರಿನಲ್ಲಿ ಚಲಿಸುತ್ತಿದ್ದ ಬಸ್ಸಿನ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ – ಜಾಮೀನಿನ ಮೇಲೆ ಹೊರಗಿರುವ 5 ಆರೋಪಿಗಳಿಗೂ ಶುರುವಾದ ಸಂಕಷ್ಟ
ಘಟನೆ ಸಂಭವಿಸಿದ ವೇಳೆ ಬಸ್ಸಿನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಈ ಪೈಕಿ 10 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪ್ಕಾಟ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕ್ಷೇತ್ರಕ್ಕೆ ಅವಮಾನ – ಯೂಟ್ಯೂಬರ್ ಸಮೀರ್ ನಾಪತ್ತೆ












