Tag: Tyre

  • ಟೈರ್ ಬ್ಲಾಸ್ಟ್‌ನಿಂದ ವಾಹನ ಪಲ್ಟಿ – ಅಪಾರ ಪ್ರಮಾಣದ ಮದ್ಯ ನಾಶ

    ಟೈರ್ ಬ್ಲಾಸ್ಟ್‌ನಿಂದ ವಾಹನ ಪಲ್ಟಿ – ಅಪಾರ ಪ್ರಮಾಣದ ಮದ್ಯ ನಾಶ

    ಕಲಬುರಗಿ: ಟೈರ್ ಬ್ಲಾಸ್ಟ್ (tyre Blast) ಆಗಿ ಮದ್ಯ (Alcohol) ಸರಬರಾಜು ಮಾಡುತ್ತಿದ್ದ ವಾಹನ ಪಲ್ಟಿಯಾದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಹಸನಾಪುರ ಗ್ರಾಮದ ಬಳಿ ನಡೆದಿದೆ.

    ಕಲಬುರಗಿ ನಗರದ ಗೋದಮಿನಿಂದ ಜೇವರ್ಗಿ ಪಟ್ಟಣದ ವೈನ್ ಶಾಪ್‍ಗಳಿಗೆ ಮದ್ಯವನ್ನು ಸರಬರಾಜು ಮಾಡಲು ಹೋಗುತ್ತಿದ್ದ ವಾಹನದ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಪರಿಣಾಮವಾಗಿ ಅಪಾರ ಪ್ರಮಾಣದ ಮದ್ಯದ ಬಾಟಲಿಗಳು ನಾಶವಾಗಿದೆ. ಇದನ್ನೂ ಓದಿ: ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್..!

    ಇನ್ನೂ ಘಟನೆ ವೇಳೆ ಯಾವುದೇ ಪ್ರಾಣಹಾನಿ ಆಗಿಲ್ಲ. ಚಾಲಕನಿಗೆ ಹಾಗೂ ಕ್ಲಿನರ್ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಕಲಬುರಗಿ ನಗರ ಸಂಚಾರಿ 1 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹೊಸ ಪಕ್ಷದೊಂದಿಗೆ ಫುಲ್ ಆಕ್ಟೀವ್- ಜನಾರ್ದನ ರೆಡ್ಡಿ ಓಡಾಟದಿಂದ ಬಿಜೆಪಿಗೆ ಶುರುವಾಯ್ತು ನಡುಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಸ್‍ನ ಟಯರ್ ಸ್ಫೋಟ – 20 ಮಂದಿ ಪ್ರಯಾಣಿಕರಿಗೆ ಗಾಯ

    ಬಸ್‍ನ ಟಯರ್ ಸ್ಫೋಟ – 20 ಮಂದಿ ಪ್ರಯಾಣಿಕರಿಗೆ ಗಾಯ

    ಚಾಮರಾಜನಗರ: ತಮಿಳುನಾಡಿನ ಮೆಟ್ಟೂರಿನಿಂದ ಮೈಸೂರಿಗೆ ಬರುತ್ತಿದ್ದ ತಮಿಳುನಾಡಿನ ಸಾರಿಗೆ ಸಂಸ್ಥೆ ಬಸ್‍ನ ಟಯರ್ ಸ್ಫೋಟಗೊಂಡು 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಅಜ್ಜೀಪುರ ಸಮೀಪ ನಡೆದಿದೆ.

    ಬಸ್ ಸಂಚರಿಸುತ್ತಿರುವಾಗಲೇ ಟಯರ್ ಸ್ಫೋಟಗೊಂಡು ರಸ್ತೆ ಪಕ್ಕದ ಕಮರಿಗೆ ಹೋಗಿ ನಿಂತಿದೆ. ಅದೃಷ್ಟವಶಾತ್ ಬಸ್‍ನ ಅಕ್ಕಪಕ್ಕ ಯಾವುದೇ ವಾಹನಗಳು ಇರಲಿಲ್ಲ. ಜೊತೆಗೆ ಬಸ್ ನಿಧಾನಗತಿಯಲ್ಲಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಬಸ್‍ನಲ್ಲಿ ಎಲ್ಲಾ ಆಸನಗಳು ಭರ್ತಿಯಾಗಿತ್ತು ಎಂಬ ಮಾಹಿತಿ ತಿಳಿದುಬಂದಿದ್ದು, 20 ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಮಂಡ್ಯ SP ಹುದ್ದೆ ಹರಾಜಿಗಿದೆ – ಸಾಮಾಜಿಕ ಜಾಲತಾಣದಲ್ಲಿ ಲೇವಡಿ

    ತಮಿಳುನಾಡಿನ ಸಾರಿಗೆ ಡಿಪೋ ರೀ ಬಿಲ್ಟ್ ಟಯರ್ ಬಳಸಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದ್ದು ಸದ್ಯ ರಾಮಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನು ಹನೂರು ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಡಿಕ್ಕಿ – ಸವಾರನನ್ನು ಒದ್ದು ಕೊಂದ ಕಿರಾತಕ

  • ಕಾರಿನ ಟೈರ್ ಬ್ಲಾಸ್ಟ್- ದಂಪತಿ ಸಾವು, 5 ವರ್ಷದ ಮಗು ಪಾರು

    ಕಾರಿನ ಟೈರ್ ಬ್ಲಾಸ್ಟ್- ದಂಪತಿ ಸಾವು, 5 ವರ್ಷದ ಮಗು ಪಾರು

    ತುಮಕೂರು: ಚಲಿಸುತಿದ್ದ ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ದಂಪತಿ ಸಾವನಪ್ಪಿ, 5 ವರ್ಷದ ಮಗುವಿಗೆ ಗಾಯವಾಗಿರುವ ಘಟನೆ ನಡೆದಿದೆ.

    ಶಿರಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿ ಅವಘಡ ಸಂಭವಿಸಿದೆ. ಧಾರವಾಡ ಮೂಲದ ಶಿಲ್ಪಾ(32), ವಿನಯ್ ಸ್ವಾಮಿ (35) ಮೃತ ದಂಪತಿ. ಧಾರವಾಡದಿಂದ ಬೆಂಗಳೂರಿಗೆ ಹೋಗುವಾಗ ದಾರಿ ಮಧ್ಯೆ ಅವಘಡ ಸಂಭವಿಸಿದೆ. ಇದನ್ನೂ ಓದಿ: ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!

    ಗಾಯಗೊಂಡ 5 ವರ್ಷದ ಮಗುವನ್ನು ಸ್ಥಳೀಯರು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲ್ಯಾಂಡಿಂಗ್ ವೇಳೆ ಟಯರ್ ಬ್ಲಾಸ್ಟ್ – ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

    ಲ್ಯಾಂಡಿಂಗ್ ವೇಳೆ ಟಯರ್ ಬ್ಲಾಸ್ಟ್ – ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

    ಹುಬ್ಬಳ್ಳಿ: ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನದ ಟಯರ್ ಬ್ಲಾಸ್ಟ್ ಆದ ಘಟನೆ ಸೀಮವಾರ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

    ಸೋಮವಾರ ರಾತ್ರಿ ಕಣ್ಣೂರು- ಹುಬ್ಬಳ್ಳಿ ಬೆಂಗಳೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆ ಚಕ್ರ ಬ್ಲಾಸ್ಟ್ ಆಗಿದೆ. ವಿಮಾನದ ಚಕ್ರ ಬ್ಲಾಸ್ಟ್ ಆದರೂ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

    ನಿನ್ನೆ ಸಂಜೆ ಕಣ್ಣೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಈ ವಿಮಾನ, ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ 8:30ಕ್ಕೆ ಲ್ಯಾಂಡಿಂಗ್ ಆಗುವ ವೇಳೆ ರನ್ ವೇ ಯಿಂದ 300 ಮೀಟರ್ ದೂರ ಮುಂದೆ ಸಾಗಿ ಲ್ಯಾಂಡಿಂಗ್ ಆಗಿದೆ. ಈ ವೇಳೆ ಕ್ರಾಪ್ ವಿಂಡ್ ಪರಿಣಾಮದಿಂದ ವಿಮಾನದ ಮುಂದಿನ ಟಯರ್ ಬ್ಲಾಸ್ಟ್ ಆದ ಕೂಡಲೇ ಎಚ್ಚೆತ್ತ ಪೈಲಟ್ ಗಳು ವಿಮಾನವನ್ನುಸ ಮತ್ತೆ ಟೇಕಾಫ್ ಮಾಡಿ ಮತ್ತೊಮ್ಮೆ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.

    ಕಣ್ಣೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಈ ವಿಮಾನದಲ್ಲಿ 7 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅಲ್ಲದೇ ವಿಮಾನದಲ್ಲಿ ಇಬ್ಬರು ಪೈಲೆಟ್ ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಮುನಿರತ್ನ ಮಂತ್ರಿಯಾಗಲಿದ್ದಾರೆ: ಸೋಮಣ್ಣ ಭವಿಷ್ಯ

    ಇದೇ ವಿಮಾನದ ಮೂಲಕ ಹುಬ್ಬಳ್ಳಿಯಿಂದ 18 ಜನರು ಬೆಂಗಳೂರಿಗೆ ಪ್ರಯಾಣ ಮಾಡಬೇಕಾಗಿತ್ತು. ಟಯರ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣವನ್ನ ರದ್ದು ಮಾಡಲಾಗಿದ್ದು, ಕಣ್ಣೂರಿನಿಂದ ಬಂದ ಪ್ರಯಾಣಿಕರಿಗೆ ಖಾಸಗಿ ಹೊಟೇಲ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

    ಇಂಡಿಗೋ ವಿಮಾನದ ಟಯರ್ ಬ್ಲಾಸ್ಟ್ ಆದ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ತಂಡ ಇಂದು ಪರಿಶೀಲನೆ ನಡೆಸಲಿದ್ದು. ಇಂಡಿಗೋ ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ವಿಮಾನದ ಟೈಯರ್ ಬದಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

  • ಟಯರ್ ಸ್ಫೋಟಗೊಂಡು ಅಂಬುಲೆನ್ಸ್ ಮರಕ್ಕೆ ಡಿಕ್ಕಿ – ತುಂಬು ಗರ್ಭಿಣಿ ಸಹಿತ ಮೂವರ ದುರ್ಮರಣ

    ಟಯರ್ ಸ್ಫೋಟಗೊಂಡು ಅಂಬುಲೆನ್ಸ್ ಮರಕ್ಕೆ ಡಿಕ್ಕಿ – ತುಂಬು ಗರ್ಭಿಣಿ ಸಹಿತ ಮೂವರ ದುರ್ಮರಣ

    ಚೆನ್ನೈ: ಟಯರ್ ಸ್ಫೋಟಗೊಂಡು ಜೀವ ಉಳಿಸಬೇಕಾದ ಅಂಬುಲೆನ್ಸ್ ಮರಕ್ಕೆ ಹೊಡೆದ ಪರಿಣಾಮ ತುಂಬು ಗರ್ಭಿಣಿ ಸೇರಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಕಲಕುರಿಚಿ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಗರ್ಣಿಣಿ ಜಯಲಕ್ಷ್ಮಿ(26), ಅತ್ತೆ ಸೆಲ್ವಿ(55) ಹಾಗೂ ನಾದಿನಿ ಅಂಬಿಕಾ (30) ಎಂದು ಗುರುತಿಸಲಾಗಿದೆ. ಸೊರಪುಟ್ಟ ಗ್ರಾಮದ ನಿವಾಸಿ ಜಯಲಕ್ಷ್ಮಿ ಅವರು 9 ತಿಂಗಳ ಗರ್ಭಿಣಿ. ಇವರಿಗೆ ಗುರುವಾರ ನಸುಕಿನ ಜಾವ 2.30ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಜಯಲಕ್ಷ್ಮಿ ಪತಿ 108 ಗೆ ಕರೆ ಮಾಡಿದ್ದಾರೆ. ಹೀಗಾಗಿ ಜಯಲಕ್ಷ್ಮಿ ಅತ್ತೆ ಹಾಗೂ ಅವರ ಮಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಅಂಬುಲೆನ್ಸ್ ಹತ್ತಿದ್ದಾರೆ.

    ಹೀಗೆ ಅಂಬುಲೆನ್ಸ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಅಂಬುಲೆನ್ಸ್ ಟಯರ್ ಸ್ಫೋಟಗೊಂಡು ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಅಂಬುಲೆನ್ಸ್ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬಂಡೀಪುರ ಸಂರಕ್ಷಿತಾರಣ್ಯದಲ್ಲಿ ಹುಲಿ ಸಾವು

    ಘಟನೆ ಸಂಬಂಧಿಸಿಂದತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೃತ ಜಯಲಕ್ಷ್ಮಿ ಕುಟುಂಬಕ್ಕೆ 5 ಲಕ್ಷ ಹಾಗೂ ಅವರ ತ್ತೆ ಹಾಗೂ ನಾದಿನಿ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • ಗೋದಾಮಿನಲ್ಲಿ ಅಗ್ನಿ ಅವಘಡ- ಹೊತ್ತಿ ಉರಿದ ಟೈರ್‌ಗಳು

    ಗೋದಾಮಿನಲ್ಲಿ ಅಗ್ನಿ ಅವಘಡ- ಹೊತ್ತಿ ಉರಿದ ಟೈರ್‌ಗಳು

    ರಾಮನಗರ: ಟೈರ್ ಸಂಗ್ರಹ ಮಾಡಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ರಾಮನಗರದ ಯಾರಬ್ ನಗರದ ಹುಣಸನಹಳ್ಳಿ ರಸ್ತೆಯಲ್ಲಿರುವ ಗೋದಾಮಿನಲ್ಲಿ ನಡೆದಿದೆ.

    ಬೆಳಗ್ಗೆ ಇದ್ದಕ್ಕಿದ್ದಂತೆ ಅಗ್ನಿ ಅವಘಡ ಸಂಭವಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅಕ್ರಂ ಷರಿಫ್ ಎಂಬವರಿಗೆ ಸೇರಿದ ಹಳೆಟೈರ್ ಸಂಗ್ರಹ ಗೊಡಾನ್ ಇದಾಗಿದ್ದು, ಬೆಂಕಿಯ ನರ್ತನಕ್ಕೆ ಟೈರ್ ಗಳು ಹೊತ್ತಿ ಉರಿದಿವೆ.

    ಗೊಡಾನ್ ಅಕ್ಕಪಕ್ಕದಲ್ಲಿ ಜನರು ವಾಸಮಾಡುವ ಮನೆಗಳಿಲ್ಲದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. 30 ನಿಮಿಷಗಳ ಬಳಿಕ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ. ನೂರಾರು ಟಯರ್ ಗಳು ಏಕಕಾಲದಲ್ಲಿ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಅಗ್ನಿ ಅವಘಡಕ್ಕೆ ನಿಖರವಾದ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

    ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ರಾಮನಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಚಲಿಸುತ್ತಿದ್ದ KSRTC ಬಸ್ ಟೈರ್ ಸ್ಫೋಟಗೊಂಡು ಅಪಘಾತ

    ಚಲಿಸುತ್ತಿದ್ದ KSRTC ಬಸ್ ಟೈರ್ ಸ್ಫೋಟಗೊಂಡು ಅಪಘಾತ

    ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮುಂಭಾಗದ ಟೈರ್ ಸ್ಫೋಟಗೊಂಡು ಬಸ್ ಅಪಘಾಕ್ಕೀಡಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರ ಐಟಿಐ ಕಾಲೇಜು ಬಳಿ ನಡೆದಿದೆ.

    ದೊಡ್ಡಬಳ್ಳಾಪುರ ನಗರದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಅನಂತಪುರಕ್ಕೆ ತೆರಳುತ್ತಿತ್ತು. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‍ನ ಟೈರ್ ಸ್ಫೋಟಗೊಂಡಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಅಲ್ಲದೆ ಬಸ್ ರಸ್ತೆ ಬದಿ ನಿರ್ಮಿಸಲಾಗಿದ್ದ ಜಾಹೀರಾತು ನಾಮಫಲಕದ ಕೆಳಗೆ ಇದ್ದ ಖಾಲಿ ಕಂಟೈನರ್ ಗೆ ಗುದ್ದಿದೆ. ಪರಿಣಾಮ ಕಂಟೈನರ್ ಮನೆಗೆ ಡಿಕ್ಕಿಗೆ ಹೊಡೆದಿದೆ.

    ಇದರಿಂದ ಬಸ್‍ನ ಮುಂಭಾಗ ಜಖಂಗೊಂಡಿದ್ದು ಚಾಲಕ, ನಿರ್ವಾಹಕ ಹಾಗೂ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಾಗೇಪಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೊಲೀಸ್ ಜೀಪ್ ಟೈರಿನಲ್ಲಿ ನಾಗರಹಾವು ಪ್ರತ್ಯಕ್ಷ

    ಪೊಲೀಸ್ ಜೀಪ್ ಟೈರಿನಲ್ಲಿ ನಾಗರಹಾವು ಪ್ರತ್ಯಕ್ಷ

    ಮೈಸೂರು: ಮೈಸೂರಿನಲ್ಲಿ ಪೊಲೀಸ್ ಜೀಪ್ ಟೈರಿನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ.

    ಮೈಸೂರಿನ ಪೊಲೀಸ್ ಅಕಾಡೆಮಿ ಡಿವೈಎಸ್‍ಪಿ ಮಾರುತಿ ಅವರಿದ್ದ ಜೀಪಿನ ಟೈರ್ ನಲ್ಲಿ ಹಾವು ಕಾಣಿಸಿಕೊಂಡಿದೆ. ನಗರದ ಜಯಚಾಮರಾಜೇಂದ್ರ ವೃತ್ತದ ಬಳಿ ಪೊಲೀಸರು ತಮ್ಮ ಜೀಪ್‍ನ್ನು ನಿಲ್ಲಿಸಿದ್ದರು. ಈ ವೇಳೆ ನಾಗರಹಾವು ಜೀಪ್‍ನ ಟೈರ್ ಹೊರ ಭಾಗದಲ್ಲಿ ಕಾಣಿಸಿಕೊಂಡಿದೆ.

    ನಾಗರಹಾವನ್ನು ನೋಡಿದ ಪೊಲೀಸರು ತಕ್ಷಣ ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಂ ಟೈರ್‍ನಲ್ಲಿ ಸುತ್ತಿಕೊಂಡಿದ್ದ ನಾಗರಹಾವನ್ನು ಹೊರತೆಗೆದಿದ್ದಾರೆ.

    ಸ್ನೇಕ್ ಶ್ಯಾಂ ನಾಗರಹಾವನ್ನು ರಕ್ಷಿಸುವಾಗ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.

    https://www.youtube.com/watch?v=6VepWyyl_TA

  • ಪ್ರತಿಭಟನೆಯಲ್ಲಿ ಟೈರ್ ಒದೆಯಲು ಹೋಗಿ ಕಾರ್ಯಕರ್ತನ ಕಾಲಿಗೆ ತಗುಲಿದ ಬೆಂಕಿ!

    ಪ್ರತಿಭಟನೆಯಲ್ಲಿ ಟೈರ್ ಒದೆಯಲು ಹೋಗಿ ಕಾರ್ಯಕರ್ತನ ಕಾಲಿಗೆ ತಗುಲಿದ ಬೆಂಕಿ!

    ಧಾರವಾಡ: ಬಂದ್ ಪ್ರತಿಭಟನೆಯಲ್ಲಿ ಟೈರ್ ಗೆ ಬೆಂಕಿ ಹಚ್ಚುವ ವೇಳೆ ಕಾರ್ಯಕರ್ತನ ಕಾಲಿಗೆ ಆ ಬೆಂಕಿ ತಗುಲಿದ ಘಟನೆ ನಗರದ ಜ್ಯೂಬಿಲಿ ಸರ್ಕಲ್‍ನಲ್ಲಿ ನಡೆದಿದೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಮಾಡದ್ದಕ್ಕೆ ಬಿಜೆಪಿ ಇಂದು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಬಸವರಾಜ್ ಇಂದೂರ ಹೊತ್ತಿ ಉರಿಯುತ್ತಿದ್ದ ಟೈರ್ ಗೆ ಒದೆಯಲು ಹೋಗಿ ಬಲಗಾಲಿಗೆ ಬೆಂಕಿ ತಗುಲಿದೆ.

    ಬೆಂಕಿ ಹತ್ತಿದ್ದ ಕೂಡಲೇ ಬಸವರಾಜು ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಬಿಜೆಪಿ ಕಾರ್ಯಕರ್ತರು ಆ ಬೆಂಕಿ ನಂದಿಸಿದ್ದಾರೆ. ಟೈರ್ ಗೆ ಪೆಟ್ರೋಲ್ ಹಾಕುವಾಗ ಈ ಘಟನೆ ನಡೆದ ನಂತರ ಪೊಲೀಸರು ಆ ಟೈರ್ ಗಳನ್ನು ಅಲ್ಲಿಂದ ತೆರವುಗೊಳಿಸಿದರು.

  • ಮುಂಭಾಗದ ಚಕ್ರವೇ ಇಲ್ಲದೆ ಹೋಗ್ತಿದ್ದ ಕಾರ್ ತಡೆದ ಪೊಲೀಸರು- ಏನ್ ಪ್ರಾಬ್ಲಮ್ ಎಂದ ಚಾಲಕ

    ಮುಂಭಾಗದ ಚಕ್ರವೇ ಇಲ್ಲದೆ ಹೋಗ್ತಿದ್ದ ಕಾರ್ ತಡೆದ ಪೊಲೀಸರು- ಏನ್ ಪ್ರಾಬ್ಲಮ್ ಎಂದ ಚಾಲಕ

    ಲಂಡನ್: ಮುಂಭಾಗದಲ್ಲಿ ಒಂದು ಚಕ್ರವೇ ಇಲ್ಲದ ಕಾರ್ ಓಡಿಸುತ್ತಿದ್ದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಇಂಗ್ಲೆಂಡಿನ ಲಂಕಾಶೈರ್‍ನಲ್ಲಿ ನಡೆದಿದೆ.

    ಮಾರ್ಚ್ 18ರಂದು ಇಲ್ಲಿನ ನಾರ್ತ್ ಪ್ರೆಸ್ಟನ್ ಹಾಗು ಬ್ಲಾಕ್‍ಪೂಲ್ ನಡುವೆ ಇರುವ ಎಮ್55 ಹೆದ್ದಾರಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಈ ಕಾರನ್ನ ತಡೆದಿದ್ದರು. ಕಾರ್‍ಗೆ ಮುಂಭಾಗದಲ್ಲಿ ಒಂದು ಚಕ್ರ ಇಲ್ಲದೆ ರಸ್ತೆ ಮೇಲೆ ವಾಲಿಕೊಂಡು ಹೋಗುತ್ತಿದ್ದುದನ್ನ ಅಧಿಕಾರಿಗಳು ನೋಡಿದ್ದರು. ಈ ಬಗ್ಗೆ ಇತರೆ ಚಾಲಕರಿಂದ ಪೊಲೀಸರಿಗೆ ಸಾಕಷ್ಟು ದೂರುಗಳು ಸಹ ಬಂದಿದ್ದವು ಎಂದು ವರದಿಯಾಗಿದೆ.

    ಲಂಕಶೈರ್ ರಸ್ತೆ ಪೊಲೀಸರು ಟ್ವಿಟ್ಟರ್ ನಲ್ಲಿ ಕಾರಿನ ಫೋಟೋಗಳನ್ನ ಹಾಕಿದ್ದು, ಚಾಲಕನಿಗೆ ಸಮಸ್ಯೆ ಏನು ಅನ್ನೋದೇ ಗೊತ್ತಿರಲಿಲ್ಲ. ಹಲವಾರು ಉಲ್ಲಂಘನೆಗಳ ಆರೋಪದ ಮೇಲೆ ಈಗ ಚಾಲಕ ಕೋರ್ಟ್ ನಲ್ಲಿದ್ದಾನೆ ಎಂದು ಹೇಳಿದ್ದಾರೆ.

    ಇಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ ಚಾಲಕ ಈ ಹಿಂದೆಯೂ ಟೈರ್ ಸಮಸ್ಯೆ ಎದುರಿಸಿದ್ದ. ಕಾರಿನ ಎಡಬದಿಯಲ್ಲಿರುವುದು ಟೆಂಪೊರರಿ ಟೈಂ ಸೇವರ್. ಇಂತಹ ಟೈರ್‍ಗಳನ್ನ ತಾತ್ಕಾಲಿಕವಾಗಿ ಮಾತ್ರ ಬಳಸಬಹುದು. ಗಂಟೆಗೆ 50 ಮೈಲಿಗೂ ಹೆಚ್ಚಿನ ವೇಗಕ್ಕೆ ಬಳಸುವಂತಿಲ್ಲ.

    ಕಾರನ್ನ ಈ ಹಿಂದೆಯೂ ನೋಡಿದ್ದೆವು. ಚಾಲಕ ಸಿಕ್ಕಿಬಿದ್ದ ನಂತರ ಸಾಕ್ಷಿಗಾಗಿ ಫೋಟೋಗಳನ್ನ ತೆಗೆದೆವು ಎಂದು ಕಾರಿನ ಚಿತ್ರಗಳನ್ನ ತೆಗೆದ ಟಾಮ್ ಡೇವಿಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.