Tag: Typist

  • ಭಿಕ್ಷೆ ಬೇಡಲ್ಲ, ಸಾಲವನ್ನು ಮರುಪಾವತಿಸಲು 72ನೇ ವರ್ಷದಲ್ಲಿ ಟೈಪಿಸ್ಟ್ ಆದ್ರು ಸೂಪರ್ ವುಮನ್!

    ಭಿಕ್ಷೆ ಬೇಡಲ್ಲ, ಸಾಲವನ್ನು ಮರುಪಾವತಿಸಲು 72ನೇ ವರ್ಷದಲ್ಲಿ ಟೈಪಿಸ್ಟ್ ಆದ್ರು ಸೂಪರ್ ವುಮನ್!

    ಭೋಪಾಲ್: ತೆಗೆದುಕೊಂಡ ಸಾಲವನ್ನು ಪಾವತಿಸಲು 72 ವರ್ಷದ ಮಹಿಳೆಯೊಬ್ಬರು ಟೈಪಿಸ್ಟ್ ಉದ್ಯೋಗವನ್ನು ಸೇರಿಕೊಂಡಿದ್ದಾರೆ.

    ತನ್ನ ಮಗಳ ಅಪಘಾತದ ನಂತರ ಚಿಕಿತ್ಸೆಗೆ ತೆಗೆದುಕೊಂಡ ಸಾಲವನ್ನು ಪಾವತಿ ಮಾಡಲು ಲಕ್ಷ್ಮೀಬಾಯಿ ಎಂಬವರು ಜಿಲ್ಲಾಧಿಕಾರಿ ಕಛೇರಿಯ ಮುಂದೆ ಬೆರಳಚ್ಚು ಯಂತ್ರದಿಂದ ದಾಖಲೆಗಳನ್ನು ಟೈಪ್ ಮಾಡುವ ಮೂಲಕ ತನ್ನ ಜೀವನೋಪಾಯವನ್ನು ಸಾಗಿಸುತ್ತಿದ್ದಾರೆ.

    ನಾನು ಭಿಕ್ಷೆ ಬೇಡಲ್ಲ. ತೆಗೆದುಕೊಂಡಿರುವ ಸಾಲವನ್ನು ಪಾವತಿಸಲು ಈ ವೃತ್ತಿಯನ್ನು ಆಯ್ದುಕೊಂಡಿರುವುದಾಗಿ ಹೇಳಿದ್ದಾರೆ. ನನಗೆ ಡಿಸಿ ರಾಘವೇಂದ್ರ ಸಿಂಗ್ ಮತ್ತು ಎಸ್‍ಡಿಎಂ ಭಾವನ ವಿಲಂಬೆ ಅವರ ಸಹಾಯದಿಂದ ಈ ಕೆಲಸ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಜೂನ್ 12 ರಂದು ಸೂಪರ್ ಲಕ್ಷ್ಮೀಬಾಯಿ ಅವರ ಕೆಲಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಮಧ್ಯಪ್ರದೇಶದ ಸೆಹೋರ್ ನಲ್ಲಿ ವಾಸವಾಗಿರುವ ಈ ಮಹಿಳೆಯಿಂದ ಕಲಿಯಲು ಮತ್ತು ಕೆಲಸ ಮಾಡಲು ವಯಸ್ಸು ಬೇಕಾಗಿಲ್ಲ. ಯಾವುದೇ ಒಂದು ಚಿಕ್ಕ ಕೆಲಸ ಕಲಿಕೆಯ ಪಾಠವಿದ್ದಂತೆ. ಇವರಿಂದ ಯುವಕರು ಕಲಿಯುವುದು ತುಂಬಾನೇ ಇದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.